
ಬೆಂಗಳೂರು– ರಾಜ್ಯದಲ್ಲಿ ಕಡಿಮೆ ಸಂಖ್ಯೆಯಲ್ಲಿರುವ ಮಡಿವಾಳ ಜನಾಂಗ ಅತ್ಯಂತ ನಿಕೃಷ್ಠ ಸ್ಥಿತಿಯಲ್ಲಿದ್ದು, ಶೈಕ್ಷಣಿಕ, ಸಮಾಜಿಕವಾಗಿ ಹಿಂದುಳಿದಿದ್ದು ಸರ್ಕಾರ ಪರಿಶಿಷ್ಠ ಜಾತಿ ಹಾಗೂ ಪಂಗಡಕ್ಕೆ ಸೇರ್ಪಡೆಗೊಳಿಸಬೇಕೆಂದು ಕರ್ನಾಟಕ ಲೋಕ ಸೇವಾ ಆಯೋಗದ ಸದಸ್ಯ ರವಿ ಡಾ.ರವಿ ಕುಮಾರ್ ಹೇಳಿದ್ದಾರೆ.
ಬೆಂಗಳೂರಿನ ರಾಜಾಜಿನಗರದ ರಾಜ್‌ಕುಮಾರ್ ಕಲಾಕ್ಷೇತ್ರದಲ್ಲಿಂದು ರಾಜ್ಯ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಮಡಿವಾಳ ಮಾಚಿದೇವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೋಂಡು ಮಾತನಾಡಿದ ಅವರು, ಈ ಹಿಂದಿನ ರಾಜ್ಯ ಸರ್ಕಾರಗಳು ನಮ್ಮ ಸ್ಥಿತಿಗತಿ ಕುರಿತು ಅಧ್ಯಯನ ನಡೆಸಿದ ಅನ್ನಪೂರ್ಣಮ್ಮ ವರದಿ ಬಿಡುಗಡೆಗೊಳ್ಳುವವರೆಗೂ ನಮ್ಮ ಜನಾಂಗದ ಬಗ್ಗೆ ಗಂಭೀರವಾಗಿ ಪರಿಗಣಿಸಿರಲಿಲ್ಲ, ಈ ವರದಿಯನ್ನು ಜಾರಿ ತರಲು ಕಳೆದ ಸಿದ್ದರಾಮಯ್ಯ ಸರ್ಕಾರದಲ್ಲಿ ಜಾರಿತರಲು ಪ್ರಯತ್ನ ನಡೆಸಲಾಗಿತ್ತು.ಆದರೆ ಕೆಲ ಕಾರಣಾಂತರಗಳಿಂದ ಇದು ಅನುಷ್ಠಾನಗೊಳ್ಳಲು ಸಾಧ್ಯವಾಗಲಿಲ್ಲ, ನಾವೆಲ್ಲರೂ ಸಂಘಟಿತರಾಗದೇ ನಮ್ಮ ಬೇಡಿಕೆಗಳು ಈಡೇರಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಮಡಿವಾಳ ಜನಾಂಗ ಯಾರೋ ಉಟ್ಟು ಬಿಟ್ಟ, ಹೊಲಸು ಸೂತಕ ಬಟ್ಟೆಗಳನ್ನು ಯಾವುದೇ ಮೈಲಿಗೆಗೆ ಅಂಜದೇ ತಮ್ಮ ತೆಲೆಯ ಮೇಲೆ ಹೊತ್ತು ತಂದು ಕೆರೆ ಅಥವಾ ಬಾವಿಗಳಲ್ಲಿ ಸ್ವಚ್ಚಗೊಳಿಸುವ ಕಾಯಕವನ್ನು ಗ್ರಾಮೀಣ ಪ್ರದೇಶಗಲ್ಲಿ ಇಂದಿಗೂ ಕೂಡ ಮುಂದುವರೆಸಿಕೊಂಡು ಬರುತ್ತಿದ್ದಾರೆ. ಇಂತಹ ಜನಾಂಗಕ್ಕೆ ಸರ್ಕಾರದಿಂದ ಮೀಸಲಾತಿ, ಕೇಲವು ಸವಲತ್ತುಗಳ ಅಗತ್ಯವಿದೆ ಈ ಹಿನ್ನಲೆಯಲ್ಲಿ ಅನ್ನಪೂರ್ಣ ವರದಿಯ ಅಂಶದಂತೆ ಪರಿಶಿಷ್ಠ ಜಾತಿ, ಪಂಗಡ ಪ್ರವರ್ಗಕ್ಕೆ ಸೇರ್ಪಡೆಗೊಳಿಸಬೇಕೆಂದು ಆಗ್ರಹಿಸಿದರು.

ಕಾರ್ಯಕ್ರಮ ಉದ್ಘಾಟಿಸಿ, ಮಾಚಿದೇವ ಪ್ರಶಸ್ತಿ ಸ್ವೀಕರಿಸಿದ ಸಾಲುಮರದ ತಿಮ್ಮಕ್ಕ ಮಾತನಾಡಿ, ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು ಈ ಬಾರಿ ಕೃಷಿಕರಿಗೆ ವರುಣ ದೇವ ಕರುಣಿಸಿದ್ದಾನೆ,ಎಲ್ಲರಿಗೂ ಸುಖ ಶಾಂತಿ ಸಿಗಲಿ ಎಂದು ಶುಭ ಹಾರೈಸಿದರು.
ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಆರ್. ವೆಂಕಟರಮಣ ಮಾತನಾಡಿ, ನಮ್ಮ ಮಡಿವಾಳ ಸಂಘದ ವತಿಯಿಂದ ನೀಡಲಾಗುವ ಸವಲತ್ತು, ಸೌಲಭ್ಯಗಳನ್ನು ಜನಾಂಗವರು ಸದ್ಬಳಕೆ ಮಾಡಕೊಳ್ಳಬೇಕೆಂದು ಮನವಿ ಮಾಡಿದರು.
ದೆವನಹಳ್ಳಿಯ ಸಮಾಜ ಸೇವಕ ಅಪ್ಪಣ್ಣ, ಕೆ.ಆರ್. ಪುರಂ ಡೋಬಿಘಾಟ್ ಅಧ್ಯಕ್ಷ ಕೃಷ್ಣಪ್ಪ, ರಂಗಭೂಮಿ ಕಲಾವಿದ ಕೆ.ಪಿ, ಅಶ್ವಥ್ ನಾರಯಣ್, ಜಾನಪದ ಕಂಸಾಳೆ ಕಲಾವಿದ ಎಂ.ಲಿಂಗಯ್ಯ ಅವರಿಗೆ ಈ ವರ್ಷದ ಮಡಿವಾಳ ಮಾಚಿದೇವ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಎಸ್,ಎಸ್,ಎಲ್.ಸಿ. ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಬಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜನಾಂಗ ಹಾಗೂ ಕಾಂಗ್ರೆಸ್ ಮುಖಂಡ ಡಾ.ಎಂ.ರಾಜು ತಲ್ಲೂರು, ರಾಜ್ಯ ಮಡಿವಾಳ ಸಂಘದ ಕಾರ್ಯಾಧ್ಯಕ್ಷ ಬಿ.ರಂಗಸ್ವಾಮಯ್ಯ, ಬಿಜೆಪಿ ಸಹ ವಕ್ತಾರ ರಘ ಕೌಟಿಲ್ಯ, ಸಂಘದ ಪ್ರಧಾನ ಕಾರ್ಯದರ್ಶಿ ವಿ.ದೀಪಕ್ ಮತ್ತಿತರರು ಹಾಜರಿದ್ದರು.
City Today News
(citytoday.media)
9341997936






You must be logged in to post a comment.