“GO BACK SUDHAKER”  ಮಾಧ್ಯಮದ ಮುಖಾಂತರ ಡಾ| ಕೆ. ಸುಧಾಕರ್‌ಗೆ ತಿಳಿಸುತ್ತಿದ್ದೇವೆ ಎಂದು ಡಾ|| ಮು.ಕೃಷ್ಣಮೂರ್ತಿ, ಅಧ್ಯಕ್ಷರು ಸಂಘದ ಪರವಾಗಿ ತಿಳಿಸಿದರು.

ಕರ್ನಾಟಕ ರಾಜ್ಯದಲ್ಲಿ ತಿಗಳ (ವಹಿಕುಲ) ಜನಾಂಗವು ಸುಮಾರು 30 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ವಾಸವಾಗಿರುತ್ತಾರೆ. ಈ ಜನಾಂಗವು ಪ್ರತೀವರ್ಷ ಸುಮಾರು 180 ಸ್ಥಳಗಳಲ್ಲಿ ಕರಗ ಮಹೋತ್ಸವವನ್ನು ಆಚರಿಸುತ್ತಾ ಹಿಂದುತ್ವವನ್ನು ಕರ್ನಾಟಕ ರಾಜ್ಯದಲ್ಲಿ ಬೆಳೆಸಿ ಉಳಿಸಿಕೊಂಡಿರುತ್ತಾರೆ.

2023 ರ ಚುನಾವಣೆಯಲ್ಲಿ ಬಿ.ಜೆ.ಪಿ ಪಕ್ಷದ ಹಿರಿಯ ಮುಖಂಡರುಗಳ ಆದೇಶ ಮತ್ತು ಆಶೀರ್ವಾದದ ಮೇರೆಗೆ ಶ್ರೀ ಹೂಡಿ ವಿಜಯ್‌ ಕುಮಾ‌ರ್ ರವರನ್ನು ಮಾಲೂರು ಕ್ಷೇತ್ರಕ್ಕೆ ಎಮ್.ಎಲ್.ಎ ಉಮೇದುದಾರರಾಗಿ ಸ್ಪರ್ದಿಸಲು ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಸುಮಾರು 4 ವರ್ಷಗಳ ಕಾಲ ಹೂಡಿ ವಿಜಯ್ ಕುಮಾರ್ ರವರು ಮಾಲೂರು ಕ್ಷೇತ್ರದಲ್ಲಿ ಬಿ.ಜೆ.ಪಿ ಅಭ್ಯರ್ಥಿಯಾಗಿ ಬಿಂಬಿಸಿ ಕೆಲಸ ಮಾಡಿರುತ್ತಾರೆ.

ಆದರೆ ಚಿಕ್ಕಬಳ್ಳಾಪುರದ ಹಾಲಿ ಬಿ.ಜೆ.ಪಿ, ಎಮ್.ಪಿ ಅಭ್ಯರ್ಥಿಯಾದ ಡಾ|| ಕೆ. ಸುಧಾಕರ್ ರವರು ಹೂಡಿ ವಿಜಯ್ ಕುಮಾರ್ ರವರಿಗೆ ನೀಡಬೇಕಾಗಿದ್ದ ಎಮ್.ಎಲ್.ಎ ಅಭ್ಯರ್ಥಿಯ ಸ್ಥಾನವನ್ನು ಮಂಜುನಾಥ್ ಗೌಡ ಎಂಬುವವರಿಗೆ ಕೊಡಿಸುವುದರ ಮೂಲಕ ತಿಗಳ (ವಕುಲ) ಜನಾಂಗಕ್ಕೆ ದ್ರೋಹ ಮಾಡಿರುತ್ತಾರೆ. ತಿಗಳ (ವಗ್ನಿಕುಲ) ಜನಾಂಗಕ್ಕೆ ದ್ರೋಹವೆಸಗಿದ ಡಾ|| ಕೆ. ಸುಧಾಕರ್ ರವರ ವರ್ತನೆಯನ್ನು ಈ ಜನಾಂಗ ಖಂಡಿಸುವುದರ ಜೊತೆಗೆ ಅವರನ್ನು ಜನಾಂಗವು ಬೆಂಬಲಿಸುವುದಿಲ್ಲವೆಂದು ಈ ಮೂಲಕ ಘೋಷಿಸಿರುತ್ತೇವೆ.

2013 ರಿಂದ 2018 ರ ವರೆಗೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ರವರು ಜನಾಂಗವನ್ನು ಗುರುತಿಸಿ ಜನಾಂಗದ ಇಬ್ಬರಿಗೆ ನಿಗಮ ಮಂಡಳಿಯ ಅಧ್ಯಕ್ಷರಾಗಿ ಹಾಗೂ ಒಬ್ಬರಿಗೆ ಎಮ್.ಎಲ್.ಸಿ ಯಾಗಿ ನೇಮಿಸಿ, ಕರ್ನಾಟಕ ರಾಜ್ಯದಲ್ಲಿ ನಡೆಯುವ ಎಲ್ಲಾ ಕರಗ ಮಹೋತ್ಸವಗಳಿಗೆ 2 ಲಕ್ಷ ರೂ ಅನುದಾನವನ್ನು ನೀಡಿರುತ್ತಾರೆ ಆದರೆ ಬಿ.ಜೆ.ಪಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ಡಾ|| ಕೆ. ಸುಧಾಕರ್ ರವರಂತಹ ನಾಯಕರ ಕುಮ್ಮಕ್ಕಿನಿಂದ ಜನಾಂಗಕ್ಕೆ ಅನ್ಯಾಯ ಮಾಡಿರುತ್ತಾರೆ.

ಇಂದು ನಾವು ಕರ್ನಾಟಕ ರಾಜ್ಯದ ತಿಗಳ (ವಹಿಕುಲ) ಜನಾಂಗವು ಡಾ| ಕೆ. ಸುಧಾಕರ್ ರವರ ವರ್ತನೆಯನ್ನು ಖಂಡಿಸುವುದರ ಜೊತೆಗೆ ಅವರನ್ನು ಈ ಚುನಾವಣೆಯಲ್ಲಿ ಬೆಂಬಲಿಸುವುದಿಲ್ಲವೆಂದು ಮಾಧ್ಯಮದ ಮಿತ್ರರ ಮೂಲಕ “GO BACK SUDHAKER”  ಮಾಧ್ಯಮದ ಮುಖಾಂತರ ಡಾ| ಕೆ. ಸುಧಾಕರ್‌ಗೆ ತಿಳಿಸುತ್ತಿದ್ದೇವೆ ಎಂದು ಡಾ|| ಮು.ಕೃಷ್ಣಮೂರ್ತಿ, ಅಧ್ಯಕ್ಷರು ಸಂಘದ ಪರವಾಗಿ ತಿಳಿಸಿದರು.

City Today News 9341997936

Ujjivan Small Finance Bank ties-up with Veefin Solutions Ltd to offer better supply chain finance offerings to MSMEs

Ujjivan Small Finance Bank ties-up with Veefin Solutions Ltd to offer better supply chain finance offerings to MSMEs

Bengaluru, 2024: Ujjivan Small Finance Bank (Ujjivan SFB) enters into a strategic partnership with Veefin Solutions, a leading Supply Chain Finance (SCF) solutions provider, to offer robust supply chain finance offerings, to meet the working capital needs for MSMEs.

Through this partnership, Ujjivan SFB will leverage Veefin’s platform that offers end-to-end solutions on supply chain financing. This includes supplier and vendor onboarding, credit underwriting through Loan Origination Solution (LOS), transaction management via Loan Management Solution (LMS), and collections handled through a Delinquency Management solution. These components will be further complemented by comprehensive analysis facilitated by Veefin’s Reporting & Business Intelligence solution.

A 2019 report on the MSME Sector by an RBI Committee estimated the overall Credit gap in the sector at Rs 20-25 lakh crore##.  According to another industry report, out of over 64 million MSMEs in India, only 14 per cent have access to credit^^. The number of MSMEs in the country is expected to grow from 6.3 crore to approximately 7.5 crore in the coming years, growing at a projected CAGR of 2.5 %**.

Recognizing the pivotal role of technology to address this Credit gap, the partnership with Veefin aligns with Ujjivan SFB’s objective of extending financial solutions to the MSMEs across the nation. This initiative will facilitate Ujjivan SFB to provide working capital loans to MSMEs via supply chain financing, effectively addressing the gaps left by traditional model.

Mr. Ittira Davis, MD & CEO at Ujjivan Small Finance Bank, said, “We are happy to partner with Veefin Solutions, which will enable us to further enhance the credit accessibility needs of the MSMEs, thereby strengthening our digital MSME offerings. This association will help us build on the operational efficiency, thereby empowering more MSMEs to charter their growth path.”

Mr. Raja Debnath, Managing Director of Veefin Solutions Ltd, said, “We are delighted to welcome Ujjivan Small Finance Bank to our ever-growing clientele who have embarked on their SCF journey with Veefin. Financial institutions like Ujjivan SFB play a pivotal role in expanding the SCF ecosystem, reaching out to unserved and underserved customers nationwide. Together, we are poised not only to broaden the SCF landscape but also to drive inclusive growth, reaching even the most marginalized segments of our economy.”

City Today News 9341997936

ಬೆಂಗಳೂರಿನ ನಯನ ಸಭಾಂಗಣ(ರವೀಂದ್ರ ಕಲಾಕ್ಷೇತ್ರ ಆವರಣ)  ದಲ್ಲಿ ನಡೆದ ” ಪ್ರತಿಭೋತ್ಸವ ಪ್ರತಿಭೆ ನಿಮ್ಮದು ಪ್ರೋತ್ಸಾಹ ನಮ್ಮದು “”ಭರತನಾಟ್ಯ ಪ್ರತಿಭೆ”

*ಶ್ರೀ ರಘುವೀರ್  ಕಲಾ ಸೇವಾ ಟ್ರಸ್ಟ್* (ರಿ) ಬೆಂಗಳೂರು ಇವರ ಆಯೋಜನೆಯಲ್ಲಿ ಇತ್ತೀಚಿಗೆ ಬೆಂಗಳೂರಿನ ನಯನ ಸಭಾಂಗಣ
(ರವೀಂದ್ರ ಕಲಾಕ್ಷೇತ್ರ ಆವರಣ)  ದಲ್ಲಿ ನಡೆದ ” ಪ್ರತಿಭೋತ್ಸವ ಪ್ರತಿಭೆ ನಿಮ್ಮದು ಪ್ರೋತ್ಸಾಹ ನಮ್ಮದು “

“ಭರತನಾಟ್ಯ ಪ್ರತಿಭೆ”

ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಜ್ಯದ ಹಲವಾರು ಊರುಗಳಿಂದ ಆಗಮಿಸಿದ ಯುವ ಪ್ರತಿಭೆಗಳು
ತಮ್ಮ ಪ್ರತಿಭೆ ಪ್ರದರ್ಶನ ಮಾಡಿದರು

ಮುಖ್ಯ ಅತಿಥಿಗಳಾಗಿ
ಕನ್ನಡ ಚಿತ್ರೋದ್ಯಮದ
ಹಿರಿಯ ನಿರ್ದೇಶಕರಾದ 
ಶ್ರೀ ಬಿ. ರಾಮಮೂರ್ತಿ
ರಂಗಕರ್ಮಿ
ಶ್ರೀ ನೀಲಕಂಠ  ಅಡಿಗ
  ಶ್ರೀ ಸಚಿನ್ ಸುವರ್ಣ
(ಎನ್ಕೌಂಟರ್ ದಯನಾಯಕ ಚಿತ್ರದ ನಾಯಕ ನಟ)
ವಾಗ್ದೇವಿ ನೃತ್ಯಾಲಯದ
ಮುಖ್ಯಸ್ಥೆ
ಶ್ರೀಮತಿ  ದೀಪ್ತಿ ಆರ್. ಭಟ್
ಇನ್ನೂ ಹಲವು ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿ
ಸಾಂಸ್ಕೃತಿಕ ಕಾರ್ಯಕ್ರಮದ ಸಂಪೂರ್ಣ ಆನಂದ ಅನುಭವಿಸಿದರು

ಈಶ್ವರಿ ನೃತ್ಯಾಲಯ,
ಹೊರಮಾವು  ಬೆಂಗಳೂರು,
ಮುಖ್ಯಸ್ಥೆ;  ಪ್ರೀತಿಕಾ  ರಾವ್

ವಾಗ್ದೇವಿ ನೃತ್ಯಾಲಯ,
ಕೆ ಆರ್ ಪುರಂ ಬೆಂಗಳೂರು.
ಮುಖ್ಯಸ್ಥೆ;
ದೀಪ್ತಿ ಆರ್. ಭಟ್

ಕ್ರಿಯೇಟಿವ್ ಇಂಡಿಯಾ ಒಲಂಪಿಯಾಡ್,
ಮುಖ್ಯಸ್ಥ;  ನಾಗರಾಜ್ ಬಿ. ಜಿ.ಹಿರಣ್ಮಯಿ ಕಲಾ ಕುಟೀರ,
ಮುಖ್ಯಸ್ಥ; ಮಹೇಂದ್ರ

ಶಾಂತಮ್ಮ ಶಂಕರ್ ಟ್ರಸ್ಟ್,
(ಸ್ಮಾರ್ಟ್ ಕಿಡ್ಸ್)
ಚಿಕ್ಕ ಗೊಲ್ಲರಹಟ್ಟಿ ಬೆಂಗಳೂರು,

ಊರ್ಧ್ವ ಸ್ಕೂಲ್ ಆಫ್ ಕೂಚಿಪುಡಿ ಅಂಡ್ ಭಾರತನಾಟ್ಯಮ್,
ಮಾಲೂರು ತಾಲೂಕ 
ಕೋಲಾರ ಜಿಲ್ಲೆ
ಮುಖ್ಯಸ್ಥೆ;  ಭಾವನಾ ಆನಂದ್

ಕಲಾ ಭೈರವಿ ಡ್ಯಾನ್ಸ್ ಅಕಾಡೆಮಿ, ನಾಟ್ಯ ಮಯೂರಿ ನೃತ್ಯ ಶಾಲೆ ವಿರಾಜಪೇಟೆ
ಮುಖ್ಯಸ್ಥೆ; ಪ್ರೇಮಾಂಜಲಿ

ಶಿಡ್ಲಘಟ್ಟ ದಿಂದ ಬಂದ
ಮುನಿ￰ರಾಜು
ಮುಖೇಶ್
ಶ್ರೀನಿವಾಸ್
ಡಾ ವಿ. ವೆಂಕಟೇಶ್
ಹಾಡುಗಳನ್ನು ಹಾಡಿದರು 

ಹಾಗು
ಲಿಖಿತಾ
ಸಹನಾ ಪ್ರತಿಭೆ ಮೆರೆದರು

ಹೀಗೆ ಹಲವು ಸಾಂಸ್ಕೃತಿಕ ಕಲಿಕಾ ಕೇಂದ್ರದ ವಿದ್ಯಾರ್ಥಿ ವಿದ್ಯಾರ್ಥಿನಿಯರು 
ಭಾಗವಹಿಸಿ ಅತಿಥಿಗಳಿಗೆ ಸಭಿಕರಿಗೆ  ಮನರಂಜಿಸಿದಕ್ಲದೆ 
ತಾವುಗಳು ಕೂಡಾ ಖುಷಿಯನ್ನು  ಅನುಭವಿಸಿದರು.

ಭರತನಾಟ್ಯ ಪ್ರತಿಭೆ ವಿಶೇಷ ಕಾರ್ಯಕ್ರಮ ಅಂತಾ ಆಯೋಜಿಸಿದ್ದರೂ  ಕೂಡಾ
ವಿವಿಧ ಸಾಸಂಕೃತಿಕ  ಪ್ರಾಕಾರಗಳಿಗೆ ಬೇಡಿಕೆ  ಹೆಚ್ಚಿದ್ದರಿಂದ ಭರತನಾಟ್ಯದ ಜೊತೆ ಗಾಯನ ಏಕಪಾತ್ರಾಭಿನಯ
ಚಲನಚಿತ್ರ ಗೀತೆ ಹಾಡುಗಾರಿಕೆ
ಚಲನಚಿತ್ರ ಗೀತೆಗೆ ನೃತ್ಯ
ಹೀಗೆ ಹಲವರಿಗೆ ಅವಕಾಶ ಮಾಡಿಕೊಡಲಾಯಿತು.

ಹೆಚ್ಚಿನ ಪುಟ್ಟ ಮಕ್ಕಳು
ಪವರ್ ಸ್ಟಾರ್ ಪುನೀತ್  ರಾಜಕುಮಾರ್ ರವರ ಹಾಡಿಗೆ ನೃತ್ಯ ಮಾಡಿದ್ದು ವಿಶೇಷವಾಗಿತ್ತು,ಪ್ರತಿಭಾವಂತರು
ಅತಿಥಿಗಳಿಂದ ಪ್ರಮಾಣಪತ್ರ
ನೆನಪಿನಕಾಣಿಕೆ ಪಡೆದು
ಅವರೊಂದಿಗೆ ಫೋಟೋ
/ ಸೆಲ್ಫಿ ಪಡೆದು ಖುಷಿಪಟ್ಟರು .
 
ಮುಖ್ಯ ಅತಿಥಿಗಳು
ಯಾವುದೇ ಅವಸರವಿಲ್ಲದೆ  ಕಾರ್ಯಕ್ರಮದ ಕೊನೆವರೆಗೂ ಇದ್ದಿದ್ದು  ವಿಶೇಷ ವಾಗಿತ್ತು, ಅತಿಥಿಗಳಿಗೆ ಸನ್ಮಾನಿಸಿ ಬಿಳ್ಕೊಡುವಷ್ಟರಲ್ಲಿ  ಸಮಯ ರಾತ್ರಿ 8 ಗಂಟೆ ಯಾಗಿತ್ತು.

ಹ್ಯಾಟ್ರಿಕ್ ಸೂರ್ಯ ಪಿ. ಎನ್,
ಇಡೀ ಕಾರ್ಯಕ್ರಮ ಲೀಲಾಜಾಲವಾಗಿ  ನಿರೂಪಿಸಿ  ಎಲ್ಲರ ಮನಗೆದ್ದರು

*ಶ್ರೀ ರಘುವೀರ್ ಕಲಾ ಸೇವಾ ಟ್ರಸ್ಟ್* (ರಿ) ಬೆಂಗಳೂರು
ಬಗ್ಗೆ
ಯಾವುದೇ ರೀತಿಯ ಹೆಚ್ಚಿನ ಮಾಹಿತಿಗಾಗಿ
ಟ್ರಸ್ಟ್ ನ
ಮ್ಯಾನೇಜಿಂಗ್ ಟ್ರಸ್ಟೀ
ಹ್ಯಾಟ್ರಿಕ್ ಸೂರ್ಯ ಪಿ. ಎನ್, ಇವರನ್ನು ಸಂಪರ್ಕಿಸಿ
9036004378.

City Today News 9341997936

ಪ್ರಾತ: ಸ್ಮರಣೀಯ ಪರಮಪೂಜ್ಯ108 ಶ್ರೀ ಶ್ರೀ ಸುಯತಿಂದ್ರ ತೀರ್ಥ ಶ್ರೀಪಾದರ “ಮಹಾಸಮರಾಧನೆ”

ಬೆಂಗಳೂರಿನ ಜಯನಗರದ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಪರಮಪೂಜ್ಯ ಶ್ರೀ 108 ಶ್ರೀ  ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್.ಕೆ. ವಾದಿಂದ್ರಾಚಾರ್ಯರ ಮತ್ತು ಧರ್ಮಾಧಿಕಾರಿಗಳಾದ ಜಿ. ಕೆ. ಆಚಾರ್ಯರ ನೇತೃತ್ವದಲ್ಲಿ ಪ್ರಾತ:ಸ್ಮರಣೀಯರಾದ ಪರಮಪೂಜ್ಯ 108 ಶ್ರೀಸುಯತಿಂದ್ರತೀರ್ಥ ಶ್ರೀಪಾದಂಗಳವರ “ಮಹಾಸಮಾರಾಧನೆ”ಯನ್ನು ವಿಶೇಷ ಉತ್ಸವ, ಪ್ರವಚನ, ಅಲಂಕಾರದೊಂದಿಗೆ ನೆರವೇರಿತು ಎಂದು ಶ್ರೀ ನಂದಕಿಶೋರಾಚಾರ್ಯರು ತಿಳಿಸಿದರು. ಈ ಸಂದರ್ಭದಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮವೂ ನೆರವೇರಿತು.

City Today News 9341997936

ಸಾರ್ವಜನಿಕರಿಗೆ ವಂಚನೆ ಮಾಡಿರುವ 840 ಕಲೀಲ್ ಹಾಗೂ ತಮಿಳುನಾಡಿನ 420 ಜಯರಾಜ್ ಇವರ ಮೇಲೆ 1400 ಪ್ರಕರಣಗಳು ದಾಖಲಾಗಿದ್ದು 22000 ಜನರಿಗೆ ವಂಚನೆ ಮಾಡಿರುವ ಈ 420 ಗಳನ್ನು ಕೂಡಲೇ ಬಂಧಿಸಿ

ಕರ್ನಾಟಕ ರಾಜ್ಯದ ಭ್ರಷ್ಟಾಚಾರಗಳ ರೂವಾರಿಯಾದ 420 ಅಶ್ವಿನ್‌ರಾವ್ ಮತ್ತು ಶಿವಾಜಿನಗರ ಹಾಗೂ ಆಂಧ್ರಪ್ರದೇಶದ ನಲ್ಲೂರು ಗ್ರಾಮದ ಸೈಲೆಂಟ್ ಕಿಲ್ಲರ್ ಹಾಗೂ ಕರೀಂಬಾಲ್ ತೆಲಗಿಯ ಶಿಷ್ಯನೆಂದು ಹೇಳಿಕೊಂಡು ಸಾರ್ವಜನಿಕರಿಗೆ ವಂಚನೆ ಮಾಡಿರುವ 840 ಕಲೀಲ್ ಹಾಗೂ ತಮಿಳುನಾಡಿನ 420 ಜಯರಾಜ್ ಇವರ ಮೇಲೆ 1400 ಪ್ರಕರಣಗಳು ದಾಖಲಾಗಿದ್ದು 22000 ಜನರಿಗೆ ವಂಚನೆ ಮಾಡಿರುವ ಈ 420 ಗಳನ್ನು ಕೂಡಲೇ ಬಂಧಿಸಿ ನೊಂದ ಅಮಾಯಕರಿಗೆ ನ್ಯಾಯ ಕೊಡಲು ಕೋರಿ ಕರೆದಿರುವ ಪತ್ರಿಕಾಗೋಷ್ಠಿ

ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯದ ಭ್ರಷ್ಟಾಚಾರಗಳ ರೂವಾರಿಯಾದ 420 ಅಶ್ವಿನ್‌ರಾವ್ ಮತ್ತು ಶಿವಾಜಿನಗರ ಹಾಗೂ ಆಂಧ್ರಪ್ರದೇಶದ ನಲ್ಲೂರು ಗ್ರಾಮದ ಸೈಲೆಂಟ್ ಕಿಲ್ಲರ್ ಹಾಗೂ ಕರೀಂಲಾಲ್ ತೆಲಗಿಯ ಶಿಷ್ಯನೆಂದು ಹೇಳಿಕೊಂಡು ಸಾರ್ವಜನಿಕರಿಗೆ ವಂಚನೆ ಮಾಡಿರುವ 840 ಕಲೀಲ್ ಹಾಗೂ ತಮಿಳುನಾಡಿನ 420 ಜಯರಾಜ್ ಇವರ ಮೇಲೆ 1400 ಪ್ರಕರಣಗಳು ದಾಖಲಾಗಿದ್ದು 22000 ಜನರಿಗೆ ವಂಚನೆ ಮಾಡಿರುವ ಈ 420 ಗಳನ್ನು ಕೂಡಲೇ ಬಂಧಿಸಿ ನೊಂದ ಆಮಾಯಕರಿಗೆ ನ್ಯಾಯ ಕೊಡಲು ಕೋರಿ ಪತ್ರಿಕಾಗೋಷ್ಠಿಯನ್ನು ಕರೆದಿರುತ್ತೇವೆ. ಕಾರಣವೇನೆಂದರೆ, ಭಾರತ ದೇಶಕ್ಕೆ ಸ್ವತಂತ್ರ ಬಂದು 75 ವರ್ಷಗಳು ಕಳೆಯುತ್ತಾ ಬಂದರೂ, ಸಂವಿಧಾನ ಅರ್ಪಣೆಯಾಗಿ 75 ವರ್ಷಗಳು ಕಳೆಯುತ್ತಾ ಬಂದರೂ ಸಹ ಈ ದೇಶದಲ್ಲಿ ಭ್ರಷ್ಟಾಚಾರ ಮಾತ್ರ ನಿಲ್ಲಲೇ ಇಲ್ಲ. ಕಾರಣವೇನೆಂದರೆ ಕಾನೂನನ್ನೇ ಸರಿಯಾಗಿ ಪಾಲಿಸದಂತಹ ಅಧಿಕಾರಿಗಳಿಂದ ಸಾರ್ವಜನಿಕರಿಗೆ ತುಂಬಾ ನೋವಾಗಿರುತ್ತದೆ. ಹಾಗೆಯೇ ಅಧಿಕಾರಿಗಳು ಕಾನೂನನ್ನು ಸರಿಯಾಗಿ ಹತೋಟಿಗೆ ತೆಗೆದುಕೊಳ್ಳದೇ ಇರುವುದೇ ಆಮಾಯಕರಿಗೆ ಆಗುತ್ತಿರುವ ಅನಾನುಕೂಲ, ಉದಾಹರಣೆಗೆ ಅಶ್ವಿನ್‌ರಾವ್ ರವರ ಮೇಲೆ ನೊಂದ ಸಾರ್ವಜನಿಕರು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ 2021-22 ನೇ ಸಾಲಿನಲ್ಲಿ ದೂರು ನೀಡಿದರೂ ಸಹ ದೂರನ್ನು ತೆಗೆದುಕೊಳ್ಳದೆ ಸಾರ್ವಜನಿಕರಿಗೆ ಅನಾನುಕೂಲ ಮಾಡಿರುವುದೇ ದುರಾದೃಷ್ಟಕರವಾಗಿದೆ ಅತ್ತಿರುತ್ತದೆ. ಪಕ್ಷದಿಂದ್ ಅಶ್ವಿನ್ ರಾವ್ 22000 ರ ಮತ್ತು ಸಾರ್ವಜನಿರು ಇದನ್ನೇ ಮತ್ತೆ ಮುಂದುವರೆದ ಹಾದಿಯಲ್ಲಿ ಅಶ್ವಿನ್‌ ರಾವ್ ಮತ್ತು ಜೈರಾಜ್, ಕಲೀಲ್ ಈ ಮೂರೂ ಜನ ಸೇರಿಕೊಂಡು ಮೊದಲನೇ ಬಾರಿಗೆ ಆಂಧ್ರದ ನೆಲ್ಲೂರು ಜಿಲ್ಲೆಗೆ ಭೇಟಿ ನೀಡಿ ಸಾರ್ವಜನಿಕರಿಗೆ ಊಹಾಪೋಹಗಳನ್ನು ಹಬ್ಬಿಸಿ ಸಾರ್ವಜನಿಕ ಸಭೆಗಳನ್ನು ಮಾಡಿ, ಸಾರ್ವಜನಿಕರಿಗೆ ಸುಳ್ಳು ಆಶ್ವಾಸನೆಗಳ ಮೂಲಕ ಸಾರ್ವಜನಿಕರಿ ಮುಂದೆಯೇ ನೀವು 2 ಲಕ್ಷ ಮೊದಲನೇ ಕಂತಿನಲ್ಲಿ ನಮಗೆ ನೀಡಿದರೆ ನಿಮಗೆ 2 ತಿಂಗಳಲ್ಲಿ 20 ಲಕ್ಷ ಕೊಡುತ್ತೇವೆ. ನೀವು 20 ಲಕ್ಷ ನೀಡಿದರೆ 2 ತಿಂಗಳಲ್ಲಿ 1 ಕೋಟಿ ನೀಡುತ್ತೇವೆ. ಎಂಬ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಇದರಲ್ಲಿ ಕೆಲವು ಸಾರ್ವಜನಿರನ್ನು ಪರಿಚಯ ಮಾಡಿಕೊಂಡು ಜನ ನಂಬುವ ಹಾಗೆ ಜನರಿಂದ ಹಣವನ್ನು ತೆಗೆದುಕೊಂಡು ಇವರು ತೆಗೆದುಕೊಂಡ ಹಣದಲ್ಲಿ ಒಬ್ಬ ಇಬ್ಬರಿಗೆ ಮಾತ್ರ ಹಣವನ್ನು ನೀಡಿ ಹಣ ಪಡೆದುಕೊಂಡು ವ್ಯಕ್ತಿಗಳಿಂದ ಸಾರ್ವಜನಿಕರಿಗೆ ಸುಳ್ಳು ಆಶ್ವಾಸನಗಳನ್ನು ಬಹಿರಂಗಪಡಿಸಿ ಜನರು ನಂಬುವ ಹಾಗೆ ಅವರಿ ಮನೆಗಳಿಗೂ ಸಹ ಭೇಟಿ ಮಾಡಿ ಸುಆರು 500 ಕೋಟಿಗಿಂತ ಹೆಚ್ಚಾಗಿ ನಲ್ಲೂರು ಜಿಲ್ಲೆಯಲ್ಲೇ ಮೊದಲನೇ ಬಾರಿಗೆ ವಂಚನೆ ಮಾಡಿ ಎರಡನೇ ಬಾರಿ ಪಾಂಡಿಚೇರಿಗೆ ಜಂಪ್ ಮಾಡಿ ನಂತರ ತಮಿಳುನಾಡಿಗೆ ಬಂದು ಅನಂತರ ಗೋವಾಕ್ಕೆ ಜಿಗಿದು ಮತ್ತೆ ಕರ್ನಾಟಕಕ್ಕೆ ಬಂದು ಯಥಾಸ್ಥಿತಿಯನ್ನು ಮುಂದುವರೆಸಿ ಸಾರ್ವಜನಿಕರಿಗೆ ಸುಮಾರು ತಿಂಗಳು ಕಾಣದೆ. ತಪ್ಪಿಸಿಕೊಂಡು ಓಡಾಡಿಕೊಂಡು ಇರುವಂತಹ ಸಂದರ್ಭದಲ್ಲಿ ದಿನಾಂಕ 6/3/2024 ರಂದು ಬಾಣಸವಾಡಿ ಸಮೀಪದ ಅವರ ಮನೆಯ ಬಳಿಯಲ್ಲಿಯೇ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ನಂತರ ಅವನನ್ನು ಪೊಲೀಸರಿಗೆ ಒಪ್ಪಿಸಲೆಂದು ನೊಂದ ಅಮಾಯಕರು ಅವನನ್ನು ಹಿಡಿದುಕೊಂಡ ಕೂಡಲೇ ಅವನೇ ಸಾರ್ವಜನಿಕರಿಗೆ ಸುಮಾರು 40 ಕೋಟಿಗಳಷ್ಟು ಬೆಲೆ ಬಾಳುವ ನಕಲಿ ಚೆಕ್‌ಗಳನ್ನು ನೀಡಿ ನಂತರ ಅವನೇ ಸಾರ್ವಜನಿಕರನ್ನು ಯಾಮಾರಿಸಿ ಕಂಟ್ರೋಲ್ ರೂಮ್‌ ಗೆ ಕರೆ ಮಾಡಿ ನಮ್ಮನ್ನು ಕಿಡ್ಯಾಪ್ ಮಾಡುತ್ತಿದ್ದಾರೆ. ಯಾರೋ ಅಪರಿಚಿತರು ಎಂದು ಹೇಳಿದ ಮೇರೆಗೆ ಬಾಣಸವಾಡಿ ಸಮೀಪದ ಕುಳ್ಳಪ್ಪ ಸರ್ಕಲ್‌ನಲ್ಲಿ ಚರ್ಚೆ ಮಾಡುತ್ತಿದ್ದ ಆಶ್ವಿನ್‌ ರಾವ್ ಹಾಗೂ ನೊಂದ ಆಮಾಯಕರನ್ನು ಪೊಲೀಸರು ಕರೆದುಕೊಂಡು ಬಂದು ಠಾಣೆಯಲ್ಲಿಯೇ ಕೂಡಿ ಹಾಕಿ, ಅಮಾಯಕರ ಮೇಲೆ ಕ್ರೈಂ ನಂ. 166/2024 ರಂತೆ ಸುಮಾರು 7 ರಿಂದ 15 ಮಂದಿ ಮೇಲೆ ದೂರನ್ನು ದಾಖಲಿಸಿದ ಮೇಲೆ ಇದನ್ನು ಪರಿಶೀಲಿಸಿದ ನಂತರ ಅಶ್ವಿನ್‌ ರಾವ್ ನೀಡಿರುವ ಸುಳ್ಳು ಹೇಳಿಕೆಯಿಂದ ದೂರು ದಾಖಲಾಗಿರುವುದು ಕಂಡು ಬಂದ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳನ್ನು ಬೇಟಿ ಮಾಡಿ ನೊಂದ ಅಮಾಯಕರನ್ನು ಠಾಣೆಯಿಂದ ಬಿಡಿಸಿ ಪುನಃ ಠಾಣಾಧಿಕಾರಿಗಳು ಕರೆದ ನಂತರ ಠಾಣೆಗೆ ಬರುವ ಹಾಗೆ ಸಹಿಗಳನ್ನು ಸುಮಾರು 7 ಮಂದಿ ಕಡೆಯಿಂದ ಬರೆಯಿಸಿಕೊಂಡು ದಿನಾಂಕ 7/3/2024 ರಂದು ನೊಂದ ಅಮಾಯಕರನ್ನು ಮನೆಗಳಿಗೆ ಕಳುಹಿಸಿರುತ್ತಾರೆ.

ನಂತರ ಠಾಣಾಧಿಕಾರಿಗಳು ನೊಂದ ಅಮಾಯಕರುಗಳ ಕರೆ ಮಾಡಿ ನೀವು ಠಾಣೆಗೆ ಬನ್ನಿ ಮತ್ತು ನೀವು ತೆಗೆದುಕೊಂಡಿರುವ ಚೆಕ್‌ಗಳನ್ನು ತೆಗೆದುಕೊಂಡು ಬನ್ನಿ ಎಂದು ಸುಮಾರು ಬಾರಿ ಎಲ್ಲಾ ಅಮಾಯಕರಿಗೂ ಠಾಣೆಯಿಂದ ಕರೆಗಳು ಬಂದ ಕೂಡಲೇ ನೊಂದ ಆಮಾಯಕರು ಕರೆಗಳನ್ನು ಸ್ವೀಕರಿಸದೇ ಇದ್ದ ಹಿನ್ನಲೆಯಲ್ಲಿ ಕೆಲವು ದಲಿತ ಮುಖಂಡರಿಗೂ ಕರೆಗಳನ್ನು ಮಾಡಿ ಮತ್ತು ಪ್ರಭುರವರ ಮನೆಗೆ ಪೊಲೀಸ್ ಅಧಿಕಾರಿಗಳನ್ನು ಕರೆಯಿಸಿ ಠಾಣೆಗೆ ಕರೆದುಕೊಂಡು ಬರಲು ಆದೇಶ ನೀಡಿದ ಮೇರೆಗೆ ಆದೇಶವನ್ನು ಪಾಲಿಸಲು ಶ್ರಮಪಟ್ಟು ನೊಂದ ಅಮಾಯಕರನ್ನು ಪ್ರಭುರವರು ನೆಲ್ಲೂರಿಗೆ ಹೋಗಿ ಕರೆತರಲು ಹೋಗುತ್ತಿದ್ದ ಸಮಯದಲ್ಲಿ ರಸ್ತೆಯಲ್ಲಿ ಅಪಘಾತವಾಗಿ ಪ್ರಭುರವರ ಕಾಲು ಮುರಿದಿರುತ್ತದೆ. ಆಷ್ಟಾದರೂ ಠಾಣಾಧಿಕಾರಿಗಳು ಅವರನ್ನು ಬಿಡದೆ ಠಾಣೆಗೆ ಕರೆಯಿಸಿ ಅವರ ವಿಚಾರಣೆ ಮಾಡುವುದೇ ಸುಮಾರು 15 ದಿನಗಳಿಂದ ನಡೆಯುತ್ತಿರುತ್ತದೆ. ಇದರ ಮಧ್ಯದಲ್ಲಿ ನೊಂದಂತಹ ಸಾರ್ವಜನಿಕರ ಪರವಾಗಿ ಅಶ್ವಿನ್‌ರವರ ವಿರುದ್ಧ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೂ ಮತ್ತು ಗೃಹ ಸಚಿವರಿಗೂ ಮನವಿಗಳನ್ನು ಸಲ್ಲಿಸಿ ಸುಮಾರು ದಿನಗಳು ಕಳೆದರೂ ಇದುವರೆವಿಗೂ ನ್ಯಾಯ ಎಂಬುವುದು ದೊರೆಯದಿದ್ದುದರಿಂದ ಕೂಡಲೇ ಕ್ರಮ ಜರುಗಿಸಬೇಕು ಇಲ್ಲದ್ದಿದ್ದಲ್ಲಿ 17-05-2024 ರಂದು ಉಗ್ರ ಹೋರಾಟ ಮಾಡಲಾಗುವುದು ಎಂದು ಬಿ. ಆರ್. ಮುನಿರಾಜು, ಸಂಸ್ಥಾಪಕರು ಹಾಗೂ ರಾಷ್ಟ್ರೀಯ ಅಧ್ಯಕ್ಷರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

City Today News 9341997936