“ಜೈ ಮಹಾ ಭಾರತ್ ಪಾರ್ಟಿ ” ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ ಮುಖ್ಯ ಕಾರ್ಯ ಸೂಚಿ 2023

ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ ಮುಖ್ಯ ಕಾರ್ಯ ಸೂಚಿ 2023

1. ಕರ್ನಾಟಕ ರಾಜ್ಯದಲ್ಲಿ ಮಧ್ಯಪಾನವನ್ನು ಸಂಪೂರ್ಣವಾಗಿ ನಿಷೇಧಿಸಿ ಮತ್ತು ಅರ್ಹ ನಿರಾಶ್ರೀತ ಬಡವರಿಗೆ 100 ಚದುರ ಗಜಗಳನ್ನು ಓಪನ್ ಬ್ಲಾಟ್ ಒದಗಿಸಿವುದು..

2. ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರ ಅಭಿವೃದ್ಧಿ, ಕರ್ನಾಟಕ ರಾಜ್ಯದಲ್ಲಿ ಎಲ್ ಪಿ ಜಿ ಗ್ಯಾಸ್ ಅನ್ನು ನಿಷೇಧಿಸಿ ಪ್ರತಿ ಮನೆಗೆ ಒದಗಿಸಿದ್ದಾರೆ, ರೂ.50/- ಗಬರ್ ಗ್ಯಾಸ್ ಒದಗಿಸುವ ಮೂಲಕ ಮತ್ತು ಅಡುಗೆ ಮನೆಯ ಆರ್ಥಿಕ ಹೊರೆಯನ್ನು, ಕಡಿಮ ಮಾಡುವ ಮೂಲಕ,

3. ಎಲ್ಲ ಕ್ಷೇತ್ರಗಳಲ್ಲಿ ಕರ್ನಾಟಕ ರಾಜ್ಯದ ತ್ವರಿತ ಅಭಿವೃದ್ಧಿ ಮತ್ತು ಕರ್ನಾಟಕ ರಾಜ್ಯವನ್ನು ನಂಬರ್ ಒನ್ ರಾಜ್ಯವನ್ನಾಗಿ ಮಾಡುವುದು.

4. ಇಡೀ ಕರ್ನಾಟಕ ರಾಜ್ಯದ ನದಿಗಳನ್ನು ಸಂಪರ್ಕಿಸುವ ಕೃಷಿ ಭೂಮಿಗೆ ನೀರಾವರಿ ಒದಗಿಸುವದು. ಕೃಷಿ ಕ್ಷೇತ್ರದ ಅಭಿವೃದ್ಧಿ, ಕುಡಿಯುವ ನೀರಿನ ಸೌಲಭ್ಯ ಮತ್ತು ರಾಜ್ಯಕ್ಕೆ, ಸಾಕಷ್ಟು ವಿದ್ಯುತ್ ಉತ್ಪಾದಿಸಲು ಮತ್ತು ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಸರ್ಕಾರಿ ಮಾರ್ಕೆಟ್ಟು, ಬ್ರಂಗ ಸ್ಥಾಪಿಸಲು ಮತ್ತು ಕೃಷಿ ಉತ್ಪನ್ನಗಳಿಗೆ ಮುಂಚಿತವಾಗಿ ಕನಿಷ್ಠ ಬೆಂಬಲ ಬೆಲೆ ಘೋಷಿಸಿ ಮತ್ತು ಬಡ ರೈತರನ್ನು ಆರ್ಥಿಕವಾಗಿ ಬೆಂಬಲಿಸಲು ಮತ್ತು ಬಲಪಡಿಸಲು.

5. ಇಡೀ ಕರ್ನಾಟಕ ರಾಜ್ಯದಲ್ಲಿ ಸಂಪೂರ್ಣ ಉಚಿತ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸುವುದು ಮತ್ತು ಜಾತಿ ಮತ,ಜನಾಂಗ ಮತ್ತು ಪ್ರದೇಶವನ್ನು ಲೆಕ್ಕಿಸದೆ ಸಹಾಯಧನವನ್ನು ಒದಗಿಸುವುದು.

6. ಕರ್ನಾಟಕ ರಾಜ್ಯವು ಇಡೀ ರಾಜ್ಯಕ್ಕೆ ಉಚಿತ ವೈದ್ಯಕೀಯ ಮತ್ತು ಔಷಧಿ ವಿತರಣೆಯ ನೀತಿಯನ್ನು ಜಾರಿಗೆ ತಂದಿದ್ದ ಮತ್ತು 7.ರಾಜ್ಯದ ಜನರ ಆರೋಗ್ಯ, ರಕ್ಷಣೆಯ ಜವಾಬ್ದಾರಿಯನ್ನು ತೆಗೆದುಕೊಂಡಿದಿ

8. ಕರ್ನಾಟಕ ರಾಜ್ಯದ ಶಾಸಕ (M.LAL ಗಳು) ತಮ್ಮ ಕ್ಷೇತ್ರಗಳಲ್ಲಿ ಶಾಶ್ವತ ಸರ್ಕಾರಿ ಕಚೇರಿಗಳು ಮತ್ತು ವಸತಿಗಳನ್ನು ಒದಗಿಸಲು ಮತ್ತು ಅವುಗಳನ್ನು, ಸರ್ವಜನಿಕರಿಗೆ ಪ್ರವೇಶಿಸಲು ಮತ್ತು ಸ್ಥಳೀಯ ಸಮಸ್ಯೆಗಳ ತ್ವರಿತ ಪರಿಹಾರಕ್ಕಾಗಿ ಹೊಣೆಗಾರಕ್ಕೆ ವ್ಯವಸ್ಥೆಯನ್ನು ಜಾರಿಗೆ ತರಲು,

9. ಕರ್ನಾಟಕ ರಾಜ್ಯದಲ್ಲಿ ಜನರಿಗೆ ಅವರ ಅರ್ಹತೆಗೆ ಅನುಗುಣವಾಗಿ ನಿಖರವಾದ ಉದ್ಯೋಗವನ್ನು ಒದಗಿಸಲು ನಿತಿಗಲ ಅನುಷ್ಠಾನ ಸಮಸ್ಯೆಯನ್ನು ರೂಪಿಸುವುದು.

10. ಕರ್ನಾಟಕ ರಾಜ್ಯದ ಎಲ್ಲಾ ಗ್ರಾಮಗಳಲ್ಲಿ ಸಸಿಗಳನ್ನು ನೆಡುವುದು ಮತ್ತು ನೈಸರ್ಗಿಕ ಪರಿಸರ ಮತ್ತು ಗುಣಮಟ್ಟದ ರಸ್ತೆಯನ್ನು ರಕ್ಷಿಸಲು ವ್ಯವಸ್ಥೆ ಮಾಡುವುದು ಸರಿಗೆ ವ್ಯವಸ್ಥೆಯನ್ನು ನಿರ್ಮಿಸಿ ಮತ್ತು ಸುಧಾರಿಸಿ. 11. ಇಡಿ ಕರ್ನಾಟಕ ರಾಜ್ಯದಲ್ಲಿ ಏರುತ್ತಿರುವ ಬೆಲೆಗಳನ್ನು ನಿಯಂತ್ರಿಸಿ. ಎಲ್ಲ ರೀತಿಯ ಭ್ರಷ್ಟಾಚಾರ, ಅಕ್ರಮ, ಅತ್ಯಾಚಾರ ಹಾಗೂ ಅಪರಾಧವನ್ನು ನಿಯಂತ್ರಿಸುವುದು ಮತ್ತು ಶಾಂತಿಯುತ, ಸುರಕ್ಷತೆ ಮತ್ತು ದಕ್ಷ ಸರಕಾರವನ್ನು ನಡೆಸುವುದು ಎಂದು ಜೈ ಮಹಾ ಭಾರತ್ ಪಾರ್ಟಿ ಸಂಸ್ಥಾಪಕ ಮತ್ತು ರಾಷ್ಟ್ರೀಯ ಅಧ್ಯಕ್ಷ ಭಗವಾನ್ ಶ್ರೀ ಅನಂತವಿಶ್ನು ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ ಮುಖ್ಯ ಕಾರ್ಯ ಸೂಚಿ 2023ಯ ಮೂಲಕ ಫ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು

City Today News – 9341997936

ಯಂಗ್‌ ಸ್ಟರ್ ಎಂಪವರ್ಮೆಂಟ್ ಪಾರ್ಟಿ (ವೈಇಪಿ ಪಾರ್ಟಿ) ಯಿಂದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ

ಯಂಗ್‌ ಸ್ಟರ್ ಎಂಪವರ್ಮೆಂಟ್ ಪಾರ್ಟಿ (ವೈಇಪಿ ಪಾರ್ಟಿ) ಯಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದ್ದು, ಇಂದು 24 ವಿಧಾನಸಭಾ ಕ್ಷೇತ್ರಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗುತ್ತಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸಿ.ಎಂ.ಶಹಭಾಶ್ ಖಾನ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರದ ಯಾವುದೇ ಯೋಜನೆಗಳ ಉಪಯೋಗವನ್ನು ಯಂಗ್‌ ಸ್ಟರ್ ಪಾರ್ಟಿ ಆ್ಯಪ್ ಮೂಲಕ ಮನೆಯಲ್ಲೇ ಕುಳಿತು ಸೌಲಭ್ಯವನ್ನು ಪಡೆಯಬಹುದಾಗಿದೆ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುವುದಲ್ಲದೇ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದರ ಜೊತೆಗೆ ತಪ್ಪಿಸಬಹುದಾಗಿದೆ ಎಂದು ತಿಳಿಸಿದರು. ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಯುವ ಸರ್ಕಾರವನ್ನು ರಚಿಸುವ ಸಂಕಲ್ಪವನ್ನು ಯಂಗ್‌ ಸ್ಟರ್ ಎಂಪವರ್ಮೆಂಟ್ ಪಾರ್ಟಿ ತೊಟ್ಟಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮೂಲಕ ಈ ಪಕ್ಷವನ್ನು ಬೆಂಬಲಿಸಿ ಈ ಭಾರಿ ಅಧಿಕಾರಕ್ಕೆ ತರಬೇಕೆಂದು ಮನವಿ ಮಾಡಿದರು.

ಸುದ್ದಿಗೋಷ್ಟಿಯಲ್ಲಿ ರಾಜ್ಯಾಧ್ಯಕ್ಷ ನರೇಶ್‌ ಪಾಟೀಲ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಸಲ್ಮಾನ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಲಿಯಾಸ್ ಷರೀಫ್, ಮಾಗಡಿ ತಾಲ್ಲೂಕು ಘಟಕದ ಅಧ್ಯಕ್ಷ ರಫಿವುಲ್ಲ, ಚನ್ನಪಟ್ಟಣ ತಾಲ್ಲೂಕು ಅಧ್ಯಕ್ಷ ಫಯಾಝ್ ಅಹಮದ್‌ ಹಾಗೂ ರಾಮನಗರ ಘಟಕದ ಅಧ್ಯಕ್ಷ ಸಯ್ಯದ್ ಹೈದರ್ ಮತ್ತಿತರರು ಹಾಜರಿದ್ದರು.

City Today News – 9341997936

60 ಲಕ್ಷ ಜನಸಂಖ್ಯೆ ಹೊಂದಿರುವ ವಾಲ್ಮೀಕಿ ನಾಯಕ ಜನಾಂಗಕ್ಕೆ ಸಾಮಾನ್ಯ ಕ್ಷೇತ್ರಗಳಲ್ಲಿ 2023ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುವ ಕುರಿತು.

ಈ ಮೂಲಕ ತಮ್ಮಲ್ಲಿ ವಿನಂತಿ ಮಾಡುವುದೇನೆಂದರೆ, ವಾಲ್ಮೀಕಿ ನಾಯಕ ಜನಾಂಗವು ಕರ್ನಾಟಕದಲ್ಲಿ ಸುಮಾರು 60 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವುದು ತಮಗೆಲ್ಲರಿಗೂ ತಿಳಿದಿರುವುದು ಸರಿಯಷ್ಟೇ. ಆದರೆ ಎಸ್.ಟಿ. ಮೀಸಲು ಕ್ಷೇತ್ರಗಳನ್ನು ಹೊರತುಪಡಿಸಿ ಸಾಮಾನ್ಯ ಕ್ಷೇತ್ರಗಳಲ್ಲಿಯೂ ಸಹ ನಿರ್ಣಾಯಕ ಮತದಾರರ ಸಂಖ್ಯೆ ಹೊಂದಿರುತ್ತೇವೆ. ಆದ್ದರಿಂದ ತಾವುಗಳು ಮುಂಬರುವ ವಿಧಾನಸಭಾ ಚುನಾವಣೆಗೆ ನಮ್ಮ ಜನಾಂಗದ ಅಭ್ಯರ್ಥಿಗಳಿಗೆ ಪ್ರಾಶಸ್ತ್ರ ಕೊಟ್ಟು ತಮ್ಮ ಪಕ್ಷದ ವತಿಯಿಂದ ಸಾಮಾನ್ಯ ಕ್ಷೇತ್ರಗಳಲ್ಲಿಯೂ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕೆಂದು ಕೇಳಿಕೊಳ್ಳುತ್ತೇವೆ. ರಾಜ್ಯದಲ್ಲಿ ವಾಲ್ಮೀಕಿ ನಾಯಕ ಜನಾಂಗವು ಸುಮಾರು 80 ವಿಧಾನಸಭಾ ಕ್ಷೇತ್ರಗಳಲ್ಲಿ ಯಾವುದೇ ಅಭ್ಯರ್ಥಿಯ ಫಲಿತಾಂಶದಲ್ಲಿ ನಿರ್ಣಾಯಕ ಪಾತ್ರ ವಹಿಸಬಲ್ಲದು. ಆದ್ದರಿಂದ ಎಲ್ಲ ಪಕ್ಷಗಳಿಂದಲೂ ತಾವುಗಳು ನಮ್ಮ ಜನಾಂಗರ ಅಭಿವೃದ್ಧಿಗಾಗಿ ಸಾಮಾನ್ಯ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ತಮ್ಮ ತಮ್ಮ ಪಕ್ಷದಿಂದ ಅವಕಾಶ ಮಾಡಿಕೊಡಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇವೆ.

ತಾವುಗಳು ನಮ್ಮ ಜನಾಂಗದ ಅಭ್ಯರ್ಥಿಗಳಿಗೆ ಸಾಮಾನ್ಯ ಕ್ಷೇತ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನಾಗಿ ಘೋಷಣೆ ಮಾಡಿದಲ್ಲಿ ನಾವುಗಳು ರಾಜ್ಯಾದ್ಯಂತ ತಮ್ಮ ಪಕ್ಷಕ್ಕೆ ಬೆಂಬಲ ಸಿಗಲಿದೆ. ಆದ್ದರಿಂದ ನಮ್ಮ ಈ ಮನವಿಯನ್ನು ಪರಿಗಣಿಸಿ ನಮ್ಮ ಸಮಾಜದ ಅಭಿವೃದ್ಧಿಗೆ ಇದೊಂದು ಸುವರ್ಣಾವಕಾಶ ಎಂದು ಭಾವಿಸಿ ಸಾಮಾನ್ಯ ಕ್ಷೇತ್ರಕ್ಕೆ ನಮ್ಮ ಜನಾಂಗದ ಆಕಾಂಕ್ಷಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕಾಗಿ ಕೋರಲಾಗಿದೆ.

– ಜಿ.ಟಿ. ಚಂದ್ರಶೇಖರಪ್ಪ ರಾಜ್ಯಾಧ್ಯಕ್ಷರು

– ಕೆಂಪರಾಮಯ್ಯ ಪ್ರಧಾನ ಕಾರ್ಯದರ್ಶಿಗಳು

City Today News – 9341997936

ನಮ್ಮ ಗಂಗಾಮತ ಸಮಾಜದ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಇರುವ ಅಪೇಕ್ಷಿತ ಆಕಾಂಕ್ಷಿಗಳಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವ ಬಗ್ಗೆ.

ಕಳೆದ ಹಲವು ದಶಕಗಳಿಂದ ನಮ್ಮ ಸಮಾಜದ ಬಂಧುಗಳು ರಾಜ್ಯದಲ್ಲಿ ಎಲ್ಲಾ ಪಕ್ಷಗಳಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡು ಬಂದಿರುತ್ತಾರೆ. ರಾಜ್ಯದಲ್ಲಿ ಎರಡನೇ ಅತೀ ದೊಡ್ಡ ಸಂಖ್ಯೆಯಲ್ಲಿರುವ, ಅತೀ ಹಿಂದುಳಿದ ವರ್ಗಕ್ಕೆ ಸೇರಿದ 39 ಪರ್ಯಾಯ ಪದಗಳಿಂದ ಗುರುತಿಸಿಕೊಂಡಿರುವ ಗಂಗಾಮತ, ಕೋಲ, ಬೆಸ್ತ, ಮೊಗವೀರ, ಸುಣಗಾರ, ಮೀನುಗಾರ ಹಾಗೂ ಇನ್ನಿತರ ಪರ್ಯಾಯ ಪದಗಳಿಂದ ಗುರುತಿಸ್ಪಟ್ಟಿರುವ ನಮ್ಮ ಸಮಾಜದ ಮುಖಂಡರು 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು 15-20 ಜನ ಪ್ರಬಲ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿರುತ್ತಾರೆ. ತಾವುಗಳು ನಮ್ಮ ಸಮಾಜಕ್ಕೆ ಪ್ರೀತಿ, ವಿಶ್ವಾಸ, ಗೌರವ ಮತ್ತು ರಾಜಕೀಯ ಸ್ಥಾನಮಾನವನ್ನು ಕೊಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದೀರಿ. ಈ ನಿಟ್ಟಿನಲ್ಲಿ ನಾವು ನಿಮಗೆ ಚಿರಖುಣಿಗಳಾಗಿದ್ದೇವೆ. 10-11 ಕ್ಷೇತ್ರಗಳಲ್ಲಿ ನಾವುಗಳು ಸ್ಪರ್ಧಿಸಿ ಗೆಲ್ಲುವ ಅವಕಾಶವಿದೆ. ಆ ಕ್ಷೇತ್ರಗಳಲ್ಲಿ ನಮ್ಮ ಸಮಾಜದ ಬಂಧುಗಳ ಮತದಾರರ ಸಂಖ್ಯೆಯು ಹೆಚ್ಚಾಗಿರುವುದರಿಂದ ನಾವು ಆ ಕ್ಷೇತ್ರದಲ್ಲಿ ವಿವಿಧ ಪಕ್ಷಗಳಿಂದ ಸ್ಪರ್ಧಿಸಲು ಅವಕಾಶ ಕೇಳುತ್ತಿದ್ದೇವೆ. ನಮ್ಮ ಸಮಾಜಕ್ಕೆ ಸಾಮಾಜಿಕ ನ್ಯಾಯದ ಅಡಿಯಲ್ಲಿ ಗೆಲ್ಲುವ ಅವಕಾಶವಿರುವುದರಿಂದ ತಾವುಗಳು ಸಕಾರಾತ್ಮಕವಾಗಿ ಸ್ಪಂದಿಸಿ ಸಹಕರಿಸುವ ವಿಶ್ವಾಸದಿಂದ ಆಗ್ರಹಿಸುತ್ತಿದ್ದೇವೆ. ರಾಜ್ಯದ ಒಟ್ಟು 224 ಕ್ಷೇತ್ರಗಳ ಪೈಕಿ 56 ಮತಕ್ಷೇತ್ರಗಳಲ್ಲಿ ನಾವು 25 ರಿಂದ 90 ಸಾವಿರಕ್ಕೂ ಹೆಚ್ಚು ಮತದಾರರನ್ನು ಹೊಂದಿದ್ದೇವೆ. 110 ಕ್ಷೇತ್ರಗಳಲ್ಲಿ 5 ರಿಂದ 20 ಸಾವಿರದ ವರೆಗೂ ಮತದಾರರನ್ನು ಹೊಂದಿದ್ದೇವೆ. 12 ಲೋಕಸಭಾ ಕ್ಷೇತ್ರಗಳಲ್ಲಿ 1 ಲಕ್ಷದಿಂದ 3.5 ಲಕ್ಷಕ್ಕಿಂತಲೂ ಹೆಚ್ಚು ಮತದಾರರನ್ನು ಹೊಂದಿದ್ದೇವೆ. ಎಲ್ಲಾ ಪಕ್ಷಗಳ ಮಾನ್ಯ ಅಧ್ಯಕ್ಷರುಗಳಾದ ತಾವುಗಳು ಇವೆಲ್ಲವನ್ನು ಗಮನಿಸಿ ನಮ್ಮ ಸಮಾಜದ ಪ್ರಬಲ ಆಕಾಂಕ್ಷಿಗಳಿಗೆ ಸ್ಪರ್ಧಿಸುವ ಅವಾಕಾಶ ನೀಡಬೇಕೆಂದು ವಿನಂತಿಸಿಕೊಳ್ಳುತ್ತೇವೆ ಎಂದು ರವಿಕುಮಾರ್ ಬಿ.ಡಿ. ಪತ್ರಕರ್ತರು. ರಾಜ್ಯ ಪ್ರಧಾನ ಕಾರ್ಯದರ್ಶಿ ರಾಷ್ಟ್ರೀಯ ಮೀನುಗಾರರ ಸಂಘ – ಕರ್ನಾಟಕ (ರಿ.) ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಬಾಗವಹಿಸಿದವರು: ಡಾ. ದೇವಿಪ್ರಸಾದ್ ಹೇಜ್ಮಾಡಿ , ರಾಜ್ಯಾಧ್ಯಕ್ಷರು, ರಾಷ್ಟ್ರೀಯ ಮೀನುಗಾರರ ಸಂಘ – ಕರ್ನಾಟಕ (ರಿ.), ಹೇಟ್ಯಾಡಿ ವಿ.ಕೆ. ಮಧುಸೂದನ್, ಅಂತೂ‌ರ್ ಸುರೇಶ್, ಅಶೋಕ್ ಗಣಪುರ್, ಬಿ. ರಂಗಸ್ವಾಮಿ, ಪ್ರಸನ್ನ ಅರಸೀಕೆರೆ, ಲಕ್ಷ್ಮಣ್ ಮೊಗವೀರ ಹಾಗು ಇನ್ನಿತರರು.

City Today News – 9341997936

ನುಡಿದಂತೆ ನಡೆದ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿರವರಿಗೆ ಸಮಸ್ತ ಗಾಣಿಗ ಸಮುದಾಯ ಪರವಾಗಿ ಹೃತ್ತೂರ್ವಕ ಧನ್ಯವಾದ

ಕರ್ನಾಟಕ ರಾಜ್ಯದ ಅತ್ಯಂತ ಹಿಂದುಳಿದ ವರ್ಗವಾದ ಗಾಣಿಗ ಜನಾಂಗದ ಸರ್ವಾಂಗೀಣ ಅಭಿವೃದ್ಧಿಗಾಗಿ “ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮ” ವನ್ನು ಸ್ಥಾಪಿಸಿ ಸರ್ಕಾರವು ಆದೇಶ ಹೊರಡಿಸಿದ್ದು, ನುಡಿದಂತೆ ನಡೆದ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿರವರಿಗೆ ಸಮಸ್ತ ಗಾಣಿಗ ಸಮುದಾಯದ ಪರವಾಗಿ ಹೃತ್ತೂರ್ವಕ ಧನ್ಯವಾದಗಳನ್ನು ಕೃತಜ್ಞತಾಪೂರ್ವಕವಾಗಿ ಅರ್ಪಿಸಬಯಸಿದೆ.

ಮುಂಬರುವ ಅವಧಿಯಲ್ಲಿ ಸರ್ಕಾರವು ಗಾಣಿಗ ಜನಾಂಗದ ಪುರೋಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿ ತನ್ಮೂಲಕ ಜನಾಂಗದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಅನುವು ಮಾಡಿಕೊಡುವುದೆಂಬ ಆಶಯವನ್ನು ಹೊಂದಲಾಗಿದೆ ಎಂದು (ಎಂ.ಆರ್.ರಾಜಶೇಖರ್-ಅಧ್ಯಕ್ಷರು, ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು

ಸಂಘದ ಮುನಿಶೆಟ್ಟಿ, ಅಮರ್ ನಾಥ್, ರಂಗರಾಜ್, ಮಲ್ಲೇಶ್, ನರಸಿಂಹಯ್ಯ,ಲೋಕೇಶ್,ಸಧಾಶಿವ ಮತ್ತು ಗಾಯತ್ರಿ ಮುನಿರಾಜು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ತಿತರಿದ್ದರು.

City Today News – 9341997936