ಆಟೋಚಾಲಕರಾದ ಶ್ರೀ ಗಂಗಾಧರ್ ರವರ ಪ್ರಮಾಣಿಕತೆಯನ್ನು ಶ್ಲಾಘಿಸಿ , ಮಾನ್ಯ ಪೊಲೀಸ್ ಆಯುಕ್ತರು , ಬೆಂಗಳೂರು ನಗರ ರವರು ಪ್ರಶಂಸನಾ ಪತ್ರವನ್ನು ನೀಡಿರುತ್ತಾರೆ

ಶ್ರೀ ಗಂಗಾಧರ್‌ ಆಟೋಚಾಲಕರು ಆಟೋ ರಿಕ್ಷಾ ನಂ . KA – 02 – AF – 7930 ರಲ್ಲಿ ದಿನಾಂಕ : 03 / 08 / 2019 ರಂದು ಸಂಜೆ 07 – 00 ಗಂಟೆಯ ಸಮಯದಲ್ಲಿ ಪ್ರಯಾಣಿಕರೊಬ್ಬರು – ಕೋರಮಂಗಲದಿಂದ ಗಾಂಧಿನಗರಕ್ಕೆ ಪ್ರಯಾಣಿಸಿ , ಇಳಿದು ಹೋಗುವ ಸಮಯದಲ್ಲಿ ತಮ್ಮ ಬ್ಯಾಗನ್ನು ಆಟೋ ರಿಕ್ಷಾದಲ್ಲಿ ಮರೆತು ಬಿಟ್ಟು ಹೋಗಿದ್ದು , ನಂತರ ಆಟೋಚಾಲಕರು ಕೆಲಸಮುಗಿಸಿ , ಮನೆಗೆ ಹೋಗಿದ್ದು , ಬೆಳಿಗ್ಗೆ ಎದ್ದು , ಆಟೋದ ಹಿಂಬದಿ ಸೀಟಿನ ಹಿಂದೆ ಬ್ಯಾಗ್‌ಗಳನ್ನು ಇಡುವ ಜಾಗದಲ್ಲಿ ನೋಡಲಾಗಿ ಒಂದು ಕಪ್ಪುಬ್ಯಾಗ್ ಇರುವುದು ಕಂಡುಬಂದಿರುತ್ತದೆ ,

ಸದರಿ ಬ್ಯಾಗ್‌ನ್ನು ಆಟೋಚಾಲಕರು ದಿನಾಂಕ : 04 – 08 – 2019 ರಂದು ಬೆಳಿಗ್ಗೆ 11 – 00 ಗಂಟೆಯ ಸಮಯದಲ್ಲಿ ಪೊಲೀಸ್ ಆಯುಕ್ತರ ಕಛೇರಿಯ ಉಪ ಪೊಲೀಸ್ ಆಯುಕ್ತರು ( ಪ್ರಭಾರ ) ಪೊಲೀಸ್ ನಿಯಂತ್ರಣ ಕೋಣೆ , ಬೆಂಗಳೂರುನಗರ ಇಲ್ಲಿಗೆ ತಂದು ಒಪ್ಪಿಸಿರುತ್ತಾರೆ , ನಂತರ ಪೊಲೀಸ್ ನಿಯಂತ್ರಣ ಕೋಣೆಯಿಂದ ಬ್ಯಾಗ್‌ನ ವಾರಸುದಾರರ ಪತ್ತೆಗಾಗಿ ಎಲ್ಲಾ ಠಾಣೆಗಳಿಗೂ ವೈರ್‌ಲೆಸ್ ಮೆಸೇಜ್ ನೀಡಿರುತ್ತಾರೆ . ಬ್ಯಾಗ್‌ನ ವಾರಸುದಾರದ ಶ್ರೀ ಪಟೇಲ್ ಪಂಕಜ್‌ಬಾಯ್ ಜೀವನ್‌ಬಾಯ್‌ರವರು ಬ್ಯಾಗ್‌ನ್ನು ಕಳೆದುಕೊಂಡ ವಿಚಾರವಾಗಿ ದಿನಾಂಕ : 04 / 08 / 2019 ರಂದು ಬೆಳಿಗ್ಗೆ 08 – 45ರಲ್ಲಿ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಇ – ಲಾಸ್‌ನ ಮೂಲಕ ದೂರನ್ನು ದಾಖಲಿಸಿದ್ದು , ಸದರಿ ವಾರಸುದಾರರಿಗೆ ಠಾಣೆಯಿಂದ ಕರೆಮಾಡಿ ತಮ್ಮ ಬ್ಯಾಗ್ ಸಿಕ್ಕಿರುವುದಾಗಿ ಹಾಗೂ ಸದರಿ ಬ್ಯಾಗ್‌ನ್ನು ಪೊಲೀಸ್ ನಿಯಂತ್ರಣ ಕೋಣೆಯಲ್ಲಿ ಪಡೆದುಕೊಂಡು ದೂರನ್ನು ಹಿಂಪಡೆಯಲು ತಿಳಿಸಿ ಕಳುಹಿಸಿಕೊಟ್ಟಿರುತ್ತಾರೆ .

ವಾರಸುದಾರರು ಪೊಲೀಸ್ ನಿಯಂತ್ರಣ ಕೋಣೆಗೆ ಬಂದ ನಂತರ ಆಟೋಚಾಲಕರ ಸಮ್ಮುಖದಲ್ಲಿಯೇ ಬ್ಯಾಗ್‌ನಲ್ಲಿದ್ದ ಪಾನ್ ಕಾರ್ಡ್ , ಪಾಸ್‌ಪೋರ್ಟ್ , ಆಧಾರ್‌ ಕಾರ್ಡ್ , ಮ್ಯಾರೇಜ್ ಸರ್ಟಿಫಿಕೇಟ್ , ವಿದ್ಯಾಭ್ಯಾಸದ ಪ್ರಮಾಣಪತ್ರ , ಓಟರ್ ಕಾರ್ಡ್ ಹಾಗೂ ಇತರೆ ದಾಖಲಾತಿಗಳನ್ನು ಒಳಗೊಂಡ ಕಪ್ಪು ಬಣ್ಣದ ಬ್ಯಾಗ್‌ನ್ನು ಮಾನ್ಯ ಪೊಲೀಸ್ ಆಯುಕ್ತರು ವಾರಸುದಾರಿಗೆ ಒಪ್ಪಿಸಿರುತ್ತಾರೆ , ಆಟೋಚಾಲಕರಾದ ಶ್ರೀ ಗಂಗಾಧರ್ ರವರ ಪ್ರಮಾಣಿಕತೆಯನ್ನು ಶ್ಲಾಘಿಸಿ , ಮಾನ್ಯ ಪೊಲೀಸ್ ಆಯುಕ್ತರು , ಬೆಂಗಳೂರು ನಗರ ರವರು ಪ್ರಶಂಸನಾ ಪತ್ರವನ್ನು ನೀಡಿರುತ್ತಾರೆ .

City Today News

(citytoday.media)

9341997936

ಸಾಮಾಜಿಕ ಜಾಲತಾಣದ ಮೂಲಕ ಹೆಣ್ಣುಮಕ್ಕಳಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದವನ ಬಂಧನ

ದಿನಾಂಕ – 28 . 06 . 2019 ಸಾಮಾಜಿಕ ಜಾಲತಾಣದ ಮೂಲಕ ಹೆಣ್ಣುಮಕ್ಕಳಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದವನ ಬಂಧನ . ಬೆಂಗಳೂರು ನಗರದ ಸಿಸಿಟಿ ಘಟಕದ ಸೈಬರ್ ಕ್ರೈಂ ಪೊಲೀಸರು ವಿನಾಂಕ – 28 . 08 . 2018 ರಂದು ಬೆಳಗ್ಗೆ ತಮಿಳುನಾಡು ರಾಜ್ಯದ ಹೊಸೂರಿನ ಬಸ್ ನಿಲ್ದಾಣದ ಬಳಿ ನಡೆಸಿದ ಕಾರ್ಯಾಚರಣೆಯಲ್ಲಿ ನಕಲಿಯಾ ಫೇಸ್‌ಬುಕ್ ಖಾತೆಗಳನ್ನು ತೆರೆದು ಹೆಂಗಸಲಗೆ ಫಂಡ್ ಅಕ್ವೆಸ್ಟ್ ಕಳುಹಿಸಿದ ನಂತರ ಅಕ್ಸೆಸ್ಟ್ ಸ್ವೀಕರಿಸಿದ ಮಹಿಳೆಯರೊಂದಿಗೆ ಚಾಟಿಂಗ್ ಮಾಡುತ್ತಾ ಅಲ್ಲೀಲ ಸಂಭಾಷಣೆ ಹಾಗೂ ಅಶ್ಲೀಲ ಭಾವಚಿತ್ರಗಳನ್ನು ಕಳುಹಿಸುತ್ತಿದ್ದುದಲ್ಲದೇ ವಿಡಿಯೋಕಾಲ್ , ಆಡಿಯೋ ಕಾಲ್‌ಗಳನ್ನು ನಿರಂತರವಾಣ ಮಾಡುತ್ತಾ ಅನುಚಿತ ಅಡಿಯಲ್ಲಿ ವರ್ತಿಸುತ್ತಿದ್ದ ಆರೋಪದ ಮೇರೆಗೆ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ಪ್ರಾಥಮಿಕ ವಿಚಾರಣೆಗೆ ಒಳಪಡಿಸಿದಾಗ ಕೃತ್ಯದಲ್ಲಿ ಭಾಗಿಯಾಗಿರುವುದು ಕಂಡುಬಂದ ಮೇರೆಗೆ ತಮಿಳುನಾಡು ಮೂಲದ ಕೆಳಕಂಡ ಆಸಾಮಿಯನ್ನು ದಸ್ತಲಲಿ ಮಾಡಿ , ಆತನ ವಶದಿಂದ 03 ಮೊಬೈಲ್ ಫೋನ್‌ಗಳು , 04 ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ . ಸೈಯ್ಯದ್ ನಯಾಟ್ ನಯಾಜ್ ( @ ರಮೇಶ್‌ಕುಮಾರ್ ( @ ರಾಮ್‌ಕುಮಾರ್ 4 ರಾಜೇಶ್‌ಕುಮಾರ್ @ ಸೈಯ್ಯದ್ ಅಸ್ಲಮ್ ಇನ್ ಚೋಟು ಸಾಬ್ , 36 ವರ್ಷ , ಬಾಡಿಗೆ ಮನೆ ನಂ – 15 , 6ನೇ ಕ್ರಾಸ್ , ಇಂದಿರಾಗಾಂಧಿ ನಗರ , ಅವಲಪಲ್ಲಿ ರಸ್ತೆ , ಹೊಸೂರು , ಕೃಷ್ಣಗಿರಿ ಜಿಲ್ಲೆ , ತಮಿಳುನಾಡು . ಆರೋಫಿಯ ಪ್ರಾಥಮಿಕ ವಿಚಾರಣೆಯಿಂದ ಹೊರಬಂದ ಅಂಶಗಳು . 1 ) ಆರೋಪಿ ಸೈಯ್ಯದ್ ನಯಾಜ್ , ನಯಾಜ್ , ರಮೇಶ್‌ಕುಮಾರ್ , ರಾಮ್‌ಕುಮಾರ್ , ರಾಜೇಶ್‌ಕುಮಾರ್ , ಸೈಯ್ಯದ್‌ಅಸ್ತಮ್ , ವಿಜಯ್ ಶಾಂತಿ ಎಂಬ ಹೆಸರುಗಳನ್ನು ಬಳಸಿ ಅನ್ಯ ವ್ಯಕ್ತಿಗಳ ಭಾವಚಿತ್ರಗಳನ್ನು ಬಳಸಿಕೊಂಡು ನಕಅಯಾಣ ಫೇಸ್‌ಬುಕ್ ಖಾತೆಗಳನ್ನು ತೆರೆದು ಕೃತ್ಯಕ್ಕೆ ಬಳಕೆ ಮಾಡಿರುವುದಾಗಿ ನುಡಿದಿದ್ದು ಈ ಸಂಬಂಧ ತನಿಖೆ ಕೈಗೊಳ್ಳಲಾಗಿದೆ .

2 ) ಆರೋಪಿ ಮೊಬೈಲ್ ಅಪೇಲ ಕೆಲಸ ಕೂಡ ಮಾಡುತ್ತಿದ್ದು ಅಪೇಗೆ ಕಲಿಸಿದ ಮೊಬೈಲ್‌ನಲ್ಲಿ ಸಂಗ್ರಹಿತ ಸಂಪರ್ಕ ಸಂಖ್ಯೆಗಳನ್ನು ತೆಗೆದುಕೊಂಡು ತದನಂತರ ಟೂಕಾಲರ್‌ನಲ್ಲಿ ಪಲಶೀಲಿಸಿ ಹೆಣ್ಣುಮಕ್ಕಳ ಹೆಸರು ಕಂಡುಬಂದ ನಂತರ ತನ್ನ ಕೃತ್ಯವನ್ನು ಪ್ರಾರಂಭಿಸುತ್ತಿದ್ದುದಾಣ ನುಡಿದಿದ್ದು ಈ ಸಂಬಂಧ ತನಿಖೆ ಕೈಗೊಳ್ಳಲಾಗಿದೆ .

3 ) ಅಲೋಪಿಯು ಹೆಣ್ಣುಮಕ್ಕಳ ಹೆಸರು ಮತ್ತು ಭಾವವನ್ನು ನೈಜ ಫೇಸ್‌ಬುಕ್ ಖಾತೆಗಳಿಂದ , ವಾಟ್ಸ್ ಆಫ್ ಪ್ರೋಫೈಲ್ ಭಾವಚಿತ್ರವನ್ನು ಡೌನ್‌ಲೋಡ್ ಮಾಡಿಕೊಂಡು ತದನಂತರ ನಕಲಿ ಖಾತೆ ಸೃಷ್ಟಿಸಲು ಬಳಸುತ್ತಿದ್ದುದಾಗಿ ತಿಳಿದುಬಂದಿರುತ್ತದೆ .

4 ) ದಸ್ತಗಿರಿಯಾದ ಆರೋಪಿಯಿಂದ ಕಿರುಕುಳ ಅನುಭವಿಸಿದ ನೊಂದವರು ದೂರು ದಾಖಅಸಲು ಇಚ್ಚಿಸಿದಲ್ಲಿ ಕೂಡಲೇ ಬೆಂಗಳೂರು ನಗರ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಸಂಪರ್ಕಿಸಲುಕೋರಿದೆ . ಸಾರ್ವಜನಿಕರು ಹಾಗೂ ಸಾಮಾಜಿಕ ಜಾಲತಾಣ ಬಳಕೆದಾರರು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳನ್ನು ಸಮರ್ಪಕ ರಕ್ಷಣಾತ್ಮಕ ಅಂಶಗಳನ್ನು ಅಳವಡಿಸಿಕೊಂಡು ಅವ್ಯವೃತ್ತಿ ದುರುಪಯೋಗಪಡಿಸಿಕೊಳ್ಳದಂತೆ ಎಚ್ಚರವಹಿಸಲು ಕೋರಿದೆ . ಈ ಪತೃಕಾರ್ಯವನ್ನು ಜಂಟಿ ಪೊಲೀಸ್ ಆಯುಕ್ತರು , ಅಪರಾಧ ರವರಾದ , ಡಾ | | ಬಿ . ಆರ್ . ರವಿಕಾಂತೇಗೌಡ , ಐ . ಪಿ . ಎಸ್ , ಹಾಗೂ ಉಪ ಪೊಲೀಸ್ ಆಯುಕ್ತರು ಅಪರಾಧ

ರವರಾದ , ಶ್ರೀ ಲೀಶ್ ಎಸ್ . , ಐ . ಪಿ . ಎಸ್ , ರವರ ಮಾರ್ಗದರ್ಶನದಲ್ಲಿ , ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪಿ . ಐ ಶ್ರೀ . ಎನ್ . ಯಶವಂತಕುಮಾರ್ , ಪಿ . ಎಸ್ . ಐ ಶ್ರೀ ಸಂತೋಷ್‌ರಾಮ್ , ಎಎಸ್ , ಐ ಶ್ರೀ ಕುಮಾರಸ್ವಾಮಿ ಹಾಗೂ ಸಿಬ್ಬಂದಿಗಳಾದ ಶ್ರೀ ಸತೀಶ್ ಆರ್ ರವರುಗಳು ಕೈಗೊಂಡಿರುತ್ತಾರೆ .

City Today News

(citytoday.media)

9341997936

ಸಹಕಾರ ನಗರ ಕ್ಲಬ್ ( 6 ) ಮೇಲೆ ದಾಳಿ , 18 ಬಂಧನ – ನಗದು ರೂ . 4 , 94 , 000 / – ರೂ ಹಾಗೂ ಇತರೆ ಪರಿಕರಣಗಳ ವಶ

ಸಹಕಾರ ನಗರ ಕ್ಲಬ್ ( 6 ) ಮೇಲೆ ದಾಳಿ , 18 ಬಂಧನ – ನಗದು ರೂ . 4 , 94 , 000 / – ರೂ ಹಾಗೂ ಇತರೆ ಪರಿಕರಣಗಳ ವಶ ಬೆಂಗಳೂರು ನಗರದ , ಸಹಕಾರನಗರ ಮೇನ್ ನಲ್ಲಿರುವ ಸಹಕಾರ ನಗರ ಕ್ಲಬ್‌ನ 2ನೇ ಮಹಡಿಯಲ್ಲಿ ಸದಸ್ಯರಲ್ಲದೆ ಕೆಲವು ಜನ ಆಸಾಮಿಗಳು ಹಣವನ್ನು ಪಣವಾಗಿ ಕಟ್ಟಿಕೊಂಡು ಇಸೀಟ್ ಜೂಜಾಟವನ್ನು ಆಡುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿದ ಕೇಂದ್ರ ಅಪರಾಧ ವಿಭಾಗ ( ಸಿಸಿಬಿ ) ವಿಶೇಷ ವಿಚಾರಣಾ ದಳದ ಅಧಿಕಾರಿಗಳು , ದಿನಾಂಕ . 13 – 02 – 2019 ರಂದು ಮೇಲ್ಕಂಡ ಸ್ಥಳದ ಮೇಲೆ ಸಿಬಂದಿಗಳೊಂದಿಗೆ ಕಾರ್ಯಾಚರಣೆ ನಡೆಸಿ , ಅಲ್ಲಿ ಜೂಜಾಟದಲ್ಲಿ ತೊಡಗಿದ್ದ ,

1 . ಚಂದ್ರು ಬಿನ್ ಗಂಗಯ್ಯ , 65 ವರ್ಷ 2 . ಶಾಂತಕುಮಾರ್ ಬಿನ್ ವೆಂಕಟೇಶಪ್ಪ , 46 ವರ್ಷ 3 , ರಾಜರೆಡ್ಡಿ ಬಿನ್ ಶಿವರೆಡ್ಡಿ , 54 ವರ್ಷ 4 . ಭಾಸ್ಕರ್ ಬಿನ್ ಮುನಿನಂಜಪ್ಪರೆಡ್ಡಿ , 59 ವರ್ಷ 5 , ರಮೇಶ್ ಜಿನ್ ಆಂಜನಪ್ಪ , 45 ವರ್ಷ 6 , ಮಂಜುನಾಥ ಬಿನ್ ಮುನಿಯಪ್ಪ , 40 ವರ್ಷ 7 . ಶ್ರೀಕಾಂತ ಬಿನ್ ನಾರಾಯಣಪ್ಪ , 38 ವರ್ಷ 8 . ವೇಣುಗೋಪಾಲ್ ಬಿನ್ ರಂಗಯ್ಯ , 40 ವರ್ಷ 9 , ರವಿಕುಮಾರ್ ಬಿನ್ ರಾಮಯ್ಯ , 45 ವರ್ಷ 10 . ವಿಫ್ರೆಶ್ ಬಿನ್ ಮೂರ್ತಿ , 35 ವರ್ಷ 11 , ನಾರಾಯಣ ಸ್ವಾಮಿ ಬಿನ್ ರಾಮಪ , 46 ವರ್ಷ 12 . ಚಂದ್ರಶೇಖರ ರೆಡ್ಡಿ ಬಿನ್ ಎಸ್ . ಎನ್ . ವೆಂಕಟರಾಯಪ್ಪ , 42 ವರ್ಷ 13 , ಸಂದೀಪ ಬಿನ್ ಸುದೀರ್ 40 ವರ್ಷ 14 . ಜೆ . ಎಂ . ಚಂದ್ರಪ್ಪ ಬಿನ್ ಲೇಟ್ ಮುನಿಸ್ವಾಮಪ್ಪ , 66 ವರ್ಷ 15 . ಹಂಪನ್ನ ಬಿನ್ ನಂದಪ್ಪ , 53 ವರ್ಷ 16 . ಡಿ . ರಮೇಶ್ ಬಿನ್ ಮುನಿಸ್ವಾಮಿಯಲ್ಲಪ್ಪ , 59 ವರ್ಷ 17 . ಶಂಕರ್ ಬಿನ್ ಗೋವಿಂದಸ್ವಾಮಿ , 52 ವರ್ಷ 18 , ಶಿವಪ್ರಸಾದ್ ಬಿನ್ ದಾಮೋಧರರಾವ್ , ವರ್ಷ ಇವರುಗಳನ್ನು ವಶಕ್ಕೆ ಪಡೆದು , ಅಲ್ಲಿ ಜೂಜಾಟಕ್ಕೆ ತೊಡಗಿಸಿದ್ದ , ಹಣ ರೂ . 4 , 94 , 000 / ಹಾಗೂ 7 ಕಟ್ಟು ಇಸ್ಪೀಟ್ ಕಾರ್ಡ್‌ಗಳು ಇವುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ . ಈ ಆಸಾಮಿಗಳ ವಿರುದ್ಧ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ . ಈ ಕಾರ್ಯಚರಣೆಯನ್ನು ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತರು , ಅಪರಾಧ ರವರಾದ ಶ್ರೀ ಅಶೋಕ್ ಕುಮಾರ್ ಐ . ಪಿ . ಎಸ್ , ಮತ್ತು ಉಪ ಪೊಲೀಸ್ ಆಯುಕ್ತರು , ಅಪರಾಧ ರವರಾದ ಶ್ರೀ ಎಸ್ . ಗಿರೀಶ್ ಐ . ಪಿ . ಎಸ್ ರವರ ಮಾರ್ಗದರ್ಶನದಲ್ಲಿ , ಸಿಸಿಬಿ , ವಿಶೇಷ ವಿಚಾರಣಾ ದಳದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಟಿ . ಪಿ ಸುಬ್ರಮಣ್ಯ ರವರ ನೇತೃತ್ವದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್‌ ಶ್ರೀ ಸಿ , ನಿರಂಜನ ಕುಮಾರ ಮತ್ತು ಸಿಬ್ಬಂದಿಗಳಾದ ಶ್ರೀ ರವಿಕುಮಾರ್ , ಶ್ರೀ ಸುನಿಲ್ ಕುಮಾರ್ , ಶ್ರೀ ಚಂದ್ರಶೇಖರ್ ಹಾಗೂ ಶ್ರೀ ನಾಗರಾಜು ರವರುಗಳು ಕೈಗೊಂಡಿರುತ್ತಾರೆ .

City Today News

(citytoday.media)

9341997936

ಮಾದಕ ವಸ್ತು ಮಾರಾಟಗಾರರ ಬಂಧನ ಎಲ್ . ಎಸ್ . 18 ಕ್ಲಿಪ್‌ಗಳು ಮತ್ತು 10 ಕೆ . ಜಿ ಗಾಂಜಾ ವಶ

ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆ ಸರಹದ್ದು ಎಸ್ . ಜಿ . ಪಾಳ್ಯ , ಮುಖ್ಯ ರಸ್ತೆ , ಶ್ರೀನಿವಾಸ ಥೇಟರ್ ಹತ್ತಿರ , ನಿಷೇದಿತ ಮಾದಕ ವಸ್ತು ಎಲ್ . ಎಸ್ . ಮತ್ತು ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಭಾದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ಈ ಕೆಳಕಂಡ ಆರೋಪಿಗಳನ್ನು ಬಂಧಿಸಲಾಗಿದೆ .

ಆಗ್ನೆಯ ವಿಭಾಗ ( ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆ ) ಮಾದಕ ವಸ್ತು ಮಾರಾಟಗಾರರ ಬಂಧನ ಎಲ್ . ಎಸ್ . 18 ಕ್ಲಿಪ್‌ಗಳು ಮತ್ತು 10 ಕೆ . ಜಿ ಗಾಂಜಾ ವಶ

ಎ ) ಜುನೇದ್ ಅಹಮ್ಮದ್ ಬಿನ್ ಮುಸ್ತಫ , ಎಸ್ . ಎಂ 24 ವರ್ಷ , ವಾಸ : ನಂ . 24 , ಸತ್ವಯಾ ಮಸೀದಿ , ನ್ಯೂಂಗುರಪ್ಪನಪಾಳ್ಯ , ಬೆಂಗಳೂರು .

ಎ2 ) ನೀಲಕಂಠನ್ ಅನ್ ಲವ್ ನಾರಾಯಣನ್ 9 ವರ್ಷ , ವಾಸ : ಪುದಿಯಾದತ್ ಹೌಸ್ , ಆರ್ಥಾಬ್ ವಿಲೇಜ್ , ಗುರುವಾಯು ಮುನ್ಸಿಪಾಲ್ಟಿ , ತ್ರಿಶೂರ್ ಜಿಲ್ಲೆ . ಕೇರಳಾ ರಾಜ್ಯ . ಜುನೇದ್ ಅಹಮ್ಮದ್ ಎಂಬ ಆರೋಪಿಯು ಈ ಹಿಂದೆ ಮೈಕೋ ಲೇಔಟ್ ಪೊಲೀಸ್ ಠಾಣೆ ಮೊ . ನಂ . 330 / 2018 ಕಲಂ . 20 ( 0 ) ( ಸಿ ) ಎನ್ . ಡಿ . ಪಿ . ಎಸ್ ಆಕ್ಸ್ ಪ್ರಕರಣದಲ್ಲಿ ಬಂಧನಕ್ಕೊಳಪಟ್ಟು ಡಿಸೆಂಬರ್ – 2018ರಲ್ಲಿ ಜಾಮೀನು ಪಡೆದು ಅಡುಗಡೆಯಾಗಿ ಬಂದು ಮೋಜಿನ ಜೀವನಕ್ಕಾಗಿ ಮತ್ತೆ ಮಾದಕ ವಸ್ತುಗಳಾದ ಎಲ್ . ಎಸ್ . ಮತ್ತು ಗಾಂಜಾವನ್ನು ಆಂದ್ರಪ್ರದೇಶದ ಕರ್ನೂಲ್‌ನಿಂದ ತೆಗೆದುಕೊಂಡು ಬಂದು ಕಾಲೇಜು ವಿಧ್ಯಾರ್ಥಿಗಳಿಗೆ ಮತ್ತು ಪಿ . ಜಿ ಹಾಸ್ಟೆಲ್‌ಗಳ ವಾಸಿಗಳಿಗೆ ಮಾರಾಟದಲ್ಲಿ ತೊಡಗಿಕೊಂಡಿದ್ದನು . ಈ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿ ಆರೋಪಿಗಳನ್ನು ದಸ್ತಗಿರಿಮಾಡಿ ಅವರುಗಳಿಂದ 6 ಲಕ್ಷ 50 ಸಾವಿರ ಬೆಲೆ ಬಾಳುವ ಮಾದಕ ವಸ್ತು ಎಲ್ . ಎಸ್ . ಡಿ 18 ಇಪ್‌ಗಳನ್ನು ಮತ್ತು 10 ಕೆ . ಜಿ ಗಾಂಜಾವನ್ನು ಅಮಾನತ್ತು ಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ , ಈ ಕಾರ್ಯವನ್ನು ಆಗ್ನೆಯ ವಿಭಾಗದ ಉಪ ಪೊಲೀಸ್ ಕಮಿಷನರ್ ರವರಾದ ಡಾ : ಎಂ . , ಬೋರಅಂಗಯ್ಯ , ಐಪಿಎಸ್ ಮತ್ತು ಮೈಕೋ ಲೇಔಟ್ ಉಪ ವಿಭಾಗದ ಸಹಾಯಕ ಪೋಲೀಸ್ ಕಮಿಷನರ್ ಶ್ರೀಎಂ . ಎನ್ . ಕರಿಬಸವನಗೌಡ ರವರ ಮಾರ್ಗದರ್ಶನದಲ್ಲಿ ಸುದ್ದಗುಂಟೆಪಾಳ್ಯ ಪೋಲಿಸ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿಯವರ ತಂಡ ಕಾರ್ಯಚರಣೆ ನಡೆಸಿ ಯಶಸ್ವಿಯಾಗಿರುತ್ತಾರೆ . ಈ ಯಶಸ್ವಿ ಕಾರ್ಯಚರಣೆಯನ್ನು ಮಾನ್ಯ ಪೊಲೀಸ್ ಕಮಿಷನರ್ ರವರು ಪ್ರಶಂಸಿರುತ್ತಾರೆ .

City Today News

(citytoday.media)

9341997936

ಉತ್ತರ ವಿಭಾಗ 3 ಜನ ಸರಗಳ್ಳತನ ಆರೋಪಿಗಳ ಬಂಧನ , 9 . 5 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ದ್ವಿಚಕ್ರವಾಹನ ವಶ .

ಬೆಂಗಳೂರು ನಗರ , ದಿನಾಂಕ :

11 . 02 . 2019 ,

ಉತ್ತರ ವಿಭಾಗ 3 ಜನ ಸರಗಳ್ಳತನ ಆರೋಪಿಗಳ ಬಂಧನ , 9 . 5 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ದ್ವಿಚಕ್ರವಾಹನ ವಶ . ಪಿರಾದುದಾರರಾದ ಶ್ರೀಮತಿ ಶಂಕರಿ . ಎಂ ರವರು ದಿನಾಂಕ 22 – 01 – 2019 ರಂದು ಬೆಳಗಿನ ಜಾವ 6 – 05 ಗಂಟೆಯಲ್ಲಿ ಹೆಬ್ಬಾಳ ಪೊಲೀಸ್ ಠಾಣಾ ಸರಹದ್ದಿನ ಸುಲ್ತಾನ್‌ಪಾಳ್ಯ ಮುಖ್ಯರಸ್ತೆಯಲ್ಲಿ ಆಟೋಗಾಗಿ ಕಾಯುತ್ತಿದ್ದಾಗ ಎರಡು ದ್ವಿಚಕ್ರ ವಾಹನಗಳಲ್ಲಿ ಬಂದ ಅಪರಿಚಿತ ಆಸಾಮಿಗಳು ಪಿರಾದುದಾರರಿಗೆ ಚಾಕು ತೋರಿಸಿ ಅವರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದು , ಈ ಸಂಬಂಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಸರಗಳ್ಳತನ ಪ್ರಕರಣ ದಾಖಲಾಗಿರುತ್ತದೆ . ಈ ಪ್ರಕರಣದ ಆರೋಪಿಗಳಾದ 1 ) ಸೈಫ್ ಖಾನ್ ( @ ಸಮ್ಮು @ ಬಶೀರ್ , 28 ವರ್ಷ . ನಾಗಾವರ ಬೆಂಗಳೂರು 2 ) ಸಬ್ಬರ್‌ ಅಹಮ್ಮದ್ @ ಮಹಮ್ಮದ್ ಆಲಿ @ ನೀಗೋ , 29 ವರ್ಷ ಹೆಗ್ಗಡೆ ನಗರ , ಬೆಂಗಳೂರು . 3 ) ನಯಾಬ್ ರಸೂಲ್ @ ನಯಾಬ್ . 29 ವರ್ಷ , ಗೋವಿಂದಪುರ , ಬೆಂಗಳೂರು ರವರುಗಳನ್ನು ದಸ್ತಗಿರಿ ಮಾಡಿ ಆರೋಪಿಗಳ ನೀಡಿದ ಮಾಹಿತಿ ಮೇರೆಗೆ ಸುಮಾರು 9 . 5 ಲಕ್ಷ ರೂ . ಬೆಲೆ ಬಾಳುವ 175 ಗ್ರಾಂ ಚಿನ್ನಾಭರಣ ಮತ್ತು 4 ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಹೆಬ್ಬಾಳ ಪೊಲೀಸರು ಯಶಸ್ವಿಯಾಗಿರುತ್ತಾರೆ . ಆರೋಪಿಗಳ ಬಂಧನದಿಂದ ಹೆಬ್ಬಾಳ ಪೊಲೀಸ್ ಠಾಣೆಯ 2 – ಸರಗಳ್ಳತನ , ಸುಲಿಗೆ , 2 – ಹಗಲು & ರಾತ್ರಿ ಕನ್ನಾ ಕಳವು , 2 – ದ್ವಿಚಕ್ರವಾಹನ ಕಳವು , ನಂದಿನಿಲೇಔಟ್ ಪೊಲೀಸ್ ಠಾಣೆಯ – I ಸುಲಿಗೆ , ಜಾಲಹಳ್ಳಿ ಪೊಲೀಸ್ ಠಾಣೆಯ ಸರಗಳ್ಳತನ , ಹೆಚ್ . ಎ . ಎಲ್ . ಪೊಲೀಸ್ ಠಾಣೆಯ – ಸುಲಿಗೆ ಪ್ರಕರಣ ಪತ್ತೆಯಾಗಿರುತ್ತವೆ . ಈ ಪ್ರಕರಣದಲ್ಲಿ ಯಶವಂತಪುರ ಉಪ ವಿಭಾಗದ ಎಸಿಪಿ , ಶ್ರೀ ಎಂ . ಶಿವಶಂಕರ್ ರವರ ಮಾರ್ಗದರ್ಶನದಲ್ಲಿ ಹೆಬ್ಬಾಳ ಪೊಲೀಸ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಆರ್ . ಎಸ್ . ಟಿ . ಬಾನ್ , ಪಿಎಸ್‌ಐ ಶ್ರೀ ವಿ . ಎಂ . ರಾಜೇಶ್ , ಹೆಚ್ . ಸಿ . 5714 ಶ್ರೀ ರವಿಶಂಕರ್ , ಹೆಚ್ . ಸಿ . 6609 ಶ್ರೀ ಆನಂದ್ ಹೆಚ್ . ಸಿ . 7376 ಶ್ರೀ ಮಹಮ್ಮದ್ ಪಯಾಜ್ ಪಾಷ , ಹೆಚ್ . ಸಿ . 7379 ಶ್ರೀ ಖಾಲೀದ್ ಅಹಮ್ಮದ್ , ಹೆಚ್ . ಸಿ . 7313 ಶ್ರೀ ಕರೇತಿಮ್ಮಯ್ಯ ಪಿ , ಹೆಚ್ . ಸಿ . 9072 ಶ್ರೀ ಅನಂತರಾಜು , ಪಿ . ಸಿ . 11014 ಶ್ರೀ ನಂದೀಶ್ , ಪಿ . ಸಿ . 11892 ಶ್ರೀ ರಾಜಶೇಖರಯ್ಯ , ಪಿ . ಸಿ . 7123 ಶ್ರೀ ರವಿಕುಮಾರ್ , ಪಿ . ಸಿ . 7299 ಶ್ರೀ ಮಹೇಶ್ ಪಿ . ಸಿ , 11564 ಶ್ರೀ ಚಂದ್ರಶೇಖರ್ ಮ . ಪಿ . ಸಿ . 12274 ಕು | ವನಿತಾ ನಾಯಕ್ ರವರುಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ .

City Today News

(citytoday.media)

9341997936