07.07.2024ರ ಭಾನುವಾರದಂದು ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯಲಿರುವ “ಮರೆಯಾದ ಛಲವಾದಿ ಚೇತನಗಳ ಚಿರಸ್ಮರಣ ಕಾರ್ಯಕ್ರಮ”

ಇತ್ತೀಚಿನ ಕಾಲಘಟ್ಟದಲ್ಲಿ ನಮ್ಮ ಸಮುದಾಯದ ವಿವಿಧ ಕ್ಷೇತ್ರದ ಮುತ್ಸದಿಗಳು ನಮ್ಮನ್ನು ಅಗಲಿರುವುದು ತಮಗೆ ತಿಳಿದಿರುವ ವಿಷಯವಾಗಿದೆ. ದಿವಂಗತರ ಕುಟುಂಬಸ್ಥರನ್ನು ಆಹ್ವಾನಿಸಿ, ದಿನಾಂಕ: 07.07.2024ರ ಭಾನುವಾರದಂದು ಬೆಂಗಳೂರಿನ ವಸಂತನಗರದಲ್ಲಿರುವ “ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯಲಿರುವ”ಮರೆಯಾದ ಛಲವಾದಿ ಚೇತನಗಳ ಚಿರಸ್ಮರಣ ಕಾರ್ಯಕ್ರಮ”ದಲ್ಲಿ ಶ್ರೀ ಶ್ರೀ ಶ್ರೀ ಜ್ಞಾನಪ್ರಕಾಶ ಸ್ವಾಮಿಜೀ ರವರ
ದಿವ್ಯ ಸಾನಿಧ್ಯದಲ್ಲಿ ರಾಜ್ಯದ ಅನೇಶ ಛಲವಾದಿ ಸಮುದಾಯದ ಗಣ್ಯರು ಮತ್ತು ಬಂಧುಗಳು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದು, ಈ ಕಾರ್ಯಕ್ರಮದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಮೊಮ್ಮಗರಾದ ಆನಂದರಾಜ್ ಅಂಬೇಡ್ಕರ್ ರವರ ಅಮೃತ ಹಸ್ತದಿಂದ ದಿವಂಗತರ ಕುಟುಂಬಸ್ಥರನ್ನು ಆಹ್ವಾನಿಸಿ ಗೌರವಿಸುವ ಈ ಕಾರ್ಯಕ್ರಮಕ್ಕೆ ಬಾಬಾ ಸಾಹೇಬರ ಅಭಿಮಾನಿಗಳು, ಸಮುದಾಯ ಚಿಂತಕರು, ಸಮುದಾಯ ಪ್ರೇಮಿಗಳು, ಬಾಬಾ ಸಾಹೇಬರ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ ಕಾರ್ಯಕ್ರಮವು ಯಶಸ್ವಿಯಾಗಲು ತಾವುಗಳು ಕಾರಣೀಭೂತರಾಗಬೇಕೆಂದು ಎಸ್. ಜಯಕಾಂತ್ ಚಾಲುಕ್ಯ ರಾಜ್ಯಾಧ್ಯಕ್ಷರು ಸಂವಿಧಾನ ಬಳಗ ಕೆಪಿಸಿಸಿ ಉಪಾಧ್ಯಕ್ಷರು (ಎಸ್.ಸಿ ನಿಭಾಗ) “ಸಂವಿಧಾನ ಬಳಗ”ವು ಛಲವಾದಿ ಸಮುದಾಯದ ಪರವಾಗಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ವಿನಂತಿಸಿದರು. ಗೋಷ್ಠಿ ತಳ್ಳಿ ಸಮುದಾಯದ ಪ್ರಮುಖರುಗಳು ಉಪಸ್ಥಿತರಿದ್ದರು.

City Today News 9341997936

“ಶ್ರೀ 1008 ಶ್ರೀ ವಿಜಯೀoದ್ರ ತೀರ್ಥ ಶ್ರೀ ಪಾದರ “ಆರಾಧನಾ” ಮಹೋತ್ಸವ ಶ್ರೀ ಗುರು ರಾಯರ ಸನ್ನಿಧಿಯಲ್ಲಿ”

“ಶ್ರೀ 1008 ಶ್ರೀ ವಿಜಯೀoದ್ರ ತೀರ್ಥ ಶ್ರೀ ಪಾದರ “ಆರಾಧನಾ” ಮಹೋತ್ಸವ ಶ್ರೀ ಗುರು ರಾಯರ ಸನ್ನಿಧಿಯಲ್ಲಿ”
ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮ ಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಅನುಗ್ರಹ ಆದೇಶದಂತೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾಧೀಂದ್ರಾಚಾರ್ಯರ ನೇತೃತ್ವದಲ್ಲಿ ಶ್ರೀ1008 ಶ್ರೀ  ವಿಜಯೀoದ್ರತೀರ್ಥ ಶ್ರೀಪಾದರ  “ಆರಾಧನಾ”ಮಹೋತ್ಸವವು ವಿಶೇಷ ಪಲ್ಲಕ್ಕಿ ಉತ್ಸವ, ಗಜವಾಹನೋತ್ಸವ, ರಥೋತ್ಸವದೊಂದಿಗೆ ನೆರವೇರಿತು ಎಂದು ಶ್ರೀ ನಂದಕಿಶೋರ್  ಆಚಾರ್ಯರು ತಿಳಿಸಿದರು, ಈ ಸಂದರ್ಭದಲ್ಲಿ  ಭಕ್ತಾದಿಗಳು ಪೂಜಾ ಸೇವೆಯಲ್ಲಿ ಭಾಗವಹಿಸಿ ತೀರ್ಥ ಪ್ರಸಾದವನ್ನು ಸ್ವೀಕರಿಸಿ ಶ್ರೀ ಹರಿವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು.

City Today News 9341997936

” ಶ್ರೀ ಸುಬುಧೇಂದ್ರ ಶ್ರೀಗಳಿಂದ  ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠ ಮಂತ್ರಾಲಯ ಶಾಖೆಯ ಉದ್ಘಾಟನೆ”

ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಗುರುಸಾರ್ವಭೌಮ  ಸಂಸ್ಕೃತ ವಿದ್ಯಾಪೀಠ ಮಂತ್ರಾಲಯದ ಶಾಖೆಯನ್ನು ಪರಮ  ಪೂಜ್ಯ ಶ್ರೀ1008 ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ತಮ್ಮ ಅಮೃತ ಹಸ್ತದಿಂದ “ಉದ್ಘಾಟಿಸಿ” ಶ್ರೀ ಮಠದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 5:30 ರಿಂದ 6:30 ವರೆಗೆ ತ್ರಿಮತಸ್ಥ ವಿಪ್ರರಿಗೆ ಉಚಿತವಾಗಿ ಹೇಳಿಕೊಡಲು ಆದೇಶಿಸಿ ಅನುಗ್ರಹಿಸಿದರು ಈ ಸಂದರ್ಭದಲ್ಲಿ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದಿಂದ್ರ ಆಚಾರ್ಯರು ಹಾಗೂ ಕಡಪ ಹನುಮೇಶ ಆಚಾರ್ ಮತ್ತು ಶ್ರೀ ನಂದಕಿಶೋರ ಆಚಾರ್ ಇದ್ದರು.

ಹೆಚ್ಚಿನ ಮಾಹಿತಿಗಾಗಿ-

ರಾಜಾ ಕೆ ವಾದೀ೦ದ್ರ ಆಚಾರ್ಯ
ವಲಯ ವ್ಯವಸ್ಥಾಪಕರು
ಚರವಾಣಿ_08022443962

ಕಡಪ ಹನುಮೇಶಾಚಾರ್ಯ
ಅಧ್ಯಾಪಕರು
ಚರವಾಣಿ 9845614365

City Today News 9341997936

ಶ್ರೀ ಅಂಜನೇಯ ಯುವಕ ಮಂಡಳಿ ಮತ್ತು ಶ್ರೀ ಲಕ್ಷ್ಮೀ ಶೋಭಾನೆ ಮಹಿಳಾ ಮಂಡಳಿ ರಜತ ಮಹೋತ್ಸವ ಸಮಾರಂಭ ಯುವವಿಶ್ವೇಶ ಸಮಾಗಮ 27-06-2024 ರಿಂದ 30-06-2024

ಶ್ರೀ ಆಂಜನೇಯ ಯುವಕ ಮಂಡಳಿ ಎಂಬ ಸಂಸ್ಥೆಯನ್ನು ಪರಮಪೂಜ್ಯರಾದ ಶ್ರೀ 1008 ಶ್ರೀ ವಿಶ್ವೇಶ ತೀರ್ಥ

ಶ್ರೀಪಾದಂಗಳವರು ಸ್ಥಾಪಿಸಿದರು. ಶ್ರೀ ಅಂಜನೇಯ ಯುವಕ ಮಂಡಳಿಯು ಶ್ರೀ ರಾಘವೇಂದ್ರ ಸೇವಾ ಸಮಿತಿಯ ಮಾರ್ಗದರ್ಶನದಲ್ಲಿ ಧಾರ್ಮಿಕ ಸಾಮಾಜಿಕ ಹಾಗು ಶಿಕ್ಷಣ ಕ್ಷೇತ್ರದಲ್ಲಿ ತನ್ನದೆಯಾದ ಕೊಡುಗೆಯನ್ನು ನೀಡುತ್ತಿದೆ.

ಅಂಜನೇಯ ಯುವಕ ಮಂಡಳಿಯು ಅಸ್ತಿತ್ವಕ್ಕೆ ಬಂದು 2024ಕ್ಕೆ 25 ವರ್ಷಗಳು ತುಂಬಿತು. ಈ ಇಪ್ಪತ್ತೈದು ವರ್ಷಗಳಲ್ಲಿ ಮಾಡಿದ ಸೇವೆಯನ್ನು ಶ್ರೀ 1008 ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಸ್ಮರಣೆಯನ್ನು ಮಾಡುತ್ತಾ, ಶ್ರೀಹರಿ ವಾಯು ಗುರುಗಳಿಗೆ ಸಮರ್ಪಣೆ ಮಾಡುವ ರಜತಮಹೋತ್ಸವದ ಸಂಭ್ರಮಾಚರಣೆಯನ್ನು ಶ್ರೀ ರಾಘವೇಂದ್ರ ಸೇವಾ ಸಮಿತಿಯ ಸಹಕಾರದೊಂದಿಗೆ ಶ್ರೀ ಕ್ರೋಧಿನಾಮ ಸಂವತ್ಸರ ಜೇಷ್ಠ ಮಾಸ ಕೃಷ್ಣಪಕ್ಷ ಷಷ್ಠಿ ಗುರುವಾರದಿಂದ ನವಮಿ ಭಾನುವಾರ, 2024 ಜೂನ್ 26 ರಿಂದ 30 ವರೆಗೆ ವಿಜೃಂಭಣೆಯಿಂದ ಆಚರಿಸಲು ಶ್ರೀಹರಿಯ ವಾಯು ಗುರುಗಳ ಪ್ರೇರಣಾನುಸಾರ, ನಿರ್ಧರಿಸಲಾಗಿದೆ. ನಾಲ್ಕು ದಿನಗಳ ವೈಭವದ ಉತ್ಸವದಲ್ಲಿ ತಾವು ಕುಟುಂಬ ಪರಿವಾರ ಸಮೇತರಾಗಿ ಭಾಗವಹಿಸಿ ಶ್ರೀ ಅಂಜನೇಯನ ಉಪಾಸ್ಯಮೂರ್ತಿ ಪಟ್ಟಾಭಿರಾಮದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ವಿನಂತಿಸುತ್ತಿದ್ದೇವೆ.

27 ಜೂನ್ 2024 ಗುರುವಾರ

ಬೆಳಿಗ್ಗೆ 9.00 ಕ್ಕೆ

* ಸತ್ಯನಾರಾಯಣ ಪೂಜೆ

* ಧನ್ವಂತರಿ ಹೋಮ ಹಾಗೂ ಭಜನೆ – ಶ್ರೀ ಲಕ್ಷ್ಮೀ ಶೋಭಾನೆ ಮಹಿಳಾ ಮಂಡಳಿಯಿಂದ

ಸಂಜೆ 5.00 ರಿಂದ

* ಜಗದ್ಗುರು ಶ್ರೀಮನ್ ಮಧ್ವಾಚಾರ್ಯ ಮೂಲಮಹಾಸಂಸ್ಥಾನ ಸೋದೆ ಶ್ರೀವಾದಿರಾಜ ಮಠಾಧೀಶರಾದ ಪರಮಪೂಜ್ಯ ಶ್ರೀ 1008 ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದಂಗಳವರ ಆಗಮನ, ಪೂರ್ಣಕುಂಭ ಸ್ವಾಗತ.

• ಶ್ರೀಪಾದಂಗಳವರ ಉಪಸ್ಥಿತಿಯಲ್ಲಿ ರಜತ ಪಲ್ಲಕ್ಕಿ ಪ್ರಾಕಾರೋತ್ಸವ

ಸಭಾ ಕಾರ್ಯಕ್ರಮ 6.00 ರಿಂದ

ಅಧ್ಯಕ್ಷತೆ : ಶ್ರೀ 1008 ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದಂಗಳವರು, ಸೊಂದ ಶ್ರೀವಾದಿರಾಜ ಮಠಾಧೀಶರು

ಮುಖ್ಯ ಅತಿಥಿ : ವಿದ್ವಾನ್ ಶ್ರೀ ಸತ್ಯಧ್ಯಾನ ಆಚಾರ್ ಕಟ್ಟಿ, ಪ್ರಾಂಶುಪಾಲರು, ಜಯತೀರ್ಥ ವಿದ್ಯಾಪೀಠ, ಉತ್ತರಾದಿಮಠ ಮುಖ್ಯ ಅತಿಥಿ : ಸನ್ಮಾನ್ಯ ಕು. ಶೋಭಾ ಕರಂದ್ಲಾಜೆ, ಮಾನ್ಯ ಕೇಂದ್ರ ಸಚಿವರು, ಭಾರತ ಸರ್ಕಾರ

ಮುಖ್ಯ ಅತಿಥಿ : ಶ್ರೀ ಜೆ.ಕೆ. ಸುಧಾಕರ್, ಅಧ್ಯಕ್ಷರು, ಶ್ರೀ ರಾಘವೇಂದ್ರ ಸೇವಾ ಸಮಿತಿ (ನೋಂ.)

ಮುಖ್ಯ ಅತಿಥಿ : ಶ್ರೀ ರವೀಂದ್ರ ಹೆಚ್. ದೇಸಾಯಿ, ಕಾರ್ಯದರ್ಶಿ, ಶ್ರೀ ರಾಘವೇಂದ್ರ ಸೇವಾ ಸಮಿತಿ (ನೋಂ.)

ದೀಪ ಪ್ರಜ್ವಾಲನೆ – ರಜತ ಮಹೋತ್ಸವ ಸಮಾರಂಭದ ಉದ್ಘಾಟನೆ, ಶ್ರೀಪಾದಂಗಳವರ ಅಶೀರ್ವಚನ •

ಶ್ರೀಗಳವರಿಂದ ತೊಟ್ಟಿಲು ಪೂಜೆ, ಭೂತರಾಜರ ಪೂಜೆ, ಮಹಾಮಂಗಳಾರತಿ

28 ಜೂನ್ 2024 ಶುಕ್ರವಾರ

ಬೆಳಿಗ್ಗೆ 7.00 ಕ್ಕೆ

• ಶ್ರೀ 1008 ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದಂಗಳವರಿಂದ ಸಂಸ್ಥಾನ ಪೂಜೆ

• ಶ್ರೀ ಪಟ್ಟಾಭಿರಾಮ ದೇವರು, ಶ್ರೀ ಮುಖ್ಯ ಪ್ರಾಣದೇವರು, ಶ್ರೀ ರಾಘವೇಂದ್ರ ಸ್ವಾಮಿಗಳವರ ಬೃಂದಾವನ, ಶ್ರೀ ಧನ್ವಂತರಿ, ಶ್ರೀ ಮಹಾಗಣಪತಿ ದೇವರುಗಳಿಗೆ ವಿಶೇಷ ಬೆಣ್ಣೆ ಅಲಂಕಾರ.

ಸಭಾ ಕಾರ್ಯಕ್ರಮ ಬೆಳಿಗ್ಗೆ 10.30 ಕೆ

• ಶ್ರೀಪಾದಂಗಳವರಿಂದ ಹಿತೋಪದೇಶ ಹಾಗೂ

ಯುವಕ ಮಂಡಳಿ ಕಾರ್ಯಕರ್ತರಿಗೆ ಸನ್ಮಾನ, ಫಲ ಮಂತ್ರಾಕ್ಷತೆ ವಿತರಣೆ

ತೀರ್ಥ ಪ್ರಸಾದ

ಸಂಜೆ 5.00 ರಿಂದ

ಲೋಕ ಕಲ್ಯಾಣಾರ್ಥವಾಗಿ ಆಚರಿಸುತ್ತಿರುವ ಶ್ರೀ ಶ್ರೀನಿವಾಸ ಕಲ್ಯಾಣದ ಅಂಗವಾಗಿ ಶ್ರೀನಿವಾಸ ದೇವರ ವರಪೂಜಾ ಸಮಾರಂಭ

29 ಜೂನ್ 2024 ಶನಿವಾರ

ಬೆಳಿಗ್ಗೆ 8.00 ಕ್ಕೆ

• ಶ್ರೀ ಶ್ರೀನಿವಾಸ ದೇವರ ಕಲ್ಯಾಣ ಮಹೋತ್ಸವ • ಮಹಾಮಂಗಳಾರತಿ • ತೀರ್ಥ ಪ್ರಸಾದ

ಸಂಜೆ: 5.00

• ಸಭಾ ಕಾರ್ಯಕ್ರಮ

ಮುಖ್ಯ ಅತಿಥಿಗಳು :-

ಶ್ರೀ ತೇಜಸ್ವಿ ಸೂರ್ಯ, ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯರು

ಶ್ರೀ ಪ್ರತಾಪ ಸಿಂಹ, ಯುವ ನಾಯಕರು, ಮಾಜಿ ಲೋಕಸಭಾ ಸದಸ್ಯರು ಶ್ರೀ ಅಜಿತ್ ಹನುಮಕ್ಕನವರ್, ಮುಖ್ಯ ಸಂಹಾದಕರು – ಸುವರ್ಣ ನ್ಯೂಸ್

* ಸಾಂಸ್ಕೃತಿಕ ಕಾರ್ಯಕ್ರಮ : – “ನಮ್ಮ ಅಯೋಧ್ಯ ರಾಮ ಮಂದಿರ ಕನಸಲ್ಲ” – ನಾಟಕ ಶ್ರೀ ಆಂಜನೇಯ ಯುವಕ ಮಂಡಳಿ ಸದಸ್ಯರಿಂದ

30 ಜೂನ್ 2024 ಭಾನುವಾರ

ಬೆಳಿಗ್ಗೆ 8.00 ಕ್ಕೆ

* ಪೇಜಾವರ ಮಠಾಧೀಶರಾದ ಪರಮಪೂಜ್ಯ ಶ್ರೀ 1008 ಶ್ರೀ ವಿಶ್ವಪ್ರಸನ್ನತೀರ್ಥ

ಪೂರ್ಣಕುಂಭ ಸ್ವಾಗತ. • ಶ್ರೀಪಾದಂಗಳವರಿಗೆ ತುಲಾಭಾರ

• ಶ್ರೀಪಾದಂಗಳವರಿಂದ ಸಂಸ್ಥಾನ ಪೂಜೆ

* ಸಭಾ ಕಾರ್ಯಕ್ರಮ ಮಧ್ಯಾಹ್ನ 12.00 ಕ್ಕೆ

ಅಧ್ಯಕ್ಷತೆ :- ಪರಮಪೂಜ್ಯ ಶ್ರೀ 1008 ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು, ಮುಖ್ಯ ಅತಿಥಿಗಳು :- ಶ್ರೀ ಭೈರತಿ ಸುರೇಶ್, ಸಚಿವರು, ನಗರಾಭಿವೃದ್ಧಿ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ

• ಶ್ರೀಪಾದಂಗಳವರಿಂದ ಹಿತೋಪದೇಶ ಹಾಗೂ ಯುವಕ ಮಂಡಳಿ ಕಾರ್ಯಕರ್ತರಿಗೆ ಸನ್ಮಾನ,” ಫಲ ಮಂತ್ರಾಕ್ಷತ ವಿತರಣೆ • ತೀರ್ಥ ಪ್ರಸಾದ

ಸಂಜೆ 6.00 ಕ್ಕೆ

ಸಾಂಸ್ಕಂತಿಕ ಕಾರ್ಯಕ್ರಮ : ಪ್ರಬಾತ್ ಕಲಾವಿದರಿಂದ ನೃತ್ಯ ರೂಪಕ “ಕರುನಾಡ ವೈಭವ”

ಆಂಜನೇಯ ಯುವಕ ಮಂಡಳಿ ಹಾಗೂ ಶ್ರೀ ಲಕ್ಷ್ಮೀ ಶೋಭಾನೆ ಮಹಿಳಾ ಮಂಡಳಿ

ರಜತ ಮಹೋತ್ಸವಕ್ಕೆ ಶುಭ ಕೋರುವವರು : ಶ್ರೀ ರಾಘವೇಂದ್ರ ಸೇವಾ ಸಮಿತಿ (ನೋಂ)

ಮೇಲಿನ ಎಲ್ಲಾ ಮಹಿಗಳನ್ನು ಶ್ರೀ ಆಂಜನೇಯ ಯುವಕ ಮಂಡಳಿಯ ಪರವಾಗಿ ಅನಿಕೇತ್ ದೇಸಾಯಿ – ಅಧ್ಯಕ್ಷರು, ಜಯಂತ್ ಕುಮಾರ್ – ಕಾರ್ಯದರ್ಶಿಗಳು ಮತ್ತು ಮಂಡಳಿ ಯವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಪ್ರಕಟಿಸಿದರು.

City Today News 9341997936

ಅರಮನೆ ಮೈದಾನದಲ್ಲಿ ವಿಶ್ವಕರ್ಮ ಸಮಾಜದ ಮುಖಂಡರ ರಾಜ್ಯಮಟ್ಟದ ಸಮಾವೇಶ

ಮೇಲ್ಕಂಡಂತೆ ತಮ್ಮಲ್ಲಿ ಪ್ರಸ್ತುತ ಪಡಿಸುತ್ತಾ ರಾಜ್ಯದಲ್ಲಿ ವಿಶ್ವಕರ್ಮ ಸಮಾಜವು ಸರಿಸುಮಾರು 45 ಲಕ್ಷ ಜನಸಂಖ್ಯೆ ಇದ್ದು ನಮ್ಮ ಪಂಚಕಸುಬುಗಳ ಮೂಲಕ ನಾಡಿಗೆ ಮತ್ತು ದೇಶಕ್ಕೆ ಅಪಾರ ಕೊಡುಗೆ ಕೊಟ್ಟಿರುವುದನ್ನು ಬಿಟ್ಟರೆ ನಮ್ಮ ಬದುಕು ಹಸನಾಗಲಿಲ್ಲ. ಕಾರಣ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸರ್ಕಾರಗಳಿಂದ సామాజిక ನ್ಯಾಯವನ್ನು ಪಡೆದುಕೊಳ್ಳಲು ನಾವುಗಳು ವಿಫಲವಾಗಿರುವುದೇ ಕಾರಣ. ತಮ್ಮಗಳ ಸಹಕಾರದಿಂದ ನಾವು ಕಳೆದ ಹತ್ತಾರು ವರ್ಷಗಳಿಂದ ಸಮಾಜದ ಸ್ವಾಮೀಜಿಗಳ ಸಾರಥ್ಯದಲ್ಲಿ ಮುಖಂಡರುಗಳು ನಡೆಸಿದಂತಹ ಹೋರಾಟಗಳು, ಕಾರ್ಯಕ್ರಮಗಳು, ಪಾದಯಾತ್ರೆಗಳ ಫಲವಾಗಿ ಸಮಾಜಕ್ಕೆ ಸರ್ಕಾರಗಳಿಂದ ಗೌರವ ಸಿಕ್ಕಿದೆಯೇ ಹೊರತು ನಮ್ಮ ಸಮಾಜದ ಮಕ್ಕಳ ಬಿವಿಷ್ಯಕ್ಕೆ ಅತೀ ಮುಖ್ಯವಾಗಿರುವ ಶಿಕ್ಷಣ, ಉದ್ಯೋಗ, ಅರ್ಥಿಕ, ಸಾಮಾಜಿಕವಾಗಿ ಸವಲತ್ತುಗಳು ಸಾಮಾಜಿಕ ನ್ಯಾಯದಡಿ ನಮಗೆ ಸಿಕ್ಕಿಲ್ಲ. ಇವೆಲ್ಲವನ್ನೂ ಮನಗಂದಂತಹ ಸಮಾಜದ ಸ್ವಾಮಿಜಿಗಳು ಎಲ್ಲರೂ ಒಂದೆಡೆ ಸೇರಿ ಸಮಾಜದ ಹಿರಿಯ ಮುಖಂಡರು ಮತ್ತು ಯುವ ಮುಖಂಡರುಗಳ ಸಮಾಗಮದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜ ಸಂಘಟನೆಯನ್ನು ಕಳೆದ ವರ್ಷ ಸ್ಟಾಪಿಸಿ ಸಮಾಜಕ್ಕಾಗಿ ಹಲವಾರ ಹೋರಾಟಗಳನ್ನು ರೂಪಿಸಿ ಸರ್ಕಾರದ ಗಮನಕ್ಕೆ ತರಲಾಗಿದೆ. ನಮ್ಮ ಸಮಾಜದ ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ಇನ್ನಷ್ಟು ಪರಿಣಾಮಕಾರಿಯಾಗಿ ತರಬೇಕೆಂಬ ನಿಟ್ಟಿನಲ್ಲಿ ತೀರ್ಮಾನಿಸಿ, ದಿನಾಂಕ 20.06.20240 ಗುರುವಾರದಂದು ಮದ್ಯಾಹ್ನ 12.00 ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಾಜದ ಸಮಸ್ತ ಸ್ವಾಮೀಜಿಗಳ ಸಾರಥ್ಯದಲ್ಲಿ ರಾಜ್ಯಮಟ್ಟದ ಮುಖಂಡರುಗಳ ಸಮಾವೇಶವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನ್ಯ ಮುಖ್ಯಮಂತ್ರಿಯವರಾದ ಸನ್ಮಾನ್ಯಶ್ರೀ ಸಿದ್ದರಾಮಯ್ಯರವರು ವಹಿಸಲಿದ್ದಾರೆ. ಉದ್ಘಾಟನೆಯನ್ನು ಮಾನ್ಯ ಉಪ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ.ಕೆ.ಶಿವಕುಮಾರ್‌ರವರು ಮಾಡಿಕೊಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸರ್ಕಾರದ ಗೃಹಸಚಿವರು, ಮುಜರಾಯಿ ಇಲಾಖೆ ಸಚಿವರು, ಹಿಂದುಳಿದ ವರ್ಗಗಳ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಇನ್ನೂ ಅನೇಕ ಸಚಿವರುಗಳು ‘ಹಾಗೂ ಶಾಸಕರುಗಳು, ಅಯೋಧ್ಯೆ ಬಾಲರಾಮಮೂರ್ತಿ ಕಿತ್ತನೆಯ ಶಿಲ್ಲಿ ಅರುಣ್ ಯೋಗಿರಾಜ್, ಪದ್ಮಶ್ರೀ ಪುರಸ್ಕೃತರಾದ ಕೆ.ಎನ್.ರಾಜಣ್ಣ, ಡಾ: ಸಿ.ಆರ್.ಚಂದ್ರಶೇಖರ ಹಾಗೂ ಇನ್ನೂ ಮುಂತಾದ ಗಣ್ಯ ವ್ಯಕ್ತಿಗಳನ್ನು ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಈ

ಸಮಾವೇಶದಲ್ಲಿ ಸರ್ಕಾರಕ್ಕೆ ಸಮಾಜದ ಪ್ರಮುಖ ಬೇಡಿಕೆಗಳಾದ ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ಕನಿಷ್ಠ 100 ಕೋಟಿ ರೂ.ಅನುದಾನ ಮೀಸಲಿಡುವುದು, ವಿಶ್ವಕರ್ಮ ಅಭಿವೃದ್ಧಿ ನಿಗಮದಲ್ಲಿ ಬಾಕಿ ಇರುವ ಸಾಲ ಮನ್ನಾ ಮಾಡಿಸುವುದು, ವಿಧಾನಸೌಧ/ವಿಕಾಸಸೌಧ/ಶಾಸಕರ ಭವನದ ಆವರಣದಲ್ಲಿ ಅಮರ ಶಿಲ್ಪಿ ಜಕಣಾಚಾರಿ ರವರ ಪ್ರತಿಮೆಯನ್ನು ಸ್ಥಾಪಿಸುವುದು, ವಿಶ್ವಕರ್ಮ ಅಭಿವೃದಿ ನಿಗಮದ ನಿರ್ವಹಣೆಯಲ್ಲಿ ಕೆ.ಪಿ.ಎಸ್.ಸಿ ಮತ್ತು ಯ.ಪಿ.ಎಸ್.ಸಿ ತರಬೇತಿ ಕೇಂದ್ರವನ್ನು ಸ್ಥಾಪಿಸುವುದು, ಈಗಾಗಲೇ ಮಂಜೂರಾಗಿರುವಂತೆ ಗುಲ್ಬರ್ಗಾ ಮತ್ತು ಮೈಸೂರಿನಲ್ಲಿ ವಿಶ್ವಕರ್ಮ ವಸತಿ ನಿಲಯವನ್ನು ಶೀಘ್ರವಾಗಿ ಪ್ರಾರಂಭಿಸುವುದು, ರಾಜ್ಯದಲ್ಲಿರುವ ಮುಜರಾಯಿ ಇಲಾಖೆ ಮತ್ತು ಖಾಸಗಿ ವಲಯದ ದೇವಾಲಯಗಳು ಮತ್ತು ಮುಂದೆ ಕಟ್ಟಲ್ಪಡುವಂತಹ ದೇವಾಲಯಗಳಲ್ಲಿ ಕಡ್ಡಾಯವಾಗಿ ದೇವಾಲಯ ನಿರ್ಮಾಣ ಮತ್ತು ಗರ್ಭಗುಡಿ ಮೂರ್ತಿ ಕೆತ್ತಿರುವ ಶಿಲ್ಪಿಯ ಹೆಸರುಗಳನ್ನು ಶಿಲಾಶಾಸನದಲ್ಲಿ ಕೆತ್ತಿಸಿ ದೇವಾಲಯದ ಆವರಣದಲ್ಲಿ ಅಳವಡಿಸುವಂತೆ ಸರ್ಕಾರ ಆದೇಶಿಸಬೇಕೆಂದು ಒತ್ತಾಯಿಸಲಾಗುವುದು, ಮತ್ತು ಇನ್ನೂ ಅನೇಕ ಬೇಡಿಕೆಗಳನ್ನು ಸಮಾಜದ ಅಭಿವೃದ್ಧಿ ದೃಷ್ಟಿಯಿಂದ ಸಲ್ಲಿಸಿ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲಿದ್ದೇವೆ.

ಈ ಸಮಾವೇಶದಲ್ಲಿ 2024-25ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಷಿ ಶರೀಕ್ಷೆಗಳಲ್ಲಿ ಶೇಕಡಾ 75ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿರುವ ವಿಶ್ವಕರ್ಮ ಸಮಾಜದ ಪ್ರತಿಭಾನ್ವಿತ 1101 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತೇವೆ. ಸಮಾಜದ ಮಕ್ಕಳಿಗೆ ವಿದ್ಯಾರ್ಥಿ ದೆಸೆಯಲ್ಲಿಯೇ ಸಂಘಟನೆ ಅರಿವು ಮೂಡಿಸಲು ಈ ಸಮಾವೇಶದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಿರುತ್ತೇವೆ.

ಸ್ವತಂತ್ರ ಬಂದು 75 ವರ್ಷಗಳು ಕಳೆದರೂ ಸಾಮಾಜಿಕ ನ್ಯಾಯದಿಂದ ವಂಚಿತರಾಗಿರುವ ನಮ್ಮ ಸಮಾಜಕ್ಕೆ ಸಾಮಾಜಿಕ ನ್ಯಾಯದಡಿ ಶಿಕ್ಷಣ, ಉದ್ಯೋಗ, ಸಾಮಾಜಿಕ, ಆರ್ಥಿಕ ಸೌಲಭ್ಯಗಳನ್ನು ಪಡೆಯಲು ರಾಜ್ಯ ಮಟ್ಟದಲ್ಲಿ ಮುಖಂಡರುಗಳು ನಡೆಸುತ್ತಿರುವ ಈ ಸಮಾವೇಶಕ್ಕೆ ರಾಜ್ಯದ ಸಮಸ್ತ ವಿಶ್ವಕರ್ಮ ಮುಖಂಡರುಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳು ಆಗಮಿಸಬೇಕೆಂದು ಈ ಮೂಲಕ ಮನವಿ ಮಾಡುತ್ತಾ ಸಮಾಜದ ಕಷ್ಟಗಳನ್ನು ಸರ್ಕಾರದ ಗಮನಕ್ಕೆ ತಂದು ನಮಗೆ ನ್ಯಾಯ ಕೊಡಿಸಲು ಕಳೆದ 20 ವಷಗಳಿಂದ ಪ್ರೋತ್ಸಾಹ ನೀಡುತ್ತಿರುವ ಗೌರವಾನ್ವಿತ ಮಾಧ್ಯಮ ಬಂಧುಗಳಿಗೂ ಸಹಾ ಈ ಮೂಲಕ ಕಾರ್ಯಕ್ರಮಕ್ಕೆ ಆಹ್ವಾನ ನೀಡುತ್ತಿದ್ದೇವೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜದ ವತಿಯಿಂದ ತಿಳಿಸಲಾಯಿತು.

City Today News 9341997936