Gopalan Aerospace Delivers Cutting-Edge Transporters for Indian Defence, Marking a Milestone in Self-Reliance

Bangalore, India –08th January, 2024: Gopalan Aerospace, a leading innovator in the Indian aerospace industry, marked a significant milestone with the dispatch of a custom-built, 4-axle, hydraulic suspension, steerable ground vehicle capable of carrying a hefty 54-ton payload to the Defence Research and Development Organisation (DRDO). This ambitious project, completed within a remarkable 8 months, represents a pivotal step towards India’s self-reliance in critical defence technology. 

The “Motor Transporter” project stands as a testament to Gopalan Aerospace’s ingenuity and commitment. These highly sophisticated vehicles, specifically designed for defence applications, offer unparalleled robustness and manoeuvrability. Their robust trailer design, equipped with hydraulic suspension and steerable wheels in both automatic and manual modes, allows them to navigate even the most challenging terrains with ease. Furthermore, the transporters boast fireproof canopies for enhanced safety and wire rope isolators to protect the payload from transportation shocks. Their design adheres to stringent STEC standards, ensuring the highest levels of quality and reliability.

The successful completion of the “Motor Transporter” project was celebrated with a flag-off ceremony attended by Mr. Sharath Kumar Bache Gowda, MLA, Hoskote, and Dr. Prabhakar. The event served as a powerful showcase of Gopalan Aerospace’s capabilities and an ode to the team’s dedication.

Dr. C Prabhakar, Director of Gopalan Aerospace said, “This project exemplifies Gopalan Aerospace’s dedication to exceeding expectations and pushing the boundaries of engineering excellence. We are proud to partner with DRDO in fulfilling our vision of making India self-reliant in critical defence technology. This transporter represents the culmination of our expertise and showcases our ability to deliver complex and high-performance systems on time and within budget.”

Gopalan Aerospace, renowned for its expertise in precision machining, sheet metal fabrication, and advanced assembly techniques, boasts a proven track record in delivering cutting-edge solutions for the Indian defence sector. The company holds leadership positions in areas like active and passive radars, aerial targets, and drones, collaborating with prestigious partners like Israel IAI, Rafale, DRDO, and the Indian armed forces.

This landmark achievement marks a significant step forward in India’s quest for self-reliance in defence technology. Gopalan Aerospace, through its relentless innovation and unwavering commitment, continues to play a pivotal role in shaping a future where India stands tall as a technologically empowered nation.

Gopalan Aerospace is a leading aerospace company based in Bangalore, India. With a focus on innovation and cutting-edge technology, the company offers a range of products and services in the aerospace industry. Gopalan Aerospace primarily serves the aerospace industry, including government agencies, defence organizations and aviation companies.

Gopalan Aerospace has a proven track record of successfully delivering complex aerospace projects, earning the trust and confidence of its customers. The company continuously invests in research and development, allowing it to stay at the forefront of technological advancements in the aerospace industry. Gopalan Aerospace also has established strategic partnerships with key industry players, enhancing its capabilities and expanding its market reach.

City Today News 9341997936

ಸೌದಿ ಅರೇಬಿಯಾ: ಜನವರಿಯಲ್ಲಿ 17ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ.

ಅನಿವಾಸಿ ಕನ್ನಡಿಗರ ಸ್ವಾಗತ ಸಮಿತಿ, ಸೌದಿ ಅರೇಬಿಯಾ ಮತ್ತು ಹೃದಯವಾಹಿನಿ – ಕರ್ನಾಟಕ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಹಾಗೂ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ.

17ನೇ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನವು ಜನವರಿ 18 ಮತ್ತು 19, 2024ರಂದು ದಮಾಮ್ ನ ಸಫಾ ಸಭಾಂಣದಲ್ಲಿ 2 ದಿನಗಳ ಕಾಲ ಅದ್ಧೂರಿಯಾಗಿ ಹಮ್ಮಿಕೊಂಡಿರುತ್ತೇವೆ.

ಸಮ್ಮೇಳನದಲ್ಲಿ ಸಾಹಿತ್ಯಕ್ಕೆ ಸಂಬಂದಪಟ್ಟಂತೆ ಕವಿಗೋಷ್ಠಿ, ಹಾಸ್ಯಗೋಷ್ಠಿ, ಮಾಧ್ಯಮಗೋಷ್ಠಿ ಹಾಗೂ ಅನಿವಾಸಿ ಕನ್ನಡಿಗರ ಗೋಷ್ಠಿ ಜರಗಲಿವೆ.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭರತನಾಟ್ಯ, ಜಾನಪದ ನೃತ್ಯ, ನೃತ್ಯ ರೂಪ, ಪಟ್ಲ ಫೌಂಡೇಶನ್ ನ ಬಹರೇನ್ ಮತ್ತು ಸೌದಿ ಅರೇಬಿಯಾ ಘಟಕದ ಕಲಾವಿದರಿಂದ ಯಕ್ಷಗಾನ, ಡೊಳ್ಳು ಕುಣಿತ, ಮಂಗಳೂರಿನ ಬ್ಯಾರಿ ಜಾನಪದ ಕಲಾವಿದರಿಂದ ದಫ್, ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟದಿಂದ ಜಾನಪದ ಸಂಭ್ರಮ ಮುಂತಾದ ಕಲೆಗಳು ಪ್ರದರ್ಶನಗೊಳ್ಳುವವು. ಕರ್ನಾಟಕದ ಕಲೆ, ಮತ್ತು ಸಂಸ್ಕೃತಿಗಳು ವಿದೇಶಿ ನೆಲವಾದ ದಮ್ಮಾಮ್ ನಲ್ಲಿ ಪ್ರತಿಬಿಂಬಿಸಲಿವೆ.

ಈ ಹಿಂದೆ 2004, 2012 ಮತ್ತು 2019ರಲ್ಲಿ ಅಬುಧಾಬಿ, 2005 ಮತ್ತು 2010ರಲ್ಲಿ ಸಿಂಗಾಪುರ, 2006 ಮತ್ತು 2011ರಲ್ಲಿ ಬಹರೇನ್, 2007ರಲ್ಲಿ ಕುವೈಟ್, 2008ರಲ್ಲಿ ಕತಾ‌ರ್, 2009ರಲ್ಲಿ ದುಬೈ ಮತ್ತು 2013ರಲ್ಲಿ ಆಫ್ರಿಕಾದ ಕೀನ್ಯಾ, 2014ರಲ್ಲಿ ಶಾರ್ಜಾ, 2017ರಲ್ಲಿ ಆಸ್ಟ್ರೇಲಿಯಾ, 2015 2018 ಕೆನಡಾ ಮತ್ತು 2021 ಮಸ್ಕಟ್ ಅನುಕ್ರಮವಾಗಿ 16 ಸಮ್ಮೇಳನಗಳು ಅದ್ಧೂರಿಯಾಗಿ ನಡಿದಿರುತ್ತವೆ.

ಸಮ್ಮೇಳನ ನಡೆಯಲಿರುವ ಸಭಾಂಗಣದ ಹೊರವಲಯದಲ್ಲಿ ವಸ್ತು ಪ್ರದರ್ಶನ ಏರ್ಪಡಿಸಲಾಗುವುದು. ಸೌದಿ ಅರೇಬಿಯಾದಲ್ಲಿ 40,000ಕ್ಕೂ ಹೆಚ್ಚು ಕನ್ನಡಿಗರಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು  ಸಮ್ಮೇಳನದಲ್ಲಿ ಭಾಗವಹಿಸುವಂತೆ ಪ್ರಚಾರ ನೀಡಲಾಗುವುದು. ಗಲ್ಫ್ ರಾಷ್ಟ್ರಗಳಾದ, ಬಹರೇನ್, ಅಬು ಧಾಬಿ, ಕುವೈತ್, ಕತಾರ್, ಶಾರ್ಜಾ, ಮತ್ತು ದುಬೈನಲ್ಲಿ ನೆಲೆಸಿರುವ ಕನ್ನಡಿಗರು ಸಮ್ಮೇಳನದಲ್ಲಿ ಪಾಲ್ಗೊಳ್ಳುವಂತೆ ಆಮಂತ್ರಿಸಲಾಗುವುದು.

ಜನವರಿ 18 ರಂದು ಮಧ್ಯಾಹ್ನ ಉದ್ಘಾಟನೆ ನೆರವೇರಿಸಲು ಕರ್ನಾಟಕದ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ ಅವರನ್ನು ಆಮಂತ್ರಿಸಲಾಗುವುದು. ಎರಡು ದಿನಗಳ ಸಮ್ಮೇಳನದ ಗಣ್ಯರನ್ನಾಗಿ ವಿಧಾನಸಭಾ ಸಭಾಪತಿಗಳಾದ ಶ್ರೀ ಯು ಟಿ ಖಾದರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶ್ರೀ ಶಿವರಾಜ್

ತಂಗಡಗಿ ಕೃಷಿ ಖಾತೆ ಸಚಿವರಾದ ಶ್ರೀ ಚೆಲುವರಾಯಸ್ವಾಮಿ, ಆರೋಗ್ಯ ಖಾತೆ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್, ಉನ್ನತ ಶಿಕ್ಷಣ ಖಾತೆ ಸಚಿವರಾದ ಶ್ರೀ ಮಧು ಬಂಗಾರಪ್ಪ, ಪೌರಾಡಳಿತ ಮತ್ತು ಹಜ್ ಖಾತೆ ಸಚಿವರಾದ ಶ್ರೀ ರಹಿಂ ಖಾನ್ ಅನಿವಾಸಿ ಭಾರತೀಯ ವೇದಿಕೆ – ಕರ್ನಾಟಕ ಇದರ ಉಪಾಧ್ಯಕ್ಷರಾದ ಡಾ ಆರತಿ ಕೃಷ್ಣ, ಸೌದಿ ಅರೇಬಿಯಾದ ಭಾರತ ರಾಯಭಾರಿ ಡಾ.ಸುಹೇಲ್ ಆಜಾಜ್ ಖಾನ್, ವಿಧಾನ ಶಾಸಕ ಶ್ರೀ ಬಿ. ಎಂ. ಫಾರೂಕ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟ ಪೂರ್ವ ಅಧ್ಯಕ್ಷರಾದ ಪ್ರೊ. ಎಸ್. ಜಿ. ಸಿದ್ದರಾಮಯ್ಯ ಅವರನ್ನು ಆಮಂತ್ರಿಸಲಾಗಿದೆ.

ಜನವರಿ 19ರ ಸಂಜೆ ಸಮಾರೋಪ ಮತ್ತು ಪುರಸ್ಕಾರ ಸಮಾರಂಭ ಜರಗಲಿರುವವು. ಕರ್ನಾಟಕ ಮತ್ತು ಭಾರತದ ಇತರ ಭಾಗಗಳಿಂದ ಸುಮಾರು 100ಕ್ಕೂ ಹೆಚ್ಚು ಸದಸ್ಯರ ಸಾಂಸ್ಕೃತಿಕ ನಿಯೋಗ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದೆ. ವಿವಿಧ ದೇಶಗಳ ಕನ್ನಡ ಸಂಘಗಳ ಪದಾಧಿಕಾರಿಗಳು ಸಮ್ಮೇಳನದಲ್ಲಿ ಭಾಗವಹಿಸಲಿರುವರು.

ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆಯನ್ನು ಜನವರಿ ಮೊದಲ ವಾರ ಮಾಡಲಾಗುವುದು. ಹಿರಿಯ ಅರ್ಹ ಸಾಹಿತಿಗಳ ಹೆಸರು ಸೂಚಿಸಲಿಚ್ಚಿಸುವವರು ಜನವರಿ 2. 2024ರೊಳಗೆ hrudayavahini@rediffmail.com

ಸುಪ್ರಸಿದ್ಧ ಕಲಾವಿದರಾದ. ಕುದ್ರೋಳಿ ಗಣೇಶ್ ಅವರ ತಂಡದಿಂದ ಮ್ಯಾಜಿಕ್ ಶೋ, ಮಿಮಿಕ್ರಿ ಗೋಪಿ ಅವರಿಂದ ಸ್ವರಾನುಕರಣೆ, ಮಹದೇವ ಸತ್ತಿಗೇರಿ ಅವರಿಂದ ಹಾಸ್ಯ ಭಾಷಣ, ಗೋ ನಾ ಸ್ವಾಮಿ, ಪುಷ್ಪ ಆರಾಧ್ಯ, ಅನಿಲ್ ಬಾಸಗಿ ಮತ್ತು ಶಿವು ಮುಂತಾದ ಗಾಯಕರಿಂದ ಸ್ವರಮಂಜರಿ, ರಂಗ ಸಂಸ್ಕೃತಿ ಬೆಂಗಳೂರು ತಂಡದಿಂದ ಕಿರುನಗೆ ನಾಟಕ, ಬಹರೇನ್ ಕಲಾವಿದರಿಂದ ಯಕ್ಷಗಾನ, ಮಂಗಳೂರಿನ ಬ್ಯಾರಿ ಕಲಾವಿದರಿಂದ ದಫ್ ಪ್ರದರ್ಶನ, ಪುಷ್ಕರ ಪರ್ಫಾರ್ಮಿಂಗ್ ಆರ್ಟ್ಸ್ ಬೆಂಗಳೂರು ಇವರಿಂದ. ಭರತನಾಟ್ಯ,

ಸಾಗರ ಮತ್ತು ಮಂಡ್ಯ ಜಾನಪದ ಕಲಾವಿದರಿಂದ ಡೊಳ್ಳು ಕುಣಿತ ಇನ್ನು ಹಲವಾರು ಕಲಾವಿದರಿಂದ. ವೈವಿಧ್ಯಮಯ ಕಾರ್ಯಕ್ರಮಗಳು ಸೌದಿ ಅರೇಬಿಯಾದ ಕನ್ನಡಿಗರನ್ನು ರಂಜಿಸಲಿವೆ.

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತಿ: ಅನಿವಾಸಿ ಕನ್ನಡಿಗರ ಸ್ವಾಗತ ಸಮಿತಿ ಸೌದಿ ಅರೇಬಿಯಾ ಗೌರವಾಧ್ಯಕ್ಷರಾದ ಝಕರಿಯಾ ಬಟ್ಟೆ, ಶೇಖ್ ಕರ್ನಿರೆ, ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿ ಸ್ಥಾಪಕ ಅಧ್ಯಕ್ಷ, ಕೆ. ಪಿ ಮಂಜುನಾಥ್ ಸಾಗರ್, ಅನಿವಾಸಿ ಕನ್ನಡಿಗರ ಸ್ವಾಗತ ಸಮಿತಿ ಅಧ್ಯಕ್ಷ ಸತೀಶ್ ಬಜಾಲ್, ರಫೀಜ್ ಸೂರಿಂಜೆ ಕಾರ್ಯದರ್ಶಿ ಆಯಾಜ್, ಸಮ್ಮೇಳನ ಸಮಿತಿ ಜಂಟಿ ಕಾರ್ಯದರ್ಶಿ ಗೋ ನಾ. ಸ್ವಾಮಿ. ಕಲಾವಿದರ ಒಕ್ಕೂಟದ ಅಧ್ಯಕ್ಷ ನಾಗರಾಜ್ ಇದ್ದರು.

City Today News 9341997936

ರಾಜ್ಯದಲ್ಲಿ “ರಾಷ್ಟ್ರೀಯ ಶಿಕ್ಷಣ ನೀತಿ 2020” ನ್ನು ಪರಿಣಾಮಕಾರಿಯಾಗಿ ಅನುಷ್ಠಾನ

Press meet held at press club of Bangalore

ಈಗಾಗಲೇ ತಮಗೆ ತಿಳಿದಿರುವಂತೆ ಭಾರತ ಸ್ವಾತಂತ್ರಗೊಂಡ ಮೇಲೆ 4 ಪ್ರಮುಖ ಶಿಕ್ಷಣ ನೀತಿಗಳ ಆಶಯಗಳೊಂದಿಗೆ ಭಾರತದ ಶಿಕ್ಷಣ ವ್ಯವಸ್ಥೆ ಸಂಪನ್ನಗೊಳ್ಳುತ್ತಿವೆ. ಮನುಷ್ಯ ತನ್ನ ಪೂರ್ಣ ಸಾಮರ್ಥ್ಯಗಳಿಸಿಕೊಳ್ಳಲು ಸಮಾನತೆಯುಳ್ಳ ಮತ್ತು ನ್ಯಾಯಸಂಗತವಾದ ಸಮಾಜವೊಂದನ್ನು ಅಭಿವೃದ್ಧಿಪಡಿಸಲು ಹಾಗೂ ರಾಷ್ಟ್ರದ ಏಳಿಗೆಯನ್ನು ಸಾಧಿಸಲು ಮೂಲಭೂತವಾಗಿ ಶಿಕ್ಷಣ ಅವಶ್ಯಕವಾಗಿದೆ ಎಂಬುದನ್ನು ತಿಳಿದು, ಭಾರತ ನಿರಂತರವಾಗಿ “ಮುನ್ನಡೆಯ ಕೀಲಿಕೈ” ಆಗಬೇಕೆಂಬ ಸದುದ್ಧೇಶದಿಂದ “ರಾಷ್ಟ್ರೀಯ ಶಿಕ್ಷಣ ನೀತಿ 2020″ ನ್ನು ಶಾಸನಬದ್ಧವಾಗಿ ಘೋಷಿಸಲಾಗಿದೆ.

ಈ ನೀತಿಯ ಆಶಯದಂತೆ 4 ಹಂತಗಳ ವಿನ್ಯಾಸವನ್ನು ರೂಪಿಸಿದ್ದು, 1. ಭೂನಾದಿ ಸಾಮರ್ಥ್ಯ 2. ಪೂರ್ವ ಪ್ರಾಥಮಿಕ 3. ಮಾಧ್ಯಮಿಕ ಹಾಗೂ 4. ಪ್ರೌಢಶಾಲಾ ಹಂತ ಇದರ ವಿನ್ಯಾಸದಂತೆ 5+3+3+4 ರ ಮರು ಕಲ್ಪನೆಯನ್ನು ಸಮಸ್ತ ಸಾರ್ವಜನಿಕರ ಒಪ್ಪಿಗೆಯ ಮೇರೆಗೆ ಶಾಸನಬದ್ಧವಾಗಿ ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ.

ಈ ನೀತಿಯನ್ನು ನಮ್ಮ ರಾಜ್ಯಮಟ್ಟದ ಶಿಕ್ಷಕರ ಸಂಘಟನೆ ಸಂಪೂರ್ಣವಾಗಿ ಅರಿತು ಅದರ ಮಹತ್ವವನ್ನು ಒಪ್ಪಿ ಇಡೀ ರಾಜ್ಯದ ಎಲ್ಲಾ CBSE, ICSE ಹಾಗೂ ರಾಜ್ಯಪಠ್ಯ ಕ್ರಮದಲ್ಲಿ ನೀತಿಗೆ ಪೂರಕವಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಎಂಬ ಬದಲಾವಣೆಗೊಂಡ ಹೆಸರಿನೊಂದಿಗೆ ಅಲ್ಲದೆ ಶಿಕ್ಷಣವನ್ನು ಸಮವರ್ತಿಪಟ್ಟಿಯಲ್ಲಿ ಇರಿಸಿಕೊಂಡು ಅದರ ಹೊಣೆಯಂತೆ ಕೇಂದ್ರ ಸರಕಾರ ತನ್ನ ಜವಾಬ್ದಾರಿಯನ್ನು ಅರಿತಿರುವಂತೆ ಹಲವಾರು ಶೈಕ್ಷಣಿಕ ಚಟುವಟಿಕೆಗಳನ್ನು (DIKSHA, PARAKHA) ಕೈಗೆತ್ತಿಕೊಂಡು ರಾಜ್ಯದ ಶೈಕ್ಷಣಿಕ ಚಟುವಟಿಕೆಗಳ ಮೌಲ್ಯಮಾಪನವನ್ನು 3, 6 ಮತ್ತು 9ನೇ ತರಗತಿಗಳಿಗೆ ಈಗಾಗಲೇ ನಡೆಸಲಾಗಿದೆ.

ಅಲ್ಲದೆ ಕರ್ನಾಟಕ ರಾಜ್ಯದಿಂದ ಮೇಲೆ ಕಾಣಿಸಿದ ಮೂರು ವಿಭಾಗಗಳಿಗೆ 36 ತಿಂಗಳು ತುಂಬಿದ ಸುಮಾರು 16 ಲಕ್ಷ ಮಕ್ಕಳು ವಿದ್ಯಾರ್ಜನೆಗೆ ಒಳಪಡುತ್ತಿದ್ದು, ಭೂನಾದಿ ಸಾಮರ್ಥ್ಯವನ್ನು ಮಗು ತನ್ನ ಮಾತೃಭಾಷೆಯೊಂದಿಗೆ ಆಯಾಯ

ರಾಜ್ಯದ ಭಾಷೆಯ ಮೂಲಕವೇ 5ನೇ ತರಗತಿಯವರೆಗೆ ಪಡೆಯಬೇಕೆಂಬ ಆಶಯವನ್ನು ವ್ಯಕ್ತಪಡಿಸಿದ್ದು, ಆ ಹಂತದಲ್ಲಿ ವಿಶ್ವ ಅಧ್ಯಯನದ ವರದಿಯ ಆಧಾರದಂತೆ ಮಗುವೊಂದು ಶೇಕಡಾ 85 ರಷ್ಟು ತನ್ನ ಮೆದುಳಿನಸಾಮಾರ್ಥ್ಯದೊಂದಿಗೆ ಸಂಪೂರ್ಣವಾಗಿ ತನ್ನ ಮಾತೃಭಾಷೆಯಲ್ಲಿಯೇ ಆ ಭಾಷೆಯ ಸಾಹಿತ್ಯದವರೆಗೆ ಅರ್ಜಿಸುವ ಸಾಮರ್ಥ್ಯವನ್ನು ಹೊಂದಿದ್ದು, ನಂತರ ಅರ್ಜಿಸಿದ ವಿಷಯವನ್ನು ವಿಶ್ವದ ಯಾವುದೇ ಭಾಷೆಗೆ ಸಂವಹನ ಭಾಷೆಯಾಗಿ ಬಳಸಿಕೊಳ್ಳಲು ಮಗು ಸಮರ್ಥವಾಗುತ್ತದೆ ಎನ್ನುವುದನ್ನು ತಿಳಿಸುತ್ತದೆ.

ಆ ಕಾರಣದಿಂದ ಕೇಂದ್ರ ಸರಕಾರದ ಹಿಡಿತದಲ್ಲಿರುವ CBSE, ICSE ಗಳನ್ನು ಕೂಡ ಇಂಗ್ಲಿಷ್‌ನ್ನೇ ಮಾಧ್ಯಮವಾಗಿ ಬಳಸಿಕೊಂಡಿದ್ದರೂ ಸಹ ಆ ಸಂಸ್ಥೆಗೆ ಸೇರ್ಪಡೆಗೊಳ್ಳುವಾಗ ಮಾತೃ ಭಾಷೆ mother tongue ಕಾಲಂನಲ್ಲಿ ನಮೂದಿಸಿದ ಭಾಷೆಯನ್ನೇ ಮಾತೃ ಭಾಷೆಯೆಂದು ಪರಿಗಣಿಸಿದ್ದರಿಂದ ಅದರ ನಿರ್ವಹಣೆ ಅತ್ಯಂತ ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳುವಂತೆ ಮಾಡುವುದು ಕೇಂದ್ರ ಸರಕಾರದ ಪ್ರಮುಖ ಜವಾಬ್ದಾರಿಯಾಗಿರುತ್ತದೆ. ಹಾಗಾಗಿ ಸ್ವತಃ ಕೇಂದ್ರ ಸರಕಾರವೇ ಒಂದು (Task force) “ಜಂಟಿ ಕಾರ್ಯಾಚರಣಾ ತಂಡ” ರಚಿಸುವ ನಿರ್ಣಯವನ್ನು “ರಾಷ್ಟ್ರೀಯ ಶಿಕ್ಷಣ ನೀತಿ 2020” ರಲ್ಲಿ ತೆಗೆದುಕೊಳ್ಳಲು ಅವಕಾಶ ಕಲ್ಪಿಸಿದ್ದು, ಅದು ಇನ್ನೆನು ತನ್ನ ಕಾರ್ಯಾಚರಣೆಯನ್ನು ನಡೆಸಲು ಪ್ರಾರಂಭಿಸಲಿದೆ.

ಈ ಕಾರಣದಿಂದ ನಮ್ಮ ದೇಶದಲ್ಲಿ ಶಿಕ್ಷಣವು ಸಮವರ್ತಿಪಟ್ಟಿಯಲ್ಲಿ ಗುರುತಿಸಿಕೊಂಡಿದ್ದು ಈ ಹಿಂದಿನ ಎಲ್ಲಾ ನೀತಿಗಳನ್ನು ಕೇಂದ್ರ ಸರಕಾರವೇ ರೂಪಿಸಿದ್ದು ಅದರ ಸಂಪೂರ್ಣ ಜವಾಬ್ದಾರಿಯನ್ನು NCERT ಮತ್ತು DSERT ಯ ಮೂಲಕ ನಡೆಯುವುತ್ತಿದ್ದು, ಪ್ರಸ್ತುತ್ತವು ಕೂಡ ನಮ್ಮ ಸಂಘಟನೆಗೆ ತಿಳಿದಂತೆ ರಾಜ್ಯದಲ್ಲಿ NEP 2020 ಇದರ ಆಶಯಗಳು ಸಂಪನ್ನಗೊಳ್ಳುತ್ತಿದೆ.

ಅಲ್ಲದೇ ಅತ್ಯಂತ ಸಮಪರ್ಕವಾದ ಆಶಯಗಳನ್ನು ಮರುವಿನ್ಯಾಸದೊಂದಿಗೆ ರೂಪುಗೊಂಡಿದ್ದು ಛಾವಿ ಭಾರತದ ಮಾನವ ಸಂಪತ್ತನ್ನು ಸಮೃದ್ಧವಾಗಿ ಬಳಸಿಕೊಳ್ಳುವ ತನ್ಮೂಲಕ ಶಿಕ್ಷಣದ ಮೂಲಕವೇ ಉದ್ಯೋಗಧಾತನಾಗಿ ಹೊರತರುವ ಎಲ್ಲಾ ಭರವಸೆಗಳನ್ನು ಮೂಡಿಸುವ ಈ ವ್ಯವಸ್ಥೆಯನ್ನು ಮಾನ್ಯ ಘನ ರಾಜ್ಯ ಸರಕಾರವು, ನೀತಿ ಆಶಯದಂತೆ ತನ್ನ ವ್ಯಾಪ್ತಿಯಲ್ಲಿ ಬದಲಾಯಿಸುವ ಅವಕಾಶಗಳನ್ನು ಇಟ್ಟುಕೊಂಡು, ಇನ್ನು ಉಳಿದಂತೆ ಯತಾವತ್ತಾಗಿ ನೀತಿ ಆಶಯಕ್ಕೆ ಪೂರಕವಾಗಿ ಅನುಷ್ಠಾನಗೊಳಿಸಲು ಮುಂದಾಗಬೇಕು ಜೊತೆಗೆ ದೇಶದಲ್ಲೇ ಪ್ರಥಮವಾಗಿ ಈ ನೀತಿಯನ್ನು ಅಳವಡಿಸಿಕೊಳ್ಳಲು ಅವಕಾಶ ಕಲ್ಪಿಸಿದವರಿಗೆ ಕನ್ನಡಿಗರಾದ ನಮ್ಮ ಹೆಮ್ಮೆಯ ಕೊಡುಗೆಯನ್ನು ದೇಶಕ್ಕೆ ನೀಡುವಂತೆ ತಾವು ಪಾತ್ರರಾಗಬೇಕೆಂದು ಈ ಮೂಲಕ ತಮ್ಮಲ್ಲಿ ಸಮನ್ವಯತೆಯನ್ನು ಸಾಧಿಸಬೇಕೆಂಬ ಉದ್ದೇಶವನ್ನು ಹೊಂದಿರುವ ರಾಜ್ಯದ ನಮ್ಮ ಹೆಮ್ಮೆಯ ಬೃಹತ್ ಶಿಕ್ಷಕರ ಸಂಘಟನೆ ರಾಜ್ಯ ಉಪಾಧ್ಯಕ್ಷರಾದ ಜಯಶೀಲ ಶೆಟ್ಟಿ ಕುಂದಾಪುರ, ಕರ್ನಾಟಕ ರಾಜ್ಯ ಶಿಕ್ಷಣ ಸಂಸ್ಥೆಗಳ ನೌಕರರ ಸಂಘ (ರಿ), ಬೆಂಗಳೂರು, ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ  ತಿಳಿಸಿದರು.

City Today News 9341997936

ಸರಕಾರಿ ಶಾಲೆಯ ವಿದಾರ್ಥಿಗಳಿಂದ ಶೌಚಾಲಯವನ್ನು ಶುಚಿತ್ವ ಗೊಳಿಸಿರುವ ಅಮಾನುಷ ಕೃತ್ಯ

Press meet held at press club of Bangalore

ಎಲುವಹಳ್ಳಿ ಮಾಲೂರು ತಾಲೂಕು, ಕೊಲಾರಜಿಲ್ಲೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿರುವ ಶೌಚಾಲಯಗಳನ್ನು ಮತ್ತು ಶೌಚಲಯ ಗುಂಡಿಗಳನ್ನು ವಿದ್ಯಾರ್ಥಿಗಳಿಂದ ಶುಚಿತ್ವಗೊಳಿಸಿರುವ ವಿಚಾರ ಮಾದ್ಯಮಗಳಲ್ಲಿ ಬಿತ್ತಾರಗೊಂಡಿತ್ತು, ತದನಂತರ ಬೆಂಗಳೂರಿನ ಆಂದ್ರ ಹಳ್ಳಿಯಲ್ಲಿರುವ ಸರಕಾರಿಶಾಲೆ ಮತ್ತು ಶಿವಮೊಗ್ಗ ಜಿಲ್ಲೆಯ ಗುಡ್ಡದ ನೇರಳ ಕೆರೆ ಸರಕಾರಿ ಶಾಲೆಯ ವಿದಾರ್ಥಿಗಳಿಂದ ಶೌಚಾಲಯವನ್ನು ಶುಚಿತ್ವ ಗೊಳಿಸಿರುವ ಅಮಾನುಷ ಕೃತ್ಯವು ತಿಳಿದು ಬಂದಿರುವುದರಿಂದ ಈ ಹೀನ ಕೃತ್ಯದ ವಿರುದ್ಧ ಬೆಂಗಳೂರಿನ ಕಾಡುಗೊಡಿ ನಿವಾಸಿ ಸಾಮಾಜಿಕ ಕಾರ್ಯಕರ್ತ ಶ್ರೀ ಪರಮೇಶ್.ವಿ ಎಂಬುವವರು ಸಾರ್ವಜನಿಕ ಹಿತಾಸಕ್ತಿ ರಿಟ್ ಅರ್ಜಿಯನ್ನು ತನ್ನ ವಕೀಲರಾದ ಧರ್ಮಪಾಲ ರವರ ಮೂಲಕ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಸಲ್ಲಿಸಿದರು. ಆ ರೀಟ್ ಅರ್ಜಿ ಸಂಖ್ಯೆ 29294/2023. ಇದರಲ್ಲಿ ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ ಮತ್ತು ಇತರನ್ನು ಪ್ರತಿವಾದಿಗಳನ್ನಾಗಿ ಮಾಡಿರುತ್ತಾರೆ. ಈ ಕೃತ್ಯಕ್ಕೆ ಸಂಬಂದಪಟ್ಟವರ ವಿರುದ್ಧ ಸೂಕ್ತ ಕ್ರಮಕೈಗೊಳಲು ಪ್ರಕರಣವನ್ನು ಸಿ ಐ ಡಿ ಗೆ ಹಸ್ತಾಂತರಿಸಿ, ಈ ಪ್ರಕರಣದ ಬಗ್ಗೆ ಒಂದು ಸೂಕ್ತ ಕಮಿಟಿ ರಚನೆ ಮಾಡಿ ಸರಕಾರಕ್ಕೆ ವರದಿ ಸಲ್ಲಿಸಬೇಕು ಅಲ್ಲದೆ 10 ವರ್ಷಗಳಿಂದ ಇಲ್ಲಿಯ ತನಕ ಇಂತಹ ಎಷ್ಟು ಪ್ರಕರಣ ಬೆಳಕಿಗೆ ಬಂದಿದೆ ಎಂಬ ವರದಿ ನ್ಯಾಯಲಕ್ಕೆ ಸಲ್ಲಿಸಬೇಕೆಂಬ ಮನವಿಯನ್ನು ಪಿರ್ಯಾದುದಾರರು ತನ್ನ

ಅರ್ಜಿಯಲ್ಲಿ ಕೇಳಿಕೊಂಡಿದ್ದಾರೆ ಸದ್ರಿರಿಟ್ ಅರ್ಜಿ ತಾ. 28-12-2623 ರಂದು ನ್ಯಾ. ನಟರಾಜ ಮತ್ತು ನ್ಯಾ ಕೆ.ವಿ ಅರವಿಂದ ಅವರಿದ್ದ ವಿಭಾಗಿಯ ಪೀಠದಲ್ಲಿ ವಿಚಾರಣೆಗೆ ಬಂದು ಎಲ್ಲಾ ಪ್ರತಿವಾದಿಗಳಿಗೆ ನೋಟಿಸು ಜಾರಿ ಮಾಡಿ ಆದೇಶಿಸಿದ್ದಾರೆ. ಸದರಿ ಅದೇಶ ಪ್ರತಿ ಮತ್ತು ರಿಟ್ ಅರ್ಜಿಯ ಪ್ರತಿಗಳನ್ನು ಇಲ್ಲಿ ಲಗತ್ತಿಸಿದೆ ಎಂದು ಧರ್ಮಪಾಲ ವಕೀಲರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು

City Today News 9341997936

ಬೆಂಗಳೂರು ಸಿರಿಧಾನ್ಯಗಳ ರಾಜಧಾನಿ- ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು, ಜನವರಿ 7, 2024:  ಸಾವಯವ ಹಾಗೂ ಸಿರಿಧಾನ್ಯಕ್ಕೆ ಇಡೀ ದೇಶಕ್ಕೆ ನಮ್ಮ ಬೆಂಗಳೂರು ರಾಜಧಾನಿ ಎಂದು ಹೇಳಬಹುದು. ಬೆಂಗಳೂರಿನಿಂದ ಆರಂಭವಾದಂತಹ ಸಾವಯವ ಚಳುವಳಿ ನಮ್ಮ ಇಡೀ ದೇಶಕ್ಕೆ ಹರಡಿದೆ.ಅದೇ ರೀತಿಯಲ್ಲಿ  ನಮ್ಮ ಕರ್ನಾಟಕದಲ್ಲಿ ಆರಂಭವಾದಂತಹ ಸಿರಿಧಾನ್ಯದಲ್ಲಿನ ಚಳುವಳಿ ದೇಶ ವಿದೇಶಕ್ಕೆ ಹರಡಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಕರ್ನಾಟಕ ಸರ್ಕಾರ ಆಯೋಜಿಸಿರುವ  ಸಿರಿಧಾನ್ಯ ಮತ್ತು ಸಾವಯವ ಅಂತರಾಷ್ಟ್ರೀಯ ವಾಣಿಜ್ಯ ಮೇಳದ ಸಮಾರೋಪ ಸಮಾರಂಭ ಅರಮನೆ ಮೈದಾನದಲ್ಲಿನ ತ್ರಿಪುರಾವಾಸಿನಿಯಲ್ಲಿ ಅದ್ಧೂರಿಯಾಗಿ ನಡೆಯಿತು. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ, ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ, ಕೃಷಿ ಸಚಿವರಾದ ಎನ್. ಚೆಲುವರಾಯ ಸ್ವಾಮಿ ಹಾಗೂ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ್ ಮತ್ತೀತರ ಗಣ್ಯರು  ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸಭೆಯಲ್ಲಿ ಉಪಸ್ಥಿತರಿದ್ದರು.

ಸಚಿವ ಕೃಷ್ಣ ಬೈರೇಗೌಡ  ಮಾತನಾಡುತ್ತಾ,“ಸಾವಯವ ಹಾಗೂ ಸಿರಿಧಾನ್ಯಕ್ಕೆ ಇಡೀ ದೇಶಕ್ಕೆ ನಮ್ಮ ಬೆಂಗಳೂರು ರಾಜಧಾನಿ ಎಂದು ಹೇಳಬಹುದು. ಬೆಂಗಳೂರಿನಿಂದ ಆರಂಭವಾದಂತಹ ಸಾವಯವ ಚಳುವಳಿ ನಮ್ಮ ಇಡೀ ದೇಶಕ್ಕೆ ಹರಡಿದೆ.ಅದೇ ರೀತಿಯಲ್ಲಿ  ನಮ್ಮ ಕರ್ನಾಟಕದಲ್ಲಿ ಆರಂಭವಾದಂತಹ ಸಿರಿಧಾನ್ಯದಲ್ಲಿನ ಚಳುವಳಿ ದೇಶ ವಿದೇಶಕ್ಕೆ ಹರಡಿದೆ. ಬೆಂಗಳೂರನ್ನು ಮಿಲ್ಲೇಟ್ ಕ್ಯಾಪಿಟಲ್ ಎನ್ನಬಹುದು.ನಮ್ಮ ರೈತರು ಬೆಳೆದಂತಹ ಸಾವಯವ ಸಿರಿಧಾನ್ಯ ಉತ್ಪನ್ನಗಳಿಗೆ ಇವತ್ತು ಮಾರಕುಟ್ಟೆ ಸೃಷ್ಟಿಯಾಗಿ ರೈತರಿಗೂ ಲಾಭ ಸಿಗುತ್ತಿದೆ” ಎಂದು ಹೇಳಿದರು.

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ಅವರು ಮಾತನಾಡುತ್ತಾ, ಬೆಂಗಳೂರಿನಲ್ಲಿ ಈ ಸಿರಿಧಾನ್ಯ ಮೇಳದಲ್ಲಿ ಭಾಗವಹಿಸುತ್ತಿರುವುದಕ್ಕೆ ತುಂಬಾ ಸಂತೋಷವಾಗಿದೆ.ಇಲ್ಲಿ ಸಾಕಷ್ಟು ಸಾವಯವ ಹಾಗೂ ಸಿರಿಧಾನ್ಯಗಳ ಉತ್ಪನ್ನಗಳನ್ನು ನೋಡುವ ಅವಕಾಶ ಸಿಕ್ಕಿತು.ಸಿರಿಧಾನ್ಯವನ್ನು ಹಿಂದಿನ ಕಾಲದಿಂದಲೂ ನಮ್ಮ ಪೂವರ್ಜರು ಉಪಯೋಗಿಸುತ್ತಿದ್ದರು.ಇದೊಂದು ನೈಸರ್ಗಿಕವಾದ ಉತ್ಪನ್ನವಾಗಿದೆ. ಆರೋಗ್ಯಕ್ಕೂ ಇದು ಬಹಳ ಒಳ್ಳೆಯದು” ಎಂದರು.

ಸಚಿವ ಚೆಲುವರಾಯ ಸ್ವಾಮಿ ಈ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ, ರೈತರು ಸಾಕಷ್ಟು ಸಮಸ್ಯೆಗಳನ್ನೂ ಎದುರಿಸುತ್ತಿದ್ದರೂ ತಾವೇ ಬೆಳೆದ ಉತ್ಪನ್ನಗಳನ್ನು ರಾಜ್ಯದ ಜತೆಗೆ ಇತರೆ ರಾಜ್ಯಕ್ಕೂ ಮಾರಾಟ ಮಾಡುತ್ತಿದ್ದಾರೆ.16 ರಾಜ್ಯಗಳು ಈ ಮೇಳಲ್ಲಿ ಭಾಗವಹಿಸಿದ್ದು ಹೆಮ್ಮೆಯ ವಿಷಯವಾಗಿದೆ. ಸಾಕಷ್ಟು ಮಾರಾಟಗಾರರು ಭಾಗವಹಿಸಿದ್ದಾರೆ. 150 ಕೋಟಿಗೂ ಹೆಚ್ಚು ವಹಿವಾಟು ನಡೆದಿದೆ. ಇದೊಂದ ಅರ್ಥಪೂರ್ಣವಾದ ಅಂತರಾಷ್ಟ್ರೀಯ ಮೇಳವಾಗಿದೆ. ಕಡಿಮೆ ನೀರಿನಲ್ಲಿ, ಕಡಿಮೆ ವೆಚ್ಚದಲ್ಲಿ, ಕಡಿಮೆ ಅವಧಿಯಲ್ಲಿ  ಬೆಳೆಯಬಹುದಾದ ಈ ಸಿರಿಧಾನ್ಯ. ಆರೋಗ್ಯದ ಜೊತೆಗೆ ರೈತರಿಗೆ ಆರ್ಥಿಕ ಸಬಲೀಕರಣ ನೀಡುತ್ತದೆ. ಆರ್ಥಿಕ ಸ್ಥಿರತೆ ಸಾಧಿಸುವುದಕ್ಕೆ ಇದು ಸಹಾಯಕವಾಗುತ್ತದೆ” ಎಂದರು.

ಇನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾತನಾಡುತ್ತಾ, “ನಮ್ಮ ಹಿಂದಿನವರು ದೇಹದ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಏನ್ನೆಲ್ಲಾ ಆಹಾರ ಸೇವಿಸುತ್ತಿದ್ದರೋ ಈಗ ಮತ್ತೆ ಅದನ್ನು ನಾವು ಅನುಸರಿಸುವುಕ್ಕೆ ಶುರುಮಾಡಿದ್ದೇವೆ.ಅದರಲ್ಲಿ ಒಂದು ಈ ಸಿರಿಧಾನ್ಯ. ಈ ಸಮ್ಮೇಳನ ಬಹಳ ಉತ್ತಮವಾಗಿ ನಡೆದಿದೆ. ಇಡೀ ದೇಶಕ್ಕೆ ಇದು ಮಾದರಿಯಾಗಿದೆ. ಈ ಸಿರಿಧಾನ್ಯದಲ್ಲಿಯೇ ಸಾಕಷ್ಟು ವಿಟಮಿನ್ಸ್ ಗಳು ಇವೆ. ಮಾತ್ರೆಗಳನ್ನು ಸೇವಿಸುವ ಬದಲು ಇದನ್ನು ಸೇವಿಸುವುದು ಆರೋಗ್ಯಕ್ಕೆ ಉತ್ತಮ” ಎಂದು ಹೇಳಿದರು.

ರಾಗಿ, ಹಾರಕ, ಸಾಮೆ,ಊದಲು, ಕೊರಲು ಹಾಗೂ ಬರಗು, ನವಣೆಯಂತಹ ವೈವಿಧ್ಯಮಯ ಸಿರಿಧಾನ್ಯಗಳಿಂದ ತಯಾರಿಸಲಾಗಿದ್ದ ಸಿಹಿ ತಿನಿಸುಗಳು, ಕಾಡು ಜೇನು, ಜೋನಿ ಬೆಲ್ಲ, ನೈಸರ್ಗಿಕ ಬೆಲ್ಲ, ನಾಟಿ ಬೆಲ್ಲ, ಅಗಸೆ ಬೀಜ, ಸೂರ್ಯಕಾಂತಿ ಬೀಜ, ಚಿಯಾ ಸೀಡ್, ಪಾಲಿಶ್ ರಹಿತ ಧಾನ್ಯ ಚಟ್ನಿಪುಡಿ, ಉಪ್ಪಿನಕಾಯಿ, ದೇಸೀ ತಳಿಯ ಸಿರಿಧಾನ್ಯ,  ಕೈಮಗ್ಗ, ಖಾದಿ, ಕರಕುಶಲ ಉತ್ಪನ್ನಗಳು ಈ ಮೇಳದಲ್ಲಿ ಲಭ್ಯವಿದ್ದವು.

ಕರ್ನಾಟಕ ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ, ಮಣಿಪುರ, ಬಿಹಾರ ಸೇರಿ ದೇಶದ 17 ರಾಜ್ಯಗಳಿಂದ ಸಿರಿಧಾನ್ಯ ಕಂಪನಿಗಳು ಅಭಿವೃದ್ಧಿಪಡಿಸಿರುವ ಉತ್ಪನ್ನಗಳನ್ನು ಮಳಿಗೆಗಳಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಸಿರಿಧಾನ್ಯ ಮತ್ತು ಸಾವಯವ ಆಹಾರ ಮಳಿಗೆ,  ಅಂತಾರಾಷ್ಟ್ರೀಯ ಮತ್ತು ಮಾರುಕಟ್ಟೆದಾರರ ಸಭೆ, ಗ್ರಾಹಕರ ಸಂಪರ್ಕ, ರೈತರ ಕಾರ್ಯಾಗಾರ ಪೆವಿಲಿಯನ್ಗಳನ್ನು ಸ್ಥಾಪಿಸಲಾಗಿದೆ. ಸಾವಯವ ಮತ್ತು ನೈಸರ್ಗಿಕ ಉತ್ಪಾದಕರು, ಸಗಟು, ಚಿಲ್ಲರೆ ವ್ಯಾಪಾರಿಗಳು, ಸ್ವಸಹಾಯ ಗುಂಪುಗಳು, ರ್ತದಾರರು ಮತ್ತು ಆಮದುದಾರರು ಸೇರಿ ವ್ಯಾಪಾರ ಮತ್ತು ಉತ್ತೇಜನ, ಜ್ಞಾನ ಹಂಚಿಕೆ ವೇದಿಕೆ, ಸಿರಿಧಾನ್ಯ ಸಮ್ಮೇಳನ, ರೈತರ ಕಾರ್ಯಾಗಾರಗಳು, ಬಿ2ಬಿ, ಖರೀದಿದಾರರು ಮತ್ತು ಮಾರಾಟಗಾರರ ಭೇಟಿ, ಗ್ರಾಹಕ ಸಂಪರ್ಕ ಕಾರ್ಯಕ್ರಮ ಮಳಿಗೆಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಇದಲ್ಲದೇ ಇಂದಿರಾ ಕ್ಯಾಂಟೀನ್ ಮತ್ತು ಮಧ್ಯಾಹ್ನದ ಶಾಲಾ ಊಟದಲ್ಲಿ ಸಿರಿಧಾನ್ಯ ಬಳಕೆಗೆ ಒತ್ತು ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ಘೋಷಣೆ  ಮಾಡಿದ್ದಾರೆ.

City Today News 9341997936