ಲೋಕ್‌ ಶಕ್ತಿ ಪಾರ್ಟಿ ವತಿಯಿಂದ ಲೋಕಸಭಾ ಚುನಾವಣೆಗೆ ಮೊದಲ ಪಟ್ಟಿ ಬಿಡುಗಡೆ

ಲೋಕ್‌ ಶಕ್ತಿ ಪಾರ್ಟಿ ವತಿಯಿಂದ ಲೋಕಸಭಾ ಚುನಾವಣೆಗೆ ಮೊದಲ ಪಟ್ಟಿ ಬಿಡುಗಡೆ


ಮೌಲ್ಯಾಧಾರಿತ ರಾಜಕಾರಣಿ, ಅಧಿಕಾರ ವಿಕೇಂದ್ರಿಕರಣದ ರೂವಾರಿಗಳು, ಮಾಜಿ ಮುಖ್ಯ ಮಂತ್ರಿ ದಿ। ಶ್ರೀ ರಾಮಕೃಷ್ಣ ಹೆಗಡೆಯವರು ಸ್ಥಾಪಿಸಿದ, ಲೋಕ್‌ ಶಕ್ತಿ ಪಾರ್ಟಿ ವತಿಯಿಂದ ಲೋಕಸಭಾ ಚುನಾವಣೆಗೆ ಮೊದಲ ಪಟ್ಟಿಯನ್ನು ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ರಾಕೇಶ್ ಲಿಮಾಯೇ, ಹಾಗೂ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿಗಳಾದ ಶ್ಯಾಮಲ್‌ರವರ ಆದೇಶದ ಮೇರೆಗೆ, ರಾಜ್ಯಾಧ್ಯಕ್ಷರು ಈ ದಿನ ಈ ಕೆಳಗಿನ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಲಿದ್ದಾರೆ.

ಪ್ರಸ್ತುತ ದೇಶದ ರಾಜಕಾರಣ, ತುಘಲಕ್ ಸಂಸ್ಕೃತಿಯ ಪರಂಪರೆಯಲ್ಲಿ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ನಡೆಯುತ್ತಿದೆ. ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ. ಬರೀ ಬಾಯಿಮಾತಿನಲ್ಲಿ ಮನೆ ಕಟ್ಟಿದರೆ ಸಾಲದು. ಅದು ಕಾರ್ಯರೂಪಕ್ಕೆ ಬರಬೇಕು. ಚುನಾವಣಾ ಬಾಂಡ್ ಬಗ್ಗೆ ರಾಜಕೀಯ ಪಕ್ಷಗಳ ಹಣದ ವಿವರಗಳನ್ನು ಬಹಿರಂಗಪಡಿಸಲು ಎಸ್. ಬಿ. ಐ. ಬ್ಯಾಂಕ್ ಸುಪ್ರೀಂ ಕೋರ್ಟ್ ನಲ್ಲಿ ಸಮಯ ಕೇಳುತ್ತಿರುವುದು ತುಂಬಾ ದುರದೃಷ್ಟಕರ ಸಂಗತಿ. ಕಾರಣ ದೇಶದ ರೈತರಿಗೆ ಟ್ರಾಕ್ಟರ್ ಸಾಲ ಬೆಳೆ ಸಾಲ ಇನ್ನಿತರೆ ಸಾಲಗಳ ವಿವರಗಳನ್ನು ಕ್ಷಣಮಾತ್ರದಲ್ಲಿ ಕೊಡುತ್ತಾರೆ ಆದರೆ ರಾಜಕೀಯ ಪಕ್ಷಗಳು ದಾನಿಗಳಿಂದ ಪಡೆದಿರುವ ಚುನಾವಣಾ ಬಾಂಡ್ ವಿವರಗಳನ್ನು ಬಹಿರಂಗಪಡಿಸಲು ಸಮಯ ಕೇಳುವುದು ನೋಡಿದರೆ, ರಾಜಕೀಯ ಪಕ್ಷಗಳನ್ನು ರಕ್ಷಣೆ ಮಾಡುವಂತೆ ಕಾಣುತ್ತದೆ ಸುಪ್ರೀಂ ಕೋರ್ಟ್‌ ನಲ್ಲಿ ಎಸ್. ಬಿ. ಐ. ಬ್ಯಾಂಕ್ ಹೆಚ್ಚಿನ ಸಮಯವನ್ನು ಕೋರಿದ ಮನವಿಯನ್ನು ಆಲಿಸಿದ ಕೋರ್ಟ್, ನಾಳೆ ಸಂಜೆ ಒಳಗಾಗಿ ದಾನಿಗಳ ಡೇಟಾವನ್ನು ನೀಡಬೇಕು ಎಂದು ತೀರ್ಪು ನೀಡಿರುವ ಸ್ವಾಗತ.

ಬರಗಾಲದಿಂದ ದೇಶಕ್ಕೆ ಅನ್ನ ಕೊಡುವ ರೈತನ ಪರಿಸ್ಥಿತಿ ತೀರಾ ಶೋಚನೀಯವಾಗಿದೆ. ಕುಡಿಯುವ ನೀರಿಗೆ ತತ್ವಾರವಾಗಿದೆ. ಬೆಳೆಗಳು, ಇಲ್ಲ. ಜಾನುವಾರುಗಳಿಗೆ ನೀರು ಮೇವಿನ ಕೊರತೆಯುಂಟಾಗಿದೆ. ರೈತನ ಜ್ವಲಂತ ಸಮಸ್ಯೆಗಳನ್ನು ಕೇಳುವವರು ಯಾರೂ ಇಲ್ಲ. ಇವರ ಮೇಲೆ ಅವರು, ಅವರ ಮೇಲೆ ಇವರು ಆರೋಪ ಪ್ರತ್ಯಾರೋಪ ಮಾಡುತ್ತಾ, ಕಾಲಹರಣ ಮಾಡುತ್ತಿದ್ದಾರೆ. ಆದ್ದರಿಂದ ರೈತರು ಈ ಬಾರಿ, ಚುನಾವಣೆಯಲ್ಲಿ ಎರಡೂ ಪಕ್ಷಗಳಿಗೆ ಬುದ್ದಿ ಕಲಿಸಲಿದ್ದಾರೆ. ಅದೇ ರೀತಿ ನಮ್ಮ ಪಕ್ಷಕ್ಕೆ ರಾಜ್ಯದ ಜನತೆ ಆಶೀರ್ವಾದ ವಾಡುತ್ತಾರೆ ಎನ್ನುವ ನಂಬಿಕೆ ನಮಗಿದೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಚಂದ್ರಶೇಖರ್.ವಿ ಸ್ಥಾವರಮಠ ರಾಜ್ಯಾಧ್ಯಕ್ಷರು, ಲೋಕ್ ಶಕ್ತಿ ಪಾರ್ಟಿ ರವರು ತಿಳಿಸಿದರು.

1. ಮೈಸೂರು – ಕೊಡಗು

– ಶ್ರೀ ಚಂದ್ರಶೇಖರ್ ವಿ. ಸ್ಥಾವರಮಠ.

2. ಮಂಡ್ಯ

ಶ್ರೀ ಎನ್. ಬಸವರಾಜ್

3. ತುಮಕೂರು

– ಶ್ರೀ ಆರ್. ಎಸ್. ರಂಗನಾಥ್,

4. ಹಾಸನ

ಶ್ರೀ ಹೊಳೆಯಪ್ಪ ಜೇನುಗವಿ.

5. ಉತ್ತರ ಕನ್ನಡ

ಶ್ರೀ ದಿನೇಶಚಂದ್ರ ಅಂಗಡಿಗೇರಿ.

6. ಚಾಮರಾಜನಗರ

– ಶ್ರೀ ಕೆ. ಎಸ್. ಲೋಕೇಶ್,

7. ಕೋಲಾರ

– ಶ್ರೀ ಎಂ. ಎಸ್. ಬದರಿನಾರಾಯಣ

8. ಚಿತ್ರದುರ್ಗ

– ಶ್ರೀಮತಿ ರೂಪಾ ಎಸ್.

9. ದಾವಣಗೆರೆ
– ಶ್ರೀ ಬಸವರಾಜಪ್ಪ ನೀರ್ಥಡಿ

10 ಬೆಂಗಳೂರು ಗ್ರಾಮಾಂತರ

– ಶ್ರೀ ಶರತ್ ಎಸ್.

ಪತ್ರಿಕಾ ಗೋಷ್ಠಿಯಲ್ಲಿ ಶ್ರೀ ಬಸವರಾಜ್ ಎನ್. ರಾಜ್ಯಾದ್ಯಕ್ಷರು, ರಾಜ್ಯ ಹಿಂದುಳಿದ ವರ್ಗ, ಶ್ರೀ ರಂಗನಾಥ ಆ‌ರ್. ಎಸ್. ರಾಜ್ಯ ಪ್ರಧಾನ ಕಾರ್ಯದರ್ಶಿ, ಶ್ರೀ ಲೋಕೇಶ್ ಕೆ. ಎಸ್. ಜಿಲ್ಲಾಧ್ಯಕ್ಷರು, ಮೈಸೂರು, ಶ್ರೀ ಯತೀಶ್ ರಾಜ್ಯ ಖಜಾಂಚಿಗಳು, ಶ್ರೀ ಸತೀಶ್, ರಾಜ್ಯ ಪ್ರಧಾನ ಕಾರ್ಯದರ್ಶಿ, ಶ್ರೀ ಬದರಿ ನಾರಾಯಣ್, ರಾಜ್ಯ ಮುಖಂಡರುಗಳು ಉಪಸ್ಥಿತರಿದ್ದರು.

City Today News 9341997936

ವಿಜಯವಾಣಿ ಪತ್ರಿಕೆ ವತಿಯಿಂದ ನಡೆದ ಬೆಂಗಳೂರು ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಾರೀ ಆಂಜನೇಯ ಸ್ವಾಮಿ ದೇವಸ್ಥಾನದ ಧರ್ಮದರ್ಶಿ ಡಾ. ಅಂಬರೀಷ್ ಜಿ ಅವರಿಗೆ ಬೆಂಗಳೂರು ರತ್ನ ಪ್ರಶಸ್ತಿ

ಬೆಂಗಳೂರಿನ ರಾಜಾಜಿನಗರ ಶೆರಟಾನ್ ಗ್ರಾಂಡ್ (ಓರಿಯನ್ ಮಾಲ್) ನಲ್ಲಿ ವಿಜಯವಾಣಿ ಪತ್ರಿಕೆ ವತಿಯಿಂದ ನಡೆದ ಬೆಂಗಳೂರು ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಾರೀ ಆಂಜನೇಯ ಸ್ವಾಮಿ ದೇವಸ್ಥಾನದ ಧರ್ಮದರ್ಶಿ ಡಾ. ಅಂಬರೀಷ್ ಜಿ ಅವರಿಗೆ ಬೆಂಗಳೂರು ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಾರಿಗೆ ಸಚಿವರಾದ ರಾಮಲಿಂಗರೆಡ್ಡಿ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಶಾಸಕ ಡಾ.ಸಿ.ಎನ್.ಅಶ್ವಥ್ ನಾರಾಯಣ್, ವಿಜಯವಾಣಿ ಪತ್ರಿಕೆಯ ವ್ಯವಸ್ಥಾಪಕ ನಿರ್ದೇಶಕ ಆನಂದ್ ಸಂಕೇಶ್ವರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

City Today News 9341997936

ವೃತ್ತಿ ಮತ್ತು ಕೌಶಲ್ಯ ಅಭಿವೃದ್ಧಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ  ಹಿಟಾಚಿ ಎನರ್ಜಿ ಉದ್ಯೋಗಿಗಳು ಎಲ್ಲಾ ಜಿ ಯೊಂದಿಗೆ ಕೇಂದ್ರೀಕೃತ ಗುಂಪು ಚರ್ಚೆಯನ್ನು ನಡೆಸಿದರು

ಹಿಟಾಚಿ ಎನರ್ಜಿಯಲ್ಲಿ, ನಮ್ಮ ನಿರಂತರ ಪ್ರಯತ್ನವು ಎಲ್ಲರಿಗೂ ಸುಸ್ಥಿರ ಇಂಧನ ಭವಿಷ್ಯವನ್ನು ಮುನ್ನಡೆಸುವತ್ತ ಇದೆ, ಆದರೆ ಅದು ಭಾರತದ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳನ್ನು ಮೀರಿ ಹೋಗುತ್ತದೆ. ನಮ್ಮ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಕಾರ್ಯಕ್ರಮಗಳ ಮೂಲಕ ಸಮಾಜದ ಸುಸ್ಥಿರ ಅಭಿವೃದ್ಧಿಗೆ ನಾವು ಸಕ್ರಿಯವಾಗಿ ಕೊಡುಗೆ ನೀಡುತ್ತೇವೆ. ವೈವಿಧ್ಯತೆ ಮತ್ತು ಒಳಗೊಳ್ಳುವಿಕೆಯ ಬಗ್ಗೆ ಜಾಗೃತಿ ಮೂಡಿಸುವ ನಮ್ಮ ನಿರಂತರ ಪ್ರಯತ್ನಗಳ ಭಾಗವಾಗಿ ನಾವು ಸಮುದಾಯ ಔಟ್ರೀಚ್ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೇವೆ, ಇದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಆಚರಣೆಯೊಂದಿಗೆ ಹೊಂದಿಕೆಯಾಗುತ್ತದೆ.
ಈ ಪ್ರೋಗ್ರಾಂ ಮೂಲಕಈ ಕಾರ್ಯಕ್ರಮದ ಮೂಲಕ, ಒಂದೆರಡು ವಾರಗಳಲ್ಲಿ, ನಾವು ಬೆಂಗಳೂರು, ಮೈಸೂರು ಮತ್ತು ವಡೋದರಾದ ಸರ್ಕಾರಿ ಶಾಲೆಗಳ 1000+ ವಿದ್ಯಾರ್ಥಿಗಳನ್ನು ತಲುಪಿದ್ದೇವೆ, ಹುಡುಗಿಯರ ಮೇಲೆ ವಿಶೇಷ ಗಮನ ಹರಿಸಿದ್ದೇವೆ. ಈ ತೊಡಗಿಸಿಕೊಳ್ಳುವಿಕೆಯ ಮೂಲಕ, ನಾವು ಆರೋಗ್ಯ ಮತ್ತು ಸ್ವಾಸ್ಥ್ಯ ಮತ್ತು ಜೀವನ ಕೌಶಲ್ಯಗಳನ್ನು ಸ್ಪರ್ಶಿಸಿದೆವು, ಮತ್ತು ನಮ್ಮ ಸ್ವಯಂಸೇವಕರ ತಂಡವು ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡಿತು, ಸಂವಹನ ನಡೆಸಿತು ಮತ್ತು ಮಾರ್ಗದರ್ಶನ ನೀಡಿತು.

ಬೆಂಗಳೂರು ಮತ್ತು ಮೈಸೂರಿನಲ್ಲಿ ನಾವು ಬಾಲಕಿಯರಿಗೆ ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ವಿಶೇಷ ಅಧಿವೇಶನವನ್ನು ಆಯೋಜಿಸಿದ್ದೇವೆ. ಹಿಟಾಚಿ ಎನರ್ಜಿ ಉದ್ಯೋಗಿಗಳು ಎಲ್ಲಾ ಜಿ ಯೊಂದಿಗೆ ಕೇಂದ್ರೀಕೃತ ಗುಂಪು ಚರ್ಚೆಯನ್ನು ನಡೆಸಿದರು (8th& 9th ತರಗತಿ) ವೃತ್ತಿ ಮತ್ತು ಕೌಶಲ್ಯ ಅಭಿವೃದ್ಧಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ. ಅಲ್ಲದೆ, ನಮ್ಮ ಸ್ವಯಂಸೇವಕರ ತಂಡವು ಚಟುವಟಿಕೆಯನ್ನು ಹೆಚ್ಚು ಆಕರ್ಷಕವಾಗಿಸಲು ಎಲ್ಲಾ ವಿದ್ಯಾರ್ಥಿಗಳಿಗೆ ಮೋಜಿನ ಚಟುವಟಿಕೆಗಳನ್ನು ಆಯೋಜಿಸಿತು.

City Today News 9341997936

ಲೋಕಸಭೆ ಚುನಾವಣೆ ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡದಿರುವುದು ಬಂಜಾರಾ ಸಮಾಜಕ್ಕೆ ಅನ್ಯಾಯ

ಲೋಕಸಭೆ ಚುನಾವಣೆ ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡದಿರುವುದು ಬಂಜಾರಾ ಸಮಾಜಕ್ಕೆ ಅನ್ಯಾಯ

ಕಾಂಗ್ರೆಸ್ ನಾಯಕರು ಬಂಜಾರಾ ಸಮಾಜದ ಪ್ರಾತಿನಿಧ್ಯ ಕುರಿತು, ಮರು ಪರಿಶೀಲನೆ ಮಾಡಲು ಮನವಿ

ರಾಜ್ಯದಲ್ಲಿ 45 ಲಕ್ಷಕ್ಕೂ ಅಧಿಕ ಬಂಜಾರ ಜನಸಂಖ್ಯೆ ಇದ್ದು ಕನಿಷ್ಠ 14 ಲೋಕಸಭಾ ಕ್ಷೇತ್ರಗಳಲ್ಲಿ ನಮ್ಮ ಸಮುದಾಯದ ಮತಗಳು ನಿರ್ಣಾಯಕ, ಸಾಮಾಜಿಕ ನ್ಯಾಯದಡಿ ರಾಜ್ಯದ 5 ಮೀಸಲು ಲೋಕಸಭೆ ಕ್ಷೇತ್ರಗಳಲ್ಲಿ ಅತೀ ಹೆಚ್ಚಿನ ಲಂಬಾಣಿ ಜನಸಂಖ್ಯೆ ಹಾಗೂ 2.5 ಲಕ್ಷಕ್ಕೂ ಹೆಚ್ಚು ಮತಗಳಿರುವ ವಿಜಯಪುರ ಮೀಸಲು ಕ್ಷೇತ್ರಕ್ಕೆ ಕಳೆದ 3 ದಶಕಗಳಿಂದ ಅಂದರೆ ಸತತವಾಗಿ 4 ಬಾರಿ ಬಂಜಾರ ಅಭ್ಯರ್ಥಿಗಳಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡಲಾಗಿತ್ತು. ವಿಜಯಪುರ ಮೀಸಲು ಕ್ಷೇತ್ರ ಬಂಜಾರ ಸಮಾಜಕ್ಕೆ ಬಂಜಾರ ಕೋಟಾ ಅಂತಾನೆ ಟಿಕೆಟ್ ನೀಡಲಾಗುತ್ತಿತ್ತು. ಆದರೆ ಈ ಬಾರಿ ನಮ್ಮ ಸಮಾಜಕ್ಕೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡದೆ ನಮ್ಮ ಸಮಾಜಕ್ಕೆ ಆಘಾತವನ್ನುಂಟು ಮಾಡಿದೆ. ಬಂಜಾರ ಸಮುದಾಯವನ್ನು ಬಿ.ಜೆ.ಪಿ ಸರ್ಕಾರ ನ್ಯಾಯಮೂರ್ತಿ ಸದಾಶಿವ ಆಯೋಗದ ಒಳಮೀಸಲಾತಿಯನ್ನು ಘೋಷಣೆ ಮಾಡಿ ಸರ್ಕಾರವನ್ನೇ ಕಳೆದುಕೊಂಡ ವಿಚಾರ ರಾಜ್ಯದ ಜನತೆಗೆ ಗೊತ್ತಿದೆ.

ಇದನ್ನು ಅರಿತು ಕಾಂಗ್ರೆಸ್ ರಾಜ್ಯ ನಾಯಕರು ಹಾಗೂ ಕಾಂಗ್ರೆಸ್ ಹೈಕಮಾಂಡ್ ಕೂಡಲೆ ನಮ್ಮ ಸಮಾಜಕ್ಕೆ ಟಿಕೆಟ್ ನೀಡುವುದರ ಕುರಿತು ಪಕ್ಷ ತಪ್ಪದೆ ಮರುಪರಿಶೀಲನೆ ಮಾಡಿ ಸ್ಥಳೀಯ ಗೆಲ್ಲುವ ಸಾಮರ್ಥ್ಯವುಳ್ಳ ಮಾಜಿ ಶಾಸಕರಾದ ಶ್ರೀ ಮನೋಹರ ಐನಾಪೂರ ರವರಿಗೆ ಟಿಕೆಟ್ ನೀಡಿ ಸಮಾಜಕ್ಕೆ ನ್ಯಾಯ ಕೊಡಲು ಸಮಸ್ತ ಬಂಜಾರ ಜನಾಂಗ ಕಾಂಗ್ರೆಸ್ ಪಕ್ಷವನ್ನು ಒತ್ತಾಯಿಸುತ್ತದೆ ಎಂದು ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘದ ಅಧ್ಯಕ್ಷ ಹಾಗೂ ಮಾಜಿ ಸಚಿವೆ ಶ್ರೀಮತಿ ಬಿ.ಟಿ.ಲಲಿತಾ ನಾಯಕ್ ರವರು ಕಾಂಗ್ರೆಸ್ ‘ಪಕ್ಷವನ್ನು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರುಗಳಾದ ಶ್ರೀ ಸಿದ್ಯಾನಾಯಕ್, ಶ್ರೀ ಅಶ್ವತ್ ನಾಯಕ್, ಶ್ರೀ ಪಿ.ಕೆ.ಖಂಡೋಬ, ಶ್ರೀ ಸುಬ್ರಮಣ್ಯ ನಾಯಕ್, ಶ್ರೀ ಶಂಕರ್ ನಾಯಕ್, ಶ್ರೀ ನರಸಿಂಹ ನಾಯಕ್, ಡಾ॥ಪರಮೇಶ್ ನಾಯಕ್ ಹಾಗೂ ಮಾಜಿ ಶಾಸಕರಾದ ಶ್ರೀ ಮನೋಹರ ಐನಾಪೂರ ಉಪಸ್ಥಿತರಿದ್ದರು.

City Today News 9341997936

ಸನ್ಮಾನ್ಯ ಮುಖ್ಯಮಂತ್ರಿಯವರು ಮತ್ತು ಶಾಸಕರು, ಶಿಫಾರಸ್ಸು ಪತ್ರಗಳನ್ನು ಸಹ ಪರಿಗಣಿಸದೇ ಕಡತಗಳನ್ನು ಅನುಮೋದನೆ ಮಾಡದೇ ಇರುವ ಬಗ್ಗೆ.

ಸನ್ಮಾನ್ಯ ಮುಖ್ಯಮಂತ್ರಿಯವರು ಮತ್ತು ಶಾಸಕರು, ಶಿಫಾರಸ್ಸು ಪತ್ರಗಳನ್ನು ಸಹ ಪರಿಗಣಿಸದೇ ಕಡತಗಳನ್ನು ಅನುಮೋದನೆ ಮಾಡದೇ ಇರುವ ಬಗ್ಗೆ.

ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ನಾನು ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಅನೇಕ ಉಪಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಸುಮಾರು 20-25 ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿರುತ್ತೇನೆ ಹಾಗೂ 2010ರಲ್ಲಿ ಬೆಂಗಳೂರಿನಿಂದ ಬಳ್ಳಾರಿ ತನಕ ಸುಮಾರು 325 ಕಿ.ಮೀ. ಗಳ ಪಾದಯಾತ್ರೆ ಮಾಡಿದ್ದು, ನಂತರ, ಮೇಕೆದಾಟು, ಭಾರತ್ ಜೋಡೋ ಯಾತ್ರೆ ಗುಂಡ್ಲುಪೇಟೆಯಿಂದ ರಾಯಚೂರು ತನಕ ಪಾದಯಾತ್ರೆಯ ಕಾಯಕ್ರಮದಲ್ಲಿ ಸಕ್ರಿಯ ಕಾರ್ಯಕರ್ತನಾಗಿ ಮಹಾತ್ಮಗಾಂಧಿ ವೇಷ ಹಾಕಿಕೊಂಡು ಭಾಗವಹಿಸಿರುತ್ತೇನೆ. ನಂಜನಗೂಡು (ಕಳಲೆ ಕೇಶವಮೂರ್ತಿ), ಕೊಪ್ಪಳ (ಬಸವರಾಜು ಹಿಟ್ನಾಳ್), ಆರ್ ಆರ್ ನಗರ (ಕುಸುಮ ಹೆಚ್), ಸಿ.ವಿ. ರಾಮನ್ ನಗರ (ಆರ್ ಸಂಪತ್‌ರಾಜ್), ಶಿವಾಜಿನಗರ (ರಿಜ್ವಾನ್ ಹರ್ಷದ್) ಸೇರಿದಂತೆ ಹಲವಾರು ಉಪ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಚುನಾವಣೆ ಪ್ರಚಾರದಲ್ಲಿ ಸಕ್ರಿಯವಾಗಿ ಶ್ರಮಿಸಿರುತ್ತೇನೆ.

ಪಕ್ಷಕ್ಕಾಗಿ ದುಡಿದಿರುವಂತಹ ನಮ್ಮಂತಹ ಸಾಮಾನ್ಯ ಕಾರ್ಯಕರ್ತರು ಆದ ನನಗೆ ತುಂಬಾ ಬೇಕಾದವರು ಆಗಿರುವಂತಹವರ ವರ್ಗಾವಣೆ ವಿಷಯಕ್ಕೆ ಸಂಬಂಧಿಸಿದಂತೆ ಸನ್ಮಾನ್ಯ ಮುಖ್ಯಮಂತ್ರಿಯವರಿಂದ ಮತ್ತು ಸಂಬಂಧಪಟ್ಟ ಸ್ಥಳೀಯ ವಿಧಾನಸಭಾ ಸದಸ್ಯರ ಶಿಫಾರಸ್ಸು ಪತ್ರಗಳನ್ನು ಸಂಬಂಧಪಟ್ಟ ಲೋಕೋಪಯೋಗಿ ಕಡತ ಅನುಮೋದನೆಗಾಹಗಿ ಕಡತವೊಂದನ್ನು ಸಂಬಂಧಪಟ್ಟ ಇಲಾಖೆಯ ಮೂಲಕ ಅನುಮೋದನೆಗಾಗಿ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ. ಈ ವಿಚಾರವಾಗಿ ನಾನು ಮಾನ್ಯ ಸಚಿವರನ್ನು ಸುಮಾರು 4-5 ಬಾರಿ ಖುದ್ದಾಗಿ ಭೇಟಿ ನೀಡಿ ಕಡತವನ್ನು ಅನುಮೋದನೆ ಮಾಡಿಕೊಡಿ ಎಂದು ವಿನಂತಿಸಿಕೊಂಡಾಗ ಮಾನ್ಯ ಸಚಿವರು ಆಪ್ತ ಕಾರ್ಯದರ್ಶಿಯಾಗಿರುವ ಶ್ರೀ ರಾಜಪ್ಪರವರಿಗೆ ಈ ವಿಚಾರವಾಗಿ ಕಡತ ಪರಿಶೀಲಿಸಿ ಎಂದು ತಿಳಿಸಿದರೂ ಸಹ ಶ್ರೀಯುತ ರಾಜಪ್ಪರವರು ನಮಗೆ ಆ ಜಾಗ ಬೇರೆಯವರಿಗೆ ಆಗಿದೆ ಎಂದು ಸಬೂಬು ಹೇಳುತ್ತಿದ್ದಾರೆ. ಇದೇ ರೀತಿ ಕಳೆದ ಕಡತದಲ್ಲಿಯೂ ಸಹ ಅನುಮೋದನೆಗಾಗಿ ಸಲ್ಲಿಸಿರುವ ಕಡತವು ವರ್ಗಾವಣೆ ಅವಧಿ ಮುಗಿದಿರುವುದರಿಂದ ಇಲಾಖೆಗೆ ವಾಪಸ್ಸು ಕಳುಹಿಸಿರುತ್ತೇನೆ ಎಂದು ತಿಳಿಸಿರುತ್ತಾರೆ.

ಸಾಮಾನ್ಯ ವರ್ಗಾವಣೆಯ ಅವಧಿಯಲ್ಲಿ ಇಲಾಖೆಯ ಸಚಿವರಿಗೆ ಮಾತ್ರ ಸಂಪೂರ್ಣ ಅಧಿಕಾರವಿದ್ದು, ತದನಂತರ ಮಾನ್ಯ ಮುಖ್ಯಮಂತ್ರಿಗಳು ಉಳಿದ ಅವಧಿಯಲ್ಲಿ ವರ್ಗಾವಣೆ ಮಾಡಲು ಸಂಪೂರ್ಣ ಅಧಿಕಾರ ಇರುತ್ತದೆ.

ಮಾನ್ಯ ಮುಖ್ಯಮಂತ್ರಿಯವರ ಅನುಮೋದನೆ ಪಡೆಯದೆ ಹಲವಾರು ವರ್ಗಾವಣೆಗಳನ್ನು ಮಾಡಿರುತ್ತಾರೆ. ಸರ್ಕಾರ ಆದೇಶ ಸಂಖ್ಯೆ ಲೋ.ಇ.235/ಸೇವಿಸು/2023 ದಿನಾಂಕ 17-01-2024ರ ಆದೇಶದಲ್ಲಿ ತಲಕಾಡು

ಇಲಾಖೆಯ ಅಧಿಕಾರಿಗಳು ವಯೋನಿವೃತ್ತಿ ಹೊಂದಿದ್ದು, ಸದರಿ ಜಾಗಗಳಿಗೆ ಸಂಬಂಧಪಟ್ಟ ಶಾಸಕರ ಪತ್ರವನ್ನು ತೆಗೆದುಕೊಂಡು ಬಂದರೂ ಸಹ ಪರಿಗಣಿಸದೆ ನಮಗೆ ಸಬೂಬು ಹೇಳುತ್ತಿದ್ದಾರೆ.

1. PWD/59/SAG/2024 ಸದರಿ ಕಡತವು ಮಾನ್ಯ ಸಚಿವರ ಕಚೇರಿಯಲ್ಲಿ ಅನುಮೋದನೆಗಾಗಿ ಇದ್ದು ಈ ತನಕ ಅನುಮೋದನೆ ಆಗಿರುವುದಿಲ್ಲ.

2. PWD/220/SAG/2024 – ថ덜덜된 김/ /, ಮುಗಿದಿರುತ್ತದೆ ಎಂದು ದುರುದ್ದೇಶಪೂರ್ವಕವಾಗಿ ಇಲಾಖೆಗೆ ಮಾನ್ಯ ಸಚಿವರ ಆಪ್ತ ಕಾರ್ಯದರ್ಶಿ ವಾಪಸ್ಸು ಹಾಕಿರುತ್ತಾರೆ. ತದನಂತರ 2-3 ವರ್ಗಾವಣೆಗಳ ಆದೇಶಗಳಾಗಿರುತ್ತವೆ.

ನಾವು ನಿಗಮ ಮಂಡಳಿಗಳಲ್ಲಿಯೋ ಅಥವಾ ಬೇರೆ ಯಾವುದೇ ಸ್ಥಾನಮಾನ ಕೇಳುತ್ತಿಲ್ಲ. ಪಕ್ಷ ಅಧಿಕಾರಕ್ಕೆ ಬರಲು ನಮ್ಮಂತಹ ಸಾವಿರಾರು ಕಾರ್ಯಕರ್ತರ ಶ್ರಮದಿಂದ ಇಂದು ರಾಜ್ಯದಲ್ಲಿ ಸರ್ಕಾರ ನಡೆಸುತ್ತಿದ್ದೀರ. ಇನ್ನು 4-5 ದಿನಗಳ ನಂತರ ಚುನಾವಣಾ ಆಯೋಗದಿಂದ ಯಾವುದೇ ಕ್ಷಣದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಾಗಬಹುದು.

ದಯವಿಟ್ಟು ಮೇಲ್ಕಂಡ ಕಡತವನ್ನು ಮಾನ್ಯ ಸಚಿವರ ಕಾರ್ಯಾಲಯದಿಂದ ಅತಿ ಶೀಘ್ರವಾಗಿ ತರಿಸಿಕೊಂಡು ಕಡತವನ್ನು ಅನುಮೋದನೆ ಮಾಡಿಕೊಡಬೇಕಾಗಿ ತಮ್ಮಲ್ಲಿ ಕೋರುತ್ತಾ, ಮುಂದಿನ ಆಗು-ಹೋಗುಗಳಿಗೆ ಶ್ರೀ ರಾಜಪ್ಪರವರೇ ನೇರ ಹೊಣೆಗಾರರಾಗಿರುತ್ತಾರೆ ಎಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಮುತ್ತುರಾಯಪ್ಪ ತಿಳುಸಿದರು.

City Today News 9341997936