ಹ್ಯಾಟ್ರಿಕ್ ಹೀರೋ, ರಿಯಲ್ ಸ್ಟಾರ್, ರಾಜ್ ಬಿ ಶೆಟ್ಟಿ ಒಂದೇ ಪರದೆ ಮೇಲೆ! ‘45’ ಫೆಬ್ರವರಿ 22ರಂದು ಜೀ ಕನ್ನಡದಲ್ಲಿ

ಬೆಂಗಳೂರು, 18 ಫೆಬ್ರವರಿ 2026:
ಮನರಂಜನೆ ಎಂದರೆ ಮೊದಲಿಗೆ ನೆನಪಾಗೋ ಹೆಸರು — Zee Kannada. ವಿಭಿನ್ನ ಧಾರಾವಾಹಿಗಳು, ರಿಯಾಲಿಟಿ ಶೋಗಳು ಹಾಗೂ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್‌ಗಳ ಮೂಲಕ ಮನೆಮಾತಾಗಿರುವ ಈ ವಾಹಿನಿ, ಇದೀಗ ಸಿನಿಪ್ರಿಯರಿಗೆ ಮತ್ತೊಂದು ಭರ್ಜರಿ ಸರ್ಪ್ರೈಸ್ ಕೊಡುತ್ತಿದೆ.

ಹ್ಯಾಟ್ರಿಕ್ ಹೀರೋ Shivarajkumar, ರಿಯಲ್ ಸ್ಟಾರ್ Upendra ಮತ್ತು ಪ್ರತಿಭಾವಂತ ನಟ-ನಿರ್ದೇಶಕ Raj B. Shetty ಅಭಿನಯದ ಫ್ಯಾಂಟಸಿ ಆಕ್ಷನ್ ಡ್ರಾಮಾ ‘45’ ಇದೇ ಫೆಬ್ರವರಿ 22ರಂದು ಸಂಜೆ 4:30ಕ್ಕೆ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ. ವಿಶೇಷವೆಂದರೆ, ಖ್ಯಾತ ಸಂಗೀತ ನಿರ್ದೇಶಕ Arjun Janya ಅವರ ನಿರ್ದೇಶನದ ಚೊಚ್ಚಲ ಪ್ರಯತ್ನ ಇದಾಗಿದೆ.

‘45’ ಕೇವಲ ಆಕ್ಷನ್ ಸಿನಿಮಾ ಅಲ್ಲ. ಫಿಲಾಸಫಿ, ಭಾವನೆ, ಜೀವನ ಮೌಲ್ಯಗಳು ಮತ್ತು ಅತೀಂದ್ರಿಯ ಅಂಶಗಳನ್ನು ಒಂದೇ ಹಂದರದಲ್ಲಿ ಜೋಡಿಸಿರುವ ವಿಶಿಷ್ಟ ಕಥಾಹಂದರ ಈ ಚಿತ್ರದ ವಿಶೇಷತೆ. ಉತ್ತಮ ತಾರಾಬಳಗ ಮತ್ತು ವಿಭಿನ್ನ ಕಥಾ ನಿರೂಪಣೆ ಚಿತ್ರದ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಕಥೆ ವಿನಯ್ (ರಾಜ್ ಬಿ ಶೆಟ್ಟಿ) ಸುತ್ತ ಹೆಣೆದಿದೆ. ಸರಳ ಸ್ವಭಾವದ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಅವನ ಜೀವನ, ಅನಿರೀಕ್ಷಿತ ಘಟನೆಯಿಂದ ತಿರುವು ಪಡೆಯುತ್ತದೆ. ಲೋಕಲ್ ಡಾನ್ ರಾಯಪ್ಪ (ಉಪೇಂದ್ರ) ಸಾಕುತ್ತಿದ್ದ ‘ರೋಸಿ’ ಎಂಬ ನಾಯಿಯ ಅಪಘಾತದ ಸಾವು, ವಿನಯ್ ಬದುಕನ್ನು ಸಂಪೂರ್ಣ ಬದಲಿಸುತ್ತದೆ. ತಕ್ಷಣ ಶಿಕ್ಷೆ ನೀಡದೇ, 45 ದಿನಗಳ ಅವಧಿ ನೀಡಿ ಆತ್ಮಪರಿಶೀಲನೆ ಮಾಡಲು ಹೇಳುವ ರಾಯಪ್ಪನ ನಿರ್ಧಾರ ಕಥೆಗೆ ತೀವ್ರತೆ ನೀಡುತ್ತದೆ. ಇದೇ ವೇಳೆ ವಿನಯ್‌ಗೆ ಕಾಣಿಸಿಕೊಳ್ಳುವ ಭಯಾನಕ ಕನಸುಗಳು, ಅವನ ಜೀವನದ ಕೌಂಟ್‌ಡೌನ್ ಶುರುವಾದಂತಾಗುತ್ತದೆ.

ಈ ಗೊಂದಲದ ನಡುವೆ ಶಿವಣ್ಣ (ಶಿವರಾಜ್ ಕುಮಾರ್) ಪ್ರವೇಶಿಸಿ ಮಾರ್ಗದರ್ಶಕರಾಗಿ ನಿಂತುಕೊಳ್ಳುತ್ತಾರೆ. 45 ದಿನಗಳ ಕೌಂಟ್‌ಡೌನ್‌ನಲ್ಲಿ ವಿಧಿ ಗೆಲ್ಲುತ್ತದಾ? ಅಥವಾ ವಿನಯ್ ತನ್ನ ಹಣೆಬರಹ ಬದಲಿಸಿಕೊಳ್ಳುತ್ತಾನಾ? ಎಂಬ ಕುತೂಹಲವೇ ಚಿತ್ರದ ಹೃದಯ.

ಪ್ರೀಮಿಯರ್ ಬಗ್ಗೆ ಮಾತನಾಡಿದ ಜೀ ಕನ್ನಡ ಚೀಫ್ ಚಾನೆಲ್ ಆಫೀಸರ್ ದೀಪಕ್ ಶ್ರೀರಾಮುಲು ಅವರು, “ಈ ಮೂವರು ದಿಗ್ಗಜರು ಒಂದೇ ಪರದೆಯಲ್ಲಿ ಕಾಣಿಸಿಕೊಳ್ಳುವುದು ಪ್ರೇಕ್ಷಕರಿಗೆ ಹಬ್ಬದ ಅನುಭವ. ಇದು ಕೇವಲ ಪ್ರೀಮಿಯರ್ ಅಲ್ಲ, ಜೀ ಕನ್ನಡ ಕುಟುಂಬಕ್ಕೆ ಒಂದು ಸಂಭ್ರಮ” ಎಂದು ತಿಳಿಸಿದ್ದಾರೆ.

ಹೀಗಾಗಿ, ಈ ಭರ್ಜರಿ ಸಿನಿ ಅನುಭವ ಮಿಸ್ ಮಾಡಿಕೊಳ್ಳಬೇಡಿ.
‘45’ — ಇದೇ ಫೆಬ್ರವರಿ 22, ಸಂಜೆ 4:30ಕ್ಕೆ, ಜೀ ಕನ್ನಡದಲ್ಲಿ!

City Today News 9341997936

ಕನಕಶ್ರೀ ಟ್ರಸ್ಟ್–INSIGHTS IAS ಕೈಜೋಡಣೆ: KAS ಸೇರಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಶಿಬಿರ ಘೋಷಣೆ

ಬೆಂಗಳೂರು: ಸಂತಕವಿ ಕನಕದಾಸ ಅವರ ಮಾನವೀಯ ಮೌಲ್ಯಗಳು ಹಾಗೂ ಸಮಾನತೆಯ ಸಂದೇಶಗಳಿಂದ ಪ್ರೇರಣೆ ಪಡೆದಿರುವ ಕನಕಶ್ರೀ ಚಾರಿಟೆಬಲ್ ಟ್ರಸ್ಟ್, ಹಲವು ವರ್ಷಗಳಿಂದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ‘ಪ್ರತಿಭಾ ಪುರಸ್ಕಾರ’, ಬಡ ಹಾಗೂ ಆಶಕ್ತ ವಿದ್ಯಾರ್ಥಿಗಳಿಗೆ ‘ಸಹಾಯಧನ’, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ‘ಅಭಿನಂದನೆ’ ಮತ್ತು ಸಮಾಜ ಸೇವಕರಿಗೆ ‘ಸನ್ಮಾನ’ ನೀಡುವ ಮೂಲಕ ಟ್ರಸ್ಟ್ ತನ್ನ ಸೇವಾ ಧೋರಣೆಯನ್ನು ಮುಂದುವರಿಸಿದೆ.

ನಗರದ ವಿಶ್ವೇಶ್ವರಯ್ಯ ಬಡಾವಣೆಯಲ್ಲಿರುವ ‘ಕನಕ ಸಂಕೀರ್ಣ’ದಲ್ಲಿ ಎರಡು ಸಮುದಾಯ ಭವನಗಳು, ಸುಸಜ್ಜಿತ ವಿದ್ಯಾರ್ಥಿನಿಲಯ ಹಾಗೂ ವಿಶಾಲ ಅಧ್ಯಯನ ಕೇಂದ್ರವನ್ನು ಟ್ರಸ್ಟ್ ನಿರ್ವಹಿಸುತ್ತಿದೆ. ಸಮುದಾಯ ಭವನಗಳನ್ನು ಕೌಟುಂಬಿಕ, ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಅತಿ ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ನೀಡಲಾಗುತ್ತಿದೆ. ರಾಜ್ಯದ ವಿವಿಧ ಭಾಗಗಳಿಂದ ಉನ್ನತ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಉಚಿತ ವಸತಿ, ಅಧ್ಯಯನ ಸೌಲಭ್ಯ ಮತ್ತು ರಿಯಾಯಿತಿ ದರದಲ್ಲಿ ಊಟೋಪಹಾರ ವ್ಯವಸ್ಥೆ ಕಲ್ಪಿಸಲಾಗಿದೆ.

ಇದೀಗ ಸರ್ಕಾರಿ ಸೇವೆಯ ಕನಸು ಹೊಂದಿರುವ ಯುವಜನತೆಗೆ ಗುಣಮಟ್ಟದ ತರಬೇತಿ ಒದಗಿಸುವ ಉದ್ದೇಶದಿಂದ KAS ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ವಿಶೇಷ ತರಬೇತಿ ಶಿಬಿರ ಆರಂಭಿಸಲು ಟ್ರಸ್ಟ್ ನಿರ್ಧರಿಸಿದೆ. ಈ ಕಾರ್ಯಕ್ಕೆ ರಾಜ್ಯದ ಪ್ರಮುಖ ತರಬೇತಿ ಸಂಸ್ಥೆಯಾದ Insights IAS ಸಹಭಾಗಿತ್ವ ನೀಡಿದೆ.

ಸಂಸ್ಥಾಪಕ ನಿರ್ದೇಶಕ Vinay Kumar G B ಅವರ ನೇತೃತ್ವದಲ್ಲಿ ನುರಿತ ಬೋಧಕ ವೃಂದದ ಮಾರ್ಗದರ್ಶನದಲ್ಲಿ ತರಬೇತಿ ಶಿಬಿರಗಳು ಕನಕಶ್ರೀ ಸಂಕೀರ್ಣದಲ್ಲೇ ನಡೆಯಲಿವೆ. ಯಾವುದೇ ಲಾಭಾಪೇಕ್ಷೆ ಇಲ್ಲದೆ, ಕನಿಷ್ಠ ವೆಚ್ಚದಲ್ಲಿ ಉತ್ತಮ ತರಬೇತಿ ನೀಡುವುದು ಉದ್ದೇಶ ಎಂದು ಟ್ರಸ್ಟ್ ತಿಳಿಸಿದೆ. ಕುರುಬ ಸಮುದಾಯದ ಉದ್ಯೋಗಾರ್ಥಿಗಳ ಜೊತೆಗೆ ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೂ ಅವಕಾಶ ಕಲ್ಪಿಸಲಾಗುವುದು.

ಈ ಕುರಿತು ನಗರದ Press Club of Bangalore ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಣೆ ನೀಡಲಾಯಿತು. INSIGHTS IAS ಸಂಸ್ಥಾಪಕ ವಿನಯ್ ಕುಮಾರ್ ಜಿ.ಬಿ., ಟ್ರಸ್ಟ್ ಅಧ್ಯಕ್ಷ ಟಿ.ಬಿ. ಬಳಗಾವಿ, ಕಾರ್ಯದರ್ಶಿ ಪಿ.ಎನ್. ಕೃಷ್ಣಮೂರ್ತಿ ಹಾಗೂ ಇತರ ಮುಖಂಡರು ಉಪಸ್ಥಿತರಿದ್ದರು.

ಶಿಬಿರವನ್ನು ಶೀಘ್ರದಲ್ಲೇ ಆರಂಭಿಸಲಾಗುವುದು. ಆಸಕ್ತರು ಪ್ರವೇಶ ಮತ್ತು ಹೆಚ್ಚಿನ ಮಾಹಿತಿಗಾಗಿ ಚಂದ್ರಾ ಲೇಔಟ್‌ನ INSIGHTS IAS ಕಚೇರಿ (ದೂರವಾಣಿ: 080-69405205) ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಲಾಯಿತು.

City Today News 9341997936

Bengaluru’s Aakash Star Scores 99.99 Percentile in JEE Main 2026

Aakash students shine in JEE Main; Adarsh Kumar Behera scores 99.99 percentile

Bengaluru, February 17, 2026: Students of Aakash Educational Services Limited (AESL) in Bengaluru have delivered an impressive performance in JEE Main 2026 (Session 1), reaffirming the city’s strong academic standing in national-level competitive exams.

According to results announced on February 16 by the National Testing Agency (NTA), several students from Aakash centres across Bengaluru secured top percentiles.
Adarsh Kumar Behera from the Indiranagar branch emerged as the highest scorer among the city’s Aakash students, securing an outstanding 99.9924416 percentile — one of the top scores in the region.

Other high scorers include Ayushs Kolekar (99.98), Pranil Singi (99.9679961), Adarsh Das (99.8937351), Gokul Harikrishnan (99.8824), Naman Agarwal (99.8501128), TRS Sanjeet (99.8206943), Gudal Satya Yashasw (99.7291315), Johaan Job (99.6938658), Vyom Gupta (99.667), Shivansh Pant (99.6410596), Aditya (99.6189341), Sai Nitin S Kolekar (99.4840725), Darshan Harish (99.4566), Kaushal Gundu (99.4472622), Aditya Sharma (99.4147615) and Advaith Raveendran (99.359).

Congratulating the achievers, Dheeraj Kumar Misra, Chief Academic and Business Head, AESL, said the results reflect the students’ dedication and the institute’s structured academic approach. “Their discipline, focused preparation and consistent mentoring have translated into exceptional outcomes. We are proud of their achievements and wish them continued success,” he said.

Students attributed their performance to regular mock tests, continuous assessments and personalised guidance, which helped them identify gaps early and steadily improve their scores.
JEE Main is conducted twice a year, offering candidates an opportunity to better their scores. The examination serves as a gateway to NITs, IIITs and other centrally funded institutions, besides qualifying students for JEE Advanced — the entrance test for the prestigious IITs.

City Today News 9341997936

“ಸರ್ಕಾರ ಸ್ಪಂದಿಸದಿದ್ದರೆ ಹೋರಾಟ ತೀವ್ರ: ಅಧ್ಯಕ್ಷೆ ಶ್ರೀಮತಿ ಶೈಲಾ ಕೆ.ಡಿ ಎಚ್ಚರಿಕೆ”

ಪೌರಸೇವಾ ನೌಕರರ ದೀರ್ಘಕಾಲದ ಬೇಡಿಕೆಗಳಿಗೆ ಸ್ಪಂದನೆ ಬೇಡಿಕೆ
ಫೆ. 28ರಂದು ಗಂಗಾವತಿಯಲ್ಲಿ ಪದಗ್ರಹಣ ಸಮಾರಂಭ

ಬೆಂಗಳೂರು: ರಾಜ್ಯದ ಪೌರಸೇವಾ ನೌಕರರು ಕಳೆದ ಮೂರು ದಶಕಗಳಿಂದ ಮುಂದಿಟ್ಟಿರುವ ಪ್ರಮುಖ ಬೇಡಿಕೆಗಳನ್ನು ತಕ್ಷಣ ಈಡೇರಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದ ನೂತನ ಅಧ್ಯಕ್ಷೆ ಶ್ರೀಮತಿ ಶೈಲಾ ಕೆ.ಡಿ ಒತ್ತಾಯಿಸಿದರು.

ಸರ್ವಾನುಮತದಿಂದ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಅವರು ಹಾಗೂ ಸಂಘದ ಹಿರಿಯ ಉಪಾಧ್ಯಕ್ಷ ಶ್ರೀ ಜಿ. ನೀಲಕಂಠ ಸ್ವಾಮಿ ಮತ್ತು ಇತರ ಪದಾಧಿಕಾರಿಗಳು ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದ ಪೌರಸೇವಾ ನೌಕರರು ಹಲವು ವರ್ಷಗಳಿಂದ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸುಮಾರು ಎಂಟು ಪ್ರಮುಖ ಬೇಡಿಕೆಗಳು 30 ವರ್ಷಗಳಿಂದ ಬಾಕಿಯೇ ಉಳಿದಿವೆ. ವೇತನ ಶ್ರೇಣಿ ಪರಿಷ್ಕರಣೆ, ಸೇವಾ ಭದ್ರತೆ, ಪದೋನ್ನತಿ ನಿಯಮಾವಳಿ ಸ್ಪಷ್ಟೀಕರಣ ಸೇರಿದಂತೆ ಹಲವು ವಿಷಯಗಳಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಅವರು ಹೇಳಿದರು.

ಸರ್ಕಾರ ಮತ್ತು ಸಂಬಂಧಿತ ಅಧಿಕಾರಿಗಳು ಈ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರದಲ್ಲೇ ಅನುಷ್ಠಾನಗೊಳಿಸಬೇಕು. ಇಲ್ಲವಾದಲ್ಲಿ ಸಂಘವು ಮುಂದಿನ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸುವುದಾಗಿ ಎಚ್ಚರಿಸಿದರು.

ಇದೇ ಸಂದರ್ಭದಲ್ಲಿ ಫೆಬ್ರವರಿ 28ರಂದು ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಲಿದೆ ಎಂದು
ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಪ್ರಮುಖ ಪದಾಧಿಕಾರಿಗಳಾದ ಶ್ರೀ ನೀಲಕಂಠ, ಶ್ರೀ ರಾಘವೇಂದ್ರ, ಶ್ರೀ ರ. ಮರಿಯಪ್ಪ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದರು.
ರಾಜ್ಯದ ವಿವಿಧ ಭಾಗಗಳಿಂದ ಪೌರಸೇವಾ ನೌಕರರು ಸಮಾರಂಭಕ್ಕೆ ಆಗಮಿಸುವ ನಿರೀಕ್ಷೆಯಿದ್ದು, ಸಂಘದ ಮುಂದಿನ ಕಾರ್ಯಯೋಜನೆ ಹಾಗೂ ಹೋರಾಟದ ದಿಕ್ಕು ಈ ಸಭೆಯಲ್ಲಿ ನಿರ್ಧಾರವಾಗಲಿದೆ ಎಂದು ತಿಳಿಸಲಾಯಿತು.

City Today News 9341997936

Transport Unions Call ‘Bengaluru Chalo’ Protest on Feb 19, Over 10,000 Workers Likely to Gather

Bengaluru: The Joint Action Committee (JAC) of employees’ unions from four state-run transport corporations, including the Karnataka State Road Transport Corporation (KSRTC), has announced a massive “Bengaluru Chalo” protest on February 19, pressing for the clearance of long-pending salary arrears and implementation of wage revision.

The protest, which was earlier deferred following the demise of veteran transport leader Comrade Ananth Subbarao, will now go ahead without further postponement, union leaders asserted at a press conference on Monday. More than 10,000 employees are expected to assemble at Freedom Park.

Prominent leaders, including Vijay Bhaskar of the KSRTC Staff and Workers Federation, Jayadeva Rajee Aras of the Akhila Karnataka State Road Transport Employees Federation, H.R. Jagadeesh of the Karnataka State Road Transport Employees Union, Gandasi Sadananda Swamy of Vishwa Karmikara Koota, and Rajendra Gowda, warned of an intensified agitation if demands remain unmet.

The unions are demanding release of 38 months’ wage arrears from January 1, 2020 to February 28, 2023, and implementation of a revised pay scale effective January 1, 2024, along with a four-year wage settlement. They allege that despite repeated assurances during earlier rounds of talks, including ahead of Deepavali and in August 2025, the government has failed to act.

While no official directive has been issued to suspend bus services, unions cautioned that operations may be affected if employees abstain from duty. With the combined debt of the four corporations reportedly crossing ₹7,000 crore, workers insist the government must urgently address their financial and service-related concerns.

City Today News 9341997936