ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದ ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಶ್ರೀ ಹೆಚ್ ಎನ್ ನಂಜೇಗೌಡರ ಅಭಿಮಾನಿ ಬಳಗ ಹಾಗೂ ಹನ್ಯಾಳು ಪ್ರಕಾಶನದ ಹೆಚ್.ಎಸ್. ಗೋವಿಂದೇಗೌಡರ ಸಂಪಾದಕತ್ವದ “ಸಂಸ್ಮರಣ ಗ್ರಂಥ” ಬಿಡುಗಡೆ ಕಾರ್ಯಕ್ರಮ

ದಿನಾಂಕ:-12/02/1935 ರಂದು ಹನ್ಯಾಳು ಗ್ರಾಮದಲ್ಲಿ ಜನಿಸಿ ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾಭ್ಯಾಸವನ್ನು ರುದ್ರಪಟ್ಟಣ & ಬಸವಪಟ್ಟಣದಲ್ಲಿ ಮುಗಿಸಿದರು. ಪದವಿ ಪೂರ್ವ ಶಿಕ್ಷಣವನ್ನು ಹಾಸನದಲ್ಲಿ, ಬಿ ಎ ಪದವಿಯನ್ನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಹಾಗೂ ಎಲ್ ಎಲ್ ಬಿ ಯನ್ನು ಶಾರದ ವಿಲಾಸ್ ಮೈಸೂರಿನಲ್ಲಿ ಪಡೆದು ವಿದ್ಯಾರ್ಥಿ ಸಂಘದ ಚುನಾವಣೆಗೆ ಪ್ರತಿನಿಧಿಸುವ ಮೂಲಕ ಅಂದಿನ ಕಾಲದಲ್ಲೇ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡಿದ್ದರು. ನಂತರ 16 ಮೇ 1962 ರಂದು ದೇವರಹಟ್ಟಿ ಅಷ್ಟೇಗೌಡರ ಹಾಗೂ ಮಾಯಮ್ಮ ದಂಪತಿಗಳ ಹಿರಿಯ ಪುತ್ರಿಯಾದ (ಇಂದಿನ ಅರಕಲಗೂಡು ಕ್ಷೇತ್ರದ ಶಾಸಕರಾದ ಶ್ರೀಯುತ ಎ ಮಂಜುರವರ ಅಕ್ಕ) ಕಮಲಮ್ಮರವರ ಜೊತೆ ರಾಮನಾಥಪುರದ ರಾಮೇಶ್ವರ ದೇವಾಲಯದಲ್ಲಿ ವಿವಾಹವಾದರು. ನಂತರ 1962ರ ಅರಕಲಗೂಡು ವಿಧಾನಸಭಾ ಚುನಾವಣೆಯಲ್ಲಿ ಪ್ರಜಾ ಸೋಷಿಯಲಿಸ್ಟ್ ಪಕ್ಷದಿಂದ ಸ್ಪರ್ಧಿಸಿ ಕಾಂಗ್ರೆಸ್ನ ಜಿ.ಎ. ತಿಮ್ಮಪ್ಪ ಗೌಡರ ವಿರುದ್ಧ ಸೋತಿದ್ದರು. ನಂತರ 1967ರಲ್ಲಿ ಅರಕಲಗೂಡು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಸ್ವತಂತ್ರ ಪಕ್ಷದಿಂದ ಸ್ಪರ್ಧಿಸಿ ಕೆ.ಬಿ. ಮಲ್ಲಪ್ಪನವರ ವಿರುದ್ಧ ಗೆಲುವು ಸಾಧಿಸಿದರು.

ಆ ಕಾಲದಲ್ಲಿ ಹೇಮಾವತಿ ಡ್ಯಾಮ್ ಕಟ್ಟುವಾಗ ಮುಳುಗಡೆಯಾದ ನಿರಾಶ್ರಿತರಿಗೆ 50 ಎಕರೆ ಜಾಗವನ್ನು ಸರ್ಕಾರದಿಂದ ಮಂಜೂರು ಮಾಡಿಸಿಕೊಟ್ಟು ಹಲವು ಕುಟುಂಬಗಳಿಗೆ ಆಸರೆಯಾಗಿದ್ದರು. ಅನಂತರ 1972ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಕೆ.ಬಿ. ಮಲ್ಲಪ್ಪನವರನ್ನು ಎರಡನೇ ಬಾರಿಗೆ ಸೋಲಿಸಿದ್ದು, ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ರವರ ಸಂಪುಟ ಸೇರಿ ನೀರಾವರಿ ಸಚಿವರಾಗಿದ್ದು, ಹಾರಂಗಿ ಜಲಾಶಯ ನೀರನ್ನು ಅರಕಲಗೂಡು ತಾಲೂಕಿನ ರೈತರಿಗೆ ಕಾಲುವೆಗಳ ಮುಖಾಂತರ ನೀರು ಹರಿಯುವಂತೆ ಮಾಡಿ ಅರಕಲಗೂಡು ಭಾಗದ ಜನಕ್ಕೆ ನೀರಾವರಿ ಸೌಲಭ್ಯ ಒದಗಿಸಿದ ಭಗೀರಥರಾದರು.

ಅರಕಲಗೂಡು ತಾಲೂಕಿನ ವಿವಿಧ ಹೋಬಳಿಗಳಲ್ಲಿ ಗ್ರಾಮೀಣ ಬ್ಯಾಂಕ್ ಸ್ಥಾಪಿಸಲು ಸಹಕರಿಸಿದರು ಹಾಗೂ ಹೇಮಾವತಿ ಜಲಾಶಯ ಯೋಜನೆ ಜಾರಿಯಾಗಿದ್ದ ಆ ಸಂದರ್ಭದಲ್ಲಿ ಹಿನ್ನೀರಿನ ಸಮರ್ಪಕ ಬಳಕೆಗೆ ಹಲವು ಚೆಕ್ ಡ್ಯಾಮ್ ನಿರ್ಮಿಸಲು ಕಾರಣೀ ಭೂತರಾಗಿದ್ದರು. ನಂತರ 1980 ರಿಂದ 1989 ರವರೆಗೆ ಎರಡು ಬಾರಿಗೆ ಹಾಸನ ಲೋಕಸಭೆಯಿಂದ ಸ್ಪರ್ಧಿಸಿ ಸಂಸತ್ ಪ್ರವೇಶಿಸಿದ್ದರು ಆ ಸಂದರ್ಭದಲ್ಲಿ ನೀರಾವರಿ ವಿಷಯಗಳ ಸಂಬಂಧಿಸಿದಂತೆ ಅದರಲ್ಲೂ ಕಾವೇರಿ ಜಲ ವಿವಾದಗಳು ಸಂಭವಿಸಿದಾಗ ಮಾನ್ಯರು ಅಂದಿನ ರಾಜ್ಯದ ಮುಖ್ಯಮಂತ್ರಿಗಳೊಡಗೂಡಿ ಪ್ರಧಾನಮಂತ್ರಿಯವರೊಂದಿಗೆ ಚರ್ಚಿಸಿ ಹಲವು ಬಾರಿ ರಾಜ್ಯಕ್ಕೆ ಬಂದೊದಗುತ್ತಿದ್ದ ಹಲವಾರು ತೊಡಕುಗಳನ್ನು ಬಗೆಹರಿಸಿದ್ದರು.

ಶ್ರೀಯುತ ಚನ್ನಬಸಪ್ಪನವರ ಶಿಷ್ಯರಾಗಿದ್ದ ನಂಜೇಗೌಡರು ರಾಜ್ಯದ ನೀರಾವರಿ ವಿಷಯಗಳ ಬಗ್ಗೆ ಅಗಾಧವಾದ ಜ್ಞಾನಪಡೆದಿದ್ದ ಇವರು ದುರದೃಷ್ಟವಶಾತ್ ಸನ್ಮಾನ್ಯರ ನೇರ ದಿಟ್ಟ ನುಡಿಯೇ ಅವರಿಗೆ ಮುಳುವಾಗಿದ್ದಕ್ಕೆ ಹಲವು ನಿದರ್ಶನಗಳಿವೆ. ಒಮ್ಮೆ 1987ರಲ್ಲಿ ಸಂಸತ್ ಭವನದ ಭಾಷಣದಲ್ಲಿ ಸ್ವಪಕ್ಷೀಯರ ವಿರುದ್ಧ ಬೊಫೋರ್ಸ್ ಹಗರಣದ ಬಗ್ಗೆ ಧ್ವನಿಯೆತ್ತಿ ಸ್ವಪಕೀಯರ ವಿರೋದಕ್ಕೆ ಗುರಿಯಾಗಿದ್ದರು.

ನಂತರ 1994ರಲ್ಲಿ ಬಿಜೆಪಿಯಿಂದ ಬಸವನಗುಡಿಯಲ್ಲಿ ಸ್ಪರ್ಧಿಸಿ ಜಯಶೀಲರಾಗಿದ್ದರು. ಇವರ ಹೆಸರಿನಲ್ಲಿ ಈಗಲೂ ಬಸವನಗುಡಿಯ ಒಂದು ರಸ್ತೆಗೆ ಹೆಸರಿಟ್ಟಿರುವುದು ಅವರ ಸಾಧನೆಯ ಕೈಗನ್ನಡಿಯಾಗಿದೆ. ಹೆಚ್‌ಎನ್ ನಂಜೇಗೌಡರವರು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು, ಎಸ್ ಎಂ ಕೃಷ್ಣ, ರವರು ಕೆ.ಎಚ್ ಪಟೇಲರು, ಬೊಮ್ಮಾಯಿಯವರು ಹೀಗೆ ಹಲವಾರು ಗಣ್ಯಾತಿ ಗಣ್ಯರೊಡನೆ ನೀರಾವರಿ ವಿಷಯ ಬಂದಾಗ ಸಲಹೆಗಳನ್ನು ನೀಡುತ್ತಿದ್ದರು.

1994ರ ನಂತರ ರಾಜಕೀಯವಾಗಿ ಏಳುಬೀಳುಗಳನ್ನು ಕಂಡರು ಯಾವುದೇ ಪಕ್ಷದ ಯಾರೇ ಅಧಿಕಾರದಲ್ಲಿದ್ದರೂ ಕಾವೇರಿ ವಿವಾದ ತಲೆದೋರಿದಾಗ ಮಾನ್ಯ ನಂಜೇಗೌಡರ ಸಲಹೆ ಪಡೆದೇ ಮುಂದಿನ ರೂಪರೇಷೆ ರಚಿಸುತ್ತಿದ್ದ ಹಲವಾರು ನಿದರ್ಶನಗಳಿವೆ. ಇವರು ದಿನಾಂಕ 19 ಡಿಸೆಂಬರ್ 2008ರಲ್ಲಿ ಇಹಲೋಕ ತ್ಯಜಿಸಿ ಜನಮನದಲ್ಲಿ ಅಜರಾಮರರಾದರು.

ಹಲವಾರು ವರ್ಷಗಳ ನಂತರ ಮಾನ್ಯರ ಬಗ್ಗೆ ಕಾರ್ಯಕ್ರಮವನ್ನು ದಿನಾಂಕ 11.08.2024 ರಂದು ಬೆಂಗಳೂರಿನ ಕುವೆಂಪು ಕಲಾಕ್ಷೇತ್ರ ಒಕ್ಕಲಿಗ ಸಂಘದ ಕ್ಯಾಂಪಸ್ ನಲ್ಲಿ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದ ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಶ್ರೀ ಹೆಚ್ ಎನ್ ನಂಜೇಗೌಡರ ಅಭಿಮಾನಿ ಬಳಗ ಹಾಗೂ ಹನ್ಯಾಳು ಪ್ರಕಾಶನದ ಹೆಚ್.ಎಸ್. ಗೋವಿಂದೇಗೌಡರ ಸಂಪಾದಕತ್ವದ “ಸಂಸ್ಮರಣ ಗ್ರಂಥ” ಬಿಡುಗಡೆ ಕಾರ್ಯಕ್ರಮ ನಡೆಸುತ್ತಿರುವುದು ಹಾಸನ ಭಾಗದ ಜನತೆಗೆ ಒಂದು ಸಂತೋಷದ ಸಂಗತಿ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಹೆಚ್.ಎನ್. ನಂಜೇಗೌಡರ ಅಭಿಮಾನಿ ವೃಂದ ದ ವತಿಯಿಂದ ತಿಳಿಸಲಾಯಿತು.

City Today News 9341997936

ಶನಿವಾರ ರಮಾ ಶರ್ಮ ಅವರ”ಆ ಮಧುರ ಕ್ಷಣಗಳು” ಲೋಕಾರ್ಪಣೆ

ನಾಡಿನ ಹೆಸರಾಂತ ಸ್ನೇಹ ಬುಕ್ ಹೌಸ್ ಸಂಸ್ಥೆ ಪ್ರಕಟಿಸಿರುವ ಶ್ರೀಮತಿ ರಮಾ ಶರ್ಮ ಅವರ ಚೊಚ್ಚಲ ಕೃತಿ “ಆ ಮಧುರ ಕ್ಷಣಗಳು” ಲೋಕಾರ್ಪಣೆ ಸಮಾರಂಭವನ್ನು ದಿನಾಂಕ 10:08:2024 ರ ಶನಿವಾರ ಬೆಳಗ್ಗೆ 11 ಗಂಟೆಗೆ ಬೆಂಗಳೂರು ನಗರದ ಕುಮಾರ ಕೃಪ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ ನಲ್ಲಿ ಹಮ್ಮಿಕೊಳ್ಳಲಾಗಿದೆ
ಕರ್ನಾಟಕ ವಿಧಾನಸಭೆ ಯ ಮಾಜಿ ಸಭಾದ್ಯಕ್ಷರು ಹಾಗೂ ಚಿತ್ರಕಲಾ ಪರಿಷತ್ ನ ಅಧ್ಯಕ್ಷರಾದ ಬಿ.ಎಲ್.ಶಂಕರ್ ಅವರು ಪುಸ್ತಕ ಲೋಕಾರ್ಪಣೆ ಮಾಡಲಿದ್ದು ಖ್ಯಾತ ಸಾಹಿತಿ ಹಾಗೂ ಸಂಸ್ಕೃತಿ ಚಿಂತಕಿ ಡಾ.ಜಯಂತಿ ಮನೋಹರ್ ಅಧ್ಯಕ್ಷತೆ ವಹಿಸುತ್ತಾರೆ,ಕಲಾವಿದೆ ಗಿರೀಜಾ ಹರೀಶ್ ಅವರು ಪುಸ್ತಕ ಪರಿಚಯ ಮಾಡಲಿದ್ದು ಚಿತ್ರಕಲಾ ಪರಿಷತ್ತಿನ ಕಾರ್ಯದರ್ಶಿ ಶಶಿಧರ್ ರಾವ್ ಹಾಗೂ ಆ ಮಧುರ ಕ್ಷಣಗಳು ಕೃತಿಯ ಲೇಖಕಿ ರಮಾ ಶರ್ಮ ಅವರು ಉಪಸ್ಥಿತಿರಿರುತ್ತಾರೆ.
ಪ್ರತಿಭಾವಂತ ಬರಹಗಾರರನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸಿ ಪ್ರೊತ್ಸಾಹಿಸುವುದರಲ್ಲಿ ಸದಾ ಮುಂಚೂಣಿಯಲ್ಲಿರುವ ಸ್ನೇಹ ಬುಕ್ ಹೌಸ್ ಇಲ್ಲಿಯವರೆಗೆ 520 ಕ್ಕೂ ಹೆಚ್ಚು ಕೃತಿಯನ್ನು ಪ್ರಕಟಿಸಿದ್ದು .ಸುಮಾರು 130 ಲೇಖಕರು ತಮ್ಮ ಚೊಚ್ಚಲ ಕೃತಿಯ ಮೂಲಕ ಸ್ನೇಹ ಬುಕ್ ಹೌಸ್ ನಿಂದ  ಪುಸ್ತಕ ಜಗತ್ತಿಗೆ ಪರಿಚಯಿಸಲ್ಪಟ್ಟಿದ್ದು ಹೆಮ್ಮೆ ಪಡುವಂತಹ ಸಂಗತಿಯಾಗಿದೆ.ಇದೀಗ ಶ್ರೀಮತಿ ರಮಾ ಶರ್ಮ ಅವರು “ಆ ಮಧುರ ಕ್ಷಣಗಳು” ಚೊಚ್ಚಲ ಕೃತಿಯ ಮೂಲಕ ಸಾಹಿತ್ಯ ಜಗತ್ತಿಗೆ ಪ್ರವೇಶಿಸುತ್ತಿದ್ದಾರೆ.

City Today News 9341997936

ಜಯನಗರ ರಾಯರ ಮಠದಲ್ಲಿ ಯಶಸ್ವಿಯಾಗಿ ಜರುಗಿದ ಟಿ ಟಿ ಡಿ ಕಾರ್ಯಕ್ರಮ ಪ್ರವಚನದ ಮಂಗಳ

ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್ ಕೆ ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಆಗಸ್ಟ್ 6 ರಿಂದ 9ರ ವರೆಗೆ ವಿವಿಧ ಭಜನಾ ಮಂಡಳಿಗಳಿಂದ ಹರಿ ಭಜನೆ, ಮ||ಶಾ||ಸಂ|| ಶ್ರೀ ಬ್ರಹ್ಮಣ್ಯಾಚಾರ್ಯರಿಂದ “ಶ್ರೀಮದ್ಭಾಗವತ ರತ್ನ ಶ್ರೀ ಪ್ರಹ್ಲಾದರಾಜರ ವೈಭವ” ವಿಷಯವಾಗಿ ಧಾರ್ಮಿಕ ಪ್ರವಚನ, ಶ್ರೀಮತಿ ಚಾಂದಿನಿ ಗರ್ತಿಕೆರೆ ಮತ್ತು ಸಂಗಡಿಗರಿಂದ ಹರಿನಾಮ ಸಂಕೀರ್ತನೆ, ಆಗಸ್ಟ್ 8, ಗುರುವಾರ ಬೆಳಗ್ಗೆ ವಿಶೇಷ ಪೂಜಾ ಕಾರ್ಯಕ್ರಮಗಳು, ಸುಮಾರು ಐದು ಸಾವಿರ ಜನರಿಗೆ ಅನ್ನದಾನ ಸೇವೆ,  ಸಂಜೆ ಕಾರ್ಯಕ್ರಮದಲ್ಲಿ ರಥೋತ್ಸವ, ಪಲ್ಲಕ್ಕಿ ಉತ್ಸವ, ಗಜವಾಹನೋತ್ಸವ ತೊಟ್ಟಿಲು ಸೇವೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿತರಣೆ ನಡೆಯಿತು ಎಂದು ಟಿ ಟಿ ಡಿ ಹೆಚ್.ಡಿ.ಪಿ.ಪಿ. ಸಂಚಾಲಕರಾದ ಡಾ|| ಪಿ. ಭುಜಂಗರಾವ್ ಮತ್ತು ಶ್ರೀ ನಂದಕಿಶೋರ್ ಆಚಾರ್ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ವಿದ್ವಾನ್ – ಬ್ರಹ್ಮಣ್ಯ ಆಚಾರ್ಯರಿಗೆ ಶ್ರೀ ಮಠದ ಪರವಾಗಿ ಆರ್ ಕೆ ವಾದಿಂದ್ರಚಾರ್ಯರು ಮತ್ತು ನಂದಕಿಶೋರಾಚಾರ್ಯರು ಸನ್ಮಾನಿಸಿದರು ಈ ವಿಶೇಷ ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತಿರುವ ಶ್ರೀ ಸುಧೀಂದ್ರ  ದೇಸಾಯಿಯವರು ಮತ್ತು ಶ್ರೀಮಠದ ಸಿಬ್ಬಂದಿಗಳು ಹಾಗೂ ನೂರಾರು ಭಕ್ತರು ಭಾಗವಹಿಸಿ ಶ್ರೀ ಹರಿವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು.

City Today News 9341997936

ಸಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರು ರಾಜ್ಯದ ಎಲ್ಲಾ ವಿಚಾರಗಳನ್ನು ಸಂವಿಧಾನಾತ್ಮಕವಾಗಿ ನೋಡುವ ಸ್ಥಾನದಲ್ಲಿದ್ದು ಏಕ ಪಕ್ಷೀಯವಾಗಿ ವರ್ತಿಸಬಾರದೆಂದು ವಿನಯಪೂರ್ವ ಕೋರಿಕೆ

ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ವತಿಯಿಂದ ಕರ್ನಾಟಕ ಕಂಡಂತಹ ಅಪ್ರತಿಮ ಧೀಮಂತ ನಾಯಕರಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ಕಳೆದ 45 ವರ್ಷಕ್ಕೂ ಮೇಲ್ಪಟ್ಟು ರಾಜಕೀಯ ಜೀವನದಲ್ಲಿ ಕಳಂಕರಹಿತರಾಗಿ ಕಪ್ಪು ಚುಕ್ಕೆಯಿಲ್ಲದಂತೆ ಎರಡನೇ ದೇವರಾಜ ಅರಸು ಎಂಬ ಖ್ಯಾತಿಯೊಂದಿಗೆ ಎರಡನೇ ಭಾರಿ ಮುಖ್ಯಮಂತ್ರಿಯಾಗಿ ಕರ್ನಾಟಕ ರಾಜ್ಯದ ಮಹಾ ಜನತೆಗೆ ನೂರಾರು ಭಾಗ್ಯಗಳನ್ನು ಕೊಟ್ಟು ಅನ್ನ ಭಾಗ್ಯ ನೀಡುವ ಮೂಲಕ “ಅನ್ನರಾಮಯ್ಯ” ಎಂಬ ಖ್ಯಾತಿಯನ್ನು ಹೊಂದಿದ್ದು ಪ್ರಸ್ತುತ ಸರ್ಕಾರದಲ್ಲಿ ನುಡಿದಂತೆ ನಡೆದು ಐದು ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದು ಯಶಸ್ವಿ ಸರ್ಕಾರ ನಡೆಸುತ್ತಿರುವ ಸಂಧರ್ಭದಲ್ಲಿ ಬಿ.ಜೆ.ಪಿ ಮತ್ತು ಜೆ.ಡಿ.ಎಸ್ ರವರಿಗೆ ರಾಜಕೀಯ ಭವಿಷ್ಯವಿಲ್ಲವೆಂದು ಭಾವಿಸಿ ಸಿದ್ದರಾಮಯ್ಯರವರನ್ನು ರಾಜಕೀಯವಾಗಿ ಮುಗಿಸಲು ಚಿಂತಿಸಿ ಮುಡಾ ಹಗರಣವನ್ನು ಸೃಷ್ಟಿಸಿ ಈ ವಿಚಾರದಲ್ಲಿ ಬಿಜೆಪಿ ಮತ್ತು ಜೆ.ಡಿಎಸ್ ರಾಜ್ಯದ ಜನರ ದಿಕ್ಕನ್ನು ಬದಲಾಯಿಸಲು ಹೊರಟಿರುವುದು ಅಕ್ಷಮ್ಯ ಅಪರಾದವಾಗಿರುತ್ತದೆ, ಹಾಗೇ ಆರ್.ಟಿ.ಐ ಕಾರ್ಯಕರ್ತನ ಮೂಲಕ ರಾಜ್ಯಪಾಲರಿಗೆ ದೂರು ನೀಡಿಸಿ ಪ್ರಾಸಿಕ್ಯಷನ್ ಗೆ ಮುಂದಾಗಿರುವುದು ಕಾನೂನು ಬಾಹಿರವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯಿಂದ ಈ ವಿಚಾರವಾಗಿ ಕೂಲಂಕುಷವಾಗಿ ಚರ್ಚಿಸಿ ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಡಲು ಸಮಯಾವಕಾಶವನ್ನು ಕೋರಿರುತ್ತೇವೆ. ಹಾಗೂ ಈಗಾಗಲೇ ಮಾನ್ಯ ಮುಖ್ಯಮಂತ್ರಿಗಳು ಮೂಢಾ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಆದೇಶಿಸಿದ್ದು, ತನಿಕೆ ಪ್ರಗತಿಯಲ್ಲಿದ್ದು ತನಿಕೆ ಮುಗಿದು ವರದಿ ಬರುವವರೆಗೂ ಕಾಯಬಹುದಾಗಿದೆ.

ಮುಂದುವರೆದು ದಿನಾಂಕ 09-08-2024 ರಂದು ಮೈಸೂರಿನಲ್ಲಿ ಸಿದ್ದರಾಮಯ್ಯರನ್ನ ಬೆಂಬಲಿಸಿ ನಡೆಯುವ ಮಹಾ ಸಮಾವೇಶದಲ್ಲಿ ನಾವು ಸೇರಿದಂತೆ ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು, ದಲಿತರು, ಅಲೆಮಾರಿ ಬುಡಕಟ್ಟು ಜನಾಂಗದವರು ಹಾಗೂ ಪ್ರವರ್ಗ 1 ಮತ್ತು ಪ್ರವರ್ಗ -2 ಒಟ್ಟು 197 ಜಾತಿಗಳ ಪ್ರತಿನಿಧಿಗಳು ಸೇರಿದಂತೆ ಎಲ್ಲರೂ ಸ್ವ ಇಚ್ಛೆಯಿಂದ ಭಾಗವಹಿಸತ್ತಿದ್ದು ನಾವೂ ಸಹ ಬೆಂಬಲವನ್ನು ಸೂಚಿಸಿರುತ್ತೇವೆ. ಈ ಕಾರ್ಯಕ್ರಮದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದೇವೆ.

ಈ ವಿಚಾರವನ್ನು ಬಿಜೆಪಿ ಮತ್ತು ಜೆಡಿಎಸ್ ರವರು ಮಾಡಿರುವ ಷಡ್ಯಂತರವನ್ನು ಕೈಬಿಡದ್ದಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದ್ಯಂತ ಪ್ರತಿ ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಪ್ರತಿಭಟನೆಗಳನ್ನು ಮಾಡುತ್ತಾ ಬ್ರಷ್ಟ ಬಿಜೆಪಿ ಸರ್ಕಾರದಲ್ಲಿ ನಡೆದಂತಹ ಹಗರಣ ಮತ್ತು ಬ್ರಷ್ಟಚಾರಗಳನ್ನು ದಾಖಲೆ ಸಮೇತ ಹೊರತೆಗೆದು ಜನರ ಮುಂದಿಟ್ಟು ನ್ಯಾಯ ಕೇಳಲು ನಿರ್ದರಿಸಿದ್ದೇವೆ.

ಮುಖ್ಯಮಂತ್ರಿಗಳು ಎರಡು ಭಾರಿ ಮುಖ್ಯಮಂತ್ರಿಗಳಾಗಿ ಜನಪರ ಕಾರ್ಯಕ್ರಮಗಳನ್ನು ಸಮಾಜಕ್ಕೆ ಕೊಟ್ಟು ಜನಪ್ರಿಯ ಗಳಿಸಿದ್ದಾರೆ. ಅವರ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ಗಾಂಧೀಜಿಯವರ ಸತ್ಯಮೇವ ಜಯತೇ ಎಂಬ ನಾನ್ನುಡಿಯಂತೆ ಮತ್ತು ಸರ್ವರಿಗೂ ಸಮ ಬಾಳು. ಸರ್ವರಿಗೂ ಸಮ ಪಾಲು ಎಂಬ ಬಸವಣ್ಣನವರ ತತ್ವದಂತೆ ನಡೆಯುತ್ತಿರುವ ಮುಖ್ಯಮಂತ್ರಿಗಳಿಗೆ ಸಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರು ರಾಜ್ಯದ ಎಲ್ಲಾ ವಿಚಾರಗಳನ್ನು ಸಂವಿಧಾನಾತ್ಮಕವಾಗಿ ನೋಡುವ ಸ್ಥಾನದಲ್ಲಿದ್ದು ಏಕ ಪಕ್ಷೀಯವಾಗಿ ವರ್ತಿಸಬಾರದೆಂದು ಅಧ್ಯಕ್ಷರು-ಎಂ.ಸಿ. ವೇಣುಗೋಪಾಲ್, ಮಾಜಿ ಶಾಸಕರು,  ಸವಿತಾ ಸಮಾಜ ಬೆಂಗಳೂರು,ಪ್ರಧಾನ ಕಾರ್ಯದರ್ಶಿ-ಎಂ. ನಾಗರಾಜು, ಹೆಳವ ಸಮಾಜ ಬೆಂಗಳೂರು, ಖಜಾಂಚಿ-ಎಲ್.ಎ. ಮಂಜುನಾಥ್, ನಿವೃತ್ತ ಡಿ.ಸಿ. ಅಬಕಾರಿ, ತಿಗಳ ಸಮಾಜ ಬೆಂಗಳೂರು ಮತ್ತು ಇತರ ಮುಖಂಡರುಗಳ ಉಪಸ್ಥಿತಿಯಲ್ಲಿ ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ (ರಿ) ವತಿಯಿಂದ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ  ವಿನಯಪೂರ್ವಕವಾಗಿ ಕೋರಿಕೆ ಸಲ್ಲಿಸಲಾಯಿತು.

City Today News 9341997936

Propelld Announces Successful ESOP Buyback, Pool Increase, and Additional Grants

Bengaluru, 7 August 2024: Propelld today announced the successful completion of their ESOP (Employee Stock Ownership Plan) buyback, a significant increase in the ESOP pool, and the distribution of additional ESOPs to employees. The buyback, valued at ₹7.05 crore, saw the participation of 18 employees who held vested ESOPs.
The ESOP pool has been expanded by 50%, increasing from 2,898 to 4,334 shares. This expansion is aimed at attracting and retaining top talent, thereby supporting the company’s hiring strategy and rewarding high-performing employees. In addition, Propelld granted additional ESOPs worth ₹6.5 crore to 70 employees, based on their performance and potential, further underscoring the company’s commitment to recognizing and rewarding exceptional effort.
Bibhu Prasad Das, Co-founder and CEO, Propelld, said: “Our recent actions reflect our commitment to the team’s growth and well-being. By expanding our ESOP pool and rewarding high performers, we not only recognize the significant contributions of our employees but also align their success with the company’s long-term goals. As we strive to become India’s largest sustainable education financing company, these initiatives are crucial in fostering a supportive and motivated workforce.”
Amritesh Shukla, HR Head, Propelld, said: “We value performance and rigor as a company. Wealth creation opportunities for our employees’ help them to fulfil the dreams and ambition of their family members too.”
The company has also announced plans for future ESOP-related initiatives, including additional buybacks, demonstrating its ongoing dedication to employee welfare and shared success.

City Today News 9341997936