ಕೋಮು ಸೌಹಾರ್ಧತೆಯ ಸಂಕೇತವಾಗಿ ” ಸೌಹಾರ್ಧ ಕ್ರಿಸ್ ಮಸ್ ಆಚರಣೆ”

ಸೌಹಾರ್ಧ ಕ್ರಿಸ್ ಮಸ್ ಆಚರಣೆ ಕೋಮು ಸೌಹಾರ್ಧತೆಯ ಸಂಕೇತವಾಗಿ ಸರ್ವಧರ್ಮ,ಸರ್ವಜಾತಿಯರ ಪ್ರಸ್ತುತದಲ್ಲಿ ಒಗ್ಗಟ್ಟಿನ ಪ್ರಧರ್ಷನ ಮಾಡಿ ಭಾರತೀಯರಾದ ನಾವೆಲ್ಲರೂ ಒಂದೇ ಎಂಬ ಸಂದೇಶವನ್ನು ಕ್ರಿಸ್ ಮಸ್ ಹಬ್ಬದ ಆಚರಣೆಯ ಮೂಲಕ ಸಾರಿದರು. ಇಡೀ ಹಬ್ಬಕ್ಕೆ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಸೌಹಾರ್ಧ ಕ್ರಿಸ್ ಮಸ್ ಆಚರಣೆಯ ಮುಖಂಡ, ಅಲ್ಪಸಂಖ್ಯಾತರ ನಾಯಕ ಡಾ . ಯೂನಸ್ ಜೋನ್ಸ್ ರವರು ಸೌಹಾರ್ದ ಕ್ರಿಸ್‌ಮಸ್ ಆಚರಣೆ ಆಯೋಜಿಸಿದರು.

ಸರ್ವಧರ್ಮಿಯರು ಸಮ್ಮಿಲನಗೊಂಡ ಕಿಸ್ ಮಸ್ ಹಬ್ಬದಲ್ಲಿ, ಹೆಬ್ಬಾಳ ಕಾಂಗ್ರೆಸ್  ಮುಖಂಡ ರೆಹಮಾನ್ ಷರೀಫ್ , ಹೊಯ್ಸಳ ನಗರ ವಾರ್ಡ್‌ನ ಮುಸ್ಲಿಂ ಧರ್ಮಗುರು ಶಫೀವುಲ್ಲಾಖದಿರಿ , ಹಿಂದೂ , ಮುಸ್ಲಿಂ , ಜೈನರು, ಬೌಧ್ದರು ಸೇರಿದಂತೆ ಗುರುಸರನ್ ಸಿಂಗ್ , ಮಾಜಿ ಮೇಯರ್ ಮಂಜುಳಾ ನಾಯ್ಡು , ಜಿ.ಎಸ್. ಗೋಪಾಲ್ ರಾಜ್, ಕಾಂಗ್ರೆಸ್ ಮುಖಂಡರಾದ ಗೋಪಿ ಚಂದ್ , ಲಕ್ಷ್ಮೀ ವೆಂಕಟೇಶ್ ಹಾಗೂ – ಡಾ . ಜೆ . ರಾಬರ್ಟ್ಡೊನಾಲ್ಡ್ ಸೇರಿ ಸಂಗಡಿಗರು ಹಾಜರಿದ್ದರು .

City Today News

(citytoday.media)

9341997936

ಒಕ್ಕೂಟದ ಅಧ್ಯಕ್ಷ ನಾಗೇಶ್ ಎಚ್ಚರಿಕೆ – ‘ಕನ್ನಡಿಗರ ಸ್ವಾಭಿಮಾನದ ಸಂಕೇತವಾದ ದ್ವಜ ಸುಟ್ಟು ಹಾಕುವ ಮೂಲಕ ಕನ್ನಡಿಗರ ತಾಳ್ಮೆ ಕೆಣಕುವ ಕೆಲಸವನ್ನು ಶಿವಸೇನೆ ಪುಂಡರು ಮಾಡಿದ್ದಾರೆ.ಅವರ ಬಂಧನವಾಗ್ಬೇಕು’


ಬೆಂಗಳೂರಿನಲ್ಲಿ ಕನ್ನಡಿಗರ ಆಕ್ರೋಶ.
ಶಿವಸೇನಾ ಕಾರ್ಯಕರ್ತರ ಕನ್ನಡ ವಿರೋಧಿ ಧೋರಣೆಗೆ ವ್ಯಾಪಕ ಖಂಡನೆ.
ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಾಗೇಶ್ ನೇತೃತ್ವದಲ್ಲಿ ರಸ್ತೆ ತಡೆ.
ಮೌರ್ಯ ಸರ್ಕಲ್ ವೃತ್ತದಲ್ಲಿ ಪ್ರತಿಭಟನೆ.
ಕನ್ನಡಿಗರ ಸ್ವಾಭಿಮಾನದ ಸಂಕೇತವಾದ ದ್ವಜ ಸುಟ್ಟು ಹಾಕುವ ಮೂಲಕ ಕನ್ನಡಿಗರ ತಾಳ್ಮೆ ಕೆಣಕುವ ಕೆಲಸವನ್ನು ಶಿವಸೇನೆ ಪುಂಡರು ಮಾಡಿದ್ದಾರೆ.
ಅವರ ಬಂಧನವಾಗ್ಬೇಕು…ಪುಂಡ ಕಾರ್ಯಕರ್ತರ ಕೃತ್ಯಕ್ಕೆ ಮಹರಾಷ್ಟ್ರ ಸಿಎಂ ಕ್ಷಮೆ ಕೋರಬೇಕು.

ಇಲ್ಲವಾದಲ್ಲಿ ಮಹರಾಷ್ಟ್ರದ ಯಾವುದೇ ವಾಹನಗಳು ರಾಜ್ಯದ ಗಡಿ ಪ್ರವೇಶಿಸೊಲ್ಲ..ಮರಾಠಿಗರು ವ್ಯವಹಾರ ಮಾಡೊಲ್ಲ‌.
ಒಕ್ಕೂಟದ ಅಧ್ಯಕ್ಷ ನಾಗೇಶ್ ಎಚ್ಚರಿಕೆ.

City Today News

(citytoday.media)

9341997936

ಡಿಸೆಂಬರ್ 31 ರಾತ್ರಿ ಬೆಂಗಳೂರು ಮಹಾತ್ಮಗಾಂಧಿ ರಸ್ತೆಯಲ್ಲಿ ನಡೆಯುವ ಹೊಸವರ್ಷ ಆಚರಣೆಯನ್ನು ರದ್ದುಗೊಳಿಸುವ ಬಗ್ಗೆ

ಡಿಸೆಂಬರ್ 31 ರಾತ್ರಿ ಹೊಸ ವರ್ಷಾಚರಣೆ ಹೆಸರಿನಲ್ಲಿ ಮಹಾತ್ಮಗಾಂಧಿ ರಸ್ತೆಯಲ್ಲಿ ಅತ್ಯಂತ ಕೆಟ್ಟ ಅಸಭ್ಯ ರೀತಿಯಲ್ಲಿ ಯುವಕ , ಯುವತಿಯರು ಸೇರಿಕೊಂಡು ಕಂಠಪೂರ್ತಿ ಕುಡಿದು , ಕುಣಿದು ಕುಪ್ಪಳಿಸಿ , ಸ್ಟೇಚ್ಚಾಚಾರಿಗಳಾಗಿ ನರ್ತಿಸುತ್ತಾ ನಮ್ಮ ನಾಡಿನ ಸಂಸ್ಕೃತಿ ಸಂಸ್ಕಾರಗಳನ್ನು ಹಾಳು ಮಾಡುತ್ತಾರೆ . ಈ ಯುವಕ ಯುವತಿಯರು ಯಾರೆಂದರೆ ಇವರೆಲ್ಲಾ ಹೊರ ರಾಜ್ಯದಿಂದ ಮತ್ತು ಹೊರದೇಶದಿಂದ ವಿದ್ಯೆ ಕಲಿಯಲು ಬಂದಿರುವ ಕಾಲೇಜು ವಿದ್ಯಾರ್ಥಿಗಳು ಮತ್ತು ಹೊಟ್ಟೆ ಪಾಡಿನ ಉದ್ಯೋಗಕ್ಕೆ ಬಂದಿರುವ ಹೊರಗಿನವರು , ಇವರಾರೂ ಕನ್ನಡಿಗರಲ್ಲ . ಇವರೆಲ್ಲಾ ಹೆಣ್ಣು ಗಂಡು ಎಂಬ ಭೇದವಿಲ್ಲದೆ ಮನೋಇಚ್ಚೆ ಮದ್ಯಪಾನ ಮತ್ತು ಮಾದಕ ವಸ್ತುಗಳನ್ನು ಸೇವಿಸಿ ಮೈಮೇಲೆ ಪ್ರಜ್ಞೆಯಿಲ್ಲದೆ ಮರ್ಯಾದೆಗೆಟ್ಟು ವರ್ತಿಸುತ್ತಾರೆ . ಇಂತಹ ಕೆಟ್ಟರೀತಿಯ ವರ್ಷಾಚರಣೆಗಳು ನಮ್ಮ ನಾಡಿಗಾಗಲಿ ನಮ್ಮ ದೇಶಕ್ಕಾಗಲಿ ಬೇಕಿಲ್ಲ . ಪಾಶ್ಚಿಮಾತ್ಯ ಸಂಸ್ಕೃತಿಯ ಆಚರಣೆಯಿಂದ ನಮ್ಮ ದೇಶದ ಸಂಸ್ಕೃತಿ ಸಂಸ್ಕಾರಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ . ವಲಸಿಗರಿಗಾಗಿ ವರ್ಷಾಚರಣೆ ಬೇಡ , ವಲಸಿಗರಿಗಾಗಿ ಬೆಂಗಳೂರನ್ನು ಬಲಿ ಕೊಡುವುದು ಬೇಡ , ಸಂಸ್ಕೃತಿ ಸಂಸ್ಕಾರಗಳು ದೇಶದ ಹೃದಯವಿದ್ದಂತೆ ಇದನ್ನು ಹಾಳುಮಾಡುವುದು ಬೇಡ ಇಂತಹ ಅನಿಷ್ಟ ವರ್ಷಾಚರಣೆಗೆ ಸರ್ಕಾರ ರಕ್ಷಣೆ ಕೊಡುವುದು ಬೇಡ ಇಂತಹ ಕೆಟ್ಟ ವರ್ಷಾಚರಣೆಗೆ ಸರ್ಕಾರವು 11 ಸಾವಿರ ಪೋಲಿಸರನ್ನು 270 ಹೊಯ್ಸಳಗಳನ್ನು 1200 ಚೀತಾ ಬೈಕ್‌ಗಳನ್ನು ನಿಯೋಜಿಸಿ , ರಾತ್ರಿ 2 ಗಂಟೆವರೆಗೆ ಮದ್ಯ ಮಾರಾಟಕ್ಕೆ ಮತ್ತು ಪಬ್ ಹಾಗೂ ರೆಸ್ಟೋರೆಂಟ್‌ಗಳಿಗೆ ಅವಕಾಶ ಮಾಡಿಕೊಡುವುದು ಯಾವ ಪುರುಷಾರ್ಥಕ್ಕೆ . ಇಂತಹ ಕಿಡಿಗೇಡಿ ಕಾರ್ಯಕ್ರಮಗಳಿಗೆ ಸರ್ಕಾರ ಬೆಂಬಲ ನೀಡಿದರೆ ಸಮಾಜದ ಮೇಲೆ ಅತ್ಯಂತ ಕೆಟ್ಟ ಪರಿಣಾಮವಾಗುತ್ತದೆ . ಅದ್ದರಿಂದ ದಯಮಾಡಿ ಮಹಾತ್ಮಗಾಂಧಿ ರಸ್ತೆಯಲ್ಲಿ ನಡೆಯುವ ಹೊಸ ವರ್ಷಾಚರಣೆ ಕಾರ್ಯಕ್ರಮವನ್ನು ಸರ್ಕಾರ ರದ್ದು ಪಡಿಸಬೇಕೆಂದು ಶ್ರೀ ಬಸವಟಿವಿ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತದೆ . ಈ ವಿಚಾರದಲ್ಲಿ ರಾಜ್ಯದ ಧರ್ಮಗುರುಗಳು ಮತ್ತು ಪ್ರಜ್ಞಾವಂತ ನಾಗರಿಕರು ಇಂತಹ ಅಸಭ್ಯ ವರ್ಷಾಚರಣೆಗಳನ್ನು ವಿರೋದಿಸಬೇಕೆಂದು ಶ್ರೀ ಬಸವಟಿವಿ ಕೇಳಿಕೊಳ್ಳುತ್ತದೆ .

-ಶರಣು ಶರಣಾರ್ಥಿಗಳು

City Today News

(citytoday.media)

9341997936

“ಸಂತ ಕವಿ ಶ್ರೀ ಕನಕದಾಸರ 532ನೇ ಜಯಂತ್ಯೋತ್ಸವ” ಹಾಗೂ “ರಾಜ್ಯ ನೌಕರರ ಮತ್ತು ಕಾರ್ಮಿಕರ ಕೇಂದ್ರ ಕನಕ ಸಮಿತಿಯ ರಜತ ಮಹೋತ್ಸವ”

ತಾವು ಹುಟ್ಟಿ ಬೆಳೆದುಬಂದ ಸಮಾಜಕ್ಕೆ ಕಿಂಚಿತ್ ಬತಣವನ್ನು ತೀರಿಸಬೇಕೆಂಬ ಸೇವಾ ಮನೋಭಾವದ ಸರ್ಕಾರಿ ಸೇವೆಯಲ್ಲಿರುವೆ . ಅಧಿಕಾರಿ / ನೌಕರರು ಮತ್ತು ಕಾರ್ಖಾನೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ಸ್ನೇಹ ಸೇತುವೆಯ ರಾಜ್ಯ ನೌಕರರ ಮತ್ತು ಕಾರ್ಮಿಕರ ಕೇಂದ್ರ ಕನಕೆ ಸಮಿ … ” , ಮೊದಲಿಗೆ ಬೆಂಗಳೂರಿನ ಸಾರ್ವಜನಿಕ ಉದ್ದಿಮೆಗಳ ಕಾರ್ಮಿಕರ ನಡುವೆ ‘ ಭಾರ್ಮಿಕರ ಕೇಂದ್ರ ಕನಕ ಸಮಿತಿ ” ಎಂಬ ಕಾರವಾರಕ ಸಬರದ ಕಾರ್ಯಾರಂಭ ಮಾಡಿದ ಈ ಸಂಖ್ಯೆ ಕಳೆದ 25 ವರ್ಷಗಳಿಂದ ಕುರುಬ ಸಮಾಜದ ಕಾರ್ಮಿಕರು ಮತ್ತು ಸರ್ಕಾರಿ ನೌಕರರ ರಾಜ್ಯ ಮಟ್ಟದೆ ಪ್ರಾತಿನಿಧಿಕ ಸಂಘಟನೆಯಾಗಿದೆ , ರಾಜ್ಯ ನೌಕರರ ಮತ್ತು ಕಾರ್ಮಿಕರ ಕೇಂದ್ರ ಕನಕ ಸಮಿತಿಯು ತನ್ನ 25 ವರ್ಷಗಳ ಇತಿಹಾಸದಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡುವುದು , ಸಮಾಜದ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ ಸಾಧಕರಿಗೆ ಅಭಿನಂದಿಸಿ ಹೊತ್ತಾಹಿಸುವುದು , ಸಮಾಜಕ್ಕೆ ಗಣನೀಯ ಕೊಡುಗೆ ನೀಡಿದ ಮಹನೀಯರನ್ನು ಸನ್ಮಾನಿಸುವುದು ಮತ್ತು ಸಂತ ಕವಿ ಕನಕದಾಸರು ಮುಂತಾದ ಪುಣ್ಯ ಪುರುಷರ ಕೃತಿಗಳನ್ನು ಮುದ್ರಿಸಿ , ಹಂಚುವುದು ಮತ್ತು ಆ೦ತಹ ಮಹಾ ಪುರುಷರ ಜಯಂತಿಯನ್ನು ಆಚರಿಸುವ ಮುಖೇನ ಮಹಾಮಹಿಮರ ಜೀವನ ಮತ್ತು ಸಂದೇಶವನ್ನು ಪ್ರಚುರಪಡಿಸುವ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುತ್ತದೆ , ಅಲ್ಲದೆ ಸಮಾಜದ ಅಧಿಕಾರಿ / ನೌಕರರು , ಉದ್ಯಮಿಗಳು ಮುಂತಾದವರ ದೂರವಾಣಿ ಕೈಪಿಡಿ . ಜ್ಯ ಮತ್ತು ಕೇಂದ್ರ ಸರ್ಕಾರ ಹಿಂದುಳಿದ ವರ್ಗಗಳಿಗೆ ಕಲ್ಪಿಸಿರುವ ಯೋಜನೆಗಳು ಮುಂತಾದ ಮಾಹಿತಿ ಕೈಪಿಡಿಯನ್ನು ಮುದ್ರಿಸಿ , ಉಚಿತವಾಗಿ ಸಮುದಾಯಕ್ಕೆ ತಲುಪಿಸಲಾಗಿರುತ್ತದೆ .

ಸದರಿ ಸಂಘಟನೆಯ ಪ್ರೇರಣೆಯೊ೦ದಿಗೆ ಕನಕ ಗೃಹ ನಿರ್ಮಾಣ ಸಹಕಾರ ಸಂಘ , ಕಾಗಿನೆಲೆ ಕನಕ ಸೌಹಾರ್ದ ಕ್ರೆಡಿಟ್ ಕೋ – ಅಪರೇಟಿವ್ ನಿ . , ಮತ್ತು ಕನಕ ಚಾರಿಟೆಬಲ್ ಟ್ರಸ್ಟ್ ಸ್ಥಾಪನೆಗೊಂಡು ಸಮಾಜ ಸೇವೆಯಲ್ಲಿ ನಿರತವಾಗಿರುತ್ತವೆ . ಇಂದು ಹುಟ್ಟಿ ನಾಳೆ ಇಲ್ಲವಾಗುವ ಸಂಘ ಸಂಸ್ಥೆಗಳ ನಡುವೆ ರಾಜ್ಯ ನೌಕರರ ಮತ್ತು ಕಾರ್ಮಿಕರ ಕೇಂದ್ರ ಕನಕ ಸಮಿತಿಯು ನಿರಂತರವಾಗಿ 25 ವರ್ಷಗಳ ಸೇವೆ ಸಲ್ಲಿಸುತ್ತಾ ಮುನ್ನಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ . ಸಂಘವು ಆರಂಭವಾಗಿ 25 ವರ್ಷಗಳು ಸಂದ ಈ ಸಭೆ ಸಂದರ್ಭದಲ್ಲಿ ಸಂಘದ ರಜತ ಮಹೊತ್ಸವವನ್ನು ಹಾಗೂ ಸಂತ ಕವಿ ಕನಕ ದಾಸರ 532ನೇ ಜಯಂತ್ಯೋತ್ಸವನ್ನು ದಿನಾಂಕ 29 – 12 – 2019 ರಂದು ಭಾನುವಾರ ಬೆಳಿಗ್ಗೆ 12 – 00 ಗಂಟೆಗೆ ಕನಕ ಸಂಕೀರ್ಣ , ನಂ . 125 , ಸೋಪ್ಡೇನಹಳ್ಳಿ , ಬಸ್ ನಿಲ್ದಾಣದ ಹತ್ತಿರ , ಜೋಡಿ ರಸ್ತೆ , ಮಾತಾ ಅಮೃತಾನಂದಮಯ ಚಿತ್ರಮವೆ ಹಿಂಭಾಗ ಬೆಂಗಳೂರು ವಿಶ್ವವಿದ್ಯಾಲಯ ಕ್ಯಾಂಪಸ್ ಸಮೀಪ , ಏಶ್ವೇಶ್ವರಯ್ಯ ಬಡಾವಣೆ , ಬೆಂಗಳೂರು – 56 ಇಲ್ಲಿ ಆಚರಿಸಲು ನಿರ್ಣಯಿಸಲಾಗಿದೆ , ಈ ಸಂದರ್ಭದಲ್ಲಿ ಸಂಘಟನೆಯು ನಡೆದು ಬಂದ ಹಾದಿಯ ಸಿಂಹಾವಲೋಕನದೊಂದಿಗೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಸಮಾಜ ಸೇವೆಯಲ್ಲಿ ಅರ್ಪಿಸಿಕೊಳ್ಳುವ ದಿಸೆಯಲ್ಲಿ ಚಿಂತನ – ಮಂಥನ ಮಾಡುವ ಸದುದ್ದೇಶ ಹೊಂದಲಾಗಿದೆ . ಈ ಸಂಬಂಧ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಏರ್ಪಡಿಸಿ ಸಮಾಜದ ನೌಕರರ ಮತ್ತು ಕಾರ್ಮಿಕರ ಪ್ರಚಲಿತ ಸಮಸ್ಯೆಗಳು / ಸವಾಲುಗಳು ಮತ್ತು ಅವುಗಳನ್ನು ಎದುರಿಸುವ ಬಗ್ಗೆ ವಿಚಾರ ಗೋಷ್ಠಿಗಳನ್ನು ಆಯೋಜಿಸುವುದರೊಂದಿಗೆ ಸಂಘದ ರಜತ ಮಹೋತವವನ್ನು ಅರ್ಥಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ . ಈ ಒಂದು ಕಾರ್ಯಕ್ರಮಕ್ಕೆ ಸಮಾಜದ ಸ್ವಾಮಿಜಿಗಳು , ಗಣ್ಯಮಾನ್ಯರು ಆಗಮಿಸುತ್ತಿದಾರೆ .

-ಹೆಚ್ . ಎಂ . ರೇವಣ್ಣ

ಗೌರವ ಅಧ್ಯಕ್ಷರು

ಕಾವೇರಿ ಕೂಗು ಯೋಜನೆಯ ಅನುಷ್ಠಾನದ ವಿಮರ್ಶೆಗಾಗಿ ಸದ್ಗುರುಗಳನ್ನು  ಭೇಟಿ ಮಾಡಿದ ಕರ್ನಾಟಕದ ಮಖ್ಯಮಂತ್ರಿ ಸನ್ಮಾನ್ಯ ಶ್ರೀ ಯಡಿಯೂರಪ್ಪನವರು.

27 ಡಿಸೆಂಬರ್, 2019, ಬೆಂಗಳೂರು: ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಈಶಾ ಫೌಂಡೇಶನ್ ಸಂಸ್ಥಾಪಕರಾದ ಸದ್ಗುರುಗಳೊಂದಿಗೆ ಕಾವೇರಿ ಕೂಗು ಯೋಜನೆಯ ಅನುಷ್ಠಾನವನ್ನು ವಿವರವಾಗಿ ಪರಿಶೀಲಿಸಿದರು ಮತ್ತು ಚರ್ಚಿಸಿದರು. ಅವರ ಜೊತೆ ಹಿರಿಯ ಸರ್ಕಾರಿ ಅಧಿಕಾರಿಗಳೂ ಉಪಸ್ಥಿತರಿದ್ದರು.

10 ಜಿಲ್ಲೆಗಳ 35,000 ಚದರ ಕಿಲೋಮೀಟರ್ ಮತ್ತು ರಾಜ್ಯದ ಕಾವೇರಿ ಜಲಾನಯನ ಪ್ರದೇಶದ 54 ಗ್ರಾಮೀಣ ತಾಲ್ಲೂಕುಗಳಲ್ಲಿ, ಅರಣ್ಯ ಕೃಷಿ ಉಪಕ್ರಮಗಳ ಮೂಲಕ ಕಾವೇರಿ ನದಿ ಪುನರುಜ್ಜೀವನಗೊಳಿಸುವ ಯೋಜನೆಯನ್ನು ಧೃಡೀಕರಿಸುವ ಅಂತಿಮ ಹಂತದಲ್ಲಿ ರಾಜ್ಯದ ಹಿರಿಯ ಸರ್ಕಾರಿ ಅಧಿಕಾರಿಗಳು ಮತ್ತು ಕಾವೇರಿ ಕೂಗು ತಂಡಗಳು ತೊಡಗಿವೆ. ಇದು 24 ಲಕ್ಷಕ್ಕೂ ಹೆಚ್ಚು ರೈತರ ಜೀವನದ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ.

ರಾಜ್ಯದಲ್ಲಿ ಅರಣ್ಯ ಕೃಷಿ ಪ್ರಯೋಜನಗಳ ಅರಿವಿನ ಜೊತೆಗೆ, ಕರ್ನಾಟಕ ಸರ್ಕಾರ ಮತ್ತು ಕಾವೇರಿ ಕೂಗು ತಂಡಗಳ ನಡುವೆ ವಿವರವಾದ ಸಸಿ ಉತ್ಪಾದನೆ ಮತ್ತು ವಿತರಣಾ ಕಾರ್ಯಕ್ರಮವನ್ನು ರೂಪಿಸಲಾಗಿದೆ.

ಮುಖ್ಯಮಂತ್ರಿಗಳು ಮತ್ತು ಸದ್ಗುರುಗಳು ರಾಜ್ಯದಲ್ಲಿ, ವಿಶೇಷವಾಗಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಅರಣ್ಯ ಕೃಷಿ ಪದ್ಧತಿಯನ್ನು ಕೃಷಿ ಅಭ್ಯಾಸದ ಅವಿಭಾಜ್ಯ ಅಂಗವನ್ನಾಗಿ ಮಾಡುವ ಮಾರ್ಗಗಳ ಬಗ್ಗೆ ಚರ್ಚಿಸಿದರು.

City Today News

(citytoday.media)

9341997936