ಬಿ.ಎಂ.ಎಸ್ ಕಾನೂನು ಮಹಾವಿದ್ಯಾಲಯದಲ್ಲಿ ಮಹಿಳಾ  ದಿನಾಚರಣೆ

ದಿನಾಂಕ ೧೩.೦೩.೨೦೨೪ ರಂದು ಬಿ.ಎಂ.ಎಸ್ ಕಾನೂನು ಮಹಾವಿದ್ಯಾಲಯದಲ್ಲಿ ಮಹಿಳಾ  ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಂಶುಪಾಲರು, ಬೋಧಕ, ಬೋಧಕೇತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

City Today News 9341997936

ಕರ್ನಾಟಕ ಇತಿಹಾಸ ಪರಿಷತ್ತಿನ 34ನೇ ವಾರ್ಷಿಕ ಮಹಾ ಅಧಿವೇಶನ

ಕರ್ನಾಟಕ ಇತಿಹಾಸ ಪರಿಷತ್ತಿನ 34ನೇ ವಾರ್ಷಿಕ ಮಹಾ ಅಧಿವೇಶನ

ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನ ಬಾಪೂಜಿ ಸಭಾಂಗಣದಲ್ಲಿ ಮಾರ್ಚ್ 15. 16 ಹಾಗೂ 17ರಂದು ದೆಹಲಿಯ ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ತು ಹಾಗೂ ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ – ಇವರ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ಇತಿಹಾಸ ಪರಿಷತ್ತಿನ 34ನೇ ವಾರ್ಷಿಕ ಮಹಾಧಿವೇಶನವನ್ನು ಏರ್ಪಡಿಸಲಾಗಿದೆ.

ಖ್ಯಾತ ಸಾಹಿತಿಗಳು ಮತ್ತು ಸಂಸ್ಕೃತಿ ಚಿಂತಕರಾದ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಅಧಿವೇಶನವನ್ನು ಉದ್ಘಾಟಿಸುವರು. ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ. ಸುಧಾಕರ್, ಶಾಸಕರಾದ ಶ್ರೀ ರಿಜ್ವಾನ್ ಅರ್ಷದ್, ಶಾಸಕರಾದ ಶ್ರೀ ಪುಟ್ಟಣ್ಣ ಮತ್ತು ಶ್ರೀ ಎನ್. ಶ್ರೀನಿವಾಸ್, ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಾದ ಶ್ರೀ ಜಗದೀಶ್ ಹಾಗೂ ಇತರರು ಮುಖ್ಯ ಅತಿಥಿಗಳಾಗಿ ಆಗಮಿಸುವರು. ಬೆಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ. ಅಶ್ವತ್ಥನಾರಾಯಣ ಅವರು ಸಮ್ಮೇಳನದ ಸರ್ವಾಧ್ಯಕ್ಷರಾಗಿರುತ್ತಾರೆ. ಮೂರು ದಿನಗಳ ಕಾಲ ನಡೆಯುವ ಮಹಾ ಅಧಿವೇಶನದಲ್ಲಿ ರಾಷ್ಟ್ರಮಟ್ಟದ ವಿದ್ವಾಂಸರು, ಸಂಶೋಧಕರು, ಇತಿಹಾಸ ತಜ್ಞರು ಪ್ರಬಂಧಗಳನ್ನು ಮಂಡಿಸುವರು. ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವಿಶ್ರಾಂತ ಸಮ ಕುಲಪತಿಗಳಾದ ಪ್ರೊ. ಎಸ್. ಚಂದ್ರಶೇಖರ್ ಅವರು ಸಮಾರೋಪ ಭಾಷಣ ಮಾಡುವರು ಎಂದು ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

City Today News 9341997936

ಕರ್ನಾಟಕ ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಷನ್ ಸಂಘಟನೆಯ ಹೈಜಾಕ್‌ಗೆ ಷಡ್ಯಂತ್ರ

ಕರ್ನಾಟಕ ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಷನ್ ಸಂಘಟನೆಯ ಹೈಜಾಕ್‌ಗೆ ಷಡ್ಯಂತ್ರ

: ಹಿರಿಯ ಅಥ್ಲೆಟ್‌ಗಳ ಅಸಮಾಧಾನ:

ಭಾರತೀಯ ಅಥ್ಲೆಟಿಕ್ಸ್ ಅಸೋಸಿಯೇಷನ್ ಮಾನ್ಯತೆ ಪಡೆದಿರುವ ಕರ್ನಾಟಕ ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಷನ್ ರಾಜ್ಯದ ನೈಜ ಸಂಘಟನೆಯಾಗಿದ್ದು, ಸಂಸ್ಥೆಯ ಬೈಲಾ, ನೀತಿ, ನಿಯಮಗಳನ್ನು ಉಲ್ಲಂಘಿಸಿ ನಮ್ಮ ಸಂಘಟನೆಯನ್ನು ಹೈಜಾಕ್ ಮಾಡಿರುವುದರಿಂದ ಹಿರಿಯ ಅಥ್ಲೆಟ್‌ಗಳಲ್ಲಿ ಗೊಂದಲ ಉಂಟಾಗಿದೆ ಎಂದು ಕರ್ನಾಟಕ ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಷನ್ ಕಾರ್ಯಕಾರಿ ಅಧ್ಯಕ್ಷ ಡಿ.ಎಚ್.ಗುರು ಆರೋಪಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಮ್ಮ ಸಂಸ್ಥೆ ಹಿರಿಯ ಅಥ್ಲೆಟ್‌ಗಳ ಹಿತ ಬದ್ಧವಾಗಿದೆ. ಕರ್ನಾಟಕ ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಷನ್ ಸಂಘಟನೆಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ಕೆಲವರು ಸಂಘಟನೆಯನ್ನು ಕೆಲವರು ಹೈಜಾಕ್ ಮಾಡಲು ಷಡ್ಯಂತ್ರ ರೂಪಿಸಿದ್ದು, ಇಂಡಿಯನ್ ವೆಟ್ರಿನ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಸಂಸ್ಥೆಯ ಸದಸ್ಯರು ಇಂತಹ ಹುನ್ನಾರಗಳಿಗೆ ಕಿವಿಗೊಡಬಾರದು. 5 ಬೆಳವಣಿಗೆಯಿಂದ ರಾಜ್ಯದ ಅಥ್ಲೆಟ್‌ಗಳು ತೀವ್ರ  ಅಸಮಾಧಾನಗೊಂಡಿದ್ದಾರೆ ಎಂದರು.

ಕೆಲವರು ವಾಫಿ ಎಂಬ ಸಂಘಟನೆ ರಚಿಸಿಕೊಂಡು ನಮ್ಮ ಲೆಟರ್ ಹೆಡ್ ದುರ್ಬಳಕೆ ಮಾಡಿಕೊಂಡಿದ್ದಾರೆ. ಎರಡು ವರ್ಷ ಕೊರೋನಾ ಸಂದರ್ಭದಲ್ಲಿ ರಾಮಮೂರ್ತಿ ಎಂಬುವವರನ್ನು ಸಂಸ್ಥೆಯ ಕಾರ್ಯದರ್ಶಿಯನ್ನಾಗಿ ನೇಮಿಸಿದ್ದು, ಅವರು ತಮ್ಮ ಐ.ಎಂ. ಗೆ ಸೇರಬೇಕಾದ ಹಣವನ್ನು ತನ್ನ ಸ್ವಂತ ಖಾತೆಗೆ ಜಮಾ ಮಾಡಿಕೊಂಡಿದ್ದಾರೆ. ಈ ಕುರಿತು ಲೆಕ್ಕ ಪತ್ರ ನೀಡಿಲ್ಲ. ಒಟ್ಟು (13,38,952/-) 13 ಲಕ್ಷ ರೂ 38 ಸಾವಿರ ಒಂಭೈನೂರು ಐವತ್ತೆರಡು ವಂಚನೆ ಮಾಡಿದ್ದಾರೆ. ಸಂಘಟನೆಯ ಸರ್ವ ಸದಸ್ಯರ ಸಭೆ ಕರೆಯಲು ಅಧಿಕಾರ ಇಲ್ಲದಿದ್ದರೂ ಅವರು ಸಭೆ ಕರೆದು ಸಂಘಟನೆಯ ನೀತಿ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿದರು.

ನಮ್ಮ ಎದುರಾಳಿ ಬಣದವರು ಬೇಕಿದ್ದರೆ ಹಿರಿಯ ಅಥ್ಲೆಟಿಕ್ಸ್‌ಗೆ ಸಂಬಂಧಿಸಿದಂತೆ ಪ್ರತ್ಯೇಕ ಸಂಘಟನೆ ರಚನೆ ಮಾಡಿಕೊಂಡರೆ ನಮ್ಮ ಅಭ್ಯಂತರವಿಲ್ಲ. ಹೊಸ ಸಂಘಟನೆ ಮೂಲಕ ಹೆಚ್ಚು ಕ್ರೀಡಾಕೂಟಗಳನ್ನು ಆಯೋಜಿಸಿದರೆ ಒಳ್ಳೆಯದು. ಆದರೆ ನಮ್ಮ ಸಂಘಟನೆಯ ಹೆಸರು, ಲಾಂಛನ, ಲೆಟರ್ ಹೆಡ್‌ಗಳನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ಕೈಬಿಡಬೇಕು. ಐ.ಎಂ.ಎ. ಅಡಿ ಬರುವ ನಮ್ಮದೇ ನಿಜವಾದ ಸಂಘಟನೆ ಎಂದು ಹೇಳಿದರು.

ನಮ್ಮ ಸಂಘದವರೆಂದು ಹೇಳಿಕೊಳ್ಳುತ್ತಿರುವ ಪದಾಧಿಕಾರಿಗಳು ಸಂವಿಧಾನಬದ್ಧವಾಗಿ ಚುನಾವಣೆಯಿಂದ ಆಯ್ಕೆಯಾದವರಲ್ಲ. ಕೋಲಾರದಲ್ಲಿ ರಾಜ್ಯ ಚಾಂಪಿಯನ್‌ಶಿಪ್ ಮತ್ತು ಬೆಂಗಳೂರಿನಲ್ಲಿ ರಾಷ್ಟ್ರೀಯ ಚಾಂಪಿಯನ್‌ಶಿಪ್ ಅನ್ನು ನಮ್ಮ ಅಜೀವ ಸದಸ್ಯರಿಗೆ ತಿಳಿಸದೆ ಚಟುವಟಿಕೆಗಳನ್ನು ನಡೆಸಿದ್ದಾರೆ. ಹೆಜ್ಜೆ ಹೆಜ್ಜೆಗೂ ಲೋಪ ಎಸಗುತ್ತಿದ್ದು ಇಂಡಿಯನ್ ವೆಟ್ರಿನ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿ ರಂಗನಾಥ್ ಅವರು ನಡೆಸುತ್ತಾರೆ. ಇನ್ನು ಮುಂದೆ ಐ.ಎಂ.ಎ. ಸದಸ್ಯರು ಸೇರಬೇಡಿ ಎಂದು  ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಮನವಿ ಮಾಡಿದರು.

City Today News 9341997936

Airtel celebrates Customer Day, all employees in Bangalore join frontline teams for insightful customer interactions

● Employees from across all Airtel offices in the country stepped out to spend a day on the field meeting customers for valuable insights
● The initiative aims to enable employees with a deeper understanding of customer pulse

Bangalore, March 12, 2024: Bharti Airtel (“Airtel”), one of India’s leading telecommunications service providers, today celebrated Customer Day across all its office locations in the country. All Airtel employees who are in non-customer facing roles stepped out of their everyday role to join their frontline counterparts and directly interact with the customers.

Employees across all Airtel office locations in the country worked with home delivery engineers, fiber executives and retail workforces in the markets. These employees include everyone from the topmost senior leadership team to the junior managers in all offices. 

The Customer Day is a part of Airtel’s multiple initiatives that are centered on its core DNA of customer obsession. Through the direct customer, connect for all its employees, Airtel aims to drive deeper engagement to understand customer viewpoints and customer pulse especially their concerns and suggestions. The company is certain that “Customer Day” will bestow “new eyes” for a large number of employees from diverse functions and unlock a whole new mindset and culture of customer obsession across the organization.

To stay tuned for more on this, follow #LetsPaintItRed on social channels.
About Bharti Airtel
Headquartered in India, Airtel is a global communications solutions provider with over 500 Mn customers in 17 countries across South Asia and Africa. The company ranks amongst the top three mobile operators globally and its networks cover over two billion people. Airtel is India’s largest integrated communications solutions provider and the second largest mobile operator in Africa. Airtel’s retail portfolio includes high speed 4G/5G mobile broadband, Airtel Xstream Fiber that promises speeds up to 1 Gbps with convergence across linear and on-demand entertainment, streaming services spanning music and video, digital payments and financial services. For enterprise customers, Airtel offers a gamut of solutions that includes secure connectivity, cloud and data centre services, cyber security, IoT, Ad Tech and cloud based communication. For more details visit http://www.airtel.com/

City Today News 9341997936

ಸರ್ಕಾರಗಳು ಒಟ್ಟಿಗೆ ಸೇರಿ ಮೇಕೆದಾಟು ಅಣೆಕಟ್ಟನ್ನು ನಿರ್ಮಾಣಮಾಡಲೇ ಬೇಕು ಇಲ್ಲವಾದರೇ ಸರ್ಕಾರಕ್ಕೆ ಶಾಪತಟ್ಟುತ್ತದೆ-ಕರ್ನಾಟಕ ರಾಜ್ಯ ಮೇಕೆದಾಟು ಹೋರಾಟ ಸಮಿತಿ

ರಾಜ್ಯದಲ್ಲಿ ಕುಡಿಯುವ ನೀರಿಗಾಗಿ 1913 ನೇ ಇಸವಿಯಲ್ಲಿ ಕರ್ನಾಟಕ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಸೇರಿ ಕರ್ನಾಟಕದಲ್ಲಿ ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ .ತುಮಕೂರು ಆನೇಕಲ್ ಮತ್ತು ರಾಮನಗರ ಜಿಲ್ಲೆಗೆ ರೈತರಿಗೆ ಬೆಂಗಳೂರು ನಗರಕ್ಕೆ ಪ್ರಾಣಿ ಪಕ್ಷಿಗೆ ದನಕರುಗಳಿಗೆ ಮುಂದಿನ ದಿನದಲ್ಲಿ ನೀರು ಬೇಕಾಗುತ್ತದೆ.ಎಂದು ಸರ್ಕಾರ ಯೋಜನೆಯಲ್ಲಿ ಕುಳಿತು ಮಾತನಾಡಿ 1912 ನೇ ಇಸವಿಯಲ್ಲಿ 5912 ಕೋಟಿ ಹಣವನ್ನು ಬಡ್ಡೆಟ್‌ನಲ್ಲಿ ನಮೂದಿಸಿದೆ. ಈ ನೀರು ಮಲೆನಾಡಿನಿಂದ ಕಾವೇರಿ ಹರಿಯುವ ನೀರು ಅತಿ ಹೆಚ್ಚಾಗಿ ತಮಿಳುನಾಡಿನ ಮುಖಾಂತರ ಸಮುದ್ರಕ್ಕೆ ಹೋಗುತ್ತಿದೆ. ಈ ಯೋಜನೆಯ ಅನುದಾನದಿಂದ ರಾಜ್ಯ ಕೇಂದ್ರ ಸರ್ಕಾರ ಮಾಡುತ್ತೇವೆ ಎಂದು ಭರವಸೆಯನ್ನು ಕೊಟ್ಟು ಈ ಭರವಸೆಯನ್ನು 320 ಅಡಿ ನೀರು ಶೇಖರಣೆಯಾಗುತ್ತದೆ. ಎಂದು ತಿಳುವಳಿಕೆಯನ್ನು ಸರ್ಕಾರ ತಿಳಿಸಿ 450 ಮೆಗಾವ್ಯಾಟ್ ವಿದ್ಯುತ್ ಕೂಡ ಕರ್ನಾಟಕ ತಲುಪುತ್ತದೆ ಎಂಬ ಮಾಹೆಯನ್ನು ಕೊಟ್ಟಿದ್ದರು. ಈ ಯೋಜನೆ ತಿಳಿದ ಕರ್ನಾಟಕದಲ್ಲಿ ಅದರಲ್ಲಿ ರಾಮನಗರದಲ್ಲಿ ಜಿಲ್ಲೆಯ ರೈತ ಸಂಘ1913 ರಲ್ಲಿ ಮಾಹಿತಿ ಸರ್ಕಾರದಿಂದ ಪಡೆದು ಹೋರಾಟವನ್ನು ಮಾಡಿಕೊಂಡು ಬಂದಿದ್ದಾರೆ.

ಅದರಲ್ಲೂ ಕನಕಪುರ ತಾಲ್ಲೂಕಿನ ಜನರಾದ ರೈತ ಮುಖಂಡರಾದ ಸಂಪತ್ ಕುಮಾರ್, ಅನಂತರಾಮು, ಭೂಹಳ್ಳಿ ಜಗದೀಶರಾವ್, ನಾರಾಯಣಸ್ವಾಮಿ ಇನ್ನು 1000 ಜನರು ರೈತಹೋರಾಟಗಾರರಸರ್ಕಾರಕ್ಕೆ ಎಚ್ಚರಿಕೆಯನ್ನು ಅನುಸಾರಕ್ಕೆ ಕರ್ನಾಟಕ ರಾಜ್ಯ ರೈತ ಹೋರಾಟಗಾರರರು ಈ ಮೇಕೆದಾಟು ಹೋರಾಟ ಹಾಸನ ಜಿಲ್ಲೆಯ ಅರಳಾಪುರ ಮಂಚೇಗೌಡರು ,ನಾಗರತ್ನಮ್ಮ ಹಾಗೂಕೋಲಾರನಾರಾಯಣಸ್ವಾಮಿ ಕನಕಪುರ ಗ್ರಾಮದ ನೂರಾರು ಮಹಿಳೆಯರು ಕೊಟ್ಟಗಾಳು ಗ್ರಾಮದ ಸಾಕಮ್ಮ, ಮಾರಮ್ಮ, ರಾಜ್ಯ ರೈತ ಸಂಘದ ಮಹಿಳಾ ರಾಜ್ಯಧ್ಯಕ್ಷೆ ನಾಗರತ್ನಮ್ಮ, ರಾಜರೈತ ಸಂಘ ರಾಜಾಧ್ಯಕ್ಷ ಮಂಜೇಗೌಡ ಡಾ॥ ಫಯಾಜ್ ಸೇರಿದಂತೆ ರೈತ ಮುಖಂಡರು ಕರ್ನಾಟಕ ಕನ್ನಡ ಸಂಘದ ಹೋರಾಟಗಾರರು ಭಾಗವಹಿಸಿ ಮೇಕೆದಾಟಿನಿಂದ ವಿಧಾನಸೌಧಕ್ಕೆ ಪಾದಯತ್ರೆಯನ್ನು ದಿನಾಂಕ 23-9-2021ರ ಗುರುವಾರ ಪ್ರಾರಂಭಿಸಿ ಸರ್ಕಾರಕ್ಕೆ ಒತ್ತಡವನ್ನುರಾಜ್ಯದ ಮುಖ್ಯಮಂತ್ರಿ ಭೂಮಿಯನ್ನು ಭೇಟಿ ಮಾಡಿ ಬೊಮ್ಮಾಯಿ 2022 ಒಳಗೆ ದೇಶದಪ್ರಧಾನಿ ಮೋದಿಯವರನ್ನು ಕರೆದುಕೊಂಡುಮೇಕೆದಾಟಿಗೆ ಪೂಜೆಯನ್ನು ಸಲ್ಲಿಸುತ್ತೇವೆಂದು  ಭರವಸೆಯನ್ನು ಬಗೆಹರಿಸಿದ ರಾಜ್ಯದ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೇಕದಾಟುವಿನಿಂದ ಪಾದಯಾತ್ರೆಯನ್ನು ಅದ್ದೂರಿ ಸಂಭ್ರಮದಿಂದ ಮೇಕೆದಾಟು ಕಟ್ಟೆಕಟ್ಟುತ್ತೇವೆಂದು ಭರವಸೆಯನ್ನು ಕೊಟ್ಟರು.ಹಾಗೂ ರಾಜ್ಯದಲ್ಲಿ ಇವೆಲ್ಲಾ ವಿಚಾರದಲ್ಲಿ ಮೇಕೆದಾಟುವಿಚಾರ ಹಾಗೂ ಕೆಲವು ಭರವಸೆಗಳನ್ನು ಕೊಟ್ಟ ಸರ್ಕಾರವನ್ನು ಬಿಜೆಪಿಯಿಂದ ತಮ್ಮ ಪಕ್ಷಕ್ಕೆ ವಶಪಡಿಸಿಕೊಂಡರು ಹಾಗೂ ಹೋರಾಟಮಾಡುವಾಗ ಯಾರ ಅನುಮತಿಯೂ ಬೇಡ ನಮ್ಮ ನೀರು ನಮ್ಮ ಹಕ್ಕು ಎಂಬ ಭರವಸೆಯನ್ನು ಕೊಟ್ಟು ಇದುವರೆವಿಗೂ ಮೇಕೆದಾಟು ವಿಚಾರ ದ ಕಡೆ ಗಮನ ಹರಿಸಿಲ್ಲ. 26ಜನಕರ್ನಾಟಕ ದಿಂದ ಎಂಪಿಗಳು ಆಗಿದ್ದರೂ ಕರ್ನಾಟಕಕ್ಕೆಯಾವಉಪಯೋಗವನ್ನು ಮಾಡಲಿಲ್ಲ. ಮುಖ್ಯವಾಗಿ ಕರ್ನಾಟಕದ ಜನರಿಗೆ ನೀರಿದ್ದರೆ ಜನರ ಜೀವ ಪ್ರಾಣಿ ಪಕ್ಷಿಗಳ ಜೀವ ಉಳಿಯುತ್ತದೆ. ಇದರ ಬಗ್ಗೆ ಗಮನ ಹರಿಸದೇ ಇರುವಾಗ ಎಂಪಿಗಳಿಗೆ ಪಾಠ ಕಲಿಸಬೇಕಾಗುತ್ತದೆ.25ಸಾವಿರವಾಟರ್ ಟ್ಯಾಂಕ್‌ಗಳು ಕುಡಿಯುವ ನೀರನ್ನು ಬೆಂಗಳೂರಿನಲ್ಲಿ ಸರಬರಾಜು ಮಾಡುತ್ತಿರುವುದು ಗೊತ್ತಿದ್ದರೂ ಸಹ ಸರ್ಕಾರ ಮೇಕೆದಾಟು ಯೋಜನೆಯ ಕಡೆ ಗಮನ ಹರಿಸುತ್ತಿಲ್ಲ. ಆದ್ದರಿಂದ ಬೆಂಗಳೂರಿನ ಜನತೆ ಬೇಗ ಎಚ್ಚೆತ್ತು ಕೊಂಡು ಅಣೆಕಟ್ಟು ನಿರ್ಮಾಣ ಮಾಡಲುರಾಜಕಾರಣಿಗಳಿಗೆ ಸರಿಯಾದ ಪಾಠವನ್ನುಕಲಿಸಬೇಕಾಗುತ್ತದೆ.ಎಂದು ಈ ಮೂಲಕ ಕಳಕಳಿಯಿಂದ ಒತ್ತಾಯಿಸುತ್ತೇವೆ.

ದಯಮಾಡಿ ಮತನೀಡಬೇಕಾದರೆ ಮಾಜಿಪ್ರಧಾನಿ ಹೆಚ್.ಡಿ.ದೇವೇಗೌಡರ ಒತ್ತಾಯದಿಂದಲೂ ಸರ್ಕಾರಕ್ಕೆ ಮಾಹಿತಿ ತಿಳಿಸಿದ್ದರೂ ಹಾಗೂ ವಾಟಾಳ್ವೆನಾಗರಜು ಕನ್ನಡಪರ ಹೋರಾಟಗಾರರು ಮೇಕೆದಾಟು ಕಟ್ಟಲೇಬೇಕು ನಮ್ಮ ನೀರು ನಮ್ಮ ಹಕ್ಕು ಎಂದು ಮೊಟ್ಟಮೊದಲು ನೀರು ಕೊಡಿ ಹಣಕೊಡಬೇಡಿ ಯಾವ ಶಕ್ತಿಯು ಪ್ರದರ್ಶನ ತೆಗೆದುಹಾಕಿ ಕುಡಿಯಲು ನೀರನ್ನು ಕೊಡಬೇಕಾದರೆ ಮೇಕೆದಾಟು ಅಣೆಕಟ್ಟು ಕಟ್ಟಲೇಬೇಕು. ಶಂಕುಸ್ಥಾಪನೆ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಯಾರಾದರೂಗುದ್ದಲಿ ಪೂಜೆ ಮಾಡಿ ಹಣ ಬಿಡುಗಡೆ ಮಾಡಿದರೆ ಮಾತ್ರ ಮತ ಚಲಾಯಿಸುತ್ತೇವೆ. ಕೇಂದ್ರ ಸರ್ಕಾರ ಮೇಕೆದಾಟು ಕಟ್ಟಲು ಅನುಮತಿ ಕೊಟ್ಟರೆ ನಿಮಗೆ ಮತ ರಾಜ್ಯ ಸರ್ಕಾರಕ್ಕೆ ತಾವು ಕಟ್ಟೆಕಟ್ಟುತ್ತೇವೆಂದು ಭರವಸೆಕೊಟ್ಟು ಗುದ್ದಲಿ ಪೂಜೆ ಮಾಡಿದರೆ ನಿಮಗೆ ಬೆಂಗಳೂರುನಗರ ಸೇರಿಕೊಂಡು ತಮಿಳುನಾಡಿಗೆ ಹೆಚ್ಚಿನ ಸೌಲಭ್ಯದೊರೆಯುತ್ತದೆ. ಯಾವುದೇ ತಮಿಳುನಾಡು ಕ್ಯಾತೆ ತೆಗೆಯಬಾರದು ತಮಿಳುನಾಡು ಕರ್ನಾಟಕ ಸರ್ಕಾರಗಳು ಈ ಒಂದು ವಿಚಾರಕ್ಕೆ ಪಾಕಿಸ್ತಾನ. ಇಂಡಿಯಾ, ಇದ್ದ ಹಾಗೇ ಅದು ಆಗದ ರೀತಿಯಲ್ಲಿ ಪಡೆದುಕೊಂಡು ಹೋದರೆ ತಮಿಳುನಾಡಿಗೆ ಹೆಚ್ಚಿನ ಸೌಲಭ್ಯ ದೊರೆಯುತ್ತದೆ. ಅದ್ದರಿಂದ ಸರ್ಕಾರಗಳು ಒಟ್ಟಿಗೆ ಸೇರಿ ಮೇಕೆದಾಟು ಅಣೆಕಟ್ಟನ್ನು ನಿರ್ಮಾಣಮಾಡಲೇ ಬೇಕು ಇಲ್ಲವಾದರೇ ಸರ್ಕಾರಕ್ಕೆ ಶಾಪತಟ್ಟುತ್ತದೆ. ಎಂಬ ಭರವಸೆ ಇರುತ್ತದೆ.ಮೇಕೆದಾಟು ಅಣೆಕಟ್ಟು ಕಟ್ಟಲು ಅನುಮತಿ ದೊರೆತರೆ ಮಾತ್ರ ಮತ ಚಲಾಯಿಸುತ್ತೇವೆ ಎಂದು ಮಂಜೇಗೌಡ – ರೈತ ಸಂಘ ಅಧ್ಯಕ್ಷರು ಮತ್ತು ಸಂಪತ್ ಕುಮಾರ್, ಅಧ್ಯಕ್ಷರು – ಮೇಕೆ ದಾಟು ಹೋರಾಟ ಸಮಿತಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸುದರು.

City Today News 9341997936