ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೋಲಿ ಗಂಗಾಮತ ಮತ್ತು ಮೊಗವೀರ ಸಮುದಾಯಕ್ಕೆ ಸೇರಿದ ಶ್ರೀ ಪ್ರಮೋದ್ ಮದ್ವರಾಜ್ ರವರಿಗೆ ಸಂಸತ್ ಚುನಾವಣೆಗೆ ಸ್ಪರ್ಧಿಸಲು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಭಾರತೀಯ ಜನತಾ ಪಕ್ಷದಿಂದ ಅವಕಾಶ ಕೋರಿ ಸಮುದಾಯದ ಪರವಾಗಿ ಆಗ್ರಹ.

ರಾಜ್ಯಾದ್ಯಂತ ಕೋಲಿ ಗಂಗಾಮತ ಸಮುದಾಯವು ಸುಮಾರು 39 ಪಂಗಡಗಳ ಹೆಸರುಗಳಿಂದ ರಾಜ್ಯವ್ಯಾಪಿ ಹರಡಿಕೊಂಡಿದ್ದು, ಅಂದಾಜು ಜನಸಂಖ್ಯೆ 50 ಲಕ್ಷ ಇರುತ್ತದೆ. ಸದರಿ ಸಮುದಾಯವು ಕರ್ನಾಟಕ ಸರ್ಕಾರದಲ್ಲಿ ಪ್ರವರ್ಗ 1 ರಿಂದ ಗುರುತಿಸಲ್ಪಟ್ಟಿರುತ್ತದೆ. ಕಾರಣ ಸಮಾಜವು ಅತ್ಯಂತ ಹಿಂದುಳಿದ ವರ್ಗದಲ್ಲಿ ಬರುವ ಒಂದು ಸಮುದಾಯವಾಗಿದ್ದು, ರಾಜಕೀಯವಾಗಿ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಈ ಸಮಾಜವು ಕಳೆದ 30 ವರ್ಷಗಳಿಂದ ಪರಿಶಿಷ್ಟ ಪಗಂಡದ ಬೇಡಿಕೆಗಾಗಿ ಕೂಡ ಹೋರಾಟ ನಡೆಸಿಕೊಂಡು ಬಂದಿರುತ್ತದೆ. ಆದರೆ, ಈವರೆವಿಗೂ ಸಮುದಾಯದ ಬೇಡಿಕೆ ಈಡೇರಿರುವುದಿಲ್ಲ.

ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ರಾಜಕೀಯವಾಗಿ ಅಭಿವೃದ್ಧಿ ಹೊಂದುವುದು  ಅತ್ಯವಶ್ಯವಾಗಿರುತ್ತದೆ. ಮತ್ತು ಸಮಾಜಕ್ಕೆ ಸಂಘಟನೆ ಹಾಗೂ ನಾಯಕತ್ವದ ಕೊರತೆಯಿಂದ ಸಮಾಜ ನಿಂತ ನೀರಾಗಿದ್ದು, ಅಭಿವೃದ್ಧಿ ಮರೀಚಿಕೆಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಶ್ರೀ ಪ್ರಮೋದ್ ಮದ್ವರಾಜ್ ಅವರು ಸ್ವಬಲದ ಮೇಲೆ ರಾಜಕೀಯ ಕ್ಷೇತ್ರದಲ್ಲಿ ಈ ಹಿಂದಿನಿಂದ ಸೇವೆ ಸಲ್ಲಿಸಿಕೊಂಡು ಬಂದಿದ್ದು, ಮುಂದೆಯೂ ಅವಕಾಶಗಳ ಮೂಲಕ ಸೇವೆ ಸಲ್ಲಿಸಲು ಕಾತುರರಾಗಿರುತ್ತಾರೆ.

ಇವರ ನಾಯಕತ್ವ ಹಾಗೂ ಸೇವೆ ದೇಶದ ಅಭಿವೃದ್ಧಿಗಾಗಿ ಅಲ್ಲದೆ ಸಮಾಜದ ಗುರುತಿಸುವಿಕೆಗೂ ಕೂಡ ಅತ್ಯವಶ್ಯವಾಗಿರುತ್ತದೆ. ಮತ್ತು ಸಾಕಷ್ಟು ಅವಧಿಯಿಂದ ನಮ್ಮ ಸಮುದಾಯದಿಂದ ಯಾವೊಬ್ಬ ರಾಜಕಾರಣಿಯೂ ಸಂಸತ್ ಪ್ರವೇಶಿಸಿರುವುದಿಲ್ಲ.

ಈ ಕಾರಣದಿಂದ ಸದರಿಯವರಿಗೆ ಭಾರತೀಯ ಜನತಾ ಪಕ್ಷವು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸಂಸತ್ ಪ್ರವೇಶಿಸಲು ಲೋಕಸಭಾ ಚುನಾವಣೆಗೆ ಅವಕಾಶ ನೀಡುವಂತೆ ಸಮುದಾಯವು ಅತ್ಯಂತ ನಮತೆಯಿಂದ ಆಗ್ರಹಪಡಿಸುತ್ತದೆ ಎಂದು  ಸೀತಾರಾಮ್,ಉಪಾಧ್ಯಕ್ಷರು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

City Today News 9341997936

ಉಡುಪಿ ಚಿಕ್ಕಮಗಳೂರು ಜಿಲ್ಲೆಯ ಲೋಕಸಭಾ ಮತಕ್ಷೇತ್ರದ ಅಭ್ಯರ್ಥಿಯಾಗಿ ಶ್ರೀ.ಪ್ರಮೋದ್ ಮಧ್ವರಾಜ್ ಸ್ಪರ್ಧಿಸಲು ಭಾರತೀಯ ಜನತಾ ಪಕ್ಷದ ರಾಜ್ಯ ನಾಯಕರಿಗೂ ಹಾಗೂ ರಾಷ್ಟ್ರನಾಯಕರಿಗೂ ಈ ಮೂಲಕ ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘ(ರಿ)ವತಿಯಿಂದ ಮನವಿ

02.01.2024ರಂದು ಬೆಂಗಳೂರಿನ ಪ್ರಸ್ ಕ್ಲಬ್‌ನಲ್ಲಿ ಬೆಳಿಗ್ಗೆ 11.30ಕ್ಕೆ ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘ(ರಿ)ವತಿಯಿಂದ ಪತ್ರಿಕಾಗೋಷ್ಠಿ.

ಕರ್ನಾಟಕ ರಾಜ್ಯ ಗಂಗಾಮತ, ಬೆಸ್ತ, ಮೊಗವೀರ, ಕೋಲಿ, ಕಬ್ಬಲಿಗ, ಅಂಬಿಗ ಸಮುದಾಯಕ್ಕೆ ಸೇರಿದ ಮಧ್ವರಾಜ್ ಮಧ್ವರಾಜ್ ರವರಿಗೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಮತಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತೆ ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘದವತಿಯಿಂದ ಭಾರತೀಯ ಜನತಾ ಪಾರ್ಟಿಗೆ ಮನವಿ ಸಲ್ಲಿಸುತ್ತಿದ್ದೇವೆ. ನಮ್ಮ ಮೀನುಗಾರ ಸಮುದಾಯಗಳಾದ, ಮೊಗವೀರ, ಕೋಲಿ, ಕಬ್ಬಲಿಗ, ಗಂಗಾಮತ, ಅಂಬಿಗ ಮುಂತಾದ 39 ಪರ್ಯಾಯ ಪದಗಳಿಂದ ಕರ್ನಾಟಕ ರಾಜ್ಯದಲ್ಲಿ ನಮ್ಮ ಜನಾಂಗವನ್ನು ಗುರುತ್ತಿಸುತ್ತಾರೆ. ಎಲ್ಲಾ ಜಿಲ್ಲೆಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿರುವ ನಮ್ಮ ಸಮಾಜ ಒಟ್ಟು ರಾಜ್ಯದಲ್ಲಿ 60 ಲಕ್ಷಕ್ಕಿಂತ ಅಧೀಕ ಜನಸಂಖ್ಯೆ ಹೊಂದಿರುತ್ತದೆ. ಈ ಸಮುದಾಯದಲ್ಲಿ ಗುರುತಿಸಿಕೊಂಡು ಮೀನುಗಾರರ ಹಾಗೂ ಹಿಂದುಳಿದ ವರ್ಗಗಳ ಸಮುದಾಯದ ಸರ್ವೊತ್ತಮುಖ ಅಭಿವೃದ್ದಿ ಅತ್ಯವಶ್ಯವಾಗಿದೆ. ಮುಖ್ಯವಾಗಿ ಯುವ ಜನರನ್ನು ಸಂಘಟಿಸುವ ಯುವ ಪೀಳಿಗೆಯಲ್ಲಿ ನಾಯಕತ್ವ ರೂಪಿಸುವ ಪ್ರಮಾಣಿಕತೆ, ಪಾರದರ್ಶಕತೆ ಬದ್ಧತೆ ಪರಿಶ್ರಮ ಸಮಾರ್ಪಣಾ ಮನೋಭಾವದ ಚಿಂತನೆಯುಳ್ಳ ಕ್ರಿಯಾಶೀಲ ಸೃಜನಶೀಲ ಪ್ರಮೋದ್ ಮಧ್ವರಾಜ್ ರವರು ವಿಶೇಷವಾದ ವ್ಯಕ್ತಿಯಾಗಿರುತ್ತಾರೆ.

ಹಿಂದುಳಿದ ಜನಾಂಗದ ಹಾಗೂ ಮೀನುಗಾರರ ಶೈಕ್ಷಣಿಕ ಸಾಮಾಜಿಕ ಅರ್ಥಿಕ ಸಾಂಸ್ಕೃತಿಕ ರಾಜಕೀಯ ಪ್ರಜ್ಞೆಗಳ ಉನ್ನತಿಕರಣ ಸಬಲೀಕರಣ ಮತ್ತು ಅಭಿವೃದ್ದಿಗಾಗಿ ಪ್ರಮೋದ್ ಮಧ್ವರಾಜ್ ಸಂಪೂರ್ಣವಾಗಿ ತೊಡಗಿಸಿಕೊಂಡಿರುತ್ತಾರೆ. ಮೀನುಗಾರರ ಸಮಸ್ಯೆಗಳು ಹಿಂದುಳಿದ ವರ್ಗಗಳ ಸಮಸ್ಯೆಗಳನ್ನು ತಿಳಿದುಕೊಂಡು ಬಗೆಹರಿಸುತ್ತಿರುವ ಪ್ರಮೋದ್ ಮಧ್ವರಾಜ್ ರಾಜಕೀಯ ರಂಗದ ಸಮಚಿತ್ತ ಭಾವದ ರಾಜಕಾರಣಿಯಾಗಿದ್ದಾರೆ.

ಪ್ರಮೋದ್ ಮಧ್ವರಾಜ್, ಓರ್ವ ಪ್ರಕಾಣಿಕ ಶುದ್ಧ ಹಸ್ತ ರಾಜಕಾರಣಿ, ರಾಷ್ಟ್ರದ ದಾರ್ಶನಿಕ ರಾಜಕಾರಣಿ, ಸಂತಸದೃಶ ಜನನಾಯಕ ನರೇಂದ್ರ ಮೋದಿರವರ ಅಭಿವೃದ್ಧಿ ಪರ ಚಿಂಚನೆ ರಾಜಕೀಯ ನಿಲುವು ಮತ್ತು ಘನ ನಾಯಕತ್ವಕ್ಕೆ ಪಾಲಿಸಿಕೊಂಡ ಪ್ರಮೋದ್‌ಮದ್ವರಾಜ್ ಶುದ್ದ ಹಸ್ತ, ಪ್ರಮಾಣಿಕ ರಾಜಕಾರಣಿಗಳ ಸಾಲಿನಲ್ಲಿ ಮೇಲ್ಪಂತಿಯಲ್ಲಿ ನಿಲ್ಲುತ್ತಾರೆ. ನಮ್ಮ ಸಮುದಾಯದ ರಾಜಕೀಯ ನೇತಾರರು ಹಾಗೂ ಭಾರತೀಯ ಜನತಾ ಪಕ್ಷದಲ್ಲಿ ಗುರುತಿಸಿಕೊಂಡ ನಾಯಕರಾಗಿದ್ದಾರೆ. ರಾಜ್ಯದಲ್ಲಿ ನಾವು ನಮ್ಮ ಸಮುದಾಯದಿಂದ ಉಡುಪಿ, ಚಿಕ್ಕಮಗಳೂರು ಲೋಕಸಭಾ ಮತಕ್ಷೇತ್ರದಿಂದ ಸ್ಪರ್ಧಿಸುವಂತೆ ಕೇವಲ ಒಂದು ಸ್ಥಾನವನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ನೀಡುವಂತೆ ಪತ್ರಿಕಾ ಹೇಳಿಕೆಯಲ್ಲಿ ಸಂಬಂಧಪಟ್ಟ ಭಾ.ಜ.ಪ ಪ್ರಮುಖರ ಗಮನಕ್ಕೆ ತರಲು ಇಚ್ಚಿಸುತ್ತೇವೆ.

ಶ್ರೀ.ಪ್ರಮೋದ್ ಮಧ್ವರಾಜ್ ರವರು ಹಲವಾರು ಭಾಷೆ ಪರಿಣಿತರಾಗಿದ್ದು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲವು ಸಾಧಿಸುವ ಸಂಪೂರ್ಣ ಅವಕಾಶ ಆ ಕ್ಷೇತ್ರದಲ್ಲಿ ಅವರಿಗಿದೆ. ರಾಜ್ಯದ ನಮ್ಮ ಸಮಾಜದ ಬಂಧುಗಳು ರಾಜ್ಯ ಸಂಘದ ಪ್ರಮುಖರಿಗೂ ಹಾಗೂ ಭಾ.ಜ.ಪ.ದ ರಾಜ್ಯ ನಾಯಕರಿಗೂ ಹಾಗೂ ರಾಷ್ಟ್ರ ನಾಯಕರ ಗಮನಕ್ಕೂ ಮನವಿ ನೀಡಿ ಹಕ್ಕೊತಾಯ ಮಾಡಿರುವುದನ್ನು ಈ ಸಂದರ್ಭದಲ್ಲಿ ತಮ್ಮ ಗಮನಕ್ಕೆ ತರಲು ಇಚ್ಚಿಸುತ್ತೇವೆ. ಹಾಗಾಗಿ ನಮ್ಮ ಸಮಾಜದ ಆಶಾಕಿರಣವಾದ ಪ್ರಮೋದ್ ಮಧ್ವರಾಜ್ ರವರಿಗೆ ರಾಜಕೀಯ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಪಕ್ಷದವರು ಅರ್ಹತೆಯನ್ನು ಪರಿಗಣಿಸಿ ಪ್ರಮೋದ್ ಮದ್ವರಾಜ್ ರವರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಥಿಸಲು ಅವಕಾಶ ಮಾಡಿಕೊಟ್ಟು ನಮ್ಮ ಸಮುದಾಯಕ್ಕೆ ಸಾಮಾಜಿಕ ನ್ಯಾಯ ದೊರಕಿಸಿಕೊಡಬೇಕೆಂದು ಈ ಮೂಲಕ ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘ(ರಿ)ವತಿಯಿಂದ ಕೇಳಿಕೊಳ್ಳುತ್ತೇವೆ.

ಈ ಸಂದರ್ಭದಲ್ಲಿ ಕರ್ನಾಟಕ రాజ్య ಉಸಸ್ಥಿತರಿದ್ದ ಗಂಗಾಮತಸ್ಥರ ಸಂಘದ (1) ರಾಜ್ಯಾಧ್ಯಕ್ಷರಾದ ಡಾ.ಬಿ.ಮೌಲಾಲಿ (2)ಉಪಾಧ್ಯಕ್ಷರಾದ ಮಹಾದೇವ ಖರ್ಜಿಗಿ, (3) ಉಪಾಧ್ಯಕ್ಷರಾದ ಮಣ್ಣೂರು ನಾಗರಾಜ, (4) ಪ್ರಧಾನ ಕಾರ್ಯದರ್ಶಿಯಾದ ಶ್ರೀ ಮುರಳಿಧರ್.ಸಿ (5) ಬಿ.ಜೆ.ಪಿ ಹಿಂದುಳಿದ ವರ್ಗಗಳ ಮುಖಂಡರಾದ ಅವ್ವಣ್ಣ ಮ್ಯಾಕೇರಿ ರವರು ಉಪಸ್ಥಿತರಿದ್ದರು.

City Today News 9341997936

ಅಭಿವೃದ್ಧಿಯ ಬದಲಾವಣೆ ಬಯಸಿದ ಕರ್ನಾಟಕ ಜನತೆ

ಬೆಂಗಳೂರು: ಡಬಲ್ ಇಂಜಿನ್ ಸರ್ಕಾರ ಡಬಲ್ ಇಂಜಿನ್ ಇದ್ದರೆ ಮಾತ್ರ. ಆದರೆ ಕರ್ನಾಟಕದ ಅಭಿವೃದ್ಧಿಯಲ್ಲಿ ರಾಜ್ಯದ ಇಂಜಿನ್ ಕೆಲಸ ಮಾಡಿಲ್ಲ. ಅದನ್ನು ರಾಜ್ಯದ ಜನತೆ ತಿರಸ್ಕರಿಸಿ ಸೂಕ್ತ ಉತ್ತರ ನೀಡಿದ್ದಾರೆ. ರಾಜ್ಯದಲ್ಲಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ಎಷ್ಟು ಬಾರಿ ಬಂದು ಅಬ್ಬರದ ಪ್ರಚಾರ ಮಾಡಿದರು ಸಹ ಕರ್ನಾಟಕ ಜನತೆ ಡಬಲ್ ಇಂಜಿನ್ ಸರ್ಕಾರವನ್ನು ಒಪ್ಪಿಕೊಂಡಿಲ್ಲ. ಈ ಬಾರಿಯ ಚುನಾವಣಾ ಫಲಿತಾಂಶ ಬಿಜೆಪಿಗೆ ದಕ್ಷಿಣ ಭಾರತದ 2024ರ ಸಂಸತ್ ಚುನಾವಣೆಗೆ ಎಚ್ಚರಿಕೆಯ ಗಂಟೆಯಾಗಿದೆ.

ಕೇಂದ್ರ ಕಾಂಗ್ರೆಸ್ ನಾಯಕರು ಹಾಗು ರಾಜ್ಯ ಕಾಂಗ್ರೆಸ್ ನಾಯಕರ ಒಗ್ಗಟ್ಟಿನಲ್ಲಿ ನಡೆದ ಭಾರತ್ ಜೋಡೋ, ಕರ್ನಾಟಕ್ ಜೋಡೋ ಯಾತ್ರೆಯ ಪರಿಣಾಮದ ಫಲಶ್ರುತಿಯನ್ನು ಇಂದು ರಾಜ್ಯದ ಜನತೆ ನೀಡಿದ್ದಾರೆ.

ಈ ಬಾರಿ ನಾನು ಒಬ್ಬ ರಾಜಕೀಯ ತಂತ್ರಗಾರನಾಗಿ. ಬೆಂಗಳೂರಿನ ಮಹದೇವಪುರ, ತಿಪಟೂರು ಮತ್ತು ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಸ್ಪರ್ಧಿಸಿದ್ದ ವರುಣ ವಿಧಾನಸಭಾ ಕ್ಷೇತ್ರ ಸೇರಿದಂತೆ 3 ವಾರ್ ರೂಮ್ ಗಳ ಕೆಲಸಗಳನ್ನು ನಿರ್ವಹಸಿದ್ದೇನೆ. ಆ ಭಾಗದಲ್ಲಿ ಕಂಡುಬಂದ ವಿಷಯಗಳು ಬಡಜನತೆಯ ಸಮಗ್ರ ಜೀವನಕ್ಕೆ ಜನಪರ ಸ್ನೇಹಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುಬೇಕು ಎಂಬ ಆಶಯಗಳೇ ಕೇಳಿ ಬಂದಿತ್ತು.

ಬೆಲೆ ಏರಿಕೆಯಿಂದ ತತ್ತರಿಸಿರುವ ಬಡಜನತೆ ಸಮರ್ಥ ಜೀವನಕ್ಕಾಗಿ ಮಹಿಳಾ ಮತದಾರರು ಬಹು ಸಂಖ್ಯೆಯಲ್ಲಿ ಮತ ಚಲಾಯಿಸಿದ್ದು, ನೂತನ ಸರ್ಕಾರ ರಚನೆಯಲ್ಲಿ ಮಹಿಳೆಯರು ಮುಖ್ಯ ಪಾತ್ರ ವಹಿಸಿದ್ದಾರೆ.

ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಲಿಂಗಾಯತ ಸಮುದಾಯದ ವಿಚಾರ ಅಥವಾ ದಿ ಕೇರಳ ಸ್ಟೋರಿ, ಭಜರಂಗದಳ ಈ ಯಾವ ವಿಚಾರಗಳು ಕೂಡ ವೋಟ್ ಬ್ಯಾಂಕ್ ಆಗೋದಿಲ್ಲ ಎಂಬುದನ್ನು ಗಮನಾರ್ಹ ಅಂಶ. ಇದು ಬಿಜೆಪಿಗೆ ಒಂದು ಎಚ್ಚರಿಕೆಯ ಗಂಟೆಯಾಗಿದೆ.

ಈ ಬಾರಿ ಕರ್ನಾಟಕ ಜನತೆ ಈ ವಿಚಾರಗಳನ್ನು ಮುಖ್ಯವಾಗಿರಿಸಿಕೊಂಡು ಮತ ಚಲಾವಣೆ ಮಾಡಿಲ್ಲ. ಬಹಳ ಮುಖ್ಯವಾಗಿ ಒಕ್ಕಲಿಗ ಸಮುದಾಯದ ಮತಗಳು ಜೆಡಿಎಸ್ ನಿಂದ ಕಾಂಗ್ರೆಸ್ ಪಕ್ಷದತ್ತ ಹೆಚ್ಚು ಮುಖ ಮಾಡಿದ್ದು, ಬಿಜೆಪಿಯತ್ತ ಕಡಿಮೆ ವಾಲುತ್ತಿದೆ.

ಹಿಮಾಚಲ ಪ್ರದೇಶದಲ್ಲಿ ಪ್ರಿಯಾಂಕ ಗಾಂಧಿಯವರು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದರು. ಪಿಂಚಣಿದಾರರ ವಿಚಾರಗಳನ್ನು ಒಳಗೊಂಡಂತೆ ಹಲವಾರು ಯೋಜನೆಗಳನ್ನು ಘೋಷಣೆ ಮಾಡಿದ್ದು, ಅದರಂತೆ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಘೋಷಣೆ ಮಾಡಿದ್ದು. ಕರ್ನಾಟಕ ಜನತೆ ಗ್ಯಾರಂಟಿ ಯೋಜನೆಗಳನ್ನು ಪರಿಗಣಿಸಿ ನಂಬಿಕೆಯಿಂದ ಕಾಂಗ್ರೆಸ್ ನ ಸಾಂಪ್ರದಾಯಿಕ ಮತಗಳೆಲ್ಲವೂ ಕಾಂಗ್ರೆಸ್ ನತ್ತ ಮುಖ ಮಾಡಿದೆ.

ನನ್ನ ಗಮನಕ್ಕೆ ಬಹುವಾಗಿ ಕಾಣಿಸಿದ್ದು ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಚುನಾವಣಾ ಪ್ರಚಾರದ ರೀತಿ ನೀತಿ ಗ್ಯಾರಂಟಿ ಕಾರ್ಡ್ ಗಳ ಮಾಹಿತಿ ಇಲ್ಲದಿರುದು ಜತೆಗೆ ಹೊಂದಾಣಿಕೆಯ ಪ್ರಚಾರ ಈ ವಿಚಾರಗಳ ಮೇಲೆ ನಾನು ಕೆಲಸ ಮಾಡಿದ್ದು ಸಾಧ್ಯವಾದಷ್ಟು ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿದ್ದೇನೆ.

ಹಿಂದಿ ಭಾಷೆ ವಿಚಾರದಲ್ಲಿ ಹೇರಿಕೆ ಮಾಡುತ್ತಿದೆ ಎಂದು ಬಿಂಬಿತವಾದರೂ, ನಂದಿನಿ ಹಾಲು ವಿಚಾರದಲ್ಲಿ ಬಿಜೆಪಿ ನಿಲುವುಗಳನ್ನು ನಮ್ಮ ರೈತರು ವಿರೋಧಿಸಿದ್ದು ಇದರ ಪರಿಣಾಮವನ್ನು ಹಳೇ ಮೈಸೂರು ಭಾಗದಲ್ಲಿ ನಾವು ಕಾಣಬಹುದು.

ಬಿ. ಎಸ್. ಯಡಿಯೂರಪ್ಪ ಅವರ ಪ್ರಧಾನ ನಾಯಕತ್ವವಿಲ್ಲದೆ ಬಿಜೆಪಿ 2ನೇ ಚುನಾವಣೆಯನ್ನು ಎದುರಿಸಿದೆ. 2013 ರಲ್ಲಿ, ಇದು ವಿಫಲವಾಗಿತ್ತು. 2023 ರಲ್ಲಿ ಪರಿಸ್ಥಿತಿ ಸುಧಾರಿಸುತ್ತದೆ ಎಂಬ ಭರವಸೆಯು ಸಹ ಇದೀಗ ಸುಳ್ಳಾಗಿದೆ. ನರೇಂದ್ರ ಮೋದಿ ಮತ್ತು ಅಮಿತ್ ಶಾ ಪ್ರಚಾರಕ್ಕೆ ಬರುವವರೆಗೂ ಬಿಜೆಪಿ ಪಕ್ಷಕ್ಕೆ ರಾಜ್ಯದಲ್ಲಿ ಅಂತಹ ನಾಯಕತ್ವ ಇರಲಿಲ್ಲ. ಈ ಬಗ್ಗೆ ಬಿಜೆಪಿ ರಾಜ್ಯ ನಾಯಕರ ಬಳಿ ಏನಾದರೂ ವಿವರಣೆ ಇದೆಯೇ?

ನರೇಂದ್ರ ಮೋದಿ ಹಾಗು ಅಮಿತ್ ಷಾ ಅವರು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ 60 ರಿಂದ 70 ಕ್ಷೇತ್ರಗಳಲ್ಲಿ ಯುವಕರಿಗೆ ಮಣೆ ಹಾಕಿರುವುದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ, ಈ ನಿರ್ಧಾರ ಮುಂದಿನ 2024ರ ಸಂಸತ್ ಚುನಾವಣೆಗೆ ಪರಿಣಾಮಕಾರಿ ಎಂಬ ಸೂಚನೆಗಳು ಕಾಣುತ್ತಿವೆ.

40% ರಾಜ್ಯ ಸರ್ಕಾರದ ಅಭಿವೃದ್ಧಿ ಇಂದಿನ ಚುನಾವಣೆಯಲ್ಲಿ ಕಾಣಿಸುತ್ತಿದೆ. ಬಿಜೆಪಿ ಆಪರೇಷನ್ ಕಮಲದ ರೀತಿಯ ಯಾವ ಯೋಜನೆಗಳಿಗೆ ಮಣೆ ಹಾಕದೆ ಕರ್ನಾಟಕ ಜನತೆಯ ತೀರ್ಪನ್ನು ಗೌರವಿಸಿ ಬಿಜೆಪಿ ವಿರೋಧ ಪಕ್ಷವನ್ನು ಅಲಂಕರಿಸುವುದು ಸೂಕ್ತವಾಗಿರುತ್ತದೆ.

ಕರ್ನಾಟಕ ರಾಜ್ಯದ ರಾಜಕೀಯ ಚಿತ್ರಣ ಬಹಳ ಹಿಂದಿನಿಂದಲೂ ಕೇಂದ್ರದಲ್ಲಿ ಅಧಿಕಾರವಿರುವ ಪಕ್ಷ ರಾಜ್ಯದಲ್ಲಿ ಸರ್ಕಾರ ರಚನೆ ಮಾಡುವುದಿಲ್ಲ ಎಂಬ ಮಾತಿನಂತೆ ರಾಜ್ಯದಲ್ಲಿ ಈ ಬಾರಿಯೂ ಅದೇ ಪರಿಸ್ಥಿತಿ ಮರುಕಳಿಸುತ್ತಿದೆ.

City Today News 9341997936

ರಾಜ್ಯದಲ್ಲಿರುವ ಉಪ್ಪಾರ ಸಮಾಜದ ಬಂಧುಗಳು ರಾಜ್ಯ “ಬಿಜೆಪಿ” ಅಭ್ಯರ್ಥಿಗಳಿಗೆ ಬೆಂಬಲಿಸಬಾರದೆಂದು ಮನವಿ – ಎಸ್. ಶಿವಕುಮಾರ್

ನಮ್ಮ ರಾಜ್ಯದಲ್ಲಿ ದಿನಾಂಕ 10/05/2023 ರ ಚುನಾವಣೆ ನಡೆಯುತ್ತಿದ್ದು ರಾಜ್ಯದಲ್ಲಿರುವ ಉಪ್ಪಾರ ಸಮಾಜದ ಬಂಧುಗಳು ರಾಜ್ಯ “ಬಿಜೆಪಿ” ಅಭ್ಯರ್ಥಿಗಳಿಗೆ ಬೆಂಬಲಿಸಬಾರದೆಂದು ಮನವಿ ಮಾಡುತ್ತೇನೆ. 2008 ರಿಂದ 2013 ರವರೆಗೆ 2020 ರಿಂದ 2023 ರ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರವು ಉಪ್ಪಾರ ಸಮಾಜಕ್ಕೆ ರಾಜಕೀಯವಾಗಿ ಶೈಕ್ಷಣಿಕವಾಗಿ, ಆರ್ಥಿಕವಾಗಿ ಅನ್ಯಾಯವನ್ನೇ ಮಾಡುತ್ತಾ ಬಂದಿರುವುದು ತಮಗೆಲ್ಲಾ ತಿಳಿದ ವಿಷಯವಾಗಿದೆ. ರಾಜಕೀಯವಾಗಿ ಕಾಂಗ್ರೇಸ್ ಸರ್ಕಾರ ಅನೇಕ ಸಮಾಜದ ಅಭಿವೃದ್ಧಿಯನ್ನು ಮಾಡಿದೆ ಉದಾಹರಣೆಗೆ : ಭಗೀರಥ ಜಯಂತಿ ಆಚರಣೆ, ವಿದ್ಯಾರ್ಥಿವೇತನ, ಎರಡು ಬಾರಿ ವಿಧಾನ ಪರಿಷತ್ತಿಗೆ ಸಮಾಜದ ಮುಖಂಡರು ನಾಮಕರಣ ಮಾಡಿದ್ದು, ಉಪ್ಪಾರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದು, ಕರ್ನಾಟಕ ಲೋಕಾಸೇವಾ ಆಯೋಗದ ಸದಸ್ಯರನ್ನು ನೇಮಿಸಿದ್ದು, ವಿವಿಧ ನಿಗಮಗಳಲ್ಲಿ ಅವಕಾಶ ಮಾಡಿಕೊಟ್ಟಿದ್ದು ಹೀಗೆ ಹತ್ತು ಹಲವಾರು ಅವಕಾಶ ಮಾಡಿಕೊಟ್ಟಿದೆ, ಜೆ.ಡಿ.ಎಸ್ ಪಕ್ಷವು ಸಹ ಒಮ್ಮೆ ವಿಧಾನ ಪರಿಷತ್ತಿಗೆ ಅವಕಾಶ ಕಲ್ಪಸಿದೆ ಆದರೆ ಬಿಜೆಪಿ ಕಳೆದ ಚುನಾವಣೆಯಲ್ಲೇ ಆಗಲಿ ಈ ಚುನಾವಣೆಯಲ್ಲೇ ಆಗಲಿ ಬಹಳಷ್ಟು ಆಕಾಂಕ್ಷಿಗಳಿದ್ದರೂ ಒಬ್ಬರಿಗೂ ಅವಕಾಶ ಮಾಡಿಕೊಡಲಿಲ್ಲ ಆದರೇ ಕಾಂಗ್ರೇಸ್ ಪಕ್ಷವೂ ಕಳೆದ 3 ಚಾಮರಾಜನಗರದಿಂದ ಶ್ರೀ. ಪುಟ್ಟರಂಗ ಶೆಟ್ಟಿಯವರಿಗೆ ಅವಕಾಶ ಕೊಟ್ಟಿದ್ದು ಸಹಾಯಮಾಡಿ, ಅವರನ್ನು ಗೆಲ್ಲಿಸಿ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಮಂತ್ರಿಯನ್ನು ಸಹಾ ಚುನಾವಣೆಯಿಂದಲೂ ಎಲ್ಲಾ ರೀತಿಯ ಮಾಡಿರುತ್ತಾರೆ. ಆದರೆ, ಬಿ.ಜೆ.ಪಿ ಯವರು ಅವರನ್ನು ಸೋಲಿಸಲು ಸ್ಥಳಿಯರಿಗೆ ಅವಕಾಶ ಮಾಡದೇ ಪ್ರಭಾವಿ ಮಂತ್ರಯಾದ ಶ್ರೀ.ಸೋಮಣ್ಣ ರನ್ನು ಅಭ್ಯರ್ಥಿಯನ್ನಾಗಿ ಮಾಡಿರುತ್ತಾರೆ. ಶೋಷಿತ ಸಮಾಜವನ್ನು ರಾಜಕೀಯವಾಗಿ ತುಳಿಯುವುದೇ ಆಗಿದೆ, ಆದ್ದರಿಂದ ಸಮಾಜದ ಬಂಧುಗಳ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಬಿ.ಜೆ.ಪಿ ಅಭ್ಯರ್ಥಿಗಳ ಬೆಂಬಳಿಸಬಾರದು ಎಂದು ತಮ್ಮಗಳ ಮೂಲಕ ಮನವಿ ಮಾಡುತ್ತೇವೆ ಎಂದು ಎಸ್. ಶಿವಕುಮಾರ್, ಮಾಜಿ ಅಧ್ಯಕ್ಷರು, ರಾಜ್ಯ ಉಪ್ಪಾರ ಅಭಿವೃದ್ಧಿ ನಿಯಮಿತಿ, ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಥಿಯಲ್ಲಿ ತಿಳಿಸಿದರು

City Today News – 9341997936

ಮಾಯಾವತಿಯವರು 05.05.2023 .ಶುಕ್ರವಾರದಂದು ಬೆಂಗಳೂರಿನ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಬೃಹತ್‌ ಚುನಾವಣಾ ಪ್ರಚಾರಕ್ಕೆ ಆಗಮಿಸಲಿದ್ದಾರೆ.

ಕೋಮುವಾದಿ ಶಕ್ತಿಗಳು ಅಧಿಕಾರಕ್ಕೆ ಬರುವುದನ್ನು ತಡೆಗಟ್ಟಲು ಮತ್ತು ಜಾತ್ಯಾತೀತ ಮತಗಳು ವಿಭಟನೆಯಾಗದಂತೆ ತಡೆಯಲು ಬಹುಜನ ಸಮಾಟ ಪಾರ್ಟಿ ಈ ಬಾರಿ 130 ಕ್ಷೇತ್ರಗಳಲ್ಲಿ ಸ್ಪರ್ದಿಸುತ್ತಿದೆ. ಜೊತೆಗೆ ಭಾರತದ ಸಂವಿಧಾನದ ಆಶಯಗಳನ್ನು ಜನರಿಗೆ ತಲುಪಿಸಲು ಈ ಬಾರಿ ವಿಧಾನಸಭೆಯಲ್ಲಿ ಬಹುಜನ ಸಮಾಜ ಪಾಯ ಶಾಸಕರು ಆರಿಸಿ ಬರಬೇಕಾಗಿರುವುದು ಹಿಂದೆಂದಿಗಿಂತಲೂ ಈಗ ಅತ್ಯಂತ ಅಗತ್ಯವಾಗಿದೆ.

ಕರ್ನಾಟಕದಲ್ಲಿ ಕಳೆದ 40-50 ವರ್ಷಗಳಿಂದ ಬಗೆಹರಿಯದ ಬಗ‌ಹುಕುಂ ಸಾಗುವಳ ಸಕ್ರಮ, ವಸತಿ ಸಮಸ್ಯೆ ಕುಡಿಯುವ ನೀರಿನ ಸಮಸ್ಯೆ, ರೈತ ವಿದ್ಯಾರ್ಥಿಗಳ ಸಮಸ್ಯೆ ಮತ್ತು ವಿಶೇಷವಾಗಿ ನಿರುದ್ಯೋಗ ಸಮಸ್ಯೆ, ಬೆಲೆಏರಿಕೆಯಿಂದಾಗಿ ಜನಸಾಮಾನ್ಯರ ಬದುಕು ಮೂರಾ ಬಟ್ಟೆಯಾಗಿದೆ. ಇವುಗಳ ಪರಿಹಾರಕ್ಕಾಗಿ ಕರ್ನಾಟಕ ವಿಧಾನಸಭೆಯಲ್ಲಿ ಬಹುಜನ ಸಮಾಜ ಶಾಸಕರು ಗೆದ್ದುಬರಬೇಕಾಗಿದೆ. ಆದ್ದರಿಂದ ಕರ್ನಾಟಕದ ಮತಬಾಂಧವರು ಬಹುಜನ ಸಮಾಜ ಪಾರ್ಟಿಯ ಅಭ್ಯರ್ಥಿಗಳನ್ನು ಆರಿಸಬೇಕೆಂದು ವಿನಮ್ರ ಮನವಿ.

ಈಗಾಗಲೇ ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿರುವ ಕಾಂಗ್ರೇಸ್ ಶಾಸಕರಾಗಿದ್ದ ಮಾನ್ಯ ಅಖಂಡ ಶ್ರೀನಿವಾಸಮೂರ್ತಿಯವರನ್ನು ಪುಲಕೇಶಿನಗರದ ಅಭ್ಯರ್ಥಿಯಾಗಿ ಕಣಕ್ಕೆ ಇಳಸಲಾಗಿದೆ. ಗಾಂಧಿನಗರ ಕ್ಷೇತ್ರದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುತ್ತಿರುವ ಮಾಜಿ ಸಚಿವರಾದ ಮಾನ್ಯ ಕೃಷ್ಣಯ್ಯಶೆಟ್ಟಿಯವರು ಬಹುಜನ ಸಮಾಜ ಪಾರ್ಟಿ ಬೆಂಬಲಿತ ಅಭ್ಯರ್ಥಿಯಾಗಿದ್ದಾರೆ.

ಅಕ್ಕ ಮಾಯಾವತಿಯವರು ‘ಚುನಾವಣಾ ಪ್ರಚಾರಕ್ಕೆ ಬೆಂಗಳೂರಿಗೆ ಆಗಮನ: ದಿನಾಂಕ: 05.05.2023 .ಶುಕ್ರವಾರದಂದು ಬೆಂಗಳೂರಿನ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಬೃಹತ್‌ ಚುನಾವಣಾ ಪ್ರಚಾರಕ್ಕೆ ಆಗಮಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಕಾರ್ಯಕರ್ತರು, ಅಭ್ಯರ್ಥಿಗಳು ಮತ್ತು ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಬಹುಜನ ಸಮಾಜ ಪಾರ್ಟಿ ವತಿಯಿಂದ ಪ್ರೆಸ್ಸ್ ಕ್ಲಬ್ ವತಿಯಿಂದ ನಡೆದ ಪತ್ರಿಕಾ ಗೋಷ್ಥಿಯಲ್ಲಿ ತಿಳಿಸಿದರು.

City Today News – 9341997936