ರಾಷ್ಟ್ರ ಮಟ್ಟದಲ್ಲಿ ಸಮಾಜಿಕ ಬಂಜಾರ (ಲಂಬಾಣಿ) ವಧುವರರ ಅನ್ವೇಷಣೆ ಸಮಾವೇಶ

ಬಂಜಾರ (ಲಂಬಾಣಿ) ಜನ ಸೇವಾ ಸಂಘ (ರಿ), ವತಿಯಿಂದ ಕಳೆದ ಮೂರು ನಾಲ್ಕು ವರ್ಷಗಳಿಂದ ಶ್ರೀ ಶ್ರೀ ಶ್ರೀ ಸಂತ ಸೇವಾಲಾಲ್ ಮಹಾರಾಜ್ ರವರ ಜಯಂತಿಯ ಕಾರ್ಯಕ್ರಮವನ್ನು ಆಯೋಜನೆ ಮಾಡಿಕೊಂಡು ಬರುತ್ತಿದ್ದು,

ಪ್ರತಿ ವರ್ಷದಂತೆಯೆ ಈ ವರ್ಷವೂ ಕೂಡಾ ದಿನಾಂಕ 15.02.20240 ಗುರುವಾರ ದಂದು ಸಂಜೆ 4.00 ಗಂಟೆಗೆ 285ನೇ ಜಯಂತಿಯನ್ನು ಬೆಂಗಳೂರಿನ ಜೆ.ಸಿ. ರಸ್ತೆಯ ರವೀಂದ್ರ ಕಾಲಾಕ್ಷೇತ್ರ ಅವರಣ, ಸಂಸ ಬಯಲು ರಂಗಮಂದಿರ, ಜೆ.ಸಿ. ರಸ್ತೆ, ಟೌನ್ ಹಾಲ್ ಹತ್ತಿರ, ಬೆಂಗಳೂರು, ಇಲ್ಲಿ ಈ ಮೇಲ್ಕಂಡ ಸಂಘದ ವತಿಯಿಂದ ಆಯೋಜಿಸಲಾಗಿದ್ದು, ಈ ದಿನದಂದು ರಾಷ್ಟ್ರ ಮಟ್ಟದಲ್ಲಿ ಸಮಾಜಿಕ ಬಂಜಾರ (ಲಂಬಾಣಿ) ವಧುವರರ ಅನ್ವೇಷಣೆ ಸಮಾವೇಶ ನಡೆಯಲಿದೆ. ಈ ವಿಶೇಷ ದಿನದಂದು ಲಂಬಾಣಿ ನೃತ್ಯ ಕಲಾ ತಂಡಗಳೊಂದಿಗೆ ವಿವಿಧ ಸಮಾಜಿಕ ಜಾನಪದ ಉತ್ಸವಗಳಂತಹ ಕಾರ್ಯಕ್ರಮಗಳು ನಡೆಯಲ್ಲಿದ್ದು, ಗೌರವಾನ್ವಿತ ಜನಪ್ರತಿ ನಿಧಿಗಳಿಗೆ ಹಾಗೂ ಸಾಧನೆ ಗೈದಂತಹ ಮಾನ್ಯರಿಗೆ ಗೌರವ ಸಮರ್ಪಣೆಯನ್ನು ಸಲ್ಲಿಸಲಾಗುವುದು ಹಾಗೂ ಸಮಾಜಿಕ ಬಂಜಾರ (ಲಂಬಾಣಿ) ವಧುವರರ ರಾಷ್ಟ್ರ ಮಟ್ಟದಲ್ಲಿ ನೆರವೇರಲಿದ್ದು ಈ ಸಮಾವೇಶದಲ್ಲಿ ಪರಸ್ಪರ ಪರಿಚಯಿಸುವಂತಹ ಕಾರ್ಯಕ್ರಮವನ್ನು ಕೂಡ ಇದೇ ವೇದಿಕೆಯಲ್ಲಿ ವ್ಯವಸ್ಥೆ ಮಾಡಲಾಗುವುದು ಹಾಗೂ ಪುಸ್ತಕ ಬಿಡುಗಡೆಗಳಂತಹ ಕಾರ್ಯ ಕ್ರಮಗಳನ್ನು ಕೂಡ ಮಾಡಲಾಗುವುದು ಎಂದು ಎ.ಆ‌ರ್. ಹನುಮಂತನಾಯ್ಕ ವ್ಯವಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

City Today News 9341997936

ಶ್ರೀ ಸಿದ್ದರಾಮಯ್ಯ ಗೌರವಾನ್ವಿತ ಸನ್ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ಇವರ ಅಮೃತ ಹಸ್ತದಿಂದ ಮೈಸೂರು ಪೆರಿಫೆರಲ್ ಕ್ಯಾನ್ಸರ್ ಕೇಂದ್ರದ ಕಟ್ಟಡ ಕಾಮಗಾರಿಯ ಶಂಕುಸ್ಥಾಪನೆ ಹಾಗೂ ಭೂಮಿ ಪೂಜೆ

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ, ಪೆರಿಫೆರಲ್ ಕ್ಯಾನ್ಸರ್ ಕೇಂದ್ರ (ಪಿಸಿಸಿ), ಮೈಸೂರು

ದಿನಾಂಕ 22.12.2023 ರಂದು ಮಧ್ಯಾಹ್ನ 12.00 ಗಂಟೆಗೆ ಶ್ರೀ ಸಿದ್ದರಾಮಯ್ಯ ಗೌರವಾನ್ವಿತ ಸನ್ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ಇವರ ಅಮೃತ ಹಸ್ತದಿಂದ ಮೈಸೂರು ಪೆರಿಫೆರಲ್ ಕ್ಯಾನ್ಸರ್ ಕೇಂದ್ರದ ಕಟ್ಟಡ ಕಾಮಗಾರಿಯ ಶಂಕುಸ್ಥಾಪನೆ ಹಾಗೂ ಭೂಮಿ ಪೂಜೆಯನ್ನು ನೆರವೇರಿಸಲಾಯಿತು.

ಸದರಿ ಸಮಾರಂಭದಲ್ಲಿ ಮಾನ್ಯ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಸಿ.ಮಹಾದೇವಪ್ಪರವರು ಡಾ.ಯತೀಂದ್ರ ಸಿದ್ದರಾಮಯ್ಯ,ಡಾ. ವಿ.ಲೋಕೇಶ್, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ನಿರ್ದೇಶಕರು ಹಾಗೂ ಚಾಮರಾಜನಗರ ಕ್ಷೇತ್ರದ ಶಾಸಕರಾದ ಶ್ರೀ ಕೆ ಹರೀಶ್ ಗೌಡ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. 

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ (ಕಿ.ಸ್ಮಾ.ಗಂ.ಸಂ), ಬೆಂಗಳೂರು, ಇದು ಕರ್ನಾಟಕ ಸರ್ಕಾರದ ಸ್ವಾಯತ್ತ ಸಂಸ್ಥೆಯಾಗಿದೆ, ಅಲ್ಲದೆ, ಇದು ಒಂದು ಪ್ರಾದೇಶಿಕ ಕ್ಯಾನ್ಸರ್ ಕೇಂದ್ರವಾಗಿದೆ (RCCs). ಕಿ.ಸ್ಮಾ.ಗಂ.ಸಂಸ್ಥೆಯು ಒಂದು ಮಾನ್ಯತೆ ಪಡೆದ ವಿಶೇಷ ತೃತೀಯ ಕ್ಯಾನ್ಸರ್ ಆರೈಕೆ ಕೇಂದ್ರವೂ ಸಹ ಆಗಿದೆ.

ಅಲ್ಲದೆ ಇದೊಂದು ಕ್ಯಾನ್ಸರ್ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಯೂ ಆಗಿದ್ದು, ತರಬೇತಿ ಪಡೆದ ವೈದ್ಯಕೀಯ ಮತ್ತು ಅರೆ-ವೈದ್ಯಕೀಯ ವೃತ್ತಿಪರರ ಸಮೂಹಗಳಿಂದ ಕೂಡಿದ, ಆಧುನಿಕ ಆರೋಗ್ಯ ರಕ್ಷಣೆಯ ವಿಚಾರದಲ್ಲಿ ಅಂತರ್‌ಶಿಸ್ತೀಯ ತಜ್ಞ ತಂಡಗಳನ್ನು ಒಳಗೊಂಡಿದೆ ಹಾಗು ಸುಧಾರಿತ, ಅತ್ಯಾಧುನಿಕ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆಗಾಗಿ ಉತ್ತಮ ಸೌಲಭ್ಯಗಳನ್ನು ಹೊಂದಿದೆ. ಕಿ.ಸ್ಮಾ.ಗಂ.ಸಂಸ್ಥೆಗೆ 1980ರನವೆಂಬ‌ರ್ ಒಂದರಂದು ಭಾರತ ಸರ್ಕಾರವು ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ (RCC) ಎಂಬ ಸ್ಥಾನಮಾನವನ್ನು ನೀಡಿತು. ಸಂಸ್ಥೆಯು ಕ್ಯಾನ್ಸರ್ ನಿಯಂತ್ರಣಕ್ಕಾಗಿ ಇರುವ ಅಂತಾರಾಷ್ಟ್ರೀಯ ಒಕ್ಕೂಟದ (UICC) ಸದಸ್ಯ ಸಂಸ್ಥೆಯೂ ಆಗಿದೆ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯಿಂದ (WHO)ಮಾನ್ಯತೆ ಪಡೆದಿದೆ.

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು ತನ್ನ ಸ್ವಾಯತ್ತ ಸ್ಥಾನಮಾನದೊಂದಿಗೆ, ಅಂತಿಮವಾಗಿ, ಕ್ಯಾನ್ಸರ್ ರೋಗಿಗಳಿಗೆ ಅತ್ಯಾಧುನಿಕ, ಬಹುಶಿಸ್ತೀಯ,ಸರ್ವತೋಮುಖ ಆರೈಕೆಯನ್ನು ಒದಗಿಸುವ ತೃತೀಯ ಕ್ಯಾನ್ಸರ್ ಸಂಸ್ಥೆಯಾಗಿ ವಿಕಸನಗೊಂಡಿತು. ಪ್ರಸ್ತುತ, ವೈದ್ಯಕೀಯ/ ಕ್ಲಿನಿಕಲ್ ಸಂಶೋಧನೆಯನ್ನು ಸಹ ಸಂಸ್ಥೆಯಲ್ಲಿ ನಡೆಸಲಾಗುತ್ತಿದೆ. ಸಂಸ್ಥೆಯಲ್ಲಿ ಮತ್ತು ಪ್ರಾದೇಶಿಕವಾಗಿ, ಸಮುದಾಯದಲ್ಲಿ ಕ್ಯಾನ್ಸರ್ ಅರಿವು ಮತ್ತು ಶಿಕ್ಷಣ ಕಾರ್ಯಕ್ರಮಗಳನ್ನು ಉತ್ತೇಜಿಸುತ್ತಿದೆ ಮತ್ತು ಯೋಜಿತ ಸಾಂಕ್ರಾಮಿಕ ರೋಗಶಾಸ್ತ್ರೀಯ ಅಧ್ಯಯನಗಳನ್ನು ಪ್ರಾರಂಭಿಸಿದೆ.

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು ವಾರ್ಷಿಕ ಸುಮಾರು 20,000-21500 ಹೊಸ ಪ್ರಕರಣಗಳನ್ನು ದಾಖಲಿಸುತ್ತಿದೆ. ಮತ್ತು ಪ್ರತಿ ವರ್ಷ ಮೂರರಿಂದ ಮೂರೂವರೆ ಲಕ್ಷ ಅನುಸರಣಾ ಭೇಟಿಗಳಿವೆ. ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುದಾನದ ನೆರವಿನಿಂದ ಅತ್ಯಾಧುನಿಕ ಕ್ಯಾನ್ಸರ್ ಚಿಕಿತ್ಸಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ರೋಗಿಗಳ ಹೊರೆಯನ್ನು ಗಮನದಲ್ಲಿಟ್ಟುಕೊಂಡು ಮತ್ತು ರೋಗಿಗಳಿಗೆ ಹೆಚ್ಚು ಅನುಕೂಲವಾಗಲು, ಕರ್ನಾಟಕ ಸರ್ಕಾರವು ಕ್ಯಾನ್ಸರ್ ಆರೈಕೆಯನ್ನು ಸ್ಥಾಪಿಸಲು ವಿಶೇಷ ಕ್ರಮಗಳನ್ನು ಕೈಗೊಂಡಿದೆ. ಇದರಲ್ಲಿ ಪ್ರಮುಖವಾಗಿ ಆರಂಭಿಕ ತಪಾಸಣೆ (ಸ್ತ್ರೀನಿಂಗ್), ರೋಗನಿರ್ಣಯ ಮತ್ತು ಚಿಕಿತ್ಸಾ ಸೌಲಭ್ಯಗಳು ಸೇರಿವೆ. ರೋಗಿಗಳ ಸಾಮಾಜಿಕ ಮತ್ತು ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತದೆ.

ಕರ್ನಾಟಕ ಸರ್ಕಾರವು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಮಾರ್ಗದರ್ಶನದಲ್ಲಿ ರಾಜ್ಯದ ಐದು ಜಿಲ್ಲೆಗಳಲ್ಲಿ ಪೆರಿಫೆರಲ್ ಕ್ಯಾನ್ಸರ್

ಕೇಂದ್ರಗಳನ್ನು ಸ್ಥಾಪಿಸಲು ಮಂಜೂರಾತಿ ನೀಡಿತು. ಕಲ್ಬುರ್ಗಿಯಲ್ಲಿ ಪೆರಿಫೆರಲ್ ಕ್ಯಾನ್ಸರ್ ಕೇಂದ್ರವು 100 ಹಾಸಿಗೆಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ ಮತ್ತು ಕ್ಯಾನ್ಸರ್ ತಪಾಸಣೆ, ರೋಗನಿರ್ಣಯ ಮತ್ತು ಚಿಕಿತ್ಸೆಯ ಎಲ್ಲಾ ವಿಧಾನಗಳನ್ನು ಕರ್ನಾಟಕದ ಕಲ್ಯಾಣದ ಜನರಿಗೆ ನೀಡಲಾಗುತ್ತಿದೆ. ಕಲಬುರುಗಿಯಲ್ಲಿನ ಪಿಸಿಸಿ ಜೊತೆಗೆ ಮೈಸೂರು, ತುಮಕೂರು, ಶಿವಮೊಗ್ಗ ಮತ್ತು ಬೆಳಗಾವಿಯಲ್ಲಿ ನಾಲ್ಕು ಪೆರಿಫೆರಲ್ ಕ್ಯಾನ್ಸರ್ ಕೇಂದ್ರಗಳನ್ನು ಮಂಜೂರು ಮಾಡಲಾಗಿದೆ.

ಪೆರಿಫೆರಲ್ ಕ್ಯಾನ್ಸರ್ ಕೇಂದ್ರವು ನಿಯಮಿತ ಕ್ಯಾನ್ಸರ್ ಅರಿವು ಮತ್ತು ಎಚ್ಚರಿಕೆ ನೀಡುವ ಜನ-ಜಾಗೃತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಮತ್ತು ಸಾರ್ವಜನಿಕರು, ಕಾಲೇಜು ವಿದ್ಯಾರ್ಥಿಗಳು ಮತ್ತು ಶಾಲಾ ಮಕ್ಕಳು ಮತ್ತು ಸ್ವಯಂಸೇವಾ ಸಂಸ್ಥೆಗಳ ಸಹಯೋಗದೊಂದಿದೆ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಆರಂಭಿಕ ಕ್ಯಾನ್ಸರ್ ತಪಾಸಣೆಗೆ ಒಳಗಾಗಲು ಸಾರ್ವಜನಿಕರನ್ನು ಪ್ರೇರೇಪಿಸಲು ಆರಂಭಿಕ ತಪಾಸಣಾ ಶಿಬಿರಗಳನ್ನು ನಡೆಸಲಾಗುತ್ತಿದೆ. ಬಡ ರೋಗಿಗಳಿಗೆ ಕ್ಯಾನ್ಸರ್ ಆರೈಕೆಯನ್ನು ನೀಡಲು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ (ABArK), ರಾಷ್ಟ್ರೀಯ ಆರೋಗ್ಯ ನಿಧಿ (RAN), ಕರ್ನಾಟಕ ಮುಖ್ಯಮಂತ್ರಿಗಳ ವೈದ್ಯಕೀಯ ಪರಿಹಾರ ನಿಧಿ, ಆಂಧ್ರಪ್ರದೇಶದ ವೈಎಸ್‌ಆರ್ ಯೋಜನೆ ಮತ್ತು ಕೇಂದ್ರ ಸರ್ಕಾರದ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟುಗಳ ಕಲ್ಯಾಣ ಉಪಯೋಜನೆ, ಮಾಜಿ ಸೈನಿಕರ ಆರೋಗ್ಯ ಯೋಜನೆ, ಕೇಂದ್ರ ಸರ್ಕಾರದ ಉದ್ಯೋಗಿಗಳ ಆರೋಗ್ಯ ಯೋಜನೆ (CGHS) ಮತ್ತು ರಾಜ್ಯ ಸರ್ಕಾರದ ಕಾರ್ಮಿಕರ ವಿಮಾ ಯೋಜನೆ (ESI) ಸೇರಿದಂತೆ ವಿವಿಧ ಯೋಜನೆಗಳ ಮೂಲಕ ನಗದುರಹಿತ ಚಿಕಿತ್ಸಾ ಸೌಲಭ್ಯಗಳನ್ನು ಜಾರಿಗೊಳಿಸುವ ಉದ್ದೇಶವನ್ನು ಫೆರಿಫೆರಲ್ ಕ್ಯಾನ್ಸರ್ ಕೇಂದ್ರಗಳು ಹೊಂದಿವೆ. ಜಿಲ್ಲಾ ಮಟ್ಟದಲ್ಲಿನ ಈ PCCಗಳಿಗೆ ಅತ್ಯಾಧುನಿಕ ಶಸ್ತ್ರಚಿಕಿತ್ಸಾ, ವಿಕಿರಣ ಚಿಕಿತ್ಸೆ (ರೇಡಿಯೊಥೆರಪಿ), ರಾಸಾಯನಿಕ ಚಿಕಿತ್ಸೆ (ಕೀಮೋಥೆರಪಿ) ಮತ್ತು ಇತರ ಕ್ಯಾನ್ಸರ್ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲು ಉದ್ದೇಶಿಸಿದೆ.

ಮೈಸೂರಿನ ಈ ಪಿಸಿಸಿ ಮೈಸೂರು ಜಿಲ್ಲೆಗೆ ಮಾತ್ರವಲ್ಲದೆ ನೆರೆಯ ಜಿಲ್ಲೆಗಳಾದ ಚಾಮರಾಜನಗರ, ಕೊಡಗು, ಮಂಡ್ಯ ಮತ್ತು ಹಾಸನ ಈ ಎಲ್ಲ ಜಿಲ್ಲೆಗಗಳ ಜನರಿಗೂ ಸಹ ತನ್ನ ಸೇವೆಗಳನ್ನು ಒದಗಿಸುತ್ತದೆ. ಮೇಲಿನ ಎಲ್ಲಾ ಜಿಲ್ಲೆಗಳು ಸೇರಿದಂತೆ, ಮೈಸೂರಿನಲ್ಲಿ ಸುಮಾರು 4200 ಕ್ಯಾನ್ಸರ್ ಪ್ರಕರಣಗಳನ್ನು ಅಂದಾಜಿಸಲಾಗಿದೆ. ಪ್ರತಿ ವರ್ಷ ಪಿಸಿಸಿ ಸೇವೆಯನ್ನು ಬಳಸಿಕೊಳ್ಳಬಹುದಾದ 10,500 ಕ್ಕೂ ಹೆಚ್ಚು ರೋಗಿಗಳು, ಇಲ್ಲಿನ ತಪಾಸಣೆ, ರೋಗನಿರ್ಣಯ ಮತ್ತು ಚಿಕಿತ್ಸಾ ಸೌಲಭ್ಯಗಳನ್ನು ಪಡೆಯುತ್ತಾರೆ ಎಂದು ಅಂದಾಜಿಸಲಾಗಿದೆ. ನಮಗೆ ತಿಳಿದಿರುವಂತೆ, ಕ್ಯಾನ್ಸರ್ ಚಿಕಿತ್ಸಾ ವಿಧಾನವು ಸಾಕಷ್ಟು ಸುದೀರ್ಘವಾಗಿರುತ್ತದೆ. ರೋಗಿಗಳಿಗೆ ಕ್ಯಾನ್ಸರ್ ಚಿಕಿತ್ಸೆ ಪೂರ್ಣಗೊಂಡ ನಂತರ, ಕನಿಷ್ಠ ಐದು ವರ್ಷಗಳವರೆಗೆ ನಿಯಮಿತ ಅನುಸರಣೆ ಅಗತ್ಯವಿರುತ್ತದೆ. ಪ್ರಸ್ತುತ, ಮೈಸೂರು ಮತ್ತು ನೆರೆಯ ಜಿಲ್ಲೆಗಳಿಂದ ಹೊಸದಾಗಿ ನೋಂದಾಯಿಸಿಕೊಂಡ ವಾರ್ಷಿಕ 2300ರಿಂದ 3150 ರೋಗಿಗಳು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ ಬಂದು ತಪಾಸಣೆ ಮತ್ತು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಮೈಸೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳ, ಪ್ರಚಲಿತದಲ್ಲಿರುವ, ಕ್ಯಾನ್ಸರ್ ರೋಗಿಗಳೆಲ್ಲರೂ ರೋಗತಪಾಸಣೆ, ರೋಗನಿರ್ಣಯ ಮತ್ತು ಚಿಕಿತ್ಸಾ ಸೌಲಭ್ಯಗಳನ್ನು ಮುಂದೆ ಮೈಸೂರಿನಲ್ಲಿಯೇ ಪಡೆದುಕೊಳ್ಳಬಹುದು.

City Today News 9341997936

ಬೆಂಗಳೂರಿನ ಶ್ರೀ ಅಯ್ಯಪ್ಪ ಧರ್ಮ ಆಚಾರ ಸೇವಾಶ್ರಮ ಆಯೋಜಿಸಿದ್ದ ಲಲಿತಾ ವೈಭವ ಪೂಜಾ ಕಾರ್ಯಕ್ರಮ ಅದ್ಧೂರಿ

ಬೆಂಗಳೂರಿನ ಶ್ರೀ ಅಯ್ಯಪ್ಪ ಧರ್ಮ ಆಚಾರ ಸೇವಾಶ್ರಮ ಆಯೋಜಿಸಿದ್ದ ಲಲಿತಾ ವೈಭವ ಪೂಜಾ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. ಈರೋಡ್ ಅಮೃತವರ್ಷಿಣಿ ಪೀಠದಿಂದ ಶ್ರೀ ವೇದ ವಿಧ್ಯಾಂಬಾ ಮಹಾ ಸರಸ್ವತಿಯವರು ಪೂಜೆ ನೆರವೇರಿಸಿದರು. ಬೆಳಿಗ್ಗೆ ದೀಪಪೂಜೆ ಮತ್ತು ಲಕ್ಷಾರ್ಚನೆ ನಂತರ ದೇವಿ ಲಲಿತಾ ತ್ರಿಪುರ ಸುಂದರಿಗೆ ಮಹಾಯಾಗ ನಡೆಯಿತು ಮತ್ತು ಮಧ್ಯಾಹ್ನ 1 ಗಂಟೆಗೆ ಪೂರ್ಣಾಹುತಿ ಮಾಡಲಾಯಿತು. ಮಕ್ಕಳಿಲ್ಲದ ದಂಪತಿಗಳಿಗೆ ಬೆಣ್ಣೆ ಪ್ರಸಾದ ಮತ್ತು ಆಟಿಸಂ ಮಕ್ಕಳಿಗೆ ಅವರ ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಹಾಲಿನ ಪ್ರಸಾದವನ್ನು ನೀಡಲಾಯಿತು. ಎಲ್ಲಾ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಈ ಪೂಜೆಯಲ್ಲಿ ಶ್ರೀ ಅಯ್ಯಪ್ಪ ಧರ್ಮ ಆಚಾರ ಸೇವಾಶ್ರಮದ ಸಂಸ್ಥಾಪಕ ಶ್ರೀ ಚೇತನ್ ಮತ್ತು ಸಮಿತಿಯ ಸದಸ್ಯರಾದ ಲಕ್ಷ್ಮಣ್, ಸುಧಾಕರ್, ಬಾಲಾಜಿ, ಕೃಷ್ಣ ಮತ್ತು ರಾಮದಾಸ್, ಅಮೃತವರ್ಷಿಣಿ ಪೀಠದ ಶ್ರೀ ಮಾತಾ ವೇದ ವಿದ್ಯಾಂಬಾ ಮಹಾ ಸರಸ್ವತಿ ಉಪಸ್ಥಿತರಿದ್ದರು.

City Today News 9341997936

“ರಾಯರ ಮಠದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ವ್ರತ ಪೂಜೆ”

“ರಾಯರ ಮಠದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ವ್ರತ ಪೂಜೆ”

ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್.ಕೆ. ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಧರ್ಮಾಧಿಕಾರಿಗಳಾದ ಜಿ.ಕೆ. ಆಚಾರ್ಯರು ಹಾಗೂ ಪುರೋಹಿತರಾದ ನಂದಕಿಶೋರ್ ಆಚಾರ್ಯರು ಮತ್ತು ರಾಘವೇಂದ್ರ ಕಟ್ಟಿ ಆಚಾರ್ಯರು ಧನುರ್ಮಾಸದ “ಪೌರ್ಣಮಿ” ಪ್ರಯುಕ್ತ ಅರುಣೋದಯ ಕಾಲದಲ್ಲಿ ಸಾಮೂಹಿಕ ಶ್ರೀ “ಸತ್ಯನಾರಾಯಣ ವ್ರತ ಪೂಜೆ”ಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಭಕ್ತಾದಿಗಳು ಪೂಜೆಯಲ್ಲಿ ಪಾಲ್ಗೊಂಡು ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು.

City Today News 9341997936

SREENIDHI Bank celebrates 25th Anniversary-Silver Jubilee in Namma BENGALURU

SREENIDHI Bank celebrates 25th Anniversary-Silver Jubilee in Namma BENGALURU

24 Dec 2023,Bangalore: SREENIDHI Souharda Sahakari Niyamitha Bank Celebrated it’s 25th Anniversary at the NIMHANS Convention Centre in Namma BENGALURU.

The reputed Bank is known for:

*Dedicated,honest,trustworthy banking with discipline,decorum & state-of-art Technology enabled services

*Low NPA’s

*Good profits with Customer-centric beneficial policies/CSR

The landmark event with a housefull crowd of members in attendance saw the Top Managerial staff headed by Shri Sadashiva Reddy,who outlined the Bank’s past history:25 Glorious years of service-to it’s Members,Business Customers,Employees…

The full day(9am-5pm)event at the NIMHANS Convention Centre was a grand success and registered,active Members received a Memento-Fabulous Silver Coin at the end of the program.

City Today News 9341997936