ಲೋಕಸಭೆ ಚುನಾವಣೆ ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡದಿರುವುದು ಬಂಜಾರಾ ಸಮಾಜಕ್ಕೆ ಅನ್ಯಾಯ

ಲೋಕಸಭೆ ಚುನಾವಣೆ ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡದಿರುವುದು ಬಂಜಾರಾ ಸಮಾಜಕ್ಕೆ ಅನ್ಯಾಯ

ಕಾಂಗ್ರೆಸ್ ನಾಯಕರು ಬಂಜಾರಾ ಸಮಾಜದ ಪ್ರಾತಿನಿಧ್ಯ ಕುರಿತು, ಮರು ಪರಿಶೀಲನೆ ಮಾಡಲು ಮನವಿ

ರಾಜ್ಯದಲ್ಲಿ 45 ಲಕ್ಷಕ್ಕೂ ಅಧಿಕ ಬಂಜಾರ ಜನಸಂಖ್ಯೆ ಇದ್ದು ಕನಿಷ್ಠ 14 ಲೋಕಸಭಾ ಕ್ಷೇತ್ರಗಳಲ್ಲಿ ನಮ್ಮ ಸಮುದಾಯದ ಮತಗಳು ನಿರ್ಣಾಯಕ, ಸಾಮಾಜಿಕ ನ್ಯಾಯದಡಿ ರಾಜ್ಯದ 5 ಮೀಸಲು ಲೋಕಸಭೆ ಕ್ಷೇತ್ರಗಳಲ್ಲಿ ಅತೀ ಹೆಚ್ಚಿನ ಲಂಬಾಣಿ ಜನಸಂಖ್ಯೆ ಹಾಗೂ 2.5 ಲಕ್ಷಕ್ಕೂ ಹೆಚ್ಚು ಮತಗಳಿರುವ ವಿಜಯಪುರ ಮೀಸಲು ಕ್ಷೇತ್ರಕ್ಕೆ ಕಳೆದ 3 ದಶಕಗಳಿಂದ ಅಂದರೆ ಸತತವಾಗಿ 4 ಬಾರಿ ಬಂಜಾರ ಅಭ್ಯರ್ಥಿಗಳಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡಲಾಗಿತ್ತು. ವಿಜಯಪುರ ಮೀಸಲು ಕ್ಷೇತ್ರ ಬಂಜಾರ ಸಮಾಜಕ್ಕೆ ಬಂಜಾರ ಕೋಟಾ ಅಂತಾನೆ ಟಿಕೆಟ್ ನೀಡಲಾಗುತ್ತಿತ್ತು. ಆದರೆ ಈ ಬಾರಿ ನಮ್ಮ ಸಮಾಜಕ್ಕೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡದೆ ನಮ್ಮ ಸಮಾಜಕ್ಕೆ ಆಘಾತವನ್ನುಂಟು ಮಾಡಿದೆ. ಬಂಜಾರ ಸಮುದಾಯವನ್ನು ಬಿ.ಜೆ.ಪಿ ಸರ್ಕಾರ ನ್ಯಾಯಮೂರ್ತಿ ಸದಾಶಿವ ಆಯೋಗದ ಒಳಮೀಸಲಾತಿಯನ್ನು ಘೋಷಣೆ ಮಾಡಿ ಸರ್ಕಾರವನ್ನೇ ಕಳೆದುಕೊಂಡ ವಿಚಾರ ರಾಜ್ಯದ ಜನತೆಗೆ ಗೊತ್ತಿದೆ.

ಇದನ್ನು ಅರಿತು ಕಾಂಗ್ರೆಸ್ ರಾಜ್ಯ ನಾಯಕರು ಹಾಗೂ ಕಾಂಗ್ರೆಸ್ ಹೈಕಮಾಂಡ್ ಕೂಡಲೆ ನಮ್ಮ ಸಮಾಜಕ್ಕೆ ಟಿಕೆಟ್ ನೀಡುವುದರ ಕುರಿತು ಪಕ್ಷ ತಪ್ಪದೆ ಮರುಪರಿಶೀಲನೆ ಮಾಡಿ ಸ್ಥಳೀಯ ಗೆಲ್ಲುವ ಸಾಮರ್ಥ್ಯವುಳ್ಳ ಮಾಜಿ ಶಾಸಕರಾದ ಶ್ರೀ ಮನೋಹರ ಐನಾಪೂರ ರವರಿಗೆ ಟಿಕೆಟ್ ನೀಡಿ ಸಮಾಜಕ್ಕೆ ನ್ಯಾಯ ಕೊಡಲು ಸಮಸ್ತ ಬಂಜಾರ ಜನಾಂಗ ಕಾಂಗ್ರೆಸ್ ಪಕ್ಷವನ್ನು ಒತ್ತಾಯಿಸುತ್ತದೆ ಎಂದು ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘದ ಅಧ್ಯಕ್ಷ ಹಾಗೂ ಮಾಜಿ ಸಚಿವೆ ಶ್ರೀಮತಿ ಬಿ.ಟಿ.ಲಲಿತಾ ನಾಯಕ್ ರವರು ಕಾಂಗ್ರೆಸ್ ‘ಪಕ್ಷವನ್ನು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರುಗಳಾದ ಶ್ರೀ ಸಿದ್ಯಾನಾಯಕ್, ಶ್ರೀ ಅಶ್ವತ್ ನಾಯಕ್, ಶ್ರೀ ಪಿ.ಕೆ.ಖಂಡೋಬ, ಶ್ರೀ ಸುಬ್ರಮಣ್ಯ ನಾಯಕ್, ಶ್ರೀ ಶಂಕರ್ ನಾಯಕ್, ಶ್ರೀ ನರಸಿಂಹ ನಾಯಕ್, ಡಾ॥ಪರಮೇಶ್ ನಾಯಕ್ ಹಾಗೂ ಮಾಜಿ ಶಾಸಕರಾದ ಶ್ರೀ ಮನೋಹರ ಐನಾಪೂರ ಉಪಸ್ಥಿತರಿದ್ದರು.

City Today News 9341997936

ಕರ್ನಾಟಕ ರೆಡ್ಡಿ ಜನಸಂಘದ 2024-2026 ನೇ ಸಾಲಿನ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಎಸ್ ಜಯರಾಮರೆಡ್ಡಿ ಆಯ್ಕೆ.

ಬೆಂಗಳೂರು: ಕರ್ನಾಟಕ ರೆಡ್ಡಿ ಜನಸಂಘದ 2024-2026 ನೇ ಸಾಲಿನ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಎಸ್ ಜಯರಾಮರೆಡ್ಡಿ, ಉಪಾಧ್ಯಕ್ಷರುಗಳಾಗಿ  ಡಿ.ಎನ್. ಲಕ್ಷ್ಮಣ ರೆಡ್ಡಿ, ಕೆ.ಎನ್. ಕೃಷ್ಣಾರೆಡ್ಡಿ, ವಿ. ವೆಂಕಟಶಿವಾರೆಡ್ಡಿ, ಪ್ರಧಾನ ಕಾರ್ಯದರ್ಶಿಯಾಗಿ ಎನ್. ಶೇಖರ್ ರೆಡ್ಡಿ, ಜಂಟಿ ಕಾರ್ಯದರ್ಶಿಗಳಾಗಿ ಎನ್. ಸೋಮಶೇಖರ್ ರೆಡ್ಡಿ, ಕೆ. ಆರ್. ನಾಗರಾಜ ರೆಡ್ಡಿ, ಖಜಾಂಚಿಯಾಗಿ ಎಂ. ಚಂದ್ರಾರೆಡ್ಡಿ, ಸದಸ್ಯರಾಗಿ ಎ.ಎಂ. ಶ್ರೀನಿವಾಸ ರೆಡ್ಡಿ ರವರು ಆಯ್ಕೆಯಾಗಿದ್ದಾರೆ.

City Today News 9341997936

Young Star Empowerment Party candidates are contesting in the Lok Sabha elections in 28 districts of the state.

Young Star Empowerment Party candidates are contesting in the Lok Sabha elections in 28 districts of the state.  And the young star from the party has initiated the distribution of certificates to the voters.



Young Star Empowerment Party (YEP) – Young Star Hope (Young Star Bharat)

Young Star Empowerment Party has YEP in many parts of the country in the upcoming Lok Sabha elections.  Candidates are contesting from the party.  I am also contesting as a candidate.

Young Star Empowerment Party – Manifesto (Young Star Promise)

1) Young Star Bharat Kharjse Azadi Yojana

2) Young Star Bharat School Fee Azadi Yojana, Young Star Bharat Kharjase Azadi Yojana Many poor families have taken any kind of loan, financial institutes, banks and N.B.F.C.  Any type of loan received from companies including personal loan, group loan, gold loan, home loan, mortgage loan, vehicle loan and any other type of loan up to 5 lakh rupees will be waived through the Young Star promises of Young Star Empowerment Party.



Young Star Bharat School Fee Azadi Yojana : Studying in private schools and colleges

There is no need for parents to pay the school fees of the students because free education is a right of all of us according to the constitution.  But since school fees are very high in private schools and colleges, Young Star Empowerment Party can get free education for students studying in any schools and colleges up to the fee of 2 lakh rupees through the Young Star Bharat School Fee Azadi Yojana through the promise of Young Star.  Shahbaz Khan told at  press conference which was held at the Press Club of Bangalore.

City Today News 9341997936

ರಾಜ್ಯದ 28 ಜಿಲ್ಲೆಯಲ್ಲಿ ಲೋಕ ಸಭಾ ಚುನಾವಣೆಯಲ್ಲಿ “ಯಂಗ್‌ ಸ್ವಾರ್ ಎಂಪವರ್‌ಮೆಂಟ್ ಪಾರ್ಟಿಯ” ಅಭ್ಯರ್ಥಿಗಳ ಸ್ಪರ್ಧೆ

ರಾಜ್ಯದ 28 ಜಿಲ್ಲೆಯಲ್ಲಿ ಲೋಕ ಸಭಾ ಚುನಾವಣೆಯಲ್ಲಿ ಯಂಗ್‌ ಸ್ವಾರ್ ಎಂಪವರ್‌ಮೆಂಟ್ ಪಾರ್ಟಿ ಯ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಹಾಗೂ ಪಕ್ಷದಿಂದ ಯಂಗ್ ಸ್ಟಾರ್ ಬರವಸೆಯನ್ನು ಮತದಾರರಿಗೆ ಪ್ರಮಾಣ ಪತ್ರ ವಿತರಣೆಗೆ ಚಾಲನೆ ನೀಡಿದೆ.

ಯಂಗ್‌ ಸ್ಟಾ‌ರ್ ಎಂಪವರ್‌ಮೆಂಟ್ ಪಕ್ಷ (ವೈ.ಇ.ಪಿ.) – ಯಂಗ್‌ ಸ್ಟಾರ್ ಭರವಸೆ (ಯಂಗ್ ಸ್ಟಾರ್ ಭಾರತ್)

ಯಂಗ್‌ಸ್ಟಾ‌ರ್ ಎಂಪವರ್‌ಮೆಂಟ್ ಪಕ್ಷ ಈ ಬಾರಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ದೇಶದೆಲ್ಲೆಡೆ ಹಲವು ಕಡೆ ವೈ.ಇ.ಪಿ. ಪಕ್ಷದಿಂದ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಅದರಲ್ಲಿ ನಾನೂ ಕೂಡ ಒಬ್ಬ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ.

ಯಂಗ್‌ ಸ್ಟಾ‌ರ್ ಎಂಪವರ್‌ಮೆಂಟ್ ಪಕ್ಷ – ಪ್ರಣಾಳಿಕೆ (ಯಂಗ್‌ ಸ್ಟಾರ್ ಭರವಸೆ)

1) ಯಂಗ್‌ ಸ್ಟಾರ್ ಭಾರತ್ ಖರ್‌ಜ್‌ಸೆ ಆಜಾದಿ ಯೋಜನೆ

2) ಯಂಗ್‌ ಸ್ಟಾರ್ ಭಾರತ್ ಸ್ಕೂಲ್ ಫೀಸ್ ಆಜಾದಿ ಯೋಜನೆ,ಯಂಗ್‌ ಸ್ಟಾ‌ರ್ ಭಾರತ್ ಖರ್‌ಜಸೆ ಆಜಾದಿ ಯೋಜನೆಯಿಂದ ಹಲವು ಬಡ ಕುಟುಂಬಗಳು ಯಾವುದೇ ರೀತಿಯ ಸಾಲ ಪಡೆದಿದ್ದರೂ ಸಹ, ಫೈನಾನ್‌ಶಿಯಲ್ ಇನ್ಸ್‌ಟಿಟ್ಯೂಟ್, ಬ್ಯಾಂಕ್ ಹಾಗೂ ಎನ್.ಬಿ.ಎಫ್.ಸಿ. ಕಂಪನಿಗಳಿಂದ ಪಡೆದಿರುವ ಯಾವುದೇ ರೀತಿಯ ಪರ್ಸನಲ್ ಲೋನ್, ಗ್ರೂಪ್ ಲೋನ್, ಗೋಲ್ಡ್ ಲೋನ್, ಹೋಮ್ ಲೋನ್, ಮಾರ್ಟಿಗೇಜ್ ಲೋನ್, ವೆಹಿಕಲ್ ಲೋನ್ ಸೇರಿದಂತೆ ಇನ್ನಿತರ ಯಾವುದೇ ರೀತಿಯ ಸಾಲವಿದ್ದರೂ ಕೂಡ 5 ಲಕ್ಷ ರೂಪಾಯಿಗಳ ವರೆಗೆ ಯಂಗ್‌ ಸ್ಟಾರ್ ಎಂಪವರ್‌ಮೆಂಟ್ ಪಕ್ಷದ ಯಂಗ್‌ಸ್ಟಾರ್ ಭರವಸೆಗಳ ಮುಖಾಂತರ ಸಾಲ ಮನ್ನಾ ಮಾಡಿಸಲಾಗುವುದು.

ಯಂಗ್‌ ಸ್ಟಾರ್ ಭಾರತ್ ಸ್ಕೂಲ್ ಫೀಸ್ ಆಜಾದಿ ಯೋಜನೆ : ಖಾಸಗಿ ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ

ವಿದ್ಯಾರ್ಥಿ – ವಿದ್ಯಾರ್ಥಿನಿಯರ ಶಾಲಾ ಶುಲ್ಕವನ್ನು ತಂದೆ ತಾಯಿಯವರು ಕಟ್ಟುವ ಅವಶ್ಯಕತೆ ಇರುವುದಿಲ್ಲ ಯಾಕೆಂದರೆ ಉಚಿತ ಶಿಕ್ಷಣ ಪಡೆದುಕೊಳ್ಳುವುದು ಸಂವಿಧಾನದ ಪ್ರಕಾರ ನಮ್ಮೆಲ್ಲರ ಹಕ್ಕಾಗಿರುತ್ತದೆ. ಆದರೆ ಖಾಸಗಿ ಶಾಲಾ ಕಾಲೇಜುಗಳಲ್ಲಿ ಶಾಲೆಯ ಶುಲ್ಕ ಅತಿ ಹೆಚ್ಚಾಗಿರುವುದರಿಂದ ಯಂಗ್‌ ಸ್ಟಾರ್ ಎಂಪವರ್‌ಮೆಂಟ್ ಪಕ್ಷವು ಯಂಗ್‌ ಸ್ಟಾರ್ ಭರವಸೆ ಮುಖಾಂತರ ಯಂಗ್‌ಸ್ಟಾರ್ ಭಾರತ್ ಸ್ಕೂಲ್ ಫೀಸ್ ಆಜಾದಿ ಯೋಜನೆಯಿಂದ ಯಾವುದೇ ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ 2 ಲಕ್ಷ ರೂಪಾಯಿಗಳ ಶುಲ್ಕದವರೆಗೆ ಉಚಿತ ವಿದ್ಯಾಭ್ಯಾಸವನ್ನು ಪಡೆಯಬಹುದಾಗಿರುತ್ತದೆ ಎಂದು ಬೆಂಗಳೂರು ಕೇಂದ್ರ ಮತ್ತು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ .ಎಂ. ಶಹಬಾಜ್ ಖಾನ್ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

City Today News 9341997936

ಯುವ ಮುಸ್ತದಿ ನಾಯಕನಾದ ಶ್ರೀ ನಟರಾಜ್ ಡಿ.ಎನ್ ರವರಿಗೆ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ಮತ್ತು ಮಾನ್ಯ ಉಪಮುಖ್ಯಮಂತ್ರಿಗಳು ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಡಿ.ಕೆ ಶಿವಕುಮಾರ್ ರವರು ಚಾಮರಾಜನಗರದ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡುವ ಕುರಿತು.

ಚಾಮರಾಜನಗರದ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿಯಾದ ಕಾಂಗ್ರೆಸ್ ಪಕ್ಷದ ಯುವ ಮುಸ್ತದಿ ನಾಯಕನಾದ ಶ್ರೀ ನಟರಾಜ್ ಡಿ.ಎನ್ ರವರಿಗೆ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ಮತ್ತು ಮಾನ್ಯ ಉಪಮುಖ್ಯಮಂತ್ರಿಗಳು ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಡಿ.ಕೆ ಶಿವಕುಮಾರ್ ರವರು ಚಾಮರಾಜನಗರದ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡುವ ಕುರಿತು.

ಶ್ರೀ ನಟರಾಜ್ ಡಿ.ಎನ್ ರವರು ಚಾಮರಾಜನಗರ ಜಿಲ್ಲೆಯ ಸಂತೆಮಾರನಹಳ್ಳಿ ಹೋಬಳಿ, ದೇಶವಳ್ಳಿ ಗ್ರಾಮದ ಸಾಮಾನ್ಯ ಕುಟುಂಬದಲ್ಲಿ 1974ರಲ್ಲಿ ಜನಿಸಿದ ಇವರು ಯಾವುದೇ ರಾಜಕೀಯ ಹಿನ್ನೆಲೆಯನ್ನು ಹೊಂದಿದವರಲ್ಲ. ಇವರು ಮೈಸೂರು ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳಲ್ಲಿ M.Sc,.M.Ed, M.Phil,. ಉನ್ನತ ಪದವಿಗಳನ್ನು ಪಡೆದಿದ್ದು, ವಿದ್ಯಾರ್ಥಿ ಜೀವನದಿಂದಲೇ ಶಿಸ್ತು ಬದ್ಧ ಜೀವನವನ್ನು ಮೈಗೂಡಿಸಿಕೊಂಡು ಪ್ರಗತಿಪರ, ರೈತರ, ದಮನಿತರ ವಿದ್ಯಾರ್ಥಿಪರ ಹೋರಾಟಗಳನ್ನು ಮಾಡಿಕೊಂಡು ವಿದ್ಯಾರ್ಥಿ ನಾಯಕನಾಗಿ ಮೈಸೂರು ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳಲ್ಲಿ ತನ್ನದೇ ಆದ ಚಾಪನ್ನು ಮೂಡಿಸಿಕೊಂಡು ಬಂದಿರುತ್ತಾರೆ.

2004-05ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಬಿ.ಎಡ್ ಪದವೀಧರ ವೇದಿಕೆಯನ್ನು ಹುಟ್ಟು ಹಾಕುವ ಮೂಲಕ ವೇದಿಕೆಯ ರಾಜ್ಯಾಧ್ಯಕ್ಷರಾಗಿ ಹಲವಾರು ವಿದ್ಯಾರ್ಥಿ ಹೋರಾಟಗಳ ಮೂಲಕ ಸರ್ಕಾರದ ಗಮನವನ್ನು ಸೆಳೆಯುತ್ತಾ ಬಿ.ಎಡ್ ಪದವೀಧರ ಅಶೋತ್ತರಗಳಿಗೆ ಮತ್ತು ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಾ, ಸರ್ಕಾರದ ಹಂತಗಳಲ್ಲಿ ಹಲವಾರು ನೇಮಕಾತಿ ವಿಷಯ ಕುರಿತಂತೆ ಬೆಂಗಳೂರು ಮತ್ತು ವಿವಿಧ ಜಿಲ್ಲೆಗಳಲ್ಲಿ ತನ್ನದೇ ಆದ ವೇದಿಕೆಯ ಹೋರಾಟಗಳನ್ನು ರೂಪಿಸುವ ಮೂಲಕ ಸರ್ಕಾರ ಮತ್ತು ಶಿಕ್ಷಣ ಇಲಾಖೆಯ ಗಮನವನ್ನು ಸೆಳೆದು ಹಲವಾರು ನಿರುದ್ಯೋಗಿ ಬಿ.ಎಡ್ ಪದವೀಧರರಿಗೆ ಅನುಕೂಲವಾಗುವಂತೆ ವಿವಿಧ ಶಿಕ್ಷಣ ಇಲಾಖೆಗಳ ನೇಮಕಾತಿ ಅಧಿಸೂಚನೆಯನ್ನು ಹೊರ ಬೀಳುವಂತೆ ಮಾಡಿ ಉದ್ಯೋಗಗಳನ್ನು ಕಲ್ಪಿಸಿಕೊಳ್ಳುವ ನಿಟ್ಟಿನಲ್ಲಿ ತನ್ನದೇ ಆದ ವಿಶಿಷ್ಟ ಕೊಡುಗಳನ್ನು ನೀಡಿದ್ದಾರೆ.

ಈ ರೀತಿ ವಿದ್ಯಾರ್ಥಿ ದೆಸೆಯಿಂದಲೂ ನಾಯಕನಾಗಿ ಮತ್ತು ಕರ್ನಾಟಕ ರಾಜ್ಯ ಬಿ.ಎಡ್ ಪದವೀಧರ ವೇದಿಕೆಯ ಅಧ್ಯಕ್ಷರಾಗಿದ್ದ ಇವರನ್ನು ಗುರುತಿಸಿದ ರಾಜ್ಯ ಮತ್ತು ರಾಷ್ಟ್ರದ ಗಮನ ಸೆಳೆದಿರುವ ನಾಡಿನ ದೊರೆ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು 2006ರಲ್ಲಿ ಶ್ರೀ ನಟರಾಜ್ ಡಿ.ಎನ್ ರವರಿಗೆ ಬೆಂಗಳೂರು ಪದವೀಧರ ಕ್ಷೇತ್ರದ ಟಿಕೆಟ್ ನೀಡಿ ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಇಳಿಸುವ ಮೂಲಕ ಇವರ ರಾಜಕೀಯ ಪ್ರವೇಶಕ್ಕೆ ಮುನ್ನುಡಿ ಬರೆದಿದ್ದಾರೆ. ಹೀಗೆ ಶ್ರೀ ನಟರಾಜ್ ಡಿ.ಎನ್ ರವರು ರಾಜಕೀಯ ಪ್ರವೇಶ ಪಡೆದ ದಿನದಿಂದಲೂ ಇಲ್ಲಿಯವರೆಗೂ ಬೆಂಬಲ ಮತ್ತು ಮಾರ್ಗದರ್ಶನವನ್ನು ಮಾಡುತ್ತಾ ಬಂದಿರುವ ಸನ್ಮಾನ್ಯ ಶ್ರೀ ಸತೀಶ್ ಜಾರಕಿಹೊಳಿಯವರು ಮತ್ತು ಅಂಬೇಡ್ಕರ್ ವಾದಿಗಳಾದ ಶ್ರೀ ಎಚ್. ಸಿ ಮಾದೇವಪ್ಪನವರು. ಚಾಮರಾಜನಗರದ ಅಭಿವೃದ್ಧಿಯ ಹರಿಕಾರರಾದ ದಿವಂಗತ ಶ್ರೀ ಎಚ್ ಸಿ ಮಹದೇವ ಪ್ರಸಾದ್ ಮತ್ತು ದಿವಂಗತ ಶ್ರೀ ಧ್ರುವನಾರಾಯಣ್ ರವರ ಮಾರ್ಗದರ್ಶನದಲ್ಲಿ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಸಕ್ರಿಯ ರಾಜಕಾರಣದಲ್ಲಿ ಸುಮಾರು ಎರಡು ದಶಕಗಳ ಸುಧೀರ್ಘ ಅನುಭವವುಳ್ಳ ವ್ಯಕ್ತಿಯಾಗಿದ್ದಾರೆ. ಹಾಗೆಯೇ ಯಾವುದೇ ರಾಜಕೀಯ ಸ್ಥಾನಮಾನವಿಲ್ಲದಿದ್ದರೂ ಕಾಂಗ್ರೆಸ್ ಪಕ್ಷದ ಶಿಸ್ತು ಬದ್ಧ ಕಾರ್ಯಕರ್ತನಾಗಿ ರಾಜ್ಯಮಟ್ಟದಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿರುತ್ತಾರೆ.

2009ರ ಬೈ ಎಲೆಕ್ಷನ್ 2013 ಮತ್ತು 2018ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಗಳಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಕ್ಕೆ ಪ್ರಬಲ ಟಿಕೆಟ್ ಅಕಾಂಕ್ಷಿಯಾಗಿ ಹೋರಾಟ ನಡೆಸಿರುತ್ತಾರೆ. ಪಕ್ಷ ಟಿಕೆಟ್ ನೀಡದಿದ್ದಾಗ ಪಕ್ಷ ಟಿಕೆಟ್ ನೀಡಿದ ಅಭ್ಯರ್ಥಿಗಳ ಪರ ಅವರ ಗೆಲುವಿಗಾಗಿ ದುಡಿದಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊಳ್ಳೇಗಾಲ ಕ್ಷೇತ್ರದ ಪ್ರಸ್ತುತ ಮಾನ್ಯ ಶಾಸಕರಾದ ಎಚ್.ಆರ್ ಕೃಷ್ಣಮೂರ್ತಿ ಅವರ ಗೆಲುವಿಗಾಗಿ ಮುಂಚೂಣಿಯಲ್ಲಿ ನಿಂತು ಗೆಲುವನ್ನು ತಂದು ಕೊಡುವುದರಲ್ಲಿ ಇವರ ಪಾತ್ರ ಪ್ರಮುಖವಾಗಿರುತ್ತದೆ.

ಈ ರೀತಿ ಸುಮಾರು 20 ವರ್ಷಗಳ ಸುದೀರ್ಘ ರಾಜಕೀಯ ಅನುಭವವುಳ್ಳ, ಒಬ್ಬ ನಿಷ್ಠಾವಂತ ಯುವ ಕಾಂಗ್ರೆಸ್ ನಾಯಕರಾದ ಶ್ರೀ ನಟರಾಜ್ ಡಿ.ಎನ್ ರವರಿಗೆ ಚಾಮರಾಜನಗರದ ಲೋಕಸಭಾ ಮೀಸಲು ಕ್ಷೇತ್ರಕ್ಕೆ ಟಿಕೆಟ್ ನೀಡುವ ಮೂಲಕ ಒಬ್ಬ ಯುವ ದಲಿತ ಮುಖಂಡನನ್ನು ಕಾಂಗ್ರೆಸ್ ಲೋಕಸಭೆಗೆ ಕಳಿಸುವ ಮೂಲಕ ಮತ್ತೊಂದು ಇತಿಹಾಸಕ್ಕೆ ನಾಂದಿಯಾಗುವಂತೆ ಮಾಡಬೇಕೆಂದು ಕರ್ನಾಟಕ ರಾಜ್ಯ ಶಿಕ್ಷಣ ವೇದಿಕೆ ಇವರ ಶಿಕ್ಷಣ ಕ್ಷೇತ್ರ ಕಾಳಜಿ, ರೈತರ ಬಗ್ಗೆ ಹೊಂದಿರುವ ಕಾಳಜಿ, ಸಮಾಜದ ದೀನದಲಿತರ ಬಗ್ಗೆ ಇರುವ ಅಪಾರ ಕಾಳಜಿಯನ್ನು ಗುರುತಿಸಿ ಇಂತಹ ಯುವ ಶಕ್ತಿಯ ಬೆಳವಣಿಗೆಗೆ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಮತ್ತು ಮಾನ್ಯ ಮುಖ್ಯಮಂತ್ರಿಗಳು ಅನುವು ಮಾಡಿಕೊಡಬೇಕೆಂದು ಶಿಕ್ಷಣ ವೇದಿಕೆಯು ಈ ಪತ್ರಿಕಾ ಹೇಳಿಕೆಯ ಮೂಲಕ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ.

ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಗೆ ಇವರ ಆದ್ಯತೆಗಳು:

ಶ್ರೀ ನಟರಾಜ್ ಡಿ. ಎನ್ ರವರು ಸ್ವತಹ ಚಾಮರಾಜನಗರ ಜಿಲ್ಲೆಯಾವರಾಗಿರುವುದರಿಂದ ಜಿಲ್ಲೆಯ ವಾಸ್ತವ ಚಿತ್ರಣವನ್ನು ಮತ್ತು ಜನರ ನಾಡಿಮಿಡಿತವನ್ನು ಅರಿತವರಾಗಿದ್ದು, ಈ ಜಿಲ್ಲೆ ಗಡಿನಾಡು ಜಿಲ್ಲೆಯಾಗಿರುವುದರಿಂದ ಇಲ್ಲಿನ ಭಾಷೆ ಮತ್ತು ಸಾಂಸ್ಕೃತಿಗೆ ಧಕ್ಕೆಯಾಗದ ರೀತಿ ಮತ್ತು ಗೂಳೆ ಹೋಗದ ರೀತಿ ಕ್ರಮವಹಿಸಿ. ಜಿಲ್ಲೆಯ ಎ.ಪಿ.ಎಂ.ಸಿ ಮಾರುಕಟ್ಟೆ ಅಭಿವೃದ್ಧಿಗೊಳಿಸುವುದು ಇವರ ಪ್ರಮುಖ ಆದ್ಯತೆಯಾಗಿದೆ. ಜೊತೆಗೆ ವ್ಯಾಪಾರ ವಹಿವಾಟಿನಲ್ಲಿ ಚಾಮರಾಜನಗರ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾಗಿದ್ದು ಅಂತರ್ ರಾಜ್ಯಗಳ ಪ್ರಭಾವಕ್ಕೆ ಒಳಗಾಗಿ ವಲಸೆ ಹೋಗುವುದನ್ನು ತಪ್ಪಿಸಿ ಅವರ ಬದುಕಿಗಾಗಿ ಪರ್ಯಾಯ ಜೀವನ ಮಾರ್ಗೋಪಾಯಗಳನ್ನು ಕೊಂಡುಕೊಳ್ಳುವುದರ ಜೊತೆಗೆ ಈ ಜಿಲ್ಲೆಗೆ ಹೈದರಾಬಾದ್ ಕರ್ನಾಟಕಕ್ಕೆ ಕೊಟ್ಟಂತಹ 371J ವಿಧಿಯನ್ನು ನಮ್ಮ ಜಿಲ್ಲೆಗೆ ನೀಡುವಂತೆ ಮಾಡುವುದು ಇವರ ಮತ್ತೊಂದು ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ.

ಹಾಗೆಯೇ ಶಿಕ್ಷಣ, ಉದ್ಯೋಗ, ರೈತರ ಪರ ಯೋಜನೆಗಳನ್ನು ಅನುಷ್ಠಾನ, ಮೂಲಭೂತ ಸೌಕರ್ಯಗಳು, ರಾಜ್ಯ ಮತ್ತು ರಾಷ್ಟ್ರದ ಹೆದ್ದಾರಿಗಳ ಉನ್ನತೀಕರಣ, ಜಾನಪದ ಕಲೆ, ಸಾಹಿತ್ಯ, ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವುದು. ಕೈಗಾರಿಕಾ ವಲಯಕ್ಕೆ ಉತ್ತೇಜನ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಕೃಷಿ ಆದ್ಯತೆ ಕಾವೇರಿ ನೀರಿನ ಸದ್ಬಳಕ ಹಾಗೂ ಪರಿಸರ ಸಂರಕ್ಷಣೆ ಮೂಲಕ ಚಾಮರಾಜನಗರ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ದುಡಿಯುವುದು ಇವರ ಪ್ರಮುಖ ಕನಸುಗಳಲ್ಲಿ ಒಂದಾಗಿದೆ ಎಂದು ವೇದಿಕೆಯ ವತಿಯಿಂದ ತಿಳಿಸಲಾಯಿತು.

ಪತ್ರಿಕಾ ಗೋಷ್ಠಿ ಯಲ್ಲಿ,ವೇದಿಕೆಯ ನಾಯಕರುಗಳಾದ ಗಂಗಧಾರಾಮೂರ್ತಿ, ನವರತ್ನ ಕುಮಾರ್, ಚಂದ್ರು, ಪ್ರಸಾದ್, ನಾಗರಾಜು ಮತ್ತು ದರ್ಶನ್ ಉಪಸ್ಥಿತರಿದ್ದರು.

City Today News 9341997936