
ಬೆಂಗಳೂರು: ಕರ್ನಾಟಕ ರಾಜ್ಯ ಖೋ-ಖೋ ಸಂಸ್ಥೆಯ ಅಧ್ಯಕ್ಷ ಶ್ರೀ ಲೋಕೇಶ್ವರ್ ಅವರೊಂದಿಗೆ KSKKA ಉಪಾಧ್ಯಕ್ಷರಾದ ಜಯರಾಮ್ ಕೆ.ಆರ್., ಗುಂಜೂರ್ ಕೆ.ಕೆ. ಸಂಸ್ಥೆಯ ಅಧ್ಯಕ್ಷ ಜಿ.ಟಿ. ನಾಗೇಶ್, ಉಪಾಧ್ಯಕ್ಷ ಜಿ.ಎಂ. ಬಸವರಾಜ್ ಸೇರಿದಂತೆ ರಾಜ್ಯ ಬೋ–ಖೋ ಸಂಸ್ಥೆಯ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
ಹೊರರಾಜ್ಯಗಳಿಂದ ಆಗಮಿಸುವ 66 ತಂಡಗಳಿಗಾಗಿ ರೈಲ್ವೆ ನಿಲ್ದಾಣದಲ್ಲೇ ಸ್ವಾಗತ ವ್ಯವಸ್ಥೆ ಮಾಡಲಾಗಿದ್ದು, ಸಾರಿಗೆ ಹಾಗೂ ವಸತಿ ವ್ಯವಸ್ಥೆ ಸಂಪೂರ್ಣ ಸಿದ್ಧವಾಗಿದೆ. ಗಂಡು ಮಕ್ಕಳ ವಸತಿಯನ್ನು ಡೆಲ್ಲಿ ಪಬ್ಲಿಕ್ ಸ್ಕೂಲ್, ಸೂಲಕುಂಟೆ–ಸರ್ಜಾಪುರದಲ್ಲಿ, ಹೆಣ್ಣು ಮಕ್ಕಳ ಸಾರಿಗೆ ಮತ್ತು ವಸತಿಯನ್ನು ಪ್ರೆಡೀ ಜಿ.ಎಸ್. ಶಾಲೆ ಹಾಗೂ ವಾಹೇ ಗ್ಲೋಬಲ್, ಕಾಚಮಾರನಹಳ್ಳಿ–ಗುಂಜೂರ್‌ನಲ್ಲಿ ಏರ್ಪಡಿಸಲಾಗಿದೆ. ಕ್ರೀಡಾಪಟುಗಳಿಗೆ ಉತ್ತಮ ಗುಣಮಟ್ಟದ ಊಟ–ಉಪಹಾರ, ನೀರಿನ ವ್ಯವಸ್ಥೆ ಹಾಗೂ ದೀಪಾಲಂಕಾರಿತ ಹೊನಲು ಬೆಳಕಿನ ಕ್ರೀಡಾಂಗಣ ಸಿದ್ಧವಾಗಿದೆ. ವಿ.ಐ.ಪಿ., ಕ್ರೀಡಾಧಿಕಾರಿಗಳು, ಪ್ರೇಕ್ಷಕರು ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತ್ಯೇಕ ಆಸನ ವ್ಯವಸ್ಥೆಯಿದೆ.
ಪಂದ್ಯಾವಳಿ ಸುರಕ್ಷಿತವಾಗಿ ನಡೆಯಲು ಪೊಲೀಸ್ ಸಹಕಾರ, ಆರೋಗ್ಯದ ದೃಷ್ಟಿಯಿಂದ ವೈದ್ಯರು ಹಾಗೂ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿದೆ. ದೀಪಾಲಂಕಾರಕ್ಕೆ ಬೆಸ್ಕಾಂ, ಸ್ವಚ್ಛತೆಗೆ ಬಿಬಿಎಂಪಿ, ಸಂಚಾರ ಸುಗಮಕ್ಕೆ ಟ್ರಾಫಿಕ್ ಪೊಲೀಸರ ನೆರವು ಪಡೆಯಲಾಗಿದೆ. ವ್ಯಾಪಕ ಪ್ರಚಾರವೂ ಈಗಾಗಲೇ ಕೈಗೊಳ್ಳಲಾಗಿದೆ.
ಈ ಹಿಂದೆ ಗುಂಜೂರ್ ಕೆ.ಕೆ. ಕ್ಲಬ್ ಸೀನಿಯರ್ ಹಾಗೂ ಸಬ್ ಜೂನಿಯರ್ ಖೋ-ಖೋ ಪಂದ್ಯಾವಳಿಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದು, 20ಕ್ಕೂ ಹೆಚ್ಚು ಬಾಲಕಿಯರು ರಾಷ್ಟ್ರಮಟ್ಟದಲ್ಲಿ ಆಡಿದ್ದಾರೆ. ವಿವಿಈಗ ಅಧ್ಯಕ್ಷ ಸುಧಾಂಶು ಮಿತ್ತಲ್ ಸೇರಿದಂತೆ ಗಣ್ಯರು ಸಹಕಾರ ನೀಡುತ್ತಿದ್ದಾರೆ. ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಅಧ್ಯಕ್ಷತೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರುನಲ್ಲಿ ನಡೆದ ಗೋಷ್ಠಿಯಲ್ಲಿ ಆಯೋಜಕರು ತಿಳಿಸಿದರು.
City Today News 9341997936
