” ಶ್ರೀ ಸುಬುಧೇಂದ್ರ ಶ್ರೀಗಳಿಂದ  ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠ ಮಂತ್ರಾಲಯ ಶಾಖೆಯ ಉದ್ಘಾಟನೆ”

ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಗುರುಸಾರ್ವಭೌಮ  ಸಂಸ್ಕೃತ ವಿದ್ಯಾಪೀಠ ಮಂತ್ರಾಲಯದ ಶಾಖೆಯನ್ನು ಪರಮ  ಪೂಜ್ಯ ಶ್ರೀ1008 ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ತಮ್ಮ ಅಮೃತ ಹಸ್ತದಿಂದ “ಉದ್ಘಾಟಿಸಿ” ಶ್ರೀ ಮಠದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 5:30 ರಿಂದ 6:30 ವರೆಗೆ ತ್ರಿಮತಸ್ಥ ವಿಪ್ರರಿಗೆ ಉಚಿತವಾಗಿ ಹೇಳಿಕೊಡಲು ಆದೇಶಿಸಿ ಅನುಗ್ರಹಿಸಿದರು ಈ ಸಂದರ್ಭದಲ್ಲಿ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದಿಂದ್ರ ಆಚಾರ್ಯರು ಹಾಗೂ ಕಡಪ ಹನುಮೇಶ ಆಚಾರ್ ಮತ್ತು ಶ್ರೀ ನಂದಕಿಶೋರ ಆಚಾರ್ ಇದ್ದರು.

ಹೆಚ್ಚಿನ ಮಾಹಿತಿಗಾಗಿ-

ರಾಜಾ ಕೆ ವಾದೀ೦ದ್ರ ಆಚಾರ್ಯ
ವಲಯ ವ್ಯವಸ್ಥಾಪಕರು
ಚರವಾಣಿ_08022443962

ಕಡಪ ಹನುಮೇಶಾಚಾರ್ಯ
ಅಧ್ಯಾಪಕರು
ಚರವಾಣಿ 9845614365

City Today News 9341997936

ವಾಲ್ಮೀಕಿ ನವಸಮಾಜ ಸಂಘದ ವತಿಯಿಂದ ದಿನಾಂಕ: 01-07-2024 ರ ಬೆಳಗ್ಗೆ 11.00 ಗಂಟೆಗೆ ಪ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ

ವಾಲ್ಮೀಕಿ ನವಸಮಾಜ ಸಂಘದ ವತಿಯಿಂದ ದಿನಾಂಕ: 01-07-2024 ರ ಬೆಳಗ್ಗೆ 11.00 ಗಂಟೆಗೆ ಪ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಪ್ರತಿಭಟನೆಯು ಕರ್ನಾಟಕ ಮಹರ್ಷಿ ವಾಲೀಕ್ಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದ 187 ಕೋಟಿ ಅವ್ಯವಹಾರದ ಬಗ್ಗೆ ಈಗಾಗಲೇ ಮಾಧ್ಯಮಗಳಲ್ಲಿ ಬಿತ್ತರಿಸಲಾಗಿದೆ. ನಾವು ಪರಿಶಿಷ್ಟ ಪಂಗಡದ ಸಮಾಜದವರಾಗಿ ನಮ್ಮ ಸಮುದಾಯದ ಬಡ ಮತ್ತು ಆರ್ಥಿಕ ಹಿಂದುಳಿದ ವರ್ಗದ ಜನರಿಗೆ ಅನ್ಯಾಯವಾಗಿದ್ದು ಈ ನಿಗಮದಲ್ಲಿ ಸಿಗಬಹುದಾದ ಸವಲತ್ತುಗಳು ಜನರಿಗೆ ತಲುಪದೇ ಅನ್ಯಾಯವಾಗಿರುತ್ತದೆ. ಮತ್ತು ಸಮಾಜದ ಇನ್ನು ಅನೇಕ ಬೇಡಿಕೆಗಳು ಇದುವರೆಗೂ ಸರ್ಕಾರವು ಈಡೇರಿಸದೇ ಇರುವುದು.

ನಮ್ಮ ಸಂಘದ ಧರಣಿಯ ಪ್ರಮುಖ ಬೇಡಿಕೆಗಳು

1. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ 187 ಕೋಟಿ ಅಕ್ರಮ ಹಣ ವರ್ಗಾವಣೆ ಕುರಿತು ಶೀಘ್ರ ತನಿಖೆ ಮಾಡಬೇಕು.

2. ಪರಿಶಿಷ್ಟ ಪಂಗಡದ 7% ಮೀಸಲಾತಿಯನ್ನು ಸಂವಿಧಾನದ ಅನುಚ್ಛಿತದ 9 ರಲ್ಲಿ ಸೇರ್ಪಡೆ ಮಾಡುವುದು.

3. ಪರಿಶಿಷ್ಟ ಪಂಗಡದ ನಕಲಿ ಜಾತಿ ಪ್ರಮಾಣ ಪತ್ರಗಳ ತಡೆಗಟ್ಟಬೇಕು.

4. ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಬಾನುವಳಿ ಗ್ರಾಮದಲ್ಲಿ ತೆರವು ಗೊಳಿಸಲಾದ ರಾಜ್ಯ ವೀರ ಮದಕರಿ ನಾಯಕ ಮಹಾದ್ವಾರ ಮತ್ತು ವಾಲ್ಮೀಕಿ ನಾಮಫಲಕ ಮರು ಸ್ಥಾಪನೆ ಕುರಿತು ಮತ್ತು ಸಮಾಜದ ಮುಖಂಡರ ಮೇಲೆ ಹಾಕಿರುವ ಮೊಕದ್ದಮೆಗಳನ್ನು ವಾಪಸ್ ಪಡೆಯಲು ಆಗ್ರಹಿಸಿದೆ.

5. ಕಲ್ಯಾಣ ಕರ್ನಾಟಕ ಪ್ರತಿ ತಾಲ್ಲೂಕಿನಲ್ಲಿ ಪರಿಶಿಷ್ಟ ಪಂಗಡದ ಹಾಸ್ಟೆಲ್ ಸುಧಾರಣೆ ಮತ್ತು ಹೊಸ ಹಾಸ್ಟೆಲ್‌ಗಳ ನಿರ್ಮಾಣವನ್ನು ಮಾಡಬೇಕು

6. ಪರಿಶಿಷ್ಟ ಪಂಗಡಗಳಲ್ಲಿ ಹಣಕಾಸು ಸೌಲಭ್ಯವನ್ನು ಅದೇ ವರ್ಷದಲ್ಲಿ ಮೀಸಲ್ಟಿ ಹಣವನ್ನು ಸಮಾಜದ ಹೊಳಿತಿಗಾಗಿ ಖರ್ಚು ಮಾಡಬೇಕು.

7. ಬೆಂಗಳೂರಿನ ಹೃದಯಭಾಗದಲ್ಲಿ ವಾಲ್ಮೀಕಿ ಭವನವನ್ನು ನಿರ್ಮಾಣ ಮಾಡಬೇಕು.

8. ರಾಯಚೂರು ಕೃಷಿ ವಿಶ್ವವಿದ್ಯಾಲಯಕ್ಕೆ ಶ್ರೀ ಮಹರ್ಷಿ ವಾಲ್ಮೀಕಿ ಎಂದು ಮರು ನಾಮಕರಣ ಮಾಡಬೇಕು.

9. ವಾಲ್ಮೀಕಿ ಅಧ್ಯಯನ ಪೀಠಕ್ಕೆ ಹೆಚ್ಚುವರಿ ಹಣಕಾಸನ್ನು ಒದಗಿದುವುದು.

10. ದೇವನಹಳ್ಳಿಯಲ್ಲಿ ವಾಲ್ಮೀಕಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಸ್ಥಾಪನೆಗೆ ಅಗ್ರಹ

11. ಎಸ್.ಇ.ಪಿ./ಟಿ.ಎಸ್.ಪಿ. ಮೀಸಲ್ಸಿ ಹಣವನ್ನು ಯಾವುದೇ ಕಾರಣಕ್ಕೂ ಬೇರೆ ಇಲಾಖೆಗಳಿಗೆ ವರ್ಗಾವಣೆ ಮಾಡುವಂತಿಲ್ಲ.

12. ಪರಿಶಿಷ್ಟ ಪಂಗಡದ ಸಮುದಾಯದಲ್ಲಿ ನಿವೇಶನ ರಹಿತ ಕುಟುಂಬಗಳಿಗೆ ನಿವೇಶನಗಳನ್ನು ಒದಗಿಸಬೇಕು.

13. ಗ್ರಾಮ ಪಂಚಾಯತಿಗಳಲ್ಲಿ ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಮೀಸಲಿರುವ ಹಣವನ್ನು ಅದೇ ವರ್ಷದಲ್ಲಿ ಸಮುದಾಯದ ಹೊಳತಿಗಾಗಿ ಖರ್ಚು ಮಾಡಬೇಕು.

14. ರಾಜ್ಯ ಸರ್ಕಾರದ ಅಡಿಯಲ್ಲಿ ಬರುವ ಎಲ್ಲಾ ಸಹಕಾರ ಸಂಸ್ಥೆಗಳಲ್ಲಿ ಪರಿಶಿಷ್ಟ ಪಂಗಡದವರಿಗೆ ಮೀಸಲಾತಿಯನ್ನು ಕಲ್ಪಿಸಿಕೊಡಬೇಕು.

15. ಗೋಮಾಳದಲ್ಲಿ ಕೃಷಿಯನ್ನು ಕೈಗೊಂಡಿರುವ ಪರಿಶಿಷ್ಟ ಪಂಗಡದವರಿಗೆ ಸಾಗುವಳಿ ಚೀಟಿಯನ್ನು ಶೀಘ್ರ ಮಂಜೂರು ಮಾಡಬೇಕು.

16. ಕೇಂದ್ರ ಮತ್ತು ರಾಜ್ಯಸರ್ಕಾರದ ಅಡಿಯಲ್ಲಿ ಇರುವ ಬ್ಯಾಕ್‌ಲಾಗ್ ಹುದ್ದೆಗಳನ್ನು ತುರ್ತಾಗಿ ಭರ್ತಿ ಮಾಡುವುದು.

17. ಚಿತ್ರದುರ್ಗದಲ್ಲಿ ಮದಕರಿ ನಾಯಕ ತೀಮ್ ಪಾರ್ಕ್‌ನ್ನು ನಿರ್ಮಾಣ ಮಾಡಬೇಕು.

18. ಕಲ್ಯಾಣ ಕರ್ನಾಟಕ ಭಾಗದಲ್ಲಿ ವಲಸೆಯನ್ನು ತಡೆಗಟ್ಟಲು ಕೈಗಾರಿಕೆಗಳನ್ನು ಸ್ಥಾಪನೆ ಮಾಡಬೇಕು.

19. ಪಡಿಯುತ್ತಿರುವ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯಗಳಲ್ಲಿ ಕಡ್ಡಾಯ ಹಾಸ್ಟೆಲ್ ಪ್ರವೇಶದ ಅವಕಾಶವನ್ನು ಕಲ್ಪಿಸಿಕೊಡಬೇಕು

20.ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ವಿದ್ಯಾರ್ಥಿವೇತನ ಮತ್ತು ಮೆರಿಟ್ ಪ್ರೋತ್ಸಾಹದ ಹಣವು ಇನ್ನು ವಿಳಂಬವಾಗಿದ್ದು ಶೀಘ್ರವೇ ವಿದ್ಯಾರ್ಥಿ ವೇತನವನ್ನು ಬಿಡುಗಡೆ ಮಾಡುವುದು.

21. ಕರ್ನಾಟಕ ರಾಜ್ಯದಲ್ಲಿ ವಿಶೇಷ ಅನುದಾನಗಳ ಮೂಲಕ ಪರಿಶಿಷ್ಟ ಪಂಗಡಗಳ ಕಾಲೋನಿಗಳ ಅಭಿವೃದ್ಧಿಗೆ ವಿಶೇಷ ಆದ್ಯತೆಯನ್ನು ಕೊಡಬೇಕು.

22.ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಪ್ರತಿ ವರ್ಷ ನಡೆಯುತ್ತಿರುವ ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಮತ್ತು ಮದ್ಯವರ್ತಿಗಳ ಹಾವಳಿಯನ್ನು ತಡೆಗಟ್ಟಿ, ನಿಜವಾದ ಪಲಾನುಭವಿಗಳನ್ನು ಆಯ್ಕೆ ಮಾಡಿ ಯೋಜನೆಗಳನ್ನು ಜನರಿಗೆ ತಲುಪುವಂತೆ ಕ್ರಮ ಕೈಗೊಳ್ಳಬೇಕು.

23.ಬೆಂಗಳೂರಿನ ವಿಶ್ವವಿದ್ಯಾಲಯದಲ್ಲಿ ವಾಲ್ಮೀಕಿ ಅಧ್ಯಯನ ಪೀಠವನ್ನು ಸ್ಥಾಪಿಸಲು ಸೂಕ್ತ ಸೂಚನೆಯನ್ನು ನೀಡಬೇಕು.

ಈ ಮೇಲಿನ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರದ ಗಮನಕ್ಕೆ ತರುವ ಸಲುವಾಗಿ ಪ್ರತಿಭಟನೆಯನ್ನು ಕೈಗೊಳ್ಳಲಾಗಿದ್ದು, ವಾಲ್ಮೀಕಿ ಸಮಾಜದ ಎಲ್ಲಾ ಬಂಧುಗಳು, ಸಮುದಾಯದ ಎಲ್ಲಾ ಸಂಘಟನೆಗಳು ಸಂಘಟನೆಗಳ ರಾಜ್ಯಾಧ್ಯಕ್ಷರಗಳು, ಪದಾಧಿಕಾರಿಗಳು ಮತ್ತು ಎಲ್ಲಾ ಸಂಘಟನೆಗಳ ಸದಸ್ಯರುಗಳು ಸಮಾಜದ ಮುಖಂಡರುಗಳು, ಜನಪ್ರತಿನಿಧಿಗಳು ಒಟ್ಟಿಗೆ ಭಾಗವಹಿಸಿ, ರಾಜ್ಯದಲ್ಲಿ ವಾಲ್ಮೀಕಿ ಸಮಾಜಕ್ಕೆ ಆಗುತ್ತಿರುವ ಅನ್ಯಾಯವನ್ನು ತಡೆಗಟ್ಟಲು ಮತ್ತು ನಮ್ಮ ಸಮುದಾಯದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನಮ್ಮ ವಾಲ್ಮೀಕಿ ಸಮಾಜದ ದ್ವನಿಯು ಸರ್ಕಾರಕ್ಕೆ ಮುಟ್ಟುವಂತೆ ಮಾಡಲು ಈ ಪ್ರತಿಭಟನೆಯಲ್ಲಿ ಎಲ್ಲರೂ ಪಕ್ಷತೀತವಾಗಿ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೋರುತ್ತೇವೆ ಎಂದು ಸಂಘದ ವತಿಯಿಂದ ಹೇಳಿಕೆ ನೀಡಲಾಯಿತು.

ಪತ್ರಿಕಾ ಗೋಷ್ಠಿ ಯಲ್ಲಿ ಡಿ. ಎನ್. ಲಕ್ಷ್ಮೀಪತಿ-ಅಧ್ಯಕ್ಷರು, ಲಿಂಗಯ್ಯ ನಾಯಕ್ -ಉತ್ತರ ಕರ್ನಾಟಕ ವಿಭಾಗೀಯ ಅಧ್ಯಕ್ಷರು, ರಾಮಾಂಜೀ -ಕಾರ್ಯಧರ್ಶಿ, ಮತ್ತು ಸಂಘದ ವತಿಯಿಂದ ನಾಯಕರುಗಳಾದ ಶ್ರೀನಿವಾಸ್ ನಾಯಕ್, ಈರೇಶ್ ನಾಯಕ್ ಮತ್ತು ಶಿವರಾಜ್ ನಾಯಕ್ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಉಪಸ್ಥಿತರಿದ್ದರು.

City Today News 9341997936

Tenon FM Acknowledged for Outstanding Growth in the “India Meets Britain Tracker 2024”

– Fastest-Growing Indian-Owned Companies in the UK
– Tenon FM is among the top 10 Indian Employer in the UK

Tenon FM, a leading integrated facilities management company and subsidiary of Tenon Group, a prominent Indian multinational specializing in private security and integrated facility management. Tenon FM is proud to be recognized in the prestigious “India Meets Britain Tracker 2024,” released by Grant Thornton and the Confederation of Indian Industry (CII) as the fastest-growing Indian-owned company.  The report was released in the House of Lords and highlights the significant contributions of Indian companies to the UK economy.
Tenon FM’s recognition as one of the leading Indian-owned companies in the UK underscores and top Indian employer in the UK amidst a dynamic economic landscape. This recognition is a testament to Tenon FM’s commitment to innovation and its strategic approach to growth, inspiring the company to reach even greater heights.

India’s dynamic economy, growing at an annual rate of over 8%, is set to supercharge the India-UK partnership. The prospect of a free trade deal between India and the UK, potentially increasing bilateral trade to more than $100 billion by 2030, positions companies like Tenon FM at the forefront of fostering international collaboration and economic growth.

Tenon Group’s success story reflects its growth and the growing economic ties between India and Britain. With a strong presence across India, Singapore, and the UK, Tenon is a bridge fostering international collaboration. The company actively creates valuable job opportunities, solidifying its position as a critical player in the global market.

“The UK has become a strategic growth engine for Tenon FM, said Major Manjit Rajain, Global Chairman, Tenon Group. Our double-digit growth and ranking as a top employer are not just milestones but building blocks for an even more impactful future. We are committed to becoming the leading facilities management partner in the UK, not only by delivering exceptional service but also by fostering a future-ready workforce and embracing sustainable practices that contribute to a thriving British economy.”

City Today News 9341997936

Airtel Announces Revised Mobile Tariffs

June 28, 2024: Bharti Airtel (‘Airtel’) has maintained that the mobile Average Revenue per User (ARPU) needs to be upwards of INR 300, to enable a financially healthy business model for Telcos in India. We believe that this level of ARPU will enable the substantial investments required in network technology and spectrum and offer a modest return on capital.
In this light, we welcome the announcements in the industry to repair tariffs. Airtel will also revise its mobile tariffs as indicated below, from July 3rd. We have ensured that there is a very modest price increase (less than 70p per day) on the entry level plans, in order to eliminate any burden on budget challenged consumers. 

These prices apply to all circles, including Bharti Hexacom Ltd. Circles.
The new tariffs for all Airtel plans will be available on www.airtel.in starting July 3rd , 2024.

City Today News 9341997936

ಬ್ಯಾರಿ ಸಮುದಾಯದ ವ್ಯಕ್ತಿಗಳನ್ನು ಒಟ್ಟುಸೇರಿಸುವ ಮತ್ತು ನಮ್ಮ ಸಂಘಟನೆಯೊಂದಿಗೆ ಗುರುತಿಸಿಕೊಳ್ಳುವ ಸಲುವಾಗಿ 2024/25 ರ ಸದಸ್ಯತ್ವ ಅಭಿಯಾನ ಜುಲೈ 1ರಿಂದ ಜುಲೈ 31 ರ ವರೆಗೆ

ಕರ್ನಾಟಕ ರಾಜ್ಯದ ಬಹುಮುಖ್ಯ ಸಮುದಾಯಗಳಲ್ಲೊಂದಾದ ಬ್ಯಾರಿ ಸಮುದಾಯದ ಜನರ ಸಾಮಾಜಿಕ ಸಂಘಟನೆಯಾಗಿದೆ ಬ್ಯಾರಿ ಸೆಂಟ್ರಲ್ ಕಮಿಟಿ ಬೆಂಗಳೂರು, ಅಂದಾಜು ಪ್ರಕಾರ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸರಿ ಸುಮಾರು 1ಲಕ್ಷದಷ್ಟು ಬ್ಯಾರಿ ಸಮುದಾಯದ ಜನರು ಶಿಕ್ಷಣ ಉದ್ಯೋಗ, ವ್ಯವಹಾರ,ಮಾಡಿಕೊಂಡು ರಾಜ್ಯದ ಆರ್ಥಿಕತೆಗೆ ದೊಡ್ಡ ಕೊಡುಗೆಯನ್ನು ನೀಡುತ್ತಿದ್ದಾರೆ. ಬ್ಯಾರಿ ಸಮುದಾಯವು ಬಹುಮುಖ್ಯವಾಗಿ ವ್ಯಾಪಾರವನ್ನು ನೆಚ್ಚಿಕೊಂಡಿರುವ ಸಮುದಾಯವಾಗಿದೆ. ಬ್ಯಾರಿ ಸಮುದಾಯದ ಎಲ್ಲಾ ಜನರನ್ನು ಒಗ್ಗೂಡಿಸುವ ಉದ್ದೇಶದಿಂದ ಮತ್ತು ಬ್ಯಾರಿ ಸಮುದಾಯದ ಸಮಗ್ರ ಅಭಿವೃದ್ಧಿಯ ದೃಷ್ಟಿಕೋಣದಿಂದ ಬ್ಯಾರಿ ಸೆಂಟ್ರಲ್ ಕಮಿಟಿ ಎಂಬ ಸಂಘಟನೆಯನ್ನು ರಚಿಸಲಾಗಿದೆ. ಈಗಾಗಲೇ ಹಲವು ಸಾಮಾಜಿಕೆ ಸೇವೆಗಳನ್ನು ಸಂಘಟನೆಯು ಮಾಡುತ್ತಾ ಬಂದ್ದಿದ್ದು ಅದರಲ್ಲಿ ಪ್ರಮುಖವಾಗಿ ಇತ್ತಿಚ್ಚೆಗೆ ನಡೆದ ಲೋಕಸಭಾ ಚುನಾವಣೆ ಸಂಧರ್ಭದಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಮತದಾರರಿಗೆ ಮತದಾನದ ಜಾಗೃತಿ ಮೂಡಿಸಿ ಪ್ರಯಾಣಕ್ಕಾಗಿ ಸಾರಿಗೆ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಒಂದು ಸಂಘಟನೆಯನ್ನು ಬೆಂಗಳೂರಿನಲ್ಲಿ ನೆಲೆಸಿರುವ ಎಲ್ಲಾ ಬ್ಯಾರಿ ಸಮುದಾಯದ ಜನರನ್ನು ತಲುಪುವ ಉದ್ದೇಶದಿಂದ ಬೃಹತ್ ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ನಮ್ಮ ಸಂಘಟನೆಯ ಪ್ರಮುಖ ಕೆಲವು ಉದ್ದೇಶಗಳು ಈ ಕೆಳಗಿನಂತಿದೆ

1)ಬೆಂಗಳೂರಿನಲ್ಲಿರುವ ಎಲ್ಲಾ ಬ್ಯಾರಿ ಸಮುದಾಯದ ವ್ಯಕ್ತಿಗಳನ್ನು ಒಂದು ವೇಧಿಕೆಯಲ್ಲಿ ಒಟ್ಟು ಸೇರಿಸುವುದು

2)ಬ್ಯಾರಿ ಸಮುದಾಯದ ವ್ಯಕ್ತಿಗಳು ಬೆಂಗಳೂರು ಮತ್ತು ಸುತ್ತ ಮುತ್ತಲಿನ ಭಾಗಗಲ್ಲಿ ಏನಾದರು ಅವಘಡ, ಅಪಘಾತಗಳಿಗೆ ಒಳಗಾದಾಗ ತಕ್ಷಣ ನೆರವಿಗೆ ಬರುವುದು

3)ಉನ್ನತ ವ್ಯಾಸಂಗಕ್ಕೆ ಬೆಂಗಳೂರಿಗೆ ಬರುವ ಬ್ಯಾರಿ ಸಮುದಾಯದ ವಿದ್ಯಾರ್ಥಿಗಳಿಗೆ ಸಹಕಾರ, ನೆರವು ಒದಗಿಸುವುದು

4) ಬೆಂಗಳೂರಿನಲ್ಲಿ ಉದ್ಯೋಗ, ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಬ್ಯಾರಿಗಳು ಅನ್ಯಾಯಕ್ಕೊಳಗಾಗುವ ಸಂದರ್ಭದಲ್ಲಿ ಕಾನೂನಾತ್ಮಕ ನೆರವು ಒದಗಿಸುವುದು

5) ಬ್ಯಾರಿ ಸಮುದಾಯದ ಜನರ ಶೈಕ್ಷಣಿಕ,ಆರ್ಥಿಕ,ರಾಜಕೀಯ ಅಭಿವೃದ್ಧಿಗೆ ಶ್ರಮಿಸುವುದು.

ಈ ಮೇಲೆ ತಿಳಿಸಿದ ಎಲ್ಲಾ ಪ್ರಮುಖ ದ್ವೇಯೋದ್ದೇಶಗಳನ್ನು ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು ಬಹಳ ಒತ್ತುಕೊಟ್ಟು ಯಶಸ್ವಿಯಾಗಿ ಕಾರ್ಯಾಚರಿಸುತ್ತಿದೆ. ಸಂಘಟನೆಯ ಇನ್ನಷ್ಟು ಎತ್ತರಕ್ಕೆ ಬೆಳೆಸುವ ದೃಷ್ಟಿಕೋಣದಿಂದ ಬೆಂಗಳೂರಿನಾದ್ಯಂತ ಇರುವ ಬ್ಯಾರಿ ಸಮುದಾಯದ ವ್ಯಕ್ತಿಗಳನ್ನು ಒಟ್ಟುಸೇರಿಸುವ ಮತ್ತು ನಮ್ಮ ಸಂಘಟನೆಯೊಂದಿಗೆ ಗುರುತಿಸಿಕೊಳ್ಳುವ ಸಲುವಾಗಿ 2024/25 ರ ಸದಸ್ಯತ್ವ ಅಭಿಯಾನ ಜುಲೈ 1ರಿಂದ ಜುಲೈ 31 ರ ವರೆಗೆ ನಡೆಸಲು ತೀರ್ಮಾನಿಸಿದ್ದು, ಇದರ ಅಧಿಕೃತ ಪೋಸ್ಟರ್ ಈ ಪ್ರೆಸ್ ಮೀಟ್ ಮುಖಾಂತರ ಬಿಡುಗಡೆಯನ್ನು  ಪತ್ರಿಕಾಗೋಷ್ಠಿಯ ಅಧ್ಯಕ್ಷತೆ ವಹಿಸಿದ ಶಬೀರ್ ಬ್ರಿಗೇಡ್-ಅಧ್ಯಕ್ಷರು ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು ಮತ್ತು ಉಪಸ್ಥಿತರಿದ್ದ
ಪ್ರಧಾನ ಕಾರ್ಯದರ್ಶಿ ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು-ಸಲೀಂ ಸಿ.ಎಂ, ಮತ್ತು ಸಂಶುದ್ದೀನ್ ಕುಕ್ಕಾಜೆ- ಉಪಾಧ್ಯಕ್ಷರುಗಳು, ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು, ಇರ್ಷಾದ್ ಬಜಾಲ್ ಮತ್ತು ಬಶೀರ್ಅಡ್ಯನಡ್ಕ -ಕಾರ್ಯದರ್ಶಿಗಳು,ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು ಮಾಡಿದರು.

City Today News 9341997936