Town Official Language Implementation Committee (Banks &Insurance) Bengaluru’s 76th Half Yearly Meeting and Joint Hindi Day Celebration was organized on 15th December 2023 at 04.30 PMat Canara Bank, Head Office Auditorium, Bengaluru. Shri K.Satyanarayana Raju, Managing Director & CEO, Canara Bank andChairman, TOLIC (Banks & Insurance), Bengaluru presided over theprogramme. The meeting was attended by Shri Ashok Chandra,Executive Director, Canara Bank, Smt. Sonali Sen Gupta, Regional Director, Reserve Bank of India, Regional Office, Bengaluru, Shri Mahesh Kumar Mall, Managing Director, Reserve Bank of India Note Printing (P.) Ltd., Mr. Anirban Kumar Biswas, Deputy Director,Regional Implementation Office(South)and Officials/representatives of various Banks and Insurance companies.Rajbhasha Patrika Puraskar 2023 was distributed at the function.Later, prizes were distributed to the winners of the Hindi competition organized under the aegis of TOLIC. In the meeting the 48th issue of TOLIC (Banks & Insurance), Bengaluru magazine Prayas was released and desk top Hindi noting sahayika was released by the Chairman, TOLIC (Banks & Insurance), Bengaluru and the dignitaries present. In the presidential address Shri K Satyanarayana Raju emphasized the maximum use of Hindi in offices. Cultural programs were organized by the member offices and employees participated enthusiastically.
ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಮೃತ ಮಹೋತ್ಸವ ಹಾಗೂ ಈಡಿಗ ಮತ್ತು 25 ಪಂಗಡಗಳ “ಬೃಹತ್ ಜಾಗೃತ ಸಮಾವೇಶ” ಸ್ಥಳ : ಬೆಂಗಳೂರು ಪ್ರೆಸ್ ಕ್ಲಬ್ ದಿನಾಂಕ 14-12-2023
ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ವತಿಯಿಂದ ಪತ್ರಿಕಾ ಗೋಷ್ಠಿ
ನಮ್ಮ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ವತಿಯಿಂದ ಪತ್ರಿಕಾ ಗೋಷ್ಠಿಯನ್ನು ಕರೆದಿರುವ ಉದ್ದೇಶವೆನೆಂದರೇ, ಇದೇ ದಿನಾಂಕ 10-12-2023ರಂದು ಅರಮನೆ ಮೈದಾನದಲ್ಲಿ ನಡೆದ ನಮ್ಮ ಸಂಘದ ಅಮೃತ ಮಹೋತ್ಸವ ಹಾಗೂ ಈಡಿಗ, ಬಿಲ್ಲವ, ನಾಮದಾರಿ, ನಾಡಾರ್ ಸೇರಿದಂತೆ ಎಲ್ಲಾ 26 ಪಂಗಡಗಳ ಬೃಹತ್ ಜಾಗೃತ ಸಮಾವೇಶ ಕಾರ್ಯಕ್ರಮವು ಬಹಳ ವಿಜೃಂಬಣೆಯಿಂದ ನೆರವೇರಿತು. ಈ ಕಾರ್ಯಕ್ರಮದ ಅಭೂತ ಪೂರ್ವ ಯಶಸ್ವಿಗೆ ಕಾರಣರಾದ ಎಲ್ಲಾ ನಮ್ಮ ಕುಲಬಾಂಧವರಿಗೆ ಕೃತಜ್ಞತೆಗಳನ್ನು ಸಲ್ಲಿಸುವ ಸಲುವಾಗಿ ಈ ಪತ್ರಿಕಾ ಗೋಷ್ಟಿಯನ್ನು ಕರೆಯಲಾಗಿದೆ.
ನಮ್ಮ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ ಸ್ಥಾಪಿತಗೊಂಡು ಇಲ್ಲಿಗೆ 78ವರ್ಷಗಳಾಗಿವೆ ನಮ್ಮ ಸಮುದಾಯದ ಈಡಿಗ, ಬಿಲ್ಲವ, ನಾಮದಾರಿ, ದೀವರು, ಸೇರಿದಂತೆ 26 ಪಂಗಡಗಳ ಎಲ್ಲಾ ಕುಲಬಾಂಧವರನ್ನು ಒಟ್ಟುಗೂಡಿಸುವ ಇದೇ ವೇದಿಕೆಯಲ್ಲಿ ಸರ್ಕಾರಕ್ಕೆ ಹಲವಾರು ಬೇಡಿಕೆಗಳನ್ನು ಮಂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮೊದಲನೇಯದಾಗಿ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ಧರಾಮಯ್ಯನವರಿಗೆ ಹೃದಯ ಪೂರ್ವಕ ಕೃತಜ್ಞತೆಗಳು.
ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್‌ರವರಿಗೆ,
ಹಿಂದುಳಿದ ವರ್ಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರಾದ ಸನ್ಮಾನ್ಯ ಶ್ರೀ ಶಿವರಾಜ ತಂಗಡಗಿರವರಿಗೆ,
ನಮ್ಮ ಸಮಾಜದವರೇ ಆದ ಶಿಕ್ಷಣ ಮಂತ್ರಿಗಳು ಶ್ರೀ ಮಧುಬಂಗಾರಪ್ಪನವರಿಗೆ ನನ್ನ ಹೃದಯಪೂರ್ವಕ ವಂದನೆಗಳು.
ಚಲನಚಿತ್ರ ನಟರಾದ ಡಾ|| ಶಿವರಾಜ್ ಕುಮಾರ್ ರವರಿಗೆ, ಡೆಕ್ಕನ್ ಹೆರಾಲ್ಡ್ ನ ಜಂಟಿ ನಿರ್ದೇಶಕರಾದ ಶ್ರೀ ತಿಲಕ್‌ಕುಮಾರ್ ಹಾಗೂ ಎಲ್ಲಾ ಶಾಸಕರಿಗೂ ಮಾಜಿ ಶಾಸಕರು ಹಾಗೂ ಲೋಕಸಭಾಸದಸ್ಯರಿಗೂ, ಚಲನಚಿತ್ರ ನಟರಾದ ಶ್ರೀಮುರಳಿರವರಿಗೂ ಸಹ ನನ್ನ ಹೃದಯ ಪೂರ್ವಕ ಕೃತಜ್ಞತೆಗಳು.
ಕರ್ನಾಟಕ ರಾಜ್ಯದ ಅಕ್ಕಪಕ್ಕದ ರಾಜ್ಯದಿಂದ ಬಂದಿದ್ದಂತಹ ನಮ್ಮ ಸಮಾಜದ ಕುಲಬಾಂಧವರಿಗೆ, ರಾಜ್ಯದ ಜಿಲ್ಲಾ ಹಾಗೂ ತಾಲ್ಲೂಕು ಸಂಘಗಳಿಗೆ, ಈಡಿಗ ಹಾಗೂ 25 ಪಂಗಡಗಳ ನನ್ನ ಕುಲಬಾಂಧವರಿಗೆ ಕೃತಜ್ಞತೆಗಳು.
ವಿಶೇಷವಾಗಿ ನಮ್ಮ ಕರ್ನಾಟಕ ಮತ್ತು ಇತರೆ ರಾಜ್ಯಗಳ ಪತ್ರಿಕಾ ಹಾಗೂ ದೂರದರ್ಶನ ಮಾಧ್ಯಮಗಳಿಗೆ ಮತ್ತು ಸಾಮಾಜಿಕ ಜಾಲತಾಣಗಳಿಗೂ ನಮ್ಮ ಸಂಘ ಹೃದಯ ಪೂರ್ವಕ ಕೃತಜ್ಞತೆಗಳನ್ನು ಅರ್ಪಿಸುತ್ತದೆ.
ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ, ಈ ಕಾರ್ಯಕ್ರಮದಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಮತ್ತೊಮ್ಮೆ ನಮ್ಮ ಸಂಘದ ಪರವಾಗಿ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.
ನಾನು ನಮ್ಮ ಜನಾಂಗದ ಏಳಿಗೆಗಾಗಿ ತನು, ಮನ, ಧನದಿಂದ ಯಾವುದೇ ಪಲಾಪೇಕ್ಷೆಯನ್ನು ನಿರೀಕ್ಷಿಸದೇ ನನ್ನ ಕೈಲಾದ ಸೇವೆಯನ್ನು ಸಲ್ಲಿಸುತ್ತಿದ್ದೇನೆ. ಇದಕ್ಕಾಗಿ ನಾನು ಈಡಿಗ ಮತ್ತು 25 ಪಂಗಡಗಳ ಮುಖಂಡರನ್ನು ನಿರಂತರವಾಗಿ ಸಂಪರ್ಕದಲ್ಲಿ ಇಟ್ಟುಕೊಂಡಿದ್ದೇನೆ.
ದಿನಾಂಕ 10-12-2023ರಂದು ಅರಮನೆ ಮೈದಾನದಲ್ಲಿ ನಡೆಸಿದ ಸಮಾವೇಶದ ಉದ್ದೇಶವೇನೆಂದರೇ ನಮ್ಮ
ಸಮಾಜದಲ್ಲಿರುವ ನಮ್ಮದೇ ಸಮುದಾಯದ ಸ್ವಾಮೀಜಿಗಳನ್ನು ಮತ್ತು ನಮ್ಮ ಸಮಾಜದ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರನ್ನು ಮಾಜಿ ಲೋಕಸಭಾ ಸದಸ್ಯರು, ಹಾಲಿ ಮಂತ್ರಿಗಳು, ಹಾಲಿ ರಾಜ್ಯ ಸಭಾ ಸದಸ್ಯರು, ಮಾಜಿ ರಾಜ್ಯ ಸಭಾ ಸದಸ್ಯರು ಹಾಗೂ ಇತರೆ ರಾಜಕೀಯ ಮುಖಂಡರನ್ನು ಒಗ್ಗೂಡಿಸುವುದು ಇದರಲ್ಲಿ ಯಾವುದೇ ಸ್ವಾರ್ಥ ಒಂದಿಷ್ಟು ಇಲ್ಲ.
ಈ ಸಮಾವೇಶದ ಮುಖ್ಯ ಉದ್ದೇಶ ಈಗಾಗಲೇ ಘೋಷಣೆಯಾಗಿರುವ ಈಡಿಗ ಅಭಿವೃದ್ಧಿ ನಿಗಮಕ್ಕೆ ರೂ.500ಕೋಟಿಗಳ ಅನುದಾನವನ್ನು ಮೀಸಲಿಡುವುದು ಹಾಗೂ ಈಡಿಗ ಮತ್ತು 25 ಪಂಗಡಗಳು ಸೇರಿ ಹಲವು ಬೇಡಿಕೆಗಳನ್ನು ಸರ್ಕಾರದ ಮೂಲಕ ಪೂರೈಸಿಕೊಳ್ಳುವುದಕ್ಕಾಗಿ ಎಂದು ಈಗಾಗಲೇ ತಿಳಿಸಿರುತ್ತೇವೆ.
ನಮಗೆ ಸಮಯದ ಅಭಾವ ಇದ್ದಿದ್ದರಿಂದ ಹಾಗೂ ಸಮಾವೇಶದ ದಿನಾಂಕವು ಘೋಷಣೆಯಾಗಿದ್ದರಿಂದ ಸಂಘದ ವತಿಯಿಂದ ಹಲವಾರು ಪೂರ್ವಭಾವಿ ಸಿದ್ಧತೆಗಳನ್ನು ದಿನಾಂಕ 01-11-2023, 10-11-2023 ಹಾಗೂ ಜಿಲ್ಲಾ ಮಟ್ಟದಲ್ಲಿಯೂ ಸಹ ಪೂರ್ವಭಾವಿ ಸಭೆಗಳನ್ನು ನಡೆಸಲಾಗಿದೆ. ಈ ಸಮಾವೇಶದಲ್ಲಿ ಹೆಚ್ಚು ಜನರನ್ನು ಸಂಘಟಿಸುವ ಪ್ರಯತ್ನವನ್ನು ಮಾಡಿದೆವು. ಅದರಂತೆ ಎಲ್ಲಾ ಸಿದ್ಧತೆಗಳನ್ನು ಮಾಡುತ್ತಾ ಬಂದೆವು. ಸಮಾವೇಶದ ಸ್ಥಳವನ್ನು ನಿಗಧಿ ಪಡಿಸಿ, ಡಿ.ಪಿ.ಆರ್. ಅವರ ಆದೇಶದಂತೆ ಎಲ್ಲಾ ಸರ್ಕಾರಿ ಇಲಾಖೆಗಳ ಅನುಮತಿ ಪಡೆಯಲಾಯಿತು.
ನಮ್ಮ ಸಮಾಜದ ಸ್ವಾಮೀಜಿಗಳಾದ ಶ್ರೀಶ್ರೀಶ್ರೀ ವಿಖ್ಯಾತಾನಂದ ಸ್ವಾಮೀಜಿ, ಸೋಲುರು, ಶ್ರೀ ರೇಣುಕಾನಂದ ಸ್ವಾಮೀಜಿ, ನಿಟ್ಟೂರು, ಶ್ರೀ ಯೋಗೇಂದ್ರ ಅವದೂತರು, ಶ್ರೀ ಸತ್ಯಾನಂದ ಸ್ವಾಮೀಜಿಗಳು, ಶಿವಗಿರಿ.
ಶ್ರೀ ರಾಮಪ್ಪನವರು, ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಧರ್ಮದರ್ಶಿಗಳು ಹಾಗೂ ನಮ್ಮ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸದಸ್ಯರು ಮತ್ತು ಮುಖಂಡರುಗಳು ರಾಜ್ಯದ ಮೂಲೆ ಮೂಲೆಗಳಿಗೆ ಪ್ರವಾಸ ಮಾಡಿ ಸಮಾಜದ ಕುಲಬಾಂಧವರನ್ನು ಸಂಘಟಿಸಿದ ಪಲವಾಗಿ ಸಮಾವೇಶದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಸಮಾಜದ ಜನರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಆದರೇ ಸಮಯದ ಅಭಾವದಿಂದ ನಾವು ಹೆಚ್ಚಿನ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಲಿಲ್ಲ. ಸುಮಾರು ಮೂರರಿಂದ ನಾಲ್ಕು ಲಕ್ಷ ಜನರು ಈ ಕಾರ್ಯಕ್ರಮಕ್ಕೆ ಬರಲು ಸಿದ್ದರಿದ್ದರು ಅದರೇ ಸೂಕ್ತ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗದಿದ್ದರಿಂದ ಅವರುಗಳನ್ನು ತಡೆಯಬೇಕಾಯಿತು. ಇದಕ್ಕಾಗಿ ನಾನು ಸಮಾಜಬಾಂಧವರಲ್ಲಿ ಕ್ಷಮೆಯಾಚಿಸುತ್ತೇನೆ. ಆದರೂ ಸಮೀಕ್ಷೆಯ ಪ್ರಕಾರ ಸುಮಾರು 2 ಲಕ್ಷ (ಎರಡು ಲಕ್ಷ) ಜನರು ಈ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು ಎಂದು ಹೇಳಲಾಗುತ್ತಿದೆ.
ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘವು ನಿರಂತರವಾಗಿ ಈಡಿಗ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವ ಸಲುವಾಗಿ ಸುಮಾರು 15ವರ್ಷಗಳಿಂದ ಪ್ರಯತ್ನಿಸಲಾಗುತ್ತಿದೆ. ಅದರಂತೆ ಹಿಂದಿನ ಸರ್ಕಾರದ ಅವಧಿಯಲ್ಲಿ ಈಡಿಗ ಅಭಿವೃದ್ಧಿ ನಿಗಮವನ್ನು ಘೋಷಿಸಲಾಗಿದೆ. ಈಗ ಅನುದಾನವನ್ನು ನೀಡಬೇಕಾಗಿ ಬಿನ್ನವತ್ತಳೆಯಲ್ಲಿ ಸೇರಿಸಿ ಇನ್ನು ಹಲವಾರು ಬೇಡಿಕೆಗಳನ್ನು ಮಂಡಿಸಲಾಗಿದೆ.
ಈ ಸಮಾವೇಶದಲ್ಲಿ ಲಕ್ಷಾಂತರ ಕುಲಬಾಂಧವರನ್ನು ಒಂದೇ ಸೂರಿನಡಿಯಲ್ಲಿ ವಿಕ್ಷೀಸಿರುವ ಘನ ಸರ್ಕಾರ
ಬಿನ್ನವತ್ತಳೆಯಲ್ಲಿ ಮಂಡಿಸಿರುವ ಎಲ್ಲಾ ಬೇಡಿಕೆಗಳನ್ನು ನೆರವೇರಿಸಿಕೊಡುವುದೆಂದು ನನಗೆ ಸಂಪೂರ್ಣ
ನಂಬಿಕೆ ಇದೆ. ಈ ನಿಟ್ಟಿನಲ್ಲಿ ನಮ್ಮ ಸಮುದಾಯದ ಸ್ವಾಮೀಜಿಗಳು ಹಾಗೂ ಸಮಾಜದ ಮುಖಂಡರು
ನಿರಂತರವಾಗಿ ಸರ್ಕಾರದ ಸಂಪರ್ಕದಲ್ಲಿದ್ದು ಬೇಡಿಕೆಗಳು ಈಡೇರಿಸಲು ಹೋರಾಟ ಮಾಡುತ್ತೇವೆ. ಕೊನೆಯದಾಗಿ ಸಮಾವೇಶಕ್ಕೆ ಇತರ ರಾಜ್ಯಗಳಿಂದ ನಮ್ಮ ಆಹ್ವಾನವನ್ನು ಸ್ವೀಕರಿಸಿ ಬಂದಿದ್ದಂತಹ ನಮ್ಮ ಸಮಾಜದ ಗಣ್ಯವ್ಯಕ್ತಿಗಳಾದ ಶ್ರೀ ಗೋಕುಲಮ್ ಗೋಪಾಲನ್, ಗೋಕುಲಮ್ ಚಿಟ್ಸ್, ಚೆನೈ, ಶ್ರೀ ವೈಕುಂಠರಾಜ್ (ನಾಡಾರ್), ವಿ.ವಿ. ಮಿನರಲ್ಸ್, ಚೈನೈ.
ಶ್ರೀ ಮನೋಜ್ ಕನ್ಯಾಕುಮಾರಿ,
ಶ್ರೀ ಮುಕುಂದರಾಜ್
ಈ ಬೃಹತ್ ಸಮಾವೇಶವು ಅಭೂತಪೂರ್ವ ಯಶಸ್ಸು ಕಾಣಲು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಸಕಲರಿಗೂ ಮತ್ತೊಮ್ಮೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು ಎಂದು ಡಾ|| ಎಂ.ತಿಮ್ಮೇಗೌಡ ಅಧ್ಯಕ್ಷರು & ಹೆಚ್.ಟಿ. ಮೋಹನ್‌ದಾಸ್ ಪ್ರಧಾನ ಕಾರ್ಯದರ್ಶಿ ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮ ಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದಿಂದ್ರಾಚಾರ್ಯರ ಮಾರ್ಗದರ್ಶನ ಹಾಗೂ ಧರ್ಮಾಧಿಕಾರಿಗಳಾದ ಜಿ,ಕೆ ಆಚಾರ್ಯರ ನೇತೃತ್ವದಲ್ಲಿ “ಲೋಕ-ಕಲ್ಯಾಣಕ್ಕಾಗಿ” ಕಾರ್ತಿಕ ಮಾಸದ ಲಕ್ಷ ದೀಪೋತ್ಸವದ ಕಾರ್ಯಕ್ರಮವು ವಿಶೇಷವಾಗಿ ನೆರವೇರಿತು ಎಂದು ಶ್ರೀ ನಂದಕಿಶೋರ ಆಚಾರ್ಯರು ತಿಳಿಸಿದರು ಈ ಸಂದರ್ಭದಲ್ಲಿ ಸೇವಾಕರ್ತೃಗಳ ಹಾಗೂ ಭಕ್ತರ ಹೆಸರು ಗೋತ್ರ ನಕ್ಷತ್ರ ರಾಶಿ ಸಂಕಲ್ಪದೊಂದಿಗೆ “ಲೋಕ- ಕಲ್ಯಾಣಕ್ಕಾಗಿ”ಪ್ರಾರ್ಥಿಸಿ ಅರ್ಚಕರ ಮುಖೇನ ಸಂಕಲ್ಪಿಸಿ ಭಕ್ತಾದಿಗಳು ರಾಯರ ಪ್ರಕಾರದ ಸುತ್ತಲೂ ದೀಪಗಳನ್ನು ಬೆಳಗಿಸುವ ಮುಖಾಂತರ ಈ ಪೂಜಾ ಸಮಯದಲ್ಲಿ ಭಾಗವಹಿಸಿದ ಶ್ರೀಮಠದ ಸಿಬ್ಬಂದಿಗಳು ಭಕ್ತರು ಶಿಷ್ಯರು ಸೇವಾ ಕರ್ತೃಗಳು ಫಲ ಮಂತ್ರಾಕ್ಷತೆಯನ್ನು ಹಾಗೂ ಪ್ರಸಾದವನ್ನು ಸ್ವೀಕರಿಸಿ ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು,
03.12.2023 ರಂದು ವಿಶೇಷ ವಿಶ್ವ ವಿಕಲ ಚೇತನರ ದಿನಚಾರಣೆಯಾಗಿದ್ದು ಮಹಾಲಕ್ಷ್ಮೀಲೇಔಟ್ ನಲ್ಲಿರುವ ಶ್ರೀ ಸಂಜೀವಿನಿ ಫೌಂಡೇಷನ್ ಹಾಗೂ ಮಹಾಲಕ್ಷ್ಮೀ ಎಜುಕೇಷನಲ್ ಟ್ರಸ್ಟ್ ಸೇರಿ ಕಾಲ್‌ನಡಿಗೆ (Walka Thon) ಕಾರ್ಯಕ್ರಮವನ್ನು ಬೆಳಗ್ಗೆ 7.00 ಘಂಟೆಯಿಂದ 10.00 ಘಂಟೆಯವರೆಗೂ ಕಾಲ್‌ನಡಿಗೆ ಕಾರ್ಯಕ್ರಮವನ್ನು ಮಹಾಲಕ್ಷ್ಮಿ ಲೇಔಟ್ (ಕಮಲಮ್ಮನ ಗುಂಡಿ) ರಾಣಿ ಅಬ್ಬಕ್ಕ ಕ್ರೀಡಾಂಗಣದಿಂದ ನಡೆದು – 1ನೇ ಬ್ಲಾಕ್ ಸರ್ವಿಸ್ ರಸ್ತೆ – ಸ್ವಾತಿ ಹೋಟೆಲ್ ರಸ್ತೆ – ಮೋದಿ ಆಸ್ಪತ್ರೆ ರಸ್ತೆ – ಶಂಕರಮಠ ರಸ್ತೆ – ಸ್ವಾಮಿ ವಿವೇಕಾನಂದ ಕ್ರೀಡಾಂಗಣದಲ್ಲಿ ಸಮಾಗಮಾ ಮಾಡುತ್ತೇವೆ ಇದರ ಉದ್ಘಾಟಣಾ ಕಾರ್ಯಕ್ರಮವನ್ನು ಮಾಜಿ ಸಚಿವರು ಹಾಲಿ ಶಾಸಕರು ಮಹಾಲಕ್ಷ್ಮೀ ಲೇಔಟ್, ವಿಧಾನಸಭಾ ಕ್ಷೇತ್ರದ ಸನ್ಮಾನ್ಯ ಕೆ.ಗೋಪಾಲಯ್ಯ ನವರು ಉದ್ಘಾಟಿಸಲಿದ್ದಾರೆ.
“2ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಸಂಜೀವಿನಿ ವಿಕಲ ಕಲಾ ಸಂಭ್ರಮ ಕಾರ್ಯಕ್ರಮವನ್ನು ದಿನಾಂಕ:16-12-2023 ರಂದು ಬೆಳಗ್ಗೆ 8.00 ಘಂಟೆಯಿಂದ ಸಂಜೆ 5.00 ಘಂಟೆಯವರೆಗೂ ಕ್ರಿಕೆಟ್ ಆಟ ಮತ್ತು ಕೆಲವೊಂದು ಕ್ರೀಡಾ ಸ್ಪರ್ಧೆಗಳನ್ನು ವಿಕಲಚೇತನರಿಗೆ ಆಯೋಜಿಸಲಾಗಿದೆ. ದಿನಾಂಕ:17-12-2023 ರಂದು ಬೆಳಗ್ಗೆ 10.00 ಘಂಟೆಯಿಂದ ಮಧ್ಯಾಹ್ನ 2.00 ಘಂಟೆಯವರೆಗೂ ವಿಶೇಷ ವಿಕಲಚೇತನ ಬುದ್ಧಿ ಮಾಂಧ್ಯ ಮಕ್ಕಳಿಗೆ ಕೆಲವೊಂದು ಚಿತ್ರಕಲಾ ಸ್ಪರ್ಧೆ ಮತ್ತು ದೈಹಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ದಿನಾಂಕ:17-12-2023 ರಂದು ಸಂಜೆ 4.00 ಘಂಟೆಯಿಂದ ರಾತ್ರಿ 10.00 ಘಂಟೆಯವರೆಗೂ ಕೆಲವೊಂದು ಮನರಂಜನಾ ಕಾರ್ಯಕ್ರಮಗಳನ್ನು ವಿಶೇಷ ವಿಕಲ ಚೇತನರನ್ನು ರಂಜಿಸಲು ಆಯೋಜಿಸಲಾಗಿದೆ. ಮತ್ತು ಕರ್ನಾಟಕದ್ಯಾಂತ ಎಲ್ಲಾ ರಂಗದಲ್ಲಿ ಸಾಧನೆ ಮಾಡಿರುವ ವಿಶೇಷ ಚೇತನರಿಗೆ ಮತ್ತು ಸಮಾಜದ ಏಳಿಗೆಗೆ ದುಡಿದ ಸಾಧಕರಿಗೆ ಸಂಜೀವಿನಿ ರತ್ನ ಪ್ರಶಸ್ತಿ ಎಂಬ ಹೆಸರಿನ ಪ್ರಶಸ್ತಿಯನ್ನು ಕೊಡಲಾಗುವುದು. ಮುಂದಿನ ದಿನಗಳಲ್ಲಿ ಅವರಿಗೆ ಸಂಬಂಧಪಟ್ಟ ಕೆಲಸ ಕಾರ್ಯಗಳಲ್ಲಿ ನಮ್ಮ ಸಂಸ್ಥೆ ಸದಾ ಭಾಗಿಯಾಗಿರುತ್ತದೆ.
ಈ ಸಮಾರಂಭಕ್ಕೆ ಭಾಗವಹಿಸಲಿರುವ ಮುಖ್ಯ ಅತಿಥಿಗಳಿಂದ ಸಾಧಕರಿಗೆ ಸನ್ಮಾನ ಮತ್ತು ಪ್ರಶಸ್ತಿ ವಿತರಿಸಲಾಗುವುದು ಹಾಗೂ ಈ ಸಮಾರಂಭಕ್ಕೆ ಆಗಮಸಲಿರುವ ಸದಾ ಸಮಾಜದ ಏಳಿಗೆಗಾಗಿ ದುಡಿಯುತ್ತಿರುವ ಗಣ್ಯರಿಗೆ ಈ ಸಮಾರಂಭಕ್ಕೆ ಅಹ್ವಾನ ಶ್ರೀ ಸಂಜೀವಿನಿ ಫೌಂಡೇಷನ್ ಅಧ್ಯಕ್ಷರು ಮತ್ತು ಪಧಾದಿಕಾರಿಗಲು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ತಿಳಿಸಿದರು.
“ರಾಯರ ಸನ್ನಿಧಿಯಲ್ಲಿ ಯತಿಗಳ ಸಮಾಗಮ” ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿ ಪತಿಗಳಾದ ಪರಮ ಪೂಜ್ಯ ಶ್ರೀ 108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಹಾಗೂ ಶ್ರೀ 108 ಶ್ರೀ ಹರಿ ಹರ ಪುರ ಮಠದ ಸ್ವಯಂ ಪ್ರಕಾಶ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮಿಗಳು ಹಾಗೂ ಬಾಳಗಾರು ಅಕ್ಷೂಭ್ಯ ತೀರ್ಥ ಮಠದ 108 ಶ್ರೀ ರಾಮಪ್ರಿಯತೀರ್ಥ ಸ್ವಾಮಿಗಳು, ಸೋಸಲೆ ವ್ಯಾಸರಾಜ ಮಠದ ಶ್ರೀ 108ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮಿಗಳು ಹಾಗೂ ಶ್ರೀ108 ಶ್ರೀ ವಿದ್ಯಾ ವಿಜಯ ತೀರ್ಥ ಸ್ವಾಮಿಗಳು ಬೆಂಗಳೂರಿನ ಜಯನಗರ ರಾಯರ ಮಠದಲ್ಲಿ ರಾಯರ ಬೃಂದಾವನವನ್ನು ದರ್ಶಿಸಿ ನಂತರ ಮಂತ್ರಾಲಯ ಶ್ರೀಗಳ ಜೊತೆಯಲ್ಲಿ ಸಮಾಗಮದೊಂದಿಗೆ ಭಕ್ತರಿಗೆ ಅನುಗ್ರಹ ಸಂದೇಶ ನೀಡಿದರು, ಈ ಸಂದರ್ಭದಲ್ಲಿ ಪಂಡಿತ ಕೇಸರಿ ರಾಜಾ, ಎಸ್ ಗಿರಿ ಆಚಾರ್ಯರು ,ಸುಧೀಂದ್ರ ಆಚಾರ್ಯ, ಗೌತಮ ಆಚಾರ್ಯ, ಕೆ ವಾದಿಂದ್ರಾ ಚಾರ್ಯ, ಐ ಪಿ, ನರಸಿಂಹಮೂ ರ್ತಿ ಆಚಾರ್ಯ ಶ್ರೀ ನಂದಕಿಶೋರ್ ಆಚಾರ್ಯ, ಡಿ,ಪಿ ಅನಂತ ಆಚಾರ್ಯ, ಪುರಾಣಿಕ್ ಅನಂತ ಆಚಾರ್ಯ ಹಾಗೂ ಶ್ರೀಮಠದ ಸಿಬ್ಬಂದಿಗಳು ಶಿಷ್ಯರು ಭಕ್ತರು ಇನ್ನು ಹಲವಾರು ಗಣ್ಯರು ಭಾಗವಹಿಸಿದ್ದರು.
You must be logged in to post a comment.