ಬೆಂಗಳೂರು : ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪ್ರಥಮ ಏಕಾದಶಿ ಪ್ರಯುಕ್ತ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಬೆಳಗ್ಗೆ 6:30ಕ್ಕೆ ಶ್ರೀರಾಮದೇವರ ಸಂಸ್ಥಾನ ಪೂಜೆಯನ್ನು ನೆರವೇರಿಸಿ ನಂತರ ಸುವರ್ಣದ ತೊಟ್ಟಿಲಿನಲ್ಲಿ ಶ್ರೀಮನ್ ಮೂಲ ರಾಮದೇವರಿಗೆ ಮಂಗಳಾರತಿಯನ್ನು ನೆರವೇರಿಸಿ ಸುದರ್ಶನ ಹೋಮದೊಂದಿಗೆ ತಪ್ತಮುದ್ರಾಧಾರಣೆಯನ್ನು ತಾವು ಸ್ವೀಕರಿಸಿ, 35,000ಕ್ಕೂ ಮಿಗಿಲಾಗಿ ಸಹಸ್ರಾರು ಶಿಷ್ಯರಿಗೆ ಭಕ್ತರಿಗೆ ಬೆಳಗ್ಗೆ 7:30 ರಿಂದ ರಾತ್ರಿ 10:30ರವರೆಗೂ ಮುದ್ರಾಧಾರಣೆಯನ್ನು ನೆರವೇರಿಸಿದರು. ಬೆಳಗ್ಗೆಯಿಂದ ರಾತ್ರಿಯವರೆಗೆ ನಾಡಿನ ಪ್ರಖ್ಯಾತ ವಿದ್ವಾಂಸರುಗಳಿಂದ “ಅಖಂಡ ಭಾಗವತ” ಪ್ರವಚನ ಆಯೋಜಿಸಿತ್ತು. ಈ ಎಲ್ಲಾ ಕಾರ್ಯಕ್ರಮಗಳು ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್ ಕೆ ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಜರುಗಿದವು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು. ಈ ಸಂದರ್ಭದಲ್ಲಿ ಮುದ್ರಾಧಾರಣೆ ಸ್ವೀಕರಿಸಲು ಆಗಮಿಸಿದ ಶಿಷ್ಯರಿಗಾಗಿ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಲಾಗಿತ್ತು. ವಯೋವೃದ್ಧರಿಗೂ, ವಿಕಲಚೇತನರಿಗೂ ಪ್ರತ್ಯೇಕ ವ್ಯವಸ್ಥೆಯೂ ಮಾಡಲಾಗಿತ್ತು. ಈ ವ್ಯವಸ್ಥೆಯನ್ನು ಕಂಡ ಶಿಷ್ಯರು ಭಕ್ತರು ಸಂತೋಷವನ್ನು ವ್ಯಕ್ತಪಡಿಸುತ್ತಾ ಮುದ್ರಾಧಾರಣವನ್ನು ಸ್ವೀಕರಿಸಿ, ಶ್ರೀ ಹರಿವಾಯುಗುರುಗಳ ಅನುಗ್ರಹಕ್ಕೆ ಪಾತ್ರರಾದರು. ಈ ಸಂದರ್ಭದಲ್ಲಿ ಚಿತ್ರನಟಿ ತಾರಾ ಅನುರಾಧ ಮತ್ತು ಚಿತ್ರನಟಿ ಪ್ರೇಮಾರವರು ಚಿತ್ರನಟಿ ಸುಜಾತ ಅಕ್ಷಯ್ ರವರು ಕೂಡ ಮುದ್ರಾಧಾರಣವನ್ನು ಸ್ವೀಕರಿಸಿ ಗುರುಗಳ ಅನುಗ್ರಹಕ್ಕೆ ಪಾತ್ರರಾದರು.
ಬೆಂಗಳೂರು, ಜುಲೈ 5: ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಜುಲೈ 6, ಭಾನುವಾರ, ಪ್ರಥಮ ಏಕಾದಶಿ ಪ್ರಯುಕ್ತ ಭವ್ಯ ಧಾರ್ಮಿಕ ಆಚರಣೆ ನಡೆಯಲಿದೆ. ಈ ಸಂದರ್ಭದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಶ್ರೀಮನ್ ಮೂಲ ರಾಮಚಂದ್ರ ದೇವರ ಸಂಸ್ಥಾನ ಪೂಜೆಯನ್ನು ಬೆಳಗ್ಗೆ 7 ಗಂಟೆಗೆ ನೆರವೇರಿಸಿ, ಶ್ರೀ ಸುದರ್ಶನ ಹೋಮದೊಂದಿಗೆ ಪ್ರಾರ್ಥನೆ ಸಲ್ಲಿಸಲಿದ್ದಾರೆ.
ಈ ಬಳಿಕ, ಮಠದ ಸಹಸ್ರಾರು ಶಿಷ್ಯರು ಹಾಗೂ ಭಕ್ತರಿಗೆ ಬೆಳಗ್ಗೆ 7:30ರಿಂದ ರಾತ್ರಿ 9:30ರ ವರೆಗೆ ಶ್ರೀಪಾದರ ಅಮೃತ ಹಸ್ತದಿಂದ ತಪ್ತ ಮುದ್ರಾಧಾರಣೆಯ ವಿಶೇಷ ವಿಧಿ ಕೈಗೊಳ್ಳಲಾಗುತ್ತದೆ ಎಂದು ಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್.ಕೆ. ವಾದಿಂದ್ರ ಆಚಾರ್ಯರು ತಿಳಿಸಿದ್ದಾರೆ.
ಅದೇ ದಿನ, ನಾಡಿನ ಪ್ರಮುಖ ಪಂಡಿತರಿಂದ ‘ಅಖಂಡ ಭಾಗವತ ಪ್ರವಚನ’ ಕಾರ್ಯಕ್ರಮ ನಡೆಯಲಿದ್ದು, ಪ್ರತಿಯೊಂದು ಸ್ಕಂಧದ ಪ್ರವಚನವನ್ನು ವಿವಿಧ ವಿದ್ವಾಂಸರು ನಿರ್ವಹಿಸಲಿದ್ದಾರೆ:
ಪ್ರಥಮ ಸ್ಕಂಧ: ವೇಣುಗೋಪಾಲಾಚಾರ್ಯ
ದ್ವಿತೀಯ ಸ್ಕಂಧ: ಕಡಪ ಶಶಿಧರಾಚಾರ್ಯ
ತೃತೀಯ ಸ್ಕಂಧ: ಪ್ರಣವಾಚಾರ್ಯ
ಚತುರ್ಥ ಸ್ಕಂಧ: ಕಡಪ ವಸುಧೇಂದ್ರಾಚಾರ್ಯ
ಪಂಚಮ ಸ್ಕಂಧ: ಉಮರ್ಜಿ ಪ್ರಹ್ಲಾದಾಚಾರ್ಯ
ಷಷ್ಟಮ ಸ್ಕಂಧ: ಅಗ್ನಿಹೋತ್ರಿ ವೇಣುಗೋಪಾಲಾಚಾರ್ಯ
ಸಪ್ತಮ ಸ್ಕಂಧ: ಗೊಗ್ಗಿ ಸುಶೀಲೇಂದ್ರಾಚಾರ್ಯ
ಅಷ್ಟಮ ಸ್ಕಂಧ: ಸಂಜೀವಾಚಾರ್ಯ ದೇಶಪಾಂಡೆ
ನವಮ ಸ್ಕಂಧ: ಕಲ್ಯಾ ನರಸಿಂಹಮೂರ್ತಿ ಆಚಾರ್ಯ
ದಶಮ ಸ್ಕಂಧ (ಪೂರ್ವಾರ್ಧ): ಐತರೇಯಾಚಾರ್ಯ
ದಶಮ ಸ್ಕಂಧ (ಉತ್ತರಾರ್ಧ): ವಿಷ್ಣುಕಶ್ಯಪಾಚಾರ್ಯ
ಏಕಾದಶ ಸ್ಕಂಧ: ತಿರುಮಲಾಚಾರ್ಯ ಕುಲಕರ್ಣಿ
ದ್ವಾದಶ ಸ್ಕಂಧ: ವೆಂಕಟನರಸಿಂಹಾಚಾರ್ಯ ರಾಜಪುರೋಹಿತ
ಭಕ್ತರ ಅನುಕೂಲಕ್ಕಾಗಿ ಮಠದ ವತಿಯಿಂದ ಶಿಸ್ತಿನ ಸಾಲು ವ್ಯವಸ್ಥೆ ಕಲ್ಪಿಸಲಾಗಿದ್ದು, ವಯೋವೃದ್ಧರು, ಅಂಗವಿಕಲರು ಹಾಗೂ ಗರ್ಭಿಣಿಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದು ಆರ್.ಕೆ. ವಾದಿಂದ್ರ ಆಚಾರ್ಯರು ಮಾಹಿತಿ ನೀಡಿದರು. ಈ ಪವಿತ್ರ ಕಾರ್ಯಕ್ರಮದ ಯಶಸ್ಸಿಗಾಗಿ ಶ್ರೀ ನಂದಕಿಶೋರ ಆಚಾರ್ಯರು ಹಾಗೂ ಮಠದ ಸಿಬ್ಬಂದಿಗಳು, ಸ್ವಯಂಸೇವಕರು ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ.
Bengaluru, July 4: The Karnataka State Madivala Association (R) has announced a state-level talent recognition program for students from the Madivala community who have excelled in the SSLC and II PUC examinations for the academic year 2025–26.
Recognizing that students from the Madivala community are educationally disadvantaged, the association aims to encourage academic excellence and celebrate high-performing students through this initiative, said B.R. Prakash, General Secretary of the Association, during a press conference held at the Press Club of Bangalore.
Eligibility Criteria:
A minimum of 80% marks in SSLC
Over 90% marks in II PUC
Required Documents:
Copy of the 2025 mark sheets
Two recent passport-sized photographs
Aadhaar card copy
Complete residential address and mobile number
All eligible students are requested to send their applications on or before July 30, 2025, either in person or by post to the following address:
Karnataka State Madivala Association (R) No. 7, Shiroor Park Road, Seshadripuram, Bengaluru – 560020
In a press conference held at the Press Club of Bengaluru, state leaders of the Madivala community urged all district and taluk-level Madivala associations across Karnataka to immediately identify eligible students and assist them in submitting their applications without delay.
Speaking at the event, Nanjappa C (State President), Prakash B. R. (General Secretary), Manjunath (Treasurer), Siddagangayya (Mysuru Division Working President), Shivakumar H. (Director), Madhu (Director), and Chandru (Director) emphasized the importance of swift action to ensure that students from the community benefit from various government schemes and educational opportunities.
They also appealed to the media to support this initiative by helping disseminate the information to reach the children of the Madivala community across the state.
Bangalore, July 2025 – India’s contemporary menswear label, The Bear House, has launched its first flagship store along with an in-house café in Koramangala, marking a significant step in its offline retail journey.
Spread across 3,000 sq. ft., the new outlet is designed to offer more than just a shopping experience. With a carefully curated layout, stylish interiors, and a cosy café serving specialty coffee and artisanal bakes, the space is envisioned as a lifestyle destination where fashion meets community.
Located at Shop 1A, Ground Floor, Real Square, 7th Block, Koramangala, the store features an award-winning architectural design inspired by the concept of a bear’s cave. Design highlights include an asymmetrical façade, bear-themed mannequins, paw print accents, and a lounge area adjacent to the trial rooms. Earthy textures and warm colour palettes contribute to a distinctive aesthetic that blends international sophistication with inviting comfort.
Founded in 2017 by Harsh and Tanvi Somaiya, The Bear House has built a strong reputation for its modern, minimal menswear — ranging from cotton and linen shirts, polos, and tees to denims, boxers, and outerwear. Known for its clean silhouettes and breathable fabrics, the brand has cultivated a loyal customer base online through platforms such as Myntra, Ajio, Flipkart, and Amazon, as well as its notable appearance on Shark Tank India.“Opening our first flagship store is a pivotal moment for us,” said co-founders Harsh and Tanvi Somaiya. “This space brings our vision to life — a seamless fusion of style, comfort, and community where customers can truly engage with the brand.”
“Opening our first flagship store is a pivotal moment for us,” said co-founders Harsh and Tanvi Somaiya. “This space brings our vision to life — a seamless fusion of style, comfort, and community where customers can truly engage with the brand.”
The new store signals The Bear House’s commitment to expanding its physical footprint, with existing stores in Hyderabad and Pune, and plans to deepen its presence in Bangalore. Internationally, the brand has also made inroads into the UAE market, reflecting its ambition to take Indian fashion to a global stage.
Store Address: The Bear House, Shop 1A, Ground Floor, Real Square No. 115, 7th Block, Koramangala, Bangalore – 560095
ಬೆಂಗಳೂರು, ಜುಲೈ 4: ಕರ್ನಾಟಕ ರಾಜ್ಯ ಮಡಿವಾಳರ ಸಂಘ (ರಿ.) ವತಿಯಿಂದ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಶ್ರೇಷ್ಠ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗುತ್ತಿದೆ.
ರಾಜ್ಯದ ಮಡಿವಾಳ ಸಮಾಜದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹಿನ್ನಲೆಯಲ್ಲಿ ಇರುವುದರಿಂದ, ಅವರ ಪ್ರತಿಭೆಗೆ ಮಾನ್ಯತೆ ನೀಡಲು ಮತ್ತು ಪ್ರೋತ್ಸಾಹಿಸಲು ಈ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಆರ್. ಪ್ರಕಾಶ್ ಅವರು ತಿಳಿಸಿದ್ದಾರೆ.
ಅರ್ಹತಾ ಮಾನದಂಡಗಳು:
ಎಸ್‌ಎಸ್‌ಎಲ್‌ಸಿಯಲ್ಲಿ ಕನಿಷ್ಠ 80% ಅಂಕಗಳೊಂದಿಗೆ ಉತ್ತೀರ್ಣರಾಗಿರುವುದು.
ದ್ವಿತೀಯ ಪಿಯುಸಿಯಲ್ಲಿ 90%ಕ್ಕಿಂತ ಅಧಿಕ ಅಂಕಗಳೊಂದಿಗೆ ಉತ್ತೀರ್ಣರಾಗಿರುವುದು.
ಅರ್ಜಿದಾರರು ಸಲ್ಲಿಸಬೇಕಾದ ದಾಖಲೆಗಳು:
2025ರ ವರ್ಷದ ಅಂಕಪಟ್ಟಿಯ ಪ್ರತಿಗಳು
ಇತ್ತೀಚಿನ ಎರಡು ಭಾವಚಿತ್ರಗಳು
ಆಧಾರ್ ಕಾರ್ಡ್ ಪ್ರತಿಯು
ಸ್ವಂತ ವಿಳಾಸ ಮತ್ತು ಮೊಬೈಲ್ ಸಂಖ್ಯೆಯ ವಿವರಗಳು
ಈ ಎಲ್ಲಾ ದಾಖಲೆಗಳನ್ನು 2025 ಜುಲೈ 30ರೊಳಗೆ ಖುದ್ದಾಗಿ ಅಥವಾ ಅಂಚೆಯ ಮೂಲಕ ಕಳುಹಿಸಬೇಕು. ಅರ್ಜಿ ಕಳುಹಿಸಬೇಕಾದ ವಿಳಾಸ:
ಕರ್ನಾಟಕ ರಾಜ್ಯ ಮಡಿವಾಳರ ಸಂಘ (ರಿ.) ನಂ.7, ಶಿರೂರ್ ಪಾರ್ಕ್ ರಸ್ತೆ, ಶೇಷಾದ್ರಿಪುರಂ, ಬೆಂಗಳೂರು – 560020
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲು:
ಸಂಘದ ಕಚೇರಿ: 080-23460946
ಬಿ.ಆರ್. ಪ್ರಕಾಶ್ (ಪ್ರಧಾನ ಕಾರ್ಯದರ್ಶಿ): 9611664485
ಶಿವಕುಮಾರ್ ಇ.ಎಚ್. (ನೌಕರ ಸಮಿತಿಯ ಉಪಾಧ್ಯಕ್ಷರು): 9980408392
ಪ್ರಭಾಕರ್ ಎ. (ಪ್ರಧಾನ ಸಂಚಾಲಕರು): 9945421124
ಈ ಕುರಿತು ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಂಜಪ್ಪ. ಸಿ – ರಾಜ್ಯಾಧ್ಯಕ್ಷರು,ಪ್ರಕಾಶ್. ಬಿ. ಆರ್ -ಪ್ರಧಾನ ಕಾರ್ಯದರ್ಶಿ, ಮಂಜುನಾಥ್ -ಖಜಾಂಚಿ, ಸಿದ್ದಗಂಗಯ್ಯ-ಕಾರ್ಯಾಧ್ಯಕ್ಷರು ಮೈಸೂರು ವಿಭಾಗ, ಶಿವಕುಮಾರ್. ಹೆಚ್-ನಿರ್ದೇಶಕರು. ಮಧು-ನಿರ್ದೇಶಕರು , ಚಂದ್ರು ನಿರ್ದೇಶಕರುಗಳ ಸಮ್ಮುಖದಲ್ಲಿ , ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದ ಮಡಿವಾಳ ಸಂಘಗಳ ಮೂಲಕ ಅರ್ಹ ವಿದ್ಯಾರ್ಥಿಗಳನ್ನು ಗುರುತಿಸಿ ತಕ್ಷಣ ಅರ್ಜಿ ಸಲ್ಲಿಸಬೇಕೆಂದು ಕರೆ ನೀಡಿದರು. ಮಾಧ್ಯಮಗಳು ಈ ಮಾಹಿತಿಯನ್ನು ಸಮುದಾಯದ ಮಕ್ಕಳಿಗೆ ತಲುಪಿಸಲು ಸಹಕರಿಸಬೇಕೆಂಬ ಮನವಿಯೂ ಈ ಸಂದರ್ಭದಲ್ಲಿ ಸಲ್ಲಿಸಿದರು.
You must be logged in to post a comment.