Dr. Kiran Jeevan Appointed Principal of Historic United Mission Degree College

Bengaluru: Dr. Kiran Jeevan has been appointed as the Principal of the historic United Mission Degree College, an institution managed by the CSI Karnataka Central Diocese (KCD).

Founded as an extension of the United Mission School established in 1834 by the London Mission and the Wesleyan Mission, the college has a long-standing legacy of academic excellence and social contribution. Over the decades, it has nurtured several eminent personalities, including Sir M. Visvesvaraya, Kengal Hanumanthaiah, Mirza Ismail, poet T.T. Sharma, Puttanna Chetty, and K.C. Reddy, the former Chief Minister of Karnataka. The institution also holds historical significance, having been visited by Mahatma Gandhi in 1929.
Located in the heart of Bengaluru near the City Corporation, the college continues to play a pivotal role in shaping young minds while upholding its rich heritage and values.

The installation ceremony of Dr. Jeevan was officiated by the Bishop of the Karnataka Central Diocese.

Speaking on the occasion, Dr. Jeevan expressed gratitude and described the appointment as a moment of humility and responsibility, reflecting on the institution’s enduring legacy with the words, “This is the Lord’s doing; it is marvelous in our eyes.”

For appointments, Dr. Jeevan can be reached at +91 82964 94451.

City Today News 9341997936

ಐದು ದಶಕಗಳ ಕಲಾ ಸೇವೆಗೆ ಮತ್ತೊಂದು ಗೌರವ: ಡಿಂಗ್ರಿ ನಾಗರಾಜ್ ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ಕರ್ನಾಟಕ ಚಲನಚಿತ್ರ ಪೋಷಕರ ಕಲಾವಿದರ ಸಂಘದ ಅಧ್ಯಕ್ಷರಾಗಿ ಮೂರನೇ ಬಾರಿ ಡಿಂಗ್ರಿ ನಾಗರಾಜ್ ಅವಿರೋಧ ಆಯ್ಕೆ

ಬೆಂಗಳೂರು, ಮಾ.12: ಕರ್ನಾಟಕ ಚಲನಚಿತ್ರ ಪೋಷಕರ ಕಲಾವಿದರ ಸಂಘದ ಅಧ್ಯಕ್ಷರಾಗಿ ಹಿರಿಯ ನಟ ಹಾಗೂ ರಂಗಭೂಮಿ ಕಲಾವಿದ ಡಿಂಗ್ರಿ ನಾಗರಾಜ್ ಮೂರನೇ ಬಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಡುಗೋಡಿ ಶ್ರೀನಿವಾಸ್ ಎರಡನೇ ಬಾರಿ ಆಯ್ಕೆಯಾಗಿರುವುದು ಗಮನಾರ್ಹ.

ಈ ಸಂದರ್ಭದಲ್ಲಿ ಸಂಘದ ಗೌರವ ಅಧ್ಯಕ್ಷರಾದ ಗಂಡಸಿ ಸದಾನಂದ ಸ್ವಾಮಿ ಮಾತನಾಡಿ, ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.
79 ವರ್ಷದ ಡಿಂಗ್ರಿ ನಾಗರಾಜ್ ಅವರು ಕನ್ನಡ ಚಲನಚಿತ್ರರಂಗದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ.

800 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಹಾಗೂ 10 ಸಾವಿರಕ್ಕೂ ಅಧಿಕ ನಾಟಕಗಳಲ್ಲಿ ಅಭಿನಯಿಸಿರುವುದು ಅವರ ಸಾಧನೆಯಾಗಿದೆ.
ಐದು ದಶಕಗಳಿಗೂ ಅಧಿಕ ಕಾಲದಿಂದ ಕಲಾರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಕಲಾವಿದರಿಗೆ ನೆರವು ನೀಡಿದ ಅವರ ಸೇವೆಯನ್ನು ಸದಾನಂದ ಸ್ವಾಮಿ ವಿಶೇಷವಾಗಿ ಸ್ಮರಿಸಿದರು.
ಸಂಘದ ಮುಂದಿನ ಅಭಿವೃದ್ಧಿಗೆ ಡಿಂಗ್ರಿ ನಾಗರಾಜ್ ನೇತೃತ್ವದಲ್ಲಿ ಹೊಸ ಚೈತನ್ಯ ಮೂಡಲಿ ಎಂದು ಸದಾನಂದ ಸ್ವಾಮಿ ಆಶಿಸಿದರು.

ಇದೇ ವೇಳೆ ಚಲನಚಿತ್ರ ನಟ ಹಾಗೂ ನಿರ್ಮಾಪಕರಾದ ಗಣೇಶ್ ರಾವ್ ಕೆಸರ್ಕಾರ್ ಮತ್ತು ಹಿರಿಯ ನಟಿ ನವನೀತಂ ಅವರು ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿ, ಸಂಘದ ಬೆಳವಣಿಗೆಗೆ ಇನ್ನಷ್ಟು ಸೇವೆ ಸಲ್ಲಿಸಲಿ ಎಂದು ಹಾರೈಸಿದರು.

City Today News 9341997936

ಬೆಂಗಳೂರಿನ,ಉಮಾಮಣಿ ಕೆ.ಎಲ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ – ಅಂಗನವಾಡಿ ಕಾರ್ಯಕರ್ತೆಯರ ಹಕ್ಕು ಹೋರಾಟಕ್ಕೆ ಬಲ.

ಬೆಂಗಳೂರು, ಡಿಸೆಂಬರ್ 11, 2025:
ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸ್ವತಂತ್ರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಉಮಾಮಣಿ ಕೆ.ಎಲ್ (ಬೆಂಗಳೂರು) ಅವರು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ, ಈ ಬಾರಿಯೂ ಮುಂದುವರೆಯುತಿರುವುದು ಸಂಘದಲ್ಲಿ ಹೊಸ ಉತ್ಸಾಹಕ್ಕೆ ಕಾರಣವಾಗಿದೆ. ಹಿಂದೆ ಜಿಲ್ಲಾಧ್ಯಕ್ಷೆಯ ಜೊತೆಗೆ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿಯೂ ಸೇವೆ ಸಲ್ಲಿಸಿದ್ದ ಉಮಾಮಣಿ, ಸಂಘಟನೆಗೆ ದೀರ್ಘಕಾಲದಿಂದ ನೀಡುತ್ತಿರುವ ನಿಷ್ಠೆ, ಹೋರಾಟ ಮತ್ತು ಸಂಘಟನಾ ಸಾಮರ್ಥ್ಯಕ್ಕಾಗಿ ರಾಜ್ಯದ ವಿವಿಧ ಭಾಗಗಳಿಂದ ಬಂದ ಪ್ರತಿನಿಧಿಗಳಿಂದ ಏಕಮತದಿಂದ ಆಯ್ಕೆಗೊಂಡರು.

ಬೆಂಗಳೂರಿನ ಭಾರತೀಯ ಸ್ಕೌಟ್ ಭವನದಲ್ಲಿ ನಡೆದ ಈ ಸಭೆಯಲ್ಲಿ ರಾಜ್ಯದ ಅನೇಕ ಜಿಲ್ಲೆಗಳ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಭಾಗವಹಿಸಿದ್ದು, ಸಂಘಟನೆಗೆ ಹೊಸ ಮಾರ್ಗದರ್ಶನ ನೀಡುವ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಯಿತು.

ಸಭೆಯಲ್ಲಿ ಬಿ. ಪ್ರೇಮಾ (ಶಿವಮೊಗ್ಗ) ಅವರನ್ನು ಹೊಸ ರಾಜ್ಯ ಅಧ್ಯಕ್ಷೆಯಾಗಿ ಆಯ್ಕೆ ಮಾಡಲಾಯಿತು. ಜೊತೆಗೆ –

ನಿರ್ಮಲಾ ಹರಿಹರ ಉಪಾಧ್ಯಕ್ಷೆ,

ವಿಶಾಲಾಕ್ಷಿ (ಮಂಗಳೂರು) ಖಜಾಂಚಿ,

ಪ್ರೇಮಾ (ಚನ್ನಪಟ್ಟಣ) ಸಹ ಕಾರ್ಯದರ್ಶಿ


ಎಂಬ ಹುದ್ದೆಗಳಿಗೆ ನೂತನ ಪದಾಧಿಕಾರಿಗಳು ಆಯ್ಕೆಯಾದರು.

ಮತ್ತೊಮ್ಮೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿ ಮುಂದುವರೆಯುತಿರುವ ಉಮಾಮಣಿ ಕೆ.ಎಲ್ ಅವರು ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆ ಪರಿಹಾರ, ವೇತನ ಭದ್ರತೆ, ಸೇವಾ ನಿಯಮಾವಳಿ ಮತ್ತು ಕಲ್ಯಾಣ ಕ್ರಮಗಳ ಕುರಿತು ಸರ್ಕಾರದೊಂದಿಗೆ ರಚನಾತ್ಮಕ ಮಾತುಕತೆಗಳನ್ನು ವೇಗಗೊಳಿಸಲು ಬದ್ಧರಾಗಿರುವುದಾಗಿ ಸಭೆಯಲ್ಲಿ ತಿಳಿಸಿದರು. “ಅಂಗನವಾಡಿ ಕಾರ್ಯಕರ್ತೆಯರ ಧ್ವನಿಯನ್ನು ಇನ್ನಷ್ಟು ಬಲವಾಗಿ ಸರ್ಕಾರದ ಮುಂದಿಡುವುದು ನಮ್ಮ ಮೊದಲ ಆದ್ಯತೆ,” ಎಂದು ಅವರು ಸ್ಪಷ್ಟಪಡಿಸಿದರು.

ಸಭೆಯಲ್ಲಿ ತೆಗೆದುಕೊಳ್ಳಲಾದ ನಿರ್ಣಯದ ಪ್ರಕಾರ, ರಾಜ್ಯದ ಎಲ್ಲಾ ಜಿಲ್ಲಾಧ್ಯಕ್ಷರು ಮತ್ತು ತಾಲೂಕು ಅಧ್ಯಕ್ಷರು ರಾಜ್ಯ ಸಮಿತಿಯ ವಿಸ್ತೃತ ತಂಡದ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದು, ಸಂಘಟನೆ ಬಲವರ್ಧನೆಗೆ ಸಮಗ್ರವಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಸಂಘದ ಹಿರಿಯರು ಮಾತನಾಡಿ, ಉಮಾಮಣಿ ಕೆ.ಎಲ್ ಅವರ ನೇತೃತ್ವದಲ್ಲಿ ಸಂಘಟನೆ ರಾಜ್ಯಮಟ್ಟದಲ್ಲಿ ಇನ್ನಷ್ಟು ಸಂಘಟಿತವಾಗಿ, ಹೋರಾಟಪರವಾಗಿ ಮತ್ತು ಪರಿಣಾಮಕಾರಿಯಾಗಿ ಮುಂದುವರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಕ್ಕಳ ಪೋಷಣಾ ಸೇವೆಗಳು, ಮಹಿಳಾ ಸಬಲೀಕರಣ ಮತ್ತು ಸಮುದಾಯಾಭಿವೃದ್ಧಿಯಲ್ಲಿ ಅಂಗನವಾಡಿ ವ್ಯವಸ್ಥೆಯ ಪಾತ್ರ ಬಲಪಡಿಸಲು ಇದು ಮಹತ್ವದ ಹೆಜ್ಜೆ ಎಂದು ಅವರು ಅಭಿಪ್ರಾಯಪಟ್ಟರು.

City Today News 9341997936

ಶಿವಮೊಗ್ಗದ ಬಿ.ಪ್ರೇಮಾ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಆಯ್ಕೆ: ನೂತನ ಪದಾಧಿಕಾರಿಗಳ ಆಯ್ಕೆ ಸಭೆ ಬೆಂಗಳೂರಿನಲ್ಲಿ ಯಶಸ್ವಿ

ಶಿವಮೊಗ್ಗ, ಡಿಸೆಂಬರ್ 9: ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸ್ವತಂತ್ರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಸಭೆ ಬೆಂಗಳೂರಿನ ಭಾರತೀಯ ಸ್ಕೌಟ್ ಭವನದಲ್ಲಿ ಸಂಪನ್ನವಾಗಿದೆ. ರಾಜ್ಯಾದ್ಯಂತದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಭಾಗಿಯಾದ ಈ ಮಹಾಸಭೆಯಲ್ಲಿ ಸಂಘದ ಮುಂದಿನ ಕಾರ್ಯಚಟುವಟಿಕೆಗಳಿಗೆ ಮಾರ್ಗದರ್ಶನ ನೀಡುವ ನೂತನ ಪದಾಧಿಕಾರಿಗಳ ಆಯ್ಕೆಯನ್ನು ನಡೆಸಲಾಯಿತು.

ಸಭೆಯಲ್ಲಿ ಬಿ.ಪ್ರೇಮಾ (ಶಿವಮೊಗ್ಗ) ಅವರನ್ನು ರಾಜ್ಯ ಅಧ್ಯಕ್ಷೆಯಾಗಿ ಆಯ್ಕೆ ಮಾಡಲಾಗಿದ್ದು, ನಿರ್ಮಲಾ ಹರಿಹರ ಉಪಾಧ್ಯಕ್ಷೆ, ಉಮಾಮಣಿ (ಬೆಂಗಳೂರು) ಪ್ರಧಾನ ಕಾರ್ಯದರ್ಶಿ, ವಿಶಾಲಾಕ್ಷಿ (ಮಂಗಳೂರು) ಖಜಾಂಚಿ ಮತ್ತು ಪ್ರೇಮಾ (ಚನ್ನಪಟ್ಟಣ) ಸಹ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

ಸಭೆಯ ನಿರ್ಧಾರ ಪ್ರಕಾರ, ಉಳಿದ ಎಲ್ಲಾ ಜಿಲ್ಲಾಧ್ಯಕ್ಷರು ಮತ್ತು ತಾಲೂಕು ಅಧ್ಯಕ್ಷರು ಸಹ ರಾಜ್ಯ ಸಮಿತಿಯ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸುವರು. ಸಂಘವು ಅಂಗನವಾಡಿ ಕಾರ್ಯಕರ್ತೆಯರ ಹಿತಚಿಂತನೆಯಲ್ಲಿ, ಮಹಿಳಾ ಸಬಲೀಕರಣ ಮತ್ತು ಸ್ಥಳೀಯ ಸಮುದಾಯಾಭಿವೃದ್ಧಿ ಕ್ಷೇತ್ರದಲ್ಲಿ ಮುಂದಿನ ವರ್ಷಗಳಲ್ಲೂ ಪರಿಣಾಮಕಾರಿ ಯೋಜನೆಗಳನ್ನು ನಡೆಸಲು ನಿರ್ಧರಿಸಿದೆ.

ಅಂಗನವಾಡಿ ಕಾರ್ಯಕರ್ತೆಯರ ಸಂಘದ ಈ ನೂತನ ನೇಮಕಾತಿ ರಾಜ್ಯದ ಗ್ರಾಮೀಣ ಮತ್ತು ನಗರ ಭಾಗಗಳಲ್ಲಿ ಅಂಗನವಾಡಿ ಸೇವೆಗಳ ಗುಣಮಟ್ಟವನ್ನು ಉತ್ತಮಗೊಳಿಸಲು ಹೊಸ ಹಾದಿಯನ್ನು ತೆರೆದಿರುವುದಾಗಿ ಸಂಘದ ಹಿರಿಯ ಕಾರ್ಯಕರ್ತೆಯರು ಅಭಿಪ್ರಾಯಪಟ್ಟಿದ್ದಾರೆ.

City Today News 9341997936

ಸಂಘ ಬಲವರ್ಧನೆಗೆ ನಿಷ್ಠೆ–ಜವಾಬ್ದಾರಿ ಅತ್ಯವಶ್ಯ: ಜಿ.ಆರ್. ಪ್ರದೀಪ್

ಬೆಂಗಳೂರು: ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ಬಲವರ್ಧನೆಗೆ ನಿಷ್ಠೆ, ಜವಾಬ್ದಾರಿ ಮತ್ತು ಸೇವಾ ಮನೋಭಾವದೊಂದಿಗೆ ಕಾರ್ಯ ನಿರ್ವಹಿಸಬೇಕು ಎಂದು ರಾಜ್ಯಾಧ್ಯಕ್ಷ ಜಿ.ಆರ್. ಪ್ರದೀಪ್ ಆಗ್ರಹಿಸಿದರು.

ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಸಂಘಟನೆಯಲ್ಲಿ ಯುವ ನಾಯಕತ್ವಕ್ಕೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಿ, ಸಮಾಜಮುಖಿ ಚಟುವಟಿಕೆಗಳಿಗೆ ಹೊಸ ಉತ್ಸಾಹ ತುಂಬಲಿದ್ದೇವೆ ಎಂದು ಹೇಳಿದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಜೋಶಿ ಅವರು, ಮುಂದಿನ ದಿನಗಳಲ್ಲಿ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ವಿವಿಧ ಸೇವಾ ಕಾರ್ಯಕ್ರಮಗಳ ಮೂಲಕ ಸಮಾಜದ ಒಗ್ಗಟ್ಟನ್ನು ಬಲಪಡಿಸುವ ಯೋಜನೆಗಳನ್ನು ಸಂಘ ರೂಪಿಸಿದೆ ಎಂದು ವಿವರಿಸಿದರು.

ಕಾರ್ಯಕ್ರಮದ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರ ಮಾರ್ಗದರ್ಶನದ ಮೇರೆಗೆ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷೆಯಾಗಿಯಾಗಿ ಜಿ.ಎಲ್. ಪೂರ್ಣಿಮಾ ಅವರ ನೇಮಕಾತಿ ನಡೆಯಿತು. ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆಯಾಗಾಗಿ ಎಸ್. ಜಯಶ್ರೀ ಅವರನ್ನು ಆಯ್ಕೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಗಳಾಗಿ ಶ್ರೀನಾಥ್ ಟಿ.ಆರ್., ಆರ್.ಎನ್. ವೇಣುಗೋಪಾಲ್ ಮತ್ತು ಎಂ. ಅಮರನಾಥ್, ಖಜಾಂಚಿಯಾಗಿ ನಾರಾಯಣ ಎಸ್.ಎಸ್., ಕಾರ್ಯದರ್ಶಿಯಾಗಿ ವಿಜಯ್ ಕುಮಾರ್ ಎ. ನೇಮಕಗೊಂಡರು. ನಿರ್ದೇಶಕರಾಗಿ ವೈ.ಎಸ್. ರಾಮಪ್ರಸಾದ್ ಅಧಿಕಾರ ಸ್ವೀಕರಿಸಿದರು.

ಮಹಿಳಾ ಘಟಕದಲ್ಲಿ ಉಪಾಧ್ಯಕ್ಷೆಯಾಗಾಗಿ ರಾಧಿಕಾ, ಪ್ರಧಾನ ಕಾರ್ಯದರ್ಶಿಗಳಾಗಿ ಭಾರತಿ ಆರ್. ಶಂಕರ್ ಮತ್ತು ಸುಮಾ ಎಚ್.ಎಲ್., ಕಾರ್ಯದರ್ಶಿಯಾಗಿ ಮೀರಾ, ಉಪಾಧ್ಯಕ್ಷೆಯಾಗಿ ನಾಗರಾಜ್ ಮತ್ತು ನಿರ್ದೇಶಕಿ ಸೌಮ್ಯ ಬಿ.ಎಸ್. ಅವರನ್ನು ಅಧಿಕೃತವಾಗಿ ಘೋಷಿಸಲಾಯಿತು.

City Today News 9341997936