ಪ್ರಸ್ತುತ ಡಾ|| ಮಲ್ಲೇಶಪ್ಪ ಎಸ್. ದಡ್ಡನವರ ಅವರು ತೇರದಾಳ ಮತ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷದ ಪ್ರಬಲ ಆಕಾಂಕ್ಷಿಯಾಗಿದ್ದು, ಅವರಿಗೆ ಪಕ್ಷದ ವರಿಷ್ಠರು ಸ್ಪರ್ಧಿಸಲು ಅನುವು ಮಾಡಿಕೊಡಬೇಕು.

ಬಾಗಲಕೋಟೆ ಜಿಲ್ಲೆಯ ತೇರದಾಳ ಮತಕ್ಷೇತ್ರವು ನೇಕಾರ ಲಿಂಗಾಯತ ಸಾಂದ್ರತೆಯುಳ್ಳ ಕ್ಷೇತ್ರವಾಗಿದ್ದು, ಕಳೆದ ನಾಲ್ಕು ಚುನಾವಣೆಗಳಿಂದ ಎಲ್ಲಾ ರಾಜಕೀಯ ಪಕ್ಷಗಳು ನೇಕಾರ ಲಿಂಗಾಯತರನ್ನು ಕಡೆಗಣಿಸುತ್ತಾ ಬಂದಿದ್ದರಿಂದ ನಾವು ರಾಜಕೀಯ ಪಕ್ಷಗಳನ್ನು ಎಚ್ಚರಿಸುವ ಸಲುವಾಗಿ ಪತ್ರಿಕಾಗೋಷ್ಠಿಯನ್ನು ಕರೆಯಲಾಗಿದೆ.

ಸುಮಾರು 2.25 ಲಕ್ಷ ಮತದಾರರನ್ನು ಹೊಂದಿರುವ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ 60 ಸಾವಿರಕ್ಕೂ ಹೆಚ್ಚು ಹಟಗಾರ ಲಿಂಗಾಯತ (ನೇಕಾರ) ಮತವಿದ್ದು, 2.5 ಲಕ್ಷಕ್ಕೂ ಹೆಚ್ಚು ಮತದಾರರು ಬಾಗಲಕೋಟೆ ಜಿಲ್ಲೆಯಲ್ಲಿ ಹಾಗೂ 10 ಲಕ್ಷಕ್ಕೂ ಹೆಚ್ಚು ಮತದಾರರು ಕರ್ನಾಟಕ ರಾಜ್ಯದಲ್ಲಿದ್ದು ನಮ್ಮ ಈ ಧ್ವನಿ ಯಾರಿಗೂ ಕೇಳಿಸದೆ ಅರಣ್ಯರೋದನವಾಗಿದೆ, ಅದರಲ್ಲೂ ತೇರದಾಳ ಮತಕ್ಷೇತ್ರದಲ್ಲಿ ರಾಜ್ಯದಲ್ಲಿಯೇ ಹಟಗಾರ ಲಿಂಗಾಯತ (ನೇಕಾರ) ಸಾಂದ್ರತೆ ಹೆಚ್ಚಿಗೆ ಇದ್ದು , ಇಲ್ಲಿ ಪಕ್ಷದ ಟಿಕೇಟ್ ಕೇಳಲು ಹೆಚ್ಚು ಹಕ್ಕು ಹೊಂದಿದ್ದೇವೆ.

ಈಗ ಮುಖ್ಯವಾಗಿ ನಮ್ಮ ಸಮಾಜದ ಡಾ|| ಮಲ್ಲೇಶಪ್ಪ ಎಸ್. ದಡ್ಡೆನವರ ವೃತ್ತಿಯಿಂದ ವೈದ್ಯರು, ಮುಖ್ಯವಾಗಿ ಇವರ ಮನೆತನವು ಕಾಂಗ್ರೇಸ್ ಪಕ್ಷದ ಕಛೇರಿಯಂತೆ ಸ್ವಾತಂತ್ರ್ಯ ಕಾಲದಿಂದಲೂ ನಡೆದುಕೊಂಡು ಬಂದಿದ್ದು, ಶ್ರೀಯುತರು ಹಲವಾರು ಸಂಘ ಸಂಸ್ಥೆಗಳನ್ನು ಹುಟ್ಟು ಹಾಕಿ, ಈಗಾಗಲೇ ತಮ್ಮನ್ನು ತಾವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಪ್ರಸ್ತುತ ಡಾ|| ಮಲ್ಲೇಶಪ್ಪ ಎಸ್. ದಡ್ಡನವರ ಅವರು ತೇರದಾಳ ಮತ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷದ ಪ್ರಬಲ ಆಕಾಂಕ್ಷಿಯಾಗಿದ್ದು, ಅವರಿಗೆ ಪಕ್ಷದ ವರಿಷ್ಠರು ಸ್ಪರ್ಧಿಸಲು ಅನುವು ಮಾಡಿಕೊಡಬೇಕು. ಕಾಂಗ್ರೇಸ್ ಪಕ್ಷವು ಸಾಮಾಜಿಕ ನ್ಯಾಯದ ಪರಿಪಾಲನೆ ಮಾಡಿಕೊಂಡು ಬಂದಿದ್ದು ಪಕ್ಷವು ಎಲ್ಲರಿಗೂ ಸೇರಿದ್ದು ಹಾಗೂ ಎಲ್ಲರ ಹಿತವನ್ನು ಕಾಯ್ದುಕೊಂಡು ಹೋಗುತ್ತದೆ ಎಂಬ ಬಲವಾದ ನಂಬಿಕೆ ಹಾಗೂ ವಿಶ್ವಾಸವನ್ನು ಹೊಂದಿದ್ದೇವೆ ಎಂದು ಶ್ರೀ ಶ್ರೀ ಶ್ರೀ ಚಿಕ್ಕರೇವಣಸಿದ್ಧ ಸ್ವಾಮೀಜಿ ಪತ್ರಿಕಾ ಫ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು

ಪತ್ರಿಕಾಗೋಷ್ಠಿಯ ಉಪಸ್ಥಿತಿ

1) ಪರಮಪೂಜ್ಯ ಶ್ರೀ ಶ. ಬ್ರ. ಅಭಿನವ ರೇವಣಸಿದ್ದ ಪಟ್ಟದೇವರು, ಗುರು ಹಿರೇಮಠ, ಮೈಂದರಿಗಿ.

2) ನಿರಂಜನ ಪ್ರಣವ ಸ್ವರೂಪಿ ಶ್ರೀ ಮೃತುಂಜಯ ಮಹಾಸ್ವಾಮಿಗಳು, ಸಿದ್ಧಾಶ್ರಮ ವಿರಕ್ತಮಠ, ಮೈಂದರಿಗಿ,

3) ಪರಮಪೂಜ್ಯ ಶ್ರೀ ಘನಲಿಂಗ ಮಹಾಸ್ವಾಮಿಗಳು, ಸಿದ್ದರೂಢ ಮಠ, ನೀರಲಕೇರಿ,

ನೇಕಾರ ಮುಖಂಡರಾದ ಶ್ರೀ ಶಂಕರ್ ಜಾಲಿಗಿಡದ, ಡಾ.ಪಂಡಿತ್ ಪಟ್ಟಣ, ಶ್ರೀ ಮಲ್ಲಪ್ಪ ಭಾವಿಕಟ್ಟಿ, ಶ್ರೀ ಚಂದ್ರಶೇಖರ ಶಿವಪೂಜಿ ಹಾಗೂ ಶ್ರೀ ಜಯವಂತ್ ಇಂಜಿನೇರಿ.

City Today News – 9341997936

ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಹಾಲಿ ಶಾಸಕ ನೆಹರು ಓಲೆಕಾರ್ ಗೆ ಟಿಕೆಟ್ ನೀಡದಂತೆ ಪಕ್ಷಕ್ಕೆ ಹಾವೇರಿ ಬಿಜೆಪಿ ಕಾರ್ಯಕರ್ತ ಸಂತೋಷ್ ರೆಡ್ಡಿ‌ ಆಗ್ರಹ

ಹಾವೇರಿ ಬಿಜೆಪಿಯಲ್ಲಿ ಜೋರಾದ ಟಿಕೆಟ್ ಫೈಟ್..!

‘ಅಭ್ಯರ್ಥಿ ಬದಲಿ ಬಿಜೆಪಿ ಗೆಲ್ಲಿಸಿ’ ಅಭಿಯಾನ..

ಹಾವೇರಿ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಬದಲಾವಣೆಗೆ ಆಗ್ರಹ

ಹಾವೇರಿಯ ಬಿಜೆಪಿ ಕಾರ್ಯಕರ್ತ ಸಂತೋಷ್ ರೆಡ್ಡಿ‌ ಅವರಿಂದ ಸುದ್ದಿಗೋಷ್ಟಿ

ಹಾವೇರಿಯಲ್ಲಿ ಬಿಜೆಪಿ ಗೆಲ್ಲಬೇಕು ಅಂದ್ರೆ ಅಭ್ಯರ್ಥಿ ಬದಲಾವಣೆ ಆಗಬೇಕು, ಹಾಲಿ ಶಾಸಕ ನೆಹರು ಓಲೆಕಾರ್ ಗೆ ಟಿಕೆಟ್ ನೀಡಬಾರದು, ಶಾಸಕರಿಗೆ ಹೀಗಾಗಿಲೇ ಲೋಕಾಯುಕ್ತ ಕೋರ್ಟ್ 2ವರ್ಷ ಶಿಕ್ಷೆ ನೀಡಿದೆ. ನಿಷ್ಠಾವಂತ ಬಿಜೆಪಿ ಕಾರ್ಯಕರ್ತನಿಗೆ ನೀಡುವುದು ಸೂಕ್ತ.

ಕೆಲವು ದಿನಗಳ ಹಿಂದೆ‌ ನವೀನ್ ಎಂಬುವವರ ಮೇಲೆ ಹಲ್ಲೆ ನಡೆದಿತ್ತು,ಈ ಕೇಸ್ ಸಂಬಂಧ ಹಲವರ‌ ಮೇಲೆ ಸುಳ್ಳು ಕೇಸ್ ದಾಖಲಾಗಿದೆ,ಟಿಕೆಟ್ ಆಕಾಂಕ್ಷಿಗಳ ಮೇಲೆ ಸುಳ್ಳು ಎಫ್ಐಆರ್ ಮಾಡಿಸಲಾಗಿದೆ..

ಈಗಾಗಲೇ ಶಿಕ್ಷೆ ಆಗಿರುವ ನೆಹರು ಓಲೇಕಾರ ಅವರಿಗೆ ಟಿಕೆಟ್ ನೀಡಬಾರದು, ಕೋರ್ಟ್ ಸ್ಟೇ ಕೊಟ್ಟಿದ್ದನ್ನೇ ದೊಡ್ಡ ಗೆಲುವು ಎಂದು ಸಂಭ್ರಮಿಸಿದ್ದಾರೆ. ಇಷ್ಟಾದರೂ ಓಲೆಕಾರ್ ಗೆ ಟಿಕೆಟ್ ನೀಡುವಂತೆ‌ ಕೆಲವು ಬೆಂಬಲಿಗರು ಕೇಳ್ತಾ ಇದ್ದಾರೆ. ಈ ಬಾರಿ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ನೀಡಬೇಕು. ವೆಂಕಟೇಶ್ ನಾರಯಣಿ, ಪರಮೇಶ್ವರಪ್ಪ ಮೇಗಳಮನಿ, ಶ್ರೀಪಾದ್ ಬೆಟ್ಟಗೆರಿಯಲ್ಲಿ ಒಬ್ಬರಿಗೆ ಟಿಕೆಟ್ ನೀಡುವಂತೆ ನನ್ನ ಮನವಿ.

ನೆಹರು ಓಲೆಕಾರ್ ಶಾಸಕ ಸ್ಥಾನಕ್ಕೆ ಅನರ್ಹ ಮಾಡುವಂತೆ ರಾಜ್ಯಪಾಲರು, ನಳೀನ್ ಕಟೀಲ್, ನಡ್ಡಾ ಅವರಿಗೆ ಪತ್ರ ಬರೆದಿದ್ದೇನೆ, ಬಗ್ಗೆ ಚುನಾವಣಾ ಆಯೋಗಕ್ಕೂ ದೂರು ನೀಡಲಿದ್ದೇನೆ.

ಹೀಗಾಗಿ ನೆಹರು ಓಲೆಕಾರ್ ಅವರಿಗೆ ಟಿಕೆಟ್ ನೀಡದಂತೆ ಪಕ್ಷಕ್ಕೆ ನನ್ನ ಆಗ್ರಹ, ಭ್ರಷ್ಟಾಚಾರ ದಲ್ಲಿ ಭಾಗಿಯಾಗಿರುವ ಯಾವುದೇ ಅಭ್ಯರ್ಥಿ ಗಳಿಗೂ ಟಿಕೆಟ್ ನೀಡದಂತೆ ನನ್ನ ಮನವಿ. ಇಲ್ಲವಾದಲ್ಲಿ ಕಾಂಗ್ರೆಸ್ ಸುಲಭವಾಗಿ ಗೆಲ್ಲುತ್ತದೆ ಎಂದು ಹಾವೇರಿ ಬಿಜೆಪಿ ಕಾರ್ಯಕರ್ತ ಸಂತೋಷ್ ರೆಡ್ಡಿ‌ ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

City Today News – 9341997936

ರಾಷ್ಟ್ರೀಯ ಜನಹಿತ ಪಾರ್ಟಿ (ಆರ್.ಜೆ.ಪಿ) ಪ್ರಾರಂಭ ಹಾಗು ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ

07-04-2323 ರಂದು ರಾಜ್ಯದಲ್ಲಿ ರಾಷ್ಟ್ರೀಯ ಜನಹಿತ ಪಾರ್ಟಿ (ಆರ್.ಜೆ.ಪಿ) ಒಂದು ರಾಜಕೀಯ ಪಕ್ಷವನ್ನು ಪ್ರಾರಂಭ ಮಾಡುತ್ತಿದ್ದು, ಹಾಗು ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಪ್ರತಿಯೊಬ್ಬ ಸಾಮಾನ್ಯ ಜನರಿಗೂ ಆರ್ಥಿಕ ಸೌಲಭ್ಯದ ಹಕ್ಕು ನೀಡುವುದು ರಾಜ್ಯದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವುದು, ರಾಜಕೀಯ ಶುದ್ದೀಕರಣ ಮತ್ತು ಸ್ವಚ್ಛ ಹಾಗೂ ಸ್ವಚ್ಚಾ ಸುರಕ್ಷಿತ ಮತ್ತು ಪಾರದರ್ಶಕ ಆಡಳಿತ ನೀಡುವುದು, ವಿಶೇಷವಾಗಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಸುರಕ್ಷತೆ ಮತ್ತು ಭದ್ರತೆ ಕಲ್ಪಿಸುವುದು. ರಾಜ್ಯದ ನೆಲ,ಜಲ, ಭಾಷೆ ಮತ್ತು ಪರಿಸರ ಸಂರಕ್ಷಣೆ ಮತ್ತು ನಿರ್ವಹಣೆಗೆ ಆದ್ಯತೆ ನೀಡುವುದು. ರಾಜ್ಯದಲ್ಲಿರುವ ಹಿಂದುಳಿದ, ಅಲ್ಪ ಸಂಖ್ಯಾತರ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಭದ್ರತೆ ಮತ್ತು ಪ್ರೋತ್ಸಾಹ ನೀಡುವುದು ರೈತರು ತಾವು ಬೆಳೆದ ಬೆಳೆಗೆ ಬೆಂಬಲ ಬೆಲೆ ನಿಗಧಿಪಡಿಸುವುದು, ರಾಜ್ಯದ ಎಲ್ಲಾ ಜಾತಿ, ಪಂಗಡಗಳಿಗೆ ಸಮಾನತೆಯ ಮೀಸಲಾತಿಯನ್ನು ಅನುಷ್ಠಾನಗೊಳಿಸುವುದು, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರು, ಉತ್ತಮವಾದ ರಸ್ತೆ ಮತ್ತು ದಿನದ 24 ಗಂಟೆಗಳ ಕಾಲ ವಿದ್ಯುತ್ ನೀಡುವುದು. ಕೃಷಿ, ನೀರಾವರಿ, ಹೈನುಗಾರಿಕೆ, ತೋಟಗಾರಿಕೆ ಚಟುವಟಿಕೆಗಳಿಗೆ ಆದ್ಯತೆ ನೀಡುವುದು. ಖಾಸಗಿ ಶಾಲೆಗಳಲ್ಲಿ ಡೊನೇಷನ್ ಇಲ್ಲದೆ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವಂತೆ ಪ್ರೇರೇಪಿಸುವುದು. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಎಲ್ಲಾ ವರ್ಗದವರಿಗೂ ಹೈಟೆಕ್‌ ಆಸ್ಪತ್ರೆ ಸೌಲಭ್ಯ ಕಲ್ಪಿಸುವುದು.

ಈ ಎಲ್ಲಾ ಕಾರ್ಯಕ್ರಮಗಳನ್ನು ಅನುಷ್ಠಾನ ಕ್ಕೆ ಮತ್ತು ನಮ್ಮ ರಾಜ್ಯದ ಭ್ರಷ್ಟಾಚಾರ ನಿರ್ಮೂಲನೆ ಮಾಡುವುದು, ಜನರಿಗೆ ಪ್ರಾಮಾಣಿಕ ಮತ್ತು ಪಾರದರ್ಶಕ ಆಡಳಿತ ಕೊಡುವುದು ನಮ್ಮ ಉದ್ದೇಶವಾಗಿರುತ್ತದೆ ಎಂದು ಕೆ.ಮಂಜುನಾಥ್ ರಾಷ್ಟ್ರಾಧ್ಯಕ್ಷರು, ರಾಷ್ಟ್ರೀಯ ಜನಹಿತ ಪಾರ್ಟಿ, ಇಂದು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

City Today News – 9341997936

Mr. Olekar does not face any disqualification under Section 8 of the RP Act and is also free to contest the upcoming Assembly Elections.

PRESS MEET AT PRESS CLUB OF BENGALURU

Mr. Nehru C Olekar was arrayed as Accused No. 1 in Spl CC 143/2021 before the Prevention of Cದrruption Act Special Court and the Special Court for MP-MLA. The allegation in the said Complaint against him was that he has misused his position as an MLA to obtain work completion certificates from certain officials in his constituency in favour of his sons and by virtue of which his sons have procured certain tender works. The trial court convicted Mr. Nehru Olekar under Section 13 (1) D of Prevention of Corruption Act and imposed a sentence of 2 years imprisonment against him vide order dated 13/02/2023.

Challenging the said Order of sentence and conviction, Mr. Nehru Olekar through his Advocate Mr. R Swaroop Anand of LexLeo Advocates & Consultants preferred Criminal Appeal No. 390/2023 before the Hon’ble High Court of Karnataka and contended that when the complaint was instituted against Mr. Olekar and referred for registration of FIR, he was an MLA and subsequently when the Charge Sheet was filed and cognisance was taken, he was an MLA and also when the order of conviction was passed, he was an MLA. The allegation against him is in discharge of his official duty thereby sanction for prosecution under Prevention of Corruption Act was necessary in all the above stages from the Speaker of the State Assembly, which is absent in the present case. Also, it was contended that there was no criminal conspiracy alleged Mr. Olekar and the other accused either under IPC or PC Act thereby, a stand alone conviction against Mr. Olekar was against law. Appreciating the said contentions, the Hon’ble High Court of Karnataka found a prima facie case and passed an order suspending the sentence of 2 years imprisonment on 03/03/2023. 

Subsequently, one more application was preferred before the Hon’ble High Court of Karnataka seeking stay of the conviction passed by the Trial Court stating that the subsistence of conviction which was passed on untenable and frivolous grounds was causing severe prejudice to Mr. Olekar and would also subject him to disqualification under Section 8 of the Representation of People Act. The Advocate on behalf of Mr. Olekar relied on the judgment of the Hon’ble Supreme Court of India in the case of Lok Praharaj v. Election Commission of India, wherein it was held that the High Court has the power under Section 389 CrPC to stay conviction in suitable cases and as a consequence disqualification under Section 8 of the RP Act would not apply. 

The Hon’ble High Court of Karnataka appreciating the above arguments and coming to a conclusion that Mr. Olekar has a prima facie case as per the Order of suspension of sentence, and based on the law laid down by the Hon’ble Supreme Court, suspended the Order of Conviction passed by the Trial Court by its order dated 05/04/2023, as a consequence of which Mr. Olekar does not face any disqualification under Section 8 of the RP Act and is also free to contest the upcoming Assembly Elections.

City Today News – 9341997936

ಬ್ರಾಹ್ಮಣ ಸಮುದಾಯಕ್ಕೆ ಯಾರು ಸಹಕಾರ ನೀಡುವರೋ ಅವರನ್ನು ಬೆಂಬಲಿಸಲು ಸಮುದಾಯ ಎಂದು ಅಖಿಲ ಭಾರತೀಯ ಬ್ರಾಹ್ಮಣ ಮಹಾ ಸಂಘ ನಿರ್ಧಾರ

ಬ್ರಾಹ್ಮಣರು ಎಂದರೆ ಬಿಜೆಪಿಗೆ ಮಾತ್ರ ಮತ ಹಾಕುವ ಸಮುದಾಯ ಎಂಬ ಅಭಿಪ್ರಾಯ ದೇಶದಲ್ಲಿ ಸರ್ವವ್ಯಾಪಿಯಾಗಿದ್ದು, ಇದೇ ಇಂದು ಈ ಸಮುದಾಯಕ್ಕೆ ಮುಳುವಾಗಿ ಪರಿಣಮಿಸಿದೆ. ಬ್ರಾಹ್ಮಣರ ಮತಗಳು ಬಿಜೆಪಿಯನ್ನು ಬಿಟ್ಟು ಹೋಗುವುದಿಲ್ಲ ಎಂಬ ದೃಢ ವಿಶ್ವಾಸದಲ್ಲಿ ಬಿಜೆಪಿ ಇದ್ದರೆ, ಏನೇ ಮಾಡಿದರೂ ಬ್ರಾಹ್ಮಣರು ಕಾಂಗ್ರೆಸ್ ಗೆ ಮತ ಹಾಕುವುದಿಲ್ಲ ಎಂಬ ಅಚಲ ನಂಬಿಕೆಯಲ್ಲಿ ಕಾಂಗ್ರೆಸ್ ಇದೆ. ಇದರಿಂದಾಗಿ ಸಮುದಾಯ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ತೀವ್ರ ಹಿಂದುಳಿಯಲು ಕಾರಣವಾಗಿದೆ. ಬ್ರಾಹ್ಮಣ ಸಮುದಾಯ ಕಳೆದ ಹಲವು ದಶಕಗಳಿಂದ ಇಂತಹ ಶೋಚನೀಯ ಸ್ಥಿತಿ ಎದುರಿಸುತ್ತಿದ್ದು, ಈಗ ಇಂತಹ ಸ್ಥಿತಿಯಿಂದ ಹೊರ ಬಂದು, ಸಮುದಾಯಕ್ಕೆ ಸಹಕಾರ ನೀಡುವ ರಾಜಕೀಯ ಪಕ್ಷವನ್ನು ಬೆಂಬಲಿಸುವ ಚಿಂತನೆಯಲ್ಲಿದೆ. ಈ ಸಂಬಂಧ ಈಗಾಗಲೇ ಹಲವು ಬಾರಿ ಸಭೆಗಳನ್ನು ನಡೆಸಿ, ಚರ್ಚಿಸಲಾಗಿದ್ದು, ಈ ಬಾರಿಯ ಚುನಾವಣೆಗಳಲ್ಲಿ ಇದನ್ನು ಸಮರ್ಥವಾಗಿ ಅನುಷ್ಠಾನಗೊಳಿಸಲು ಸಮುದಾಯದ ಎಲ್ಲ ಮುಖಂಡರು, ಸ್ವಾಮೀಜಿಗಳು ನಿರ್ಧರಿಸಿರುತ್ತಾರೆ. ಇದಕ್ಕೆ ಸಂಬಂಧಿಸಿದ ಮಾಹಿತಿ ಈಕೆಳಗಿನಂತಿದೆ.

೧.ಪ್ರಸ್ತುತ ರಾಜ್ಯ ವಿಧಾನ ಸಭಾ ಚುನಾವಣೆಗೆ ಸಂಬಂಧಿಸಿ ಕಾಂಗ್ರೆಸ್ ಇತ್ತೀಚಿಗೆ ಬಿಡುಗಡೆ ಮಾಡಿರುವ ಮೊದಲ ಪಟ್ಟಿಯ ೧೨೪ ಅಭ್ಯರ್ಥಿಗಳಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಆರು ಜನರಿಗೆ ಟಿಕೆಟ್ ನೀಡಲಾಗಿದೆ. ಬಾಕಿ ಇರುವ ೧೦೦ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಇನ್ನೂ ಐದು ಜನರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ. ಅಂದರೆ ಬ್ರಾಹ್ಮಣರ ಮತವೇ ಬರಲ್ಲ ಎಂದು ಭಾವಿಸಿರುವ ಕಾಂಗ್ರೆಸ್ ಅಂದಾಜು ೧೧ ಬ್ರಾಹ್ಮಣ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತಿದೆ

೨. ಬ್ರಾಹ್ಮಣರ ಮತ ಪಡೆಯುವ ಬಿಜೆಪಿ ಕನಿಷ್ಠ ೨೫ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು ಎಂಬುದು ಸಮುದಾಯದ ಬೇಡಿಕೆಯಾಗಿದೆ. ಕಳೆದ ೨೦೧೮ರ ಚುನಾವಣೆಯಲ್ಲಿ ನೋಟಾಗೆ ಮತ ಚಲಾಯಿಸಲು ಬ್ರಾಹ್ಮಣ ಮಹಾ ಸಂಘ ಕರೆ ನೀಡಿತ್ತು. ಆಗ ಶೇ.೧ರಷ್ಟು ಜನ ನೋಟಾಗೆ ಮತ ಚಲಾಯಿಸಿದ್ದಾರೆ. ಇದರಿಂದ ಸುಮಾರು ೩.೫ಲಕ್ಷ ಮತದಾರರು ನೋಟಾಗೆ ಮತ ಹಾಕಿದ್ದಾರೆ. ಇದರ ಪರಿಣಾಮ ೧೩ ವಿಧಾನಸಭಾ ಕ್ಷೇತ್ರಗಳಲ್ಲಿ ಬೀರಿ ೧೩ ಅಭ್ಯರ್ಥಿಗಳು ಸೋಲಲು ಕಾರಣವಾಗಿದೆ.

೩. ಹೀಗೆ ಸೋತವರ ಪಟ್ಟಿಯಲ್ಲಿ ಮೂರೂ ಪಕ್ಷಗಳ ಅಭ್ಯರ್ಥಿಗಳು ಇದ್ದು, ಎರಡು ಸ್ಕ್ಯಾನಗಳಲ್ಲಿ ಕಾಂಗ್ರೆಸ್, ಎರಡು ಸ್ಥಾನಗಳಲ್ಲಿ ಜೆಡಿಎಸ್‌ ಮತ್ತು ೯ ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲನುಭವಿಸಿದ್ದಾರೆ. ಉದಾಹರಣೆಗೆ ಹೇಳುವುದಾದರೆ ಬಾದಾಮಿಯಲ್ಲಿ ಸಿದ್ದರಾಮಯ್ಯ ಅವರು ಗೆದ್ದಿದ್ದು ಕೇವಲ ೧,೬೯೬ ಮತಗಳ ಅಂತರದಿಂದ, ಇಲ್ಲಿ ೨,೪೫೦ ಮತಗಳು ನೋಟಾಗೆ ಚಲಾವಣೆಯಾಗಿವೆ, ಅಂದರೆ ಈ ಎಲ್ಲ ಮತಗಳೂ ಬಿಜೆಪಿಗೆ ಸಲ್ಲಿಕೆಯಾಗಿದ್ದರೆ ಶ್ರೀರಾಮುಲು ಗೆದ್ದು ಸಿದ್ದರಾಮಯ್ಯ ಸೋಲುತ್ತಿದ್ದರು.

೪. ಅದೇ ರೀತಿಯಲ್ಲಿ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಸವನಗೌಡ ತುರವೀಹಾಳ್ ಅವರು ಕೇವಲ ೨೧೩ ಮತಗಳ ಅಂತರದಲ್ಲಿ ಸೋಲನುಭವಿಸಿದ್ದಾರೆ. ಈಪಟ್ಟಿ, ಮುಂದುವರಿದು ಶಿವರಾಮ ಹೆಬ್ಬಾರ್, ಎಚ್ .ಕೆ. ಪಾಟೀಲ್, ಗೆದ್ದಿದ್ದು, ಅನಿಲ್ ಮೆಣಸಿನ ಕಾಯಿ ಕೇವಲ ೧,೮೬೮ ಮಗಳಿಂದ ಸೋತಿದ್ದಾರೆ. ಕುಂದಗೋಳ ಕ್ಷೇತ್ರದಲ್ಲಿ ಶಿವಳ್ಳಿ, ಚಿಕ್ಕನಗೌಡ ಅವರು ೩೩೦ ಮತಗಳಿಂದ ಸೋತಿರುವುದು ಹೀಗೆ ನೋಟಾ ಮತಗಳಿಂದ ೯ ಮಂದಿ ಬಿಜೆಪಿ ಅಭ್ಯರ್ಥಿಗಳು ಪರಾಭವಗೊಂಡಿದ್ದಾರೆ.

೫. ಶೇ.೧ ರಷ್ಟು ಮತ ನೋಟಾಗೆ ಬಿದ್ದರೆ, ಇನ್ನೂ ಶೇ.೨ರಷ್ಟು ಮಂದಿ ಬ್ರಾಹ್ಮಣ ಸಮುದಾಯದವರು ನೋಟಾಗೆ ಮತ ಹಾಕುವುದಕ್ಕೆ ಮತಗಟ್ಟೆಗೆ ಹೋಗುವುದೇಕೆ ಎಂದು ಮನೆಯಲ್ಲಿಯೇ ಉಳಿದರು. ಇವರೂ ಮತ ಹಾಕಿದರೆ ಇನ್ನೂ ೨೫ ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲು ಸಹಕಾರಿಯಾಗುತ್ತಿತ್ತು.

೬ ೨೦೧೮ರಲ್ಲಿ ಚಲಾವಣೆಯಾದ ಒಟ್ಟು ಶೇಖಡಾವಾರು ಮತಗಳಲ್ಲಿ ಶೇ.೬೮ ರಷ್ಟು ಕಾಂಗ್ರೆಸ್‌ ಮತ್ತು ಶೇ.೩೩ ರಷ್ಟು ಮತ ಬಿಜೆಪಿ ಪಡೆದಿವೆ. ಈ ಶೇ.೩೬ರಲ್ಲಿಯೇ ಬಿಜೆಪಿ ೧೦೪ ಸ್ಥಾನ ಪಡೆದರೆ, ಕಾಂಗ್ರೆಸ್‌ ೭೮ ಸ್ಥಾನ ಪಡೆದಿದೆ. ಆದರೆ ಬ್ರಾಹ್ಮಣರ ಈ ಶೇ.೨ರಷ್ಟು ಮತ ಚಲಾವಣೆಯಾಗಿದ್ದರೆ ಬಿಜೆಪಿ ಸ್ವಂತ ಬಲದ ಮೇಲೆ ಸರ್ಕಾರ ರಚಿಸಬಹುದಾಗಿತ್ತು. ಬ್ರಾಹ್ಮಣರನ್ನು ನಿರ್ಲಕ್ಷ್ಯ ಮಾಡಿದ ಪರಿಣಾಮ ಬಿಜೆಪಿ ಇದನ್ನು ಕಳೆದುಕೊಂಡಿದೆ ಎಂಬುದು ಸ್ಪಷ್ಟ

೭. ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ ಕ್ಕೆ ಕೊಟ್ಟ ಆಶಾಸನೆಯಂತೆ ೨೦೧೮ರಲ್ಲಿ ಬ್ರಾಹ್ಮಣರ ಅಭಿವೃದ್ಧಿ ಮಂಡಲಿ ಮಾಡಿದವರು ಅಂದಿನ ಜೆಡಿಎಸ್‌ ಮುಖ್ಯಮಂತ್ರಿ

ಎಚ್‌.ಡಿ. ಕುಮಾರಸ್ವಾಮಿ ಅವರು ಅಂದು ಮಂಡಳಿಗೆ ಕೊಟ್ಟ ೨೫ ಕೋಟಿ ಹೊರತುಪಡಿಸಿ, ಈ ವರೆಗೆ ಯಾವುದೇ ಸರ್ಕಾರ ಒಂದು ರುಪಾಯಿ ನೀಡಿಲ್ಲ ಮಂಡಳಿ ರಚನೆಯಾದ ನಂತರ ಬಿಜೆಪಿ ಸರ್ಕಾರ ಮೂರು ಆಯ ವ್ಯಯ ಮಂಡಿಸಿದೆ. ಆದರೆ ಒಂದು ಬಜೆಟ್ ನಲ್ಲಿಯೂ ಬ್ರಾಹ್ಮಣರ ಅಭಿವೃದ್ಧಿ ಮಂಡಳಿಗೆ ಹಣ ನೀಡಿಲ್ಲ.

೮. ರಾಜ್ಯದಲ್ಲಿ ಪುಸ್ತುತ ಸರಕಾರವು ಸಮಾನ ನ್ಯಾಯ ಕೊಡಿಸುವ ಭೂಮಿಕೆ ನಿರ್ವಹಿಸುತ್ತಿಲ್ಲ. ಎಲ್ಲರಿಗೂ ಸಮಾನ ನ್ಯಾಯ ಕಲ್ಪಿಸಬೇಕು ಎಂಬುದು ಬ್ರಾಹ್ಮಣ ಸಮುದಾಯದ ಬೇಡಿಕೆ. ಯಾವ ಪಕ್ಷ ಸಮಾನ ನ್ಯಾಯ ನೀಡಲಿದೆಯೋ ಆ ಪಕ್ಷದ ಪರ ಇರಲು ಬ್ರಾಹ್ಮಣ ಸಮುದಾಯ ಚಿಂತನೆ ಮಾಡುತ್ತಿದೆ.

೯. ರಾಜ್ಯದಲ್ಲಿ ಶೇ.೯ ರಷ್ಟು ಬ್ರಾಹ್ಮಣ ಸಮುದಾಯದ ಮತಗಳಿವೆ. ಅಂದರೆ ಸುಮಾರು ೪೫ ಲಕ್ಷ ಬ್ರಾಹ್ಮಣ ಮತದಾರರು ರಾಜ್ಯದಲ್ಲಿದ್ದಾರೆ. ಶೇ.೫ ಮತ್ತು ಶೇ.೭ರಷ್ಟಿರುವ ಸಮುದಾಯಗಳಿಗೆ ಮೀಸಲಾತಿ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಮನೆಗೇ ನೀಡುತ್ತಿರುವ ರಾಜಕೀಯ ಪಕ್ಷಗಳು ಶೇ.೯ರಷ್ಟು ಮತ ಹೊಂದಿರುವ ಬ್ರಾಹ್ಮಣರ ಕಡಗಣನೆ ಯಾಕೆ ಎಂಬುದು ನಮ್ಮ ಪ್ರಶ್ನೆಯಾಗಿದೆ.

೧೦. ಗುಲ್ಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ೪೫ ಸಾವಿರಕ್ಕೂ ಹೆಚ್ಚು, ಗುಲ್ಬರ್ಗಾ ಉತ್ತರ ಕ್ಷೇತ್ರದಲ್ಲಿ ೨೦ ಸಾವಿರಕ್ಕೂ ಹೆಚ್ಚು ಮತದಾರರಿದ್ದಾರೆ. ಜೊತೆಗೆ ಹುಬ್ಬಳ್ಳಿ, ಬೆಂಗಳೂರು, ಮೈಸೂರು, ಧಾರವಾಡದಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಬ್ರಾಹ್ಮಣ ಮತದಾರರಿದ್ದಾರೆ. ಅಲ್ಲದೆ ರಾಜ್ಯದ ಒಟ್ಟು ೪೭ ವಿಧಾನಸಭಾ ಕ್ಷೇತ್ರಗಳಲ್ಲಿ ಬ್ರಾಹ್ಮಣರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.

ಇಂತಹ ಸಮುದಾಯವನ್ನು ಎಲ್ಲ ಪಕ್ಷಗಳೂ ನಿರ್ಲಕ್ಷ್ಯ ಮಾಡುತ್ತಲೇ ಬಂದಿದ್ದು, ಈ ನಿರ್ಲಕ್ಷ್ಯ ಹೀಗೇ ಮುಂದುವರಿದಲ್ಲಿ ಇದರ ವಿರುದ್ಧ ಮತದಾನ ಅಸ್ತ್ರವನ್ನು ಪುಯೋಗಿಸಲು ನಿರ್ಧರಿಸಲಾಗಿದೆ. ಇನ್ನು ಮುಂದೆ ಯಾವದೇ ಒಂದು ಪಕ್ಷಕ್ಕೆ ಮತ ಚಲಾಯಿಸುವುದನ್ನು ನಿಲ್ಲಿಸಿ, ಸಮುದಾಯಕ್ಕೆ ಯಾರು ಸಹಕಾರ ನೀಡುವರೋ ಅವರನ್ನು ಬೆಂಬಲಿಸಲು ಸಮುದಾಯ ನಿರ್ಧರಿಸಿದೆ ಎಂದು ತಿಳಿಸಲು ಇಚ್ಛಿಸುತ್ತೇವೆ ಎಂದು ಅಖಿಲ ಭಾರತೀಯ ಬ್ರಾಹ್ಮಣ ಮಹಾ ಸಂಘ ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು

ಪತ್ರಿಕಾ ಗೋಷ್ಠಿಯಲ್ಲಿ ಶ್ರೀ ಗೋವಿಂದ ಕುಲಕರ್ಣಿ ರಾಷ್ಟ್ರ ಅಧ್ಯಕ್ಷರು ಜಿ ಆ‌ ಪುದೀಪ್ ರಾಜ್ಯ ಅಧ್ಯಕ್ಷರು ಡಾ. ಸುಬ್ರಹ್ಮಣ್ಯ ಶರ್ಮ ಎಂ. ಕೆ. ನಂಜುಂಡಸ್ವಾಮಿ ರಾಘವೇಂದ್ರ ಮಯ್ಯ ಉಪಸ್ತಿತರಿದ್ದರು.

City Today News – 9341997936