ಬೆಂಗಳೂರು ನಗರ ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾಕೂಟ:     ಕಂಠೀರವ ಕ್ರೀಡಾಂಗಣದಲ್ಲಿ , ಇದೇ11ರಿಂದ12ರವರೆಗೆ

ಬೆಂಗಳೂರು ಪ್ರೆಸ್‌ಕ್ಲಬ್ ನಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಢಿ

ರಾಜ್ಯ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶ್ ಪಾಟೀಲ್ ರವರು   ಬೆಂಗಳೂರು ನಗರ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಇದೇ 11ರಿಂದ 12ರವರೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು  ತಿಳಿಸಿದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದು, ಯುವಜನ ಸೇವೆ ಮತ್ತು ಕ್ರೀಡಾ ಸಚಿವ ನಾರಾಯಣ ಗೌಡ ಸೇರಿದಂತೆ  ಹಲವು ಗಣ್ಯರು   ಭಾಗವಹಿಸಲಿದ್ದಾರೆ. ಸುಮಾರು 2ಸಾವಿರಕ್ಕೂ ಅಧಿಕ ಖಾಯಂ ಸರ್ಕಾರಿ ನೌಕರ ಕ್ರೀಡಾಪಟುಗಳು ಭಾಗವಹಿಸಲಿದ್ದು ಈ ಹಿನ್ನಲೆಯಲ್ಲಿ. ಬೆಂಗಳೂರು ನಗರ ಸರ್ಕಾರಿ ನೌಕರರಿಗೆ ರಜೆ ನೀಡುವ ವ್ಯವಸ್ಥೆ ಕೈಗೊಳ್ಳಲಾಗಿದೆ, ಎಲ್ಲ ಜಿಲ್ಲೆಗಳಲ್ಲಿ ಕ್ರೀಡಾ ಕೂಟ ನಡೆಯುತ್ತಿದ್ದು, ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಭಾಗವಹಿಸುವವರಿಗೆ ಎರಡು ದಿನಗಳ ಸಾಂದರ್ಭಿಕ, ಹಾಗೂ ರಾಜ್ಯ ಮಟ್ಟದ ಭಾಗವಹಿಸುವ ವರಿಗೆ ಮೂರು ದಿನಗಳ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಲಾಗಿದೆ.ಎಂದು  ತಿಳಿಸಿದರು.

ಪುಟ್ಬಾಲ್, ವಾಲಿಬಾಲ್, ಹಾಕಿ, ಕಬ್ಬಡಿ, ಟೆನ್ನಿಸ್ , ಬ್ಯಾಡ್ಮಿಂಟನ್, ಕೇರಂ, ಕ್ರಿಕೆಟ್, ಬ್ಯಾಸ್ಕೆಟ್ಬಾಲ್, ಚೆಸ್,ಥ್ರೋಬಾಲ್  ಮತ್ತು  ಬಾಲ್ ಬ್ಯಾಡ್ಮಿಂಟನ್ ಕ್ರೀಡೆಗಳು ಎಲ್ಲಾ ಜಿಲ್ಲೆಗಳಲ್ಲೂ ನಡೆಯಲಿದೆ ಎಂದು ತಿಳಿಸಿದರು.

City Today News
9341997936

FGII introduces “Health Super Saver offering 80% discount” on applicable premium if the initial years of plan tenure is claim free 

Bengaluru, 8th February 2021 : Future Generali India Insurance Company Limited (FGII), announced the launch of “Health Super Saver”, a unique insurance product that offers a discount on the premium. The policy will provide a discount of 80% on the applicable premium in the consecutive year(s) of the plan tenure in case there is no claim in the first/ second year of the plan. 

FGII is offering this product in two variants i.e. 1X and 2X. The Health Super Saver 1X plan provides a discount of 80% on the applicable premium in the consecutive year of the plan in case the first year of the plan is claim-free. In the Health Super Saver 2X plan, the policyholder can get 80% discount on the premium for the next consecutive two years of the plan, in case first two years of the plan tenure are claim-free or up to first claim. Further, an additional family discount of 10% is available if two or more family members are covered on an individual sum insured basis. The product covers an infant who is one day old to a senior citizen up to 70 years of age. 

Anup Rau, MD & CEO, Future Generali India Insurance said, “This product is unique. The customer gets 80% off in the second year if there is no claim in the first year. No fine print, no ifs and buts. We hope to seed the importance of health insurance in the younger population where customers are reluctant to pay health premiums, looking at it as a ‘loss’ if there is no claim raised.  

The product also provides comprehensive coverage for mental illness and psychiatric intervention or consultation” 

The consumers can opt for paying the premium in instalments on a monthly, quarterly, or half-yearly basis. 

Link: https://general.futuregenerali.in/Health-Insurance/health-super-saver 

City Today News
9341997936

ಕ್ಯಾನ್ಸರ್ ವಿರುದ್ಧ ಹೋರಾಡಿದವರನ್ನು ಫೋರ್ಟೀಸ್ ಜೊತೆ ಸೇರಿಸಿದೆ, ಅವರ ಆಶಾಕಿರಣ ಮತ್ತು ಸಂತಸದ ಕಥೆಯನ್ನು ಹಂಚಿಕೊಂಡಿದೆ!

ಬೆಂಗಳೂರು, ಫೆಬ್ರವರಿ 04, 2021: ವಿಶ್ವ ಕ್ಯಾನ್ಸರ್ ದಿನಾಚರಣೆ ದಿನದಂದು (ಫೆಬ್ರವರಿ 4 ರಂದು) ಫೋರ್ಟೀಸ್ ಕ್ಯಾನ್ಸರ್ ಇನ್ಸ್‌ಸ್ಟಿಟ್ಯೂಟ್ ಒಂದು ವಿಶಿಷ್ಟ ಕಾರ್ಯಕ್ರಮವನ್ನು ಏರ್ಪಡಿಸಿದೆ. ಪ್ರಸಕ್ತವಾಗಿ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗಾಗಿ ಕ್ಯಾನ್ಸರ್‌ನಿಂದ ಗುಣಮುಖ ಹೊಂದಿರುವವರ ಸಂಭ್ರಮವನ್ನಾಚರಿಸಿದೆ. ಕ್ಯಾನ್ಸ್‌ನಿಂದ ಗುಣಮುಖ ಹೊಂದಿದವರಿಗಾಗಿ ಮತ್ತು ಅವರಿಗೆ ಆರೈಕೆ ನೀಡಿದ ಸಹಾಯಕರಿಗಾಗಿ ಅನೇಕ ಚಟುವಟಿಕೆಗಳನ್ನು ಏರ್ಪಡಿಸಲಾಯಿತು. ಬೆಂಗಳೂರಿನ ಫೋರ್ಟೀಸ್ ಕ್ಯಾನ್ಸರ್ ಸಂಸ್ಥೆ ಪ್ರಾರಂಭಿಸಿರುವ ಬೆಂಬಲಿತ ಗುಂಪಿನ ಕೇಂದ್ರ ಆಶಾದಲ್ಲಿ ಈ ಕಾರ್ಯಕ್ರಮ ಏರ್ಪಡಿಸಲಾಯಿತು.
ಕ್ಯಾನ್ಸರ್ ವಿರುದ್ಧ ಹೋರಾಡಿ ಧೈರ್ಯ ತೋರಿಸಿದವರನ್ನು ಸಂಭ್ರಮಿಸುವ ಸ್ಥಳವೇ ಆಶಾ ಆಗಿದೆ ಮತ್ತು ಹೊಸತಾಗಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುವವರಿಗೆ ಇಲ್ಲಿ ಪ್ರೇರಣೆ ಸಿಗುತ್ತದೆ. ಆಶಾದಲ್ಲಿ ಡಾಕ್ಟರರು, ಬೆಂಬಲಿತ ಗುಂಪು ಮತ್ತು ರೋಗ ಚಿಕಿತ್ಸೆ ಪಡೆದು ಗೆದ್ದವರ ನಡುವೆ 90 ನಿಮಿಷಗಳ ಪರಸ್ಪರ ಸ್ಪಂಧನಾತ್ಮಕ ಅಧಿವೇಶನವೊಂದನ್ನು ಏರ್ಪಡಿಸಲಾಯಿತು. ಇದಾದ ಬಳಿಕ ಯೋಗ ಅಧಿವೇಶನ ಮತ್ತು ಆರೋಗ್ಯಕರ ಆಹಾರ ಸೇವನೆ ಅಭ್ಯಾಸ ಕುರಿತಂತೆ ಮಾರ್ಗದರ್ಶನ ಕಾರ್ಯಕ್ರಮ ಏರ್ಪಡಿಸಲಾಯಿತು. ಕೊನೆಯದಾಗಿ ಕೆಲವೊಂದು ಸಂಗೀತ ಚಿಕಿತ್ಸೆ ಕ್ರಮವನ್ನು ಕೂಡಾ ಏರ್ಪಡಿಸಲಾಯಿತು. ಆ ಅಧಿವೇಶನದ ಅಂಗವಾಗಿ ಬೆಂಬಲಿತ ಗುಂಪು ಮತ್ತು ರೋಗ ಚಿಕಿತ್ಸೆ ಪಡೆದು ಗೆದ್ದವರು ಯಾವ ರೀತಿಯಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡಿದ್ದಾರೆ ಎಂದು ತಮ್ಮ ಅನುಭವ ನೀಡಿದರು ಮತ್ತು ಇತ್ತೀಚೆಗೆ ಕ್ಯಾನ್ಸರ್ ಚಿಕಿತ್ಸೆ ಪಡೆಯುವವರಿಗೆ ಪ್ರೇರಣೆ ನೀಡುವಂತಾಗಿತ್ತು. ಆಶಾದಲ್ಲಿ ಮಾಸಿಕ ಆಧಾರದಂತೆ ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು ಮತ್ತು ಪ್ರತಿ ತಿಂಗಳೂ ಬೇರೆ ಬೇರೆ ರೋಗಿಗಳನ್ನು ಕರೆಸಲಾಗುವುದು ಮತ್ತು ಅವರಿಗಾಗಿ ಯೋಗ/ಮ್ಯೂಸಿಕ್ ಸೆಶನ್‌ಗಳನ್ನು ಏರ್ಪಡಿಸಲಾಗುವುದು.
ಫೋರ್ಟೀಸ್ ಕ್ಯಾನ್ಸರ್ ಇನ್ಸ್‌ಸ್ಟಿಟ್ಯೂಟ್‌ನ ಮೆಡಿಕಲ್ ಓಂಕೋಲಜಿ ಮತ್ತು ಹೆಮಾಟೋ-ಓಂಕೋಲಜಿಯ ನಿರ್ದೇಶಕರಾದ ಡಾ. ನೀತಿ ರಾಯಿಜಾದಾ ಅವರು ಹೀಗೆ ಹೇಳಿದ್ದಾರೆ “ವಿಶ್ವ ಕ್ಯಾನ್ಸರ್ ದಿನಾಚರಣೆಯ ಸಂದರ್ಭದಲ್ಲಿ ಫೋರ್ಟೀಸ್ ಕ್ಯಾನ್ಸರ್ ಸಂಸ್ಥೆ ಪ್ರಾರಂಭಿಸಿರುವ ಆಶಾ ಕಾರ್ಯಕ್ರವನ್ನು ಪರಿಚಯಿಸಲು ನನಗೆ ಅತ್ಯಂತ ಸಂತೋಷವಾಗುತ್ತಿದೆ. ಕ್ಯಾನ್ಸರ್ ನಿವಾರಣೆಗೆ ಬೆಂಬಲಿಸುವ ಈ ಗ್ರೂಪ್ ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದವರು ಮತ್ತು ಹೊಸತಾಗಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿರುವವರಿಗಾಗಿ ಒಂದು ವೇದಿಕೆಯಂತೆ ಪಾತ್ರ ವಹಿಸುತ್ತದೆ. ಯೋಗ ಸೆಶನ್ ಮತ್ತು ಆರೋಗ್ಯಕರ ಆಹಾರ ಸೇವನೆ ಮಾರ್ಗದರ್ಶನ ಸೆಶನ್‌ಗಳ ಮೂಲಕ ಕ್ಯಾನ್ಸರ್ ರೋಗಿಗಳಿಗೆ ಆರೋಗ್ಯಕರವಾಗಿ ಜೀವಿಸಬೇಕಾಗಿರುವ ಪ್ರಾಮುಖ್ಯತೆಯನ್ನು ವಿವರಿಸಲಾಗುವುದು. ಇದಲ್ಲದೆ, ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದು ಗುಣಮುಖ ಹೊಂದಿರುವವರು ತಮ್ಮ ಅನುಭವವನ್ನು ತಿಳಿಸಬೇಕು ಮತ್ತು ಪ್ರಸಕ್ತವಾಗಿ ಚಿಕಿತ್ಸೆ ಪಡೆಯುತ್ತಿರುವ ಕ್ಯಾನ್ಸರ್ ರೋಗಿಗಳು ಮತ್ತು ಅವರ ಆರೈಕೆ ಸಹಾಯಕರಿದೆ ಸ್ಪೂರ್ತಿ ಮತ್ತು ಪ್ರೇರಣೆ ನೀಡಬೇಕೆಂದು ನಾವು ವಿನಂತಿಸುತ್ತೇವೆ.”
ಈ ಹೊಸ ಕ್ರಮದ ಬಗ್ಗೆ ಮಾತನಾಡುತ್ತಾ ಡಿಪಾರ್ಟ್‌ಮೆಂಟ್ ಆಫ್ ಯೂರೋಲಜಿ, ಯೂರೋಲಜಿ, ಯೂರೋ-ಓಂಕೋಲಜಿ, ಅಂಡ್ರೋಲಜಿ – ಟ್ರಾನ್ಸ್‌ಪ್ಲಾಂಟ್ ಮತ್ತು ರೋಬೋಟಿಕ್ ಸರ್ಜರಿಯ ನಿರ್ದೇಶಕರಾದ ಡಾ ಮೋಹನ್ ಕೇಶವಮೂರ್ತಿ ಅವರು ಹೀಗೆ ಹೇಳಿದ್ದಾರೆ. “ನಮ್ಮ ರೋಗಿಗಳು ಸಂಪೂರ್ಣ ಗುಣಮುಖರಾಗಿದ್ದಾರೆ ಮತ್ತು ಆರೋಗ್ಯಕರ ಜೀವನವನ್ನು ನಡೆಸುತ್ತಿದ್ದಾರೆ ಎಂಬುದನ್ನು ತಿಳಿದು ತುಂಬಾ ಸಂತೋಷವಾಗುತ್ತಿದೆ. ಆಶಾ ಮೂಲಕ ನಾವು ನಮ್ಮ ರೋಗಿಗಳನ್ನು ಮತ್ತೆ ಭೇಟಿಯಾಗುವುದು ಮತ್ತು ಅವರುಗಳು ಕ್ಯಾನ್ಸರ್ ಮುಕ್ತವಾದ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ ಎಂಬುದನ್ನು ತಿಳಿಯುವುದು ಸಾಧ್ಯವಾಗಿದೆ. ನಾವು ಕ್ಯಾನ್ಸರ್ ರೋಗಿಗಳು ಮತ್ತು ರೋಗದಿಂದ ಗುಣಮುಖರಾದವರಲ್ಲು ಒಂದೇ ವೇದಿಕೆಯಲ್ಲಿ ಸೇರಿಸುತ್ತಿರುವ ಕಾರಣದಿಂದಾಗಿ, ಇತ್ತೀಚೆಗೆ ಕ್ಯಾನ್ಸರ್ ಪಡೆದವರಿಗೆ ಇದು ಪ್ರೇರಣೆಯಾಗಲಿದೆ ಮತ್ತು ಅವರಿಗೆ ಕ್ಯಾನ್ಸರ್ ವಿರುದ್ಧ ಹೋರಾಡಲು ಇನ್ನಷ್ಟು ಸ್ಪೂರ್ತಿ ಸಿಗುತ್ತದೆ.”
ಯೋಗ ಮತ್ತು ಸಂಗೀತ ಚಿಕಿತ್ಸೆಯ ಪ್ರಾಮುಖ್ಯತೆಯನ್ನು ಎತ್ತಿ ಹೇಳುವುದು ಕೂಡಾ ಈ ಸೆಶನ್‌ನ ಅಂಗವಾಗಿದೆ.

City Today News
9341997936

ಕರ್ನಾಟಕ ರಾಜ್ಯ . ಸರ್ಕಾರಿ ಪ್ರಾಥಮಿಕ ಶಾಲಾ ಗ್ರೇಡ್ -2 ದೈಹಿಕ ಶಿಕ್ಷಣ ಶಿಕ್ಷಕರ ಪ್ರಮುಖ ಬೇಡಿಕೆಗಳು

ಪತ್ರಿಕಾಗೋಷ್ಟಿಯ ಹೇಳಿಕೆ

ಕರ್ನಾಟಕ ರಾಜ್ಯ . ಸರ್ಕಾರಿ ಪ್ರಾಥಮಿಕ ಶಾಲಾ ಗ್ರೇಡ್ -2 ದೈಹಿಕ ಶಿಕ್ಷಣ ಶಿಕ್ಷಕರ ಪ್ರಮುಖ ಬೇಡಿಕೆಗಳು ಈ ಕೆಳಕಂಡಂತಿವೆ .

1 , ದೈಹಿಕ ಶಿಕ್ಷಣ ಶಿಕ್ಷಕರನ್ನು ಹೆಚ್ಚವರಿ ಎಂದು ಪರಿಗಣಿಸದಿರುವಂತೆ ಈ ಕೆಳಕಂಡ ಅಂಶಗಳಂತೆ ಕೋರಿ ಡಾ || ವೈಧ್ಯನಾಥನ್ ವರಧಿಯಂತೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರನ್ನು ಕಡ್ಡಾಯಗೊಳಿಸುವುದು . 2. ಸೇವಾ ಹಿರಿತನದ ಮೇಲೆ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡುವುದು ಸಿ & ಆರ್ ಗೆ ತಿದ್ದುಪಡಿ ತರುವಂತೆ ಸರ್ಕಾರದ ಗಮನಕ್ಕೆ ತಂದಿದೆ . 3. ರಾಜ್ಯದಲ್ಲಿ ಖಾಲಿ ಇರುವ ದೈಹಿಕ ಇರುವ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಯನ್ನು ಭರ್ತಿ ಮಾಡುವಂತೆ ಸರ್ಕಾರದ ಗಮನಕ್ಕೆ ತಂದಿದೆ . 4. ದೈಹಿಕ ಶಿಕ್ಷಣ ಶಿಕ್ಷಕರಾಗಿ ನೇಮಕಾತಿಹೊಂದಿ ಇದುವರೆವಿಗೂ ಸರ್ಕಾರದ ಯಾವುದೇ ಬಡ್ತಿ ಇಲ್ಲದೆ ನಿವೃತ್ತಿ ಹೊಂದಿರುತ್ತಾರೆ ಈ ನಿಯಮ ಯಾವುದೇ ಇಲಾಖೆಯಲ್ಲಿಯು ಇರುವುದಿಲ್ಲ . 5. ದೈಹಿಕ ಶಿಕ್ಷಣ ಶಿಕ್ಷಕರನ್ನು ಸಹಶಿಕ್ಷಕರೆಂದು ಪರಿಗಣಿಸುವಂತೆ ಹಲವಾರು ಬಾರಿ ಇಲಾಖೆಯ ಗಮನಕ್ಕೆ ತಂದಿರುತ್ತೇವೆ . 6 , ಸೇವಾ (ಶೇಷ್ಠತ ) ಆಧಾರದ ಮೇಲೆ ಶಾಲಾ ಹಾಜರಾತಿ ಪುಸ್ತಕದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಹೆಸರನ್ನು ನಮೂದಿಸುವುದು . 7. ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ದೈಹಿಕ ಶಿಕ್ಷಣ ಶಿಕ್ಷಕರಿಗೆ ಉನ್ನತ ವ್ಯಾಸಾಂಗವಾದ ಬಿ.ಪಿ.ಇ.ಡಿ ತಾಂತ್ರಿಕ ವಿಷಯವಾಗಿರುವುದರಿಂದ ಇಲಾಖಾ ವತಿಯಿಂದ ವೇತನ ಸಹಿತ ವ್ಯಾಸಾಂಗ ಮಾಡಲು ಅನುಮತಿ ಕೋರಿ ಈ ವಿಷಯವನ್ನು ಹಲವಾರು ಬಾರಿ ಸಲ್ಲಿಸಿರುತ್ತೇವೆ . 8. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಕನಿಷ್ಟ ಒಬ್ಬ ದೈಹಿಕ ಶಿಕ್ಷಣ ಸಂಯೋಜಕರ ಹುದ್ದೆಗೆ ಹಾಗೂ ಪ್ರತಿಯೊಂದು ತಾಲ್ಲೂಕಿಗೆ 2 ರಿಂದ 3 ಜನ ಸಿ.ಆರ್.ಪಿ. ಗಳನ್ನಾಗಿ ದೈಹಿಕ ಶಿಕ್ಷಣ ಶಿಕ್ಷಕರಿಗೆ ಅವಕಾಶ ಕಲ್ಪಿಸುವ ವಿಷಯವನ್ನು ಸರ್ಕಾರದ ಗಮನಕ್ಕೆ ತಂದಿದೆ . 9. ಪ್ರತಿಯೊಂದು ಶಾಲೆಗೆ ಕ್ರೀಡಾ ಸಾಮಗ್ರಿಗಳನ್ನು ಖರೀದಿಸಲು ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಲು ಶಿಫಾರಸ್ಸು ಮಾಡುವುದು .

– ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಗ್ರೇಡ್ -2 ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಬೆಂಗಳೂರು.

City Today News
9341997936

ಬಿಎಂಟಿಸಿ ಕೇಂದ್ರ ಕಛೇರಿ ಬಳಿ ಪ್ರತಿಭಟನೆ

ಪತ್ರಿಕಾಗೋಷ್ಟಿಯ ಹೇಳಿಕೆ

ಸಾರಿಗೆ ಕಾರ್ಮಿಕರು ಇತ್ತೀಚೆಗೆ ನಡೆಸಿದ ಮುಷ್ಕರದ ನಂತರದಲ್ಲಿ ಸಮಸ್ಯೆಗಳು ತೀವ್ರವಾಗಿ ಹೆಚ್ಚಳವಾಗಿವೆ . ನಿಗದಿತ ಸಮಯಕ್ಕೆ ವೇತನಗಳು ಸಿಗುತ್ತಿಲ್ಲ . ಅರ್ಧ ಸಂಬಳಗಳನ್ನು ನೀಡಲಾಗಿದೆ . ಈಗಷ್ಟೇ ಶಾಲಾ ಕಾಲೇಜುಗಳು ಆರಂಭವಾಗಿದ್ದು , ತಮ್ಮ ಮಕ್ಕಳಿಗೆ ಶಿಕ್ಷಣ ಶುಲ್ಕವನ್ನು ಕಟ್ಟಲಾಗದ ಪರಿಸ್ಥಿತಿ ಉದ್ಭವವಾಗಿದೆ . ಕಾರ್ಮಿಕರ ಗಳಿಕೆ ರಜೆಗಳನ್ನು ಕಡಿತ ಮಾಡಲಾಗುತ್ತಿದೆ . ರಜೆಗಳನ್ನು ವಜಾ ಮಾಡಿಕೊಂಡು ಸಂಬಳವನ್ನು ನೀಡಲಾಗುತ್ತಿದೆ . ಬಲವಂತವಾಗಿ ರಜೆಗಳನ್ನು ಹಾಕುವಂತೆ ಮಾಡಲಾಗುತ್ತಿದೆ . ಕಾರ್ಮಿಕರ ಹಕ್ಕಿನ ವಾರದ ರಜೆಯನ್ನು ನೀಡದ ಕಿರುಕುಳ ನೀಡಲಾಗುತ್ತಿದೆ . ಪ್ರತಿದಿನದ ಕೆಲಸವನ್ನು ಪಡೆದುಕೊಳ್ಳಲು ನಾಲ್ಕಾರು ಗಂಟೆಗಳು ಕಾಯಬೇಕಾಗಿದೆ . ಗಂಟೆಗಟ್ಟಲೆ ಕಾಯಿಸಿ ನಂತರ ಕೆಲಸ ನೀಡದೆ ರಜೆ ಹಾಕುವಂತೆ ಬಲವಂತ ಮಾಡಲಾಗುತ್ತಿದೆ . ಕೆಲಸ ಪಡೆದುಕೊಳ್ಳಲು ಅಧಿಕಾರಿಗಳಿಗೆ ಲಂಚ ನೀಡಬೇಕಾದ ಪರಿಸ್ಥಿತಿಯಿದೆ . ಪೂರ್ಣಪ್ರಮಾಣದಲ್ಲಿ ಮಾರ್ಗಾಚರಣೆ ಮಾಡದಿರುವುದರಿಂದ 8 ಗಂಟೆ . ಬದಲಿಗೆ 12 ಗಂಟೆ ಕೆಲಸ ಮಾಡುವಂತಾಗಿದೆ . ಮಹಿಳಾ ಕಾರ್ಮಿಕರಿಗೆ ವಿಪರೀತ ಸಮಸ್ಯೆಗಳು ಉಂಟಾಗಿವೆ . ಮೊದಲ ಮತ್ತು ಸಾಮಾನ್ಯ ಪಾಳಿಗಳಲ್ಲಿ ಕೆಲಸ ನೀಡದಿರುವುದು ಮತ್ತು 12 ಗಂಟೆಗಳ ಕಾಲ ಕೆಲಸ ಮಾಡಬೇಕಿರುವುದರಿಂದ ನೈಸರ್ಗಿಕ ಕ್ರಿಯೆಗಳಿಗೂ ಅನಾನುಕೂಲ ಉಂಟಾಗಿದೆ ಮತ್ತು ಕೌಟುಂಬಿಕ ಜೀವನದ ಮೇಲೆ ನಕಾರಾತ್ಮಕ ಪರಿಣಾಮಗಳು ಉಂಟಾಗುತ್ತಿವೆ . ಕಾರ್ಮಿಕರ ಮೇಲೆ ಶಿಸ್ತಿನ ಕ್ರಮಗಳು ಕೆಲವೊಮ್ಮೆ ಸೇಡಿನ ಕ್ರಮಗಳಾಗಿ ಪರಿವರ್ತನೆಯಾಗುತ್ತಿವೆ . ಡಿಪೋ ಮಟ್ಟದಲ್ಲಿ ಕುಂದುಕೊರತೆ ನಿವಾರಣಾ ಸಮಿತಿಗಳು ಅಸ್ತಿತ್ವದಲ್ಲಿ ಇಲ್ಲದಿರುವುದರಿಂದ ಕಾರ್ಮಿಕರ ಮೇಲಿನ ಕಿರುಗಳಗಳಿಗೆ ಪರಿಹಾರವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ . ಇದೇ ಸಂದರ್ಭದಲ್ಲಿ 300 ಎಲೆಕ್ಟಿಕ್‌ ಬಸ್‌ಗಳನ್ನು ಗುತ್ತಿಗೆ ಆಧಾರದ ಮೇಲೆ ತರುವುದಾಗಿ ಸಾರಿಗೆ ಸಚಿವರು ಹೇಳಿದ್ದಾರೆ . ಮುಂದಿನ ದಿನಗಳಲ್ಲಿ ಸಾರಿಗೆ ನಿಗಮಗಳನ್ನು ಖಾಸಗೀಕರಿಸುವ ಹುನ್ನಾರದ ಭಾಗವಾಗಿ ಇಂತಹ ಪ್ರಯತ್ನಗಳನ್ನು ಸರ್ಕಾರ ಮಾಡುತ್ತಿದೆ . ಸಾರಿಗೆ ಕಾರ್ಮಿಕರ ಭವಿಷ್ಯದ ಮೇಲೆ ಮತ್ತು ರಾಜ್ಯದ ಜನತೆಯ -2 ಸಾರ್ವಜನಿಕ ಸಾರಿಗೆಯ ಹಕ್ಕಿನ ಮೇಲೆ ಇದು ನಕಾರಾತ್ಮಕ ಪರಿಣಾಮವನ್ನು ಬೀರಲಿದೆ .

ಈ ಹಿನ್ನೆಲೆಯಲ್ಲಿ ಆಡಳಿತ ವರ್ಗದ ಮತ್ತು ಸರ್ಕಾರದ ಗಮನ ಸೆಳೆಯಲು 10-02-20 21 ರಂದು ಬುಧವಾರ ಮಧ್ಯಾಹ್ನ 1.00 ಗಂಟೆಗೆ ಬಿಎಂಟಿಸಿ ಕೇಂದ್ರ ಕಛೇರಿ ಬಳಿ ಪ್ರತಿಭಟನೆ ನಡೆಸಿ , ಮನವಿ ಸಲ್ಲಿಸಲು ಕ.ರಾ.ರ.ಸಾ.ನಿಗಳು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ತೀರ್ಮಾನಿಸಿದೆ .

ಬೇಡಿಕೆಗಳು 1. ನಿಗದಿತ ಸಮಯಕ್ಕೆ ವೇತನ ಪಾವತಿ ಮಾಡಬೇಕು . ಬಾಕಿ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು . 2 ವಾರದ ರಜೆಯನ್ನು ಕಡ್ಡಾಯವಾಗಿ ಷರತ್ತುಗಳಿಲ್ಲದೆ ನೀಡಬೇಕು . ಕಾರ್ಮಿಕರ ರಜೆ ಕಡಿತ ನಿಲ್ಲಿಸಬೇಕು . ಹಿಂದೆ ಕಡಿತ ಮಾಡಿರುವ ರಜೆಗಳನ್ನು ವಾಪಸ್ ನೀಡಬೇಕು . 3. ಪೂರ್ಣ ಪ್ರಮಾಣದಲ್ಲಿ ಮಾರ್ಗಾಚರಣೆ ಆರಂಭಿಸಿ , ನಾಲ್ಕು ಪಾಳಿಗಳಲ್ಲಿ ಕೆಲಸ ನೀಡಬೇಕು . ಕೆಲಸ ನೀಡಲು ಲಂಚ ಪಡೆಯುವ ಅಧಿಕಾರಿಗಳನ್ನು ಶಿಕ್ಷಿಸಬೇಕು . 4 , ಮಹಿಳಾ ಕಾರ್ಮಿಕರಿಗೆ ಮೊದಲ ಮತ್ತು ಸಾಮಾನ್ಯ ಪಾಳಿಯಲ್ಲಿ ಕೆಲಸಕ್ಕೆ ಆದ್ಯತೆ ನೀಡಬೇಕು . 5 , ಘಟಕ ಮಟ್ಟದಲ್ಲಿ ಕಾರ್ಮಿಕರ ಕುಂದು ಕೊರತೆ ನಿವಾರಣಾ ಸಮಿತಿಗಳನ್ನು ರಚಿಸಿ ಸಮಸ್ಯೆಗಳ ನಿವಾರಣೆಗೆ ಕ್ರಮ ವಹಿಸಬೇಕು . 6 , ಗುತ್ತಿಗೆ ಆಧಾರದಲ್ಲಿ 300 ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆಯನ್ನು ನಿಲ್ಲಿಸಬೇಕು , ಸಾರಿಗೆ ನಿಗಮಗಳೇ ನೇರವಾಗಿ ತಮ್ಮ ಸಿಬ್ಬಂದಿಯ ಮೂಲಕವೇ ಕಾರ್ಯಾಚರಣೆ ಮಾಡಬೇಕು .

– ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ

City Today News
9341997936