ಉತ್ಥಾನ ದ್ವಾದಶಿ ಪ್ರಯುಕ್ತ “ಶ್ರೀತುಳಸಿ ವಿವಾಹ ಮಹೋತ್ಸವ”

ಉತ್ಥಾನ ದ್ವಾದಶಿ ಪ್ರಯುಕ್ತ “ಶ್ರೀತುಳಸಿ ವಿವಾಹ ಮಹೋತ್ಸವ” ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ  ವಿಶೇಷ ಪೂಜೆ,

ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್. ಕೆ. ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಉತ್ಥಾನ  ದ್ವಾದಶಿ ಪ್ರಯುಕ್ತ  ದೀಪೋತ್ಸವದೊಂದಿಗೆ  ವಿಶೇಷವಾಗಿ ಶ್ರೀ ತುಳಸಿ ವಿವಾಹ ಮಹೋತ್ಸವವು ಶ್ರೀಮಠದ ಅರ್ಚಕರಿಂದ ನೆರವೇರಿತು ಎಂದು ಶ್ರೀ ನಂದಕಿಶೋರ ಆಚಾರ್ಯರು ತಿಳಿಸಿದರು. ಈ ಸಂದರ್ಭದಲ್ಲಿ  ಸೇವಾಕರ್ತರು, ಭಕ್ತರು, ಶ್ರೀಮಠದ ಸಿಬ್ಬಂದಿಗಳು ಭಾಗವಹಿಸಿ ಪ್ರಸಾದ ಸ್ವೀಕರಿಸಿ ಶ್ರೀಹರಿವಾಯುಗುರುಗಳ ಅನುಗ್ರಹಕ್ಕೆ ಪಾತ್ರರಾದರು.

City Today News 9341997936

ಜಯನಗರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ವಿಜಯದಾಸರ ಆರಾಧನಾ ಮಹೋತ್ಸವ ವಿಶೇಷ ಪೂಜೆ

ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಶ್ರೀ ವಿಜಯದಾಸರ ಆರಾಧನಾ ಮಹೋತ್ಸವದ ವಿಶೇಷ ಉತ್ಸವದ ಅಂಗವಾಗಿ ಮಹಾರಥೋತ್ಸವ  ಶ್ರೀ ಹರಿ ಭಜನೆಯೊಂದಿಗೆ ವಿಶೇಷವಾಗಿ ನೆರವೇರಿತು ಎಂದು ಶ್ರೀ ನಂದಕಿಶೋರ ಆಚಾರ್ಯರು ತಿಳಿಸಿದರು ಈ ಸಂದರ್ಭದಲ್ಲಿ ಭಕ್ತರು ಅನ್ನ ಸಂತರ್ಪಣೆಯ ಪ್ರಸಾದ ಸ್ವೀಕರಿಸಿ ಶ್ರೀ ಹರಿ ವಾಯು ಗುರುಗಳ ದಾಸರ ಅನುಗ್ರಹಕ್ಕೆ ಪಾತ್ರರಾದರು.

City Today News 9341997936

“ಬ್ರಿಟನ್ ಮಾಜಿ ಪ್ರಧಾನ ಮಂತ್ರಿ ಜಯನಗರದ ಗುರು ರಾಯರ ದರ್ಶನ ಪಡೆದುಕೊಂಡ ಋಷಿ ಸುನಕ್ ದಂಪತಿ”

ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಶ್ರೀಮತಿ ಸುಧಾ ನಾರಾಯಣ ಮೂರ್ತಿ ದಂಪತಿಗಳು ಕುಟುಂಬ ಸಮೇತ ಹಾಗೂ ಅವರ ಅಳಿಯಂದರಾದ ಬ್ರಿಟನ್ ದೇಶದ  ಮಾಜಿ  ಪ್ರಧಾನಮಂತ್ರಿ ಋಷಿ ಸುನಕ್ ದಂಪತಿರವರು  ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿಗೆ ಆಗಮಿಸಿ ಗುರು ರಾಯರ ದರ್ಶನ ಪಡೆದು   ಕಾರ್ತಿಕ ಮಾಸದ ಪ್ರಯುಕ್ತ ರಾಯರ ಸನ್ನಿಧಿಯಲ್ಲಿ ದೀಪಗಳನ್ನು ಬೆಳಗಿಸಿ  ಶ್ರೀ ರಾಘವೇಂದ್ರ ಸ್ವಾಮಿಗಳಲ್ಲಿ  ಪ್ರಾರ್ಥನೆ ಸಲ್ಲಿಸಿದರು  ಈ ಸಂದರ್ಭದಲ್ಲಿ  ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್,  ಕೆ ವಾದಿಂದ್ರಾಚಾರ್ಯರು  ರಾಯರ ಶೇಷ ವಸ್ತ್ರ ಫಲಮಂತ್ರಾಕ್ಷತೆ ಕೊಟ್ಟು ಆಶೀರ್ವದಿಸಿದರು ಈ ಸಂದರ್ಭದಲ್ಲಿ ಶ್ರೀಮಠದ ಅರ್ಚಕ ವರ್ಗದವರು “ವೇದ ಘೋಷ ಮಂತ್ರ” ಪೂರ್ಣ ಕುಂಭ ಸ್ವಾಗತದೊಂದಿಗೆ ಸನ್ನಿಧಿಗೆ ಬರಮಾಡಿಕೊಂಡರು.

City Today News 9341997936

ಜಯನಗರದ ರಾಯರ ಮಠದಲ್ಲಿ ವಿಶೇಷ ಸಹಸ್ರ “ಕಾರ್ತೀಕ-ದೀಪೋತ್ಸವ”  ಪ್ರತಿನಿತ್ಯ ಸಂಜೆ 6:30ಕ್ಕೆ

ಬೆಂಗಳೂರು : ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್.ಕೆ. ವಾದೀಂದ್ರಾಚಾರ್ಯರ  ನೇತೃತ್ವದಲ್ಲಿ ದಿನಾಂಕ 2-11-2024 ರಿಂದ 1-12-2024ರ ವರೆಗೆ ವಿಶೇಷ  ಕಾರ್ತೀಕ ಮಾಸದ ಅಂಗವಾಗಿ  ಪ್ರತಿನಿತ್ಯ  ಒಂದು ತಿಂಗಳು ಪರ್ಯಂತ  ಸಹಸ್ರ ದೀಪೋತ್ಸವದ ಕಾರ್ಯಕ್ರಮ ಹಮ್ಮಿಕೊಂಡಿದೆ ಸಹಸ್ರಾರು ಭಕ್ತರಿಂದ ಸಾಮೂಹಿಕ ಲಕ್ಷ ದೀಪೋತ್ಸವವು 15-11-24 ಮತ್ತು 1-12-24 ರಂದು ವಿಶೇಷವಾದ  ದೀಪೋತ್ಸವವು ನೆರವೇರುವುದು, 20 -11-2024 ರಂದು ಧಾತ್ರೀ ಹೋಮ ಹವನ,  ಅನ್ನದಾನ ಸೇವೆ, ಹೂವಿನ ಅಲಂಕಾರ ಸೇವೆ, ಪ್ರತಿನಿತ್ಯ ಕಾರ್ತೀಕ ದೀಪೋತ್ಸವ ಸೇವೆ, ನೂತನ ವಸ್ತ್ರ ಸೇವೆ, ಪಲ್ಲಕ್ಕಿ  ಉತ್ಸವ, ಉದಯಾಸ್ತಮಾನ ಸೇವೆ, ಸಂಪೂರ್ಣ ರತ್ನ ಕವಚ ಸೇವೆ ಮತ್ತು ಸಂಪೂರ್ಣ ಲಕ್ಷ ದೀಪೋತ್ಸವದ ಸೇವೆಗಳಿಗೆ ಅವಕಾಶವಿದ್ದು ಭಕ್ತಾದಿಗಳು ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಸಹಸ್ರಾರು ದೀಪಗಳನ್ನು ಬೆಳಗಿಸುವ ಮೂಲಕ  ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಹರಿ-ವಾಯು- ಗುರುಗಳ ಅನುಗ್ರಹಕ್ಕೆ  ಪಾತ್ರರಾಗಬೇಕೆಂದು ಶ್ರೀ ನಂದಕಿಶೋರ್ ಆಚಾರ್ ತಿಳಿಸಿದ್ದಾರೆ.

ಈ ಸೇವೆಗಳನ್ನು ಶ್ರೀ ಮಠದ ವಾಟ್ಸಾಪ್ ಈ ನಂಬರ್ 9449133929 ಆನ್ಲೈನ್ ಮುಖಾಂತರ  ಸೇವೆಗಳನ್ನು ಸಲ್ಲಿಸಬಹುದು  ಹೆಚ್ಚಿನ ಮಾಹಿತಿಗಾಗಿ-ದೂರವಾಣಿ : 080-22443962, ಮೊಬೈಲ್ : 9945429129 -8660349906 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.

City Today News 9341997936

GITAM University Bengaluru Celebrates Karnataka Rajyotsava 2024, Honoring Karnataka’s Rich Cultural Legacy

Bengaluru, 2 November 2024: GITAM (Deemed to be University) Bengaluru celebrated Karnataka Rajyotsava 2024 with Namma Kannada Utsava, a vibrant showcase of Karnataka’s rich history, heritage, traditions and culture. Traditional performances like Dollu Kunitha, Veeragase, and Gombe Kunitha highlighted GITAM’s close connection with Karnataka’s people and values, creating a campus that feels local and familiar to students and families alike.

Prof. K.N.S. Acharya, Pro Vice-Chancellor, shared, “Karnataka Rajyotsava at GITAM is our way of celebrating the unity and spirit of Karnataka. This day honours the rich history, language, and traditions that define our state. By celebrating Rajyotsava, we connect our students with Karnataka’s legacy, instilling pride and a sense of belonging that resonates across our campus.”

GITAM Bengaluru is a hub of cultural activity throughout the year, with students coming together to celebrate festivals and days of national and regional importance. While the campus offers a variety of global cuisines, on Karnataka Rajyotsava, students were treated to traditional Karnataka dishes, connecting them more deeply to the local culture.

The event was further elevated by the presence of Padma Shri Manjamma Jogathi and IPS Officer Ravi D Chananna, whose insights and stories resonated with students and families. Manjamma’s journey as a cultural icon embodies the strength and resilience of Karnataka, adding a memorable dimension to the celebration.

City Today News 9341997936