ಆರೋಗ್ಯ ಸೇತು ಕೋವಿಡ್19 ಮೊಬೈಲ್ ಆ್ಯಪ್ ನ್ನು ಡೌನ್‌ಲೋಡ್ ಮಾಡಿ ಇದರ ಪ್ರಯೋಜನ ಪಡೆದುಕೊಳ್ಳಲು ಸೂಚನೆ – ಶ್ರೀ ರಮೇಶ್ ಜಾರಕಿಹೊಳಿ, ಜಲಸಂಪನ್ಮೂಲ ಸಚಿವರುಕರ್ನಾಟಕ ಸರ್ಕಾರ

ಸುತ್ತೋಲೆ.

ಮಾರಕವಾದ ಕೊರೋನಾ ಸೊಂಕು (ಕೋವಿಡ್ 19) ಎಲ್ಲೆಡೆ ಹರಡುತ್ತಿರುವ ಈ ಸಂದರ್ಭದಲ್ಲಿ ಸೋಂಕಿತರ ಮೇಲೆ ನಿಗಾ ಇಡುವುದೇ ಸರ್ಕಾರಕ್ಕೆ ಮತ್ತು ಆರೋಗ್ಯ ಸಹಾಯಕರಿಗೆ ಬಹುದೊಡ್ಡ ಕೆಲಸವಾಗಿದೆ. ಹಾಗಾಗಿಯೇ ಸೋಂಕಿತ ವ್ಯಕ್ತಿಯ ಮೇಲೆ ನಿಗಾ ಇರಿಸುವ ಮತ್ತು ವೈಯಕ್ತಿಕ ಅಲರ್ಟ್ ಸಂದೇಶಗಳನ್ನು‌ ನೀಡುವ ಆರೋಗ್ಯ ಸೇತು ಕೋವಿಡ್19 ಮೊಬೈಲ್ ಆ್ಯಪ್ ನ್ನು ಕೇಂದ್ರ ಸರ್ಕಾರ ಅಭಿವೃದ್ಧಿ ಪಡಿಸಿದೆ. ಈ ಮೊಬೈಲ್ ಆ್ಯಪ್ ನ್ನು ನಮ್ಮ ಜಲಸಂಪನ್ಮೂಲ ಇಲಾಖೆಯ ‌ಎಲ್ಲಾ ಅಧಿಕಾರಿಗಳು, ನೀರಾವರಿ ನಿಗಮಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಡೌನ್‌ಲೋಡ್ ಮಾಡಿ ಇದರ ಪ್ರಯೋಜನ ಪಡೆದುಕೊಳ್ಳಲು ಸೂಚಿಸಿದೆ.

ಶ್ರೀ ರಮೇಶ್ ಜಾರಕಿಹೊಳಿ
ಜಲಸಂಪನ್ಮೂಲ ಸಚಿವರು
ಕರ್ನಾಟಕ ಸರ್ಕಾರ

City Today News

(citytoday.media)

9341997936

ಜಿಲ್ಲಾ ಪ್ರವಾಸದ ಕುರಿತು ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಕೆ: ಕೊಪ್ಪಳ‌ಜಿಲ್ಲೆಯ ಭತ್ತ ಹಾನಿ, ಹೂ ಬೆಳೆಗಾರರಿಗೆ ಪರಿಹಾರ ಒದಗಿಸುವಂತೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಮನವಿ

ಬೆಂಗಳೂರು,ಏ.12,2020: ಕೊರೊನಾ ಲಾಕ್ಡೌನ್‌ನಿಂದಾಗಿ ರಾಜ್ಯದ ಕೃಷಿ ಚಟುವಟಿಕೆ ಹಾಗೂ ರೈತರ ಮೇಲಿನ ಪರಿಣಾಮಗಳ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ವರದಿ ಸಲ್ಲಿಸಿದರು.

ಏಪ್ರಿಲ್ 6ರಿಂದ ಏ.11ರವರೆಗೆ ಮೊದಲ‌ಹಂತದ ಜಿಲ್ಲಾ ಪ್ರವಾಸ ಮುಗಿಸಿರುವ ಕೃಷಿ ಸಚಿವರು ರಾಜ್ಯಾದ್ಯಂತ 19ಜಿಲ್ಲೆಗಳಿಗೆ ಸಂಚರಿಸಿ ಕೊರೊನಾ ನಿರ್ಬಂಧಿತ ಅವಧಿಯಲ್ಲಿ ರೈತರ ಸಮಸ್ಯೆಗಳನ್ನು ಆಲಿಸಿ ಸಭೆ ನಡೆಸಿದ್ದರು. ಮುಂಗಾರು ಹಂಗಾಮಿಗೆ ಇಲಾಖೆ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ. ಸತತ ಎಲ್ಲಾ 19ಜಿಲ್ಲೆಗಳಲ್ಲಿ ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳು,ರೈತ ಮುಖಂಡರು ಹಾಗು ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ್ದರು.
ಇದೀಗ ಮೊದಲ‌ಹಂತದ ಜಿಲ್ಲಾ ಪ್ರವಾಸದ ಕುರಿತು ಸರ್ಕಾರಕ್ಕೆ ಕೃಷಿ ಸಚಿವರು ಇಂದು ಸಂಜೆ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ವರದಿ ಸಲ್ಲಿಸಿದರು.

ಕಳೆದ‌‌ಏಪ್ರಿಲ್ 7‌ರಂದು ಕೊಪ್ಪಳ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಆಣೆಕಲ್ಲು ಗಾಳಿ ಮಳೆಯಿಂದಾಗಿ ಜಿಲ್ಲೆಯ ಗಂಗಾವತಿ, ಯಾದಗಿರಿ ಜಿಲ್ಲೆಯ‌ ಸುರಪುರ ಭಾಗಗಳಲ್ಲಿ ಭತ್ತದ‌ ಪೈರು ಹಾಗಹು ತೋಟಗಾರಿಕಾ ಬೆಳೆಗಳು ನಾಶವಾಗಿದ್ದು, ಬೆಳೆ ಹಾನಿ ಸಮೀಕ್ಷೆ ನಡೆಸಿ ಎನ್.ಡಿ.ಆರ್‌.ಎಫ್-ಎಸ್.ಡಿ.ಆರ್.ಎಫ್ ಮೂಲಕ ರೈತರಿಗೆ ಪರಿಹಾರ ನೀಡಲು ಕ್ರಮ ಜರುಗಿಸಬೇಕು. ಹಾಗೂ ರಾಜ್ಯಾದ್ಯಂತ ಹೂವಿನ ಬೆಳೆಗಾರರಿಗೆ ನಿರ್ಬಂಧಿತ ಅವಧಿಯಲ್ಲಿ ಹೂ ಮಾರಾಟವಾಗದೇ ಹಾನಿಯಾಗಿರುವುದರಿಂದ ತೋಟಗಾರಿಕಾ ಇಲಾಖೆಯಿಂದ ಬೆಳೆ‌ ಸಮೀಕ್ಷೆ ನಡೆಸಬೇಕು.ಹಾಗೂ ಹೂವಿನ ಬೆಳೆಗಾರರಿಗೆ ಪರಿಹಾರ ಒದಗಿಸಬೇಕೆಂದು ಕೃಷಿ ಸಚಿವರು ವರದಿ ಸಲ್ಲಿಸಿದರು.

City Today News

(citytoday.media)

9341997936

CBI IN ADDITION TO THEIR WORK JOINS HANDS WITH OTHER GOVTAGENCIES TO PROVIDE FOOD TO NEEDY AND POOR PEOPLE DURINGNATION-WIDE LOCKDOWN AGAINST THE SPREAD OF THE COVID-19


The Central Bureau of Investigation, in addition to their work, has joined hands
with other Government agencies to provide food to needy and poor including migrant
labourers/workers who are facing a lot of hardship and staying at the temporary
shelters during the present Nation-wide Lockdown as a preventive measure against
the spread of the COVID-19 novel Corona Virus.

The CBI officials of certain branches including at Chennai, Bangalore,
Hyderabad, in addition to their work have also extended support voluntarily and
distributed food/ration to these homeless migrant labourers/workers staying in
temporary shelters.
CBI will be continuing its efforts to reach out and help these needy and poor
people in this difficult situation.


City Today News

(citytoday.media)

9341997936

ಬೆಂಗಳೂರಿನಲ್ಲಿ ಸಿಟಿ ರೌಂಡ್ಸ್ ನಡೆಸಿದ ಸಿಎಂ ಯಡಿಯೂರಪ್ಪ ಅವರು ಹಣ್ಣು, ಹೂವು ವ್ಯಾಪಾರಿಗಳ ಜತೆ ಚರ್ಚಿಸಿ ಸೂಕ್ತ ಸಲಹೆ‌ ನೀಡಿ ಧೈರ್ಯ ತುಂಬಿದರು

ಬೆಂಗಳೂರು, ಏಪ್ರಿಲ್ 12, 2020 : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ನಗರದ ಹಲವೆಡೆ ಸಂಚರಿಸಿ ಲಾಕ್ ಡೌನ್ ಅನುಷ್ಠಾನವನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಅವರು ಪೊಲೀಸರು, ಹೂವು, ಹಣ್ಣು ಮತ್ತು ತರಕಾರಿ ವ್ಯಾಪಾರಿಗಳು, ಕಿರಾಣಿ ಅಂಗಡಿ ಮಾಲೀಕರು ಹಾಗೂ ಸಾರ್ವಜನಿಕರೊಂದಿಗೆ ಮಾತುಕತೆ ನಡೆಸಿದರು.

ಬೆಂಗಳೂರಿನಲ್ಲಿ ಸಿಟಿ ರೌಂಡ್ಸ್ ನಡೆಸಿದ ಸಿಎಂ ಯಡಿಯೂರಪ್ಪ. ಲಾಕ್ಡೌನ್ ಜಾರಿ ಹಾಗೂ ಜನರ ಸಮಸ್ಯೆಗಳ ಬಗ್ಗೆ ಖುದ್ದು ಅವಲೋಕಿಸಿದ ಸಿಎಂ. ಈ ವೇಳೆ ಹಣ್ಣು, ಹೂವು ವ್ಯಾಪಾರಿಗಳ ಜತೆ ಚರ್ಚಿಸಿ ಸೂಕ್ತ ಸಲಹೆ‌ ನೀಡಿ ಧೈರ್ಯ ತುಂಬಿದ ಬಿಎಸ್ವೈ.

City Today News

(citytoday.media)

9341997936