ಬೆಂಗಳೂರು: ವಿಶ್ವ ಗುಬ್ಬಚ್ಚಿ ದಿನಾಚರಣೆ ಅರ್ಥಪೂರ್ಣವಾಗಿ ಆಚರಣೆ

ಬೆಂಗಳೂರು, ಮಾ. 20: ನಗರದ ಫ್ರೀಡಂ ಪಾರ್ಕ್‌ನಲ್ಲಿ ವಿಶ್ವ ಗುಬ್ಬಚ್ಚಿ ದಿನವನ್ನು ವಿಶೇಷವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು. “ಬೆಂಗಳೂರು ನಗರದಲ್ಲಿ ಮತ್ತೆ ಗುಬ್ಬಚ್ಚಿಗಳ ಚಿಲಿಪಿಲಿ ಕೇಳಿಸಬೇಕು” ಎಂಬ ಉದ್ದೇಶದೊಂದಿಗೆ ಸಾರ್ವಜನಿಕರಿಗೆ ಗುಬ್ಬಚ್ಚಿ ಗೂಡುಗಳನ್ನು ವಿತರಿಸುವ ಮೂಲಕ ಕಾರ್ಯಕ್ರಮ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸುವರ್ಣ ಕರ್ನಾಟಕ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ಅಧ್ಯಕ್ಷರು ಹಾಗೂ ‘ಭಾರತ ಸಾರಥಿ’ ಕನ್ನಡ ದಿನಪತ್ರಿಕೆಯ ಸಂಪಾದಕರಾದ ಗಂಡಸಿ ಸದಾನಂದ ಸ್ವಾಮಿ, ಕಿರಿಯ ನಿರ್ದೇಶಕಿ, ಯುವ ಕಲಾವಿದೆ ಹಾಗೂ ಲೇಖಕಿ ಶ್ರೀಲಕ್ಷ್ಮಿ ಭಟ್, ಐಟಿ ನಿರ್ದೇಶಕರು ಮತ್ತು ನೈಸರ್ಗಿಕ ಶಿಕ್ಷಣ ತಜ್ಞರಾದ ಗುರುಪ್ರಸಾದ್ ಕೆ.ಆರ್ ಉಪಸ್ಥಿತರಿದ್ದರು.

ಗುಬ್ಬಚ್ಚಿಗಳ ಸಂರಕ್ಷಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ Bengaluru Hudugaru Team ಮತ್ತು InfiWorld Foundation ಸಂಯುಕ್ತವಾಗಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ತಂಡದ ಪದಾಧಿಕಾರಿಗಳಾದ ವಿನೋದ್ ಕರ್ತವ್ಯ, ಶ್ರೀಶೈಲ ವಿ.ಕೆ ಸೇರಿದಂತೆ 30ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದ್ದರು.
ಗುಬ್ಬಚ್ಚಿ ಗೂಡುಗಳನ್ನು ಅಳವಡಿಸುವ ಹಾಗೂ ವಿತರಿಸುವ ಕಾರ್ಯಕ್ಕೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ರೇಂಜ್‌ನ ಎಸಿಎಫ್ ಸಂಗಮೇಶ್ ವಿಶೇಷವಾಗಿ ವಿನ್ಯಾಸಗೊಳಿಸಿದ ಗೂಡುಗಳನ್ನು ಬಳಸಲಾಗಿತ್ತು.
ನಗರದಲ್ಲಿ ಕ್ರಮೇಣ ಕಡಿಮೆಯಾಗುತ್ತಿರುವ ಗುಬ್ಬಚ್ಚಿಗಳ ಸಂಖ್ಯೆಯನ್ನು ಹೆಚ್ಚಿಸುವುದು ಮತ್ತು ಪರಿಸರ ಸಂರಕ್ಷಣೆಯ ಮಹತ್ವವನ್ನು ಜನರಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.
City Today News 9341997936
