ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್‌ಗೆ ಸತತ ಮೂರನೇ ಅವಿರೋಧ ಆಡಳಿತ ಮಂಡಳಿ ಬಲಿಷ್ಠ ಹಣಕಾಸು ಸ್ಥಿತಿ, ಡಿಜಿಟಲ್ ಸೇವೆಗಳು ಮತ್ತು ಗ್ರಾಮೀಣ ವಿಸ್ತರಣೆಗೆ ಒತ್ತು

ಬೆಂಗಳೂರು: ಬೆಂಗಳೂರು ನಗರದ ಪ್ರತಿಷ್ಠಿತ ಸಹಕಾರಿ ಬ್ಯಾಂಕುಗಳಲ್ಲಿ ಒಂದಾಗಿರುವ ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ ಸುಮಾರು 11 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು, ರೂ.26 ಕೋಟಿ ಷೇರು ಬಂಡವಾಳದೊಂದಿಗೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.
ಜನವರಿ 2026ರ ಅಂತ್ಯದ ವೇಳೆಗೆ ಬ್ಯಾಂಕಿನ ಒಟ್ಟು ಠೇವಣಿ ರೂ.478 ಕೋಟಿಗಳಾಗಿದ್ದು, ರೂ.336 ಕೋಟಿ ಸಾಲವನ್ನು ವಿವಿಧ ಕ್ಷೇತ್ರಗಳಿಗೆ ವಿತರಿಸಲಾಗಿದೆ. ಬ್ಯಾಂಕಿನ ಒಟ್ಟು ಹೂಡಿಕೆಗಳು ರೂ.204 ಕೋಟಿಗಳಾಗಿದ್ದು, ಇದರಲ್ಲಿನ ಶೇ.68 ರಷ್ಟು ಮೊತ್ತವನ್ನು ಸುರಕ್ಷಿತ ಸರ್ಕಾರಿ ಹೂಡಿಕೆಗಳಲ್ಲಿ ಹೂಡಲಾಗಿದೆ. ಈ ಮೂಲಕ ಬ್ಯಾಂಕಿನ ಒಟ್ಟಾರೆ ವ್ಯವಹಾರ ಪ್ರಮಾಣ ರೂ.814 ಕೋಟಿ ತಲುಪಿದ್ದು, 2024–25ನೇ ಆರ್ಥಿಕ ವರ್ಷದಲ್ಲಿ ರೂ.8.07 ಕೋಟಿ ನಿವ್ವಳ ಲಾಭ ಗಳಿಸಿದೆ.
ಬ್ಯಾಂಕಿನ ಆಸ್ತಿ ಗುಣಮಟ್ಟವೂ ಅತ್ಯುತ್ತಮವಾಗಿದ್ದು, ಮಾರ್ಚ್ 2025ರ ಅಂತ್ಯದ ವೇಳೆಗೆ Gross NPA ಶೇ.1.25ರಷ್ಟಿದ್ದು, ಸತತ ಮೂರು ವರ್ಷಗಳಿಂದ Net NPA ಶೂನ್ಯವಾಗಿರುವುದು ಬ್ಯಾಂಕಿನ ದೃಢ ಆಡಳಿತ ಹಾಗೂ ಪರಿಣಾಮಕಾರಿ ಸಾಲ ನಿರ್ವಹಣೆಯನ್ನು ಪ್ರತಿಬಿಂಬಿಸುತ್ತದೆ.
ಡಿಜಿಟಲ್ ಬ್ಯಾಂಕಿಂಗ್ ಕ್ಷೇತ್ರದಲ್ಲಿಯೂ ಶ್ರೀನಿಧಿ ಬ್ಯಾಂಕ್ ಮುಂಚೂಣಿಯಲ್ಲಿದ್ದು, PhonePe, Google Pay, POS ಹಾಗೂ ಇ-ಕಾಮರ್ಸ್ ಸೇರಿದಂತೆ ಎಲ್ಲಾ ರೀತಿಯ ಡಿಜಿಟಲ್ ಪಾವತಿ ವ್ಯವಸ್ಥೆಗಳು, ಜೊತೆಗೆ RTGS/NEFT, ATM ಕಾರ್ಡ್ ಮತ್ತು ಲಾಕರ್ ಸೌಲಭ್ಯಗಳನ್ನು ಗ್ರಾಹಕರಿಗೆ ಒದಗಿಸಲಾಗುತ್ತಿದೆ. ಈ ಎಲ್ಲ ಕಾರಣಗಳಿಂದಾಗಿ ರಾಜ್ಯದ ಪ್ರಮುಖ ಪಟ್ಟಣ ಸಹಕಾರಿ ಬ್ಯಾಂಕುಗಳಲ್ಲಿ ಒಂದಾಗಿ ಬ್ಯಾಂಕ್ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ.
ಆಡಳಿತ ಮಂಡಳಿ ಚುನಾವಣೆ
ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತದ 2026–2031ರ ಐದು ವರ್ಷಗಳ ಅವಧಿಗೆ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ಎಲ್ಲಾ 13 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದರು.
ಅಧ್ಯಕ್ಷರಾಗಿ ಶ್ರೀ ಸದಾಶಿವ ರೆಡ್ಡಿ ಹಾಗೂ ಉಪಾಧ್ಯಕ್ಷರಾಗಿ ಶ್ರೀ ಸಿ. ಚೆನ್ನಾ ರೆಡ್ಡಿ ಅವರು ಅವಿರೋಧವಾಗಿ ಆಯ್ಕೆಯಾಗಿದರು. ಬ್ಯಾಂಕಿನ ಆಡಳಿತ ಮಂಡಳಿ ಸತತ ಮೂರನೇ ಬಾರಿ ಅವಿರೋಧವಾಗಿ ಆಯ್ಕೆಯಾಗಿರುವುದು ಗಮನಾರ್ಹ ಹಾಗೂ ಹೆಮ್ಮೆಯ ವಿಷಯವಾಗಿದೆ.
ಇಂದು ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಿಇಒ ಪ್ರವೀಣ್ ಕುಮಾರ್, ಸ್ಥಾಪಕ ಸದಸ್ಯರು ಆರ್.ಪಿ. ಸಾ ಬಂಸದಾಶಿವ ರೆಡ್ಡಿ ಹಾಗೂ ನೂತನವಾಗಿ ಆಯ್ಕೆಯಾದ ನಿರ್ದೇಶಕರಾದ ಪಿ.ಎನ್. ನಂಜ ರೆಡ್ಡಿ ಮತ್ತು ಎಂ. ವೆಂಕಟ ಸ್ವಾಮಿ ಯವರ ಸಮ್ಮುಖದಲ್ಲಿ ಅವಿರೋಧವಾಗಿ ಆಯ್ಕೆಯಾದ,ಅಧ್ಯಕ್ಷರಾದ ಶ್ರೀ ಸದಾಶಿವ ರೆಡ್ಡಿ ಹಾಗೂ ಉಪಾಧ್ಯಕ್ಷರಾದ ಶ್ರೀ ಸಿ. ಚೆನ್ನಾ ರೆಡ್ಡಿ ಅವರನ್ನು ಸಿಇಒ ಪ್ರವೀಣ್ ಕುಮಾರ್ ಮತ್ತು ಸ್ಥಾಪಕ ಸದಸ್ಯರು ಆರ್.ಪಿ. ಸಾ ಬಂಸದಾಶಿವ ರೆಡ್ಡಿ ರವರಿಂದ ಗೌರವರ್ಪಣೆ ಸಲ್ಲಿಸಲಾಯಿತು.
ನೂತನ ಶಾಖೆ ಪ್ರಾರಂಭ
ಈಗಾಗಲೇ ಬ್ಯಾಂಕಿನ ವಿ.ವಿ.ಪುರಂ, ಬೊಮ್ಮನಹಳ್ಳಿ, ಮಾರತ್ತಹಳ್ಳಿ, ರಘುವನಹಳ್ಳಿ, ಅರೆಕೆರೆ, ಮರಸೂರು, ಹೆಸರಘಟ್ಟ ಮತ್ತು ಆಮೃತಹಳ್ಳಿ ಸೇರಿದಂತೆ ಒಟ್ಟು ಎಂಟು ಶಾಖೆಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ.
ಗಡಿ ಭಾಗದ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಒತ್ತು ನೀಡುವ ನಿಟ್ಟಿನಲ್ಲಿ ತುಮಕೂರು ಜಿಲ್ಲೆ, ಪಾವಗಡ ತಾಲ್ಲೂಕಿನ ತಿರುಮಣಿ ಗ್ರಾಮದಲ್ಲಿ ನೂತನ ಶಾಖೆಯನ್ನು ಇದೇ ಫೆಬ್ರವರಿ, 6 ರಂದು ಪ್ರಾರಂಭಿಸಲಾಗುವುದು ಎಂದು ಬ್ಯಾಂಕ್ ತಿಳಿಸಿದೆ.
ನೂತನವಾಗಿ ಅವಿರೋಧವಾಗಿ ಆಯ್ಕೆಯಾದ ನಿರ್ದೇಶಕರು
ಡಾ. ಅಮರ್ ಹೆಚ್.ಎ.
ಶ್ರೀ ಸಿ. ಚೆನ್ನಾ ರೆಡ್ಡಿ
ಶ್ರೀ ಪಿ. ಜಗನ್ನಾಧ ರೆಡ್ಡಿ
ಶ್ರೀ ಪಿ.ಎನ್. ನಂಜಾರೆಡ್ಡಿ
ಶ್ರೀ ಜಿ. ರಮೇಶ್
ಶ್ರೀ ಸದಾಶಿವ ರೆಡ್ಡಿ
ಶ್ರೀ ಹೆಚ್.ಎಲ್. ಸೋಮಶೇಖರ್
ಡಾ. ಡಿ. ಪರಮೇಶ ನಾಯ್ಕ
ಶ್ರೀ ಕೆ. ನರಸಿಂಹ ಶ್ರೀ ಎಂ. ವೆಂಕಟಸ್ವಾಮಿ
ಶ್ರೀ ಎ. ಪಾಪಣ್ಣ
ಶ್ರೀಮತಿ ಕೆ. ಮಾಲಾ
ಶ್ರೀಮತಿ ವಿನುತಾ ಅಶ್ವತ್ಥ.
City Today News 9341997936
