“ಸಾಹಿತ್ಯದಲ್ಲಿ ಹೊಸ ಪಲ್ಲಟಕ್ಕೆ ‘ಸಪ್ತಕೋಟಿ’ ದಾರಿ,” ಚರ್ಚೆಯಲ್ಲಿ ಪ್ರಮುಖರು

ಧ್ವನಿಯಿಲ್ಲದವರಿಗೆ ಧ್ವನಿಯಾದಾಗಲೇ ಸಾಹಿತ್ಯ ಸಾರ್ಥಕ – ಬಿ. ಸುರೇಶ್

ಬೆಂಗಳೂರು,ಏಪ್ರಿಲ್ 02, 2026:ಸಮಾಜದಲ್ಲಿ ಧ್ವನಿಯಿಲ್ಲದವರ ಪರವಾಗಿ ಮಾತಾಡುವಾಗಲೇ ಸಾಹಿತ್ಯದ ನಿಜವಾದ ಅರ್ಥ ಸಾರ್ಥಕವಾಗುತ್ತದೆ ಎಂದು ರಂಗಕರ್ಮಿ ಹಾಗೂ ನಿರ್ದೇಶಕ ಬಿ. ಸುರೇಶ್ ಅಭಿಪ್ರಾಯಪಟ್ಟರು.

ನಗರದ ವಿಜಯನಗರದಲ್ಲಿರುವ ಚಿದಾನಂದ ಮೂರ್ತಿ ಸಭಾಂಗಣದಲ್ಲಿ ಮುದ್ದಿ ಮೈಂಡ್ಸ್ ಆಯೋಜಿಸಿದ್ದ ಲೇಖಕ ಚಿದಾನಂದ ಮುದ್ದಿ ಅವರ ಚೊಚ್ಚಲ ಕಾದಂಬರಿ ‘ಸಪ್ತಕೋಟಿ’ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿನ ಅಸಮಾನತೆಗಳ ವಿರುದ್ಧ ಹೋರಾಡಲು ಬರವಣಿಗೆಯೇ ಅತ್ಯಂತ ಪ್ರಭಾವಿ ಅಸ್ತ್ರವಾಗಿದೆ ಎಂದು ಹೇಳಿದರು. ಕಾದಂಬರಿಯ ಮೂಲಕ ಸಮಾಜದ ಸೂಕ್ಷ್ಮ ಸಂಗತಿಗಳನ್ನು ತೆರೆದಿಡುವ ಮೂಲಕ ಚಿದಾನಂದ ಮುದ್ದಿ ಅವರು ಸಾಹಿತ್ಯ ಕ್ಷೇತ್ರದಲ್ಲಿ ದೃಢ ಹೆಜ್ಜೆ ಇಟ್ಟಿದ್ದಾರೆ ಎಂದರು. ಇಂದಿನ ಯುವ ಪೀಳಿಗೆ ತಾವು ಕಂಡು ಅನುಭವಿಸುವ ಅನ್ಯಾಯಗಳ ವಿರುದ್ಧ ಧ್ವನಿ ಎತ್ತುವ ಅಗತ್ಯ ಹೆಚ್ಚುತ್ತಿದೆ ಎಂದು ಅವರು ಸೂಚಿಸಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಪತ್ರಕರ್ತ-ಬರಹಗಾರ ಜೋಗಿ, ಹೊಸ ಬರಹಗಾರರು ತಮ್ಮದೇ ವಿಶಿಷ್ಟ ಭಾಷಾ ಶೈಲಿಯನ್ನು ರೂಪಿಸಿಕೊಂಡು, ಸಾಹಿತ್ಯದಲ್ಲಿ ಹೊಸ ಪ್ರಯೋಗಗಳನ್ನು ಮಾಡಲು ಮುಂದಾಗಬೇಕು ಎಂದು ಅಭಿಪ್ರಾಯಪಟ್ಟರು. ಹಳೆಯ ಚೌಕಟ್ಟನ್ನು ಮೀರಿದ ಸೃಜನಶೀಲ ಪ್ರಯತ್ನಗಳೇ ಸಾಹಿತ್ಯ ಸಮೃದ್ಧಿಗೆ ದಾರಿ ಮಾಡಿಕೊಡುತ್ತವೆ ಎಂದರು.

ಕಥೆಗಾರ್ತಿ ಪೂರ್ಣಿಮಾ ಮಾಳಗಿಮನಿ ಅವರು ‘ಸಪ್ತಕೋಟಿ’ ಕೃತಿಯನ್ನು ಪರಿಚಯಿಸಿ, ಯುವ ಓದುಗರಿಗೂ ಹೊಸ ಪೀಳಿಗೆಯ ಓದುಗರಿಗೂ ಆಕರ್ಷಕವಾಗಿರುವ ಕಾದಂಬರಿ ಇದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಾಗರಾಜ್ ಅರೆಹೊಳೆ, ಲೇಖಕ ಚಿದಾನಂದ ಮುದ್ದಿ ಉಪಸ್ಥಿತರಿದ್ದರು. ರವೀಂದ್ರ ಮುದ್ದಿ ಪ್ರಸ್ತಾವನೆ ಮಾಡಿದರು. ಮೈಥಲಿ ರಘುನಾಥ್ ಕಾರ್ಯಕ್ರಮವನ್ನು ನಿರೂಪಿಸಿದರು.

City Today News 9341997936

Blankets distributed to families of paediatric cancer patients at Kidwai


BENGALURU: In a gesture of compassion and community support, dental surgeon and philanthropist Dr. Nida, along with her friends, donated 100 high-quality blankets for children undergoing cancer treatment at the Kidwai Memorial Institute of Oncology (KMIO).

The blankets were distributed to parents of paediatric cancer patients in the Kapoor Ward of the institute by Abdul Ahad, IPS, Deputy Inspector General of Police and Director (Security & Vigilance), BMTC, on Thursday.

Director of KMIO, Dr. Naveen T., was present on the occasion, along with Dr. Nadimul Hoda, Head of the Department of Oral Oncology, and Dr. Arun Kumar, Head of Paediatric Oncology. Dr. Nida also participated in the distribution programme.

Hospital authorities and attendees described the initiative as a thoughtful and timely intervention, particularly for families who often endure long and challenging treatment periods under difficult circumstances.

They noted that such acts of generosity not only provide material relief but also offer emotional support to patients and their caregivers. The organisers expressed hope that more individuals and organisations would come forward to extend assistance to cancer patients and their families.

City Today News 9341997936

Hanuman Jayanti celebrated with rituals and community service at Raghavendra Swamy Mutt in Jayanagar

Bengaluru: Hanuman Jayanti was observed with religious fervour at the Sri Raghavendra Swamy Mutt in Jayanagar 5th Block, drawing thousands of devotees to the premises.

The celebrations were conducted as per the directives of His Holiness Sri 1008 Sri Subudhendra Teertha Swamiji, under the leadership of the mutt’s senior manager, R.K. Vadindrachar. The rituals included Panchamrita Abhisheka, Kanakabhisheka, special decorations, Maha Mangalarati, and Annadanam (mass feeding).

Evening events featured a grand Rathotsava, Gajavahana Seva, Ashtavadhana, and Thottilu Pooja, adding to the festive spirit, said Nandakishore Achar.
Devotees in large numbers participated in the celebrations, received prasadam, and were blessed with mantrakshate from the seers.

City Today News 9341997936

“ವೇತನ ಕೇಳಿದ ಚಾಲಕನ ಮೇಲೆ ಕ್ರೂರ ಹಲ್ಲೆ”, ₹10 ಲಕ್ಷ ಪರಿಹಾರಕ್ಕೆ ಯೂನಿಯನ್ ಒತ್ತಾಯ

ಬೆಂಗಳೂರು, ಏಪ್ರಿಲ್ 2: ವೇತನ ಕೇಳಿದ ಹಿನ್ನೆಲೆಯಲ್ಲಿ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಪೀಡಿತ ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡಬೇಕು ಎಂದು ಇಂಡಿಯನ್ ವೆಹಿಕಲ್ಸ್ ಡ್ರೈವರ್ಸ್ ಟ್ರೇಡ್ ಯೂನಿಯನ್ ಒತ್ತಾಯಿಸಿದೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ, ಬಸವೇಶ್ವರನಗರದ ಸಿದ್ದಗಂಗಾ ಟ್ರಾವೆಲ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚಾಲಕ ರಾಮೇಗೌಡ ಅವರ ಮೇಲೆ ಮಾರ್ಚ್ 28ರಂದು ಕಚೇರಿಯಲ್ಲೇ ಮಾಲೀಕ ಮಹೇಶ್ ಹಲ್ಲೆ ನಡೆಸಿದರೆಂದು ಆರೋಪಿಸಿದರು. ವೇತನ ನೀಡುವಂತೆ ಕೇಳಿದ ಕಾರಣಕ್ಕೆ ತಲೆಗೆ ಹಲ್ಲೆ ನಡೆಸಲಾಗಿದ್ದು, ಇದರಿಂದ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿಸಿದರು.

ಈ ಸಂಬಂಧ ರಾಮೇಗೌಡ ಅವರ ಪತ್ನಿ ಬಸವೇಶ್ವರನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ. ಆದರೆ ಪ್ರಕರಣ ದಾಖಲಾಗಿದ್ದರೂ ಇದುವರೆಗೆ ಪೊಲೀಸರು ಸಮರ್ಪಕ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಸ್ಥೆಯಲ್ಲಿ 150ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರೂ ಚಾಲಕರು, ನಿರ್ವಾಹಕರು ಹಾಗೂ ಇತರೆ ಕಾರ್ಮಿಕರಿಗೆ ಇಎಸ್ಐ, ಪಿಎಫ್ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ನೀಡದೇ ವಂಚನೆ ನಡೆಯುತ್ತಿದೆ ಎಂದು ಆರೋಪಿಸಿದರು.

ಹಲ್ಲೆಗೊಳಗಾದ ಚಾಲಕನಿಗೆ ₹10 ಲಕ್ಷ ಪರಿಹಾರ ನೀಡಬೇಕು. ಇಲ್ಲದಿದ್ದಲ್ಲಿ ಸಂಘದಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

City Today News 9341997936

ಶಿಕ್ಷಣ ಕ್ಷೇತ್ರ ‘ಪ್ರಯೋಗಾಲಯ’ ಆಗಬಾರದು – ಬಿಜೆಪಿ ಎಚ್ಚರಿಕೆ

ಶಿಕ್ಷಣ ಕ್ಷೇತ್ರದ ಬೆಳವಣಿಗೆಗಳ ಬಗ್ಗೆ ಬಿಜೆಪಿ ಶಿಕ್ಷಣ ಪ್ರಕೋಷ್ಠದ ತೀವ್ರ ಅಸಮಾಧಾನ

ಬೆಂಗಳೂರು: ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದಿರುವ ಬೆಳವಣಿಗೆಗಳ ಕುರಿತು ಭಾರತೀಯ ಜನತಾ ಪಕ್ಷದ ಶಿಕ್ಷಣ ಪ್ರಕೋಷ್ಠ ತೀವ್ರ ಆತಂಕ ಮತ್ತು ಅಸಮಾಧಾನ ವ್ಯಕ್ತಪಡಿಸಿದೆ.

ತ್ರಿಭಾಷಾ ಸೂತ್ರದ ಅಡಿಯಲ್ಲಿ ವಿದ್ಯಾರ್ಥಿಗಳು ಹಿಂದಿ ಭಾಷೆ ಕಲಿಯಬೇಕೆಂದು ಹಲವು ವರ್ಷಗಳಿಂದ ಹೇಳುತ್ತಿದ್ದ ರಾಜ್ಯ ಸರ್ಕಾರ, ಈಗ ಯಾವುದೇ ಪೂರ್ವ ಚರ್ಚೆ ನಡೆಸದೆ ಮತ್ತು ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರ ಅಭಿಪ್ರಾಯಗಳನ್ನು ಪರಿಗಣಿಸದೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಹಿಂದಿ ವಿಷಯವನ್ನು ಕೈಬಿಡುವ ಸೂಚನೆ ನೀಡಿರುವುದು ಶಿಕ್ಷಣ ವಲಯದಲ್ಲಿ ಗೊಂದಲ ಉಂಟುಮಾಡಿದೆ ಎಂದು ಪ್ರಕೋಷ್ಠ ಅಭಿಪ್ರಾಯಪಟ್ಟಿದೆ.

ಈ ರೀತಿಯ ನಿರ್ಧಾರಗಳು ವಿದ್ಯಾರ್ಥಿಗಳ ಭವಿಷ್ಯ, ಅವರ ಸ್ಪರ್ಧಾತ್ಮಕ ಸಾಮರ್ಥ್ಯ ಹಾಗೂ ಬಹುಭಾಷಾ ಅಧ್ಯಯನದ ಅಗತ್ಯತೆಗಳನ್ನು ಕಡೆಗಣಿಸುವಂತಿವೆ. ರಾಜಕೀಯ ಲಾಭಕ್ಕಾಗಿ ಶಿಕ್ಷಣ ಕ್ಷೇತ್ರವನ್ನು ಪ್ರಯೋಗಾಲಯವನ್ನಾಗಿ ಮಾಡಬಾರದು ಎಂದು ಪ್ರಕೋಷ್ಠ ಎಚ್ಚರಿಸಿದೆ.

ಈಗಾಗಲೇ ನಡೆದಿರುವ ಪರೀಕ್ಷೆಗೆ ಸಂಬಂಧಿಸಿ ವಿದ್ಯಾರ್ಥಿಗಳಿಗೆ ಗ್ರೇಡ್ ನೀಡಲಾಗುವುದು ಎಂಬ ಸರ್ಕಾರದ ಹೇಳಿಕೆ, ವಿದ್ಯಾರ್ಥಿಗಳ ಪರಿಶ್ರಮದ ಮೌಲ್ಯವನ್ನು ಕುಗ್ಗಿಸುವಂತಿದೆ. ಜೊತೆಗೆ ಹಿಂದಿ ಬೋಧಕರಲ್ಲಿ ಆತಂಕ ಉಂಟುಮಾಡಿದೆ ಎಂದು ಪ್ರಕೋಷ್ಠ ಟೀಕಿಸಿದೆ. ವಿದ್ಯಾರ್ಥಿಗಳಿಗೆ ಯಾವುದೇ ಅನ್ಯಾಯವಾಗದಂತೆ ಸಮರ್ಪಕ ಗ್ರೇಸ್ ಅಂಕಗಳನ್ನು ನೀಡುವಂತೆ ಸರ್ಕಾರವನ್ನು ಆಗ್ರಹಿಸಿದೆ.

ಇದರೊಂದಿಗೆ ಇತ್ತೀಚೆಗೆ ನಡೆದ ಎಸ್‌ಎಸ್‌ಎಲ್‌ಸಿ ಗಣಿತ ಪರೀಕ್ಷೆಯಲ್ಲಿ ಕಂಡುಬಂದಿರುವ ಅವ್ಯವಸ್ಥೆಯನ್ನೂ ಪ್ರಕೋಷ್ಠ ತೀವ್ರವಾಗಿ ಖಂಡಿಸಿದೆ. ಪ್ರಶ್ನೆಪತ್ರಿಕೆಯಲ್ಲಿ ಬಾರ್‌ಕೋಡ್ ಮುದ್ರಣದ ತಾಂತ್ರಿಕ ದೋಷದಿಂದ ಕೆಲ ಪ್ರಶ್ನೆಗಳು ಸ್ಪಷ್ಟವಾಗಿ ಕಾಣದ ಸಮಸ್ಯೆ ಉಂಟಾಗಿದೆ ಎನ್ನಲಾಗಿದೆ. ಇಂತಹ ಗಂಭೀರ ದೋಷಗಳು ಶಿಕ್ಷಣ ಇಲಾಖೆಯ ನಿರ್ಲಕ್ಷ್ಯವನ್ನು ತೋರಿಸುತ್ತವೆ ಎಂದು ಅಭಿಪ್ರಾಯಪಟ್ಟಿದೆ.

ಈ ಹಿನ್ನೆಲೆ, ಸಂಬಂಧಿತ ಪ್ರಶ್ನೆಗಳಿಗೆ ಗ್ರೇಸ್ ಅಂಕಗಳನ್ನು ನೀಡುವಂತೆ ಹಾಗೂ ಘಟನೆ ಕುರಿತು ಸಮಗ್ರ ತನಿಖೆ ನಡೆಸಿ ಹೊಣೆಗಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದೆ. ಮುಂದಿನ ದಿನಗಳಲ್ಲಿ ಪರೀಕ್ಷಾ ವ್ಯವಸ್ಥೆಯನ್ನು ಇನ್ನಷ್ಟು ಪಾರದರ್ಶಕ ಮತ್ತು ಜವಾಬ್ದಾರಿಯುತವಾಗಿ ನಿರ್ವಹಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದೆ.

ಇನ್ನೂ, ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳು, ಸಮವಸ್ತ್ರಗಳು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಸಮಯಕ್ಕೆ ಸರಿಯಾಗಿ ಒದಗಿಸುವಲ್ಲಿ ವಿಳಂಬವಾಗುತ್ತಿರುವ ಬಗ್ಗೆ ವರದಿಗಳು ಬರುತ್ತಿರುವುದನ್ನೂ ಪ್ರಕೋಷ್ಠ ಗಮನಕ್ಕೆ ತಂದಿದೆ. ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.

ರಾಜ್ಯದ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳಿಗೆ ಅನ್ಯಾಯವಾದರೆ ಬಿಜೆಪಿ ಶಿಕ್ಷಣ ಪ್ರಕೋಷ್ಠ ಸದಾ ಅವರ ಜೊತೆ ನಿಂತು ಧ್ವನಿಯಾಗಲಿದೆ ಎಂದು ರಾಜ್ಯ ಸಂಚಾಲಕ ಡಾ. ಪಿ.ಬಿ. ಶಶಿಧರ್ ಹಾಗೂ ರಾಜ್ಯ ಸಮಿತಿ ಸದಸ್ಯ ಕೆ. ಹರೀಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

City Today News 9341997936