
ಬೆಂಗಳೂರು: ೭೦ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆದ ಆ.ನಾ.ಕೃ ಸಾರ್ವಭೌಮ ಸ್ಮರಣೆ ಕಾರ್ಯಕ್ರಮದಲ್ಲಿ ವಿನಯ್ ಕುಮಾರ್ ವಿ. ನಾಯಕ್ ಅವರಿಗೆ ಪ್ರತಿಷ್ಟಿತ ಅ.ನ.ಕೃ ಸಾರ್ವಭೌಮ ರಾಜ್ಯ ಪ್ರಶಸ್ತಿ ೨೦೨೫ ಪ್ರದಾನ ಮಾಡಲಾಯಿತು.
ಶಕ್ತಿ, ಯುಕ್ತಿ, ಸ್ಪೂರ್ತಿ ಮತ್ತು ಕೀರ್ತಿಯ ಸಂಕೇತವಾದ ಈ ಪ್ರಶಸ್ತಿ, ಕನ್ನಡ ಭಾಷೆ, ಸಂಸ್ಕೃತಿ ಮತ್ತು ಜನಸೇವೆಯ ಕ್ಷೇತ್ರಗಳಲ್ಲಿ ಅವರು ನೀಡುತ್ತಿರುವ ನಿರಂತರ ಕೊಡುಗೆಗೆ ಮಾನ್ಯತೆ ರೂಪವಾಗಿದೆ.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ವಿನಯ್ ಕುಮಾರ್ ವಿ. ನಾಯಕ್, ಸಮುದಾಯದಿಂದ ದೊರೆತಿರುವ ಪ್ರೀತಿ, ಬೆಂಬಲ ಮತ್ತು ಆಶೀರ್ವಾದಗಳಿಗೆ ಕೃತಜ್ಞತೆ ವ್ಯಕ್ತಪಡಿಸಿದರು. ಈ ಗೌರವ ತಾಯಿ ಭುವನೇಶ್ವರಿ ಮತ್ತು ಕನ್ನಡ ಸಂಸ್ಕೃತಿಯತ್ತ ತಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹೇಳಿದರು.
ಈ ಪ್ರಶಸ್ತಿ ತಮ್ಮೊಬ್ಬರದ್ದಲ್ಲ, ತಮ್ಮನ್ನು ಮಾರ್ಗದರ್ಶಿಸಿ, ಪ್ರೇರೇಪಿಸಿರುವ ಜನರೆಲ್ಲರದೆಯೇ ಆಗಿದೆ ಎಂದು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿಯೂ ಸಾರ್ವಜನಿಕರ ಆಶೀರ್ವಾದ ಮತ್ತು ಹಿತವಚನ ಇಂತೆ ಮುಂದುವರಿಯಲೆಂದು ವಿನಂತಿಸಿದರು.
City Today News 9341997936
