ಬೌದ್ಧಿಕ ಆಸ್ತಿ ಹಕ್ಕುಗಳಲ್ಲಿನ ಸಮಕಾಲೀನ ಸಮಸ್ಯೆಗಳ ಕುರಿತು ರಾಷ್ಟ್ರೀಯ ಸಮ್ಮೇಳನ

ಬೌದ್ಧಿಕ ಆಸ್ತಿ ಹಕ್ಕುಗಳಲ್ಲಿನ ಸಮಕಾಲೀನ ಸಮಸ್ಯೆಗಳ ಕುರಿತು ರಾಷ್ಟ್ರೀಯ ಸಮ್ಮೇಳನವನ್ನು 02 ಮಾರ್ಚ್ 2024 (02.03.2024) ರಂದು ವಿಶ್ವೇಶ್ವರಯ್ಯ ಟ್ರೇಡ್ ಪ್ರಮೋಷನ್ ಸೆಂಟರ್ (ಕರ್ನಾಟಕ ಸರ್ಕಾರದ ಸಂಸ್ಥೆ) ಸಹಯೋಗದೊಂದಿಗೆ ಐಪಿಆರ್ ಸೆಲ್, ಬಿಎಂಎಸ್ ಕಾನೂನು ಮಹಾವಿದ್ಯಾಲಯದಲ್ಲಿ  ನಡೆಸಲಾಯಿತು.  ನಾಲೆಡ್ಜ್ ಸ್ಟೀಜ್ ಮತ್ತು ಮನುಪಾತ್ರ ಕಾನೂನು ಟೆಕ್ ಮಾಧ್ಯಮ ಪಾಲುದಾರರಾಗಿದ್ದ ಈ ಕಾರ್ಯಕ್ರಮವನ್ನು ಅಧ್ಯಾಪಕ ಕೋ-ಆರ್ಡಿನೇಟರ್‌ಗಳಾದ ರಾನಿಯಲ್ ನಿಯಾಡಾ ಮತ್ತು ಡಾ. ಸತೀಶ್ ಕೆ.ಎಸ್ ನಡೆಸಿಕೊಟ್ಟರು.
ಸಮ್ಮೇಳನವನ್ನು ಡಾ. ಪ್ರಭಾವತಿ ರಾವ್, ಐ ಪಿ ಉಪಕ್ರಮಗಳ ಅನುಕೂಲಕಾರರು, ಕರ್ನಾಟಕ ಸರಕಾರದ ಸಂಸ್ಥೆ ಇವರು ಉದ್ಘಾಟಿಸಿದರು.
ಶ್ರೀ ಚಂದ್ರಶೇಖರ ಪಾಟೀಲ್, ವಲಯ ಮುಖ್ಯಸ್ಥರು, ಮನುಪಾತ್ರ ಇವರು ಅಧ್ಯಕ್ಷತೆಯನ್ನು ವಹಿಸಿದ್ದರು.
ಉದ್ಘಾಟನೆಯ ಬಳಿಕ ಶ್ರೀಮತಿ ಬಿಂದು ಶರ್ಮಾ ಔಷಧೀಯ ಪೇಟೆಂಟ್‌ಗಳು ಮತ್ತು ಔಷಧಿಗಳಿಗೆ ಪ್ರವೇಶ, ಡಾ. ಬೃಂದಾ ಕೆ ವರ್ಮಾ ಜೈವಿಕ ತಂತ್ರಜ್ಞಾನ, ಜೆನೆಟಿಕ್ ಸಂಪನ್ಮೂಲಗಳು ಮತ್ತು ಸಾಂಪ್ರದಾಯಿಕ ಜ್ಞಾನ ಹಾಗೂ ಡಾ.  ಅರವಿಂದ್ ವಿಶ್ವನಾಥನ್ ಜಾಗತೀಕರಣ ಮತ್ತು ಐಪಿ ಸವಾಲುಗಳು ಈ ವಿಷಯಗಳ ಕುರಿತು ಉಪನ್ಯಾಸವನ್ನು ಮಂಡಿಸಿದರು.
ಲೇಖಕರ ಸಂಶೋಧನಾ ಪ್ರಬಂಧ ಮಂಡನೆಗಳ ಪ್ರಾರಂಭದೊಂದಿಗೆ ಮಧ್ಯಾಹ್ನದ ಅಧಿವೇಶನ ಪ್ರಾರಂಭವಾಯಿತು.  50 ಸಂಶೋಧನಾ ಪ್ರಬಂಧಗಳಲ್ಲಿ, ಈ ಕೆಳಗಿನವುಗಳನ್ನು ಆಯ್ಕೆ ಮಾಡಲಾಯಿತು.
ಅತ್ಯುತ್ತಮ ಸಂಶೋಧನಾ ಪ್ರಬಂಧ ವಿದ್ಯಾರ್ಥಿ ವಿಭಾಗ- ಜಯನ್ ವಿಷ್ಣುವರ್ಧನ ಮತ್ತು ನಾಜಿಯಾ ಎಸ್.
ಅತ್ಯುತ್ತಮ ಸಂಶೋಧನಾ ಪ್ರಬಂಧ ಅಕಾಡೆಮಿಶಿಯನ್ ವಿಭಾಗ – ಶ್ರೇಯಾ ಗೋಪಿ.
ಹಿರಿಯ ವಕೀಲರಾದ ಸಂಜಯ್ ಸೇಥಿಯಾ, ವ್ಯವಸ್ಥಾಪಕ ಪಾಲುದಾರರು ಲಾ ಸ್ಕ್ವೇರ್ ಮತ್ತು ಶ್ರೀ ಗೌರವ್ ಮಿಶ್ರಾ ಐ ಪಿ ವ್ಯವಸ್ಥಾಪಕರು, ವಕೀಲರು ಬನಾನಾ ಐ ಪಿ ಸಮಾರೋಪ ಸಮಾರಂಭದ ಅಧ್ಯ್ಷತೆಯನ್ನು ವಹಿಸಿದ್ದರು. ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ (ಡಾ.) ಅನಿತಾ ಎಫ್ ಎನ್ ಡಿಸೋಜಾ ಕಾರ್ಯಕ್ರಮದಲ್ಲಿ ಉಸ್ಥಿತರಿದ್ದರು.

,

City Today News 9341997936

Inspiring Journeys from Nowhere to Pinnacle of success: Siddharth Injeti Celebrates Storytelling Across Screens, Honoured at Ballari Institute’s Alumni Gathering 2024 Bangalore

Bangalore, March 2024 : The Ballari Institute of Technology and Management (BITM), formerly known as BEC, held its annual alumni meet, Punarmilana 2024, yesterday. The event was marked by the felicitation of renowned alumnus Siddharth Injeti, a former student of the esteemed institution and a name synonymous with success in the Indian entertainment industry. Injeti was also Part of Hindi Big boss Hosted by Salman Khan,He has directed 20+ ad films, Tv Series including Miss India,Miss supranational where KGF Girl Srinidhi Shetty was launched , Fashion shows like Amazon Fashion week and Webseries with Viacom18 Dinsep Plus Hotstar & Balaji telfilms(ALTT)


Siddharth injeti has served in different leadership capacities with Viacom 18 , Disney plus Hotstar  Allu entertainment and ALTT balaji his illustrious career spans across diverse dimensions of the entertainment industry. As a series director, he has helmed over 300 episodes for renowned shows like Bigg Boss Telugu, Siddharth has left an indelible mark on the Telugu entertainment industry.

Siddharth Injeti says ”I want to Direct films in Telugu & Hindi, Create Content across pan India”
Siddharth has orchestrated the release of 15+ web series across various platforms. From the noir-esque intrigue of ‘Bijli – Ek Rosy Dastan’ to the spine-chilling thrills of ‘Talab,’ and the light-hearted romantic comedy Honeymoon 911, his creations have garnered widespread acclaim. Injeti cites the works of iconic filmmaker Ram Gopal Varma as a source of inspiration, highlighting the enduring impact cinema can have on viewers.For him, a film truly begins in audience Mind when the end credits roll on the big screen—a sentiment that echoes through his own remarkable journey.

Siddharth’s creative genius extends beyond the director’s chair his work as a Show creator & Writer for acclaimed series such as “Talab” and “Ek rosy ki dastan – Bijli”. He has also ventured into production, producing the gripping shows different OTT platformsAs the former Core Team Member of PocketFM, a leading audio OTT platform, witnessed groundbreaking success, with milestones like 100 Million plays achieved under his guidance. Blockbuster audio series like Yeh Rista, Amarpali, Yakshini,  and Insta Millionaire stand as testaments to his influence in the audio entertainment space.

Siddharth’s dream is to create pan-India films that resonate with diverse audiences. His multilingual upbringing—conversing fluently in Hindi, Telugu, and Kannada—has equipped him to tell compelling stories that transcend boundaries.

Punarmilana 2024 promises to be a memorable event as they celebrate Siddharth Injeti’s achievements reconnect with fellow alumni, and ignite new aspirations. Siddharth Injeti’s presence will undoubtedly add a special touch to the occasion, serving as an inspiration to current students and alumni alike.

City Today News 9341997936

ಅರ ವಿ ಇನ್‌ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್, ಬೆಂಗಳೂರು.೨ ನೇ ಅಖಿಲ ಭಾರತ ಮೂಟ್ ಕೋರ್ಟ್ ಸ್ಪರ್ಧೆ, ೨೦೨೪ ದಿನಾಂಕ ೧ ರಿಂದ ೩ ನೇ ಮಾರ್ಚ್, ೨೦೨೪ರಂದು ಆಯೋಜಿಸುತ್ತಿದೆ

ಅರ ವಿ ಇನ್‌ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್, ಬೆಂಗಳೂರು.
೨ ನೇ ಅಖಿಲ ಭಾರತ ಮೂಟ್ ಕೋರ್ಟ್ ಸ್ಪರ್ಧೆ, ೨೦೨೪ ದಿನಾಂಕ ೧ ರಿಂದ ೩ ನೇ ಮಾರ್ಚ್, ೨೦೨೪ರಂದು ಆಯೋಜಿಸುತ್ತಿದೆ. ಈ ಕಾರ್ಯಕ್ರಮವನ್ನು ೧ ನೇ ಮಾರ್ಚ್, ೨೦೨೪ ರಂದು ಮಾಜಿ ನ್ಯಾಯಾಧೀಶರಾದ ಗೌರವಾನ್ವಿತ ಶ್ರೀ ಜಸ್ಟಿಸ್ ವಿ. ಗೋಪಾಲ ಗೌಡ ಅವರು ಉದ್ಘಾಟಿಸಿದರು, ಶ್ರೀ. ಕೆ.ಶಶಿ ಕಿರಣ್ ಶೆಟ್ಟಿ, ಕರ್ನಾಟಕದ ಅಡ್ವೊಕೇಟ್ ಜನರಲ್ ಮತ್ತು ಸಿಎ ಡಾ.ಎ.ಎಸ್. ವಿಷ್ಣು ಭರತ್, ಅಧ್ಯಕ್ಷರು, ಆಡಳಿತ ಮಂಡಳಿ, ಅರ್.ವಿ.ಐ.ಎಲ್.ಎಸ್ ಮತ್ತು ಟ್ರಸ್ಟಿ, ಅರ್ ವಿ  ಶಿಕ್ಷಣ ಸಂಸ್ಥೆಗಳು, ಬೆಂಗಳೂರು.  ಅರ್.ವಿ.ಐ.ಎಲ್.ಎಸ್ ನ ಪ್ರಾಂಶುಪಾಲರಾದ ಪ್ರೊ.(ಡಾ.) ಅಂಜಿನ ರೆಡ್ಡಿ ಕೆ.ಆರ್.ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.

City Today News 9341997936

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ 58ನೇ ಘಟಿಕೋತ್ಸವ-2024.

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ 58ನೇ ಘಟಿಕೋತ್ಸವ-2024. 4 ನೇ ಮಾರ್ಚ್, ಸೋಮವಾರ ಬೆಳಗ್ಗೆ 11.30 ಘಂಟೆಗೆ ಜಿ.ಕೆ.ವಿ.ಕೆ. ಅವರಣದ ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತರಾಷ್ಟ್ರೀಯ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ಶೈಕ್ಷಣಿಕ ವರ್ಷ 2022-23ರಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ 58ನೇ ಘಟಿಕೋತ್ಸವದಲ್ಲಿ ಒಟ್ಟಾರೆ 1244 ವಿದ್ಯಾರ್ಥಿಗಳಿಗೆ ವಿವಿಧ ಡಾಕ್ಟೋರಲ್, ಸ್ನಾತಕ ಹಾಗೂ ಸ್ನಾತಕೋತ್ತರ ವಿಷಯಗಳಲ್ಲಿ ಪದವಿ ಪ್ರದಾನ ಮಾಡಲಾಗುತ್ತದೆ. ಅದರಲ್ಲಿ, 870 ವಿದ್ಯಾರ್ಥಿಗಳು ವಿವಿಧ ಸ್ನಾತಕ ಪದವಿಗಳನ್ನು, 291 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ಹಾಗೂ 83 ವಿದ್ಯಾರ್ಥಿಗಳು ಡಾಕ್ಟೋರಲ್ ಪದವಿಗಳನ್ನು ಪಡೆಯಲಿದ್ದಾರೆ.

ಇದೇ ಸಮಾರಂಭದಲ್ಲಿ, ಡಾಕ್ಟರ್ ಆಫ್ ಫಿಲಾಸೊಫಿ ಪದವಿಯಲ್ಲಿ ಒಟ್ಟು 29 ಚಿನ್ನದ ಪದಕಗಳನ್ನು ಪ್ರದಾನ ಮಾಡಲಿದ್ದು, ಅದರಲ್ಲಿ 12 ವಿದ್ಯಾರ್ಥಿನಿಯರು ಹಾಗೂ 04 ವಿದ್ಯಾರ್ಥಿಗಳು ಕೃಷಿ ವಿಶ್ವವಿದ್ಯಾನಿಲಯದ 15 ಚಿನ್ನದ ಪದಕಗಳನ್ನು, 10 ದಾನಿಗಳ ಚಿನ್ನದ ಪದಕಗಳು ಹಾಗೂ 04 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ಹಂಚಿಕೊಂಡಿರುತ್ತಾರೆ.

ಮಾಸ್ಟರ್ ಪದವಿಯಲ್ಲಿ ಒಟ್ಟು 69 ಚಿನ್ನದ ಪದಕಗಳನ್ನು ಪ್ರದಾನ ಮಾಡಲಿದ್ದು, ಅದರಲ್ಲಿ 24 ವಿದ್ಯಾರ್ಥಿನಿಯರು ಹಾಗೂ 06 ವಿದ್ಯಾರ್ಥಿಗಳು ಕೃಷಿ ವಿಶ್ವವಿದ್ಯಾನಿಲಯ ನೀಡುವ 22 ಚಿನ್ನದ ಪದಕಗಳು ಹಾಗೂ 05 ಆವರಣದ ಚಿನ್ನದ ಪದಕಗಳನ್ನು, 31 ದಾನಿಗಳ ಚಿನ್ನದ ಪದಕಗಳು ಹಾಗೂ 11 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ಹಂಚಿಕೊಂಡಿರುತ್ತಾರೆ.

ಇದಲ್ಲದೆ, ಸ್ನಾತಕ ಪದವಿಯಲ್ಲಿ ಒಟ್ಟು 58 ಚಿನ್ನದ ಪದಕಗಳನ್ನು ಪ್ರದಾನ ಮಾಡಲಿದ್ದು, ಅದರಲ್ಲಿ 13 ವಿದ್ಯಾರ್ಥಿನಿಯರು ಹಾಗೂ 04 ವಿದ್ಯಾರ್ಥಿಗಳು ಕೃಷಿ ವಿಶ್ವವಿದ್ಯಾನಿಲಯ ನೀಡುವ 06 ಚಿನ್ನದ ಪದಕಗಳು, 04 ಆವರಣದ ಚಿನ್ನದ ಪದಕಗಳು, 40 ದಾನಿಗಳ ಚಿನ್ನದ ಪದಕಗಳು, 01 ಕೃವಿವಿಯ ಕ್ರೀಡಾ ಚಿನ್ನದ ಪದಕ ಹಾಗೂ 07 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ಹಂಚಿಕೊಂಡಿರುತ್ತಾರೆ.

ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ

58ನೆ ಘಟಿಕೋತ್ಸವ ಸಮಾರಂಭದಲ್ಲಿ ಒಟ್ಟಾರೆ 156 ಚಿನ್ನದ ಪದಕ ಹಾಗೂ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ವಿದ್ಯಾರ್ಥಿಗಳು ಪಡೆಯಲಿದ್ದು ಅದರಲ್ಲಿ 49 ವಿಧ್ಯಾರ್ಥಿನಿಯರಿಗೆ ವಿಶ್ವವಿದ್ಯಾನಿಲಯದ 45 ಚಿನ್ನದ ಪದಕ, 66 ದಾನಿಗಳ ಚಿನ್ನದ ಪದಕ ಹಾಗೂ 19 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ಅದರಂತೆ 14 ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯದ 08 ಚಿನ್ನದ ಪದಕ, 15 ದಾನಿಗಳ ಚಿನ್ನದ ಪದಕ ಹಾಗೂ 03 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು.

ಒಟ್ಟು 63 ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯದ 53 ಚಿನ್ನದ ಪದಕಗಳನ್ನು, 81 ದಾನಿಗಳ ಚಿನ್ನದ ಪದಕಗಳನ್ನು (53+81=134) ಹಾಗೂ 22 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು.

ಗೌರವ ಡಾಕ್ಟರೇಟ್:-

ಶ್ರೀ. ಎಂ. ಸಿ. ರಂಗಸ್ವಾಮಿ, ಪ್ರಗತಿ ಪರ ರೈತ, ದೊಡ್ಡಮಗೆ ಗ್ರಾಮ, ಅರಕಲಗೂಡು ತಾ., ಹಾಸನ ಜಿಲ್ಲೆ ಇವರ ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಕೆ ಮತ್ತು ಸಮಗ್ರ ಕೃಷಿ ಬೇಸಾಯವನ್ನು ಗುರುತಿಸಿ ಇವರಿಗೆ ಕೃವಿವಿ, ಬೆಂಗಳೂರು ತನ್ನ 58ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗುತ್ತಿದೆ ಎಂದು ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಲಾಯಿತು.

ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಡಾ.ವಿ.ಎಲ್.  ಮಧುಪ್ರಸಾದ್ – ವಿಸ್ತರಣಾ ನಿರ್ದೇಶಕರು, ಯುಎಎಸ್, ಜಿಕೆವಿಕೆ, ಬೆಂಗಳೂರು,ಡಾ.ಎಸ್.ವಿ.  ಸುರೇಶ -ಉಪಕುಲಪತಿಗಳು, ಯುಎಎಸ್, ಜಿಕೆವಿಕೆ, ಬೆಂಗಳೂರು,ಡಾ.ಕೆ.ಸಿ.  ನಾರಾಯಣಸ್ವಾಮಿ – ಶಿಕ್ಷಣ ನಿರ್ದೇಶಕರು ಮತ್ತು ಡಾ.ಬಸವೇಗೌಡ -ರಿಜಿಸ್ಟ್ರಾರ್ ರವರುಗಳು ಉಪಸ್ಥಿತರಿದ್ದರು.

City Today News 9341997936

12ನೆಯ ಅಕ್ಕ ವಿಶ್ವ ಕನ್ನಡ ಸಮ್ಮೇಳನ

12ನೆಯ ಅಕ್ಕ ವಿಶ್ವ ಕನ್ನಡ ಸಮ್ಮೇಳನ ಇದೇ ವರ್ಷ ಆಗಸ್ಟ್ 30, 31 ಮತ್ತು ಸೆಪ್ಟೆಂಬರ್ 1ರಂದು ರಿಚ್ಚಂಡ್, ವರ್ಜೀನಿಯದಲ್ಲಿ ನಡೆಯಲಿದೆ. ಕರ್ನಾಟಕದ ಹೊರಗಡೆ ನಡೆಯುತ್ತಿರುವ ಅತಿ ದೊಡ್ಡ ಕನ್ನಡದ ಉತ್ಸವ ಈ ಬಾರಿಯ ‘ಅಕ್ಕ ಸಮ್ಮೇಳನ’ ಎಂದು ತಿಳಿಸಲು ಹರ್ಷವೆನಿಸುತ್ತಿದೆ.

ಅಮೇರಿಕದ ರಾಜಧಾನಿ ನಗರವಾದ ವಾಷಿಂಗ್ಟನ್ ಡಿ.ಸಿ’ಯಿಂದ ದಕ್ಷಿಣಾಭಿಮುಖವಾಗಿ ಸುಮಾರು 110 ಮೈಲು ದೂರದಲ್ಲಿರುವ, ವರ್ಜೀನಿಯಾ ರಾಜ್ಯದ ರಾಜಧಾನಿ ರಿಚ್ಚಂಡ್ ನಗರದಲ್ಲಿ 12 ನೆಯ ಅಕ್ಕ ವಿಶ್ವ ಕನ್ನಡ ಸಮ್ಮೇಳನವನ್ನು ನಡೆಸಲು ನಿರ್ಧರಿಸಲಾಗಿದೆ. ಎರಡು ವರ್ಷಕ್ಕೊಮ್ಮೆ ನಡೆಸುವ ಸಮ್ಮೇಳನಕ್ಕೆ ಈ ಬಾರಿ ವಿಶ್ವದ ಎಲ್ಲಾ ಕಡೆಗಳಿಂದ ಸುಮಾರು ನಾಲ್ಕರಿಂದ ಐದು ಸಾವಿರ ಕನ್ನಡಿಗರು ಒಂದು ಸೂರಿನ ಕೆಳಗೆ ಬಂದು ಸೇರಲಿದ್ದಾರೆ. ವಿಶ್ವ ಕನ್ನಡ ಸಮ್ಮೇಳನವನ್ನು ವಿಜೃಂಭಣೆಯಿಂದ ಆಚರಿಸಲು ಸಂಭ್ರಮದ ಸಿದ್ಧತೆಗಳು ಈಗಾಗಲೇ ಪ್ರಾರಂಭವಾಗಿವೆ.

ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕರ್ನಾಟಕದಿಂದ ಮತ್ತು ಅಮೇರಿಕಾದ ಎಲ್ಲ ರಾಜ್ಯಗಳಿಂದ ಅನೇಕ ಗಣ್ಯ ವ್ಯಕ್ತಿಗಳು ಭಾಗವಹಿಸುವ ನಿರೀಕ್ಷೆಯಿದೆ. ಅತ್ಯುತ್ತಮ ಮನರಂಜನಾ ಕಾರ್ಯಕ್ರಮಗಳು, ಕರ್ನಾಟಕದ ವಿವಿಧ ರುಚಿಯಾದ ತಿಂಡಿ ಮತ್ತು ಊಟಗಳು., ವಿವಿಧ ವಾಣಿಜ್ಯ ಮತ್ತು ವ್ಯಾಪಾರ ಮೇಳ ಹಾಗೂ ಮಳಿಗೆಗಳು, ಕಲೆ ಮತ್ತು ಸಾಹಿತ್ಯ ವೇದಿಕೆಗಳು, ಮಹಿಳಾ ವೇದಿಕೆ, ಯುವ ವೇದಿಕೆ, ವಿದ್ಯಾ ಸಂಸ್ಥೆಗಳ ಹಳೆಯ ವಿದ್ಯಾರ್ಥಿಗಳ ಮಹಾಸಂಗಮ, ಅಕ್ಕ ಸಂಸ್ಥೆಯ ವಿವಿಧ ಕ್ರೀಡಾ ಕೂಟಗಳು, ಅಕ್ಕ ಐಡಲ್, Continuing Medical Education, ಪರಿಣಯ ವೇದಿಕೆ, ಆರೋಗ್ಯ ಮತ್ತು ಆಧ್ಯಾತ್ಮಿಕ ವೇದಿಕೆಗಳೇ ಮೊದಲಾದವು ನಮ್ಮ ಅಕ್ಕ ಸಮ್ಮೇಳನದ ಈ ಬಾರಿಯ ಕೆಲವು ವಿಶೇಷ ಆಕರ್ಷಣೆಗಳು.

ತಮ್ಮನ್ನೂ, ತಮ್ಮ ಕುಟುಂಬವನ್ನೂ ಅತಿ ಅದ್ದೂರಿ ‘ಅಕ್ಕ’ ಸಮ್ಮೇಳನಕ್ಕೆ ಗೌರವಪೂರ್ವಕವಾಗಿ ಮತ್ತು ಪ್ರೀತಿಯಿಂದ ಆಮಂತ್ರಣ ನೀಡುತ್ತಿದ್ದೇವೆ ಎಂದು ರವಿ ಬೋರೇಗೌಡ, ‘ಅಕ್ಕ’ ಅಧ್ಯಕ್ಷರು,ಮಾದೇಶ ಬಸವರಾಜು, ‘ಅಕ್ಕ’ ಕಾರ್ಯದರ್ಶಿ,ವತ್ಸ ರಾಮನಾಥನ್ ,ಕವಿತಾ ರಾಮಣ್ಣ ಮತ್ತು ಡಿ. ತಿಮ್ಮಪ್ಪ ನವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸುದರು..

City Today News 9341997936