‘ಪ್ರಕೃತಿಯೇ ಮಹಿಳೆ’ ಅವಾರ್ಡ್ ವೇದಿಕೆಯಲ್ಲಿ ಹೆಗಡೆ ಕೊಂಡಾಡಿದ ಹೆಣ್ಣಿನ ಮಹತ್ವ

ವಿಮೆನ್ ಎಕ್ಸ್‌ಲೆನ್ಸೀವ್ ಅವಾರ್ಡ್–2026: ‘ಪ್ರಕೃತಿಯೇ ಮಹಿಳೆ’ ಎಂಬ ಸಂದೇಶ

ಬೆಂಗಳೂರು: ‘ಪ್ರಕೃತಿಯೇ ಮಹಿಳೆ, ತಾಯಿ ಇಲ್ಲದ ಪ್ರಪಂಚವೇ ಇಲ್ಲ’ ಎಂಬ ಅರ್ಥಪೂರ್ಣ ಸಂದೇಶವನ್ನು ಲೋಕಾಯುಕ್ತದ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗಡೆ ಅವರು ಇಲ್ಲಿ ನಡೆದ ವಿಮೆನ್ ಎಕ್ಸ್‌ಲೆನ್ಸೀವ್ ಅವಾರ್ಡ್–2026 ಕಾರ್ಯಕ್ರಮದಲ್ಲಿ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದ ಮೂಲಸ್ತಂಭವಾಗಿರುವ ಮಹಿಳೆಯರ ಪಾತ್ರ ಅನನ್ಯವಾಗಿದ್ದು, ಅವರಿಲ್ಲದೆ ಬದುಕಿನ ಸಾಗುವಿಕೆ ಅಸಾಧ್ಯ ಎಂಬುದನ್ನು ಒತ್ತಿ ಹೇಳಿದರು.

ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು ಹಾಗೂ ಪತ್ರಕರ್ತೆಯಾದ ಮಂಜುಳಾ ರೆಡ್ಡಿ ಮಾತನಾಡಿ, “ಒಬ್ಬ ಮಹಿಳೆ ಉನ್ನತಿಗೆ ಏರಲು ಗಾಳಿಪಟದಂತೆ ಎತ್ತರ ಹಾರಬಹುದು; ಆದರೆ ಆ ಗಾಳಿಪಟವನ್ನು ನಿಯಂತ್ರಿಸುವ ಸೂತ್ರದಾರಿಯಂತೆ ಕಾಣಿಸಿಕೊಳ್ಳದ ಬೆಂಬಲಗಾರನೂ ಅಗತ್ಯ” ಎಂದು ಅಭಿಪ್ರಾಯಪಟ್ಟರು.

ಮಹಿಳೆಯರು ಮೊದಲು ತಮ್ಮ ಕುಟುಂಬವನ್ನು ಸದೃಢಗೊಳಿಸಿ, ನಂತರ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಅವರು ಕರೆ ನೀಡಿದರು.

City Today News 9341997936

Leave a comment

This site uses Akismet to reduce spam. Learn how your comment data is processed.