ಜಯನಗರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ವಿಶೇಷ ಉತ್ಸವ – ಶ್ರೀಮತಿ ಗೀತಾ ಭತ್ತದ ವೃಂದದಿಂದ “ದಾಸವಾಣಿ ಸೇವೆ’

ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ , ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಮಾರ್ಚ್ 14, ಗುರುವಾರ ಬೆಳಗ್ಗೆ ರಾಯರಿಗೆ ಪಂಚಾಮೃತ ಅಭಿಷೇಕ, ಕನಕಾಭಿಷೇಕ, ವಿಶೇಷ ಅಲಂಕಾರ, ಮಹಾ ಮಂಗಳಾರತಿ ಹಾಗೂ ‘ಅನ್ನದಾನ” ಸೇವೆಯ ಕಾರ್ಯಕ್ರಮಗಳು ನಡೆದವು. ಸಂಜೆಯ ಕಾರ್ಯಕ್ರಮದಲ್ಲಿ ಗಜವಾಹನೋತ್ಸವ, ತೊಟ್ಟಿಲು ಪೂಜೆ ಹಾಗೂ ವಿಶೇಷವಾಗಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ  ಶ್ರೀಮತಿ ಗೀತಾ ಭತ್ತದ್ ಮತ್ತು “ಗಾನ ಸಿದ್ದಗಂಗಾ ಸಂಗೀತ” ವಿದ್ಯಾಲಯದ ವಿದ್ಯಾರ್ಥಿಗಳು ‘ದಾಸವಾಣಿ’ಕಾರ್ಯಕ್ರಮವನ್ನು ಅತ್ಯದ್ಭುತವಾಗಿ ಯಶಸ್ವಿಯಾಗಿ ನಡೆಸಿಕೊಟ್ಟರು, ನೆರೆದಿದ್ದ ಭಕ್ತ ಸಮೂಹ  ಸಂಗೀತಾಸಕ್ತರು “ದಾಸವಾಣಿ” ಮತ್ತು ಭಕ್ತಿಯ ಸಂಗೀತವನ್ನು ಸವಿದರು ಎಂದು ಶ್ರೀ ನಂದಕಿಶೋರಾಚಾರ್ಯರು ತಿಳಿಸಿದರು , ಈ ಸಂದರ್ಭದಲ್ಲಿ ಶ್ರೀ ಮಠದ ವ್ಯವಸ್ಥಾಪಕರಾದ ಆರ್, ಕೆ ವಾದಿಂದ್ರಾಚಾರ್ಯರು ಮತ್ತು ಕಿಶೋರಾಚಾರ್ಯರು “ದಾಸವಾಣಿ”ವೃಂದದವರಿಗೆ ಶ್ರೀ ರಾಘವೇಂದ್ರ ಸ್ವಾಮಿಗಳವರ  ಭಾವಚಿತ್ರವನ್ನು ನೀಡಿ ಗುರುಗಳ ಫಲ ಮಂತ್ರಾಕ್ಷತೆಯೊಂದಿಗೆ ಆಶೀರ್ವದಿಸಿದರು, ಸಹಸ್ರಾರು ಭಕ್ತರು ರಾಯರ ಸೇವೆಯಲ್ಲಿ ಭಾಗವಹಿಸಿ “ಅನ್ನಸಂತರ್ಪಣೆ” ಪ್ರಸಾದವನ್ನು ಸ್ವೀಕರಿಸಿ ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು,

City Today News 9341997936

ಬೆಂಗಳೂರಿನ ಶ್ರೀ ಸಾಯಿಕಲಾವೃಂದದ 6ನೇ ವರ್ಷದ ವಾರ್ಷಿಕೋತ್ಸವ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ ಹಾಗೂ ಕಣಗಲ್ ಪ್ರಭಾಕರ ಶಾಸ್ತ್ರೀ ವಿರಚಿತ ಪ್ರಚಂಡ ರಾವಣ ನಾಟಕ ಪ್ರದರ್ಶನ

ಬೆಂಗಳೂರಿನ ಶ್ರೀ ಸಾಯಿಕಲಾವೃಂದ ತನ್ನ 6ನೇ ವರ್ಷದ ವಾರ್ಷಿಕೋತ್ಸವ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ ಹಾಗೂ ಕಣಗಲ್ ಪ್ರಭಾಕರ ಶಾಸ್ತ್ರೀ ವಿರಚಿತ ಪ್ರಚಂಡ ರಾವಣ ನಾಟಕ ಪ್ರದರ್ಶನ ಏರ್ಪಡಿಸಿತ್ತು.  ಸಭಾ ಕಾರ್ಯಕ್ರಮದಲ್ಲಿ ,ಬಿ.ಬಿ.ಎಂ.ಪಿ.ಆರೋಗ್ಯ ಸ್ಥಾಯಿ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಎಂ. ಮುನಿರಾಜು, ಸಮಾಜ ಸೇವಕ ಎಲ್.ಹರ್ಷ, ಕನ್ನಡ ಪರ ಹೋರಾಟಗಾರರಾದ ರಮೇಶ್ (ನಾಡಿಗ್) ,ಹಿರಿಯ ರಂಗಕರ್ಮಿ ಕಂಟನಕುಂಟೆ ಕೃಷ್ಣಮೂರ್ತಿ, ಕಲ್ಲೂರು ಶ್ರೀನಿವಾಸ, ವಕೀಲ ಡಿ. ರಾಜು, ಜಲಮಂಡಳಿ ರಾಮಚಂದ್ರ, ಇದ್ದ ಸಭೆಯನ್ನು ಕಲಾವಿದ ಆರ್ ವೆಂಕಟರಾಜು ನಿರೂಪಿಸಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ವಿ. ಶ್ರೀನಿವಾಸ್  ಉಪಸ್ಥಿತರಿದ್ದ ರು.ಸಭಾ ಕಾರ್ಯಕ್ರಮದ ನಂತರ ನುರಿತ ಕಲಾವಿದರಿಂದ ಪ್ರಚಂಡ ರಾವಣ ನಾಟಕದ ಪ್ರದರ್ಶನ ಕಲ್ಲೂರು ಶ್ರೀನಿವಾಸ ಅವರ ನಿರ್ದೇಶನದಲ್ಲಿ ಯಶಸ್ವಿಯಾಗಿ ನಡೆಯಿತು.ರಾವಣನ ಪಾತ್ರದಲ್ಲಿ ತುರುವೇಕೆರೆ ಮಂಜಣ್ಣ, ಬ್ರಹ್ಮನಾಗಿ ಹೆಚ್ ಎ. ಎಲ್. ರೇವಣ್ಣ, ಮಂಡೋದರಿಯಾಗಿ ಪ್ರತಿಭಾ ನಾರಾಯಣ, ಸೀತೆಯಾಗಿ ಭಾಗ್ಯಶ್ರೀ, ವಿಭೀಷಣನಾಗಿ ಚನ್ನಯ್ಯ,ಆಂಜನೇಯನಾಗಿ ತುರುವೇಕೆರೆ ಶಿವಾನಂದ ಅಭಿನಯಿಸಿದರು.

City Today News 9341997936

ಬೆಂಗಳೂರಿನ ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕ ಮಹೋತ್ಸವ

ಶ್ರೀ ರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕ ಮಹೋತ್ಸವ
ಬೆಂಗಳೂರಿನ ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ಪರಮಪೂಜ್ಯ ಶ್ರೀ1008 ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ  ಹಿರಿಯ ವ್ಯವಸ್ಥಾಪಕರಾದ ಆರ್ .ಕೆ.ವಾದಿಂದ್ರ ಆಚಾರ್ಯರ ನೇತೃತ್ವದಲ್ಲಿ, ಡಾ|| ಅಗ್ನಿಹೋತ್ರಿ ವೇಣುಗೋಪಾಲಾಚಾರ್ಯರು ಶ್ರೀ ಗುರು ರಾಘವೇಂದ್ರ ವೈಭವ ರಾಯರ “ಜೀವನ ಚರಿತ್ರೆಯ” ಪ್ರವಚನದ  ಹಾಗೂ  ಭಾರತ ನೃತ್ಯ ಸಂಗೀತ ಅಕಾಡೆಮಿ ಯ ವಿದ್ಯಾರ್ಥಿಗಳಿಂದ “ಭರತನಾಟ್ಯ”ಕಾರ್ಯಕ್ರಮವನ್ನು ಶ್ರೀಮತಿ ಶುಭಾರಾಣಿ ಬೋಳಾರ್ ಇವರ ನಿರ್ದೇಶನದಲ್ಲಿ ನಡೆಯುವುದು.

City Today News 9341997936

ಬಿ.ಎಂ.ಎಸ್ ಕಾನೂನು ಮಹಾವಿದ್ಯಾಲಯದಲ್ಲಿ ಮಹಿಳಾ  ದಿನಾಚರಣೆ

ದಿನಾಂಕ ೧೩.೦೩.೨೦೨೪ ರಂದು ಬಿ.ಎಂ.ಎಸ್ ಕಾನೂನು ಮಹಾವಿದ್ಯಾಲಯದಲ್ಲಿ ಮಹಿಳಾ  ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಂಶುಪಾಲರು, ಬೋಧಕ, ಬೋಧಕೇತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

City Today News 9341997936

ಕರ್ನಾಟಕ ಇತಿಹಾಸ ಪರಿಷತ್ತಿನ 34ನೇ ವಾರ್ಷಿಕ ಮಹಾ ಅಧಿವೇಶನ

ಕರ್ನಾಟಕ ಇತಿಹಾಸ ಪರಿಷತ್ತಿನ 34ನೇ ವಾರ್ಷಿಕ ಮಹಾ ಅಧಿವೇಶನ

ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನ ಬಾಪೂಜಿ ಸಭಾಂಗಣದಲ್ಲಿ ಮಾರ್ಚ್ 15. 16 ಹಾಗೂ 17ರಂದು ದೆಹಲಿಯ ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ತು ಹಾಗೂ ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ – ಇವರ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ಇತಿಹಾಸ ಪರಿಷತ್ತಿನ 34ನೇ ವಾರ್ಷಿಕ ಮಹಾಧಿವೇಶನವನ್ನು ಏರ್ಪಡಿಸಲಾಗಿದೆ.

ಖ್ಯಾತ ಸಾಹಿತಿಗಳು ಮತ್ತು ಸಂಸ್ಕೃತಿ ಚಿಂತಕರಾದ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಅಧಿವೇಶನವನ್ನು ಉದ್ಘಾಟಿಸುವರು. ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ. ಸುಧಾಕರ್, ಶಾಸಕರಾದ ಶ್ರೀ ರಿಜ್ವಾನ್ ಅರ್ಷದ್, ಶಾಸಕರಾದ ಶ್ರೀ ಪುಟ್ಟಣ್ಣ ಮತ್ತು ಶ್ರೀ ಎನ್. ಶ್ರೀನಿವಾಸ್, ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಾದ ಶ್ರೀ ಜಗದೀಶ್ ಹಾಗೂ ಇತರರು ಮುಖ್ಯ ಅತಿಥಿಗಳಾಗಿ ಆಗಮಿಸುವರು. ಬೆಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ. ಅಶ್ವತ್ಥನಾರಾಯಣ ಅವರು ಸಮ್ಮೇಳನದ ಸರ್ವಾಧ್ಯಕ್ಷರಾಗಿರುತ್ತಾರೆ. ಮೂರು ದಿನಗಳ ಕಾಲ ನಡೆಯುವ ಮಹಾ ಅಧಿವೇಶನದಲ್ಲಿ ರಾಷ್ಟ್ರಮಟ್ಟದ ವಿದ್ವಾಂಸರು, ಸಂಶೋಧಕರು, ಇತಿಹಾಸ ತಜ್ಞರು ಪ್ರಬಂಧಗಳನ್ನು ಮಂಡಿಸುವರು. ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವಿಶ್ರಾಂತ ಸಮ ಕುಲಪತಿಗಳಾದ ಪ್ರೊ. ಎಸ್. ಚಂದ್ರಶೇಖರ್ ಅವರು ಸಮಾರೋಪ ಭಾಷಣ ಮಾಡುವರು ಎಂದು ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

City Today News 9341997936