ಈಡಿಗ ಹಾಗೂ 26 ಪಂಗಡಗಳ ಸಮುದಾಯಕ್ಕೆ ನ್ಯಾಯವನ್ನು ಒದಗಿಸಬೇಕೆಂದು ವಿನಂತಿ

ಕರ್ನಾಟಕ ರಾಜ್ಯದ ಈಡಿಗ ಹಾಗೂ 26 ಸಮುದಾಯ ಪಂಗಡಗಳ ಬೇಡಿಕೆಯನ್ನು ಈಡೇರಿಸುವ ಕುರಿತು .

ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ , ಕರ್ನಾಟಕ ರಾಜ್ಯದಲ್ಲಿ ಈಡಿಗ , ಬಿಲ್ಲವ , ನಾಮದಾರಿ , ನಾಯ್ಕ , ದೀವರ ಈ ರೀತಿಯ ಜಾತಿಗಳು ಸೇರಿದಂತೆ 26 ಪಂಗಡಗಳು ಸೇರಿಕೊಂಡು 70 ಲಕ್ಷ ಜನ ಸಂಖ್ಯೆಗೂ ಹೆಚ್ಚ ಸಮುದಾಯಗಳು ಇರುತ್ತದೆ . ಈಗ ಆಡಳಿತ ಪಕ್ಷದಲ್ಲಿ 7 ಜನ ಶಾಸಕರು ಹಾಗೂ ಇಬ್ಬರು ಮಂತ್ರಿಗಳು ಕೂಡ ಆಗಿರುತ್ತಾರೆ . ಆದರೆ , ಈ ಸಮುದಾಯಕ್ಕೆ ಇಲ್ಲಿಯವರೆಗೆ ಸೂಕ್ತ ನ್ಯಾಯ ಸಿಕ್ಕಿರುವುದಿಲ್ಲ . ನಮ್ಮ ಈಡಿಗ ಸಮುದಾಯದ ಕುಲಕಸುಬಾದ ಸೇಂದಿ ನಿಲ್ಲಿಸಿ ಈಗಾಗಲೇ 18 ವರ್ಷಗಳಾಗಿವೆ . ನಮ್ಮ ಸಮುದಾಯದ ಕುಲಕಸುಬು ಮರಳಿ ಬರುವುದಕ್ಕೋಸ್ಕರ ಈಡಿಗ ಸಮುದಾಯದ ಗುರುಗಳಾದ ಪರಮ ಪೂಜ್ಯ ಡಾ || ಪ್ರಣವನಂದ ಸ್ವಾಮಿಗಳ ನೇತೃತ್ವದಲ್ಲಿ ಕಳೆದ ತಿಂಗಳು 5 ನೇ ತಾರೀಖಿನಿಂದ 11 ನೇ ತಾರೀಖಿನವರೆಗೂ 7 ದಿನಗಳ ಕಾಲ 178 ಕಿ.ಮೀ.ವರೆಗೂ ಚಿಂಚೋಳಿಯಿಂದ ಪ್ರಾರಂಭಿಸಿ ಕಲಬುರುಗಿ ಜಿಲ್ಲಾಧಿಕಾರಿಗಳ ಕಛೇರಿವರೆಗೆ ಪಾದಯಾತ್ರೆ ಮಾಡಿ ಅಲ್ಲಿನ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು . ಈ ಒಂದು ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಸಮುದಾಯದ ಬಂಧುಗಳು ಸೇರಿರುತ್ತಾರೆ . ಹಾಗೂ ನಮ್ಮ ಬೇಡಿಕೆ ಈಡೇರುವವರೆಗೂ ಶ್ರೀಗಳ ನೇತೃತ್ವದಲ್ಲಿ ಬೃಹತ್ ಸಮಾವೇಶ ಹಾಗೂ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಮುಂದಿನ ತಿಂಗಳುಗಳಲ್ಲಿ ಕೈಗೊಳ್ಳಲು ನಿರ್ಣಹಿಸಲಾಗಿದೆ . ಇದು ಸಮುದಾಯದ ಪ್ರಾರಂಭಿಕ ಹೋರಾಟವಾಗಿದೆ . ಹಾಗಾಗಿ ಇದೆಲ್ಲವನ್ನು ಗಮನಿಸಿ ಸರ್ಕಾರ ಕೂಡಲೇ ಕುಲಕಸುಬು ಮತ್ತು ಸಮುದಾಯದ ಅಭಿವೃದ್ಧಿ ನಿಗಮ ಘೋಷಣೆ ಮಾಡಬೇಕೆಂದು ಹಾಗೂ ಈ ಸಮುದಾಯ ಸಾಕಷ್ಟು ಸಂಕಷ್ಟ ಹಾಗೂ ನೋವಿನ ಪರಿಸ್ಥಿತಿಯಲ್ಲಿದೆ . ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಬೇಡಿಕೆಗಳನ್ನು ತಮ್ಮ ಸರ್ಕಾರದ ಮೂಲಕ ಈಡೇರಿಸಿ ನಮ್ಮ ಈಡಿಗ ಹಾಗೂ 26 ಪಂಗಡಗಳ ಸಮುದಾಯಕ್ಕೆ ನ್ಯಾಯವನ್ನು ಒದಗಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ ಎಂದು ಡಾ || ಶ್ರೀಶ್ರೀಶ್ರೀ ಪ್ರಣವಾನಂದ ಮಹಾಸ್ವಾಮಿಗಳು ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು

City Today News

9341997936

ರಾಷ್ಟ್ರದ ರೈತ ಮುಖಂಡರಾದ ರಾಕೇಶ್ , ಟೆಕಾಯತ್ , ಯದುವೀರ್ ಸಿಂಗ್ ಮತ್ತು ಕವಿತಾ ಕುರುಕುಂಟೆ ಅವರ ಮೇಲೆ ನಡೆದಿರುವ ಹಲ್ಲೆಯನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಖಂಡಿಸುತ್ತದೆ

30-05-2022ರ ಸೋಮವಾರ ರಾಷ್ಟ್ರದ ರೈತ ಮುಖಂಡರಾದ ರಾಕೇಶ್ ಟಕಾಯತ್ , ಯದುವೀರ್ ಸಿಂಗ್ ಮತ್ತು ಕವಿತಾ ಕುರುಕುಂಟೆ ಯವರು ನಡೆಸಿದ ಪತ್ರಿಕಾಗೋಷ್ಠಿಯ ಸಂದರ್ಭದಕ್ಕೆ ಕಿಡಿಗೇಡಿಗಳು ರೈತ ಮುಖಂಡರ ಮೇಲೆ ಹಲ್ಲೆ ಮಾಡಿದಲ್ಲದೆ , ಮುಖಕ್ಕೆ ಮಸಿ ಬಳಿಯುವ ಕೆಲಸವನ್ನು ಮಾಡಿದ್ದಾರೆ ಇದನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಖಂಡಿಸುತ್ತದೆ ರೈತ ಸಂಘಟನೆಯಲ್ಲಿ ಭಿನ್ನಾಭಿಪ್ರಾಯ ಇರಬಹುದು ರೈತರಿಗೆ ಬಂದಿರುವ ಸಂಕಷ್ಟಗಳ ವಿರುದ್ಧ ನಾವೆಲ್ಲರೂ ಒಂದೇ ಧ್ವನಿಯಾಗಿ ಕೆಲಸ ಮಾಡಿದ್ದೇವೆ , ನಾಳೆಯ ದಿನಗಳಲ್ಲಿಯೂ ಮಾಡುತ್ತೇವೆ . ಆದರೆ ಪ್ರಜಾಪ್ರಭುತ್ವದಲ್ಲಿ ಸಾಮಾನ್ಯ ನಾಗರಿಕರು ತನ್ನ ಹಕ್ಕೊತ್ತಾಯಕ್ಕಾಗಿ ಸರ್ಕಾರಕ್ಕೆ ಹೇಳುವ ಕೇಳುವ ಪ್ರಯತ್ನ ಮಾಡುತ್ತಾರೆ , ಆದರೆ ಕೆಲವು ಪಕ್ಷಗಳು , ನ್ಯಾಯದ ಧ್ವನಿ ಮುಚ್ಚಿಸುವ ಕೆಲಸಗಳಿಗೆ ಪುಂಡರನ್ನು ಬಳಸಿ ಬೆಂಬಲಿಸುವುದು ಸರಿಯಾದ ಕ್ರಮವಲ್ಲ . ಈಗ ನಡೆದಂತಹ ಘಟನೆಗಳು ಮುಖಂಡರುಗಳಿಗೆ ಈ ತರಹದ ಕೃತ್ಯ ನಡೆಸಲು ಅವಕಾಶ ಮಾಡಿಕೊಟ್ಟಿರುವ ರಾಜ್ಯ ಸರ್ಕಾರದ ನಡೆ ಇಡೀ ನಾಡಿನ ರೈತರಿಗೆ ಮತ್ತು ನಾಗರಿಕರಿಗೆ ಮಾಡಿದ ಅಪಮಾನವಾಗಿರುತ್ತದೆ . ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ರೈತ ಮುಖಂಡರಿಗೆ ಆದಂತಹ ಘಟನೆಯ ಬಗ್ಗೆ ಕೃಷ್ಣ ನಡೆಸಿರುವವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು ,

ಮಾಧ್ಯಮಗಳು ಇರಬೇಕು ಸಮಾಜದ ಒಳಿತಿಗೆ , ಸಮಾಜದ ಕಣ್ಣೆರೆಸಲು ಕೆಲಸ ಮಾಡುತ್ತಿರುವ ಮಾಧ್ಯಮ ಸಮೂಹಕ್ಕೆ ಯಾವುದೋ ಒಂದು ಮಾಧ್ಯಮದ ವ್ಯಕ್ತಿ ಮಾಡುವ ಅನಾಚಾರಗಳು ತಪ್ಪಾಗುತ್ತದೆ . ನಾನು ಮಾಧ್ಯಮದ ಸಂಘಟನೆಗಳಿಗೂ ಮನವಿ ಮಾಡುತ್ತೇನೆ . ಹಾಗೂ ಪಬ್ಲಿಕೇಶನ್ ಮತ್ತು ಬ್ರಾಡ್ಕಾಸ್ಟಿಂಗ್ ಭಾರತ ಸರ್ಕಾರದ ಇಲಾಖೆಯ ಮುಖ್ಯಸ್ಥರಿಗೂ ಕೂಡ ಮನವಿ ಮಾಡುತ್ತೇನೆ . ಇಂತಹ ಮಾಧ್ಯಮವನ್ನು ನಿಯಂತ್ರಿಸಬೇಕೆಂದು ಮತ್ತು ಇದು ಸಂಪೂರ್ಣವಾಗಿ ನಮ್ಮ ಮೇಲೆ ನಡೆದಿರುವಂತಹ ಎಲ್ಲಾ ಪ್ರಕರಣಗಳ ಸತ್ಯ ಶೋಧನೆಗೆ ಕರ್ನಾಟಕ ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸುತ್ತೇವೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ರಾಜ್ಯಾಧ್ಯಕ್ಷರು ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು

City Today News

9341997936

ಬಿಜೆಪಿ ಸರ್ಕಾರ ರಚನೆಯಲ್ಲಿ ವಿಜಯೇಂದ್ರ ಪಾತ್ರ ದೊಡ್ಡದು, ಅವರು ಭವಿಷ್ಯದ ನಾಯಕ – ಹರ್ಷವರ್ಧನ

ನಂಜನಗೂಡು: ಇಂದು ರಾಜ್ಯ ಬಿಜೆಪಿ ಸರ್ಕಾರವಿರುವುದಕ್ಕೆ 2019 ರ 13 ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆಯಲ್ಲಿ ಬಿ ವೈ ವಿಜಯೇಂದ್ರ ಅವರ ಪಾತ್ರವೇ ಕಾರಣ ಎಂದು ನಂಜನಗೂಡು ಶಾಸಕ
ಬಿ ಹರ್ಷವರ್ಧನ್ ಹೇಳಿದ್ದಾರೆ.  ವಿಧಾನ ಪರಿಷತ್ ಸದಸ್ಯನಾಗುವುದಕ್ಕಿಂತ ದೊಡ್ಡ ಪಾತ್ರವನ್ನು
ಶ್ರೀ ವಿಜಯೇಂದ್ರ ಅವರು ಕರ್ನಾಟಕ ರಾಜಕೀಯದಲ್ಲಿ ನಿರ್ವಹಿಸಬೇಕು ಎಂದು ಅವರು ಹೇಳಿದ್ದಾರೆ.

ಮುಂಬರುವ ಎಂಎಲ್‌ಸಿ ಚುನಾವಣೆಯಲ್ಲಿ ಸ್ಪರ್ಧಿಸಲು ವಿಜಯೇಂದ್ರ ಅವರಿಗೆ ಅವಕಾಶ ಸಿಗದಿರುವ ಬಗ್ಗೆ ಮಾಧ್ಯಮಗಳು  ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹರ್ಷವರ್ಧನ್, “ಮುಂದಿನ ದಿನಗಳಲ್ಲಿ ಅವರು ದೊಡ್ಡ ಪಾತ್ರವನ್ನು ನಿರ್ವಹಿಸಬೇಕಾಗಿದೆ. ವಿಧಾನ ಪರಿಷತ್ತಿಗೆ ಅವಕಾಶ ಸಿಗಬಹುದೆಂಬ ನಿರೀಕ್ಷೆ ಇಟ್ಟುಕೊಂಡಿದ್ದೆವು. ಖಂಡಿತವಾಗಿಯೂ ಅವರಿಗೆ ಅವಕಾಶ ನೀಡದಿರುವುದು ನಮಗೆ ನಿರಾಶೆಯಾಗಿದೆ.  ಅದೇ ಸಮಯದಲ್ಲಿ ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಹಾದಿ ಸುಗಮವಾಗಿದ್ದು, ವರುಣಾದಿಂದ ಕಣಕ್ಕಿಳಿಯಬೇಕು ಎಂಬುದು ನಮ್ಮ ಆಶಯ. ಅವರು ಅಭ್ಯರ್ಥಿಯಾಗುತ್ತಾರೆ ಎಂದು ಈ ಭಾಗದ ಜನರು ಕಾಯುತ್ತಿದ್ದಾರೆ,’’ ಎಂದು ಹರ್ಷವರ್ಧನ್ ಹೇಳಿದರು.

ಈ ಬೆಳವಣಿಗೆಯಿಂದ ಅವರಿಗೆ ಈಗ ಹಿನ್ನಡೆ ಆಗಿರಬಹುದು. ಆದರೆ ಅವರು ನಮ್ಮ ಭವಿಷ್ಯದ ನಾಯಕ. ಪಕ್ಷ ಅವರಿಗೆ ಅವಕಾಶ ನೀಡಲಿದೆ. ಶ್ರೀ ವಿಜಯೇಂದ್ರ ಇನ್ನೂ ಚಿಕ್ಕವರು. ನಾವು ಅವನೊಂದಿಗಿದ್ದೇವೆ. ಯುವಕರಿಗೆ ಪಕ್ಷ ಅವಕಾಶ ನೀಡಲಿದೆ ಎಂದು ಹರ್ಷವರ್ಧನ್ ಹೇಳಿದರು.

ಬಿ. ಹರ್ಷವರ್ಧನ್‌ ಶಾಸಕರುನಂಜನಗೂಡು M: 9980099955 | Email: bharshavardhan.mla@gmail.com

City Today News

9341997936

Vijayendra’s role in BJP govt formation is big, he is future leader

Nanjangud: BJP Nanjungud MLA B Harshavardhan has said if there is a BJP government in the state, it is because of the role played by B Y Vijayendra in the 2019 assembly
by-elections to the 13 constituencies. Mr. Vijayendra should have a bigger role to play in Karnataka politics than being an MLC. 

When the media recently sought his reaction over Mr. Vijayendra’s  not getting an opportunity to contest the forthcoming MLC elections, Harshavardhan said, “He has a bigger role to play in the coming days. Of course, we are disappointed that he was not given an opportunity to get into the legislative council. We had expected him to get a ticket. At the same time, there is jubilation because now the path is clear for him to contest the next legislative assembly elections. We want him to contest from Varuna. The people of this area are waiting for him to become the candidate,” he said. 

Harshavardhan  said, “This may be a setback for him now.” But he is our future leader. The party will give him opportunities. Mr. Vijayendra is still young. We are with him. The party will provide opportunities for youngsters.

For More Information, please contact:

Shri. B. Harshavardhan

MLA – NanjangudM: 9980099955 | Email: bharshavardhan.mla@gmail.com

City Today News

9341997936

ನನ್ನ ಮೇಲೆ ಭಾರತ ರತ್ನ ಬಾಬಾ ಸಾಹೇಬ ಡಾ || ಬಿ.ಆರ್.ಅಂಬೇಡ್ಕರ್ ಪ್ರತಿಮೆ ವಿಚಾರದಲ್ಲಿ ವಿವಾದ ಸೃಷ್ಟಿಸಲಾಗಿದೆ – ಎನ್ . ಮೂರ್ತಿ

ಜಸ್ಟೀಸ್ ಸದಾಶಿವ ಆಯೋಗದ ವರದಿ ಜಾರಿಗೆ ನಿರ್ಲಕ್ಷ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಮೀಸಲಾತಿ ಹಾಗೂ ಜ್ವಲಂತ ಸಮಸ್ಯೆಗಳನ್ನು ನಿರ್ಲಕ್ಷ್ಯ ತೋರಿದ ಹಿನ್ನಲೆಯಲ್ಲಿ ದ.ಸಂ.ಸ. “ ನೂತನ ರಾಜಕೀಯ ಪಕ್ಷ ಸ್ಥಾಪನೆಗೆ ಟಿ.ವಿ. ( ಮಾಧ್ಯಮ ) ತೆರೆಯಲು ಮುಂದಾಗಿದೆ . ಈ ಸುದ್ದಿ ತಿಳಿದ ಬೆನ್ನಲೆ ಅಸ್ಪೃಶ್ಯರಲ್ಲಿಯೇ ಎಡ – ಬಲ ( ಹೊಲೆಯ – ಮಾದಿಗ ) ಎಂದು ವಿಭಜಿಸಿ ಆ ಬೆಂಕಿಯಲ್ಲಿ ಸದಾ ಮೈ ಕಾಯಿಸಿಕೊಳ್ಳುವವರು ನನ್ನ ( ಎನ್ . ಮೂರ್ತಿ ) ತೇಜೋವಧೆಗೆ ಷಡ್ಯಂತರ ಮಾಡಿದ್ದಾರೆ .

ಕಳೆದ 2 ವರ್ಷದ ಹಿಂದೆ ಉದ್ಯಮಿ ಒಬ್ಬರ ಮೇಲೆ ನಾನು ಮಾಡಿದ ಆರೋಪವನ್ನು ನನ್ನ ಮೇಲೆ ತಿರುಗಿಸಿ ಭಾರತ ರತ್ನ ಬಾಬಾ ಸಾಹೇಬ ಡಾ || ಬಿ.ಆರ್.ಅಂಬೇಡ್ಕರ್ ಪ್ರತಿಮೆ ವಿಚಾರದಲ್ಲಿ ವಿವಾದ ಸೃಷ್ಟಿಸಲಾಗಿದೆ . ಅಲ್ಲದೇ ಎನ್ . ಮೂರ್ತಿ , ನಾಗರಭಾವಿಯಲ್ಲಿ ಸರ್ಕಾರಿ ಜಮೀನನ್ನು ಕಬಳಿಸಿದ್ದಾನೆಂದು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಿದರು . ನಾನು ಸರ್ಕಾರದ ಯಾವುದೇ ಜಮೀನನ್ನು ಕಬಳಿಸಿಲ್ಲ . ಆಗಿದ್ದರೆ ಸರ್ಕಾರ ಮುಂದಾಗಿ ಈ ಕೂಡಲೇ ಸರ್ಕಾರದ ಜಮೀನಿಗೆ ಕಾಂಪೌಂಡ್ ಹಾಕಿಕೊಳ್ಳಲಿ .

ಸತ್ಯಾಸತ್ಯತೆಯನ್ನು ಜಾಗೃತವಾಗಿ ಹಾಗೂ ಸೂಕ್ಷ್ಮವಾಗಿ ಹರಿತ ಬೆಂಗಳೂರು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಡಾ || ಬಿ.ಆರ್.ಅಂಬೇಡ್ಕರ್ ಪ್ರತಿಮೆ ವಿಚಾರವನ್ನು ಅತ್ಯಂತ ಗೌರವಿತವಾಗಿ ಅಂತ್ಯ ಮಾಡಲು ತೋರಿದ ದಕ್ಷತೆ ಹಾಗೂ ಪ್ರಾಮಾಣೀಕತೆಗೆ ದ.ಸಂ.ಸ. ಅಭಿನಂದನೆ ಸಲ್ಲಿಸಿದೆ .

ಕಳೆದ ಸುಮಾರು 45 ವರ್ಷಗಳಿಂದ ನಾನು ನನ್ನ ಕುಟುಂಬ ಭಾರತ ರತ್ನ ಬಾಬಾ ಸಾಹೇಬ ಡಾ || ಬಿ.ಆರ್.ಅಂಬೇಡ್ಕರ್ ಮತ್ತು ಶೋಷಿತರ ಅಭ್ಯದಯಕ್ಕೆ ಅವಿರತ ಶ್ರಮಿಸಿದ್ದೇವೆ . ಇದನ್ನರಿಯದ ಹೃದಯ ಹೀನರು ಹಾಗೂ ಕೆಲವು ಕಿಡಿಗೇಡಿ ಮತ್ತು ತಿಳಿಗೇಡಿ ಬೆಂಗಳೂರಿನ ಕೆಲವು ಮುಖಂಡರು ರೀತಿ ಎತ್ತಿಕಟ್ಟಿ ನನ್ನ ಬೆಳವಣಿಗೆಯಿಂದ ವಿಚಲಿತಗೊಂಡು ವಾಮಮಾರ್ಗ ಅನುಸರಿಸಿದ್ದಾರೆ ಅಲ್ಲದೇ ತೀವ್ರ ಅಸೂಹೆಯ ಇಂತಹ ಹಲವಾರು ಯತ್ನಗಳು ನನಗೆ ಹೊಸದೇನಲ್ಲ .

“ ಅಸ್ಪೃಶ್ಯತೆಯ ಅನುಭವದಲ್ಲಿ ಹೊಲೆ ಮಾದಿಗರು ಸಮಾನ ದುಃಖಿಗಳು ” ಬಾಬಾ ಸಾಹೇಬರ ತತ್ವ ಸಿದ್ಧಾಂತ ಅರಿವಿಲ್ಲದವರು ಇತಿಹಾಸದ ಗಂಧಾಹಾಳ ತಿಳಿಯದವರು ಇಂತಹ ಕುಕೃತ್ಯದಲ್ಲಿ ತೊಡಗಿದ್ದಾರೆ ಹಾಗೂ ಪ್ರಸಕ್ತ ಅಪಾಯಕಾರಿ ಸನ್ನಿವೇಶದಲ್ಲಿ ಜಾತಿವಾದಿ ರೀತಿಯ ಕುಚೋದ್ಯೆ ಮತ್ತು ಕೋಮುವಾದಿಗಳ ವಿದ್ಯಾಮಾನದ ಪರಿವಿಲ್ಲದವರು ಈ ಉಪಟಳದಲ್ಲಿ ತೊಡಗಿದ್ದಾರೆ . ನಾನು ಮತ್ತು ನನ್ನ ಸಂಘಟನೆ ಇಂತಹ ಗೊಡ್ಡ ಬೆದರಿಕೆಗೆ ಹಾಗೂ ಅಪಪ್ರಚಾರಕ್ಕೆ ಅಂಜುವುದಿಲ್ಲ . ಮತ್ತು ಹೋರಾಟದಿಂದ ವಿಮುಖವಾಗುವುದಿಲ್ಲ . ಮತ್ತಷ್ಟು ಚಳುವಳಿಯನ್ನು ತೀವ್ರಗೊಳಿಸಲಾಗುವುದು ಎಂದು ಎನ್ . ಮೂರ್ತಿ – ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು

City Today News

9341997936