“ಪ್ರಥಮ ಸೌತ್ ಜೋನ್ ಎಲೈಟ್ ಮೆನ್ಸ್ ಆಹ್ವಾನಿತ ಬಾಕ್ಸಿಂಗ್ ಪಂದ್ಯಾವಳಿ 2024”

ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಕರ್ನಾಟಕ ಕ್ರೀಡಾ ಪ್ರಾಧಿಕಾರ ಮತ್ತು ಕರ್ನಾಟಕ ಒಲಂಪಿಕ್ಸ್ ಸಂಸ್ಥೆ ಮತ್ತು ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ ದಿಂದ ಮಾನ್ಯತೆ ಪಡೆದಿದ್ದು ಬಿಎಫ್‌ಐ ಭಾರತ ಕ್ರೀಡಾ ಮಂತ್ರಾಲಯ ಮತ್ತು ಭಾರತೀಯ ಒಲಂಪಿಕ್ಸ್ ನಿಂದ ಮಾನ್ಯತೆ ಪಡೆದಿರುವ ಫೆಡರೇಶನ್ ಆಗಿದೆ ಎಂಬುದು ತಮ್ಮ ಗಮನಕ್ಕೆ ತಿಳಿಸುತ್ತಾ ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಕಚೇರಿ ಕಂಠೀರವ ಕ್ರೀಡಾಂಗಣದಲ್ಲಿ ಇದ್ದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಂಸ್ಥೆಯ ಶಾಖೆಗಳಿದೆ ಮತ್ತು ನಮ್ಮ ಸಂಸ್ಥೆ ಯ ಕ್ರೀಡಾಪಟುಗಳು ಖೇಲೋ ಇಂಡಿಯಾ ನ್ಯಾಷನಲ್ ಗೇಮ್ಸ್ ನ್ಯಾಷನಲ್ ಯೂತ್ ಗೇಮ್ಸ್ ಸೇರಿದಂತೆ ಬಾಕ್ಸಿಂಗ್ ರಾಷ್ಟ್ರ ಮಟ್ಟದ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಪದಕ ಪಡೆದಿದ್ದು ತಿಳಿಸಲು ಹರ್ಷಿಸುತ್ತೇವೆ ಮತ್ತು ಇತ್ತೀಚಿಗೆ ನಮ್ಮ ಸಂಸ್ಥೆಯ ವತಿಯಿಂದ ಆರ್ ಇ ಸಿ ಓಪನ್ ಟ್ಯಾಲೆಂಟ್ ಹಂಟ್ ಎಂಬ ಪಂದ್ಯಾವಳಿಯನ್ನು ಸತತ 18 ದಿನಗಳ ಕಾಲ ಆಯೋಜನೆ ಮಾಡಿದ್ದು ಅದರಲ್ಲಿ ಮೊದಲ ಬಾರಿಗೆ ಬಿ ಎಫ್ ಐ ಸ್ಮಾರ್ ವನ್ ಪರೀಕ್ಷೆಯನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು ಜೊತೆಗೆ ನಮ್ಮ ಸಂಸ್ಥೆಯ ವತಿಯಿಂದ ಬಾಕ್ಸರ್ ಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಪ್ರತಿ ತಿಂಗಳು ಎಲ್ಲ ವಿಭಾಗಗಳಲ್ಲಿ ಒಂದು ಪಂದ್ಯಾವಳಿಯನ್ನು ಆರಿಸಲಾಗುತ್ತದೆ ಮತ್ತು ಮುಂಬರುವ ದಿನಗಳಲ್ಲಿ ಜೂನಿಯ‌ರ್ ವಿಭಾಗದಲ್ಲಿ ಕರ್ನಾಟಕ ಪ್ರೀಮಿಯರ್ ಲೀಗ್ ಮಾಡೋ ಉದ್ದೇಶವನ್ನು ಸಹ ಸಂಸ್ಥೆ ಹೊಂದಿದೆ ಎಂಬುದನ್ನು ತಿಳಿಸುತ್ತಾ

ಪ್ರಸ್ತುತ ನಮ್ಮ ಸಂಸ್ಥೆ ಬಿ ಎಫ್ ಐ ಮತ್ತು ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಸಹಯೋಗದೊಂದಿಗೆ

ಇದೆ ಜೂನ್ 21ರಿಂದ ಜೂನ್ 23ರ ವರೆಗೆ ಬೆಂಗಳೂರಿನ ವಿದ್ಯಾನಗರದ ಜಯಪ್ರಕಾಶ್ ನಾರಾಯಣ ನ್ಯಾಷನಲ್ ಯೂತ್ ಟ್ರೈನಿಂಗ್ ಸೆಂಟರ್ ನಲ್ಲಿ ಪ್ರಥಮ ಸೌತ್ ಜೋನ್ ಎಲೈಟ್ ಮೆನ್ಸ್(19 ವರ್ಷ ಮೇಲ್ಪಟ್ಟ ಮತ್ತು 40 ವರ್ಷ ಒಳಪಟ್ಟ ಬಾಕ್ಸರ್ ಗಳು) ಆಹ್ವಾನಿತ ಬಾಕ್ಸಿಂಗ್ ಪಂದ್ಯಾವಳಿ 2024 ಅನ್ನು ಆಯೋಜಿಸಲು ಉದ್ದೇಶಿಸಿದ್ದು ಈ ಪಂದ್ಯಾವಳಿಯಲ್ಲಿ ದೇಶದ ವಿವಿಧ 9 ರಾಜ್ಯಗಳಾದ ಕರ್ನಾಟಕದ ಏ ಮತ್ತು ಬಿ ತಂಡ ತಮಿಳುನಾಡು ಕೇರಳ ಪಾಂಡಿಚರಿ ದೀಯು ದಮನ್ ಗೋವಾ ತೆಲಂಗಾಣ ಆಂಧ್ರಪ್ರದೇಶ ಅಸ್ಸಾಂ ರಾಜ್ಯಗಳ 70 ಬೆಸ್ಟ್ ಬಾಕ್ಸರ್ ಗಳು ಭಾಗವಹಿಸುತ್ತಿದ್ದು ಪಂದ್ಯಾವಳಿ ಉದ್ಘಾಟನೆ ಜೂನ್ 21ರಂದು ಬೆಳಗ್ಗೆ 11:30ಕ್ಕೆ ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷರು ಅದ ಕೆ ಗೋವಿಂದರಾಜು ರವರು ಮಾಡುತ್ತಿದ್ದು ಪಂದ್ಯಾವಳಿಯ ಸಮಾರೋಪ ಜೂನ್ 23ರಂದು ಮಧ್ಯಾಹ್ನ ಆಗಿದ್ದು ಪಂದ್ಯಾವಳಿಯ ವಿಶೇಷವೆಂದರೆ ಪಂದ್ಯಾವಳಿಯಲ್ಲಿ ಒಲಂಪಿಕ್ಸ್ ನ ಏಳು ತೂಕದ ವಿಭಾಗಗಳಲ್ಲಿ ಬಾಕ್ಸರ್ ಗಳು ಸ್ಪರ್ಧೆ ಮಾಡಲಿದ್ದಾರೆ ಮತ್ತು ಮೂರು ದಿನ ಬಾಕ್ಸಿಂಗ್ ಕೋಚ್ ಟ್ರೈನಿಂಗ್ ಕ್ಯಾಂಪ್ ಸಹ ನಡೆಸುತ್ತಿದ್ದು ರಾಜ್ಯದ ಕೋಚ್ ಗಳು ಮತ್ತಷ್ಟು ತರಬೇತಿ ಪಡೆಯುವ ಉದ್ದೇಶದಿಂದ ಇದನ್ನು ಮಾಡಲಾಗುತ್ತಿದೆ ಎಂದು ತಿಳಿಸುತ್ತಾ ಇದೇ ಸಂದರ್ಭದಲ್ಲಿ ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲು ಇದೇ ಮೊದಲ ಬಾರಿಗೆ ಪುರುಷರ ವಿಭಾಗದಿಂದ ಬಾಕ್ಸಿಂಗ್ ನಲ್ಲಿ ಅರ್ಹತೆ ಪಡೆದಿರುವ ಹರಿಯಾಣ ಮೂಲದ ಹಾಗೂ ಕರ್ನಾಟಕದ ಜೆ ಎಸ್ ಡಬ್ಲ್ಯೂ ಬಳ್ಳಾರಿ ಯಲ್ಲಿ 9 ವರ್ಷ ಬಾಕ್ಸಿಂಗ್ ತರಬೇತಿ ಪಡೆದಿರುವ ಹಾಗೂ ರಾಷ್ಟ್ರಮಟ್ಟದ ಬಾಕ್ಸಿಂಗ್ ಪಂದ್ಯಾವಳಿಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿರುವ ನಿಶಾಂತ್ ದೇವು ರವರಿಗೆ ನಮ್ಮ ಸಂಸ್ಥೆ ವತಿಯಿಂದ ಅಭಿನಂದನೆಗಳನ್ನು ತಿಳಿಸಲು ಬಯಸುತ್ತಾ ಪಂದ್ಯಾವಳಿಗೆ ಮಾಧ್ಯಮ ಮಿತ್ರರಾದ ತಾವು ಆಗಮಿಸಲು ಕೋರಿ ವಿನಂತಿಸುತ್ತೇವೆ ಎಂದು ಸಂಘದ ವತಿಯಿಂದ ತಿಳಿಸಲಾಯಿತು.ರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಕರ್ನಾಟಕ ಕ್ರೀಡಾ ಪ್ರಾಧಿಕಾರ ಮತ್ತು ಕರ್ನಾಟಕ ಒಲಂಪಿಕ್ಸ್ ಸಂಸ್ಥೆ ಮತ್ತು ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ ದಿಂದ ಮಾನ್ಯತೆ ಪಡೆದಿದ್ದು ಬಿಎಫ್‌ಐ ಭಾರತ ಕ್ರೀಡಾ ಮಂತ್ರಾಲಯ ಮತ್ತು ಭಾರತೀಯ ಒಲಂಪಿಕ್ಸ್ ನಿಂದ ಮಾನ್ಯತೆ ಪಡೆದಿರುವ ಫೆಡರೇಶನ್ ಆಗಿದೆ ಎಂಬುದು ತಮ್ಮ ಗಮನಕ್ಕೆ ತಿಳಿಸುತ್ತಾ ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಕಚೇರಿ ಕಂಠೀರವ ಕ್ರೀಡಾಂಗಣದಲ್ಲಿ ಇದ್ದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಂಸ್ಥೆಯ ಶಾಖೆಗಳಿದೆ ಮತ್ತು ನಮ್ಮ ಸಂಸ್ಥೆ ಯ ಕ್ರೀಡಾಪಟುಗಳು ಖೇಲೋ ಇಂಡಿಯಾ ನ್ಯಾಷನಲ್ ಗೇಮ್ಸ್ ನ್ಯಾಷನಲ್ ಯೂತ್ ಗೇಮ್ಸ್ ಸೇರಿದಂತೆ ಬಾಕ್ಸಿಂಗ್ ರಾಷ್ಟ್ರ ಮಟ್ಟದ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಪದಕ ಪಡೆದಿದ್ದು ತಿಳಿಸಲು ಹರ್ಷಿಸುತ್ತೇವೆ ಮತ್ತು ಇತ್ತೀಚಿಗೆ ನಮ್ಮ ಸಂಸ್ಥೆಯ ವತಿಯಿಂದ ಆರ್ ಇ ಸಿ ಓಪನ್ ಟ್ಯಾಲೆಂಟ್ ಹಂಟ್ ಎಂಬ ಪಂದ್ಯಾವಳಿಯನ್ನು ಸತತ 18 ದಿನಗಳ ಕಾಲ ಆಯೋಜನೆ ಮಾಡಿದ್ದು ಅದರಲ್ಲಿ ಮೊದಲ ಬಾರಿಗೆ ಬಿ ಎಫ್ ಐ ಸ್ಮಾರ್ ವನ್ ಪರೀಕ್ಷೆಯನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು ಜೊತೆಗೆ ನಮ್ಮ ಸಂಸ್ಥೆಯ ವತಿಯಿಂದ ಬಾಕ್ಸರ್ ಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಪ್ರತಿ ತಿಂಗಳು ಎಲ್ಲ ವಿಭಾಗಗಳಲ್ಲಿ ಒಂದು ಪಂದ್ಯಾವಳಿಯನ್ನು ಆರಿಸಲಾಗುತ್ತದೆ ಮತ್ತು ಮುಂಬರುವ ದಿನಗಳಲ್ಲಿ ಜೂನಿಯ‌ರ್ ವಿಭಾಗದಲ್ಲಿ ಕರ್ನಾಟಕ ಪ್ರೀಮಿಯರ್ ಲೀಗ್ ಮಾಡೋ ಉದ್ದೇಶವನ್ನು ಸಹ ಸಂಸ್ಥೆ ಹೊಂದಿದೆ ಎಂಬುದನ್ನು ತಿಳಿಸುತ್ತಾ

ಪ್ರಸ್ತುತ ನಮ್ಮ ಸಂಸ್ಥೆ ಬಿ ಎಫ್ ಐ ಮತ್ತು ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಸಹಯೋಗದೊಂದಿಗೆ

ಇದೆ ಜೂನ್ 21ರಿಂದ ಜೂನ್ 23ರ ವರೆಗೆ ಬೆಂಗಳೂರಿನ ವಿದ್ಯಾನಗರದ ಜಯಪ್ರಕಾಶ್ ನಾರಾಯಣ ನ್ಯಾಷನಲ್ ಯೂತ್ ಟ್ರೈನಿಂಗ್ ಸೆಂಟರ್ ನಲ್ಲಿ ಪ್ರಥಮ ಸೌತ್ ಜೋನ್ ಎಲೈಟ್ ಮೆನ್ಸ್(19 ವರ್ಷ ಮೇಲ್ಪಟ್ಟ ಮತ್ತು 40 ವರ್ಷ ಒಳಪಟ್ಟ ಬಾಕ್ಸರ್ ಗಳು) ಆಹ್ವಾನಿತ ಬಾಕ್ಸಿಂಗ್ ಪಂದ್ಯಾವಳಿ 2024 ಅನ್ನು ಆಯೋಜಿಸಲು ಉದ್ದೇಶಿಸಿದ್ದು ಈ ಪಂದ್ಯಾವಳಿಯಲ್ಲಿ ದೇಶದ ವಿವಿಧ 9 ರಾಜ್ಯಗಳಾದ ಕರ್ನಾಟಕದ ಏ ಮತ್ತು ಬಿ ತಂಡ ತಮಿಳುನಾಡು ಕೇರಳ ಪಾಂಡಿಚರಿ ದೀಯು ದಮನ್ ಗೋವಾ ತೆಲಂಗಾಣ ಆಂಧ್ರಪ್ರದೇಶ ಅಸ್ಸಾಂ ರಾಜ್ಯಗಳ 70 ಬೆಸ್ಟ್ ಬಾಕ್ಸರ್ ಗಳು ಭಾಗವಹಿಸುತ್ತಿದ್ದು ಪಂದ್ಯಾವಳಿ ಉದ್ಘಾಟನೆ ಜೂನ್ 21ರಂದು ಬೆಳಗ್ಗೆ 11:30ಕ್ಕೆ ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷರು ಅದ ಕೆ ಗೋವಿಂದರಾಜು ರವರು ಮಾಡುತ್ತಿದ್ದು ಪಂದ್ಯಾವಳಿಯ ಸಮಾರೋಪ ಜೂನ್ 23ರಂದು ಮಧ್ಯಾಹ್ನ ಆಗಿದ್ದು ಪಂದ್ಯಾವಳಿಯ ವಿಶೇಷವೆಂದರೆ ಪಂದ್ಯಾವಳಿಯಲ್ಲಿ ಒಲಂಪಿಕ್ಸ್ ನ ಏಳು ತೂಕದ ವಿಭಾಗಗಳಲ್ಲಿ ಬಾಕ್ಸರ್ ಗಳು ಸ್ಪರ್ಧೆ ಮಾಡಲಿದ್ದಾರೆ ಮತ್ತು ಮೂರು ದಿನ ಬಾಕ್ಸಿಂಗ್ ಕೋಚ್ ಟ್ರೈನಿಂಗ್ ಕ್ಯಾಂಪ್ ಸಹ ನಡೆಸುತ್ತಿದ್ದು ರಾಜ್ಯದ ಕೋಚ್ ಗಳು ಮತ್ತಷ್ಟು ತರಬೇತಿ ಪಡೆಯುವ ಉದ್ದೇಶದಿಂದ ಇದನ್ನು ಮಾಡಲಾಗುತ್ತಿದೆ ಎಂದು ತಿಳಿಸುತ್ತಾ ಇದೇ ಸಂದರ್ಭದಲ್ಲಿ ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲು ಇದೇ ಮೊದಲ ಬಾರಿಗೆ ಪುರುಷರ ವಿಭಾಗದಿಂದ ಬಾಕ್ಸಿಂಗ್ ನಲ್ಲಿ ಅರ್ಹತೆ ಪಡೆದಿರುವ ಹರಿಯಾಣ ಮೂಲದ ಹಾಗೂ ಕರ್ನಾಟಕದ ಜೆ ಎಸ್ ಡಬ್ಲ್ಯೂ ಬಳ್ಳಾರಿ ಯಲ್ಲಿ 9 ವರ್ಷ ಬಾಕ್ಸಿಂಗ್ ತರಬೇತಿ ಪಡೆದಿರುವ ಹಾಗೂ ರಾಷ್ಟ್ರಮಟ್ಟದ ಬಾಕ್ಸಿಂಗ್ ಪಂದ್ಯಾವಳಿಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿರುವ ನಿಶಾಂತ್ ದೇವು ರವರಿಗೆ ನಮ್ಮ ಸಂಸ್ಥೆ ವತಿಯಿಂದ ಅಭಿನಂದನೆಗಳನ್ನು ತಿಳಿಸಲು ಬಯಸುತ್ತಾ ಪಂದ್ಯಾವಳಿಗೆ ಮಾಧ್ಯಮ ಮಿತ್ರರಾದ ತಾವು ಆಗಮಿಸಲು ಕೋರಿ ವಿನಂತಿಸುತ್ತೇವೆ ಎಂದು ಸಂಘದ ವತಿಯಿಂದ ತಿಳಿಸಲಾಯಿತು.

ಡಾ ಮಂಜೇಗೌಡ ಅಧ್ಯಕ್ಷರು,ಸಾಯಿ ಸತೀಶ್ ಪ್ರಧಾನ ಕಾರ್ಯದರ್ಶಿ,ಡಾ,ಶಿವಮೊಗ್ಗ ವಿನೋದ್ ಸಹ ಕಾರ್ಯದರ್ಶಿ ಮತ್ತು ಧನಸಂಜನ್ ಕೋಚ್ ರವರುಗಳು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಉಪಸ್ಥಿತರಿದ್ದರು.

City Today News 9341997936

ಕೇಂದ್ರದ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಶ್ರೀ ಹೆಚ್. ಡಿ. ಕುಮಾರ್ ಸ್ವಾಮಿ ಅವರಿಗೆ ಶಾಸಕರು ಕರ್ನಾಟಕ ವಿಧಾನ ಪರಿಷತ್ ಹಾಗೂ ರಾಜ್ಯ ಉಪಾಧ್ಯಕ್ಷರಾದ ಶ್ರೀ ಟಿ.ಎ.ಶರವಣ ರವರು ಶುಭಕೋರಿದರು.

ಕೇಂದ್ರದ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಶ್ರೀ ಹೆಚ್. ಡಿ. ಕುಮಾರ್ ಸ್ವಾಮಿ ಅವರಿಗೆ ಶಾಸಕರು ಕರ್ನಾಟಕ ವಿಧಾನ ಪರಿಷತ್ ಹಾಗೂ ರಾಜ್ಯ ಉಪಾಧ್ಯಕ್ಷರಾದ ಶ್ರೀ ಟಿ.ಎ.ಶರವಣ  ರವರು  ಶುಭಕೋರಿದರು.


ಇಂದು ದೆಲ್ಲಿ ಯಲ್ಲಿ  ಮಾನ್ಯ ಶ್ರೀ. ನರೇಂದ್ರ ಮೋದಿ ಯವರ ನೇತೃತ್ವದ NDA ಸರಕಾರದಲ್ಲಿ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಶ್ರೀ ಹೆಚ್.ಡಿ.ಕುಮಾರ ಸ್ವಾಮಿ ಅವರಿಗೆ ಹೂ ಗುಚ್ಛ ನೀಡಿ ಶುಭ ಕೋರಿದ ವಿಧಾನ ಪರಿಷತ್ ಶಾಸಕರಾದ ಟಿ.ಎ.ಶರವಣ ಹಾಗು ಬೊಜೆ ಗೌಡ.

City Today News 9341997936

ಕೇಂದ್ರ ಮಂತ್ರಿ ಮಂಡಲದಲ್ಲಿ ಮಾದಿಗ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ಕೊಡಬೇಕೆಂದು ಜೈ ಮಾದಿಗರ ಬೌದ್ಧಿಕ ವೇದಿಕೆ ವತಿಯಿಂದ ಒತ್ತಾಯ

ಭಾರತದಲ್ಲಿ ಅತಿ ದೊಡ್ಡ ಸಮುದಾಯವಾಗಿರುವ ಮಾದಿಗ ಮತ್ತು ಸಂಬಂಧಿತ ಜಾತಿಗಳಿಗೆ ಸರ್ಕಾರ ರಚನೆ ಸಮಯದಲ್ಲಿ ಮಂತ್ರಿ ಮಂಡಲದಲ್ಲಿ ಮಾದಿಗ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯವನ್ನು ಕೊಡದೆ ಇರುವುದು ಸಮುದಾಯಕ್ಕೆ ನೋವು, ತಿರಸ್ಕಾರ ಮತ್ತು  ಅವಮಾನವನ್ನು ಮಾಡಿದೆ. ದಿನಾಂಕ: 10/6/2024 ರಂದು ಸೋಮವಾರ ಮಧ್ಯಾಹ್ನ 12:30 ಗಂಟೆಗೆ ಕೇಂದ್ರ ಮಂತ್ರಿ ಮಂಡಲದಲ್ಲಿ ಮಾದಿಗ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ಕೊಡಬೇಕೆಂದು ಒತ್ತಾಯಿಸಿ ಕರೆದಿರುವ ಪತ್ರಿಕಾಗೋಷ್ಠಿ.



ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಶ್ರೀ ನರೇಂದ್ರ ಮೋದಿಜಿಯವರು ಭಾರತದ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿರುವ ಸಂದರ್ಭದಲ್ಲಿ ಇಡೀ ಭಾರತದ ಮಾದಿಗ ಸಮುದಾಯದ ಪರವಾಗಿ ಅವರಿಗೆ ಮತ್ತು ಕರ್ನಾಟಕದಿಂದ ಆಯ್ಕೆಯಾದ ಮಂತ್ರಿಗಳಿಗೆ ಹಾಗೂ ಮಾದಿಗ ಸಮುದಾಯದ ಲೋಕಸಭಾ ಸದಸ್ಯರಾಗಿ ಕರ್ನಾಟಕದಿಂದ ಆಯ್ಕೆಯಾಗಿರುವ ಶ್ರೀ ರಮೇಶ್ ಜಿಗಜಿಣಿಗಿ ಮತ್ತು ಶ್ರೀ ಗೋವಿಂದ ಕಾರಜೋಳ ರವರಿಗೆ ಅಭಿನಂದನೆಗಳು.

ಮಾದಿಗ ಸಮಾಜ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಸಮಾಜವಾಗಿದ್ದು ಸ್ವಾತಂತ್ರ ಬಂದಾಗಿನಿಂದಲೂ ನಿರಂತರವಾಗಿ ರಾಜಕೀಯ ಪಕ್ಷಗಳಿಂದ ನಿರ್ಲಕ್ಷ್ಯಕ್ಕೊಳಗಾಗಿದೆ. 1984 ರ ನಂತರ ಶ್ರೀ ರಮೇಶ ಜಿಗಜಿಣಗಿ ಮತ್ತು ಶ್ರೀ ಗೋವಿಂದ ಕಾರಜೋಳರವರು ಶ್ರೀ ರಾಮಕೃಷ್ಣ ಹೆಗಡೆಯವರ ನೇತೃತ್ವದಲ್ಲಿ ಜನತಾ ಪಕ್ಷವನ್ನು ಬೆಳೆಸಿದರು ಇದರ ಪರಿಣಾಮ ಕರ್ನಾಟಕದಲ್ಲಿ ಜನತಾ ಪಕ್ಷ 44 ಶಾಸಕರಿಂದ 84 ಶಾಸಕರು ಗೆದ್ದು ಬಂದರು. ಈ ಮಾತನ್ನು ಬೆಂಗಳೂರಿನ ಸಭೆಯೊಂದರಲ್ಲಿ ಅಂದಿನ ಪ್ರಧಾನ ಮಂತ್ರಿಗಳಾದ ಶ್ರೀ ಅಟಲ್ ಬಿಹಾರಿ ವಾಜಪೇಯಿ ಮತ್ತು ಶ್ರೀ ಲಾಲಕೃಷ್ಣ ಅಡ್ವಾಣಿಯವರು ತುಂಬು ಮನಸ್ಸಿನಿಂದ ಶ್ರೀ ರಮೇಶ ಜಿಗಜಿಣಗಿ ಮತ್ತು ಶ್ರೀ ಗೋವಿಂದ ಕಾರಜೋಳ ಅವರನ್ನು ಅಭಿನಂದಿಸಿದರು.

ನಂತರದ ದಿನಗಳಲ್ಲಿ 1984 ರಿಂದ ಇದುವರೆವಿಗೆ ಮಾದಿಗ ಸಮುದಾಯದ ನಾಯಕರು ಮತ್ತು ಸಮುದಾಯ ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿದ್ದು ಬಿಜೆಪಿಯ ಭಾಗವಾಗಿ ಇಂದು ಮಾದಿಗ ಸಮುದಾಯ ನಿಂತಿದೆ. ಈ ಸಮುದಾಯ ಬಿಜೆಪಿ ಪರವಾಗಿ ನಿಂತಿದೆ ಎಂದು ಕಾಂಗ್ರೆಸ್ ಮತ್ತು ಇತರೆ ಪಕ್ಷಗಳು ಮಾದಿಗ ಸಮುದಾಯವನ್ನು ನಿರ್ಲಕ್ಷಿಸುತ್ತಾ ಬಂದಿವೆ.

ಆದರೆ ಇತ್ತೀಚಿನ 2024 ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಮಾದಿಗ ಸಮಾಜ ಬಿಜೆಪಿ ಪರವಾಗಿ ನಿಂತಿರುವುದನ್ನು ಸ್ಪಷ್ಟವಾಗಿ ಕಾಣಬಹುದು. ಕಾಂಗ್ರೆಸ್ ಮತ್ತು ಇತರೆ ಪಕ್ಷಗಳು ಬಿಜೆಪಿ ದಲಿತ ವಿರೋಧಿ ಮತ್ತು ಬಿಜೆಪಿ ಗೆದ್ದರೆ ಮೀಸಲಾತಿಯನ್ನು ತೆಗೆದು ಹಾಕುತ್ತಾರೆ. ಸಂವಿಧಾನ ವಿರೋಧಿ, ದಲಿತರಿಗೆ ಅವಕಾಶಗಳನ್ನು ಕೊಡುವುದಿಲ್ಲ ಎಂದು ನಿರಂತರವಾಗಿ ದಾಳಿ ಮಾಡಿದಾಗ, ಬಿಜೆಪಿ ಪರವಾಗಿ ನಿಂತು ಪಕ್ಷದ ಪರ ಕೆಲಸ ಮಾಡಿದವರು ಮಾದಿಗ ಸಮುದಾಯದವರು,

ಭಾರತದಲ್ಲಿ ಅತಿದೊಡ್ಡ ಸಮುದಾಯವಿರುವ ಮಾದಿಗ ಮತ್ತು ಸಂಬಂಧಿತ ಜಾತಿಗಳಿಗೆ ಸರ್ಕಾರ ರಚನೆ ಸಮಯದಲ್ಲಿ ಮಂತ್ರಿ ಮಂಡಲದಲ್ಲಿ ಮಾದಿಗ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯವನ್ನು ಕೊಡದೆ ಇರುವುದು ಮಾದಿಗ ಸಮಾಜ ದಿಗ್ದಮೆಗೊಂಡಿದೆ. ವಿಶೇಷವಾಗಿ ಕರ್ನಾಟಕ, ತೆಲಂಗಾಣ, ಆಂದ್ರಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿರುವ ಅಪಾರ ಸಂಖ್ಯೆಯ ಮಾದಿಗ ಸಮುದಾಯಕ್ಕೆ ಆಘಾತಗೊಂಡಿದೆ.

ಯಾವ ಮಾದಿಗ ಸಮುದಾಯ ಕಾಂಗ್ರೆಸ್ ಮತ್ತು ಇತರೆ ಪಕ್ಷಗಳನ್ನು ಎದುರು ಹಾಕಿಕೊಂಡು ಬಿಜೆಪಿಯನ್ನು ಬೆಂಬಲಿಸುತ್ತಾ ಬಂದು ಬಿಜೆಪಿ ಅಧಿಕಾರಕ್ಕೆ ಬರಲು ಕಾರಣೀಬೂತವಾಗಿತ್ತು ಆ ಬಿಜೆಪಿ ಇಂದು ಮಾದಿಗ ಸಮುದಾಯಕ್ಕೆ ನೋವು, ಅವಮಾನ ಮತ್ತು ತಿರಸ್ಕಾರವನ್ನು ಮಾಡಿದೆ. ಸಮುದಾಯ ಆಕ್ರೋಶಗೊಂಡಿದೆ. ಆದ್ದರಿಂದ ಈ ಪತ್ರಿಕಾಗೋಷ್ಠಿಯ ಮೂಲಕ ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿಯವರನ್ನು ಮತ್ತು ಬಿಜೆಪಿ ಮುಖಂಡರನ್ನು ಕರ್ನಾಟಕದ ಮಾದಿಗ ಸಮುದಾಯಕ್ಕೆ ಕೇಂದ್ರ ಮಂತ್ರಿ ಮಂಡಲದಲ್ಲಿ ಸೂಕ್ತ ಪ್ರಾತಿನಿಧ್ಯವನ್ನು ನೀಡಬೇಕೆಂದು ಶ್ರೀ ಷಡಕ್ಷರಿ ಮುನಿ ದೇಶಿಕೇಂದ್ರ ಸ್ವಾಮೀಜಿಯವರ ನೇತೃತ್ವದಲ್ಲಿ ಆಗ್ರಹಿಸುತ್ತೇವೆ. ಒತ್ತಾಯಿಸುತ್ತೇವೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಮಾದಿಗ ಸಮುದಾಯ ಸೂಕ್ತ ನಿರ್ಧಾರ ಮತ್ತು ಉತ್ತರ ಕೊಡಲಿದೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಆಗ್ರಹಿಸಲಾಯಿತು.

ಪತ್ರಿಕಾ ಗೋಷ್ಠಿಯಲ್ಲಿ  ಶ್ರೀ ಷಡಕ್ಷರಿ ಮುನಿದೇಶಿಕೇಂದ್ರ ಸ್ವಾಮೀಜಿ ಆದಿಜಾಂಬವ ಬೃಹನ್ಮಠ ಕೋಡಿಹಳ್ಳಿ,ಬಿ.ಆರ್. ಮುನಿರಾಜ್- ರಾಜ್ಯಾಧ್ಯಕ್ಷರು ಜೈ ಮಾದಿಗರ ಬೌದ್ಧಿಕ ವೇದಿಕೆ,ಮುತ್ತುರಾಜು-ಅಧ್ಯಕ್ಷರು ಅಹಿಂದ ಹೋರಾಟ ಸಮಿತಿ ಮತ್ತು ಸಿದ್ಧರಾಜು-ರಾಜ್ಯಾಧ್ಯಕ್ಷರು ಆದಿ ಜಾಂಬವ ಸಂಘದ ವತಿಯಿಂದ ಉಪಸ್ಥಿತರಿದ್ದರು.

City Today News 9341997936

ಲೋಕಸಭೆ ಚುನಾವಣೆ-2024 ರಲ್ಲಿ ಬಿ.ಜೆ.ಪಿ. / ಎನ್.ಡಿ.ಎ. ಮೈತ್ರಿಕೂಟವನ್ನು ಬೆಂಬಲಿಸಿದ ವಿಶ್ವಕರ್ಮ ಸಮುದಾಯಕ್ಕೆ ಅಖಿಲ ಭಾರತ ವಿಶ್ವಕರ್ಮ ಮಹಾ ಸಂಘದ ವತಿಯಿಂದ ಧನ್ಯವಾದ-ಡಾ.ಜಯಂತ್ ಕೆ.ಎಂ.

ಈ ಹಿಂದೆ ಲೋಕಸಭಾ ಚುನಾವಣೆ-2024 ದೃಷ್ಟಿಯಿಂದ ಅಖಿಲ ಭಾರತ ವಿಶ್ವಕರ್ಮ ಮಹಾಸಂಘ (ರಿ) ವು ಚುನಾವಣೆ ಪೂರ್ವದಲ್ಲಿ ಮಾನ್ಯ ಶ್ರೀ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದೀಜಿರವರು ನಮ್ಮ ವಿಶ್ವಕರ್ಮ ಸಮಾಜಕ್ಕೆ ನೀಡಿದಂತ ವಿಶ್ವಕರ್ಮ ಸಮ್ಮಾನ್ ಯೋಜನೆ ಹಾಗೂ ಅಯೋಧ್ಯೆಯ ಶ್ರೀರಾಮ ಮೂರ್ತಿಯನ್ನು ಕೆತ್ತನೆ ಮಾಡಲು ವಿಶ್ವಕರ್ಮ ಸಮಾಜದವರೇ ಆದ ಶಿಲ್ಪಿ ಶ್ರೀ ಅರುಣ್ ಯೋಗಿರಾಜ್ ರವರಿಗೆ ಅವಕಾಶ ಕಲ್ಪಿಸಿಕೊಟ್ಟು ಮಹತ್ತರವಾದ ಕಾರ್ಯವನ್ನು ನಮ್ಮ ವಿಶ್ವಕರ್ಮ ಸಮಾಜಕ್ಕೆ ನೀಡಿರುತ್ತಾರೆ. ಹಾಗಾಗಿ ಈ ಬಾರಿ ಲೋಕಸಭಾ ಚುನಾವಣೆ-2024 ಕ್ಕೆ ಬಿ.ಜೆ.ಪಿ / ಎನ್.ಡಿ.ಎ. ಮೈತ್ರಿಕೂಟಕ್ಕೆ ಅಖಿಲ ಭಾರತ ವಿಶ್ವಕರ್ಮ ಮಹಾಸಂಘವು ಬೆಂಬಲ ಸೂಚಿಸಿತ್ತು. ಅದರಂತೆ ಬಿ.ಜೆ.ಪಿ. / ಎನ್.ಡಿ.ಎ. ಮೈತ್ರಿಕೂಟ ಬಹುಮತವನ್ನು ಪಡೆದು ಕೇಂದ್ರದಲ್ಲಿ ಸರ್ಕಾರವನ್ನು ಸ್ಥಾಪಿಸಿದೆ. ಈ ಬಹುಮತ ಪಡೆಯುವಲ್ಲಿ ವಿಶ್ವಕರ್ಮರ ಪಾಲೂ ಇದೆ. ಇದಕ್ಕಾಗಿ ಶ್ರಮಿಸಿದ ಭಾರತ ದೇಶದಲ್ಲಿರುವ ಎಲ್ಲಾ ವಿಶ್ವಕರ್ಮ ಸಮಾಜದವರಿಗೆ ಅಖಿಲ ಭಾರತ ವಿಶ್ವಕರ್ಮ ಮಹಾಸಂಘ (ರಿ) ದ ವತಿಯಿಂದ ರಾಷ್ಟ್ರೀಯ ಅಧ್ಯಕ್ಷರಾದ ಡಾ.ಜಯಂತ್ ಕೆ.ಎಂ. ಆದ ನಾನು ಮತ್ತು ಸಂಘದ ಪ.ದಾಧಿಕಾರಿಗಳು ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇವೆ. ಹಾಗೂ ಮುಂಬರುವ ರಾಷ್ಟ್ರ ಮತ್ತು ರಾಜ್ಯದ ಚುನಾವಣೆಗಳಲ್ಲಿ ಅಂದರೆ ರಾಜ್ಯಸಭಾ, ವಿಧಾನಸಭೆ, ವಿಧಾನ ಪರಿಷತ್, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಮಹಾನಗರ ಪಾಲಿಕೆಗಳು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿಶ್ವಕರ್ಮರಿಗೆ ಸೂಕ್ತ ರಾಜಕೀಯ ಸ್ಥಾನಮಾನ ಹಾಗೂ ಸಮಾಜದ ಶೈಕ್ಷಣಿಕ ಹಾಗೂ ಆರ್ಥಿಕ ಸದೃಢತೆಗಾಗಿ ಸರ್ಕಾರದ ಯೋಜನೆಗಳನ್ನು ರೂಪಿಸುವ ಮುಖಾಂತರ ಸಮಾಜದ ಏಳಿಗೆಗಾಗಿ ಬಿ.ಜೆ.ಪಿ. / ಎನ್.ಡಿ.ಎ. ಮೈತ್ರಿಕೂಟವು ಬೆಂಬಲಿಸಬೇಕಾಗಿ ಮನವಿ ಮಾಡುತ್ತೇನೆ. ಕರ್ನಾಟಕ ರಾಜ್ಯದಲ್ಲಿ ಬಿ.ವೈ. ವಿಜಯೇಂದ್ರ ರವರ ನೇತೃತ್ವದಲ್ಲಿ ಬಿ.ಜೆ.ಪಿ. / ಎನ್.ಡಿ.ಎ. ಮೈತ್ರಿಕೂಟವು ಅತ್ಯುತ್ತಮವಾದ ಫಲಿತಾಂಶವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದು, ಬಿ.ಜೆ.ಪಿ. ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ರವರಿಗೂ ಸಹ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅಖಿಲ ಭಾರತ ವಿಶ್ವಕರ್ಮ ಮಹಾಸಂಘ (ರಿ) ದ ವತಿಯಿಂದ ರಾಷ್ಟ್ರೀಯ ಅಧ್ಯಕ್ಷರಾದ ಡಾ.ಜಯಂತ್ ಕೆ.ಎಂ. ತಿಳಿಸಿದರು.

City Today News 9341997936

ಜೆಇಇ ಅಡ್ವಾನ್ಸ್ಡ್ 2024 ರಲ್ಲಿ ಬೆಂಗಳೂರಿನ ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್ (AESL) 4 ವಿದ್ಯಾರ್ಥಿಗಳಿಗೆ ಟಾಪ್ RANK

ಬೆಂಗಳೂರು, ಜೂನ್ 09, 2024: ಪರೀಕ್ಷಾ ಪೂರ್ವಸಿದ್ಧತಾ ಸೇವೆಗಳ ಕ್ಷೇತ್ರದಲ್ಲಿ ರಾಷ್ಟ್ರದಲ್ಲೇ ಮುಂಚೂಣಿಯಲ್ಲಿರುವ ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್ (AESL) ಸಂಸ್ಥೆಯ ಬೆಂಗಳೂರು ಶಾಖೆಯ ನಾಲ್ವರು ವಿದ್ಯಾರ್ಥಿಗಳು ಪ್ರತಿಷ್ಠಿತ ಜೆಇಇ ಅಡ್ವಾನ್ಸ್ಡ್ 2024 ಪರೀಕ್ಷೆಯಲ್ಲಿ ಟಾಪ್ ಸ್ಕೋರರ್ ಆಗಿ ಹೊರಹೊಮ್ಮಿದ್ದು ಮಹತ್ಸಾಧನೆ ಮಾಡಿದ್ದಾರೆ. ಈ ಗಮನಾರ್ಹ ಸಾಧನೆಯು ವಿದ್ಯಾರ್ಥಿಗಳ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು AESL ಒದಗಿಸಿದ ಉತ್ಕೃಷ್ಟ ಗುಣಮಟ್ಟದ ತರಬೇತಿಗೆ ಸಾಕ್ಷಿಯಾಗಿದೆ. ಈ ಪ್ರತಿಷ್ಠಿತ ಫಲಿತಾಂಶವನ್ನು ಇಂದು ಐಐಟಿ ಮದ್ರಾಸ್ ಪ್ರಕಟಿಸಿದೆ.
ಸಂಸ್ಥೆಯ ಕೃಷ್ಣ ಸಾಯಿ ಶಿಶಿರ್ ಅವರು ರಾಷ್ಟ್ರೀಯ ಮಟ್ಟದಲ್ಲಿ (AIR) 67 ನೇ ಸ್ಥಾನ ಪಡೆದಿದ್ದರೆ, ಅಭಿಷೇಕ್ ಜೈನ್ 78 ನೇ ಸ್ಥಾನ, ಸಾನ್ವಿ ಜೈನ್ 421 ನೇ ಸ್ಥಾನ ಮತ್ತು ಮೇಘಾರಾವ್ ಅವರು 896 ನೇ ಸ್ಥಾನ ಗಳಿಸಿ ಇಡೀ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಈ ವಿದ್ಯಾರ್ಥಿಗಳು ಜಾಗತಿಕವಾಗಿ ಕಠಿಣ ಪ್ರವೇಶ ಪರೀಕ್ಷೆಗಳಲ್ಲಿ ಒಂದು ಎಂದು ವ್ಯಾಪಕವಾಗಿ ಪರಿಗಣಿಸಲಾಗಿರುವ ಜೆಇಇ ಅಡ್ವಾನ್ಸ್ಡ್ ಗೆ ಸಿದ್ಧತೆ ನಡೆಸುವ ಸಲುವಾಗಿ ಎಇಎಸ್ಎಲ್ ನ ತರಗತಿ ಕಾರ್ಯಕ್ರಮಕ್ಕೆ ಪ್ರವೇಶ ಪಡೆದಿದ್ದರು. ಇವರು ವಿಷಯಗಳನ್ನು ಸಮರ್ಪಕವಾಗಿ ಅರ್ಥಮಾಡಿಕೊಂಡು ಶಿಸ್ತಿನ ಅಧ್ಯಯನ ವೇಳಾಪಟ್ಟಿಯನ್ನು ಪಾಲಿಸುವ ಮೂಲಕ ಈ ಯಶಸ್ಸು ಸಾಧಿಸಿದ್ದಾರೆ. “ಆಕಾಶ್ ಸಂಸ್ಥೆಯು ನಮಗೆ ಮಾಡಿರುವ ಸಹಾಯಕ್ಕೆ ನಾವು ಕೃತಜ್ಞರಾಗಿರುತ್ತೇವೆ. ಆದರೆ, AESL ನೀಡಿರುವ ವಿಷಯ ಮತ್ತು ತರಬೇತಿ ಇಲ್ಲದಿದ್ದರೆ ಈ ಅಲ್ಪಾವಧಿಯಲ್ಲಿ ನಾವು ವಿವಿಧ ವಿಷಯಗಳಲ್ಲಿ ಅನೇಕ ಪರಿಕಲ್ಪನೆಗಳನ್ನು ಗ್ರಹಿಸಲು ಸಾಧ್ಯವಾಗುತ್ತಿರಲಿಲ್ಲ” ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳ ಈ ಅಸಾಧಾರಣ ಸಾಧನೆಯ ಕುರಿತು ಹೆಮ್ಮೆ ವ್ಯಕ್ತಪಡಿಸಿ ಅವರನ್ನು ಅಭಿನಂದಿಸಿರುವ ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್ (AESL) ಸಂಸ್ಥೆಯ ಮುಖ್ಯ ಶೈಕ್ಷಣಿಕ ಮತ್ತು ವ್ಯವಹಾರ ಮುಖ್ಯಸ್ಥರಾದ ಧೀರಜ್ ಕುಮಾರ್ ಮಿಶ್ರಾ ಅವರು, “ಅತ್ಯುತ್ತಮ ಸಾಧನೆ ತೋರಿರುವ ನಮ್ಮ ಹೆಮ್ಮೆಯ ವಿದ್ಯಾರ್ಥಿಗಳನ್ನು ಅಭಿನಂದಿಸಲು ಬಯಸುತ್ತೇನೆ. ಅವರ ಈ ಸಾಧನೆಯು ಅವರ ಪರಿಶ್ರಮ ಮತ್ತು ಬದ್ಧತೆಗೆ ಹಿಡಿದ ಕನ್ನಡಿಯಾಗಿದೆ. ಅದೇ ರೀತಿ ಈ ಸಾಧನೆಯಲ್ಲಿ ವಿದ್ಯಾರ್ಥಿಗಳ ಪೋಷಕರ ಪಾತ್ರವೂ ಸಾಕಷ್ಟಿದೆ. ನಮ್ಮ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಮಾಡುವ ಎಲ್ಲ ಪ್ರಯತ್ನಗಳಿಗೆ ನಾವು ಶುಭ ಹಾರೈಸುತ್ತೇವೆ” ಎಂದರು.
ಪ್ರತಿವರ್ಷ ಐಐಟಿಗಳು ಜೆಇಇ ಮೇನ್ಸ್ ಅರ್ಹತೆ ಹೊಂದಿದ ವಿದ್ಯಾರ್ಥಿಗಳಿಗಾಗಿ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯನ್ನು ಆಯೋಜಿಸುತ್ತವೆ. ಜೆಇಇ ಮೇನ್ ಅನ್ನು ದೇಶಾದ್ಯಂತ ಇರುವ ವಿವಿಧ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಾಜೀಸ್ (ಎನ್ಐಟಿಗಳು) ಮತ್ತು ಇತರ ಕೇಂದ್ರ ಅನುದಾನಿತ ಕಾಲೇಜುಗಳ ಪ್ರವೇಶಕ್ಕೆ ನಡೆಸಲಾಗುತ್ತದೆ. ಇನ್ನು ಜೆಇಇ ಅಡ್ವಾನ್ಸ್ಡ್ ಅನ್ನು ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ (ಐಐಟಿ)ಗಳ ಪ್ರವೇಶಕ್ಕೆ ಪರಿಗಣಿಸಲಾಗುತ್ತದೆ. ವಿದ್ಯಾರ್ಥಿಗಳು ಜೆಇಇ ಮೇನ್ ಮತ್ತು ಜೆಇಇ ಅಡ್ವಾನ್ಸ್ಡ್ ಪರೀಕ್ಷೆಗಳೆರಡನ್ನೂ ತೆಗೆದುಕೊಳ್ಳುತ್ತಾರೆ. 2024 ನೇ ಸಾಲಿನ ಜೆಇಇ (ಅಡ್ವಾನ್ಸ್ಡ್) ಪೇಪರ್ 1 ಮತ್ತು ಪೇಪರ್ 2 ರ ಪರೀಕ್ಷೆಗೆ 1,80,200 ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪೈಕಿ 48,248 ವಿದ್ಯಾರ್ಥಿಗಳು ಜೆಇಇ (ಅಡ್ವಾನ್ಸ್ಡ್) 2024 ಅರ್ಹತೆ ಪಡೆದಿದ್ದಾರೆ.
ಆಕಾಶ್ ಪ್ರೌಢಶಾಲೆ ಮತ್ತು ಪದವಿಪೂರ್ವ ಶಾಲೆ ವಿದ್ಯಾರ್ಥಿಗಳಿಗಾಗಿ ವಿವಿಧ ಕೋರ್ಸ್ ಗಳ ಮಾದರಿಗಳನ್ನು ವಿನ್ಯಾಸಗೊಳಿಸಿ ಅವರಿಗೆ ಸಮಗ್ರ ಐಐಟಿ-ಜೆಇಇ ತರಬೇತಿಯನ್ನು ನೀಡುತ್ತಿದೆ. ಇತ್ತೀಚೆಗೆ ಆಕಾಶ್ ಕಂಪ್ಯೂಟರ್ ಆಧಾರಿತ ತರಬೇತಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ತನ್ನ iTutor  ಪ್ಲಾಟ್ ಫಾರ್ಮ್ ಮೂಲಕ ಧ್ವನಿಮುದ್ರಿತ ವಿಡಿಯೋ ಬೋಧನೆಗಳನ್ನು ಪೂರೈಸುತ್ತಿದೆ. ಇದರ ಮೂಲಕ ವಿದ್ಯಾರ್ಥಿಗಳು ಸ್ವಯಂ ಆಧಾರದಲ್ಲಿ ಕಲಿಯಬಹುದು ಮತ್ತು ಯಾವುದೇ ತಪ್ಪಿ ಹೋದ ಅಭ್ಯಾಸಗಳನ್ನು ಪಡೆದುಕೊಳ್ಳಬಹುದಾಗಿದೆ. ಅದೇರೀತಿ, ನೈಜ ಪರೀಕ್ಷೆ ರೂಪದಲ್ಲಿಯೇ ಅಣಕು ಪರೀಕ್ಷೆಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳನ್ನು ಸಮರ್ಪಕವಾಗಿ ಪರೀಕ್ಷೆಯನ್ನು ಎದುರಿಸಲು ಸಿದ್ಧಪಡಿಸಲಾಗುತ್ತದೆ.

City Today News 9341997936