ಮಹಿಳೆಯರ ಗೌರವ ನಮ್ಮೆಲ್ಲರ ಆದ್ಯ ಕರ್ತವ್ಯ: ಜಿ.ಆರ್. ಪ್ರದೀಪ್ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ಮಹಿಳಾ ದಿನಾಚರಣೆ
ಬೆಂಗಳೂರು: ಮಹಿಳೆಯರನ್ನು ಗೌರವಿಸುವ ಮನೋಭಾವ ಸಮಾಜದಲ್ಲಿ ನಿರಂತರವಾಗಿ ಬಲಪಡಬೇಕು ಎಂದು ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ರಾಜ್ಯಾಧ್ಯಕ್ಷ ಜಿ.ಆರ್. ಪ್ರದೀಪ್ ಅಭಿಪ್ರಾಯಪಟ್ಟರು. ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ಬೆಂಗಳೂರು ದಕ್ಷಿಣ ಮಹಿಳಾ ಘಟಕದ ವತಿಯಿಂದ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಮಾಜದಲ್ಲಿ ಮಹಿಳೆಯರನ್ನು ಪೂಜನೀಯ ಸ್ಥಾನದಲ್ಲಿ ಕಾಣುವ ಮನೋಭಾವ ಬೆಳೆಸಬೇಕಿದೆ. ಮಹಿಳಾ ಶಕ್ತಿಗೆ ಗೌರವ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಹೇಳಿದರು. ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಕಾರ್ಯ ಮುಂದುವರಿಯಬೇಕು ಎಂದು ಮಹಾಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಜೋಶಿ ತಿಳಿಸಿದರು. ವಿವಿಧ ವಲಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪದಾಧಿಕಾರಿಗಳು ಹಾಗೂ ಸದಸ್ಯರು ನೋಂದಣಿಯಾಗುವಂತೆ ಸದಸ್ಯತ್ವ ಅಭಿಯಾನವನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಾಮೂಹಿಕ ಮಹಾಲಕ್ಷ್ಮಿ ಪೂಜೆ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರಿಗೆ ಸನ್ಮಾನ ಕಾರ್ಯಕ್ರಮವೂ ನಡೆಯಿತು. ಕಾರ್ಯಕ್ರಮದಲ್ಲಿ ಮಹಾಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಜೋಶಿ, ಬೆಂಗಳೂರು ದಕ್ಷಿಣ ಘಟಕದ ಅಧ್ಯಕ್ಷೆ ಪೂರ್ಣಿಮಾ, ರಾಜ್ಯ ಯುವ ಘಟಕದ ಅಧ್ಯಕ್ಷ ಕಾರ್ತಿಕ್ ಸೋಮಯಾಜಿ, ರಾಜ್ಯ ಉದ್ಯಮ ವಿಭಾಗದ ಅಧ್ಯಕ್ಷ ಶ್ರೀಧರ್, ಬೆಂಗಳೂರು ದಕ್ಷಿಣ ಮಹಿಳಾ ಘಟಕದ ಅಧ್ಯಕ್ಷೆ ಜಯಶ್ರೀ ಸೂರ್ಯನಾರಾಯಣ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.
Bengaluru, March 14, 2026: London-based consumer tech brand Nothing has officially announced that its much-anticipated Phone (4a) Series is now available for sale in India. With this launch, the company aims to redefine the mid-range smartphone segment by combining its iconic transparent design, powerful performance, advanced camera technology, and the latest software experience.
The new Nothing Phone (4a) brings a standout triple-camera setup designed for users who love photography. It features a 50MP main camera with OIS, a 50MP telephoto lens with 3.5x optical zoom and up to 70x Ultra Zoom, along with a Sony ultra-wide sensor and a 32MP front camera for selfies. Powered by the TrueLens Engine 4, the device supports Ultra XDR photography and AI-enhanced imaging, allowing users to capture everything from wide landscapes to distant subjects with remarkable clarity.
The smartphone sports a 6.78-inch 1.5K AMOLED display with a 120Hz refresh rate, offering a vibrant and smooth visual experience. It is protected by Gorilla Glass 7i and powered by the Qualcomm Snapdragon 7s Gen 4 processor, ensuring reliable everyday performance and smooth gaming.
One of the highlights of the device is the newly introduced Glyph Bar, an upgraded lighting interface that provides smart notifications and can also function as a fill light for photos and videos. Staying true to Nothing’s design philosophy, the phone features a transparent back design and comes in bold colour options including Blue, Pink, Black, and White, along with IP64 protection for everyday durability. The Phone (4a) also packs a 5400mAh battery with 50W fast charging, ensuring long-lasting power. Running on Android 16-based Nothing OS 4.1, the device offers smarter AI features, deeper customization, and a fast, clean user experience.
Pricing and Availability The Phone (4a) is available in Black, White, Blue, and Pink in three configurations: 8GB + 128GB – ₹31,999 8GB + 256GB – ₹34,999 12GB + 256GB – ₹37,999 The Phone (4a) Pro is available in Black, Silver, and Pink in three configurations: 8GB + 128GB – ₹39,999 8GB + 256GB – ₹42,999 12GB + 256GB – ₹45,999 As part of the launch offers, customers can avail bank discounts of up to ₹3,000 on Phone (4a) and up to ₹4,000 on Phone (4a) Pro, along with exchange offers and no-cost EMI options through select partners. With these combined offers, the Phone (4a) will be available at an effective starting price of ₹24,999, while the Phone (4a) Pro will start at an effective price of ₹34,999.
The Nothing Phone (4a) Series is available for purchase through Flipkart, Reliance Digital, Vijay Sales, Croma, and leading retail stores across India.
ಬೆಂಗಳೂರು: ಒಳ ಮೀಸಲಾತಿ ವಿಧೇಯಕಕ್ಕೆ ರಾಜ್ಯಪಾಲರು ಸಹಿ ಮಾಡಿ ಅನುಮೋದನೆ ನೀಡಿರುವ ಸಂದರ್ಭದಲ್ಲಿ, ಅದೇ ಸಮಯದಲ್ಲಿ ಒಳ ಮೀಸಲಾತಿ ಅನ್ವಯವಾಗದಂತೆ 56 ಸಾವಿರಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಸರ್ಕಾರ ಕೈಗೊಂಡಿರುವ ಫೆಬ್ರವರಿ 26ರ ಸಚಿವ ಸಂಪುಟದ ತೀರ್ಮಾನವು ಸಂವಿಧಾನ ಹಾಗೂ ಸಾಮಾಜಿಕ ನ್ಯಾಯದ ತತ್ವಗಳಿಗೆ ವಿರುದ್ಧವಾಗಿದೆ ಎಂದು ಒಳಮೀಸಲಾತಿ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ತೀರ್ಮಾನವು ಕಳೆದ 35 ವರ್ಷಗಳಿಂದ ನಡೆಯುತ್ತಿರುವ ಒಳ ಮೀಸಲಾತಿ ಹೋರಾಟಕ್ಕೆ ಮಹಾದ್ರೋಹವೆಂದು ಆರೋಪಿಸಿದ ಹೋರಾಟಗಾರರು, ಸರ್ಕಾರದ ಕ್ರಮವನ್ನು ಖಂಡಿಸಿ ಇತ್ತೀಚೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಸಾವಿರಾರು ಜನರು ಸೇರಿ ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿಸಿದರು.
ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ಅಧಿವೇಶನದಲ್ಲೇ ಒಳ ಮೀಸಲಾತಿ ಜಾರಿಗೊಳಿಸುವುದಾಗಿ ಭರವಸೆ ನೀಡಿತ್ತು. ಚಿತ್ರದುರ್ಗ ಸಮಾವೇಶದಲ್ಲಿಯೂ ಇದೇ ಮಾತು ಪುನರಾವರ್ತಿತವಾಗಿತ್ತು. ಆದರೆ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಾದರೂ ಈ ಬಗ್ಗೆ ಗಂಭೀರ ಪ್ರಯತ್ನ ನಡೆದಿಲ್ಲ ಎಂದು ಹೋರಾಟಗಾರರು ದೂರಿದರು. ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಹೋರಾಟದ ಒತ್ತಡದಿಂದಾಗಿ ಸರ್ಕಾರ 2025ರ ಆಗಸ್ಟ್ 25ರಂದು ಒಳ ಮೀಸಲಾತಿ ಜಾರಿಗೆ ತರುವುದಾಗಿ ತಾತ್ವಿಕ ಒಪ್ಪಿಗೆ ನೀಡಿದೆಯಾದರೂ, ನೇಮಕಾತಿಗಳ ವಿಚಾರದಲ್ಲಿ ಗೊಂದಲಕಾರಿ ಕ್ರಮಗಳನ್ನು ಕೈಗೊಂಡಿದೆ ಎಂದು ಆರೋಪಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿದರೂ, ಅದಕ್ಕೆ ಅನುಗುಣವಾಗಿ ಉದ್ಯೋಗ ಅವಕಾಶಗಳನ್ನು ನೀಡದೇ ಸಾವಿರಾರು ಹುದ್ದೆಗಳನ್ನು ಕಡಿತಗೊಳಿಸಿರುವುದು ಸಾಮಾಜಿಕ ನ್ಯಾಯಕ್ಕೆ ಧಕ್ಕೆ ತರುವಂತಾಗಿದೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೋರಾಟಗಾರರ ನಿಯೋಗವನ್ನು ಭೇಟಿ ಮಾಡಿ ಒಳ ಮೀಸಲಾತಿ ಕುರಿತು ಸಂಪೂರ್ಣ ಚರ್ಚೆ ನಡೆಸಲು ಮಾರ್ಚ್ 27ರಂದು ವಿಶೇಷ ಸಚಿವ ಸಂಪುಟ ಸಭೆ ಕರೆಯುವುದಾಗಿ ಹಾಗೂ ಒಳ ಮೀಸಲಾತಿ ಜಾರಿಯಾಗದೆ ಯಾವುದೇ ಹುದ್ದೆಗಳನ್ನು ಭರ್ತಿ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ.
ಆದರೆ ಹಿಂದಿನ ಸರ್ಕಾರಗಳ ಅನುಭವದ ಹಿನ್ನೆಲೆ ಈ ಭರವಸೆಯ ಮೇಲೂ ಸಂಪೂರ್ಣ ನಂಬಿಕೆ ಇಡುವುದು ಕಷ್ಟವೆಂದು ಹೇಳಿದ ಹೋರಾಟಗಾರರು, ಮಾರ್ಚ್ 27ರವರೆಗೆ ಸರ್ಕಾರದ ಮೇಲೆ ವಿವಿಧ ರೀತಿಯಲ್ಲಿ ಒತ್ತಡ ಮುಂದುವರಿಸುವುದಾಗಿ ಎಚ್ಚರಿಸಿದರು. ಅಂದು ಸಹ ಸರ್ಕಾರ ಒಳ ಮೀಸಲಾತಿ ಪರ ತೀರ್ಮಾನ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಅವರು ಹೇಳಿದರು.
ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಒಳ ಮೀಸಲಾತಿ ಹೋರಾಟ ಸಮಿತಿಯ ಮುಖಂಡರಾದ ಮಾರಾಸಂದ್ರ ಮುನಿಯಪ್ಪ, ಎಸ್. ಮಾರಪ್ಪ, ಅಂಬಣ್ಣ ಆರೋಲಿಕರ್, ನರಸಪ್ಪ ದಂಡೋರ, ಗುರುಮೂರ್ತಿ, ಫರ್ನಾಂಡಿಸ್ ಇಪ್ಪಳಗಾಂವ್ ಹಾಗೂ ಚಂದ್ರ ತರಹುಣಿಸೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬೆಂಗಳೂರು, ಮಾ.14: ದೇಶಾದ್ಯಂತ ನಾಲ್ಕು ಹಂತಗಳಲ್ಲಿ ನಡೆಸಲು ಉದ್ದೇಶಿಸಿರುವ ‘ಗೋ ಸಮ್ಮಾನ ಅಭಿಯಾನ’ಕ್ಕೆ ಪೂರ್ವಭಾವಿಯಾಗಿ ಮಾರ್ಚ್ 15ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಪ್ರಚಾರಕರ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ಅಭಿಯಾನದ ಸಂಘಟಕರು ತಿಳಿಸಿದ್ದಾರೆ. ಈ ಕುರಿತು ಇಂದು Press Club of Bangalore ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮಹಾಲಕ್ಷ್ಮೀಪುರಂನ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿರುವ Hindu Sadar Kshemabhivruddhi Sangha ಸಭಾಂಗಣದಲ್ಲಿ ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕಾರ್ಯಾಗಾರ ನಡೆಯಲಿದೆ. ರಾಜ್ಯದ ವಿವಿಧ ತಾಲ್ಲೂಕುಗಳಿಂದ ಪ್ರತಿನಿಧಿಗಳಾಗಿ ಗೋಭಕ್ತರು, ಗೋಸಂರಕ್ಷಕರು ಹಾಗೂ ರಾಜ್ಯ-ಹೊರರಾಜ್ಯಗಳಿಂದ ಆಗಮಿಸುವ ಸಂತರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಅಭಿಯಾನದ ಪ್ರಮುಖ ಬೇಡಿಕೆಗಳಲ್ಲಿ ಗೋವನ್ನು ‘ರಾಷ್ಟ್ರಮಾತೆ’ ಎಂದು ಘೋಷಿಸುವುದು, ದೇಶಾದ್ಯಂತ ಏಕಕಾನೂನಿನಡಿ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸುವುದು ಹಾಗೂ ಗೋಮಾಳಗಳನ್ನು ಗೋಸಂರಕ್ಷಣೆಗೆ ಮೀಸಲಿಡುವುದು ಸೇರಿವೆ.
ಈ ಬೇಡಿಕೆಗಳನ್ನು ಒತ್ತಿಹೇಳುವ ಉದ್ದೇಶದಿಂದ ಅಭಿಯಾನವನ್ನು ನಾಲ್ಕು ಹಂತಗಳಲ್ಲಿ ನಡೆಸಲು ಯೋಜಿಸಲಾಗಿದೆ. ಮೊದಲ ಹಂತದಲ್ಲಿ ಏಪ್ರಿಲ್ 27ರಂದು ದೇಶದಾದ್ಯಂತ ಸುಮಾರು 5,400 ತಹಶೀಲ್ದಾರ್ಗಳಿಗೆ ಮನವಿ ಸಲ್ಲಿಸಲಾಗುತ್ತದೆ. ಎರಡನೇ ಹಂತದಲ್ಲಿ ಜುಲೈ 27ರಂದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತದೆ. ಮೂರನೇ ಹಂತದಲ್ಲಿ ಅಕ್ಟೋಬರ್ 27ರಂದು ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ರಾಜ್ಯಪಾಲರಿಗೆ ಮನವಿ ಸಲ್ಲಿಸುವ ಕಾರ್ಯಕ್ರಮವಿದೆ.
ನಾಲ್ಕನೇ ಹಂತವಾಗಿ 2027ರ ಫೆಬ್ರವರಿ 27ರಿಂದ ಆಗಸ್ಟ್ 15ರವರೆಗೆ ದೆಹಲಿಯಲ್ಲಿ ಸಂತರು ಮತ್ತು ಗೋಭಕ್ತರು ಶಾಂತಿಯುತ ಧರಣಿ ನಡೆಸುವ ಯೋಜನೆ ಇದೆ. ಆಗಲೂ ಬೇಡಿಕೆಗಳು ಈಡೇರದಿದ್ದರೆ, ಅಂತಿಮವಾಗಿ 2027ರ ಆಗಸ್ಟ್ 16ರಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ. ಈ ಅಭಿಯಾನವು ಯಾವುದೇ ನಿರ್ದಿಷ್ಟ ವ್ಯಕ್ತಿ ಅಥವಾ ಸಂಸ್ಥೆಯ ಹೆಸರಿನಲ್ಲಿ ನಡೆಯದೇ, ಗೋಮಾತೆ ಹಾಗೂ ನಂದಿ ಬಾಬಾರವರ ನೇತೃತ್ವದಲ್ಲಿ ಸಾಮೂಹಿಕವಾಗಿ ನಡೆಯಲಿದೆ. ಅಭಿಯಾನದ ಹೆಸರಿನಲ್ಲಿ ವಂತಿಗೆ ಸಂಗ್ರಹಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಆರೂಡಭಾರತಿ ಸ್ವಾಮೀಜಿ,ಶ್ರೀಕಲಿತನಯ ಸ್ವಾಮೀಜಿ,ಮುಖೇಶ್ ಗೌಡ,ಸಂಜಯ್ ಕುಮಾರ್ ತಕ್ ಮತ್ತು ಇತರ ಮುಖಂಡರುಗಳ ಸಮ್ಮುಖದಲ್ಲಿ ಸ್ಪಷ್ಟಪಡಿಸಿದರು.
ಅಭಿಯಾನದಲ್ಲಿ ಭಾಗವಹಿಸಲು ಆಸಕ್ತರು 9067777323 ಸಂಖ್ಯೆಗೆ ಮಿಸ್ ಕಾಲ್ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ 9571712140 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
Bengaluru: Gs Gopal Raaj, Editor of City Today News, has extended his warm congratulations and best wishes to Hon. Dr. Raja Seevan on his prestigious appointment as Advisory Council Member of the AsiaSkills Academic & Research Institute, India.
Hon. Dr. Raja Seevan, who serves as the H.E. Ambassador of the FANA India Embassy and Chairman & Founder Trustee of Indian CST, has been recognised for his consistent efforts in promoting education, research, skill development, and social empowerment. His new role with AsiaSkills Academic & Research Institute is expected to further strengthen the institution’s vision of empowering future generations through knowledge, innovation, and excellence.
Congratulating him on this significant achievement, Gs Gopal Raaj said that Dr. Raja Seevan’s leadership, dedication to community development, and commitment to academic advancement have earned him respect across various sectors. He expressed confidence that Dr. Seevan’s guidance and experience will greatly contribute to the growth and global outreach of the institute.
He also wished Dr. Raja Seevan continued success in his mission to support educational initiatives, research collaborations, and skill development programs that inspire and empower young minds.
City Today News wishes Hon. Dr. Raja Seevan greater achievements and success in his new responsibility.
You must be logged in to post a comment.