
ಬೆಂಗಳೂರು ದಕ್ಷಿಣ ಜಿಲ್ಲೆ, ಮಾಗಡಿ ತಾಲ್ಲೂಕಿನ ಸಾವನದುರ್ಗದಲ್ಲಿ ಸ್ಥಿತವಾಗಿರುವ ಪುರಾತನ ಹಾಗೂ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇಗುಲದಲ್ಲಿ ಕಣ್ಮಕೃಷ್ಣರ ಕಾಣೀಕೋತ್ಸವದ ಅಂಗವಾಗಿ ಮಹತ್ವದ ಧಾರ್ಮಿಕ ಸಮಾರಂಭವನ್ನು ಆಯೋಜಿಸಲಾಗಿದೆ.
ಈ ಸಂದರ್ಭದಲ್ಲಿ ಟ್ರಸ್ಟ್ ವತಿಯಿಂದ ಶ್ರೀ ನರಸಿಂಹಸ್ವಾಮಿಯ ವಿಗ್ರಹಕ್ಕೆ ನವ ನರಸಿಂಹ ವಜ್ರ ಕವಚವನ್ನು ಸಮರ್ಪಿಸಲಾಗುತ್ತದೆ. ಈ ದಿವ್ಯ ಸಮರ್ಪಣಾ ಕಾರ್ಯಕ್ರಮವು ಜನವರಿ 28, 2026ರಂದು ಬೆಳಗ್ಗೆ 9.45 ರಿಂದ 10.30ರೊಳಗೆ ದೇವರ ಸನ್ನಿಧಿಯಲ್ಲಿ ನೆರವೇರಲಿದೆ.


ಭಕ್ತರು, ಗಣ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಪುಣ್ಯ ಕಾರ್ಯಕ್ಕೆ ಸಾಕ್ಷಿಗಳಾಗಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.
ಈ ಧಾರ್ಮಿಕ ಕಾರ್ಯಕ್ರಮವನ್ನು ಸಾರಕ್ಕಿ ಅಗ್ರಹಾರ, ಜೆ.ಪಿ.ನಗರದ ಡಾ. ಶ್ರೀನಿವಾಸಮೂರ್ತಿ ಮತ್ತು ಕುಟುಂಬದವರು ದೈವ ಪ್ರೇರಣೆಯಿಂದ ಆಯೋಜಿಸಿದ್ದು, ಎಲ್ಲರಿಗೂ ಸಾದರ ಆಹ್ವಾನವನ್ನು ಸಲ್ಲಿಸಿದ್ದಾರೆ.
City Today News 9341997936
