ಬೆಂಗಳೂರಿನ ಜಯನಗರ 5 ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮ ಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಬೆಳಗ್ಗೆ ಸಂಸ್ಥಾನ ಪೂಜೆಯನ್ನು ನೆರವೇರಿಸಿ ನಂತರ ಸಂಜೆ “ಲೋಕ-ಕಲ್ಯಾಣಕ್ಕಾಗಿ” ಗುರುವಾರದ ಪ್ರಯುಕ್ತ ಶ್ರೀ ರಾಘವೇಂದ್ರ ಸ್ವಾಮಿಗಳಲ್ಲಿ ಪ್ರಾರ್ಥಿಸಿ ತಮ್ಮ ಅಮೃತ ಹಸ್ತದಿಂದ ಸಾವಿರಾರು ಭಕ್ತ ಜನರಿಗೆ “ಫಲಮಂತ್ರಾಕ್ಷತೆ” ಯನ್ನು ಕೊಟ್ಟು ಭಕ್ತಾದಿಗಳಿಗೆ ಅನುಗ್ರಹಿಸಿ ಆಶೀರ್ವದಿಸಿದರು, ಈ ಸಂದರ್ಭದಲ್ಲಿ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ದಂಪತಿ ಮತ್ತು ಡಾಕ್ಟರ್ ನಟರಾಜ ಶೆಟ್ಟಿ ದಂಪತಿ ಇವರು ಶ್ರೀಗಳಿಂದ ಆಶೀರ್ವಾದ ಪಡೆದುಕೊಂಡರು.
“ಶ್ರೀಮನ್ ಮೂಲರಾಮಚಂದ್ರ ದೇವರ”ಸಂಸ್ಥಾನ ಪೂಜೆ” ಮಂತ್ರಾಲಯ ಶ್ರೀಗಳಿಂದ ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ತಮ್ಮ ಅಮೃತ ಹಸ್ತದಿಂದ ಸಂಸ್ಥಾನ ಪೂಜೆಯನ್ನು ನೆರವೇರಿಸಿದರು,
ತದನಂತರದಲ್ಲಿ ನಿರ್ದೇಶಕರಾದ ಡಾ. ಮಧುಸೂದನ್ ಹವಾಲ್ದಾರ್ ಅವರ ನಿರ್ದೇಶನದ “ಅಯೋಧ್ಯಾ ರಾಮ” ಎಂಬ ಚಲನಚಿತ್ರದ ಲೋಗೋ ವನ್ನು ಪರಮಪೂಜ್ಯ ಶ್ರೀಪಾದರು ಬಿಡುಗಡೆಗೊಳಿಸಿದರು ಈ ಸಂದರ್ಭದಲ್ಲಿ ಡಾಕ್ಟರ್ ಮಧುಸೂದನ್ ಹವಾಲ್ದಾರ್ ಹಾಗೂ ಆರ್ ಕೆ ವಾದಿಂದ್ರ ಆಚಾರ್ಯರು ನಂದಕಿಶೋರ್ ಆಚಾರ್ಯರು ಇದ್ದರು
The prestigious St. Joseph’s University is thrilled to announce the much-anticipated “Open Heart2024” event scheduled for the 29th of January 2024. The event will be graced by the esteemed presence of Shri Ram Nath Kovind, the 14th President of India, who will serve as the Chief Guest and Speaker for this special occasion.
Event Details:
Date: 29th January 2024
Chief Guest: Shri Ram Nath Kovind, 14th President of India
Time: 11:30 a.m. to 12:30 p.m.
“Open Heart 2024” aims to provide a platform for open and meaningful discussions on pressing issues facing our society. The presence of Shri Ram Nath Kovind adds significant value to the event, bringing his vast experience and insights to the fore front.
This event promises to be an insightful and thought-provoking experience, with discussions led by Shri Ram Nath Kovind expected to cover a range of topics relevant to the current socio-political landscape.
For further information, please contact:
Prof. D. Kiran Jeevana PRO, St. Joseph’s University
ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದಹಿರಿಯ ವ್ಯವಸ್ಥಾಪಕ ಆರ್, ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಮತ್ತು ಧರ್ಮಾಧಿಕಾರಿಗಳಾದ ಜಿ, ಕೆ ಆಚಾರ್ಯರ ಹಾಗೂ ಅರ್ಚಕರ ವೃಂದದಿಂದ, ವೇದ ಘೋಷ, ದೇವತಾ ಪ್ರಾರ್ಥನೆ, ಶ್ರೀ ರಾಮ ದೇವರ ವಿಗ್ರಹಕ್ಕೆ ಮತ್ತು ಭಾವಚಿತ್ರಕ್ಕೆ “ಪುಷ್ಪವೃಷ್ಟಿ” “ದೀಪಗಳ”ಪ್ರಜ್ವಲನೆ ವಿಶೇಷವಾಗಿ ಹಲವಾರು ಭಜನಾ ಮಂಡಳಿಗಳಿಂದ ಶ್ರೀಹರಿ ಭಜನೆ ವಿದ್ವಾಂಸರಿಂದ ಪ್ರವಚನ ಮತ್ತು ಉತ್ಸವಗಳು ನೆರವೇರಿತು ಎಂದು ಶ್ರೀ ನಂದ ಕಿಶೋರ್ ಆಚಾರ್ಯರು ತಿಳಿಸಿದರು, ಈ ಸಂದರ್ಭದಲ್ಲಿ ವಿಶೇಷವಾಗಿ ಭಕ್ತಾದಿಗಳಿಗೆ ಆಕರ್ಷಣೆಯಾಗಿದ್ದು ಅಂಬಾರಿಯಲ್ಲಿ ರಾಮದೇವರ ವಿಗ್ರಹ, ಹಾಗೂ ಸ್ವರ್ಣ ಸಿಂಹಾಸನದಲ್ಲಿಯು ವಿಗ್ರಹ ಇರಿಸಲಾಗಿತ್ತು ಮತ್ತು ಅಯೋಧ್ಯೆಯಲ್ಲಿ”ಪ್ರತಿಷ್ಠಾಪನೆ” ಗೊಂಡ ಶ್ರೀ ಬಾಲ ರಾಮನ ಕಂಗೊಳಿಸುವ”ಭಾವಚಿತ್ರ” ಶ್ರೀಮಠದ ಪ್ರಕಾರ ಮತ್ತು ಹೊರ ಭಾಗದಲ್ಲಿ ವಿದ್ಯುತ್ ದೀಪಗಳಿಂದ ಹಾಗೂ ಬಾಳೆ ಕಂಬ ಮಾವಿನ ಸೊಪ್ಪಿನ ಹಸಿರು ತೋರಣಗಳೊಂದಿಗೆ ಅಲಂಕರಿ ಸಲಾಗಿತ್ತು ಹಾಗೂ ವಿಶೇಷವಾಗಿ ಶ್ರೀಸೀತಾರಾಮಲಕ್ಷ್ಮಣ ಸಹಿತ ಹನುಮಂತ ದೇವರ ವಿಗ್ರಹಕ್ಕೆ ಶ್ರೀಬಾಲರಾಮನ ಭಾವಚಿತ್ರಕ್ಕೆ “ಪುಷ್ಪವೃಷ್ಟಿ”ಯೊಂದಿಗೆ ಮಹಾ ಮಂಗಳಾರತಿಯು ನೆರವೇರಿತು, ಈ ಸಂದರ್ಭದಲ್ಲಿ ಭಕ್ತರು ಸಹ “ಪುಷ್ಪವೃಷ್ಟಿ” ಯನ್ನು ಶ್ರೀ ರಾಮ ದೇವರ ಭಾವಚಿತ್ರಕ್ಕೆ ಭಕ್ತಿಯಿಂದ ನೆರೆವೇರಿಸಿದರು, ಸಾವಿರಾರು ಭಕ್ತರು ಶ್ರೀಮಠಕ್ಕೆ ಆಗಮಿಸಿ “ಲೋಕಕಲ್ಯಾಣ” ಕ್ಕಾಗಿ ವಿಶೇಷ ಧ್ಯಾನ, ಜಪ, ಪ್ರಾರ್ಥನೆ, ಭಜನೆ, ಸಲ್ಲಿಸಿದರು, ಶ್ರೀ ರಾಮೋತ್ಸವಕ್ಕೆ ಆಗಮಿಸಿದ ಸಹಸ್ರಾರು ಭಕ್ತರಿಗೆ ಪೊಂಗಲ್, ಪುಳಿಯೋಗರೆ, ಮಜ್ಜಿಗೆ, ಪಾನಕ, ಕೋಸಂಬರಿ, ಇತ್ಯಾದಿ ಪ್ರಸಾದದ ವ್ಯವಸ್ಥೆಯನ್ನು ಶ್ರೀ ಮಠದಿಂದ ಮಾಡಲಾಗಿತ್ತು ಭಕ್ತರು ಶ್ರೀರಾಮೋತ್ಸವವನ್ನು ಸಂಭ್ರಮ ಸಡಗರ ಉಲ್ಲಾಸ ಸಂತೋಷದಿಂದ ಶ್ರೀ ರಾಮನಲ್ಲಿ ಭಕ್ತಪರವಶರಾಗಿ ಹಬ್ಬದಂತೆ ಆಚರಿಸಿ ಪ್ರಸಾದ ಸ್ವೀಕರಿಸಿ ಶ್ರೀ ರಾಮದೇವರ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು.
You must be logged in to post a comment.