108 ಅಂಬುಲೆನ್ಸ್  ಟೆಂಡರ್ ರದ್ದಾದ ಕುರಿತು ಹಾಗು ಇದಕ್ಕೆ ಸಂಬಂಧಪಟ್ಟಂತೆ ನಡಿಯುತ್ತಿರುವ ಇತರ ಅಕ್ರಮಗಳ ಕುರಿತಂತೆ ಸದನದ ಶೂನ್ಯ ವೇಳೆಯಲ್ಲಿ ಪ್ರಶ್ನಿಸಿದ ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಟಿ.ಎ.ಶರವಣ

ರಾಜ್ಯದಲ್ಲಿ ಡೆಂಘೀರುದ್ರನರ್ತನ ಹಿನ್ನೆಲೆಯಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸುವಂತೆ ಒತ್ತಾಯ ಕೇಳಿ ಬರುತ್ತಿದೆ. ಆದರೆ, 108 ಆ್ಯಂಬುಲೆನ್ಸ್ ಸೇವೆ ಒದಗಿಸುವ ಟೆಂಡರ್ ರದ್ದಾಗಿ ಏಳು ವರ್ಷ ಕಳೆದರೂ ಈವರೆಗೂ ಹೊಸಬರಿಗೆ ಟೆಂಡರ್ ನೀಡಲೂ ಆರೋಗ್ಯ ಇಲಾಖೆಗೆ ಸಾಧ್ಯವಾಗಿಲ್ಲ. ಇದು ತುರ್ತು ಆರೋಗ್ಯ ಸೇವೆಗಳ ಬಗೆಗಿನ ವಿಳಂಬ ಧೋರಣೆಯ ದ್ಯೋತಕ ಎಂಬ ಆರೋಪ ಕೇಳಿ ಬಂದಿದೆ ಎಂದು ಕರ್ನಾಟಕ ವಿಧಾನಪರಿಷತ್ತು ಶಾಸಕರಾದ ಟಿ. ಎ. ಶರವಣ ಅವರು ಪ್ರಶ್ನಿಸಿದರು.

ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಆ್ಯಂಬುಲೆನ್ಸ್ ಸೇವೆಯಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ 2023ರ ಜು.22ರಂದು ತಾಂತ್ರಿಕ ಸಲಹಾ ಸಮಿತಿ ನೇಮಿಸಲಾಗಿತ್ತು. ಈ ತಾಂತ್ರಿಕ ಸಲಹಾಸಮಿತಿ ವರದಿ ನೀಡಿ ತಿಂಗಳುಗಳೇ ಕಳೆದರೂ ಈವರೆಗೂ ಟೆಂಡರ್ ಕರೆಯಲು ಉನ್ನತ ಮಟ್ಟದ ಸಮಿತಿ ಒಪ್ಪಿಗೆ ನೀಡಿಲ್ಲ. ಹೀಗಾಗಿ ಆ್ಯಂಬುಲೆನ್ಸ್ ಸೇವೆಗೆ ಹಿರಿದಿರುವ ಗ್ರಹಣ ಮುಂದುವರೆದಿದೆ ರಾಜ್ಯದಲ್ಲಿ ತುರ್ತು ಅನಾರೋಗ್ಯ ಸಂಧರ್ಭಗಳಲ್ಲಿ ಆರೋಗ್ಯ ಕವಚ ಆ್ಯಂಬುಲೆನ್ಸ್ ಸೇವೆ ಒದಗಿಸಲು 2007ರಲ್ಲಿ ಟೆಂಡರ್ ಪಡೆ ದಿದ್ದ ಜಿವಿಕೆಯ ಸಂಸ್ಥೆಯ ಗುತ್ತಿಗೆಯನ್ನು ಆಸಮರ್ಪಕ ಸೇವೆ ಹಾಗೂ ನಿಯಮ ಉಲ್ಲಂಘನೆ ಕಾರಣ ನೀಡಿ 2019ರಲ್ಲಿ ಟೆಂಡರ್ ರದ್ದುಪಡಿಸಿತ್ತು ಜೆವಿಕೆ-ಇಎಂಆ‌ರ್ಇ ನಂಸ್ಥೆಯು ವಿಳಂಬ ಸೇವೆ, ಜಿಐಎಸ್ ಆಳವಡಿಕೆ ಮಾಡದಿರುವುದು ಸಿಬ್ಬಂದಿಯ ನಿರ್ವಹಣೆ ವೈಫಲ್ಯ ಸೇರಿದಂತೆ ಟೆಂಡರ್ ಷರತ್ತುಗಳನ್ನು ಉಲ್ಲಂಘಿಸಿದೆ ಎಂಬಕಾರಣಕ್ಕೆ ಟೆಂಡ‌ರ್ ರದ್ದುಪಡಿಸಲಾಗಿತ್ತು ಬಳಿಕ ಬಾರಿ ಟೆಂಡರ್ ಕರೆದಿದ್ದರೂ ಯಾರೊಬ್ಬರೂ ಭಾಗವಹಿಸಿರಲಿಲ್ಲ. ಹೀಗಾಗಿ 2019ರಲ್ಲಿ ಜಿವಿಕೆ ಹಾಗೂ ತುರ್ತು ಗ್ರೀನ್ ಹೆಲ್ತ್ ಜತೆ ಒಡಂಬಡಿಕೆ ಆಧಾರದ ಮೇಲೆ ಆ್ಯಂಬುಲೆನ್ಸ್ ಸೇವೆನೀಡಲಾಗುತ್ತಿದೆ ಆದರೆ, 7 ವರ್ಷದಿಂದ ಅಧಿಕೃತ ಟೆಂಡರ್ ಪಡೆದಿರುವ ಆ್ಯಂಬುಲೆನ್ಸ್ ಸೇವಾದಾರ ಸಂಸ್ಥೆ ಇಲ್ಲದಂತಾಗಿದೆ. ಅದುದರಿಂದ, ಆ್ಯಂಬುಲೆನ್ಸ್ ಸೇವೆಯಲ್ಲಿ ಸತತವಾಗಿ ವ್ಯತ್ಯಯವಾಗುತ್ತಿದೆ ಎಂದು ವಿವರಣೆ ನೀಡಿದರು.

ಮುಂದುವರೆದು, 108 ಆ್ಯಂಬುಲೆನ್ಸ್ ಸೆ ಸೇವೆ ಕುರಿತು 2014 19ರವರೆಗಿನ ಪ್ರಕರಣಗಳ ಬಗ್ಗೆ ಸಿಎಜಿ ವರದಿ ಸಲ್ಲಿಸಿದ್ದು ಶೇ.60ರಷ್ಟು ಎಮರ್ಜನ್ಸಿ ಪ್ರಕರಣಗಳಲ್ಲಿ 100 ಆ್ಯಂಬು ಲೆನ್ಸ್ ಸೇವೆ ನಿಗದಿತ ಸಮಯಕ್ಕೆ ದೊರೆತಿಲ್ಲ. ಮತ್ತು, 51 ಲಕ್ಷ ಎಮರ್ಜೆನ್ಸಿಪ್ರಕರಣಗಳಲ್ಲಿ 41.9 ಲಕ್ಷ ಮಾತ್ರ ಆ್ಯಂಬುಲೆನ್ಸ್ ನಿಯೋಜಿಸಲಾಗಿತ್ತು. ಈ ಹಿನ್ನೆಲೆಯಲ್ಲಿಟೆಂಡರ್ ರದ್ದುಪಡಿಸಿ ಬೇರೆ ಕಂಪನಿಗೆಟೆಂಡ‌ರ್ ನೀಡಲು ನಿರ್ಧರಿಸಲಾಗಿತ್ತು ಆದರೆ ಒಡಂಬಡಿಕೆ ಆಧಾರದ ಮೇಲೆ 746 ಆ್ಯಂಬುಲೆನ್ಸ್ ನಿರ್ವಹಿಸಲು ಅವಕಾಶ ನೀಡಲಾಗಿತ್ತು ಆದರೆ ಒಡಂಬಡಿಕೆ ಮಾಡಿಕೊಂಡಿರುವ ಸಂಸ್ಥೆಗೆ ಸರ್ಕಾರ ಕಾಲಕಾಲಕ್ಕೆ ವೇತನ ನೀಡುತ್ತಿದ್ದರೂ ಅವರು ಸಿಬ್ಬಂದಿಗೆ ನೀಡುತ್ತಿಲ್ಲ, ಗುತ್ತಿದೆ ಜತೆಗೆ ಸರ್ಕಾರಿ ಆಸ್ಪತ್ರೆ ಬದಲಿಗೆ ಖಾಸಗಿ ಆಸ್ಪತ್ರೆಗೆ ರೋಗಿಯನ್ನು ಕರೆದುಕೊಂಡು ಹೋಗುವುದು ರೋಗಿಯ ಬಳಿ ಹಣ ಪಡೆಯುವುದು ಸೇರಿದಂತೆ ಹಲವು ಸಮಸ್ಯೆಗಳಿಗೆ ಈವರೆಗೆ ಪರಿಹಾರ ಕಂಡುಕೊಂಡಿಲ್ಲ. ಆದ್ದರಿಂದ ಈ ನಿಟ್ಟಿನಲ್ಲಿ ತುರ್ತಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.

City Today News 9341997936

ಹಾಲಿ ಮಹಿಳಾ ಮತ್ತು ಮಕ್ಕಳ ಸಚಿವೆಯಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಳರ್ ರವರ ಏಕಪಕ್ಷೀಯ ನಿರ್ಧಾರಕ್ಕೆ ಸಂಯುಕ್ತ ಸಂಘರ್ಷ ಸಮಿತಿಯಿಂದ ತೀವ್ರ ವಿರೋಧ

ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಯುಕ್ತ ಸಂಘರ್ಷ ಸಮಿತಿಯಲ್ಲಿರುವ ಸಂಘಟನೆಗಳು ತೆಗೆದುಕೊಂಡ ನಿರ್ಣಯಗಳು

ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ

ದಿನಾಂಕ : 19-07-2024ರಂದು ಬೆಳಗ್ಗೆ 11-30ಕ್ಕೆ ಎಲ್ಲಾ ಸಂಯುಕ್ತ ಸಂಘರ್ಷ ಸಮಿತಿಯ ಅಂಗನವಾಡಿ ಸಂಘಟನೆಗಳ ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ಕರ್ನಾಟಕ ಸರ್ಕಾರ ಶಿಶು ಅಭಿವೃದ್ಧಿ ಯೋಜನೆಯ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರ/ಸಹಾಯಕಿಯರ ಸಮಸ್ಯೆಗಳ ಬಗ್ಗೆ ಸುಧೀರ್ಘವಾಗಿ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಚರ್ಚೆ ನಡೆಸಿದ ನಂತರ ಎಲ್ಲಾ ಸಂಘಟನೆಗಳು ಸರ್ವಾನುಮತದಿಂದ ಈ ಕೆಳಕಂಡ ನಿರ್ಣಯಗಳನ್ನು ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

1) ಸರ್ವೋಚ್ಛ ನ್ಯಾಯಾಲಯ ಅಂಗನವಾಡಿ ಕಾರ್ಯಕರ್ತೆಯರಿಗೆ / ಸಹಾಯಕಿಯರಿಗೆ ನಿವೃತ್ತಿ ಉಪಧನ (ಗ್ರಾಚ್ಯುಟಿ) ಬಗ್ಗೆ ಆದೇಶ ಮಾಡಿರುತ್ತದೆ. ಆ ಆದೇಶದ ಪ್ರಕಾರ ನಿವೃತ್ತಿಯಾದ ಅಂಗನವಾಡಿ ಕಾರ್ಯಕರ್ತೆಯರು/ಸಹಾಯಕಿಯರು 1975 ರಿಂದ ಕೆಲಸ ಮಾಡುತ್ತಿದ್ದು ಕಾಲ ಕಾಲಕ್ಕೆ ನಿವೃತ್ತಿಯಾದ ದಿನಾಂಕಗಳಲ್ಲಿ ಅವರಿಗೆ ಗ್ರಾಚ್ಯುಟಿ (ನಿವೃತ್ತಿ ಉಪಧನ) ಕೊಡುವ ಬಗ್ಗೆ ಸರ್ವೋಚ್ಛ ನ್ಯಾಯಾಲಯ ಏಪ್ರಿಲ್ 25, 2022ರಲ್ಲಿ ಆದೇಶಿಸಿದೆ. ಆದರೆ ಕರ್ನಾಟಕ ಸರ್ಕಾರ 01-04-2023ರಿಂದ ಅನ್ವಯವಾಗುವಂತೆ ಗ್ರಾಚ್ಯುಟಿ (ಉಪಧನ) ಬಗ್ಗೆ ಮಾಡಿರುವ ಆದೇಶವನ್ನು ಕೂಡಲೇ ವಾಪಸ್ ಪಡೆದು ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಪ್ರಕಾರ ನಿವೃತ್ತಿಯಾದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೆ /ಸಹಾಯಕಿಯರಿಗೆ ಗ್ರಾಚ್ಯುಟಿ (ಉಪಧನ) ನೀಡಬೇಕೆಂದು ಸಭೆಯಲ್ಲಿ ಒತ್ತಾಯಿಸಲಾಯಿತು.

2) ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್.ಕೆ.ಜಿ., ಯು.ಕೆ.ಜಿ. ಶಿಕ್ಷಣ ನೀಡಲು ನಿರ್ಧರಿಸಿದ್ದು ಅಂಗನವಾಡಿ ಕೇಂದ್ರಗಳನ್ನು ಸರ್ಕಾರಿ ಮಾಂಟಸ್ಸರಿ ಎಂದು ಹೊಸದಾಗಿ 22ನೇ ಜುಲೈ 2024 ರಿಂದ ನಾಮಕರಣ ಮಾಡಲು ಸರಿಯಷ್ಟೇ. ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್.ಕೆ.ಜಿ., ಯು.ಕೆ.ಜಿ. ಮಾಡುವುದು ಸ್ವಾಗತನೀಯ. ಆದರೆ ಇದಕ್ಕೆ ಸಂಬಂಧಿಸಿದಂತೆ ಪೂರ್ವಭಾವಿಯಾಗಿ ಅಂಗನವಾಡಿ ಸಂಘಟನೆಗಳು ಕಳೆದ 35 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದು ಆ ಸಂಘಟನೆಗಳ ಅಭಿಪ್ರಾಯವನ್ನು ಪಡೆಯದೇ ಸರ್ಕಾರ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಳ್ಳುತ್ತಿರುವುದನ್ನು ಸಂಯುಕ್ತ ಸಂಘರ್ಷ ಸಮಿತಿಯ ಎಲ್ಲಾ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತವೆ. ಇದರ ಬಗ್ಗೆ ಎಲ್ಲಾ ಸಂಘಟನೆಗಳ ಮುಕ್ತ ಅಭಿಪ್ರಾಯಗಳನ್ನು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದು ಇಲಾಖೆಯ ಆದ್ಯ ಕರ್ತವ್ಯ. ಇದಕ್ಕೆ ಬದಲಾಗಿ ಅಂಗನವಾಡಿ ಸಂಘಟನೆಗಳನ್ನು ಸದರಿ ವಿಷಯದಲ್ಲಿ ಹೊಡೆದು ಆಳುವ ಇಲಾಖೆಯ ಅಧಿಕಾರಿಗಳ ಮತ್ತು ಸಚಿವರ ಅಭಿಪ್ರಾಯಗಳನ್ನು ಎಲ್ಲಾ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತವೆ. ರಾಜ್ಯದಲ್ಲಿರುವ 61,876 ಅಂಗನವಾಡಿ ಕೇಂದ್ರಗಳಲ್ಲಿ ಎಲ್.ಕೆ.ಜಿ., ಯು.ಕೆ.ಜಿ.ಯನ್ನು ಹಂತ ಹಂತವಾಗಿ ಪ್ರಾರಂಭಿಸುವುದಲ್ಲದೇ ಅಂಗನವಾಡಿ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಯಕರ್ತೆಯರಿಗೆ ತರಭೇತಿ, ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಸಭೆಯಲ್ಲಿ ಎಲ್ಲಾ ಸಂಘಟನೆಗಳ ಅಭಿಪ್ರಾಯ ವ್ಯಕ್ತಪಡಿಸಿವೆ.

3) ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಆಗುತ್ತಿರುವ ಪೌಷ್ಠಿಕ ಆಹಾರದ ಗುಣಮಟ್ಟ ಸರಿಯಿಲ್ಲದ ಕಾರಣ ಫಲಾನುಭವಿಗಳು ಆ ಪೌಷ್ಠಿಕ ಆಹಾರ ತಿನ್ನುತ್ತಿಲ್ಲ. ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ನಿಯಮಾವಳಿಗಳಲ್ಲಿ ಸ್ಥಳೀಯ ಪೌಷ್ಠಿಕ ಆಹಾರ ನೀಡಲು ನಿಯಮವಿದ್ದರು ಅದನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಿ ಗುತ್ತಿಗೆದಾರರಿಗೆ, ಅಧಿಕಾರಿಗಳಿಗೆ ಹಣ ಮಾಡಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಿರುವ ನೀತಿಯನ್ನು ನಮ್ಮ ಎಲ್ಲಾ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತವೆ.

4) ಅಂಗನವಾಡಿ ಕಾರ್ಯಕರ್ತೆಯರ/ಸಹಾಯಕಿಯರ ಹಾಗೂ ಫಲಾನುಭವಿಗಳಿಗೆ ಸಂಬಂಧಿಸಿದಂತೆ ಪ್ರಾರಂಭದಿಂದ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತಿತ್ತು. ಆದರೆ ಹಾಲಿ ಮಹಿಳಾ ಮತ್ತು ಮಕ್ಕಳ ಸಚಿವೆಯಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಳರ್ ರವರು ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವುದನ್ನು ಸಂಯುಕ್ತ ಸಂಘರ್ಷ ಸಮಿತಿ ತೀವ್ರವಾಗಿ ವಿರೋಧಿಸುತ್ತದೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘಟನೆಗಳ ಸಂಯುಕ್ತ ಸಂಘರ್ಷ ಸಮಿತಿ ಬೆಂಗಳೂರು  ವತಿಯಿಂದ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಲಾಯಿತು.

City Today News 9341997936

ಪ್ಯಾನಿಕ್ ಬಟನ್ ಮತ್ತು ಜಿ.ಪಿ.ಆರ್.ಎಸ್,  ಟ್ಯೂರ್ ಅಂಡ್ ಟ್ರಾವೆಲ್ಸ್ ರವರಿಗೆ ಯಾವುದೇ ರೀತಿಯ ಉಪಯೋಗ ಇಲ್ಲದ ಕಾರಣದಿಂದ ರದ್ದು ಮಾಡಲು ರಾಜ್ಯ ಸರ್ಕಾರಕ್ಕೆ ಆಗ್ರಹ.

ಚಾಲಕರಿಗೆ ಮತ್ತು ಮಾಲೀಕರಿಗೆ ಸಾಕಷ್ಟು ತೊಂದರೆ ಉಂಟಾಗಿರುವ ಎಫ್.ಸಿ ಆಗದಂತೆ ಸಾಕಷ್ಟು ಜನರಿಗೆ ತೊಂದರೆ ಉಂಟಾಗಿರುತ್ತದೆ ಆದ ಕಾರಣದಿಂದ ವಾಹನದ ಯೆಲ್ಲೋ ಬೋರ್ಡ್ ಮಾಲೀಕರಿಗೆ ಸಂಕಷ್ಟದಲ್ಲಿದ್ದಾರೆ.

ಈ ನಮ್ಮ ರಾಜ್ಯ ಸರ್ಕಾರವು ಇದನ್ನು ಪರಿಶೀಲಿಸಿ ಸೂಕ್ತವಾದ ನ್ಯಾಯ ಒದಗಿಸಿ ಪ್ಯಾನಿಕ್ ಬಟನ್ ಮತ್ತು ಜಿ.ಪಿ.ಆರ್.ಎಸ್ ಟ್ಯೂರ್ ಅಂಡ್ ಟ್ರಾವೆಲ್ಸ್ ರವರಿಗೆ ಇದರಿಂದ ಯಾವುದೇ ಉಪಯೋಗವಿಲ್ಲ ಕಾರಣ ನಾವು ಹೊರಗಡೆ ಅಥವಾ ಹೊರರಾಜ್ಯದಲ್ಲಿ ಓಡಾಡುವ ಸಮಯದಲ್ಲಿ ವಯಸ್ಸಾಗಿರುರವರಾಗಲಿ, ಮಕ್ಕಳಾಗಲಿ ಅಥವ ನಿದ್ದೆ ಮಾಡುವ ಸಮಯದಲ್ಲಾಗಲಿ ಗೊತ್ತಿದ್ದೋ ಅಥವ ಗೊತ್ತಿಲ್ಲದೆಯೋ ಆ ಬಟನ್‌ ಅನ್ನು ಒತ್ತಿದರೆ 1) ಚಾಲಕರಿಗೆ ಪೋಲೀಸರಿಂದ ಸಾಕಷ್ಟು ತೊಂದರೆ ಆಗುತ್ತದೆ 2) ಈ ಪ್ಯಾನಿಕ್ ಬಟನ್ ಮತ್ತು ಜಿ.ಪಿ.ಆರ್.ಎಸ್ ಐಟಿ ಕಂಪನಿಗಳಲ್ಲಿ ಒಡಾಡುವಂತಹ ಟಿ.ಟಿ ಗಾಡಿ ಹಾಗೂ ಕಾರುಗಳು ಇಂತವರಿಗೆ ಅವಶ್ಯಕತೆ ಇರುತ್ತದೆ 3) ಟ್ಯೂರ್ ಅಂಡ್ ಟ್ರಾವಲ್ಸ್ ಹೊರಗಡೆ ಮತ್ತು ಒಳಗಡೆ ಅಂದರೆ ರಾಜ್ಯ ಹಾಗೂ ಹೊರರಾಜ್ಯ ಓಡಾಡುವುದರಿಂದ ನಮ್ಮ ಚಾಲಕರಿಗೆ ಯಾವುದೇ ರೀತಿಯ ಉಪಯೋಗ ಇರುವುದಿಲ್ಲ

4) ಇತ್ತೀಚಿನ ದಿನಗಳಲ್ಲಿ ಪ್ಯಾನಿಕ್ ಬಟನ್ ಮತ್ತು ಜಿ.ಪಿ.ಆ‌ರ್.ಎಸ್ ಆದೇಶದಿಂದ ಸಾವಿರಾರು ಗಾಡಿಗಳು ಎಫ್.ಸಿ ಮತ್ತು ಫಾಸಿಂಗ್ ಆಗುತ್ತಿಲ್ಲ 5) ಕರ್ನಾಟಕ ರಾಜ್ಯದ ಒಟ್ಟು ಟೆಂಪೋ ಟ್ರಾವೆಲ್ ವಾಹನಗಳು ಮಠಕ್ಕೆ ಓಡಾಡುವ ವಾಹನಗಳು 3% 6) ಸಾಲಾ ಕಾಲೇಜುಗಳಲ್ಲಿ 20% 7) ವಿವಧ ರೀತಿಯ ಕಂಪನಿಗೆ 55% 7) ಪ್ರವಾಸಕ್ಕೆ 40% 8) ಅಂಗಡಿ ದಿನಸಿಗೆ 5% 9) ಕ್ಯಾರಿವ್ಯಾನ್‌ 2% 10) ಪ್ರವಾಸ ವಾಹನ (ಟಿ.ಟಿ) ಮಾಲೀಕರು ಒಟ್ಟು ಕಟ್ಟುತ್ತಿರುವ ತೆರಿಗೆ 1 ವರ್ಷಕ್ಕೆ

1) 21,200 ಟಾಕ್ಸ್

2) 2,800 ಎಫ್.ಸಿ

3) 35,000 ವಿಮೆ ಕಟ್ಟುತ್ತಿದ್ದಾರೆ ಹಾಗೂ ಈ ಟಿ.ಟಿ ವಾಹನವನ್ನು ಚಲಾಯಿಸುವವರ ಸ್ಥಿತಿಗತಿಗಳನ್ನು ತಿಳಿದುಕೊಳ್ಳಬೇಕು ತಮ್ಮಗಳಿಗೆ ಒಂದು ವರ್ಷದಲ್ಲಿ ಕೇವಲ ಆರು ತಿಂಗಳು ಮಾತ್ರ ಬಾಡಿಗೆ ಇರುತ್ತದೆ ಇನ್ನುಳಿದ 6 ತಿಂಗಳು ಮನೆ ಬಾಗಿಲಿನಲ್ಲಿ ನಿಂತಿರುತ್ತದೆ ಆದರೂ ಸಹ ಟಾಕ್ಸನ್ನು ಕಟ್ಟುತ್ತಿರುತ್ತೇವೆ. ಆದರೆ ಐಟಿಬಿಟಿ ಕಂಪನಿಗಳಲ್ಲಿ ಓಡಾಡುವ ವಾಹನಗಳಿಗೆ ಒಂದು ವರ್ಷ ಪೂರ್ತಿಯಾಗಿ ಬಾಡಿಗೆಯು ಸಿಗುತ್ತದೆ. ಆದ್ದರಿಂದ ಇದನ್ನೆಲ್ಲಾ ಪರಿಗಣಿಸಿ ದಯಮಾಡಿ ತಾವು ಈ ಪ್ಯಾನಿಕ್ ಬಟನ್ ಮತ್ತು ಜಿ.ಪಿ.ಆರ್.ಎಸ್ ನ್ನು ರದ್ದುಗೊಳಿಸಲೇ ಬೇಕೆಂದು ಬಡಚಾಲಕರ ಮತ್ತು ಬಡಮಾಲೀಕರ ವಿನಂತಿ ಈ ವಿನಂತಿಯನ್ನು 7 ದಿನಗಳ ಒಳಗಾಗಿ ಈ ನಮ್ಮ ಟೆಂಪೋ ಟ್ರಾವೆಲ್ ರವರ ಸಮಸ್ಯೆಯನ್ನು ಬಗೆಹರಿಸಿಕೊಡಬೇಕೆಂದು ತಮ್ಮಲ್ಲಿ ಹೃದಯಪೂರ್ವಕವಾಗಿ ಮನವಿ ಮಾಡಿಕೊಳ್ಳುತ್ತೇವೆ.

ನಮ್ಮ ಮಾವವಿ ಈಡೇರಿಸಲು ತಪ್ಪಿದಲ್ಲಿ, ಈ ವಿಚಾರವಾಗಿ ದಿನಾಂಕ 30-07-2024 ರಂದು ಪ್ರೀಡಂ ಪಾರ್ಕ್‌ನಲ್ಲಿ ಹೋರಾಟವನ್ನು ಹಮ್ಮಿಕೊಂಡಿರುತ್ತೇವೆ. ಈ ನಮ್ಮ ಸಮಸ್ಯೆ ಬಗೆಹರಿಯುವ ತನಕ ಹೋರಾಟ ನಿಲ್ಲಿಸುವುದಿಲ್ಲ ಎಂದು ಅಸೋಸಿಯೇನ್ ನ ಅಧ್ಯಕ್ಷರಾದ ಮಂಟೇಲಿಂಗ ಗೌಡ ಮತ್ತು ರಾಜ್ಯ ಗೌರವ ಅಧ್ಯಕ್ಷರಾದ ಕೆ. ಮಂಜುನಾಥ್ ಗೌಡರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ಹಾಗೂ ಪಧಾದಿಕಾರುಗಳು ಉಪಸ್ಥಿತರಿದ್ದರು.

City Today News 9341997936

Drivers and operators of the Karnataka Transport Department will be terminated without hesitation if they reel during duty-Transport Minister Ramalinga Reddy

Transport Minister Ramalinga Reddy has warned that the drivers and operators of the Karnataka Transport Department will be terminated without hesitation if they reel during duty. While Speaking to the media representatives in Bangalore, he said that those who made the reels are not fit to be at work.



A video of the bus driver operating it while gripping an umbrella went viral on social media in May of last year. The KSRTC bus driver began to reel as they were traveling from Hubli to Bagalkot. The driver, who was operating the reels, saw the wheel ahead of him at the same moment and struck it from behind. The bus’s impact instantly claimed the lives of two bulls. Manjunath Rangappa Heggannavar, a farmer, had a dead brain.”

City Today News 9341997936

COWRKS expands its footprint in India with 4 New Centres in Bengaluru & Mumbai

The expansion will add 1.4 lakh sq ft, increasing the brand’s total presence across India to 15 lakh sq ft





Bengaluru, 21st, July 2024: COWRKS, a leading provider of premium workspaces announced its expansion with the opening of new centres in Bengaluru and Mumbai. The new centres are strategically located at Ecoworld and Centennial in Bengaluru and Equinox in Mumbai.



This expansion will add 1.4 lakh sq ft, increasing the brand’s total presence across India to 15 lakh sq ft. With a total of 34 centres nationwide, this growth enhances the brand’s capacity to meet the growing demand for Grade A workspace solutions in key metropolitan areas.



Parul Thakur, Senior Vice President & Business Head, COWRKS says, “The launch of these new centres reflects the growing demand for Grade A flexible office solutions from both startups and large enterprises, which aligns with our strategic goals. This demand is driven by the need for workspaces that offer operational efficiencies, workspace flexibility, employee engagement, and business continuity. At COWRKS, we remain dedicated to ensuring sustainable growth through dynamic workspaces that feature exceptional hospitality and innovative designs, all aimed at supporting the success of our partners.”



The new COWRKS centres feature the latest design language, characterized by modern, open spaces, ample natural light, and biophilic elements. With a focus on collaborative and adaptable design, each centre includes quiet zones for focused work and spaces for larger teams, complemented by expressive art and vibrant colours. Our in-house design team collaborates closely with clients to customize each space, reflecting their brand philosophy and promoting productivity.



COWRKS serves a diverse clientele, catering to top Fortune 500 companies, startups, and prominent unicorns. According to the New Age Flex Workspace Report by Anarock, the increasing demand for flexible office spaces in India, fuelled by evolving work habits has positioned Bengaluru as the leading city in this trend, with a 25% share of the flexible workspaces in India followed by Mumbai with 13%.



Located within Brookfield Properties campuses, COWRKS enhances its workspace offerings with amenities like retail spaces and recreational facilities, elevating the overall premium experience. This approach not only emphasises the importance of catering to employee needs but also enriches the overall employee experience.

City Today News 9341997936