ಜೈ ಮಹಾ ಭಾರತ್‌ ಪಾರ್ಟಿ ಸಂಸ್ಥಾಪಕ ಮತ್ತು ರಾಷ್ಟ್ರೀಯ ಅಧ್ಯಕ್ಷ ಭಗವಾನ್ ಶ್ರೀ ಅನಂತವಿಷ್ಣು ರವರು ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ ಮುಖ್ಯ ಕಾರ್ಯ ಸೂಚಿ 2023ನ್ನು ಬಿಡುಗಡೆ ಮಾಡಿದರು.

ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಮುಖ್ಯ ಕಾರ್ಯ ಸೂಚಿ 2023

1. ಕರ್ನಾಟಕ ರಾಜ್ಯದಲ್ಲಿ ಮಧ್ಯಪಾನವನ್ನು ಸಂಪೂರ್ಣವಾಗಿ ನಿಷೇಧಿಸಿ ಅರ್ಹ ನಿರಾಶ್ರಿತ ಬಡವರಿಗೆ 100 ಚದರ ಗಜಗಳ ಓಪನ್ ಫ್ಲ್ಯಾಟ್ ಒದಗಿಸಿವುದು..

2. ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರ ಅಭಿವೃದ್ಧಿ, ಕರ್ನಾಟಕ ರಾಜ್ಯದಲ್ಲಿ ಎಲ್ ಪಿ ಜಿ ಗ್ಯಾಸ್ ಅನ್ನು ನಿಷೇಧಿಸಿ ಪ್ರತಿ ಮನೆಗೆ ರೂ.50/- ಗೋಬರ್ ಗ್ಯಾಸ್ ಒದಗಿಸುವ ಮೂಲಕ ಮತ್ತು ಅಡುಗೆ ಮನೆಯ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲಾಗುವುದು 3. ಎಲ್ಲ ಕ್ಷೇತ್ರಗಳಲ್ಲಿ ಕರ್ನಾಟಕ ರಾಜ್ಯದ ತ್ವರಿತ ಅಭಿವೃದ್ಧಿ ಮತ್ತು ಕರ್ನಾಟಕ ರಾಜ್ಯವನ್ನು ನಂಬರ್ ಒನ್‌ ರಾಜ್ಯವನ್ನಾಗಿ ಮಾಡುವುದು.

4. ಇಡೀ ಕರ್ನಾಟಕ ರಾಜ್ಯದ ನದಿಗಳನ್ನು ಸಂಪರ್ಕಿಸುವ ಕೃಷಿ ಭೂಮಿಗೆ ನೀರಾವರಿ ಒದಗಿಸುವುದು, ಕೃಷಿ ಕ್ಷೇತ್ರದ ಅಭಿವೃದ್ಧಿ, ಕುಡಿಯುವ ನೀರಿನ ಸೌಲಭ್ಯ ಮತ್ತು ರಾಜ್ಯತೆ, ಸಾಕಮ್ಮ ವಿದ್ಯುತ್ ಉತ್ಪಾದಿಸುವುದು ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಸರ್ಕಾರಿ ಮಾರ್ಕೆಟ್ ಸ್ನಾಪಿಸಲು ಮತ್ತು ಕೃಷಿ ಉತ್ಪನ್ನಗಳಿಗೆ ಮುಂಚಿತವಾಗಿ ಕನಿಷ್ಠ ಬೆಂಬಲ ಬೆಲೆ ಘೋಷಿಸಿ ಬಡ ರೈತರನ್ನು ಆರ್ಥಿಕವಾಗಿ ಬೆಂಬಲಿಸುವುದು ಮತ್ತು ಬಲಪಡಿಸುವುದು

5. ಇಡೀ ಕರ್ನಾಟಕ ರಾಜ್ಯದಲ್ಲಿ ಸಂಪೂರ್ಣ ಉಚಿತ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸುವುದು ಮತ್ತು ಜಾತಿ ಮತ ಭೇದ ವನ್ನು ಲೆಕ್ಕಿಸದೆ ಸಹಾಯಧನವನ್ನು ಒದಗಿಸುವುದು.

6. ಕರ್ನಾಟಕ ರಾಜ್ಯದಲ್ಲಿ ಇಡೀ ರಾಜ್ಯಕ್ಕೆ ಉಚಿತ ವೈದ್ಯಕೀಯ ಚಿಕಿತ್ಸೆ ಮತ್ತು ಔಷಧಿ ವಿತರಣೆಯ ನೀತಿಯನ್ನು ಜಾರಿಗೆ ತರುವುದು

7. ರಾಜ್ಯದ ಜನರ ಆರೋಗ್ಯ ರಕ್ಷಣೆಯ ಜವಾಬ್ದಾರಿಯನ್ನು ರಕ್ಷಿಸುವುದರ ಜೊತೆಗೆ ತೆರಿಗೆ ಹೊರೆಯನ್ನು ನಿವಾರಿಸುವುದು

8. ಕರ್ನಾಟಕ ರಾಜ್ಯದ ಶಾಸಕ ( MLA )ರು ತಮ್ಮ ಕ್ಷೇತ್ರಗಳಲ್ಲಿ ಶಾಶ್ವತ ಸರ್ಕಾರಿ ಕಚೇರಿಗಳು ಮತ್ತು ವಸತಿಗಳನ್ನು ಒದಗಿಸಲು ಅವುಗಳನ್ನು ಸರ್ವಜನಿಕರಿಗೆ ಪ್ರವೇಶಿಸಲು ಮತ್ತು ಸ್ಥಳೀಯ ಸಮಸ್ಯೆಗಳ ತ್ವರಿತ ಪರಿಹಾರಕ್ಕಾಗಿ ಹೊಣೆಗಾರಿಕೆ ವ್ಯವಸ್ಥೆಯನ್ನು ಜಾರಿಗೆ ತರಲು

9. ಕರ್ನಾಟಕ ರಾಜ್ಯದಲ್ಲಿ ಜನರಿಗೆ ಅವರ ಅರ್ಹತೆಗೆ ಅನುಗುಣವಾಗಿ ನಿಖರವಾದ ಉದ್ಯೋಗವನ್ನು ಒದಗಿಸಲು ನೀತಿ ನಿಯಮ ಅನುಷ್ಠಾನ ರೂಪಿಸುವುದು.

10. ಕರ್ನಾಟಕ ರಾಜ್ಯದ ಎಲ್ಲಾ ಗ್ರಾಮ ಮತ್ತು ನಗರಗಳಲ್ಲಿ ಸಸಿಗಳನ್ನು ನೆಡುವುದು ಮತ್ತು ನೈಸರ್ಗಿಕ ಪರಿಸರ ಹಾಗೂ ಗುಣಮಟ್ಟದ ರಸ್ತೆಯನ್ನು ರಕ್ಷಿಸಲು ವ್ಯವಸ್ಥೆ ಮಾಡುವುದು.ಮತ್ತು ಸಾರಿಗೆ ವ್ಯವಸ್ಥೆಯನ್ನು ನಿರ್ಮಿಸಿ ಸುಧಾರಿಸುವುದು.

11. ಇಡೀ ಕರ್ನಾಟಕ ರಾಜ್ಯದಲ್ಲಿ ಏರುತ್ತಿರುವ ಬೆಲೆಗಳನ್ನು ನಿಯಂತ್ರಿಸಿ. ಎಲ್ಲ ರೀತಿಯ ಭ್ರಷ್ಟಾಚಾರ, ಅಕ್ರಮ, ಅತ್ಯಾಚಾರ ಹಾಗೂ ಅಪರಾಧವನ್ನು ನಿಯಂತ್ರಿಸುವುದು ಹಾಗೂ ಶಾಂತಿಯುತ, ಸುರಕ್ಷತೆ ಮತ್ತು ದಕ್ತ ಸರಕಾರವನ್ನು ನಡೆಸುವುದು ಎಂದು ಜೈ ಮಹಾ ಭಾರತ್‌ ಪಾರ್ಟಿ ಸಂಸ್ಥಾಪಕ ಮತ್ತು ರಾಷ್ಟ್ರೀಯ ಅಧ್ಯಕ್ಷ ಭಗವಾನ್ ಶ್ರೀ ಅನಂತವಿಷ್ಣು ರವರು ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ ಮುಖ್ಯ ಕಾರ್ಯ ಸೂಚಿ 2023ನ್ನು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಬಿಡುಗಡೆ ಮಾಡಿದರು.

City Today News – 9341997936

ನಿವೃತ್ತ ಐ.ಎ.ಎಸ್., ಅಧಿಕಾರಿಯಾದ ಶ್ರೀ ಕೆ.ಶಿವರಾಮು ರವರಿಗೆ ಬಿ.ಜೆ.ಪಿ. ಪಕ್ಷದ ವತಿಯಿಂದ ಆನೇಕಲ್‌ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು “ಬಿ” ಫಾರಂ ಅನ್ನು ನೀಡುವುದು ಛಲವಾದಿ ಜನಾಂಗದ ಏಳಿಗೆಯ ಹಿತದೃಷ್ಟಿಯಿಂದ ಅಗತ್ಯ

ರಾಜ್ಯ ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷರು ಹಾಗೂ ಬಿ.ಜೆ.ಪಿಯ ಹಿರಿಯ ಮುಖಂಡರು, ನಿವೃತ್ತ ಐ.ಎ.ಎಸ್., ಅಧಿಕಾರಿಯಾದ ಶ್ರೀ ಕೆ.ಶಿವರಾಮು ರವರಿಗೆ ಬಿ.ಜೆ.ಪಿ. ಪಕ್ಷದ ವತಿಯಿಂದ ಆನೇಕಲ್ ವಿಧಾನಸಭಾ ಕ್ಷೇತ್ರದಿಂದ 2023ನೇ ಸಾಲಿನ ವಿಧಾನಸಭೆಗೆ ಸ್ಪರ್ಧಿಸಲು “ಬಿ” ಫಾರಂ ನೀಡುವ ಕುರಿತು ಇಂದು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ಪತ್ರಿಕಾ ಗೋಷ್ಠಿ ನಡೆಸಲಾಯಿತು.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಛಲವಾದಿ ಜನಾಂಗದ ಪರವಾಗಿ ತಮ್ಮಲ್ಲಿ ವಿನಂತಿಸುವುದೇನೆಂದರೆ, ಕರ್ನಾಟಕ ರಾಜ್ಯದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಛಲವಾದಿ ಜನಾಂಗವು ಇರುವುದು ತಿಳಿದ ವಿಷಯವಾಗಿರುವುದು ಸರಿಯಷ್ಟೆ ಈಗ ಈ ಜನಾಂಗದ ಶ್ರೀ ಮಲ್ಲಿಕಾರ್ಜುನ ಖರ್ಗೆ ರವರು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (ಎ.ಐ.ಸಿ.ಸಿ.) ಅಧ್ಯಕ್ಷರಾಗಿ ನೇಮಕ ಮಾಡಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಛಲವಾದಿ ಜನಾಂಗದವರ ಮತಗಳು ಬಿ.ಜೆ.ಪಿ. ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಒಲವನ್ನು ತೋರಿ ಮತ ಚಲಾಯಿಸುವಂತೆ ಪ್ರೇರೇಪಿಸುವುದು ಅಗತ್ಯವಾಗಿರುವ ಹಿನ್ನೆಲೆಯಲ್ಲಿ ಛಲವಾದಿ ಜನಾಂಗದ ಪ್ರಮುಖ ನಾಯಕರಾದ ಶ್ರೀ ಕೆ. ಶಿವರಾಮು ರವರು ತಮ್ಮ ಆಡಳಿತ ಸೇವೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಎಲ್ಲಾ ವರ್ಗದ ಜನತೆಯೊಂದಿಗೆ ಉತ್ತಮ ರೀತಿಯ ಬಾಂದವ್ಯವನ್ನು ಹೊಂದಿರು ತ್ತಾರೆ. ಹಾಗೂ ತಮ್ಮ ಸೇವಾ ಅವಧಿಯಲ್ಲಿ ಬಡ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ನಿರುದ್ಯೋಗಿ ಯುವಕರುಗಳಿಗೆ ಅನುಕೂಲವಾಗುವಂತೆ ಶ್ರಮಿಸಿರುತ್ತಾರೆ. ಇಂತಹ ಪ್ರಮುಖ ರಾಜ್ಯ ಛಲವಾದಿ ಮಹಾಸಭಾದ ರಾಜ್ಯಾಧ್ಯಕ್ಷರು ಹಾಗೂ ಬಿ.ಜೆ.ಪಿ.ಯ ಹಿರಿಯ ಮುಖಂಡರು, ನಿವೃತ್ತ ಐ.ಎ.ಎಸ್., ಅಧಿಕಾರಿಯಾದ ಶ್ರೀ ಕೆ.ಶಿವರಾಮು ರವರಿಗೆ ಬಿ.ಜೆ.ಪಿ. ಪಕ್ಷದ ವತಿಯಿಂದ ಆನೇಕಲ್‌ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು “ಬಿ” ಫಾರಂ ಅನ್ನು ನೀಡುವುದು ಛಲವಾದಿ ಜನಾಂಗದ ಏಳಿಗೆಯ ಹಿತದೃಷ್ಟಿಯಿಂದ ಅಗತ್ಯವಾಗಿರುತ್ತದೆ. ಈಗಾಗಲೇ ಬಿ.ಜೆ.ಪಿ. ಪಕ್ಷದಿಂದ ಆನೇಕಲ್ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸಲು ಬಿಡುಗಡೆ ಮಾಡಿರುವ ಮೊದಲ ಪಟ್ಟಿಯನ್ನು ಮಾರ್ಪಡಿಸಿ ಬಿ.ಜೆ.ಪಿ. ಪಕ್ಷದ ವತಿಯಿಂದ 2023ನೇ ಸಾಲಿನ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಶ್ರೀ ಕೆ.ಶಿವರಾಮು ರವರಿಗೆ ಟಿಕೇಟ್ ನೀಡಿ ಛಲವಾದಿ ಜನಾಂಗದ ಅಭ್ಯರ್ಥಿಯ ಗೆಲುವಿಗೆ ಅನುಕೂಲವಾಗುವಂತೆ ಛಲವಾದಿ ಮಹಾಸಭಾ ಹಾಗೂ ಸಮಸ್ತ ಛಲವಾದಿ ಜನಾಂಗದ ಪರವಾಗಿ ಇಂದು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಥಿಯಲ್ಲಿ ಮೈಕೋ ನಾಗರಾಜ್ ಒತ್ತಾಯ ಪೂರ್ವಕವಾಗಿ ವಿನಂತಿಸಿದರು.

City Today News-9341997936

ಚುನಾವಣಾ ಪ್ರಣಾಳಿಕೆಯಲ್ಲಿ ಹಸಿರು ನಗರಗಳು ಮತ್ತು ಆರೋಗ್ಯಕರ ಆಹಾರಕ್ಕಾಗಿ ಗ್ರೀನ್‌ಪೀಸ್‌ ಆಗ್ರಹ

ಬೆಂಗಳೂರು, ಏಪ್ರಿಲ್ 13: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಗ್ರೀನ್‌ಪೀಸ್ ಇಂಡಿಯಾ ಸಂಸ್ಥೆಯು ಸುಸ್ಥಿರ ನಗರಗಳು ಮತ್ತು ಪೌಷ್ಟಿಕಾಂಶದ ವೈವಿಧ್ಯತೆಗೆ ಸಂಬಂಧಿಸಿದ ಅಂಶಗಳಿಗೆ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಆದ್ಯತೆ ನೀಡುವಂತೆ ಆಗ್ರಹಿಸಿ, ಒಟ್ಟು 20 ಅಂಶಗಳ ಶಿಫಾರಸುಗಳನ್ನು ವಿವಿಧ ರಾಜಕೀಯ ಪಕ್ಷಗಳಿಗೆ ಸಲ್ಲಿಸಿದೆ. ಈ ಶಿಫಾರಸ್ಸುಗಳೊಂದಿಗೆ ಗ್ರೀನ್‌ಪೀಸ್ ಇಂಡಿಯಾ, ರಾಜಕೀಯ ಪಕ್ಷಗಳಿಗೆ ಸುಸ್ಥಿರ ನಗರಗಳು, ಸರ್ವರಿಗೂ ಸಮಾನ ಸಂಚಾರ ಸಾರಿಗೆ ವ್ಯವಸ್ಥೆಯ ಅವಕಾಶಗಳು ಮತ್ತು ಸುಸ್ಥಿರ ಕೃಷಿಯಂತಹ ಪ್ರಮುಖ ಪರಿಸರ ಸಮಸ್ಯೆಗಳನ್ನು ಪ್ರಸ್ತುತ ಮತ್ತು ಭವಿಷ್ಯದ ಶಾಸನ ಸಭೆಯ ನಿರ್ಣಯಗಳಲ್ಲಿ ಗಂಭೀರವಾಗಿ ಪರಿಗಣಿಸಲು ಹಕ್ಕೊತ್ತಾಯ ಮಂಡಿಸಿದೆ.

ಸುಸ್ಥಿರ ನಗರಗಳಿಗೆ ಸಂಬಂಧಿಸಿದಂತೆ ಮಂಡಿಸಲಾದ ಶಿಫಾರಸ್ಸುಗಳು ಸೈಕಲ್‌ ಸವಾರಿ (ಸೈಕ್ಲಿಂಗ್) ರೀತಿಯ ಸಾರ್ವಜನಿಕ ಸಾರಿಗೆ ಮತ್ತು ವಾಕಿಂಗ್‌ನಂತಹ ಮೋಟಾರುರಹಿತ ಸಾರಿಗೆ (NMT) ಮೇಲೆ ಕೇಂದ್ರೀಕರಿಸುತ್ತವೆ. ಇದರೊಂದಿಗೆ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುವ ಹೈಬ್ರಿಡ್ ಮಾದರಿಯ ಕೆಲಸದ ವ್ಯವಸ್ಥೆಯನ್ನು ಬೆಂಬಲಿಸುತ್ತದೆ. ಈ ಶಿಫಾರಸ್ಸುಗಳ ಮೂಲಕ, ಹೊರ ವರ್ತುಲ ರಸ್ತೆ (ಔಟರ್‌ ರಿಂಗ್‌ ರೋಡ್‌ ORR) ಉದ್ದಕ್ಕೂ ಬಸ್ ಆದ್ಯತಾ ಲೇನ್‌ನ ಪುನರುಜ್ಜೀವನ/ ಮರುನಿರ್ಮಾಣ ಮತ್ತು ಸಮಗ್ರ ಮಹಾನಗರ ಯೋಜನೆಯಲ್ಲಿ ಸೂಚಿಸಿದ 11 ಇತರ ಬಸ್ ಲೇನ್‌ಗಳ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ದಟ್ಟಣೆ ಮತ್ತು ಮಾಲಿನ್ಯದ ಮಟ್ಟಗಳನ್ನು ಗಮನದಲ್ಲಿರಿಸಿಕೊಂಡು ಈ ಬದಲಾವಣೆಗಳಿಗೆ ತುರ್ತಾಗಿ ಸ್ಪಂದಿಸುವಂತೆ ಪ್ರಸ್ತುತ ಹಕ್ಕೊತ್ತಾಯಗಳನ್ನು ಸಲ್ಲಿಸಲಾಗಿದೆ.

“ಹೆಚ್ಚು ಮೇಲ್ಸೇತುವೆಗಳು (ಪ್ಲೈ ಓವರ್‌ಗಳು), ರಸ್ತೆಗಳು ಮತ್ತು ಎಲಿವೇಟೆಡ್ ಕಾರಿಡಾರ್‌ಗಳನ್ನು (ಎತ್ತರಿಸಿದ ಮಾರ್ಗ) ನಿರ್ಮಿಸಲಾಗುತ್ತಿದೆ ಎಂದರೆ, ನಾವು ಹೆಚ್ಚು ಹೆಚ್ಚು ಖಾಸಗಿ ವಾಹನಗಳನ್ನು ಪ್ರೋತ್ಸಾಹಿಸುತ್ತಿದ್ದೇವೆ ಮತ್ತು ಜನಸಾಮಾನ್ಯರು ಬಸ್‌ಗಳು ಹಾಗು ಮೋಟಾರು ರಹಿತ ಸಾರಿಗೆಯಲ್ಲಿ ಪ್ರಯಾಣಿಸುವುದನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದ್ದೇವೆ ಎಂದರ್ಥ. ನಾವು ಗುಂಪಿನಿಂದ ಪ್ರತ್ಯೇಕವಾಗಿ ಉಳಿದಷ್ಟು, ನಮ್ಮ ನಗರಗಳ ಸುಸ್ಥಿರತೆ ಮತ್ತು ವಾಸಯೋಗ್ಯ ಗುಣಗಳು ಕ್ಷೀಣಿಸುತ್ತವೆ. ನಾವು ಹೆಚ್ಚು ಹೆಚ್ಚು ಬಸ್ಸುಗಳು, ಬಸ್ ಲೇನ್‌ಗಳು, ಸೈಕಲ್ ಸವಾರಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಪಡೆಯುವತ್ತ ಗಮನಹರಿಸಬೇಕು ಮತ್ತು ಖಾಸಗಿ ಸಾರಿಗೆಯನ್ನು ವಿಳಂಬ ಮಾಡದೆ ತಕ್ಷಣವೇ ನಿರ್ಲಕ್ಷಿಸಬೇಕಾಗಿದೆ. ನಮ್ಮ ನಗರವು ಅಪಾಯದಲ್ಲಿದೆ” ಎಂದು ಗ್ರೀನ್‌ಪೀಸ್ ಇಂಡಿಯಾ ಕ್ಯಾಂಪೇನರ್ ಅಮೃತಾ ಎಸ್ ಎನ್ ಹೇಳುತ್ತಾರೆ

” ಖಾಸಗಿ ಮೋಟಾರು ವಾಹನಗಳ ಅನಿಯಂತ್ರಿತ ಹೆಚ್ಚಳ ಮತ್ತು ಬಳಕೆಯಿಂದಾಗಿ ನಗರದ ಮೂಲಸೌಕರ್ಯ ಮತ್ತು ಜನಜೀವನದ ಗುಣಮಟ್ಟವು ತೀವ್ರ ಒತ್ತಡದಲ್ಲಿದೆ. ಸಾರಿಗೆಯ ಅಗತ್ಯಗಳಿಗಾಗಿ, ಪರ್ಯಾಯ ಸಾರಿಗೆ ವ್ಯವಸ್ಥೆಗಳಿಗೆ ಮಾಡುತ್ತಿರುವ ಹೂಡಿಕೆ ಮತ್ತು ಮೋಟಾರು ವಾಹನಗಳ ಮೇಲಿನ ಹೂಡಿಕೆಯಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ರಾಜಕೀಯ ಅಜೆಂಡಾ ಸೆಟ್ಟಿಂಗ್‌ /ಕ್ರಿಯಾಸೂಚಿಯ ಮೂಲಕ ಈ ಅಸಮಾನತೆಯನ್ನು ಸರಿಪಡಿಸಿ ಬೆಂಗಳೂರು ನಗರಕ್ಕೆ ಸಮತೋಲಿತ ಸಾರಿಗೆಯ ರೂಪುರೇಷೆಗಳನ್ನು ನಿರ್ದೇಶಿಸ ಬೇಕಿದೆ. ಬಸ್ಸುಗಳು, ಸೈಕ್ಲಿಂಗ್ ಮತ್ತು ವಾಕಿಂಗ್‌ಗೆ ಹೆಚ್ಚಿನ ಆದ್ಯತೆಯ ಮೇರೆಗೆ ಹಣವನ್ನು ಮೀಸಲಿರಿಸುವುದು ಮತ್ತು ಈ ಸಂಬಂಧೀ ನೀತಿ ನಿರೂಪಣೆಗೆ ಪ್ರತಿ ಪಕ್ಷವು ಪ್ರಣಾಳಿಕೆಯಲ್ಲಿ ಪ್ರಾಮುಖ್ಯತೆ ನೀಡಬೇಕು ಎಂದು ನಾವು ಹಕ್ಕೊತ್ತಾಯ ಮಂಡಿಸುತ್ತಿದ್ದೇವೆ” ಎಂದು ಕೌನ್ಸಿಲ್ ಫಾರ್ ಆಕ್ಟಿವ್ ಮೊಬಿಲಿಟಿಯ ಅಜಯ್ ನಂದಕುಮಾರ್ ಹೇಳುತ್ತಾರೆ.

ಗ್ರೀನ್‌ಪೀಸ್ ಇಂಡಿಯಾವು ಪ್ರಸ್ತುತ ಹವಾಮಾನ ವೈಪರೀತ್ಯಗಳನ್ನು ಎದುರಿಸುತ್ತಿರುವ ಭಾರತದಲ್ಲಿ, ಹವಾಮಾನ ಬಿಕ್ಕಟ್ಟಿನ ಪರಿಸ್ಥಿತಿಗೆ ಹೊಂದಿಕೊಳ್ಳಬಲ್ಲ ಆಹಾರ ವ್ಯವಸ್ಥೆಯನ್ನು ನಿರ್ಮಿಸಲು ಶಿಫಾರಸುಗಳನ್ನು ಮಂಡಿಸಿದೆ. ಇತರ ಶಿಫಾರಸುಗಳ ಪೈಕಿ, ಹವಾಮಾನ ಬದಲಾವಣೆಗೆ ಒಗ್ಗಿಕೊಳ್ಳಬಲ್ಲ ಸಿರಿಧಾನ್ಯವನ್ನು ಬೆಳೆಯುವುದನ್ನು ಉತ್ತೇಜಿಸುವ ಸಲುವಾಗಿ, ಕಡಿಮೆ ಫಲವತ್ತತೆ ಇರುವ ಭೂಮಿಯನ್ನು ಪೋಷಿಸುವ ರೈತರ ಕೊಡುಗೆಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವುದು ಹಾಗು ಸಿರಿಧಾನ್ಯ ಬೆಳೆಯುವ ರೈತರ ಪ್ರೋತ್ಸಾಹ ಧನವನ್ನು ಹೆಕ್ಟೇರ್‌ಗೆ 10,000 ರೂ.ನಿಂದ 25,000 ರೂ.ಗೆ ಹೆಚ್ಚಿಸುವುದು ಸೇರಿದೆ.

“ಹವಾಮಾನ ಬಿಕ್ಕಟ್ಟಿನಿಂದಾಗಿ ಸಾಮಾಜಿಕ ಭದ್ರತೆಯಲ್ಲಿ, ಅದರಲ್ಲೂ ಮುಖ್ಯವಾಗಿ ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆಯಲ್ಲಿ ಭಾರತವು ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ. ಬದಲಾಗುತ್ತಿರುವ ಹವಾಮಾನ ಮಾದರಿಗಳು, ಕೃಷಿ ಮತ್ತು ಆಹಾರದ ಮೇಲೆ ಅದರ ಪರಿಣಾಮಗಳು, ಹವಾಮಾನ ಬಿಕ್ಕಟ್ಟನ್ನು ತಗ್ಗಿಸುವುದು ಮಾತ್ರವಲ್ಲದೆ ಅದನ್ನು ಉತ್ತಮವಾಗಿ ಸ್ವೀಕರಿಸಬಲ್ಲ, ಆ ಸ್ಥಿತಿಗೆ ಒಗ್ಗಿಕೊಳ್ಳಬಲ್ಲ ಸಮುದಾಯಗಳನ್ನು ರೂಪಿಸಬಲ್ಲ ಆಹಾರ ವ್ಯವಸ್ಥೆಯನ್ನು ನಾವು ನಿರ್ಮಿಸಬೇಕು ಎಂಬ ಸಂದೇಶ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಸಿರಿಧಾನ್ಯಗಳು ಕರ್ನಾಟಕದ ಪಾಲಿಗೆ ದೊಡ್ಡ ಮಟ್ಟದ ಬದಲಾವಣೆಗೆ ಕಾರಣವೂ ಆಗಬಹುದು. ಬದಲಾಗುವ ಹವಾಮಾನ ಪರಿಸ್ಥಿತಿಗೆ ಒಗ್ಗಿಕೊಳ್ಳಬಲ್ಲ ಮತ್ತು ಪೌಷ್ಟಿಕಾಂಶ ಭರಿತ ಸಿರಿಧಾನ್ಯಗಳು ಸಾಂಸ್ಕೃತಿಕವಾಗಿ ರಾಜ್ಯದಲ್ಲಿ ಆಹಾರ ಪದ್ಧತಿಯ ಭಾಗವಾಗಿದೆ, ಉತ್ತಮ ನೀತಿನಿರೂಪಣೆ ಮತ್ತು ಅಗತ್ಯ ಮೂಲಭೂತ ಸೌಕರ್ಯಗಳ ಲಭ್ಯತೆ, ಮಧ್ಯಾಹ್ನದ ಬಿಸಿಊಟ ಮತ್ತು ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಸಿರಿಧಾನ್ಯಗಳ ಸೇರ್ಪಡೆ, ಸಿರಿಧಾನ್ಯ ಸಂಸ್ಕರಣಾ ಘಟಕಗಳೊಂದಿಗೆ ಸ್ವಸಹಾಯ ಗುಂಪುಗಳನ್ನು ಬೆಂಬಲಿಸುವುದು, ಕನಿಷ್ಠ ಬೆಂಬಲದಲ್ಲಿ ಖರೀದಿಸಿದ ಸಿರಿಧಾನ್ಯಗಳಿಗೆ ಬೆಲೆ ಮತ್ತು ಮಾರುಕಟ್ಟೆಯನ್ನು ಖಾತರಿಪಡಿಸುವುದು ಆಹಾರದಲ್ಲಿ ವೈವಿಧ್ಯತೆಗೆ ಕಾರಣವಾಗುತ್ತದೆ. ಆದ್ದರಿಂದ, ಈ ಶಿಫಾರಸುಗಳನ್ನು ಅಳವಡಿಸಿಕೊಳ್ಳುವಂತೆ ನಾವು ರಾಜಕೀಯ ಪಕ್ಷಗಳನ್ನು ಆಗ್ರಹಿಸುತ್ತೇವೆ ಮತ್ತು ಹೊಸ ಸರ್ಕಾರವು ಅದನ್ನು ಸಮರೋಪಾದಿಯಲ್ಲಿ ಜಾರಿಗೊಳಿಸಬೇಕುʼʼ ಎಂದು ಗ್ರೀನ್‌ಪೀಸ್ ಇಂಡಿಯಾದ ಹಿರಿಯ ಪ್ರಚಾರಕ ರೋಹಿನ್ ಕುಮಾರ್ ಹೇಳುತ್ತಾರೆ.

City Today News-9341997936

ಶರವಣ ರವರು ಪಾಲ್ಗೊಂಡಿರುವ ಯಾವುದೇ ಜಾಹೀರಾತು ಪ್ರಸಾರ ಮಾಡದಂತೆ ಸೂಚನೆ ನೀಡಿ, ಎಲ್ಲಾ ಜಾಹಿರಾತನ್ನು ಕೂಡಲೇ ತಡೆ ಕೊರಿ ಮನವಿ

M.L.C ಮತ್ತು ಜೆ.ಡಿ.ಎಸ್ ಪಕ್ಷದ ರಾಜ್ಯ ಪದಾಧಿಕಾರಿಗಳು ಹಾಗೂ ಶ್ರೀ ಸಾಯಿ ಗೋಲ್ಡ್ ಮಾಲೀಕರು, ಆಗಿರುವ ಶ್ರೀಯುತ ಶರವಣ ರವರು, ಸಾಯಿ ಗೋಲ್ಡ್ ಉದ್ಯಮದ ಕುರಿತು ಖಾಸಗಿ ಸುದ್ದಿವಾಹಿನಿಗಳಲ್ಲಿ, ಮತ್ತು ಇತರೆ ಯಾಗಿ ಜಾಹೀರಾತು ಪ್ರದರ್ಶನವಾಗುತ್ತಿದ್ದು, ಕೂಡಲೇ ಎಲ್ಲಾ ಜಾಹಿರಾತನ್ನು ಚುನಾವಣೆ ಮುಕ್ತಾಯಗೊಳ್ಳುವ ತನಕ ತಡೆಹಿಡಿಯುವಂತೆ ,

ರಾಮಲಿಂಗೇಗೌಡ, ಡಿ ಎಸ್ ಉಪಾಧ್ಯಕ್ಷರು, ಕತ್ರಿಗುಪ್ಪೆ ವಾರ್ಡ್, ಬಸವನಗುಡಿ ಮಂಡಲ
ಭಾರತೀಯ ಜನತಾ ಪಾರ್ಟಿ – ಕರ್ನಾಟಕ, ರವರು ಮುಖ್ಯ ಚುನಾವಣಾಧಿಕಾರಿ ಗಳು
ನಿರ್ವಾಚನ ನಿಲಯ, ಸೆಂಟ್ರಲ್ ಕಾಲೇಜು ವಿದ್ಯುನ್ಮಾನ ಕಚೇರಿಗಳು, ಸೆಂಟ್ರಲ್ ಕಾಲೇಜು, ಶೇಷಾದ್ರಿ ರಸ್ತೆ, ಅಂಬೇಡ್ಕರ್ ವೀಧಿ, ಬೆಂಗಳೂರು, ಕರ್ನಾಟಕ 560001, ರವರಿಗೆ ದೂರು ನೀಡಿದರು ಮತ್ತು ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಶರವಣ ರವರು ಪಾಲ್ಗೊಂಡಿರುವ ಯಾವುದೇ ಜಾಹೀರಾತು ಪ್ರಸಾರ ಮಾಡದಂತೆ ಸೂಚನೆ ನೀಡಿ, ಎಲ್ಲಾ ಜಾಹಿರಾತನ್ನು ಕೂಡಲೇ ತಡೆಹಿಡಿಯುವಂತೆ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದು ವಿನಂತಿಸಿರುವುದಾಗಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದರು.

City Today News – 9341997936

ನಮ್ಮ ನಮ್ಮಲ್ಲಿ ಒಡಕು ಮೂಡಿಸಿ ನೇಕಾರರಿಗೆ ಶಕ್ತಿಯಾಗಿರುವ ಉಮಾಶ್ರೀಯವರಿಗೆ ಕಾಂಗ್ರೆಸ್‌ ಟಿಕೆಟ್ ತಪ್ಪಿಸಲು ಕುತಂತ್ರ

ಈಗಾಗಲೇ 2023 .ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದ್ದು ಎಲ್ಲ ರಾಜಕೀಯ ಪಕ್ಷಗಳಲ್ಲಿ ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ತೇರದಾಳ -20 ವಿಧಾನಸಭಾ ಮತಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ವತಿಯಿಂದ ಅನೇಕರು ಅರ್ಜಿ ಸಲ್ಲಿಸಿರುತ್ತಾರೆ. ಮಾಜಿ ಸಚಿವರಾದ ಉಮಾಶ್ರೀಯವರು ಮತ್ತೊಂದು ಬಾರಿ ಚುನಾವಣೆಯಲ್ಲಿ ತೇರದಾಳದಿಂದ ಸ್ಪರ್ಧಿಸಲು ಪಕ್ಷದ ಮುಖಂಡರುಗಳು, ಕಾರ್ಯಕರ್ತರು ಭಿನ್ನವಹಿಸಿಕೊಂಡಿರುತ್ತೇವೆ. ಇವರು ನೇಕಾರ ಮನೆತನದಲ್ಲಿ ಹುಟ್ಟಿ ಬೆಳೆದು ಕಲಾವಿದೆಯಾಗಿ ನಾಡಿನಲ್ಲಿ ಹೆಸರು ಮಾಡಿರುತ್ತಾರೆ. ಹಾಗೆ ರಾಜಕೀಯ ಕ್ಷೇತ್ರದಲ್ಲಿ ಕಾಂಗ್ರಸ್ ಪಕ್ಷದಲ್ಲಿ ಮಹಿಳಾ ನಾಯಕಿಯರಲ್ಲಿ ಓರ್ವರಾಗಿರುತ್ತಾರೆ. ಇವರು ತೇರದಾಳ ವಿಧಾನಸಭಾ ಕ್ಷೇತ್ರದಿಂದ 2008ರಲ್ಲಿ ಸ್ಪರ್ಧಿಸಿ ಸೋತರು, ಸೋತರೂ ಅಲ್ಲಿಯೇ ವಾಸವಿದ್ದು ಪಕ್ಷ ಸಂಘಟಿಸಿ ನಿರಂತರ ಶ್ರಮವಹಿಸಿದರು. 2013ರಲ್ಲಿ ಗೆದ್ದು ಸಚಿವರಾದರು. ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸವನ್ನು ಮಾಡಿರುತ್ತಾರೆ. ಮುಂದೆ 2018ರಲ್ಲಿ ಮತ್ತೆ ಸೋಲನ್ನು ಅನುಭವಿಸಿದರು.

ಈಗ ಮುಂದಿನ 2023ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದ ವರಿಷ್ಠರು ಉಮಾಶ್ರೀಯವರಿಗೆ ಟಿಕೆಟ್‌ ನೀಡಬೇಕೆಂದು ಒತ್ತಾಯಿಸುತೇವೆ.

ನೇಕಾರ ಸಮುದಾಯದ ಉಮಾಶ್ರೀಯವರು 2001 ವಿಧಾನಪರಿಷತ್‌ ಸದಸ್ಯರಾದಾಗಿನಿಂದ ಇಲ್ಲಿಯವರೆಗೂ ಅಂದರೆ ಸುಮಾರು 2 ದಶಕಗಳ ಕಾಲ ರಾಜ್ಯ ನೇಕಾರರ ಸಮಸ್ಯೆಗಳ ಬಗ್ಗೆ ಸ್ಪಂದಿಸಿರುತ್ತಾರೆ, ವಿದ್ಯುತ್‌ ಸಬ್ಸಿಡಿ, ನೇಕಾಲಕ, ಸಾಲದ ಅಸಲು ಮತ್ತು ಬಡ್ಡಿ ಮನ್ನಾ, ವಸತಿ ಸಾಲ ಮತ್ತು ಬಡ್ಡಿ ಮನ್ನಾ ಕ್ಷೇತ್ರದಲ್ಲಿ ನೇಕಾರ ಭವನ, ಶ್ರೀ ದೇವರ ದಾಸಿಮಯ್ಯ ಭವನ, ಬನಹಟ್ಟಿ ನೊಲಿನ ಗಿರಣಿ ಅಭಿವೃದ್ಧಿಗೆ ಸಹಾಯ, ಕೈಮಗ್ಗ ನೇಕಾರರಿಗೆ ಹಕ್ಕುಪತ್ರ ಮತ್ತು ಆಸ್ತಿ ಮಾಲಿಕತ್ವದಲ್ಲಿ ಸಹಾಯ, ಸಮುದಾಯ ಭವನಗಳು. ಈಗ ಹಲವಾರು ಕೆಲಸಗಳನ್ನು ಮಾಡಿರುವುದು ನೇಕಾರ ಸಮುದಾಯಕ್ಕೆ ಇವರ ನಾಯಕತ್ವ ವರದಾನವಾಗಿರುತ್ತದೆ.

ಕೆಲವು ಜನರು ನೇಕಾರರ ಒಗ್ಗಟ್ಟು ಒಡೆಯಲು ಹುನ್ನಾರ ನಡೆಸಿದ್ದಾರೆ. ನೇಕಾರರಲ್ಲಿ ಹಟಗಾರ, ಕುರುವಿವರಟ್ಟಿ, ದೇವಾಂಗ ಸ್ವಕುಳಸಾಲಿ, ಪಟ್ಟಸಾಲಿ, ಪದ್ಮಸಾಲಿ, ಸಾಲಿ, ತೊಗಟವೀರ ಹೀಗೆ ಅನೇಕ ಜಾತಿಯ ಹೆಸರಿನಲ್ಲಿದರೂ ಇವರೆಲ್ಲರೂ ಆನುವಂಶಿಯವಾಗಿ ನೇಕಾರರೇ ಆಗಿರುತ್ತಾರೆ. ಇವಲ್ಲ ಜಾತಿ ಜನಾಂಗ ಮಾಡುವ ನೇಕಾರಿಕೆ ವೃತ್ತಿ ಸಮಸ್ಯೆಗಳಿಗೆ ಸರ್ಕಾರದಿಂದ ಕೆಲವೊಂದು ಪರಿಹಾರಗಳನ್ನು, ಯೋಜನೆಗಳನ್ನು ರೂಪಿಸಿ ಅನುಷ್ಠಾನ ಮಾಡಿಸಿರುತ್ತಾರೆ. ಇವರಲ್ಲದೇ ನೇಕಾರಿಕೆಯನ್ನು ಆಶ್ರಯಿಸಿ ಇತರೆ ಜಾತಿ ಜನಾಂಗದವರೂ ಪ್ರೀತಿಯಿಂದ ಕಾಣುವ ವ್ಯಕ್ತಿ ಮತ್ತು ಶಕ್ತಿಯಾಗಿದ್ದಾರೆ ಉಮಾಶ್ರೀ.

ಕಾಣದ ಕೈಗಳು ತೇರದಾಳ ಕ್ಷೇತ್ರದಲ್ಲಿ ನಮ್ಮ ನಮ್ಮಲ್ಲಿ ಒಡಕು ಮೂಡಿಸಿ ನೇಕಾರರಿಗೆ ಶಕ್ತಿಯಾಗಿರುವ ಉಮಾಶ್ರೀಯವರಿಗೆ ಕಾಂಗ್ರೆಸ್‌ ಟಿಕೆಟ್ ತಪ್ಪಿಸಲು ಕುತಂತ್ರ ನಡೆಸಿದ್ದಾರೆ. ನಮ್ಮ ಸಹೋದರರಂತೆ ಇರುವ ನೇಕಾರ ಜಾತಿಗೆ ಕುಮ್ಮಕ್ಕು ನೀಡಿ ಒಡೆದು ಆಳುವ ನೀತಿ ಆನುಸರಿಸುತ್ತಿದ್ದಾರೆ.

ತೇರದಾಳ ಮತಕ್ಷೇತ್ರದ ಪಟಗಾರ ಮತ್ತು ಕುರುವಿನಶೆಟ್ಟಿ ಸಮುದಾಯ ನೇಕಾರರಾದ ನಾವು ಇವರ ನಾಯಕತ್ವವನ್ನು ಮೆಚ್ಚಿ ಅನುಸರಿಸಿರುತ್ತೇವೆ. ಇವರನ್ನು ಕೇವಲ ನೇಕಾರ ಸಮುದಾಯ ಅಷ್ಟೇ ಅಲ್ಲದೇ ಸರ್ವ ಸಮಾಜಗಳು ಗೌರವದಿಂದ ಇವರನ್ನು ಕಾಣುತ್ತದೆ.

ಆ ಕಾರಣದಿಂದ ಈ ಕ್ಷೇತ್ರದಲ್ಲಿ ಉಮಾಶ್ರೀಯವರಿಗೆ ಟಿಕೆಟ್ ನೀಡಬೇಕು ಹಟಗಾರ, ಕುರುವಿನಶೆಟ್ಟಿ, ದೇವಾಂಗ ಎಂಬ ಬೇದವಿಲ್ಲದೆ ದುಡಿಯಬೇಕಾದ ಕ್ಷಣದಲ್ಲಿ ಭೇದ ಸೃಷ್ಟಿಸಿ ಮಾತನಾಡುವುದು ಸರಿಯಾದುದಲ್ಲ ಎಂದು ಸ್ಪಷ್ಟ ಪಡಿಸಲಿಚ್ಚಿಸುತ್ತೇವೆ.

ನೇಕಾರ ಸಮಾಜದ ಮುಖಂಡರು ಶ್ರೀ ಚನ್ನವಿರಪ್ಪ ಹಾದಿಮನಿ, ಶ್ರೀ ರಾಜೇಂದ್ರ ಬದನ್ನನವರ, ಶ್ರೀ ಬಸವರಾಜ ಗುದೊಡಗಿ, ಶ್ರೀ ದಾನಪ್ಪ ಹುಲಜತ್ತಿ, ಶ್ರೀ ರಾಜು ಭಾವಿಕಟ್ಟಿ, ಶ್ರೀ ಈಶ್ವರ ಚಮಕೇರಿ, ಶ್ರೀ ಶೇಖರ ಹಕ್ಕಲದಡ್ಡಿ, ಶ್ರೀ ಈರಣ ಸೊನ್ನದ, ಶ್ರೀ ಕಿರಣ್ ಕರಲಟ್ಟೆ ಶ್ರೀ ಮಹಾನಿಂಗ ಕಂದಗಳ, ಪಕ್ಷದ ಮುಖಂಡರಾದ ಶ್ರೀ ನೀಲಕಂಠ ಮುತ್ತೂರ, ಶ್ರೀ ಚಿದಾನಂದ ಗಾಳಿ, ಶ್ರೀ ಸಂಗವ ಉಪ್ಪಲದಿನ್ನಿ, ಬ್ಲಾಕ್‌ ಅಧ್ಯಕರಾದ ಶ್ರೀ ಲಕ್ಷಣ್ಣ ದೇಸಾರ ಮತ್ತು ಶ್ರೀ ಮಲ್ಲಪ್ಪ ಸಿಂಗಾಡಿ, ಶ್ರೀ ಸಂಜೀವ ಜೋತಾವರವರು, ಶ್ರೀ ರಾಜು ಮೆಟ್ಟಿಕಲಿ, ಶ್ರೀ ಗುರುನಾಥ ಬಕರೆ, ಶ್ರೀ ಹನುಮಂತ ಬರಗಾಲ, ಶ್ರೀ ಬಸವರಾಜ ಶಿಂಧೆ, ಸಾದಾಶಿವ ಗೋಂದಕ‌, ಮಹಾನಿಂಗ ಮಾಯನ್ನವರ, ಶ್ರೀ ರಮೇಶ ಸವದಿ, ಶ್ರೀ ಶಂಕರ್ ಉಗಾರ, ಶ್ರೀ ಪೀಯಸ್ ಒಸ್ವಾಲ್, ಶ್ರೀ ವಿಠಲ ಹೊಸಮಾ ಶ್ರೀ ತಮ್ಮಣಿ ಜೋಂಗನವರ, ಶ್ರೀ ರೆಡ್ಡಿ, ಶ್ರೀ ಕಾಶಿರಾಯ ನಾಯಕ, ಇತರರು ಹಾಜರಿದ್ದರು,

City Today News – 9341997936