ವಿಜಯನಗರ ಮತ್ತು ಗೋವಿಂದರಾಜನಗರ ಕ್ಷೇತ್ರಗಳ ಸಾರ್ವಜನಿಕ ಸ್ಥಳಗಳ ಸುರಕ್ಷತಾ ಸಮೀಕ್ಷೆ ವರದಿ ಬಿಡುಗಡೆ

ಬೆಂಗಳೂರು, ಮಾರ್ಚ್ 29, 2025: ಬೆಂಗಳೂರಿನ ರಾಜಕೀಯ ಕ್ರಿಯಾ ಸಮಿತಿ (ಬಿ.ಪ್ಯಾಕ್) ಮತ್ತು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಸಹಭಾಗಿಯಾಗಿರುವ ಸಿಜಿಐ ಸಂಸ್ಥೆಯು ವಿಜಯನಗರ ಮತ್ತು ಗೋವಿಂದರಾಜನಗರ ಕ್ಷೇತ್ರಗಳ ಬಿ.ಸೇಫ್ ಸಾರ್ವಜನಿಕ ಸ್ಥಳಗಳ ಸುರಕ್ಷತಾ ಸಮೀಕ್ಷೆ ವರದಿಯನ್ನು ಬಿಡುಗಡೆ ಮಾಡಿದೆ. ಗೋವಿಂದರಾಜನಗರ ಶಾಸಕ ಪ್ರಿಯಾ ಕೃಷ್ಣ ಹಾಗೂ ಸಿಜಿಐ ಉಪಾಧ್ಯಕ್ಷ ಶ್ರೀವಿದ್ಯಾ ನಟರಾಜ್ ಅವರ ಸಮ್ಮುಖದಲ್ಲಿ ಈ ಸಮೀಕ್ಷಾ ವರದಿ ಲೋಕಾರ್ಪಣೆಯಾಯಿತು.

ಈ ಸಮೀಕ್ಷೆಯಲ್ಲಿ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಭೇಟಿ ನೀಡುವ 265 ಸಾರ್ವಜನಿಕ ಸ್ಥಳಗಳ ಆಳವಾದ ವಿಶ್ಲೇಷಣೆಯನ್ನು ಮಾಡಲಾಗಿದೆ. ಇದರಡಿಯಲ್ಲಿ 46 ಅಂಗನವಾಡಿ ಕೇಂದ್ರಗಳು, 131 ಬಸ್ ನಿಲ್ದಾಣಗಳು, 58 ಉದ್ಯಾನವನಗಳು, 10 ಸಾರ್ವಜನಿಕ ಆರೋಗ್ಯ ಕೇಂದ್ರಗಳು, 4 ಪೊಲೀಸ್ ಠಾಣೆಗಳು, ಮತ್ತು 16 ಸಾರ್ವಜನಿಕ ಶೌಚಾಲಯಗಳ ಸ್ಥಿತಿಗತಿ ಪರಿಶೀಲನೆ ನಡೆಸಲಾಗಿದೆ.

ಬಿ.ಸೇಫ್ ಕ್ಷೇತ್ರ ಉಪಕ್ರಮ: ಬಿ.ಪ್ಯಾಕ್ ನ ಬಿ.ಸೇಫ್ ಯೋಜನೆಯು ಮಹಿಳೆಯರಿಗೆ ಸುರಕ್ಷಿತ ಸಾರ್ವಜನಿಕ ಸ್ಥಳಗಳನ್ನು ಒದಗಿಸುವ ಉದ್ದೇಶದೊಂದಿಗೆ ರಚಿಸಲಾದ ಮೊದಲ ಕಾರ್ಯಕ್ರಮವಾಗಿದೆ. ಸುರಕ್ಷತಾ ಸಮೀಕ್ಷೆ, ಜಾಗೃತಿ ಕಾರ್ಯಕ್ರಮಗಳು, ಮತ್ತು ನಿರಂತರ ವಕಾಲತ್ತುಗಳ ಮೂಲಕ ಸಮಗ್ರ ರೀತಿಯಲ್ಲಿ ಮಹಿಳಾ ಸುರಕ್ಷತೆಯನ್ನು ಉತ್ತೇಜಿಸಲು ಇದನ್ನು ರೂಪಿಸಲಾಗಿದೆ.

ಸಿಜಿಐ ಸಂಸ್ಥೆಯು ಬಿ.ಸೇಫ್ ಯೋಜನೆಗಾಗಿ ವಿಶೇಷ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದು, ಇದು ದತ್ತಾಂಶ ಸಂಗ್ರಹಣೆ, ಸಮಸ್ಯೆಗಳ ವರದಿ, ಮತ್ತು ಅವುಗಳ ಮುಂದಿನ ಬೆಳವಣಿಗೆಗಳ ಕುರಿತ ಮಾಹಿತಿಯನ್ನು ಪಡೆಯಲು ಸಹಾಯ ಮಾಡುತ್ತದೆ. ಈ ತಂತ್ರಜ್ಞಾನ ಬಳಕೆಯು ಯೋಜನೆಯ ಪರಿಣಾಮಕಾರಿತ್ವವನ್ನು ಮತ್ತಷ್ಟು ಹೆಚ್ಚಿಸಿದೆ.

ಮುಖ್ಯ ಸಂಶೋಧನಾ ಅಂಶಗಳು:

ಬಸ್ ನಿಲ್ದಾಣಗಳ ಮೂಲಭೂತ ಸೌಕರ್ಯಗಳಾದ ಆಸನ ವ್ಯವಸ್ಥೆ, ಮಾರ್ಗ ನಕ್ಷೆಗಳು, ಮತ್ತು ಪಾದಚಾರಿ ಮಾರ್ಗಗಳ ಸುಧಾರಣೆ ಅಗತ್ಯವಾಗಿದೆ.

ಅಂಗನವಾಡಿ ಕೇಂದ್ರಗಳನ್ನು ಪೂರ್ಣ ದಿನದ ಆರೈಕೆ ಕೇಂದ್ರಗಳಾಗಿ ವಿಸ್ತರಿಸುವುದು ಮುಖ್ಯ.

ಉದ್ಯಾನವನಗಳಲ್ಲಿ ಭದ್ರತಾ ಸಿಬ್ಬಂದಿ ನಿಯೋಜನೆ ಮತ್ತು ಸಿಸಿಟಿವಿ ಅಳವಡಿಕೆ ಕಡ್ಡಾಯ.

ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಗೆ ಹೆಚ್ಚಿನ ಗಮನ ನೀಡಬೇಕು.


ಮಾಹಿತಿ ಹಂಚಿಕೊಳ್ಳುವ ಕ್ರಮ: ಈ ಸಮೀಕ್ಷೆಯ ಸಂಶೋಧನಾ ಮಾಹಿತಿಗಳನ್ನು ಸ್ಥಳೀಯ ಸಮುದಾಯಗಳು, ವಾರ್ಡ್ ಸಮಿತಿಗಳು, ನಾಗರಿಕ ಸಂಸ್ಥೆಗಳು ಹಾಗೂ ಚುನಾಯಿತ ಪ್ರತಿನಿಧಿಗಳೊಂದಿಗೆ ಹಂಚಿಕೊಳ್ಳಲಾಗುವುದು. ಈ ಉಪಕ್ರಮವನ್ನು ಬೆಂಗಳೂರು ನಗರದೆಲ್ಲೆಡೆ ವಿಸ್ತರಿಸುವ ಉದ್ದೇಶವಿದೆ.

ಸಂಪರ್ಕಿಸಿ:

ಸಚಿನ್ ಎಟಿ: sachiin@bpac.in | 7349542201

ಅಮೃತ್ ಡಿ: amruth@bpac.in | 91646 04632

ಸಿರಿ ಟಿ ಕೆ: siri@bpac.in | 7975720130

City Today News 9341997936

ಅಂಗನವಾಡಿ ಕಾರ್ಯಕರ್ತೆಯರಿಗೆ ನಿವೃತ್ತಿ ಭತ್ಯೆ ಜಾರಿ – ಸುಪ್ರಿಂ ಕೋರ್ಟ್ ಆದೇಶ ಉಲ್ಲಂಘನೆ?

ಬೆಂಗಳೂರು: ರಾಜ್ಯ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ ನಿವೃತ್ತಿ ಭತ್ಯೆ ಜಾರಿಗೊಳಿಸಿದ್ದು, 2023ರಲ್ಲಿ ನಿವೃತ್ತರಾದವರಿಗೆ ಮಾತ್ರ ಈ ಸೌಲಭ್ಯ ನೀಡಲು 39.81 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. ಆದರೆ, ಈ ನಿರ್ಧಾರ ಸುಪ್ರಿಂ ಕೋರ್ಟ್ ಆದೇಶ ಉಲ್ಲಂಘನೆಯಾಗಿದೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸತಂತ್ರ ಸಂಘಟನೆಯ ಪ್ರಧಾನ ಕಾರ್ಯಧರ್ಶಿ  ಉಮಾಮಣಿ ಕೆ.ಎಲ್ ರವರು ಆರೋಪಿಸಿದ್ದಾರೆ.

ಸುಪ್ರಿಂ ಕೋರ್ಟ್ ಆದೇಶ ಪಾಲನೆಯಿಲ್ಲ?
1997ರಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ನಿವೃತ್ತಿ ಭತ್ಯೆ ನೀಡಬೇಕೆಂದು ಹೋರಾಟ ನಡೆಯುತ್ತಿದ್ದು, ಕೊನೆಗೂ ಸುಪ್ರಿಂ ಕೋರ್ಟ್ 2011ರ ಬಳಿಕ ನಿವೃತ್ತರಾದ ಎಲ್ಲರಿಗೂ ಗ್ರಾಜ್ಯುತಿ ಭತ್ಯೆ ನೀಡಬೇಕೆಂದು ಆದೇಶಿಸಿತ್ತು. ಆದರೆ, ರಾಜ್ಯ ಸರ್ಕಾರ 2023ರಲ್ಲಿ ನಿವೃತ್ತರಾದವರಿಗೆ ಮಾತ್ರ ಭತ್ಯೆ ನೀಡುವ ನಿರ್ಧಾರ ತೆಗೆದುಕೊಂಡಿದ್ದು, ಹಿಂದಿನ ವರ್ಷಗಳಲ್ಲಿ ನಿವೃತ್ತರಾದವರಿಗೆ ಇದು ಅನ್ಯಾಯಕಾರಿಯಾಗುತ್ತದೆ ಎಂದು ಸಂಘಟನೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೋರಾಟ ಮುಂದುವರಿಯಲಿದೆ!
ಸರ್ಕಾರದ ಈ ನಿರ್ಧಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗೆ ಸಂಘಟನೆಗಳು ಸಜ್ಜಾಗಿದ್ದು, 2011 ರಿಂದ 2023ರ ವರೆಗೆ ನಿವೃತ್ತರಾದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೆ ನಿವೃತ್ತಿ ಭತ್ಯೆ ನೀಡುವವರೆಗೆ ಹೋರಾಟ ಮುಂದುವರೆಯಲಿದೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸತಂತ್ರ ಸಂಘಟನೆಯ ಪ್ರಧಾನ ಕಾರ್ಯಧರ್ಶಿ  ಉಮಾಮಣಿ ಕೆ.ಎಲ್ ರವರು ಎಚ್ಚರಿಸಿದ್ದಾರೆ.

ಈ ಬಗ್ಗೆ ರಾಜ್ಯ ಸರ್ಕಾರ ಇನ್ನೂ ಸ್ಪಷ್ಟನೆ ನೀಡದೆ ಇರುವುದರಿಂದ, ಮುಂದಿನ ದಿನಗಳಲ್ಲಿ ಈ ವಿಚಾರ ರಾಜಕೀಯ ಹಾಗೂ ಕಾನೂನು ಹಾದಿ ಹಿಡಿಯುವ ಸಾಧ್ಯತೆ ಇದೆ.

City Today News 9341997936

ಭಾರತದಲ್ಲಿ ತಳಿ ಸಂಪನ್ಮೂಲಗಳು ಮತ್ತು ಸಂಪ್ರದಾಯಿಕ ಜ್ಞಾನದ ಕಾನೂನುಬದ್ದ ಆಡಳಿತ ಕುರಿತು ರಾಷ್ಟ್ರೀಯ ಸಮ್ಮೇಳನ

ಬೆಂಗಳೂರು, ಮಾರ್ಚ್ 26, 2025: ಬಿ.ಎಂ.ಎಸ್. ಕಾನೂನು ಮಹಾವಿದ್ಯಾಲಯದಲ್ಲಿ “ಭಾರತದಲ್ಲಿ ತಳಿ ಸಂಪನ್ಮೂಲಗಳು ಮತ್ತು ಸಂಪ್ರದಾಯಿಕ ಜ್ಞಾನದ ಕಾನೂನುಬದ್ದ ಆಡಳಿತ” ಕುರಿತ ರಾಷ್ಟ್ರೀಯ ಸಮ್ಮೇಳನವು ನಡೆಯಿತು. ಈ ಕಾರ್ಯಕ್ರಮವನ್ನು ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಸಮ್ಮೇಳನದಲ್ಲಿ ಮುಖ್ಯ ಅಥಿತಿಯಾಗಿ ಎ.ಬಿ.ಎಲ್.ಇ ಬೆಂಗಳೂರು (A.B.L.E Bangalore) ಯ ಜನರಲ್ ಮ್ಯಾನೇಜರ್ ಡಾ.ಎಸ್. ಬಾಲಸುಬ್ರಮಣ್ಯ ಅವರು ಭಾಗವಹಿಸಿ ವಕ್ತವ್ಯ ನೀಡಿದರು. ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ನಿರ್ದೇಶಕರಾದ ಪ್ರೊ. (ಡಾ.) ಸಿ.ಎಸ್. ಪಾಟೀಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ಸಂಶೋಧನಾ ಮುಖ್ಯಸ್ಥ ಡಾ. ರೇವಯ್ಯ ಒಡೆಯರ್ ಹಾಗೂ ಬಿ.ಎಂ.ಎಸ್. ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ. (ಡಾ.) ಅನಿತಾ ಎಫ್ ಎನ್ ಡಿಸೋಜಾ ಅವರು ಉಪಸ್ಥಿತರಿದ್ದರು.

ಸಮ್ಮೇಳನದಲ್ಲಿ ಸಂಶೋಧಕರು ಮತ್ತು ಕಾನೂನು ವಿದ್ಯಾರ್ಥಿಗಳು ಸೇರಿ ಸುಮಾರು 45 ಮಂದಿ ಪಾಲ್ಗೊಂಡು ಚರ್ಚೆಗಳಲ್ಲಿ ತೊಡಗಿದರು. ತಳಿ ಸಂಪನ್ಮೂಲಗಳ ಸಂರಕ್ಷಣೆ, ಸಂಪ್ರದಾಯಿಕ ಜ್ಞಾನಗಳ ಕಾನೂನುಬದ್ದ ಸಂವರ್ಧನೆ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹಕ್ಕುಗಳ ಕುರಿತು ಮಹತ್ವದ ಚಿಂತನೆಗಳು ಈ ಸಮ್ಮೇಳನದಲ್ಲಿ ನಡೆದಿದೆ.

City Today News 9341997936

Routematic Appoints Chidananda Murthy as Vice President of People and Culture.

March 27th, 2025, Bengaluru, India– Routematic, a leading corporate mobility solutions provider, is pleased to announce the appointment of Chidananda Murthy as Vice President – People and Culture, effective immediately. In this role, Chidananda will lead Routematic’s people strategy, talent development, and organizational culture, fostering a high-performance and inclusive workplace. With a strong focus on sustainable growth and employee well-being, Chidananda will play a key role in driving the company’s next phase of growth.



Chidananda brings over 20 years of experience with leading global brands in HR leadership roles. Prior to joining Routematic, he led the HR function for Walmart Global Sourcing across India, Bangladesh, and Pakistan, where he spearheaded initiatives like business expansion, talent retention programs, talent reviews, succession planning, and HR operations for the region. He has also worked with Nokia Networks, IBM, Oracle, and Huawei, successfully driving HR strategy, post-M&A integrations, leadership development, and workforce transformation.



Welcoming Chidananda to the leadership team, Kavitha Ramachandragowda, Co-Founder & Executive Director of Routematic, said: “Chidananda’s expertise in human capital management will be crucial as we scale our sustainable mobility solutions and expand our organizational footprint. His strategic leadership will not only strengthen our people-first culture but also ensure we continue to attract, retain, and nurture top talent while fostering a culture of innovation, collaboration and inclusivity.”



Expressing his excitement about joining Routematic, Chidananda Murthy, Vice President – People and Culture, Routematic said: “Routematic is at a pivotal growth stage, and I’m excited to help shape its people strategy. We are committed to fostering an empowering and inclusive culture—one that attracts top talent, nurtures innovation, and drives long-term success. As we work toward redefining corporate mobility, I look forward to contributing to Routematics’ growth, well-being, and transformation.”



Routematic is redefining daily commuting with efficient, reliable, and environmentally conscious transportation solutions. Strengthening its leadership in corporate mobility, the company recently expanded its presence in India with the launch of its third Command Center in Hyderabad, following successful operations in Bengaluru and Pune. By integrating electric vehicles into its fleet, Routematic is actively aligning with India’s green mobility goals, helping businesses transition to sustainable and cost-effective transport solutions.



As Routematic continues its journey of innovation and expansion, the appointment of Chidanand Murthy reaffirms its commitment to fostering a dynamic, people-centric workplace.

City Today News 9341997936

Joyalukkas Unveils ‘Diamond Wedding Collection by Pride’ in Bengaluru

Bengaluru, March 28, 2025: Joyalukkas, one of the world’s leading jewellers, launched its exclusive Diamond Wedding Collection by Pride at a grand event held at its MG Road showroom in Bengaluru. The collection was unveiled by actress Malvika Sharma, adding glamour to the occasion.

The event showcased a stunning array of diamond jewelry, including intricately designed necklaces, elegant earrings, exquisite bangles, and statement solitaire rings. The collection blends traditional craftsmanship with contemporary designs, catering to modern brides who seek elegance and sophistication.

Speaking at the launch, Joy Alukkas, Chairman and Managing Director of Joyalukkas Group, expressed his delight, stating, “The Diamond Wedding Collection by Pride is a tribute to everlasting love and the beautiful journey of marriage. We are excited to introduce this exclusive collection in Bengaluru and are grateful to Malvika Sharma for her presence.”

Guests at the launch enjoyed a first-hand experience of the collection, with personalized styling sessions and expert guidance from the Joyalukkas team. The Diamond Wedding Collection by Pride is now available at all Joyalukkas showrooms.

City Today News 9341997936