ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ 9 ನೇ ವರ್ಷದ ರಾಜ್ಯ ಮಟ್ಟದ ಭಜನಾ ಸ್ಪರ್ಧೆ

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ 9 ನೇ ವರ್ಷದ ರಾಜ್ಯ ಮಟ್ಟದ ಭಜನಾ ಸ್ಪರ್ಧೆ ಆಯೋಜಿಸಲಾಗಿದೆ-ಧರ್ಮದರ್ಶಿ ಶಾಮಾನಂದ ಪೂಜೇರಿ

ಜಗದ್ಗುರು ಶ್ರೀ ಸಿದ್ದಾರೂಢ ಮಹಾಸ್ವಾಮಿಗಳವರ ಜಯಂತ್ಯುತ್ಸವದ ಅಂಗವಾಗಿ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ದಿನಾಂಕ:- 10.04.2024 ರಿಂದ 15.04.2024 ರವರೆಗೆ ರಾಜ್ಯ ಮಟ್ಟದ ಒಂಭತ್ತನೇ ವರ್ಷದ ಭಜನಾ ಸ್ಪರ್ಧೆ ಏರ್ಪಡಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಭಜನಾ ತಂಡದವರು ದಿನಾಂಕ:10.04.2024 ರೊಳಗಾಗಿ ಶ್ರೀಮಠದ ಟ್ರಸ್ಟ್ ಕಮೀಟಿಯ ಕಾರ್ಯಾಲಯದಲ್ಲಿ ಹೆಸರು ನೋಂದಾಯಿಸಬೇಕೆಂದು ರಾಜ್ಯ ಮಟ್ಟದ ಭಜನಾ ಸ್ಪರ್ಧೆಯ ಅಧ್ಯಕ್ಷರು ಹಾಗೂ ಶ್ರೀಮಠದ ಧರ್ಮದರ್ಶಿಗಳಾದ ಶ್ರೀ ಶಾಮಾನಂದ ಪೂಜೇರಿ ಇವರು ತಿಳಿಸಿದರು. ಭಾಗವಹಿಸುವ ಭಜನಾ ಮೇಳದವರಿಗೆ ಶ್ರೀಮಠದಲ್ಲಿ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಮಾಡಲಾಗುವುದು. ಮತ್ತು ಒಂದು ಬದಿಯ ಬಸ್ಸು ಚಾರ್ಜನ್ನು ಪ್ರತಿ ತಂಡದ 6ಜನರಿಗೆ ನೀಡಲಾಗುವದು. ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಯೊಂದು ಭಜನಾ ತಂಡಕ್ಕೆ “ಸವಿನೆನಪಿನ ಕಾಣಿಕೆ” ಹಾಗೂ ಪ್ರತಿಯೊಂದು ತಂಡದ ಪ್ರತಿಯೊಬ್ಬ ಕಲಾವಿದರಿಗೂ “ಪ್ರಶಸ್ತಿ ಪತ್ರ” ನೀಡಲಾಗುವದು ಎಂದು ತಿಳಿಸಿದ್ದಾರೆ.ದಿನಾಂಕ:-10.04.2024 ರಂದು ಮುಂಜಾನೆ 10-30 ಕ್ಕೆ ಉದ್ಘಾಟನಾ ಸಮಾರಂಭ ಜರುಗುವುದು.

ಬಹುಮಾನಗಳ ವಿವರ:- ಪ್ರಥಮ : ರೂ.1,00,000/- ದ್ವಿತೀಯ: ರೂ.80,000/- ತೃತೀಯ: ರೂ. 70,000/- – ಸಮಾಧಾನಕರ: ರೂ.9,000/-* (ಹತ್ತು ತಂಡಗಳನ್ನು ಆಯ್ಕೆಮಾಡಿ, ಪ್ರತಿ ತಂಡಕ್ಕೆ ರೂ.9,000/- ನೀಡಲಾಗುವುದು.) * 16 ವರ್ಷದ ಒಳಗಿನ ಬಾಲಕ ಹಾಗೂ ಬಾಲಕಿಯರಿಗೆ ಪ್ರತಿಭಾ ಪುರಸ್ಕಾರ ರೂ. 10,000.00 (ಒಂದು ಬಾಲಕರ ತಂಡ ಮತ್ತು ಒಂದು ಬಾಲಕಿಯರ ತಂಡಕ್ಕೆ ಮಾತ್ರ) ಮಹಿಳಾ ಭಜನಾ ತಂಡಕ್ಕೆ ಪುರಸ್ಕಾರ ರೂ.10.000.00 (ಒಂದು ತಂಡಕ್ಕೆ ಮಾತ್ರ)

ವಯಕ್ತಿಕ ಬಹುಮಾನಗಳ ವಿವರ :- ಉತ್ತಮ ಹಾಡುಗಾರರಿಗೆ : 3,000/- (ಇಬ್ಬರಿಗೆ ಮಾತ್ರ) ಉತ್ತಮ ಹಾರ್ಮೋನಿಯಂ ವಾದಕರಿಗೆ : ರೂ.3,000/- (ಇಬ್ಬರಿಗೆ ಮಾತ್ರ) ಉತ್ತಮ ತಬಲಾ ವಾದಕರಿಗೆ : ರೂ.3,000/- (ಇಬ್ಬರಿಗೆ ಮಾತ್ರ) ಉತ್ತಮ ತಾಳ ವಾದಕರಿಗೆ : ರೂ.3,000/- (ಇಬ್ಬರಿಗೆ ಮಾತ್ರ) ಉತ್ತಮ ಧಮಡಿ ವಾದಕರಿಗೆ ರೂ.3,000/- (ಇಬ್ಬರಿಗೆ ಮಾತ್ರ)

ಭಜನಾ ಸ್ಪರ್ಧೆಯ ನಿಯಮಾವಳಿಗಳು :- ಭಜನಾ ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಂದು ತಂಡದವರಿಗೆ ಮೂರು ಪದಗಳನ್ನು ಹಾಡುವ ಅವಕಾಶವಿದ್ದು, ಮೂರೂ ಪದಗಳನ್ನು 18 ನಿಮಿಷಗಳಲ್ಲಿ ಹಾಡಬೇಕು. ಪ್ರತಿ ತಂಡದವರು ಎರಡು ಪದ್ಯಗಳನ್ನು ಕೈವಲ್ಯ ಸಾಹಿತ್ಯದ ಮೇಲೆ ಕಡ್ಡಾಯವಾಗಿ ಹಾಡಬೇಕು (ಕೈವಲ್ಯ ಸಾಹಿತ್ಯ ಎಂದರೆ ಶ್ರೀಮನ್ ನಿಜಗುಣ ಶಿವಯೋಗಿಗಳವರ, ಶ್ರೀ ಸರ್ಪಭೂಷಣ ಶಿವಯೋಗಿಳವರ, ಶ್ರೀ ಮಹಾಲಿಂಗರಂಗರ ಸಾಹಿತ್ಯಗಳು), ಪ್ರತಿ ತಂಡದವರು ಮೂರನೇ ಪದ್ಯವನ್ನು ಜಗದ್ಗುರು ಶ್ರೀ ಸಿದ್ಧಾರೂಢರ ಮೇಲಿನ ಪದ್ಯ, ದಾಸರ ಪದ್ಯ, ಶಿಶುನಾಳ ಶರೀಫರ ಪದ್ಯ ಹಾಗೂ ವಚನ ಸಾಹಿತ್ಯ ಇವುಗಳಲ್ಲಿ ಯಾವುದಾದರೊಂದು ಹಾಡಬಹುದು ಇಲ್ಲವೇ ಮೂರು ಪದ್ಯಗಳನ್ನು ಕೈವಲ್ಯ ಸಾಹಿತ್ಯದ ಮೇಲೆ ಹಾಡಬಹುದು. ಶ್ರೀ ಸಿದ್ಧಾರೂಢರ ಮೇಲಿನ ಪದ್ಯ, ದಾಸರ ಪದ್ಯ, ಶರೀಫರ ಪದ್ಯ ಹಾಡುವವರು ತಮ್ಮ ಹಾಡಿನ ಸಾಹಿತ್ಯದ ಒಂದು ಪ್ರತಿಯನ್ನು ನಿರ್ಣಾಯಕರ ಕಡೆ ಒಪ್ಪಿಸಿ ಹಾಡಬೇಕು. ತಾವು ಹಾಡುವ ಪದ್ಯದ ಹೆಸರು, ರಚಿಸಿದ ಕವಿಗಳ ಹೆಸರು, ರಾಗ, ತಾಳಗಳ ವಿವರವನ್ನು ಒಂದು ಹಾಳೆಯ ಮೇಲೆ ಬರೆದು ನಿರ್ಣಾಯಕರ ಕಡೆ ಕೊಟ್ಟು ಹಾಡಬೇಕು. ಜಾನಪದ ಹಾಗೂ ಸಿನೆಮಾ ಶೈಲಿಯಲ್ಲಿ ಹಾಡುವವರಿಗೆ ಅವಕಾಶ ನೀಡಲಾಗುವದಿಲ್ಲ. ಒಂದು ಸ್ಪರ್ಧೆಯಲ್ಲಿ ಭಾಗವಹಿಸುವ ತಂಡದ ಕಲಾವಿದರ ಸಂಖ್ಯೆ 6 ಕ್ಕಿಂತ ಕಡಿಮೆ ಇರಬಾರದು ಮತ್ತು 10 ಕ್ಕಿಂತ ಹೆಚ್ಚಿಗೆ ಇರಬಾರದು. ಒಂದು ತಂಡದಲ್ಲಿ ಭಾಗವಹಿಸಿದ ಕಲಾವಿದರಿಗೆ ಮತ್ತೊಂದು ತಂಡದಲ್ಲಿ ಹಾಡಲು ಅವಕಾಶ ಇರುವದಿಲ್ಲ. ಆದರೆ ತಬಲಾ ವಾದಕರಿಗೆ ಮಾತ್ರ ಕೇವಲ 2 ತಂಡಗಳಲ್ಲಿ ತಬಲಾ ಸಾಥ್ ನೀಡಲು ಅವಕಾಶ ನೀಡಲಾಗುವುದು. ಇನ್ನುಳಿದ ನಿಯಮಗಳನ್ನು ಸ್ಪರ್ಧೆಯ ಮುಂಚಿತವಾಗಿ ಸ್ಥಳದಲ್ಲಿಯೇ ಎಲ್ಲ ತಂಡದವರಿಗೆ ತಿಳಿಸಲಾಗುವುದು. ಸ್ಪರ್ಧೆಯ ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳು ಬಂದಲ್ಲಿ ನಿರ್ಣಾಯಕರ ಹಾಗೂ ಶ್ರೀ ಸಿದ್ಧಾರೂಢ ಸ್ವಾಮಿಯವರ ಟ್ರಸ್ಟ್ ಕಮೀಟಿಯ ರಾಜ್ಯ ಮಟ್ಟದ ಭಜನಾ ಸ್ಪರ್ಧೆಯ ಸಮಿತಿಯ ನಿರ್ಣಯವೇ ಅಂತಿಮ. ಇದರಲ್ಲಿ ಬೇರೆಯವರಿಗೆ ಅವಕಾಶ ಇರುವದಿಲ್ಲ.

ಮಹತ್ವದ ಸೂಚನೆ: ಪ್ರತಿ ದಿವಸ 25 ತಂಡಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗುವದು 13ನೇ ತಾರಿಖಿನ ವರೆಗೆ ಪ್ರಥಮ ಸುತ್ತು ಜರುಗುವದು ಹಾಗೂ ಇದರಲ್ಲಿ ಆಯ್ಕೆಯಾದ ತಂಡಗಳಿಗೆ ಕೊನೆಯ ದಿನ 14ನೇ ತಾರಿಖಿನ ದಿನ ನಡೆಯುವ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವದು. ಅಂತಿಮ ಸುತ್ತಿನಲ್ಲಿ ಆಯ್ಕೆಯಾದ ತಂಡದವರಿಗೆ ಮಾತ್ರ ಮೇಲ್ಕಾಣಿಸಿದ ಬಹುಮಾನಗಳನ್ನು ನೀಡಲಾಗುವದು. ಸದರೀ ಬಹುಮಾನ ವಿತರಣಾ ಕಾರ್ಯಕ್ರಮವು ದಿನಾಂಕ:-15.04.2024 ರಂದು ಜರಗುವುದು ಎಂದು ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಶ್ರೀ ಶಾಮಾನಂದ ಬಿ. ಪೂಜೇರಿ ಅಧ್ಯಕ್ಷರು, ರಾಜ್ಯ ಮಟ್ಟದ ಭಜನಾ ಸ್ಪರ್ಧೆ ಹಾಗೂ ಧರ್ಮದರ್ಶಿಗಳು, ಶ್ರೀ ಸಿದ್ದಾರೂಢ ಸ್ವಾಮಿಯವರ ಮಠ ಟ್ರಸ್ಟ್ . . . 9880169881,8095882033.


ಶ್ರೀ ಆತ್ಮನಂದ  ಸ್ವಾಮೀಜೀ ಯವರು,ಶಾಮಾನಂದ ಬಿ.ಪೂಜೇರಿ, ಅಧ್ಯಕ್ಷರು-ರಾಜ್ಯಮಟ್ಟದ ಭಜನಾ ಸ್ಪರ್ಧೆ ಸಮಿತಿ,ಬಸವರಾಜ ಸಿ. ಕಲ್ಯಾಣಶೆಟ್ಟರ -ಚೆರ್ಮನ್,ಮತ್ತು ಶಿವಕೀರ್ತಿ ಯವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಉಪಸ್ಥಿತರಿದ್ದರು.

City Today News 9341997936

Unveiling “The Big Baadshaah”: A Culinary Extravaganza in Electronic City, Bengaluru

Unveiling “The Big Baadshaah”: A Culinary Extravaganza in Electronic City, Bengaluru

Bengaluru, March 18, 2024: In the vibrant heart of Electronic City, Bengaluru, a new culinary gem has emerged, promising to redefine the gastronomic experience of the city’s denizens. The anticipation reached its zenith as “The Big Baadshaah” Resto Bar and Restaurant flung open its doors in a grand inauguration ceremony, marking a significant milestone in the culinary landscape of the bustling metropolis.

The brainchild of the visionary entrepreneur, Mr. Udaya Mogaveera, The Big Baadshaah is not just a restaurant; it’s a testament to his passion for culinary excellence and hospitality. With years of experience in the hospitality industry and an unwavering commitment to innovation, Mr. Mogaveera has set out to create an establishment that transcends the ordinary, offering patrons an unforgettable dining experience.

The grand opening of The Big Baadshaah was nothing short of spectacular, with a lavish event attended by prominent figures from the city’s social and business circles. As guests stepped into the sprawling premises, they were greeted by an ambiance that seamlessly blended opulence with warmth, setting the stage for an extraordinary gastronomic journey.

The restaurant’s décor is a harmonious fusion of contemporary chic and traditional elegance, reflecting Mr. Mogaveera’s penchant for aesthetic finesse. From plush seating arrangements to tastefully curated artworks adorning the walls, every element has been meticulously chosen to create an inviting atmosphere that beckons guests to unwind and indulge.

But it’s not just the ambiance that sets The Big Baadshaah apart; it’s the culinary offerings that truly steal the spotlight. Boasting a menu that spans the culinary spectrum, from authentic regional delicacies to international favorites with a twist, every dish is a masterpiece crafted with precision and passion by a team of seasoned chefs handpicked by Mr. Mogaveera himself.

From tantalizing appetizers that tantalize the taste buds to sumptuous mains that leave a lasting impression, each dish at The Big Baadshaah is a celebration of flavors, textures, and aromas. Whether it’s the succulent kebabs hot off the grill, the fragrant biryanis bursting with spices, or the decadent desserts that tempt the sweet tooth, every culinary creation tells a story of culinary craftsmanship and creativity.

Moreover, The Big Baadshaah doesn’t just cater to the discerning palate; it also offers an extensive selection of handcrafted cocktails, fine wines, and premium spirits to complement the dining experience. From classic concoctions to signature blends crafted by expert mixologists, the beverage menu is as diverse and enticing as the culinary offerings, ensuring that every sip is as memorable as every bite.

As Mr. Mogaveera addressed the gathering during the inauguration ceremony, he expressed his gratitude to the patrons for their unwavering support and shared his vision for The Big Baadshaah. “Our aim is not just to be another restaurant; we aspire to be a culinary destination that inspires, delights, and leaves a lasting impression on everyone who walks through our doors,” he remarked.

Indeed, with its impeccable service, exquisite cuisine, and captivating ambiance, The Big Baadshaah is poised to become a beacon of gastronomic excellence in Electronic City, Bengaluru, and beyond. As the city’s food enthusiasts flock to experience its culinary delights, one thing is certain – a dining experience at The Big Baadshaah is not just a meal; it’s an unforgettable journey into the realm of culinary bliss.

City Today News 9341997936

DANCEJATHRE 2024-TA-KA-DI-MI-TA

DANCEJATHRE 2024-TA-KA-DI-MI-TA

Shambhavi School of Dance, headed by Guru Vyjayanthi Kashi, is back with the 11th edition of its signature dance festival dancejathre, India’s unique dance fair. The two day dance fair is scheduled on 23 and 24th March 2024 at the Shankara Foundation, Kanakapura Road, Bengaluru (Next to Doddakallasandra Metro Station) from 10am to 9pm on both days.

After a two-year virtual event mode, we are happy to bring back the glory of live events with a two day celebration offering Dance Competitions, Workshops, Performances and more for all age groups.

Objective:

DanceJathre in Kannada means a fair, a celebration. A gathering of people of celebrate an event, an occasion to come together in exchanging thoughts, ideas, emotions, talent and more. Dance jathre is exactly this, a celebration of dance, a coming together of people to experience, learn and share their art.

Dancejathre is a brainchild of Guru Vyjayanthi Kashi a presidential awardee and Ex-chairperson of Karnataka Sangeetha Nrithya Academy.

Dancejathre has never differentiated between dance forms. This is one stage where folk, contemporary, modern, western or classical dance forms meet. This is a platform for all age groups be it beginners, experienced, enthusiasts to meet their idols, learn observe and get inspired picking up the nuances.

So what is special about dancejathre 2024?

• Competitions for Sub-Junior, Junior and Senior Category, solo, duet and group. The winners of the senior group category are given an opportunity to present their work on the main stage as part of the performances along with reputed dancers. Cash prize is awarded too

• This edition features performances of dynamic dance exponents of various forms from different parts of India along with their groups.

• A variety of workshops including classical (Bharatanatyam, Kuchipudi, Kathak, Bharatanrithya) folk, African Dance, Dhandiya, Pracheen Garba, Ghoomar and Kalbeliya dance.

Find below the complete schedule of dancejathre 2024.

COMPETITIONS @ DANCEJATHRE 2024 – REGISTRATIONS OPEN!

10:00am to 2:00pm-GROUP COMPETITIONS (JUNIOR CATEGORY)

2:30pm to 5:30pm – GROUP COMPETITIONS (SENIOR CATEGORY)

10:00am to 2:00pm-DUET COMPETITIONS (JUNIOR CATEGORY) 2:30pm to 5:30pm DUET COMPETITIONS (SENIOR CATEGORY)

23 March 2024

24TH March 2024

10:00am to 2:00pm-SUB-JUNIOR SOLO COMPETITIONS

10:00am to 5:00pm-JUNIOR SOLO COMPETITIONS

2:30Pm to 5:30pm-SENIOR SOLO COMPETITIONS

WORKSHOPS @ DANCEJATHRE 2022 REGISTRATIONS OPEN!

23 March 2024

10:00am to 12:00pm-Kathank by Sanjukta Sinha, Ahmedabad

12:00pm to 2:00pm-Bharatanatyam by Sheela Unnikrishnan, Chennai

3:00pm to 5:30pm – Dandiya by Bhumi Thakkar, Ahmedabad

24th March 2024

12:00pm to 2:00pm – Kuchipudi by Sudheer Rao, Varangal

3:00pm to 4:00pm – Rajasthani Folk by Bhumi Thakkar, Ahmedabad 4:00pm to 5:30pm – Afrofit by Jothi Viknesh, Bengaluru

10:00am to 12:00pm Bharatanrithyam by Nirupama Rajendra, Bengaluru.

PERFORMANCES @ DANCEJATHRE 2024 (FREE ENTRY)

23rd March 2024

6:00pm-6:15pm: Inauguration by Dr. M.R. Krishna Murthy, Director, Kalakshithi School of fine Arts, Bengaluru

: Bharatanritya by Nirupama Rajendra and Group, Bengaluru

6:15pm-6:45pm: Kuchipudi by Sri Sudheer Rao and Group, Varangal

6:50pm-7:30pm

7:35pm-8:15pm: Kathak by Sanjukta Sinha and Group, Ahmedabad

Guest of Honor: Smt. Nirmala Eligar, Director, Doordarshan Kendra, Bengaluru

Performances by Winners of Senior Dance Competition

Kuchipudi by Shambhavi Dance Ensemble, Bengaluru

7:35pm-8:35pm: Bharatnatyam by Sheela Unnikrishnan & Group, Chennai

For any further queries, contact 9886956596/9448146110.

6:00pm-6:15pm:

24th March 2024

6:15pm-6:45pm:

6:50pm-7:30pm:

This is one of a fair where dance enthusiasts are welcome to take part in the events, without a bias of previous experience.

City Today News 9341997936

ಕರ್ನಾಟಕ ರಾಜ್ಯ ಯಾದವ(ಗೊಲ್ಲ) ಸಂಘ ಮತ್ತು ಕರ್ನಾಟಕ ರಾಜ್ಯ ಪ್ರವರ್ಗ-1ರ ಜಾತಿಗಳ ಒಕ್ಕೂಟವು ಸನ್ಮಾನ್ಯ ಶ್ರೀ ಸಿದ್ದರಾಮಯ್ಯರವರಿಗೆ ಅಭಿನಂದನೆ.

ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ರವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ಸದಾ ಹಿಂದುಳಿದ ವರ್ಗದವರ ಏಳೆಯನ್ನು ಬಯಸುತ್ತಿದ್ದು, ಅದರಂತೆಯೇ ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಸದಸ್ಯರನ್ನಾಗಿ ಶ್ರೀ ಎಂ.ವಿ. ರಾಮಕೃಷ್ಣ ಪ್ರಸಾದ್ (ಗೊಲ್ಲ ಜನಾಂಗ) ಕೆ.ಎಸ್.ಪಿ.ಎಸ್, ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ (ಕೆ.ಎಸ್.ಆರ್.ಪಿ) ಮತ್ತು ಶ್ರೀಮತಿ ಕಾವಲಮ್ಮ, (ಪರಿಶಿಷ್ಟ ಜಾತಿ) ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ ಹಾಗೂ ಶ್ರೀಅಲ್ತಾಫ್ ಹುಸೇನ್ (ಅಲ್ಪಸಂಖ್ಯಾತ) ರವರುಗಳನ್ನು ಕರ್ನಾಟಕ ಲೋಕಸೇವಾ ಆಯೋಗದ ಅಧಿಕಾರ/ಅಧಿಕಾರೇತರ ಸದಸ್ಯರನ್ನಾಗಿ ನೇಮಿಸಿರುವುದಕ್ಕೆ ಕರ್ನಾಟಕ ರಾಜ್ಯ ಯಾದವ(ಗೊಲ್ಲ) ಸಂಘ ಮತ್ತು ಕರ್ನಾಟಕ ರಾಜ್ಯ ಪ್ರವರ್ಗ-1ರ ಜಾತಿಗಳ ಒಕ್ಕೂಟವು ಸನ್ಮಾನ್ಯ ಶ್ರೀ ಸಿದ್ದರಾಮಯ್ಯರವನ್ನು ಅಭಿನಂದಿಸುತ್ತದೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಡಿ.ಟಿ.ಶ್ರೀನಿವಾಸ್ ತಿಳಿಸಿದರು.

City Today News 9341997936

ಪರಿವರ್ತನಾ ಸೋಶಿಯಲ್ ಸರ್ವಿಸ್ ಸೊಸೈಟಿ, ಸುಂಕದಕಟ್ಟೆ, ಬೆಂಗಳೂರು ಎಂಬ ಸಂಸ್ಥೆಯು ಮಧ್ಯಪಾನ ಮತ್ತು ಮಾದಕ ವ್ಯಾಸನ ತಡೆಗಟ್ಟುವಿಕೆ ಮತ್ತು ಪುನರ್ವಸತಿ ಕೇಂದ್ರ

ಪರಿವರ್ತನಾ ಸೋಶಿಯಲ್ ಸರ್ವಿಸ್ ಸೊಸೈಟಿ, ಸುಂಕದಕಟ್ಟೆ, ಬೆಂಗಳೂರು ಎಂಬ ಸಂಸ್ಥೆಯು ಮಧ್ಯಪಾನ ಮತ್ತು ಮಾದಕ ವ್ಯಾಸನ ತಡೆಗಟ್ಟುವಿಕೆ ಮತ್ತು ಪುನರ್ವಸತಿ ಕೇಂದ್ರವಾಗಿದ್ದು 2016 ರಿಂದ ಕೆಲಸವನ್ನು ವಹಿಸುತ್ತಿದ್ದ ಒಂದು ಸಂಸ್ಥೆಯಾಗಿದೆ.

ಅಲ್ಲಿದ್ದಂತಹ ಓರ್ವ ವ್ಯಕ್ತಿಯ ಸುಳ್ಳು ಕಂಪ್ಲೇಂಟ್ ನ್ಯಾಷನಲ್ ಹ್ಯೂಮನ್ ರೈಟ್ಸ್ ಕಮಿಷನ್ ನಿಗೆ ಕಳಿಸಿದ್ದು ಆ ಕಂಪ್ಲೇಂಟಿನ ಆಧಾರದ ಮೇಲೆ ಜಿಲ್ಲಾ ಆರೋಗ್ಯ ಅಧಿಕಾರಿ ಮತ್ತು ಅವರ ಸಿಬ್ಬಂದಿ ವರ್ಗದವರು 7ನೇ ನವಂಬರ್ 2023 ರಂದು ಅಚಾನಕ್ಕಾಗಿ ಪರಿವರ್ತನಾ ಸೋಶಿಯಲ್ ಸರ್ವಿಸ್ ಸೊಸೈಟಿಗೆ ಬಂದು ಆ ಸಂಸ್ಥೆಯನ್ನು ಮುಚ್ಚುವಂತೆ ದಿಢೀರನೆ ಆದೇಶ ನೀಡಿ ಅಲ್ಲಿ ಇದ್ದಂತಹ ಎಲ್ಲಾ ಪೇಷಂಟ್ಗಳನ್ನು ಹೊರಗೆ ಹಾಕುವಂತೆ ಆದೇಶ ಮಾಡಿ ಸೀಲ್ ಮಾಡಿದ್ದರು.

ಈ ರೀತಿಯಾಗಿ ಅಚಾನಕ್ಕಾಗಿ ಬಂದು ಸೀಲ್ ಹಾಕಿದ ಕಾರಣ ಸಂಸ್ಥೆಯ ಪದಾಧಿಕಾರಿಗಳು ಕರ್ನಾಟಕ ಹೈಕೋರ್ಟ್ ಮೆಟ್ಟಲು ಹತ್ತಿ ಈ ಒಂದು ಕಾರ್ಯವನ್ನು ಚಾಲೆಂಜ್ ಮಾಡಿ ಹೈಕೋರ್ಟಿನಿಂದ ಮರು ಕಾರ್ಯರೂಪಕ್ಕೆ ಬರುವಂತೆ ಆದೇಶವನ್ನು ಇದೇ ತಿಂಗಳಿನ ಎಂಟನೇ ತಾರೀಕು ಪಡೆದಿದ್ದಾರೆ.

ಈ ಸಮಯದಲ್ಲೇ ಇಂದು ದಿನಾಂಕ 18 ಮಾರ್ಚ್ 2024 ಡಿಸ್ಟ್ರಿಕ್ ಮೆಂಟಲ್ ಹೆಲ್ತ್ ಆಫೀಸರ್ ಆದಂತಹ ಡಾ. ನಾಗರಾಜ್ ರವರು ಮತ್ತು ಅವರ ಸಿಬ್ಬಂದಿ ಬಂದು ಅವರು ಹಾಕಿದ್ದಂತ ಸೀಲನ್ನು ತೆಗೆದು ಸಂಸ್ಥೆಯ ಪದಾಧಿಕಾರಿಗಳಿಗೆ ಸಂಸ್ಥೆಯನ್ನು ಒಪ್ಪಿಸಿದ್ದಾರೆ.

ಆದೇಶವನ್ನು ಕೊಟ್ಟಂತಹ ಕರ್ನಾಟಕ ಹೈಕೋರ್ಟಿಗೆ ನಮ್ಮ ಧನ್ಯವಾದಗಳು ಎಂದು ಶ್ರೀನಿವಾಸ್ ಆರ್
ಸಂಸ್ಥಾಪಕರು
ಪರಿವರ್ತನಾ ಸೋಶಿಯಲ್ ಸರ್ವಿಸ್ ಸೊಸೈಟಿ ಸುಂಕದಕಟ್ಟೆ ಬೆಂಗಳೂರು ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

City Today News 9341997936