ಗುರು ರಾಯರ ಬೃಂದಾವನಕ್ಕೆ “ಶ್ರೀಗಂಧ ಲೇಪನ” ಅಲಂಕಾರದ ವಿಶೇಷ ಸೇವೆ 10-5-2024

ಜಯನಗರದ 5 ನೇ ಬಡಾವಣೆ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್.ಕೆ. ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಅಕ್ಷಯ ತೃತೀಯಾ ಪ್ರಯುಕ್ತ ಮೇ 10ನೇ ತಾರೀಕು ಶುಕ್ರವಾರದಂದು ರಾಯರ ಬೃಂದಾವನಕ್ಕೆ ಸಂಪೂರ್ಣವಾಗಿ ಶ್ರೀಗಂಧದಿಂದಲೇ ಅಲಂಕಾರವನ್ನು ಮಾಡಲಾಗುತ್ತದೆ. ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ವರ್ಷಕ್ಕೊಮ್ಮೆ ಆಚರಿಸುವಂತಹ ಬಹಳ  ಅಪರೂಪವಾದ “ಶ್ರೀ ಗಂಧ ಲೇಪನದ ಸೇವೆ”. ಈ ಸೇವೆಯಲ್ಲಿ ಭಕ್ತಾದಿಗಳು ಆನ್ಲೈನ್  ಈ ನಂಬರ್ -9449133929 ಮುಖಾಂತರ ಸೇವೆ ಸಲ್ಲಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾಗಬಹುದು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದ್ದಾರೆ. ಈ ಸೇವೆಯನ್ನು ಮಾಡಿಸಿರುವ ಭಕ್ತರಿಗೆ ಶನಿವಾರ 11ನೇ ತಾರೀಖಿನಂದು ಶ್ರೀಗುರು ರಾಯರ ಬೃಂದಾವನಕ್ಕೆ  ಸಮರ್ಪಿಸಿ ಅಲಂಕರಿಸಿದ ಶ್ರೀಗಂಧದ ಪ್ರಸಾದವನ್ನು ಕೊಡಲಾಗುವುದು. ಈ  ಸೇವೆಯಲ್ಲಿ ಭಗವತ್ ಭಕ್ತರು ಭಾಗವಹಿಸಿ, ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾಗಬಹುದು. ಹೆಚ್ಚಿನ ಮಾಹಿತಿಗಾಗಿ-08022443962-9945429129-9449133929-8660349906

City Today News 9341997936

ಮಂತ್ರಾಲಯ ಶ್ರೀಸುಬುಧೇಂದ್ರ ಶ್ರೀಗಳ ಆದೇಶದಂತೆ ಪ್ರತಿ ಗುರುವಾರ ಜಯನಗರದ ಐದನೇ ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ 4000 ಕ್ಕೂ ಹೆಚ್ಚಿನ ಭಕ್ತರಿಗೆ “ಅನ್ನ ಸಂತರ್ಪಣೆ”

ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಭಕ್ತರಿಗಾಗಿ ಅನ್ನಸಂತರ್ಪಣೆಯ ಪ್ರಸಾದವನ್ನು  ಪರಮ ಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್. ಕೆ. ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಮಹಾ ಮಂಗಳಾರತಿಯೊಂದಿಗೆ ಪ್ರತಿ ಗುರುವಾರದಂದು ಮಧ್ಯಾಹ್ನ 12 ರಿಂದ 2 ಗಂಟೆಯವರೆಗೂ ಸುಮಾರು 4,000 ಸಾವಿರಕ್ಕೂ ಮಿಗಿಲಾಗಿ ಹೆಚ್ಚಿನ ಭಕ್ತಾದಿಗಳಿಗೆ  ವಿಶೇಷವಾಗಿ ಅನ್ನ ಸಂತರ್ಪಣೆ ಪ್ರತಿ ಗುರುವಾರವು ಭಕ್ತರ ಸಹಕಾರದಿಂದ ಪ್ರತಿಯೊಬ್ಬ ಭಕ್ತರಿಗೂ ಅನ್ನ ಸಂತರ್ಪಣೆಯ ಕಾರ್ಯಕ್ರಮವು ವಿಶೇಷವಾಗಿ ನಡೆಯುತ್ತಿದೆ ಎಂದು ಶ್ರೀ ನಂದಕಿಶೋರಾಚಾರ್ ಅವರು ತಿಳಿಸಿದ್ದಾರೆ ಅನ್ನಸಂತರ್ಪಣೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಪ್ರಸಾದವನ್ನು ಪ್ರತಿಯೊಬ್ಬ ಭಕ್ತರು ಭಕ್ತಿಯಿಂದ ಸ್ವೀಕರಿಸಿ ಬಹಳ ಸಂತೋಷವನ್ನು ವ್ಯಕ್ತಪಡಿಸುತ್ತಾ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾಗುತ್ತಿ ದ್ದಾರೆ. ಈ ಒಂದು ವಿಶೇಷವಾದ “ಅನ್ನದಾನದ”ಸೇವೆಯಲ್ಲಿ ಭಕ್ತಾದಿಗಳು ಕಾಣಿಕೆಯನ್ನು ಸಲ್ಲಿಸಿ ವಿಶೇಷವಾದ “ಅನ್ನದಾನ ಮಹಾದಾನ” ಸೇವೆಯಲ್ಲಿ ಭಾಗವಹಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ ಫಲ ಮಂತ್ರಾಕ್ಷತೆ ಸ್ವೀಕರಿಸಿ ಗುರುಗಳ ಅನುಗ್ರಹಕ್ಕೆ ಪಾತ್ರರಾಗಬಹುದು.
ಹೆಚ್ಚಿನ ಮಾಹಿತಿಗಾಗಿ- 08022443962-9945429129-9449133929-8660349906

City Today News 9341997936

ಜಯನಗರ ರಾಯರ ಮಠದಲ್ಲಿ ಹನುಮ ಜನ್ಮೋತ್ಸವದ ಪ್ರಯುಕ್ತ ಶ್ರೀ ಮುಖ್ಯಪ್ರಾಣ ದೇವರಿಗೆ ಮಧು ಅಭಿಷೇಕ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಶ್ರೀ ಹನುಮ ಜನ್ಮೋತ್ಸವದ ಪ್ರಯುಕ್ತ ಏಪ್ರಿಲ್ 23, ಮಂಗಳವಾರ ಬೆಳಗ್ಗೆ ಮುಖ್ಯಪ್ರಾಣ ದೇವರಿಗೆ ಮಧು ಅಭಿಷೇಕ, ರತ್ನ ಕವಚ ಧಾರಣೆ ಮತ್ತು  ಚಿತ್ತಾ ಪೂರ್ಣಿಮೆ ಅಂಗವಾಗಿ ಸಾಮೂಹಿಕ ಶ್ರೀ ಸತ್ಯನಾರಾಯಣ ವ್ರತ ಪೂಜೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ಜರುಗಿದವು ಎಂದು ಶ್ರೀ ನಂದಕಿಶೋರ್ ಆಚಾರ್ ತಿಳಿಸಿದರು, ಈ ಸಂದರ್ಭದಲ್ಲಿ ಭಕ್ತಾದಿಗಳು ಪೂಜೆಯಲ್ಲಿ ಭಾಗವಹಿಸಿ, ಶ್ರೀ ಹರಿವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು.

City Today News 9341997936

ಶ್ರೀರಾಮೋತ್ಸವ – ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಉತ್ಸವ ಮತ್ತು ಭಜನೆ

ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ ಮತ್ತು ಶ್ರೀ ಕೃಷ್ಣ ಗುಂಡಾಚಾರ್ಯರ ನೇತೃತ್ವದಲ್ಲಿ ಶ್ರೀ ರಾಮೋತ್ಸವದ ಅಂಗವಾಗಿ ವಿಶೇಷ ಅಭಿಷೇಕ ಉತ್ಸವ ಅಲಂಕಾರ ಭಕ್ತರಿಗೆ ನಿರಂತರವಾಗಿ ಪಾನಕ ಮಜ್ಜಿಗೆ ಕೋಸಂಬರಿ ಪ್ರಸಾದವು ವಿತರಣೆಯಾಯಿತು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು ಭಕ್ತರು ಉತ್ಸವದ ಸೇವೆಯಲ್ಲಿ ಮತ್ತು ಶ್ರೀರಾಮೋತ್ಸವದ ಭಜನೆ ಯಲ್ಲಿ ಭಾಗವಹಿಸಿ ಶ್ರೀ ಹರಿವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು .

City Today News 9341997936

ಹೊಸ ವರ್ಷದ ಯುಗಾದಿ ಹಬ್ಬದ ಪ್ರಯುಕ್ತ ರಾಯರ ಬೃಂದಾವನಕ್ಕೆ ವಿಶೇಷ “ರತ್ನ ಕವಚದ ಅಲಂಕಾರ” ಉತ್ಸಗಳು ಮತ್ತು ವಿದ್ವಾನ್ -ಅಗ್ನಿಹೋತ್ರಿ ವೇಣುಗೋಪಾಲ ಆಚಾರ್ಯ ರಿಂದ “ಪಂಚಾಂಗ ಶ್ರವಣ”

ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮ ಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ 9-4-2024 ಮಂಗಳವಾರ ಬೆಳಗ್ಗೆ ರಾಯರ ಬೃಂದಾವನಕ್ಕೆ ಅರ್ಚಕರಾದ  ಕೃಷ್ಣಾಚಾರ್ , ರಾಮಾಚಾರ್ ಇವರಿಂದ ತೈಲಾಭ್ಯಂಜನ , ಫಲಪಂಚಾಮೃತ ಅಭಿಷೇಕ ನವರತ್ನ ಕವಚದ ಅಲಂಕಾರ ಹಾಗೂ ಪಲ್ಲಕ್ಕಿ ಉತ್ಸವ ಗಜ ವಾಹನ ಉತ್ಸವ ರಥೋತ್ಸವ ದೊಂದಿಗೆ ಮಂಗಳಾರತಿಯು ನೆರವೇರಿತು , ತದನಂತರದಲ್ಲಿ ಸಾಯಂಕಾಲ 6:30ಕ್ಕೆ ಹೊಸ ವರ್ಷದ “ಪಂಚಾಂಗ ಶ್ರವಣ” ವನ್ನು ವಿದ್ವಾನ್- ಅಗ್ನಿಹೋತ್ರಿ ವೇಣು ಗೋಪಾಲಾಚಾರ್ಯರು ನಡೆಸಿ ಕೊಟ್ಟೂರು ಎಂದು ಶ್ರೀ ನಂದಕಿಶೋರಾಚಾರ್ಯರು ತಿಳಿಸಿದರು ಈ ಸಂದರ್ಭದಲ್ಲಿ ನೂರಾರು ಭಕ್ತರು ಎಲ್ಲಾ ಕಾರ್ಯಕ್ರಮದ ಶ್ರೀ ಗುರು ರಾಯರ ಸೇವೆಯಲ್ಲಿ  ಭಾಗವಹಿಸಿ ಶ್ರೀ  ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು.

City Today News 9341997936