ಸಾವನದುರ್ಗದ ಲಕ್ಷ್ಮೀ ನರಸಿಂಹಸ್ವಾಮಿ ದೇಗುಲಕ್ಕೆ ನವ ನರಸಿಂಹ ಬೆಳ್ಳಿ ವಜ್ರಕವಚ ಸಮರ್ಪಣೆ

ಸಾವನದುರ್ಗದಲ್ಲಿ ನವ ನರಸಿಂಹ ಬೆಳ್ಳಿ ವಜ್ರಕವಚ ಸಮರ್ಪಣೆ

ರಾಮನಗರ, ಮಾಗಡಿ:
ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಸಾವನದುರ್ಗದಲ್ಲಿ ಸ್ಥಿತಿಗತಿಯಾಗಿರುವ ಪುರಾತನ ಪ್ರಸಿದ್ಧ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇಗುಲಕ್ಕೆ ನೂತನವಾಗಿ ನಿರ್ಮಿಸಲಾದ ನವ ನರಸಿಂಹ ಬೆಳ್ಳಿ ವಜ್ರಕವಚವನ್ನು ಸಮರ್ಪಿಸುವ ಭವ್ಯ ಧಾರ್ಮಿಕ ಕಾರ್ಯಕ್ರಮವನ್ನು ಜನವರಿ 28, 2026 (ಬುಧವಾರ) ದಂದು ಆಯೋಜಿಸಲಾಗಿದೆ.

ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ನಮ್ಮ ಕುಲದೈವವಾಗಿದ್ದು, ದೈವಪ್ರೇರಣೆಯಿಂದ ಟ್ರಸ್ಟ್ ವತಿಯಿಂದ ಸುಮಾರು 30 ಕೆಜಿ ಬೆಳ್ಳಿಯಲ್ಲಿ ಸಿದ್ಧಪಡಿಸಲಾದ ನವ ನರಸಿಂಹ ವಜ್ರಕವಚವನ್ನು ನಾಡಿನ ಗಣ್ಯರ ಸಮ್ಮುಖದಲ್ಲಿ ಸಮರ್ಪಿಸಲಾಗುವುದು. ಕಾರ್ಯಕ್ರಮವು ಬೆಳಿಗ್ಗೆ 9.45ರಿಂದ 10.30ರೊಳಗೆ ದೇಗುಲದಲ್ಲಿ ನಡೆಯಲಿದೆ.

ಅಂದು ಬೆಳಿಗ್ಗೆ 4.30ಕ್ಕೆ ಗಣಪತಿ ಹೋಮ ನೆರವೇರಲಿದ್ದು, ಕಾರ್ಯಕ್ರಮದ ದಿವ್ಯ ಸಾನಿಧ್ಯ, ಉದ್ಘಾಟನೆ ಹಾಗೂ ಆಶೀರ್ವಚನವನ್ನು ಶ್ರೀ ಶ್ರೀ ಶ್ರೀ ನಂಜಾವಧೂತ ಸ್ವಾಮೀಜಿಗಳು, ಪೀಠಾಧೀಶರು, ಗುರುಗುಂಡೇಶ್ವರ ಮಠ, ಪಟ್ಟನಾಯಕನಹಳ್ಳಿ (ಶಿರಾ ತಾಲ್ಲೂಕು) ನೀಡಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಕಾಂಗ್ರೆಸ್ ಮುತ್ಸದ್ದಿ ಶ್ರೀ ಕೆ.ಎಂ. ನಾಗರಾಜ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಪ್ರಧಾನಿ ಶ್ರೀ ಹೆಚ್.ಡಿ. ದೇವೇಗೌಡ, ಕೇಂದ್ರ ಸಚಿವ ಶ್ರೀ ಹೆಚ್.ಡಿ. ಕುಮಾರಸ್ವಾಮಿ, ಮಾಗಡಿ ಶಾಸಕ ಶ್ರೀ ಬಾಲಕೃಷ್ಣ, ಪಂಚಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಶ್ರೀ ಹೆಚ್.ಎಂ. ರೇವಣ್ಣ, ಜೆಡಿಎಸ್ ಅಧ್ಯಕ್ಷ ಶ್ರೀ ನಿಖಿಲ್ ಕುಮಾರಸ್ವಾಮಿ, ಸಾರಿಗೆ ಸಚಿವ ಶ್ರೀ ರಾಮಲಿಂಗಾರೆಡ್ಡಿ, ಸಂಸದ ಡಾ. ಮಂಜುನಾಥ್, ಸಚಿವ ಶ್ರೀ ಟಿ.ಬಿ. ಜಯಚಂದ್ರ, ವಿಧಾನಪರಿಷತ್ ಸದಸ್ಯ ಶ್ರೀ ಚಿದಾನಂದ್ ಎಂ. ಗೌಡ, ವಿಜಯಪುರದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶ್ರೀ ಮೋಹನ್, ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಅಂತರರಾಷ್ಟ್ರೀಯ ನೃತ್ಯಗಾರ ಡಾ. ಸತ್ಯನಾರಾಯಣರಾಜು ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮವನ್ನು ಸಾರಕ್ಕಿ ಅಗ್ರಹಾರ, ಜೆ.ಪಿ.ನಗರದ ಡಾ. ಶ್ರೀನಿವಾಸಮೂರ್ತಿ ಮತ್ತು ಕುಟುಂಬ ಅವರು ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಸೇವಾ ಟ್ರಸ್ಟ್ ಪರವಾಗಿ ಆಯೋಜಿಸಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಟ್ರಸ್ಟ್ ಅಧ್ಯಕ್ಷರು   ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ  ಮನವಿ ಮಾಡಿದರು.

City Today News 9341997936

Leave a comment

This site uses Akismet to reduce spam. Learn how your comment data is processed.