ವೈಜ್ಞಾನಿಕ ಆರೋಗ್ಯ ನಿರ್ವಹಣೆಗೆ ‘ಬಾಡಿ ಡೈನಾಮಿಕ್ಸ್’ ವಿಭಾಗ: ಭಾರತಿ ಜಜೂ ವೈದ್ಯಕೀಯ ನಿರ್ದೇಶಕಿ

ಬೆಂಗಳೂರು: ಸಮಗ್ರ ಹಾಗೂ ವೈಜ್ಞಾನಿಕ ಆಧಾರಿತ ಆರೋಗ್ಯ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಹ್ಯಾಪಿಯೆಸ್ಟ್ ಹೆಲ್ತ್ ಸಂಸ್ಥೆ ‘ಬಾಡಿ ಡೈನಾಮಿಕ್ಸ್’ ಎಂಬ ಹೊಸ ವಿಶೇಷ ವಿಭಾಗವನ್ನು ಆರಂಭಿಸಿದೆ. ಈ ವಿಭಾಗದ ವೈದ್ಯಕೀಯ ನಿರ್ದೇಶಕಿಯಾಗಿ ಅನುಭವಿ ತಜ್ಞೆ ಭಾರತಿ ಜಜೂ ಅವರನ್ನು ನೇಮಕ ಮಾಡಲಾಗಿದೆ.

ಮೂರು ದಶಕಗಳಿಗಿಂತ ಹೆಚ್ಚು ಕಾಲ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಭಾರತಿ ಜಜೂ ಅವರು ಆಕ್ಯುಪೇಷನಲ್ ಥೆರಪಿ ಕ್ಷೇತ್ರದಲ್ಲಿ ವಿಶಾಲ ಅನುಭವ ಹೊಂದಿದ್ದಾರೆ. ಹೊಸದಾಗಿ ಆರಂಭಿಸಿರುವ ಈ ವಿಭಾಗವು ಎರ್ಗೋನಾಮಿಕ್ಸ್, ಫಿಸಿಯೋಥೆರಪಿ ಮತ್ತು ಯೋಗದ ಸಮನ್ವಯದ ಮೂಲಕ ಸಮಗ್ರ ಪುನಶ್ಚೇತನ ಸೇವೆಗಳನ್ನು ಒದಗಿಸಲಿದೆ. ಕೇವಲ ಸಾಮಾನ್ಯ ವೆಲ್‌ನೆಸ್‌ಗೆ ಸೀಮಿತವಾಗದೇ, ವೈಜ್ಞಾನಿಕ ವಿಧಾನಗಳ ಮೂಲಕ ಆರೋಗ್ಯ ನಿರ್ವಹಣೆ ಹಾಗೂ ಉದ್ಯೋಗ ಸ್ಥಳಗಳಲ್ಲಿ ಶಾರೀರಿಕ ಸಾಮರ್ಥ್ಯವನ್ನು ಹೆಚ್ಚಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಈ ಕುರಿತು ಹ್ಯಾಪಿಯೆಸ್ಟ್ ಹೆಲ್ತ್ ಸಂಸ್ಥೆಯ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯತಂತ್ರ ಅಧಿಕಾರಿ Ashok Soota ಅವರು ಮಾತನಾಡಿ, “ಬಾಡಿ ಡೈನಾಮಿಕ್ಸ್ ವಿಭಾಗವನ್ನು ವೈಜ್ಞಾನಿಕ ಆರೋಗ್ಯ ವ್ಯವಸ್ಥೆಯಾಗಿ ರೂಪಿಸಲಾಗಿದೆ. ಆರೋಗ್ಯ ಜಾಗೃತಿ ಇದ್ದರೂ ಅದನ್ನು ಅನುಸರಿಸುವವರ ಸಂಖ್ಯೆ ಕಡಿಮೆ. ಈ ಹಿನ್ನೆಲೆಯಲ್ಲಿ ಆರೋಗ್ಯವನ್ನು ಶಾಸ್ತ್ರೀಯವಾಗಿ ಹೇಗೆ ಕಾಪಾಡಬೇಕು, ಪುನಶ್ಚೇತನವನ್ನು ಹೇಗೆ ಸುಧಾರಿಸಬೇಕು ಎಂಬುದಕ್ಕೆ ಸಮಗ್ರ ವೇದಿಕೆ ನಿರ್ಮಿಸುವುದು ನಮ್ಮ ಉದ್ದೇಶ. ಮುಂದಿನ ವರ್ಷಗಳಲ್ಲಿ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಕ್ಲಿನಿಕ್‌ಗಳು, ಕಾರ್ಪೊರೇಟ್ ಎರ್ಗೋನಾಮಿಕ್ಸ್ ಸೇವೆಗಳು ಹಾಗೂ ಫಿಸಿಯೋ-ಯೋಗ ಕೇಂದ್ರಗಳನ್ನು ಹಂತ ಹಂತವಾಗಿ ವಿಸ್ತರಿಸುವ ಯೋಜನೆ ಹೊಂದಿದ್ದೇವೆ. ಭಾರತಿ ಅವರ ನಾಯಕತ್ವ ನಮ್ಮ ಈ ದಿಸೆಯನ್ನು ಬಲಪಡಿಸಲಿದೆ,” ಎಂದು ತಿಳಿಸಿದ್ದಾರೆ.

ಸಂಸ್ಥೆಯ ಸಹಾಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡೇವಿಸ್ ಕರೇಡನ್ ಮಾತನಾಡಿ, “ನಮ್ಮ ಸೇವೆಯ ಮೂಲ ತತ್ವ ಮಾನವೀಯ ಸ್ಪರ್ಶ. ಕ್ಲಿನಿಕ್‌ಗಳಲ್ಲಿ ‘ಅತಿಥಿ ಅನುಭವ’ಕ್ಕೆ ಆದ್ಯತೆ ನೀಡುತ್ತೇವೆ. ಪ್ರತಿಯೊಬ್ಬರೂ ಬೆಂಬಲ ಮತ್ತು ವಿಶ್ವಾಸದ ಭಾವನೆ ಹೊಂದುವಂತೆ ಸೇವೆ ನೀಡುವುದು ನಮ್ಮ ಗುರಿ. ಭಾರತಿ ಅವರ ಅನುಭವವು ವೈಯಕ್ತಿಕ ಹಾಗೂ ಕಾರ್ಪೊರೇಟ್ ಆರೋಗ್ಯ ಪರಿಹಾರಗಳನ್ನು ಪರಿಣಾಮಕಾರಿಯಾಗಿ ತಲುಪಿಸಲು ಸಹಕಾರಿಯಾಗಲಿದೆ,” ಎಂದು ಹೇಳಿದರು.

ವೈದ್ಯಕೀಯ ನಿರ್ದೇಶಕಿ ಭಾರತಿ ಜಜೂ ಅವರು, “ಹ್ಯಾಪಿಯೆಸ್ಟ್ ಹೆಲ್ತ್ ತಂಡವನ್ನು ಸೇರಿಕೊಳ್ಳುವುದು ಸಂತೋಷದ ವಿಷಯ. ಪುರಾವೆ ಆಧಾರಿತ ಎರ್ಗೋನಾಮಿಕ್ಸ್, ವರ್ತನಾ ವಿಜ್ಞಾನ ಮತ್ತು ಪುನಶ್ಚೇತನದ ಮೂಲಕ ಉದ್ಯೋಗ ಸ್ಥಳ ಹಾಗೂ ವೈಯಕ್ತಿಕ ಜೀವನದಲ್ಲಿ ಆರೋಗ್ಯ ಸುಧಾರಿಸುವತ್ತ ಗಮನ ಹರಿಸುತ್ತೇನೆ,” ಎಂದು ಅಭಿಪ್ರಾಯಪಟ್ಟರು.

City Today News 9341997936

Leave a comment

This site uses Akismet to reduce spam. Learn how your comment data is processed.