ಸಮಾಜಿಕ ನ್ಯಾಯದ ಪರವಾಗಿ ಮಾತನಾಡುವ ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಾದರೂ ಈ ಕೆಳಕಂಡ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ವಾಲ್ಮೀಕಿ ನಾಯಕ ಸಮಾಜ ಬೇರೆ ರೀತಿಯಲ್ಲಿ ಯೋಚಿಸ ಬೇಕಾಗುತ್ತದೆ.

ಕರ್ನಾಟಕ ರಾಜ್ಯದ ಒಟ್ಟಾರೆ ಜನಸಂಖ್ಯೆಯಲ್ಲಿ ಸುಮಾರು 7% (50 ಲಕ್ಷ) ಜನಸಂಖ್ಯೆ ವಾಲ್ಮೀಕಿ ಸಮಾಜದ್ದಾಗಿರುತ್ತದೆ.

ಸ್ವಾತಂತ್ರ್ಯದ ಹೋರಾಟದಲ್ಲಿ ವಾಲ್ಮೀಕಿ ಸಮಾಜದ ವೀರಸಿಂದೂರ ಲಕ್ಷ್ಮಣ, ಹಲಗಲಿ ಬೇಡರು, ಸುರಪುರದ ವೆಂಕಟಪ್ಪ ನಾಯಕ ಮುಂತಾದ ಅನೇಕರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣಾರ್ಪಣೆ ಮಾಡಿದಂತ ಮಹಾನ್ ದೇಶಭಕ್ತ ಸಮಾಜ. ಸ್ವಾತಂತ್ರ್ಯದ ನಂತರವು ಸ್ವಾತಂತ್ರ ಕೆಲವೇ ಕೆಲವು ಸಮಾಜಗಳಲ್ಲಿ ವಾಲ್ಮೀಕಿ ನಾಯಕ ಸಮಾಜವು ಮುಂಚೂಣಿಯಲ್ಲಿ ನಿಲ್ಲುತ್ತದೆ. ಆದರೆ ಈ ಸಮಾಜಕ್ಕೆ ನ್ಯಾಯಯುತವಾಗಿ ಸಿಗಬೇಕಾಗಿರುವ ಸ್ಥಾನ ಮಾನಗಳು ಸಿಕ್ಕಿಲ್ಲ. ಉದಾಹರಣೆಗೆ ಕಳೆದ 75 ವರ್ಷಗಳಲ್ಲಿ ನಾಯಕ ಸಮಾಜದ ಒಬ್ಬನೇ ಒಬ್ಬ ಪ್ರತಿನಿಧಿಯನ್ನು ರಾಜ್ಯಸಭೆಗೆ ಕಳುಹಿಸಲಿಲ್ಲ. ಇದು ಈ ಸಮಾಜಕ್ಕೆ ತೋರಿರುವ ಅಗೌರವವೆಂದೇ ಭಾವಿಸಬೇಕಾಗುತ್ತದೆ. ಅದು ಏನೇ ಇರಲಿ ಸಮಾಜಿಕ ನ್ಯಾಯದ ಪರವಾಗಿ ಮಾತನಾಡುವ ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಾದರೂ ಈ ಕೆಳಕಂಡ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ವಾಲ್ಮೀಕಿ ನಾಯಕ ಸಮಾಜ ಬೇರೆ ರೀತಿಯಲ್ಲಿ ಯೋಚಿಸಬೇಕಾಗುತ್ತದೆ, ಎಂದು ಎಚ್ಚರಿಸಬಯಸುತ್ತೇವೆ.

ಬೇಡಿಕೆಗಳು:

1) ಮುಂದಿನ ಅವಧಿಗಾದರೂ ನಾಯಕ ಜನಾಂಗದ ವಿಚಾರವಂತರೊಬ್ಬರನ್ನು ರಾಜ್ಯ ಸಭೆಗೆ ಕಳುಹಿಸಬೇಕು.

2) ಕೂಡಲೇ ರಾಜ್ಯದಲ್ಲಿ ಮಹರ್ಷಿ ವಾಲ್ಮೀಕಿಯವರ ಹೆಸರಿನಲ್ಲಿ “ಮಹರ್ಷಿ ವಾಲ್ಮೀಕಿ ಗುಡ್ಡುಗಾಡು ವಿಶ್ವವಿಧ್ಯಾನಿಲಯ”ವನ್ನು ಸ್ಥಾಪನೆ ಮಾಡಿ, ಅದರಲ್ಲಿ ಮೆಡಿಕಲ್, ಇಂಜಿನಿಯರಿಂಗ್, ಕಾನೂನು, ನರ್ಸಿಂಗ್ ಮುಂತಾದ ವೃತ್ತಿಪರ ಕೋರ್ಸುಗಳನ್ನು ಪ್ರಾರಂಭಿಸಿ ಶೇಕಡ 50 ರಷ್ಟು ಸೀಟುಗಳನ್ನು ಪರಿಶಿಷ್ಟ ಪಂಗಡವರಿಗೆ ಉಳಿದ ಶೇಕಡ 50 ಸೀಟುಗಳನ್ನು ಇತರರಿಗೆ ನೀಡಲು ಕ್ರಮ ಜರುಗಿಸಬೇಕು. ಇದಕ್ಕೆ ಪ್ರತಿ ವರ್ಷ ಒಂದು ಒತ್ತಾಯಿಸುತ್ತೇವೆ. ಸಾವಿರ ಹಣವನ್ನು ಕೋಟಿ ಮೀಸಲಿಡಬೇಕೆಂದು

3) ವಿಧಾನ ಸೌಧದ ಪಶ್ಚಿಮ ದ್ವಾರದಲ್ಲಿರುವ ವಾಲ್ಮೀಕಿ ತಪೋವನದಲ್ಲಿ ವಾಲ್ಮೀಕಿ ರಾಮಾಯಣದ ಸಂದೇಶಗಳನ್ನು ಅಲ್ಲಿರುವ ಕಲ್ಲು ಕೆತ್ತನೆಮಾಡಿಸಬೇಕು. ಬಂಡೆಗಳ ಮೇಲೆ

4) ವಾಲ್ಮೀಕಿ ರಾಮಾಯಣದ ಕನ್ನಡ ಅವೃತ್ತಿಯನ್ನು ರಾಜ್ಯದ ಎಲ್ಲಾ ಕಾಲೇಜುಗಳ ಗ್ರಂಥಾಲಯಗಳಲ್ಲಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು. ಶಾಲಾ

5) ಪರಿಶಿಷ್ಟ ಪಂಗಡದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ವಿದ್ಯಾರ್ಥಿ ವೇತನ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು.

6) ಕರ್ನಾಟಕ ಲೋಕಸೇವಾ ಆಯೋಗಕ್ಕೆ ವಾಲ್ಮೀಕಿ ಸಮಾಜದ ವಿಚಾರವಂತ ವ್ಯಕ್ತಿಯೊಬ್ಬರನ್ನು ಸದಸ್ಯರನ್ನಾಗಿ ಕೂಡಲೇ ನೇಮಕ ಮಾಡಬೇಕೆಂದು ಒತ್ತಾಯಿಸುತ್ತೇವೆ.

7) ರಾಜ್ಯದ ನಿಗಮ ಮಂಡಳಿಗಳಲ್ಲಿ ಕನಿಷ್ಟ 10 ಜನರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಹಾಗೂ ಶೇಕಡ 7 ರಷ್ಟು ಸದಸ್ಯರುಗಳನ್ನು ನಿಗಮ, ಮಂಡಳಿಗಳಲ್ಲಿ ನೇಮಕ ಮಾಡಬೇಕು.

8) ಬೀದರ್‌ನಿಂದ ಚಾಮರಾಜನಗರದವರೆಗಿನ (ಬೀದರ್, ಗುಲಬರ್ಗ, ಯಾದಗಿರಿ,

ರಾಯಚೂರು, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು ಮತ್ತು ಚಾಮರಾಜನಗರ) ರಾಷ್ಟ್ರೀಯ ಹೆದ್ದಾರಿಯನ್ನು ಮಹರ್ಷಿ ವಾಲ್ಮೀಕಿ ರಾಷ್ಟ್ರೀಯ ಹೆದ್ದಾರಿಯೆಂದು ಘೋಷಣೆ ಮಾಡಿ ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಒತ್ತಾಯಿಸುತ್ತೇವೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಕಾರ್ಯಕಾರಿ ಸಮಿತಿಯ ಪರವಾಗಿ ಎಂ.ನರಸಿಂಹಯ್ಯ ಅಧ್ಯಕ್ಷರು ತಿಳಿಸಿದರು.

City Today News 9341997936

ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ ಕನಿಷ್ಠ ನಾಲ್ಕು ಕ್ಷೇತ್ರಗಳಲ್ಲಾದರೂ 2ಎ ಸಣ್ಣ-ಪುಟ್ಟ ಜಾತಿಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕು.

ಭಾರತೀಯ ಜನತಾ ಪಾರ್ಟಿಯ ಹಿರಿಯ ಗಮನಕ್ಕೆ ತಮ್ಮ ಮೂಲಕ ಮನವಿ ಮಾಡಿಕೊಳ್ಳುತ್ತಿರುವುದೇನೆಂದರೆ ಸಾಮಾಜಿಕ ನ್ಯಾಯಕ್ಕೆ, ನ್ಯಾಯ ಒದಗಿಸುವ ಕೆಲಸವನ್ನು ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಮಾಡುತ್ತಿದ್ದಾರೆ. ನರೇಂದ್ರ ಮೋದಿಯವರು ಹಿಂದುಳಿದ ಸಮಾಜವಾದ ತೇಲಿ (ಗಾಣಿಗ) ಸಮಾಜಕ್ಕೆ ಸೇರಿದವರಾಗಿದ್ದು, ದೇಶದ ಅತ್ಯುನ್ನತ ಹುದ್ದೆಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಸಹಿಸದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮೋದಿಯವರ ಜಾತಿಯನ್ನು ಅವಹೇಳನ ಮಾಡಿ ಸುಳ್ಳು ಹೇಳಿ ಮತದಾರರ ದಾರಿ ತಪ್ಪಿಸುತ್ತಿರುವ ಕಾರ್ಯವನ್ನು ಇಡೀ ಹಿಂದುಳಿದ ವರ್ಗಗಳ ಸಮಾಜ ಖಂಡಿಸುತ್ತದೆ. ಅಹಿಂದ ಹೆಸರು ಹೇಳಿಕೊಂಡು ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ಪಕ್ಷ ಈಗ ಬರೀ ಅ-ಅಲ್ಪಸಂಖ್ಯಾತರ ಪರವಾದ ಪಕ್ಷವಾಗಿದ್ದು, ಹಿಂದುಳಿದ ಮತ್ತು ದಲಿತರನ್ನು ತುಳಿಯುವ ಪಕ್ಷವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರೆ ತಪ್ಪಾಗಲಾರದು.

ಕರ್ನಾಟಕ ರಾಜ್ಯದಲ್ಲಿ ಅತೀ ಹಿಂದುಳಿದ ಮತ್ತು ವರ್ಗದ ಮತದಾರರ ಸಂಖ್ಯೆ ಶೇ. 56ಕ್ಕೂ ಹೆಚ್ಚಿದೆ. ಆದರೆ ರಾಜ್ಯದಲ್ಲಿರುವ 28 ಲೋಕಸಭಾ ಕ್ಷೇತ್ರಗಳಲ್ಲಿ ಒಂದು ಕ್ಷೇತ್ರದಲ್ಲಿ ಮಾತ್ರ ಪ್ರವರ್ಗ-1ರ ಪ್ರತಿನಿಧಿ ಇದ್ದು, ಪ್ರವರ್ಗ-2ಎ ಅಡಿಯಲ್ಲಿ ಸುಮಾರು 103 ಸಣ್ಣ-ಪುಟ್ಟ ಜಾತಿಗಳು ಇದ್ದು, ಇವುಗಳಲ್ಲಿ ಬಹುತೇಕ ಜಾತಿಗಳಿಗೆ ರಾಜಕೀಯ ಪ್ರಾತಿನಿಧ್ಯವಾಗಲಿ, ಸಾಂವಿಧಾನಿಕ ಅಧಿಕಾರವಾಗಲಿ, ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವಾಗಲಿ ಸಿಕ್ಕೇ ಇಲ್ಲ. ಈ ವರ್ಗಗಳು ಬರೀ ಮತದಾನ ಮಾಡುವ ಹಕ್ಕನ್ನು ಮಾತ್ರ ಪಡೆದುಕೊಂಡಿದ್ದು, ಚುನಾವಣೆಯಲ್ಲಿ ಸ್ಪರ್ಧಿಸುವ ಸಾಮಾಜಿಕ ನ್ಯಾಯದ ಅಡಿಯಲ್ಲಿ ಸಾಂವಿಧಾನಾತ್ಮಕ ಸ್ಥಾನಮಾನ ಪಡೆಯುವ ಅವಕಾಶದಿಂದ ವಂಚಿತವಾಗಿದೆ. ಇವು ಬಹುಪಾಲು ಕಾಯಕ ಸಮಾಜಗಳಿಗೆ ಸೇರಿದ್ದು, ಸಾವಿರಾರು ವರ್ಷಗಳಿಂದ ತಮ್ಮ ಕುಲಕಸುಬನ್ನು ನಂಬಿ ಬದುಕನ್ನು ನಡೆಸುತ್ತಿದ್ದು, ಮೇಲ್ವರ್ಗದ ಮತ್ತು ಬಲಾಡ್ಯ ವರ್ಗದ ಸೇವೆಗಳನ್ನು ಮಾಡುತ್ತಾ ರಾಜಕೀಯ ಅವಕಾಶದಿಂದ ವಂಚಿತರಾಗಿದ್ದಾರೆ.

ಆದ್ದರಿಂದ ಈ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ ಕನಿಷ್ಠ ನಾಲ್ಕು ಕ್ಷೇತ್ರಗಳಲ್ಲಾದರೂ 2ಎ ಸಣ್ಣ-ಪುಟ್ಟ ಜಾತಿಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕೆಂದು ಈ ಮೂಲಕ ನಾವು ಒತ್ತಾಯ ಮಾಡುತ್ತಿದ್ದೇವೆ. ಹಣವಂತ ಬಲಿಷ್ಠರ ಮಧ್ಯೆ ಗುಣವಂತ ಬಡವರು ಸಹ ಈ ಪ್ರವರ್ಗದಲ್ಲಿ ವಿದ್ಯಾವಂತ ಪದವೀಧರರು ಇದ್ದು, ಬೆಂಗಳೂರು ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್‌ ಚುನಾವಣೆಗೆ ಭಾರತೀಯ ಜನತಾ ಪಾರ್ಟಿಯಿಂದ ಸ್ಪರ್ಧಿಸಬೇಕೆಂದು ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ಶ್ರೀ ನಂಜುಂಡ ಪ್ರಸಾದ್‌ರವರು ಆಸಕ್ತಿ ಹೊಂದಿದ್ದು, ಸದರಿಯವರು 2ಎ ವಿಶ್ವಕರ್ಮ ಸಮುದಾಯಕ್ಕೆ ಸೇರಿದವರಾಗಿರುತ್ತಾರೆ. ಸದರಿಯವರಿಗೂ ಭಾರತೀಯ ಜನತಾ ಪಾರ್ಟಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕೊಡುವ ಮೂಲಕ ಸಾಮಾಜಿಕ ನ್ಯಾಯವನ್ನು ನೀಡಬೇಕೆಂದು ಈ ಮೂಲಕ ಒತ್ತಾಯ ಮಾಡುತ್ತಿದ್ದೇನೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ನೆ.ಲ. ನರೇಂದ್ರ ಬಾಬು ಅಧ್ಯಕ್ಷರು ಮತ್ತು ಮಾಜಿ ಶಾಸಕರು ತಿಳಿಸಿದರು.

City Today News 9341997936

ಲೋಕಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷದ ವತಿಯಿಂದ ತುಮಕೂರು ಜಿಲ್ಲಾ ಕ್ಷೇತ್ರಕ್ಕೆ ಸನ್ಮಾನ್ಯ ಶ್ರೀ ಮಾಧುಸ್ವಾಮಿ ಜೆ.ಸಿ. ರವರಿಗೂ ಮತ್ತು ಹಾವೇರಿ ಜಿಲ್ಲಾ ಕ್ಷೇತ್ರಕ್ಕೆ ಶ್ರೀ ಸಂದೀಪ್ ಪಾಟೀಲ್ ರವರಿಗೂ ಎಂ.ಪಿ. ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ಮಾಡಿಕೊಡಲು ಮನವಿ

ಮುಂಬರುವ ಲೋಕಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷದ ವತಿಯಿಂದ ತುಮಕೂರು ಜಿಲ್ಲಾ ಕ್ಷೇತ್ರಕ್ಕೆ ಸನ್ಮಾನ್ಯ ಶ್ರೀ ಮಾಧುಸ್ವಾಮಿ ಜೆ.ಸಿ. ರವರಿಗೂ ಮತ್ತು ಹಾವೇರಿ ಜಿಲ್ಲಾ ಕ್ಷೇತ್ರಕ್ಕೆ ಶ್ರೀ ಸಂದೀಪ್ ಪಾಟೀಲ್ ರವರಿಗೂ ಎಂ.ಪಿ. ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ಕೋರುವ ಬಗ್ಗೆ:

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕದಾದ್ಯಂತ 14 ಜಿಲ್ಲೆಗಳಲ್ಲಿ ಸುಮಾರು 25 ರಿಂದ 30 ಲಕ್ಷ ಮತದಾರರಿರುವ ನಮ್ಮ ಸಮಾಜದ ಆಶಯವೇನೆಂದರೆ,

ತುಮಕೂರು ಲೋಕಸಭಾ ಕ್ಷೇತ್ರವನ್ನು ನಮ್ಮ ಸಮಾಜಕ್ಕೆ ಸೇರಿದ ದಿ। ಶ್ರೀ ಎಸ್. ಮಲ್ಲಿಕಾರ್ಜುನಯ್ಯನವರು ಮತ್ತು ಶ್ರೀ ಜಿ.ಎಸ್‌. ಬಸವರಾಜುರವರು ಪ್ರತಿನಿಧಿಸುತ್ತಿದ್ದರು. ಹಾಲಿ ಸಂಸದರಾದ ಶ್ರೀ ಜಿ.ಎಸ್. ಬಸವರಾಜುರವರು ಅನಾರೋಗ್ಯದ ನಿಮಿತ್ತ ಸ್ಪರ್ಧಿಸಲು ನಿರಾಕರಿಸಿರುತ್ತಾರೆ. ಆದುದರಿಂದ ಸಮಾಜದ ಪ್ರತಿನಿಧಿಯಾದ,

ನಿಕಟ ಪೂರ್ವ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಸಣ್ಣ ನೀರಾವರಿ ಸಚಿವರು, ಒಳ್ಳೆ ಸಂಸದೀಯ ಪಟು ವಾಳ್ಮೆಗಳು, ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ ಕೆರೆ, ಕಟ್ಟೆಗಳಿಗೆ ನೀರನ್ನು ಹರಿಸಿ ಅಚ್ಚ ಹಸಿರಾಗಿಸಿರುವ ಕೀರ್ತಿ ಪಡೆದವರು, ನಿಷ್ಠಾವಂತ 

ಸಮಾಜ ಸೇವಕರು, ಪಕ್ಷದ ಶಿಸ್ತಿನ ಸಿಪಾಯಿಗಳು, ಜಾತ್ಯಾತೀತರು ಹಾಗು ಜನ ಸಾಮಾನ್ಯರಿಗೆ ಹತ್ತಿರರಾಗಿರುವ ಶ್ರೀ ಜೆ.ಸಿ. ಮಾಧುಸ್ವಾಮಿ ರವರಿಗೆ

ಹಾಗೂ

ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟಿನ ಖ್ಯಾತ ವಕೀಲರು, ಯುವ ನಾಯಕರು, ವಾತ್ಮಗಳು, ಉತ್ಸಾಹ ಶೀಲ ತರುಣರು, ಸಂಘಟನಾ ಚತುರರು, ಸಮಾಜ ಸೇವಕರು, ಪಕ್ಷದ ನಿಷ್ಠಾವಂತ ಕಾರ್ಯಕರ್ತರು, ಹಾವೇರಿ ಜಿಲ್ಲೆಯ ಜನಾನುರಾಗಿಗಳಾಗಿ ಜನ-ಮನದಲ್ಲಿ ಹೆಸರಾಗಿರುವ ಹಾಗೂ ಹೆಸರಾಂತ ಕಾನೂನು ತಜ್ಞರಾದ ಶ್ರೀ ಸಂದೀಪ್ ಪಾಟೀಲ್ ರವರಿಗೂ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಜಿಲ್ಲೆ ಮತ್ತು ಹಾವೇರಿ ಜಿಲ್ಲೆಯಿಂದ ಎಂ.ಪಿ. ಅಭ್ಯರ್ಥಿಯಾಗಿ ಸ್ಪರ್ಧಿಸಲು ತಾವು ಅವಕಾಶ ಮಾಡಿಕೊಡಲು ಈ ಮೂಲಕ ನೊಳಂಬ ಲಿಂಗಾಯತ ಸಂಘದಿಂದ ಹಾಗೂ ಸಮಾಜ ಬಾಂಧವರ ಪರವಾಗಿ ತಮ್ಮಲ್ಲಿ ಹೃದಯ ಪೂರ್ವಕವಾಗಿ ಮನವಿ ಮಾಡಿಕೊಳ್ಳುತ್ತೇವೆ ಎಂದು ಎಸ್.ಆರ್. ಪಾಟೀಲ್‌) ಅಧ್ಯಕ್ಷರು ನೊಳಂಬ ಲಿಂಗಾಯತ ಸಂಘ (ರಿ) ಬೆಂಗಳೂರು  ರವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

Cuty Today News 9341997936

ಮಲೆನಾಡು ಕರಾವಳಿ ಬಗ್ಗೆ ಕಾಳಜಿ ಇರುವ ರಾಜ್ಯ ಕಾಂಗ್ರೆಸ್ ವಕ್ತಾರರಾದ ಸುಧೀರ್ ಕುಮಾರ್ ಮುರೊಳ್ಳಿ ಅವರಿಗೆ ಈ ಬಾರಿ ಲೋಕಸಭಾ ಟಿಕೆಟ್ ನೀಡುವಂತೆ ಮನವಿ.

ನಮ್ಮ ಮಲೆನಾಡು ಕರಾವಳಿ ಜನಪರ ಒಕ್ಕೂಟವು ಕಳೆದ 15 ವರ್ಷಗಳಿಂದ ಮಲೆನಾಡಿನ ಹಲವಾರು ಸಮಸ್ಯೆಗಳ ಕುರಿತು ಹೋರಾಟ ರೂಪಿಸಿ ಸರ್ಕಾರದ ಗಮನ ಸೆಳೆಯುತ್ತ ಬಂದಿದೆ. ಆದರೆ ನಮ್ಮ ಹೋರಾಟಗಳು ಸರಕಾರದ ಕಿವಿಗೆ ಬೀಳದೆ ಇನ್ನೂ ಕೂಡ ನಮ್ಮ ಸಮಸ್ಯೆಗಳು ಹಾಗೆಯೇ ಉಳಿದೆವೆ. ಸಂಸತ್‌ ನಲ್ಲಿ ಮಲೆನಾಡು ಕರಾವಳಿ ಜನರ ಧ್ವನಿಯನ್ನು ಕಳೆದು ಕೊಂಡಿದ್ದೇವೆ. ಒಂದು ರೀತಿ ನಾವು ತಬ್ಬಲಿಗಳಾಗುತ್ತಿದ್ದೇವೆ. ಈ ನಿಟ್ಟಿನಲ್ಲಿ ನಮ್ಮ ಮಲೆನಾಡು ಕರಾವಳಿಯ ಸಮಸ್ಸೆಗಳ ಬಗ್ಗೆ ಸಮಗ್ರವಾಗಿ ಅಧ್ಯಯನ ನಡೆಸಿರುವ ಹಾಗೂ ಇಲ್ಲಿಯ ಸ್ಥಳೀಯ ಸಮಸ್ಯೆಗಳಿಗೆ ಹೋರಾಟ ನಡೆಸುತ್ತಿರುವ ಸ್ವತಃ ಪ್ರಖ್ಯಾತ ವಕೀಲರು ಆಗಿರುವ ಹಾಗೂ ಸಾರ್ವಜನಿಕ ಆಡಳಿತದಲ್ಲಿ ತೇರ್ಗಡೆ ಹೊಂದಿರುವ ಹಾಗೂ ಪ್ರಸ್ತುತ ರಾಜ್ಯ ಕಾಂಗ್ರೆಸ್ ವಕ್ತಾರರೂ ಆಗಿರುವ ಸುಧೀರ್ ಕುಮಾರ್ ಮುರೊಳ್ಳಿ ಯವರಿಗೆ ಈ ಬಾರಿ ಅವರ ಪಕ್ಷದಿಂದ ಟಿಕೆಟ್ ನೀಡಬೇಕು. ಚಿಕ್ಕಮಗಳೂರು ಹಾಗೂ ಉಡುಪಿ ಜಿಲ್ಲೆಯಲ್ಲಿ ಬಹು ಪರಿಚಿತರು, ಬಹು ದೊಡ್ಡ ಯುವಕರ ಪಡೆಯನ್ನೇ ಹೊಂದಿದ್ದು, ಎದುರಾಳಿಗೆ ತಕ್ಕ ಉತ್ತರ ನೀಡಲು ಸಮರ್ಥರಿದ್ದಾರೆ. ಇವರನ್ನು ಗೆಲ್ಲಿಸಿ ಸಂಸತ್‌ಗೆ ಕಳುಹಿಸುವುದರಿಂದ ನಮ್ಮ ಸಮಸ್ಯೆಗಳ ಪರವಾಗಿ ಸಂಸತ್‌ನಲ್ಲಿ ಧ್ವನಿ ಮೊಳಗಲಿದೆ.

ಕಳೆದ ಹಲವಾರು ವರ್ಷಗಳಿಂದ ಮಲೆನಾಡು ಕರಾವಳಿ ಭಾಗದಲ್ಲಿ ಅರಣ್ಯ ವಾಸಿಗಳು ತಮ್ಮ ಹಕ್ಕಿಗಾಗಿ ಹಲವಾರು ಹೋರಾಟಗಳನ್ನು ಹಾಗೂ ಸಭೆಗಳನ್ನು ಮಾಡಿಕೊಂಡು ಬರುತ್ತಿದ್ದರೂ ಸಹ ಅಂದಿನ ಪ್ರಧಾನಮಂತ್ರಿಗಳಾದ ಶ್ರೀ ಮನಮೋಹನ್ ಸಿಂಗ್ ಅವಧಿಯಲ್ಲಿ ತಂದಿರುವ ಪಾರಂಪರಿಕ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಇನ್ನೂ ಅರಣ್ಯವಾಸಿಗಳಿಗೆ ನ್ಯಾಯ ಕೊಡಿಸಲು ಸಾಧ್ಯವಾಗಲಿಲ್ಲ. ಇಲ್ಲಿ ರಾಜ್ಯ ಸರ್ಕಾರದಷ್ಟೇ ಜವಾಬ್ದಾರಿ ಕೇಂದ್ರ ಸರ್ಕಾರಕ್ಕೂ ಇದೆ. ಹಾಗಾಗಿ ನಮ್ಮ ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್, ಅನಂತ್ ಕುಮಾರ್ ಹೆಗ್ಡೆ, ಪ್ರತಾಪ್ ಸಿಂಹ, ಬಿ.ವೈ.ರಾಘವೇಂದ್ರ ರವರಾಗಲಿ ಇಂದಿಗೂ ಕೂಡ ಸಂಸತ್ತಿನಲ್ಲಿ ಮಲೆನಾಡು ಕರಾವಳಿ ಜನರ ಬದುಕಿನ ಬಗ್ಗೆ ಒಂದೇ ಒಂದು ದಿನ ಚರ್ಚೆ ಮಾಡದೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದೆ ಈ ಭಾಗದ ಜನರಿಗೆ ಮೋಸ ಮಾಡಿದ್ದಾರೆ.

ಜನ ನಿಮ್ಮನ್ನು ಆಯ್ಕೆ ಮಾಡಿ ಸಂಸತ್ತಿಗೆ ಕಳುಹಿಸಿರೋದು ಈ ಭಾಗದ ಜನರ ಬದುಕಿನ ಬಗ್ಗೆ ಕಾಳಜಿ ವಹಿಸಿ ಕೆಲಸ ಮಾಡಬೇಕು ಎಂದು, ಆದರೆ ನಮ್ಮ ಸಂಸದರು ಇಷ್ಟು ವರ್ಷಗಳ ಕಾಲ ಕೋಮು ಹೇಳಿಕೆಗಳಿಗೆ ಪ್ರಸಿದ್ದರಗಿದ್ದಾರೆಯೇ ಹೊರತು ಮಲೆನಾಡು ಕರಾವಳಿ ಭಾಗದ ಮುಖ್ಯ ಸಮಸ್ಯೆಯಾದ ಅರಣ್ಯವಾಸಿಗಳ ಬಗ್ಗೆ ಸಂಸತ್ತಿನಲ್ಲಿ ಚಕಾರವೇ ಎತ್ತದೆ ಪ್ರತಿ ದಿನ ಹೊಸ ಹೊಸ ನಾಟಕಗಳನ್ನು ಜನರ ಮುಂದೆ ತಂದು ಈ ಭಾಗದ ಜನರಿಗೆ ದ್ರೋಹ ಎಸಗಿದ್ದಾರೆ. ಈ ಭಾಗದ ಬಹು ಮುಖ್ಯವಾದ ಅರಣ್ಯ ಒತ್ತುವರಿ, ಅಡಿಕೆಗೆ ಹಳದಿ ರೋಗ, ಕಸ್ತೂರಿ ರಂಗನ್ ವರದಿ, ಹುಲಿ ಯೋಜನೆ ಇವುಗಳ ಬಗ್ಗೆ ಕಾಳಜಿ ಬದ್ಧತೆ ಇಲ್ಲದ ಇವರುಗಳನ್ನು ಮೂರೂ-ನಾಲ್ಕು ಬಾರಿ ಮತ ಹಾಕಿ ಕಳುಹಿಸಿದ್ದು ನಮ್ಮ ದುರದೃಷ್ಟ. ಶಿವಮೊಗ್ಗದಲ್ಲಿಯೂ ಶರಾವತಿ ಸಂತ್ರಸ್ತರ ಸಮಸ್ಯೆ ನೋಡಿ ಅಲ್ಲಿಯೂ ಯಾರು ಕೇಳುವವರಿಲ್ಲವಾಗಿದೆ. ರಾಜ್ಯಕ್ಕೆ ಬೆಳಕು ಕೊಟ್ಟ ಜನರ ಬದುಕು ಕತ್ತಲಾಗಿದೆ. ಇವೆಲ್ಲಾ ಕಾರಣಗಳಿಂದ ಕರಾವಳಿ ಮಲೆನಾಡು ಭಾಗದ ಸಮಗ್ರ ಅಧ್ಯಯನ ನಡೆಸಿರುವ ಶ್ರೀ ಸುಧೀರ್ ಕುಮಾರ್ ಮುರೊಳ್ಳಿ ಅವರಿಗೆ ಈ ಬಾರಿಯ ಉಡುಪಿ-ಚಿಕ್ಕಮಗಳೂರು ಲೋಕಸಭಾ ಟಿಕೆಟ್ ನೀಡಬೇಕೆಂದು ಒತ್ತಾಯಿಸುತ್ತೇವೆ ಎಂದು ಒಕ್ಕೂಟದ ವಿತಿಯಿಂದ ಅನಿಲ್‌ ಹೊಸಕೊಪ್ಪ ರಾಜ್ಯ ಪ್ರಧಾನ ಸಂಚಾಲಕರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ನಗರ ಸಂಚಾಲಕ ಪ್ರವೀಣ್ ತಗಡೂರು, ಲೋಕೇಶ್, ಅಭಿಷೇಕ್ ಸಂತೋಷ್, ಮನೋಜ್ ಶೆಟ್ಟಿ, ಮಂಜುನಾಥ್ ಉಪಸ್ಥಿತರಿದ್ದರು.

City Today News 9341997936

ಮಾಜಿ ಜಿಲ್ಲಾಪಂಚಾಯತ್ ಅಧ್ಯಕ್ಷರಾದ ಶ್ರೀಯುತ ಜಿ. ಮರಿಸ್ವಾಮಿ ಅವರಿಗೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟ್‌ ನೀಡುವಂತೆ ಒತ್ತಾಯ

ಶ್ರೀ ಜಿ. ಮರಿಸ್ವಾಮಿಯವರು ಸುಮಾರು 40 ವರ್ಷಗಳಿಂದ ಭಾರತೀಯ ಜನತಾ ಪಕ್ಷದ (ಬಿ.ಜೆ.ಪಿ) ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಷ್ಟ್ರಪರ ಚಿಂತನೆ ಇರುವಂತಹ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಲವಾರು ಲೋಕಸಭಾ, ವಿಧಾನಸಭಾ ಮತ್ತು ವಿಧಾನಪರಿಷತ್ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ್ದಾರೆ. ಸುಮಾರು 50 ಜಿಲ್ಲಾ ಪಂಚಾಯ್ತಿಗಳನ್ನೊಳಗೊಂಡ ಬೆಂಗಳೂರು ನಗರದ ಜಿಲ್ಲಾ ಪಂಚಾಯ್ತಿಯ ಅಧ್ಯಕ್ಷರಾಗಿ ಪಕ್ಷ ಸಂಘಟನೆ ಮಾಡಿದ್ದು ಗಮನಾರ್ಹ ವಿಷಯ. ಬೆಂಗಳೂರು ನಗರ ಜಿಲ್ಲೆಯ ಅಭಿವೃದ್ಧಿಗಾಗಿ 100 ಕೋಟಿಗೂ ಅಧಿಕ ಅನುದಾನವನ್ನು ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆಯ ನಿರ್ದೇಶಕರಾಗಿ ನಾಡಿನ ವಿದ್ಯಾರ್ಥಿಗಳಿಗೆ ಮತ್ತು ಬಡವರ್ಗದವರ ವಿದ್ಯಾರ್ಜನೆಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಇವರು ಕರ್ನಾಟಕ ರಾಜ್ಯದಲ್ಲಿ ಮತ್ತು ಬೆಂಗಳೂರು ಉತ್ತರ ಜಿಲ್ಲೆಯಲ್ಲಿ ಪ್ರಬಲವಾಗಿರುವಂತಹ ವೀರಶೈವ- ಲಿಂಗಾಯತ ಸಮುದಾಯದ ವಿಶ್ವಾಸವನ್ನು ಗೆದ್ದಿರುವ ಮುಖಂಡರಾಗಿದ್ದಾರೆ. 1989 ರಿಂದ ಅಬ್ಬಿಗೆರೆ ಮತ್ತು ಯಶವಂತಪುರ ಹೋಬಳಿಗಳ ಯುವ ಮೋರ್ಚಾ ಅಧ್ಯಕ್ಷರಾಗಿ ಪಕ್ಷದ ಮೂಲ ಸಂಘಟನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಕೋವಿಡ್ ವೈರಾಣು ವಿಕೋಪ ಪರಿಸ್ಥಿತಿಯಲ್ಲಿ 65,000 ರೇಷನ್ ಮತ್ತು ಮೆಡಿಕಲ್ ಕಿಟ್‌ಗಳನ್ನು ಬೆಂಗಳೂರಿನ ದಾಸರಹಳ್ಳಿ ಮತ್ತು ಅರಸೀಕೆರೆ ವಿಧಾನಸಭಾ ವ್ಯಾಪ್ತಿಯಲ್ಲಿ ವಿತರಿಸಿದ್ದರು. ಬೆಂಗಳೂರು ಜಿಲ್ಲೆಯಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ 500ಕ್ಕೂ ಹೆಚ್ಚು ಹೊಲಿಗೆ ಯಂತ್ರಗಳನ್ನು ವಿತರಣೆ ಮಾಡಿದ್ದಾರೆ. ಕೇಂದ್ರ ಸರ್ಕಾರದ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ.

ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಯಶವಂತಪುರ, ದಾಸರಹಳ್ಳಿ, ಕೆ.ಆರ್.ಪುರಂ, ಮಹಾಲಕ್ಷ್ಮೀಲೇಔಟ್, ಮಲ್ಲೇಶ್ವರಂ, ಬ್ಯಾಟರಾಯನಪುರ, ಪುಲಿಕೇಶಿನಗರ ಮತ್ತು ಹೆಬ್ಬಾಳ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಶ್ರೀಯುತ 23 ಮರಿಸ್ವಾಮಿಯವರು ಚಿರಪರಿಚಿತರು. ದಕ್ಷಿಣ ಭಾರತದಲ್ಲಿ ಪ್ರಪ್ರಥಮವಾಗಿ ಬಿಜೆಪಿ ಬಾವುಟ ಹಾರಿಸಲು ಶ್ರಮಿಸಿದ ರೈತ ನಾಯಕರಾದ ಶ್ರೀ ಬಿ.ಎಸ್.ಯಡಿಯೂರಪ್ಪಾಜೀ ಮತ್ತು ಹಿರಿಯ ಮುಖಂಡರಾದಂತಹ ದಿವಂಗತ ಶ್ರೀ ಅನಂತ್ ಕುಮಾರ್‌ಜೀ ಅವರ ಬಹುಕಾಲದ ಒಡನಾಡಿಯಾಗಿ ಪಕ್ಷದ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾರೆ.

ಇಂತಹ ಸರ್ವತೋಮುಖ ಸಮಾಜಮುಖಿ ಚಿಂತನೆಗಳುಳ್ಳ ಮತ್ತು ರಾಷ್ಟ್ರೀಯ ತತ್ವ-ಸಿದ್ಧಾಂತಗಳ ಗುಣಾತ್ಮಕ ವ್ಯಕ್ತಿತ್ವವಿರುವಂತಹ ಶ್ರೀಯುತ ಜಿ. ಮರಿಸ್ವಾಮಿಯವರಿಗೆ ಭಾರತೀಯ ಜನತಾ ಪಕ್ಷದಿಂದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಿದಲ್ಲಿ ಹೆಚ್ಚಿನ ಮತಗಳ ಅಂತರದಿಂದ ಆರಿಸಿ ಬರುತ್ತಾರೆಂಬ ವಿಶ್ವಾಸವಿದೆ.

2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕರ್ನಾಟಕ 104 ವಿಧಾನಸಭಾ ಕ್ಷೇತ್ರಗಳ ಪೈಕಿ ಯಾವೊಂದು ಕ್ಷೇತ್ರದಿಂದಲೂ ವೀರಶೈವ- ಲಿಂಗಾಯತ ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ನೀಡಿರುವುದಿಲ್ಲ. ಬಹುಮುಖ್ಯವಾಗಿ ಬೆಂಗಳೂರು ನಗರದ 28 ವಿಧಾನಸಭಾ ಮತ್ತು 04 ಲೋಕಸಭಾ ಕ್ಷೇತ್ರಗಳಲ್ಲಿಯೂ ಸಮುದಾಯವನ್ನು ಕಡೆಗಣಿಸಿರುವುದು ಬೇಸರದ ಸಂಗತಿ.

ಆದ್ದರಿಂದ ಮೇಲಿನ ಅಂಶಗಳನ್ನು ಪರಿಗಣಿಸಿ ಶ್ರೀ ಜಿ. ಮರಿಸ್ವಾಮಿಯವರಿಗೆ 2024ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದಿಂದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡುವಂತೆ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭೆಯ ಬೆಂಗಳೂರು ನಗರ ಜಿಲ್ಲಾ ಘಟಕವು ಪಕ್ಷದ ರಾಜ್ಯಾಧ್ಯಕ್ಷರನ್ನು ಹಾಗೂ ಪಕ್ಷದ ಮುಖಂಡರನ್ನು ಒತ್ತಾಯಿಸುತ್ತದೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

City Today News 9341997936