TRA’s Covid Mental Wellbeing Index shows Mumbai at lowest,Delhi citizens cope second best with current crisis


Bangalore . 29th April, 2020: TRA Research, a consumer insights and brand analytics company, today released a new finding from its recent white-paper, a research survey conducted across 16 cities with 902 urban citizens to delve deeper into the Mental Wellbeing of citizens across urban India.  Guwahati citizens showed the highest mental Wellbeing (84%) in their ability to cope with their current worries of family health and work stability as well as their fears on the country’s health and economic impact. This was followed by Delhi-NCR (78%) which had the second best Mental Wellbeing score. Other cities which displayed a ‘Good’ ability Mental Wellbeing of their citizens include Indore (75%), Coimbatore (73%) and Pune (72%). Mumbai showed the lowest Mental Wellbeing Index at just 28%, showing severe stresses and anxieties among the citizenry, followed by Lucknow at 36%. 
N. Chandramouli, CEO, TRA Research, explained the concept of Mental Wellbeing and said, “The Mental Wellbeing of citizens in the context of this research is seen as their ability to cope with current worries regarding the pandemic. The ability to cope with worries depends on the individual’s mind-set of course, but also depends on the city’s general acceleration rate in patients, as also the a city’s complex demographics that may impede coping with the pandemic. The rapid spread in Mumbai with the highest number of Covid-19 patients is also reflected in the low Mental Wellbeing of its citizens with regard to coping with the disease.” 

City Today News

(citytoday.media)

9341997936

ನಂಜನಗೂಡು ಕ್ಷೇತ್ರಕ್ಕೆ ಸಚಿವ ಸೋಮಶೇಖರ್ ಅವರಿಂದ 20 ಸಾವಿರ ಉಚಿತ ಮಾಸ್ಕ್ ವಿತರಣೆ

*ಜಾಗ್ರತೆ ವಹಿಸಲು ಜನತೆಗೆ ಕಿವಿಮಾತು
*ನಂಜನಗೂಡು ಜನತೆ ಪರ ಸರ್ಕಾರ, ತಾವು ಇರುವುದಾಗಿ ಭರವಸೆ
ಮೈಸೂರು: ಮೈಸೂರು ಜಿಲ್ಲೆಯಲ್ಲೇ ಅತಿಹೆಚ್ಚು ಕೊರೋನಾ ಪ್ರಕರಣ ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಜನತೆಯ ಆರೋಗ್ಯದ ದೃಷ್ಟಿಯಿಂದ ಮಾನ್ಯ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ವೈಯುಕ್ತಿಕವಾಗಿ 20 ಸಾವಿರ ಮಾಸ್ಕ್ ಗಳನ್ನು ವಿತರಣೆ ಮಾಡಿದರು.

ನಂಜನಗೂಡಿನ ಮಿನಿ ವಿಧಾನಸೌಧದಲ್ಲಿ ಟಾಸ್ಕ್ ಫೋರ್ಸ್ ಅಧಿಕಾರಿಗಳ ಜೊತೆ ಸಭೆ ನಡೆದ ನಂತರ ಅಲ್ಲಿನ ಸ್ಥಳೀಯ ತಾಲೂಕು ಆಡಳಿತಕ್ಕೆ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರ ಮೂಲಕ 20 ಸಾವಿರ ಮಾಸ್ಕ್ ಗಳನ್ನು ಸಚಿವರು ಹಸ್ತಾಂತರಿಸಿದರು.
ಈ ವೇಳೆ ಶಾಸಕರಾದ ಹರ್ಷವರ್ಧನ್ ಇದ್ದರು.

ಈ ವೇಳೆ ಮಾತನಾಡಿದ ಸಚಿವರು, ಕೊರೋನಾ ರೋಗಕ್ಕೆ ಇನ್ನೂ ಮದ್ದು ಕಂಡುಹಿಡಿಯಲಾಗಿಲ್ಲ. ಆದರೆ, ಜನತೆ ಜಾಗ್ರತೆಯಿಂದ ಇದ್ದರೆ ಯಾವುದೇ ಸಮಸ್ಯೆ ಆಗದು. ಇದಕ್ಕೆ ಬಹುಮುಖ್ಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ವ್ಯಕ್ತಿಗಳ ಜೊತೆ ಮಾತನಾಡವಾಗ ಇಲ್ಲವೇ ಸಂಚರಿಸುವಾಗ ಮಾಸ್ಕ್ ಗಳನ್ನು ಕಡ್ಡಾಯವಾಗಿ ಧರಿಸುವುದು ಹಾಗೂ ಕೈಗಳನ್ನು ಆಗಾಗ ಸ್ಯಾನಿಟೈಸರ್ ನಿಂದ ಶುಚಿಗೊಳಿಸಿಕೊಳ್ಳುವುದು ಇಲ್ಲವೇ ಸೋಪಿನಿಂದ ತೊಳೆದುಕೊಳ್ಳಬೇಕು ಎಂದು ಸಚಿವರು ಜನತೆಗೆ ಕರೆಕೊಟ್ಟರು.

ನಂಜನಗೂಡು ಜನತೆ ಯಾವುದೇ ಕಾರಣಕ್ಕೂ ಭಯ ಬೀಳುವುದು ಬೇಡ. ನಾನು ಈ ಹಿಂದೆಯೇ ಹೇಳಿದಂತೆ ಈ ಕ್ಷೇತ್ರದ ಜನತೆಯ ಪರ ಸರ್ಕಾರ, ಜಿಲ್ಲಾಡಳಿತ ಇದ್ದು, ಸಹಾಯಕ್ಕೆ ಬದ್ಧರಾಗಿದ್ದೇವೆ ಎಂದು ಸಚಿವರು ತಿಳಿಸಿದರು.

ಈಗಾಗಲೇ ನಂಜನಗೂಡು ಕ್ಷೇತ್ರದಲ್ಲಿ ಸೋಂಕಿತರ ಪ್ರಮಾಣ ಇಳಿಮುಖವಾಗುತ್ತಿದ್ದು, ಈಗ ಹೊಸ ಪ್ರಕರಣಗಳೂ ಪತ್ತೆಯಾಗುತ್ತಿಲ್ಲ. ಇದಕ್ಕೆ ಜಿಲ್ಲಾಧಿಕಾರಿಗಳು ಮತ್ತವರ ತಂಡದ ಶ್ರಮ ಶ್ಲಾಘನೀಯ. ನಾನು ಅಧಿಕಾರಿಗಳಂತೆ 24X7 ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ಸಂದರ್ಭದಲ್ಲಿ ಶಾಸಕರು ನನ್ನನ್ನು ಸಂಪರ್ಕಿಸಬಹುದು ಎಂದು ಸಚಿವರು ಇದೇ ವೇಳೆ ಹೇಳಿದರು.

City Today News

(citytoday.media)

9341997936

ಚೇತರಿಕೆ ಹಾದಿಯತ್ತ ಷೇರುಪೇಟೆ ಹೆಜ್ಜೆ!

ಬೆಂಗಳೂರು: ಬೆಂಚ್‌ಮಾರ್ಕ್ ಸೂಚ್ಯಂಕಗಳು ಸತತ ಎರಡನೇ ದಿನವೂ ಒಟ್ಟುಗೂಡಿದ ಕಾರಣ ಕೊವೀಡ್-19 ನ ಕತ್ತು ಹಿಸುಕುವಿಕೆಯು ಮಾರುಕಟ್ಟೆಯಿಂದ ಮರೆಯಾಗುತ್ತಿದೆ. ಕೊರೊನಾ ವೈರಸ್ ಏಕಾಏಕಿ 371 ಪಾಯಿಂಟ್‌ಗಳ ರ್ಯಾಲಿಯೊಂದಿಗೆ ಸೆನ್ಸೆಕ್ಸ್ ಮೊದಲ ಬಾರಿಗೆ 32,000 ಅಂಕಗಳನ್ನು ಉಲ್ಲಂಘಿಸಿದೆ ಎಂದು ಏಂಜಲ್ ಬ್ರೋಕಿಂಗ್ ಸಂಸ್ಥೆಯ ಹೆಡ್ ಅಡ್ವೆಂಸರಿ ಆಮರ್ ದಿಯೋ ಸಿಂಗ್ ಹೇಳಿದರು.

ಇಂಡಸ್ಇಂಡ್ ಬ್ಯಾಂಕ್ ಲಾಭದೊಂದಿಗೆ ಮುಂಚೂಣಿಯಲ್ಲಿರುವ ಎಲ್ಲಾ ಬ್ಯಾಂಕಿಂಗ್ ಷೇರುಗಳು ಇಂದು ಹಸಿರು ಬಣ್ಣದಲ್ಲಿ ವಹಿವಾಟು ನಡೆಸಿದವು. ನಿನ್ನೆ ನಡೆದ ಶೇಕಡ 7 ರ್ಯಾಲಿಯ ನಂತರ ಷೇರು ಶೇಕಡ 14.89 ಏರಿಕೆಯಾಗಿದೆ. ಆರ್‌ಬಿಎಲ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಮತ್ತು ಬಂಧನ್ ಬ್ಯಾಂಕ್‌ನಂತಹ ಷೇರುಗಳೊಂದಿಗೆ ನಿಫ್ಟಿ ಬ್ಯಾಂಕ್ ದಿನದ ವಹಿವಾಟಿನಲ್ಲಿ ಶೇಕಡ 2.94 ಲಾಭ ಗಳಿಸಿದೆ.

ಕಚ್ಚಾ ಬೆಲೆಗಳು ಇಂದು ಮತ್ತಷ್ಟು ದುರ್ಬಲಗೊಂಡಿರುವುದರಿಂದ ತೈಲ ಮಾರುಕಟ್ಟೆಗೆ ಪರಿಹಾರದ ಲಕ್ಷಣಗಳಿಲ್ಲ. ಈಗಾಗಲೇ ಅತಿಯಾದ ಪೂರೈಕೆಯ ಮಾರುಕಟ್ಟೆಯಲ್ಲಿ, ಜಾಗತಿಕ ಶೇಖರಣಾ ಸಾಮರ್ಥ್ಯವು ಶೀಘ್ರವಾಗಿ ಒಣಗುತ್ತಿದೆ, ಆದರೆ ಬೇಡಿಕೆಯು ಯಾವುದೇ ಸಮಯದಲ್ಲಿ ಉತ್ತೇಜಿಸುವ ಸಾಧ್ಯತೆಗಳು ಶೀಘ್ರದಲ್ಲೇ ಮಂಕಾಗಿರುತ್ತವೆ.

ಹೂಡಿಕೆದಾರರು ತಮ್ಮ ಲಾಭವನ್ನು ಕಾಯ್ದಿರಿಸಿದ್ದರಿಂದ ಎಲ್ಲಾ ಪ್ರಮುಖ  ಔಷಧೀಯ ಷೇರುಗಳು ಕೆಂಪು ಬಣ್ಣದಲ್ಲಿ ವಹಿವಾಟು ನಡೆಸುತ್ತಿದ್ದವು. ನಿಫ್ಟಿ ಫಾರ್ಮಾ ಎಲ್ಲಾ ಕುಸಿತಗಳನ್ನು ಗಮನಿಸಿದೆ ಮತ್ತು ಯಾವುದೇ ಪ್ರಗತಿಯಿಲ್ಲ. ಲುಪಿನ್ ಶೇಕಡ 4.73 ನಷ್ಟದೊಂದಿಗೆ ಹೆಚ್ಚು ಕುಸಿದಿದೆ. ನಂತರ ಸನ್ ಫಾರ್ಮಾ ಶೇಕಡ 3.26 ಮತ್ತು ಬಯೋಕಾನ್ ಶೇಕಡ 3.07 ನಷ್ಟವಾಗಿದೆ. ಎಸ್ & ಪಿ ಬಿಎಸ್ಇ ಹೆಲ್ತ್ಕೇರ್ನಲ್ಲಿ, ಪ್ಯಾನೇಸಿಯಾ ಬಯೋಟೆಕ್ ತನ್ನ 52 ವಾರಗಳ ಗರಿಷ್ಠ ಮಟ್ಟವನ್ನು ಶೇಕಡ 14.67 ರ್ಯಾಲಿಯೊಂದಿಗೆ ತಲುಪಿದೆ.

ಎಫ್‌ಎಂಸಿಜಿ ಸೂಚ್ಯಂಕಗಳು ಬಿಎಸ್‌ಇ ಮತ್ತು ಎನ್‌ಎಸ್‌ಇ ಎರಡರಲ್ಲೂ ತಲಾ ಶೇಕಡ 1 ರಷ್ಟು ಕುಸಿದವು. ನೆಸ್ಲೆ ಇಂಡಿಯಾ ಶೇಕಡ 2.15 ಮತ್ತು ಕೋಲ್ಗೇಟ್ ಪಾಮೋಲೈವ್ ಶೇಕಡ 3.31 ರಷ್ಟು ಕುಸಿದಿದೆ. ಇತರ ಎಫ್‌ಎಂಸಿಜಿ ಮೇಜರ್‌ಗಳಾದ ಬ್ರಿಟಾನಿಯಾ ಮತ್ತು ಎಚ್‌ಯುಎಲ್ ಸಹ ಕ್ರಮವಾಗಿ ಶೇಕಡ 1.51 ಮತ್ತು ಶೇಕಡ 1.30 ರಷ್ಟು ಇಳಿಕೆಯಾಗಿದೆ.

City Today News

(citytoday.media)

9341997936

ಆಲಮಟ್ಟಿ ಡ್ಯಾಂ ಗೆ ರಮೇಶ್ ಜಾರಕಿಹೊಳಿ ಭೇಟಿ ; ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಯನ್ನಾಗಿ ಘೋಷಿಸಲು ಜಲಸಂಪನ್ಮೂಲ ಸಚಿವರ ಕೋರಿಕೆ

ಕೃಷ್ಣಾ ನದಿ ಇಡೀ ಉತ್ತರ ಕರ್ನಾಟಕದ ಜೀವನದಿಯಾಗಿದ್ದು, ಈ ನೀರಿನ ಸದ್ಭಳಕೆಗಿರುವ ಕಾನೂನು ತೊಡಕುಗಳನ್ನು ನಿವಾರಣೆ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ.
ಆಲಮಟ್ಟಿ ಜಲಾಶಯವನ್ನು 519.6 ಮೀ. ನಿಂದ 524.256 ಮೀ. ವರೆಗೆ ಹಂತ ಹಂತವಾಗಿ ಏರಿಸಬೇಕೆನ್ನುವ ಪ್ರಸ್ತಾಪ ಸರ್ಕಾರದ ಮುಂದಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಯನ್ನಾಗಿ ಘೋಷಿಸಲು ಕೇಂದ್ರ ಸರ್ಕಾರಕ್ಕೆ ಕೋರಿಕೆ ಸಲ್ಲಿಸಲಿ ಚಿಂತನೆ ನಡೆದಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ.
ಮಂಗಳವಾರ ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯ ದ ಪರಿವೀಕ್ಷಣೆ ಮಾಡಿದ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಜಲಸಂಪನ್ಮೂಲ ಸಚಿವರು ಎಲ್ಲಾ ಶಾಸಕರಿಗೆ ಅವರ ಮತಕ್ಷೇತ್ರದಲ್ಲಿ ಕಾರ್ಯಕ್ರಮ ಮಾಡುವ ಹಕ್ಕಿದೆ. ಆದರೆ ತಿಡಗುಂದಿ ವಿಷಯದಲ್ಲಿ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆ. ತಿಡಗುಂದಿ ಜಲ ಸೇತುವೆ ಇನ್ನೂ ಲೋಕಾರ್ಪಣೆಯಾಗಿಲ್ಲ ಎಂದರು.

ತಿಡಗುಂದಿ ಕಾಲುವೆ ಲೋಕಾರ್ಪಣೆ ವಿಷಯದಲ್ಲಿ ಅಧಿಕಾರಿಗಳು ನಿಯಮವನ್ನು ಉಲ್ಲಂಘಿಸಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಬುಧವಾರ ಸಂಜೆಯೊಳಗೆ ಕ್ರಮ ಕೈಗೊಳ್ಳುವುದಾಗಿ ಎಂದು ಅವರು ತಿಳಿಸಿದರು.

ಯುಕೆಪಿ ಯೋಜನೆ ಜಾರಿಗೆ ಹಣಕಾಸಿನ ಕೊರತೆಯಿಲ್ಲ. ನಾನು ಉತ್ತರಕರ್ನಾಟಕದವನಾಗಿದ್ದು, ಈ ಭಾಗದ ಸಮಗ್ರ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ. ಯೋಜನೆ ಪೂರ್ಣಗೊಳಿಸಲು ಹಣಕಾಸಿನ ಕ್ರೋಡಿಕರಣಕ್ಕೂ ಚಿಂತನೆ ನಡೆದಿದೆ ಎಂದರು.
ಇದು ನನ್ನ ಅಧ್ಯಯನ ಪ್ರವಾಸವಾಗಿದ್ದು, ಯೋಜನೆಗಳ ಕುರಿತು ಮಾಹಿತಿ ಪಡೆಯಲು ಬಂದಿದ್ದೇನೆ. ಕೊರೋನಾ ಲಾಕ್ ಡೌನ್ ನಂತರ ಮತ್ತೆ ಈ ಭಾಗಕ್ಕೆ ಬಂದು ಯುಕೆಪಿ ನೀರಾವರಿ ಯೋಜನೆಗಳಿಗೆ ಚುರುಕು ಮುಟ್ಟಿಸುತ್ತೇನೆ ಎಂದು ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು

ಅಭಿವೃದ್ಧಿ ಪರ ಯಾವುದೇ ಸಲಹೆಗಳಿಗೂ ಸ್ವಾಗತ ಎಂದ ಸಚಿವರು, ನೀರಾವರಿ ಕ್ಷೇತ್ರದಲ್ಲಿಯಲ್ಲಿ ಹೊಸ ಬದಲಾವಣೆ ತರುವುದೇ ನನ್ನ ಮುಂದಿರುವ ಗುರಿ ಎಂದರು.

ಅಧಿಕಾರಿ ಕ್ವಾರಂಟೈನ್:
ಆಲಮಟ್ಟಿಯ ಪ್ರಧಾನ ಮುಖ್ಯ ಲೆಕ್ಕಾಧಿಕಾರಿಗಳು ಲಾಕ್ ಡೌನ್ ಅವಧಿಯಲ್ಲೂ ತುಮಕೂರು ಸೇರಿದಂತೆ ನಾನಾ ಕಡೆ ಸಂಚರಿಸಿ ಲಾಕ್ ಡೌನ್ ಉಲ್ಲಂಘಿಸಿದ್ದಾರೆ ಎಂಬ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ದೊಡ್ಡನಗೌಡ ಪಾಟೀಲ, ಎ.ಎಸ್. ಪಾಟೀಲ (ನಡಹಳ್ಳಿ), ಶಿವಾನಂದ ಪಾಟೀಲ, ಸೋಮನಗೌಡ ಪಾಟೀಲ, ಎಂ.ಸಿ. ಮನಗೂಳಿ, ಯಶವಂತರಾಯಗೌಡ ಪಾಟೀಲ, ಅರುಣ ಶಹಾಪುರ, ಹನುಮಂತ ನಿರಾಣಿ ಸೇರಿದಂತೆ ನೀರಾವರಿ ಇಲಾಖೆಯ ಅಧಿಕಾರಿಗಳು ಇದ್ದರು.

City Today News

(citytoday.media)

9341997936