Apollo Cradle and Apollo One Jointly Launch Advanced Healthcare Hub in Electronic City, Bengaluru

Bengaluru: The Apollo Hospitals Group has inaugurated a new, state-of-the-art healthcare facility in Electronic City, Bengaluru, under the names Apollo Cradle and Apollo One. The new hub is designed to deliver advanced technology, personalized care, and global-standard medical services.

The launch event was graced by Dr. Sangita Reddy, Joint Managing Director of Apollo Hospitals. Renowned badminton player Prakash Padukone and actress Sapthami Gowda were special guests at the occasion. Celebrated classical vocalist Rahul Deshpande joined the event virtually and extended his wishes.

Apollo Zen: AI-Powered Diagnostic Excellence

One of the highlights of the new facility is the launch of “Apollo Zen,” an AI-powered, precision diagnostic and evidence-based screening system. It supports comprehensive MRI scans, microbiome analysis, and predictive health assessments, offering a futuristic approach to early diagnosis.

Now for Future: Supporting Second-Time Motherhood

Another notable initiative, “Now for Future,” was introduced alongside. This unique program is tailored for women planning to embrace second-time motherhood with confidence and without worry, offering comprehensive maternal health support.

Facility Highlights:

This is the 7th Apollo Cradle and Children’s Hospital in Bengaluru and the 19th across India. The hospital houses 50 beds and offers a wide range of specialties including maternity, gynecology, fetal medicine, neonatal intensive care, pediatric emergency care, surgery, neurology, dentistry, and cardiology.

A Musical Touch:

A specially composed lullaby by Rahul Deshpande was also launched as part of the event, symbolizing the deep emotional bond between mother and child, and adding a heartfelt cultural element to the facility’s vision.

A New Chapter in Family Health:

“This facility marks a new chapter in safeguarding the health of every family member by making world-class healthcare more accessible,” said Dr. Sangita Reddy during the launch.

City Today News 9341997936

அபோலோ கிராடில் மற்றும் அபோலோ ஒன் இணைந்து எலெக்ட்ரானிக்ஸ் சிட்டியில் புதிய மிகை நவீன மருத்துவ மையத்தை துவக்கினது.

பெங்களூரு, மே 6: அபோலோ மருத்துவமனைகளின் குழுமம், பெங்களூருவின் எலெக்ட்ரானிக்ஸ் சிட்டியில், தனிப்பயனாக்கப்பட்ட சிகிச்சை, செயற்கை நுண்ணறிவு தொழில்நுட்பம் மற்றும் உலகத் தரவாய்ந்த மருத்துவ சேவைகளை ஒரே கூடடியில் வழங்கும் புதிய ஹெல்த் கேம்பஸ் ஒன்றை துவக்கியுள்ளது. ‘அபோலோ கிராடில் மற்றும் அபோலோ ஒன்’ என்ற பெயரில் செயல்படும் இந்த மையம், குடும்ப நல மருத்துவத்தில் புதிய யுக்திகளை அறிமுகப்படுத்துகிறது.

துவக்க விழாவில் அபோலோ குழுமத்தின் இணை மேலாண்மை இயக்குனர் டாக்டர் சங்கீதா ரெட்டி தலைமையிலானார். முன்னாள் இந்திய பேட்மிண்டன் வீரர் பிரகாஷ் படுக்கோனே மற்றும் திரைப்பட நடிகை சப்தமி கவுடா சிறப்பு விருந்தினர்களாக கலந்து கொண்டனர். இந்திய ஸ்தாபன சங்கீத கலைஞரும் தேசிய திரைப்பட விருது பெற்றவருமான ராகுல் தேச்பாண்டே இணையவழியாக சிறப்பு வாழ்த்து தெரிவித்துள்ளார்.

அபோலோ ஸென் – நவீன சுகாதார பராமரிப்புக்கு புதிய முன்னோடி

இந்த மையத்தில் துவங்கியுள்ள ‘அபோலோ ஸென்’ எனப்படும் சிகிச்சை முறை செயற்கை நுண்ணறிவை அடிப்படையாகக் கொண்டு, முழு உடல் எம்.ஆர்.ஐ., மைக்ரோபயோம் பகுப்பாய்வு மற்றும் முன்னறிவிப்புப் பரிசோதனைகள் மூலம் நோய்களை ஆரம்ப கட்டத்திலேயே கண்டறிந்து, பாதுகாப்பான சிகிச்சையை வழங்கும் சிறப்பு மையமாகும்.

‘நவ் ஃபார் ஃப்யூச்சர்’ – இரண்டாவது தாய்மையை முனைவோடு எதிர்கொள்வதற்கான திட்டம்

இதே நேரத்தில் ‘நவ் ஃபார் ஃப்யூச்சர்’ எனும் புதியத் திட்டமும் அறிமுகம் செய்யப்பட்டது. இது இரண்டாவது முறையாக தாயாக ஆசைப்படும் பெண்களுக்கு அழுத்தமின்றி, திட்டமிட்ட முறையில் தாய்மையை அணுக வழிவகுக்கும் ஒரு பரிந்துரைதிறனான திட்டமாகும்.

சிறப்பம்சங்கள்:

இந்த மையம் அபோலோ கிராடிலின் 7வது மையமாகவும், இந்திய அளவில் 19வது மையமாகவும் திகழ்கிறது. 50 படுக்கை வசதி கொண்ட இந்த மருத்துவமனையில் மகப்பேறு, மகளிர் மருத்துவம், பிஜியாட்ரிக்ஸ், நவஜாத சிகிச்சை, நரம்பியல், இதய நோய், பல் மருத்துவம் உள்ளிட்ட பல்வேறு சிறப்பு பிரிவுகள் உள்ளன.

இசையில் இயலும் பாசம்:

ராகுல் தேச்பாண்டே இசையமைத்த அபோலோ கிராடிலின் லாலி பாடல் வெளியிடப்பட்டுள்ளது. இது தாய் மற்றும் குழந்தையின் இடையிலான பாசத்தை இசையின் மூலம் உணர்த்தும் வகையில் அமைந்துள்ளது.

ஆரோக்கியத்துக்கான புதிய அத்தியாயம்:

“இந்த புதிய மையம் குடும்ப உறுப்பினர்கள் ஒவ்வொருவருக்கும் உயர்தர சிகிச்சையை எளிதாகக் கிடைக்கச் செய்யும் வகையில் ஒரு முக்கிய மாற்றத்தை உருவாக்குகிறது,” என டாக்டர் சங்கீதா ரெட்டி தெரிவித்தார்.

City Today News 9341997936

ಅಪೋಲೋ ಕ್ರೇಡಲ್ ಮತ್ತು ಅಪೋಲೋ ಒನ್ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಜಂಟಿಯಾಗಿ ಹೊಸ ಆರೋಗ್ಯ ಸಂಕೀರ್ಣ ಆರಂಭಿಸಿದವು

ಬೆಂಗಳೂರು: ಅಪೋಲೋ ಆಸ್ಪತ್ರೆಗಳ ಸಮೂಹವು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ತನ್ನ ಅತ್ಯಾಧುನಿಕ ತಂತ್ರಜ್ಞಾನ, ವೈಯಕ್ತಿಕಗೊಳಿಸಿದ ಆರೈಕೆ ಮತ್ತು ಜಾಗತಿಕ ಮಟ್ಟದ ವೈದ್ಯಕೀಯ ಸೇವೆಗಳನ್ನು ಒದಗಿಸಲು ಅಪೋಲೋ ಕ್ರೇಡಲ್ ಮತ್ತು ಅಪೋಲೋ ಒನ್ ಹೆಸರಿನಲ್ಲಿ ಹೊಸ ಆರೋಗ್ಯ ಸಂಕೀರ್ಣವನ್ನು ಉದ್ಘಾಟಿಸಿದೆ.

ಈ ಸಂದರ್ಭದಲ್ಲಿ ಅಪೋಲೋ ಆಸ್ಪತ್ರೆಗಳ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಡಾ. ಸಂಗೀತಾ ರೆಡ್ಡಿ ಮುಖ್ಯಾತಿಥಿಯಾಗಿದ್ದು, ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಮತ್ತು ನಟಿ ಸಪ್ತಮಿ ಗೌಡ ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದರು. ಶಾಸ್ತ್ರೀಯ ಗಾಯಕ ರಾಹುಲ್ ದೇಶಪಾಂಡೆ ಅವರು ವರ್ಚುವಲ್‌ ಮೂಲಕ ಈ ಸಮಾರಂಭದಲ್ಲಿ ಭಾಗವಹಿಸಿ ಶುಭಾಶಯಗಳನ್ನು ಹೇಳಿದರು.

ಅಪೋಲೋ ಝೆನ್:
ಈ ಹೊಸ ಕೇಂದ್ರದಲ್ಲಿ ‘ಅಪೋಲೋ ಝೆನ್’ ಹೆಸರಿನಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ, ನಿಖರ ರೋಗನಿರ್ಣಯ ಮತ್ತು ಪುರಾವೆ ಆಧಾರಿತ ತಪಾಸಣಾ ವ್ಯವಸ್ಥೆ ಆರಂಭವಾಗಿದೆ. ಸಂಪೂರ್ಣ ದೇಹದ ಎಂಆರ್‌ಐ, ಮೈಕ್ರೋಬಯೋಮ್ ವಿಶ್ಲೇಷಣೆ, ಮುನ್ಸೂಚನೆಗೆ ಅನುಗುಣವಾದ ಆರೋಗ್ಯ ಸಮೀಕ್ಷೆಗಳಿಗೆ ಇದು ಬೆನ್ನುಡಂಬರಾಗಿದೆ.

ನೌ ಫಾರ್ ಫ್ಯೂಚರ್:
ಇದೆ ಸಂದರ್ಭದಲ್ಲಿ ‘ನೌ ಫಾರ್ ಫ್ಯೂಚರ್’ ಎಂಬ ವಿಶಿಷ್ಟ ಯೋಜನೆಗೂ ಚಾಲನೆ ನೀಡಲಾಗಿದೆ. ಇದು ಎರಡನೇ ಬಾರಿ ತಾಯಿತನವನ್ನು ಚಿಂತೆಯಿಲ್ಲದೆ ಆಲಿಂಗಿಸುವ ಆಶಯವಿರುವ ಮಹಿಳೆಯರಿಗೆ ರೂಪುಗೊಳಿಸಲಾಗಿದೆ.

ಸೌಲಭ್ಯಗಳ ವೈಶಿಷ್ಟ್ಯತೆ:
ಅಪೋಲೋ ಕ್ರೇಡಲ್ ಮತ್ತು ಚಿಲ್ಡ್ರನ್’ಸ್ ಹಾಸ್ಪಿಟಲ್‌ನ 7ನೇ ಮತ್ತು ಪ್ಯಾನ್-ಇಂಡಿಯಾ ಮಟ್ಟದಲ್ಲಿ 19ನೇ ಕೇಂದ್ರವಾಗಿ ಸ್ಥಾಪಿತವಾದ ಈ ಆಸ್ಪತ್ರೆಯಲ್ಲಿ 50 ಹಾಸಿಗೆ ಸಾಮರ್ಥ್ಯವಿದ್ದು, ಹೆರಿಗೆ, ಸ್ತ್ರೀರೋಗ, ಭ್ರೂಣ ಔಷಧ, ನವಜಾತ ಶಿಶು ಆರೈಕೆ, ಮಕ್ಕಳ ತುರ್ತು ವೈದ್ಯಸೇವೆ, ಶಸ್ತ್ರಚಿಕಿತ್ಸಾ ವಿಭಾಗ, ನರವಿಜ್ಞಾನ, ದಂತವೈದ್ಯ, ಹೃದ್ರೋಗ ಸೇರಿದಂತೆ ಹಲವಾರು ತಜ್ಞ ಚಿಕಿತ್ಸಾ ವಿಭಾಗಗಳಿವೆ.

ಸಂಗೀತದ ಸ್ಪರ್ಶ:
ರಾಹುಲ್ ದೇಶಪಾಂಡೆ ಅವರಿಂದ ಸಂಗೀತ ಸಂಯೋಜನೆಯಾದ ಅಪೋಲೋ ಕ್ರೇಡಲ್‌‍ಗೆ ಲಾಲಿ ಹಾಡು ಬಿಡುಗಡೆಗೊಳ್ಳಿದ್ದು, ತಾಯಿ ಮತ್ತು ಮಗುವಿನ ನಡುವಿನ ಪ್ರೀತಿಯ ಬಾಂಧವ್ಯಕ್ಕೆ ಸಂವೇದನಾತ್ಮಕ ರೂಪ ನೀಡಿದೆ.

ಆರೋಗ್ಯದಲ್ಲಿ ಹೊಸ ಅಧ್ಯಾಯ:
“ಈ ಹೊಸ ಸೌಲಭ್ಯವು ಅತ್ಯುತ್ತಮ ಆರೋಗ್ಯ ಸೇವೆಗೆ ಪ್ರವೇಶ ಸುಲಭಗೊಳಿಸುವ ಮೂಲಕ ಕುಟುಂಬದ ಪ್ರತಿಯೊಬ್ಬ ಸದಸ್ಯನ ಆರೋಗ್ಯದ ಭದ್ರತೆಯಲ್ಲಿ ಹೊಸ ಅಧ್ಯಾಯವನ್ನೇ ರೂಪಿಸಿದೆ,” ಎಂದು ಡಾ. ಸಂಗೀತಾ ರೆಡ್ಡಿ ಹೇಳಿದರು.

City Today News 9341997936

ಕನಿಷ್ಠ ಮೀಸಲಾತಿ ಸಿಕ್ಕಿಲ್ಲವೆಂದು ಕ್ರೈಸ್ತ ಪ್ರಮುಖರ ಸಭೆಯಲ್ಲಿ ಆಕ್ರೋಶ!

ಬೆಂಗಳೂರು, ಮೇ 5, 2025: ನಗರದ ಕಮ್ಮನಹಳ್ಳಿಯ ಸುಖ ಸಾಗರ್ ಹೋಟೆಲ್‌ನಲ್ಲಿ ಮೇ 3, 2025 ರಂದು ಬೆಂಗಳೂರಿನ ಪ್ರಮುಖ ಕ್ರೈಸ್ತ ಮುಖಂಡರ ಸಭೆಯೊಂದು ನಡೆಯಿತು. ಈ ಸಭೆಯಲ್ಲಿ ರಾಜ್ಯದಲ್ಲಿ ಕ್ರೈಸ್ತ ಸಮುದಾಯವು ಎದುರಿಸುತ್ತಿರುವ ಕನಿಷ್ಠ ಮೀಸಲಾತಿ ಮತ್ತು ಇತರ ಸಮಸ್ಯೆಗಳ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಲಾಯಿತು.

ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು ಹೀಗಿವೆ:
* ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವರದಿಯಲ್ಲಿ ಕ್ರೈಸ್ತರ ಜನಸಂಖ್ಯೆಯನ್ನು ಕಡಿಮೆ ಎಂದು ತೋರಿಸಿರುವುದು ಸರಿಯಲ್ಲ.
* ಸರ್ಕಾರವು ಹಿಂದಿನಿಂದಲೂ ಕ್ರೈಸ್ತರನ್ನು ಹಿಂದುಳಿದ ವರ್ಗಗಳ Category-III(B) ಗುಂಪಿನಲ್ಲಿ ಸೇರಿಸಿದೆ. ಆದರೆ ಈ ಗುಂಪಿನಲ್ಲಿ ಪ್ರಬಲ ಜಾತಿಗಳಿರುವುದರಿಂದ ಕ್ರೈಸ್ತರಿಗೆ ಈವರೆಗೆ ಕನಿಷ್ಠ ಮೀಸಲಾತಿ ಸೌಲಭ್ಯಗಳು ಲಭ್ಯವಾಗಿಲ್ಲ.
* ಪರಿಶಿಷ್ಟ ಜಾತಿಯಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿರುವವರನ್ನು ಈ ಹಿಂದಿನಂತೆಯೇ Category-I ಗುಂಪಿನಲ್ಲಿ ಮುಂದುವರಿಸಬೇಕು.
* ಕ್ರೈಸ್ತ ಸಮುದಾಯದಲ್ಲಿರುವ ಅರ್ಹ ವ್ಯಕ್ತಿಗಳನ್ನು ಸರ್ಕಾರಿ ಮಂಡಳಿ ಮತ್ತು ನಿಗಮಗಳಿಗೆ ನೇಮಕ ಮಾಡಲು ಅಡ್ಡಿಪಡಿಸಲಾಗುತ್ತಿದೆ.
* ಕ್ರೈಸ್ತ ಧರ್ಮವನ್ನು ಆಚರಿಸುತ್ತಿರುವ ಅನೇಕರು ತಮ್ಮ ಮೂಲ ಜಾತಿಗಳ ಜನಸಂಖ್ಯೆಯ ಲೆಕ್ಕದಲ್ಲೇ ಮುಂದುವರೆದು, ಆ ಜಾತಿಗಳಿಗೆ ಸಿಗುವ ಸೌಲಭ್ಯಗಳನ್ನೇ ಪಡೆಯುತ್ತಿದ್ದಾರೆ. ಈ ಬಗ್ಗೆಯೂ ಗಮನಹರಿಸಬೇಕಿದೆ.
* ಹಿಂದಿನ ಸರ್ಕಾರ ಜಾರಿಗೆ ತಂದಿರುವ ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆಯಲು ಸರ್ಕಾರವನ್ನು ಒತ್ತಾಯಿಸಬೇಕು.
* ಕ್ರೈಸ್ತರ ಮೇಲಿನ ದೌರ್ಜನ್ಯ, ಸುಳ್ಳು ಪ್ರಕರಣಗಳು, ಚರ್ಚ್, ಸಮುದಾಯ ಭವನ ಮತ್ತು ಸ್ಮಶಾನ ಭೂಮಿಗಳ ರಕ್ಷಣೆ ಮಾಡಬೇಕು. ಹಲವೆಡೆ ಸ್ಮಶಾನ ಭೂಮಿಗಾಗಿ ಮನವಿ ಸಲ್ಲಿಸಿದರೂ ಮಂಜೂರು ಮಾಡುತ್ತಿಲ್ಲ.
* ಕ್ರೈಸ್ತರ ಕುಂದುಕೊರತೆಗಳ ಬಗ್ಗೆ ರಾಜ್ಯ ಅಲ್ಪಸಂಖ್ಯಾತರ ಆಯೋಗವು ನಿರ್ಲಿಪ್ತ ಧೋರಣೆ ತಳೆದಿದೆ.
* ಕ್ರೈಸ್ತರಿಗೆ ಸಂವಿಧಾನಾತ್ಮಕ ಹಕ್ಕುಗಳು ಮತ್ತು ಸರ್ಕಾರಿ ಸವಲತ್ತುಗಳು ಸಿಗುತ್ತಿಲ್ಲ. ಕ್ರೈಸ್ತ NGO ಗಳಿಗೆ ಯಾವುದೇ ಸರ್ಕಾರಿ ಅನುದಾನ ನೀಡುತ್ತಿಲ್ಲ.
ಮುಂದಿನ ದಿನಗಳಲ್ಲಿ ಈ ವಿಷಯಗಳ ಬಗ್ಗೆ ಮೊದಲು ಬೆಂಗಳೂರಿನಲ್ಲಿ ಮತ್ತು ನಂತರ ರಾಜ್ಯಾದ್ಯಂತ ಕ್ರೈಸ್ತ ಪ್ರಮುಖರ ಸಭೆಗಳನ್ನು ಏರ್ಪಡಿಸಿ ಜಾಗೃತಿ ಮೂಡಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಬಿಷಪ್ ರೆವ.ಡಾ. ಅಡ್ವೀನ್ ಡೇನಿಯಲ್ ಮತ್ತು ಮಾಸ್ಟರ್ ಶೇಖರ್ ಪೌಲ್ ಈ ಸಭೆಯನ್ನು ಆಯೋಜಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿಧಾನಸಭೆಯ ಮಾಜಿ ಕಾರ್ಯದರ್ಶಿ ಶ್ರೀ ಎಸ್ ಮೂರ್ತಿ, ಕ್ರೈಸ್ತರ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಶ್ರೀ ಕೆನಡಿ ಶಾಂತಕುಮಾರ್, ಶ್ರೀ ಚಾಲ್ಸ್ ಡೇವಿಡ್, ಶ್ರೀ ಕ್ಲೈಮೇಟ್, ಶ್ರೀ ಪೀಟರ್, ಶ್ರೀ ಗುರುದತ್ತ, ಶ್ರೀ ನಾರಾಯಣ, ಫಾಸ್ಟರ್ ಆನಂದ್ ಹಾಗೂ ಇತರ ಯೇಸು ಅನುಯಾಯಿಗಳು ಭಾಗವಹಿಸಿದ್ದರು. ಸಭೆಯಲ್ಲಿ ಗಣ್ಯರನ್ನು ಗೌರವಿಸಲಾಯಿತು.
ರಾಜ್ಯದ ಕ್ರೈಸ್ತ ಸಮುದಾಯಗಳ ಮಾಹಿತಿಗಾಗಿ ಈ ಸುದ್ದಿ ಲೇಖನವನ್ನು ಪ್ರಕಟಿಸಲಾಗಿದೆ.

ಯುನಸ್ ಜೋನ್ಸ್,ರಾಜ್ಯ ಸಂಚಾಲಕರು,
“ಅಹಿಂದ” -ಚಳುವಳಿ.ರವರು ಮೇಲಿನ ಮಾಹಿತಿಯನ್ನು ಪ್ರಕಟಿಸಿದರು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:              +91 98457 15739

City Today News 9341997936

ರಾಜ್ಯ ಸರ್ಕಾರದ ಸ್ಪಂದನೆಗೆ ಭಿಕ್ಕು ಸಂಘದ ಕೃತಜ್ಞತೆ, ಮೇ 12ಕ್ಕೆ ಬುದ್ಧ ಜಯಂತಿ ಆಚರಣೆ

ಬೆಂಗಳೂರು, ಮೇ 5: ಪೂಜ್ಯ ಬೋಧಿದತ್ತ ಮತ್ತು ಭಿಕ್ಕು ಸಂಘವು ಈ ಹಿಂದೆ ಗುಲ್ಬರ್ಗ ಜಿಲ್ಲೆಯ ಸನ್ನತಿ ಸ್ಮಾರಕದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ವರೆಗೆ ನಡೆಸಿದ ಕಾಲ್ನಡಿಗೆ ಜಾಥಾ ಹಾಗೂ ಆಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ರಾಜ್ಯ ಸರ್ಕಾರವು ಸಕಾರಾತ್ಮಕವಾಗಿ ಸ್ಪಂದಿಸಿತ್ತು. ಈ ಹೋರಾಟದ ಫಲವಾಗಿ, ಸನ್ನತಿ ಸ್ಮಾರಕ ಅಭಿವೃದ್ಧಿ ಪ್ರಾಧಿಕಾರ ರಚನೆ, ಬೌದ್ಧ ಅಧ್ಯಯನ ಅಕಾಡೆಮಿ ಸ್ಥಾಪನೆ ಮತ್ತು ಬುದ್ಧ ಜಯಂತಿಯನ್ನು ರಾಜ್ಯ ಸರ್ಕಾರವೇ ಆಚರಿಸುವ ಮಹತ್ವದ ಆದೇಶಗಳನ್ನು ಹೊರಡಿಸಿದ್ದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಭಿಕ್ಕು ಸಂಘವು ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸಿದೆ.

ಮುಂದಿನ ದಿನಗಳಲ್ಲಿ ನಡೆಯಲಿರುವ 2669ನೇ ಬುದ್ಧ ಜಯಂತಿ ಆಚರಣೆಯ ಕುರಿತು ಭಾನುವಾರ ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಭಿಕ್ಕು ಸಂಘದ ಮುಖಂಡರು, ಮೇ 12ರಂದು ನಡೆಯುವ ಬುದ್ಧ ಜಯಂತಿಯ ಅಂಗವಾಗಿ ಲೋಕಶಾಂತಿಯನ್ನು ಬಯಸಿ ಮೇ 6ರಿಂದ ಮೇ 12ರವರೆಗೆ “ಬೋಧಿ ಸಪ್ತಾಹ”ವನ್ನು ಆಚರಿಸಲಾಗುವುದು ಎಂದು ತಿಳಿಸಿದರು.
ಬೆಂಗಳೂರಿನ ಗಾಂಧಿನಗರ, ಯಶವಂತಪುರ, ಮಲ್ಲೇಶ್ವರಂ ಮತ್ತು ಹೆಬ್ಬಾಳ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಬಡವರ ಕಾಲೋನಿಗಳಲ್ಲಿ ಈ ಬೋಧಿ ಸಪ್ತಾಹವು ನಡೆಯಲಿದೆ. ಸಾರ್ವಜನಿಕರಿಗೆ ಬೌದ್ಧ ಚಿಂತನೆಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಭಿಕ್ಕು ಸಂಘವು ಈ ಏಳು ಕಾಲೋನಿಗಳಲ್ಲಿ ಏಳು ದಿನಗಳ ಕಾಲ “ಬೋಧಿ ಪ್ರವಚನ” ಕಾರ್ಯಕ್ರಮವನ್ನು ಆಯೋಜಿಸಿದೆ.
ಬುದ್ಧ ಜಯಂತಿಯ ದಿನವಾದ ಮೇ 12ರಂದು ಬೆಳಿಗ್ಗೆ 8:30ಕ್ಕೆ ಶ್ರೀರಾಮಪುರದ ಗೌತಮ ಕಾಲೋನಿಯಿಂದ ಬುದ್ಧ ಪ್ರತಿಮೆಯನ್ನೊಳಗೊಂಡ “ಬೋಧಿರಥ”ದ ಮೆರವಣಿಗೆಯು ವಿಜೃಂಭಣೆಯಿಂದ ನಡೆಯಲಿದೆ. ಈ ರಥವು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಏಳು ನಿಗದಿತ ಕಾಲೋನಿಗಳ ಮೂಲಕ ಹಾದು ಮಧ್ಯಾಹ್ನ 12 ಗಂಟೆಗೆ ಸದಾಶಿವನಗರದ ನಾಗಸೇನಾ ಬುದ್ಧ ವಿಹಾರವನ್ನು ತಲುಪಲಿದೆ. ನಂತರ ಅಲ್ಲಿ ಬುದ್ಧ ಜಯಂತಿ ಆಚರಣೆಯು ನೆರವೇರಲಿದೆ.
ಇದರೊಂದಿಗೆ, ಮಕ್ಕಳಿಗಾಗಿ ಮೇ 6ರಿಂದ ವಿಶೇಷ “ಪಬ್ಬಜ ತರಬೇತಿ ಕಾರ್ಯಕ್ರಮ”ವನ್ನು ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ಪ್ರತಿದಿನ ಬೌದ್ಧ ತತ್ವಜ್ಞಾನಿಗಳು ಮತ್ತು ಚಿಂತಕರಿಂದ ಉಪನ್ಯಾಸಗಳನ್ನು ನೀಡಲಾಗುವುದು. ಮೇ 9ರಂದು ಮಹಾಬೋಧಿ ಬುದ್ಧ ವಿಹಾರದ ಪೂಜ್ಯ ಆನಂದ ಭಂತೇಜಿ ಅವರು ವಿಶೇಷ ಪ್ರವಚನವನ್ನು ನೀಡಲಿದ್ದಾರೆ.

ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಖ್ಯಾತ ಬೌದ್ಧ ಸಾಹಿತಿಗಳಾದ ಮೂಡ್ಯಾಕ್ಕೋಡು ಚಿನ್ನಸ್ವಾಮಿ ಹಾಗೂ ಮಾಜಿ ಸಚಿವರು ಮತ್ತು ಸಾಹಿತಿಗಳಾದ ಬಿ.ಟಿ.ಲಲಿತಾ ನಾಯಕ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಡಾ. ಎಂ. ವೆಂಕಟಸ್ವಾಮಿ (ರಾಷ್ಟ್ರೀಯ ಉಪಾಧ್ಯಕ್ಷರು), ವರಜ್ಯೋತಿ ಭಂತೇಜಿ (ಹಿರಿಯ ಬಿಕ್ಕುಗಳು, ನಾಗಸೇನಾ ಬುದ್ಧ ವಿಹಾರ), ಡಾ. ಹೆಚ್. ಆರ್. ಸುರೇಂದ್ರ (ಹಿರಿಯ ಧಮ್ಮಾಚಾರಿಗಳು, ನಾಗಸೇನಾ ಬುದ್ಧ ವಿಹಾರ) ಮತ್ತು ಬುದ್ಧಮ್ಮ (ನಿವಾಸಿ ಬಿಕ್ಕುಣಿ, ನಾಗಸೇನಾ ಬುದ್ಧ ವಿಹಾರ) ಅವರು ಜಂಟಿಯಾಗಿ ಮಾಹಿತಿ ನೀಡಿದರು.

City Today News 9341997936