ವಿಧಾನ ಸಭಾ 2023ರ ಚುನಾವಣೆಗೆ ಭಾರತೀಯ ಜನತಾ ಪಾರ್ಟಿಯಿಂದ ಆಕಾಂಕ್ಷಿ ಅಭ್ಯರ್ಥಿಯಾಗಿ ಆರ್.ವಿ. ಭೂತಪ್ಪ ಅರ್ಜಿ

ವಿಧಾನ ಸಭಾ 2023ರ ಚುನಾವಣೆಗೆ ಭಾರತೀಯ ಜನತಾ ಪಾರ್ಟಿಯಿಂದ ಆಕಾಂಕ್ಷಿ ಅಭ್ಯರ್ಥಿಯಾಗಿ ಆರ್.ವಿ. ಭೂತಪ್ಪ ಅರ್ಜಿ (ಮಾಲೂರು ವಿಧಾನ ಸಭಾ ಕ್ಷೇತ್ರ-149 ಕೋಲಾರ ಜಿಲ್ಲೆ ಕರ್ನಾಟಕ ರಾಜ್ಯ)

ಉಲ್ಲೇಖ: ಸದಸ್ಯತ್ವ ಸಂಖ್ಯೆ: 3055721210, ಮಾಡಿರುವ ನಾನು ಆಕಾಂಕ್ಷಿತ ಅಭ್ಯರ್ಥಿಯಾಗಿ ಭಾರತೀಯ ಜನತಾ ಪಾರ್ಟಿಯಿಂದ ವಿಧಾನ ಸಭೆಗೆ ಪರಿಗಣಿಸಲು ನನ್ನ ಅರ್ಜಿಯನ್ನು ಸಲ್ಲಿಸುತ್ತಿದ್ದೇನೆ, ಈ ಸಂಬಂಧವಾಗಿ ತಮ್ಮ ಸಹಾನುಭೂತಿಯ ಪರಿಗಣನೆಗಾಗಿ ಸ್ವ-ವಿವರದ ಅಂಶಗಳನ್ನು ಈ ಮೂಲಕ ತರಬಯಸುತ್ತೇನೆ. ರಾಜೇನಹಳ್ಳಿ ಗ್ರಾಮ, ಮಾಸ್ತಿ ಹೋಬಳಿ, ತಾಲ್ಲೂಕು, ಕೋಲಾರ ಜಿಲ್ಲೆ, ಕರ್ನಾಟಕ ರಾಜ್ಯದವನಾಗಿದ್ದು, ಇದು ನನ್ನ ಹುಟ್ಟೂರು ಆಗಿರುತ್ತದೆ. ನಾನು ಗಂಗಮಾತಸ್ಯ / ಬೆಸ್ತರು ಸಮುದಾಯಕ್ಕೆ ಸೇರಿದ್ದು, ಇದು ಹಿಂದುಳಿದ ವರ್ಗಕ್ಕೆ ಸೇರಿರುತ್ತದೆ.

ಮಾಲೂರು: ವಿಧಾನ ಸಭಾ ಕ್ಷೇತ್ರದಲ್ಲಿ ಗಂಗಮಾತಸ್ಥ | ಬೆಸ್ತರು ಸಮುದಾಯದಲ್ಲಿ 15 ಸಾವಿರ ಮತದಾರರಿದ್ದು, ರಾಜ್ಯದಲ್ಲಿ ಒಟ್ಟು 50ಲಕ್ಷ ಮತದಾರರು ಈ ಸಮುದಾಯಕ್ಕೆ ಸೇರಿದವರಾಗಿರುತ್ತಾರೆ (ಈ ಪ್ರವರ್ಗಕ್ಕೆ ಕೋಳಿ, ಜನಾಂಗ, ಅಂಬಿಗ, ಮೊಗವೀರ, ಕಬ್ಬಳಿಗೆ ಮತ್ತು ಬರೆಕಾರ ಸಮುದಾಯಗಳು ಒಳಗೊಂಡಿರುತ್ತವೆ). ಸಮಾಜದ ನಾಗರೀಕ ಪ್ರಜೆಯಾಗಿ ನಾನು ಅನೇಕ ಸಂಘ ಸಂಸ್ಥೆಗಳಿಗೆ, ಬಡ ಕುಟುಂಬದವರಿಗೆ ವೈದ್ಯಕೀಯ ಸೌಲಭ್ಯ, ಹಣಕಾಸು ನೆರವು ಮತ್ತು ಮೂಲಭೂತ ಸೌಲಭ್ಯಗಳನ್ನು ಅವಶ್ಯಕತೆಗೆ ಅನುಗುಣವಾಗಿ ಒದಗಿಸುತ್ತಿದ್ದೇನೆ, ಇದಲ್ಲದೇ, ವೈಯಕ್ತಿಕ ಸದಸ್ಯರಿಗೂ ಈ ಸೌಲಭ್ಯವನ್ನು ವಿಸ್ತರಿಸಲಾಗುತ್ತಿದೆ.

ಮೇಲಿನ ಸೌಲಭ್ಯಗಳಲ್ಲದೇ ಕನ್ನಡ ಸಂಘಗಳಿಗೆ ಇತರೆ ಸಂಘ ಸಂಸ್ಥೆಗಳಿಗೆ ಬಡ ಕುಟುಂಬದ ಸುದಾರಣೆ ಮತ್ತು ಕಲ್ಯಾಣ ಕಾರ್ಯಕ್ರಮಗಳಿಗೆ ಹಾಗೂ ಅವರ ಮಕ್ಕಳ ವಿದ್ಯಾಭ್ಯಾಸ ಮತ್ತು ವೈದ್ಯಕೀಯ ವೆಚ್ಚ / ಸೌಲಭ್ಯಗಳನ್ನು ಮಾಲೂರು ತಾಲ್ಲೂಕು, ಕೋಲಾರ ಜಿಲ್ಲೆಯಲ್ಲಿ ಒದಗಿಸಲಾಗುತ್ತಿದ್ದೆ.

ನಾನು ಎಂ.ಕಾಂ ಸ್ನಾತಕೋತ್ತರ ಪದವಿಯನ್ನು ಹೊಂದಿದ್ದು, ರಾಜ್ಯದ ನಿಗಮಗಳಾದ ಕರ್ನಾಟಕ ಸಹಕಾರಿ ಹಾಲು ಒಕ್ಕೂಟ ಮಹಾ ಮಂಡಳಿ ಹಾಗೂ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ಒಟ್ಟು 36 ವರ್ಷಗಳ ಸರ್ಕಾರದ ಸೇವೆಯನ್ನು ಮಾಡಿ ದಿನಾಂಕ 30.09.2022ರಂದು ಉಪ ಪ್ರಧಾನ ವ್ಯವಸ್ಥಾಪಕರಾಗಿ ನಿವೃತ್ತಿ ಹೊಂದಿರುತ್ತೇನೆ.

ಮೇಲಿನ ಹಿನ್ನಲೆಯನ್ನು ಪರಿಗಣಿಸಿ ಮಾಲೂರು ವಿಧಾನ ಸಭಾ ಕ್ಷೇತ್ರಕ್ಕೆ ನನ್ನನ್ನು ಭಾರತಿಯ ಜನತಾ ಪಾರ್ಟಿಯಿಂದ ಅಭ್ಯರ್ಥಿಯನ್ನಾಗಿ 2023ರ ಚುನಾವಣೆಗೆ ಪರಿಗಣಿಸಲು ತಮ್ಮಲ್ಲಿ ಪ್ರಾರ್ಥಿಸುತ್ತೇನೆ ಎಂದು ಆರ್.ವಿ. ಭೂತಪ್ಪ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

City Today News – 9341997936

ಬಾಲ್ಕಿಯಲ್ಲಿ ಗೆಲ್ಲುವ ಸಾಧ್ಯತೆ ಜಾಸ್ತಿ ಇರುವುದರಿಂದ ಡಾ. ದಿನಕರ ಮೋರೆ ರವರಿಗೆ ಬಿಜೆಪಿ ಪಕ್ಷದ ಟಿಕೆಟ್ ನೀಡುವಂತೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಒಟ್ಟು ಮೂರು ಲಕ್ಷ ಮರಾಠ ಸಮುದಾದಯ ಮತದಾರರಿದ್ದಾರೆ. ಆದರೂ ಕೂಡ ಕಳೆದ 2018 ರ ಚುನಾವಣೆಯಲ್ಲಿ ಬಿಜೆಪಿ ಮರಾಠ ಸಮುದಾಯಕ್ಕೆ ಒಂದು ಟಿಕೆಟ್ ನೀಡಿರಲಿಲ್ಲ. ಬೀದರ್ ಜಿಲ್ಲೆಯ ಒಟ್ಟು ಆರು ಕ್ಷೇತ್ರಗಳ ಪೈಕಿ ಬಿಜೆಪಿ ಕೇವಲ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಐದು ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷಕ್ಕೆ ಭಾರೀ ಹಿನ್ನಡೆ ಉಂಟಾಗಿತ್ತು. ಕಳೆದ ಸಲ ಮಾಡಿರುವ ತಪ್ಪುಗಳನ್ನು ಸರಿಪಡಿಸುವ ಉದ್ದೇಶದಿಂದ ಹಾಗೂ ಮರಾಠ ಸಮುದಾಯಕ್ಕೆ ಸಮಾಜಿಕ ನ್ಯಾಯ ಕಲ್ಪಿಸುವ ಉದ್ದೇಶದಿಂದ ಬೀದರ್ ಜಿಲ್ಲೆಯ ಕರ್ನಾಟಕ ಕತೀಯ ಮರಾಠ ಪರಿಷತ್ ಬೀದರ್ ರವರ ಹಾಗೂ ಇತರೆ ಪ್ರಮುಖ ಮುಖಂಡರು ಸೇರಿ ಚರ್ಚಿಸಿ ಬಿಜೆಪಿ ಪಕ್ಷವು ಈ ಸಲ ಮರಾಠ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂದು ನಿರ್ಣಯ ಕೈಗೊಳ್ಳಲಾಯಿತು.

ಹಾಗೆಯೇ ಕಳೆದ ಬಾರಿ 1ಸ್ಥಾನದಿಂದಲೂ ಟಿಕೆಟ್ ನೀಡಿದಿದ್ದ ಬಿಜೆಪಿ ನಾಯಕರು ಈ ಬಾರಿ 2 ಸ್ಥಾನಗಳಿಗೆ ಬಿಜೆಪಿ ಪಕ್ಷದ ಟಿಕೆಟ್ ಬೇಡಿಕೆಯಿಡಲು ತೀರ್ಮಾನಿಸಿದ್ದಾರೆ. ಸಮುದಾಯವಾದ ಮರಾಠರಿಗೆ 2 ಸೀಟುಗಳನ್ನು ಬೀದರ್‌ ಜಿಲ್ಲೆಯಲ್ಲಿ ನೀಡಬೇಕು. ಈಗಾಗಲೇ ಬಿಜೆಪಿ ಪಕ್ಷಕ್ಕೆ ಬೇಡಿಕೆ ಸಲ್ಲಿಸುವ ಬಗ್ಗೆ ಚರ್ಚೆ ನಡೆದಿದೆ. ರಾಜ್ಯದಲ್ಲಿ ಈ ಬಾರಿ ಬಿಜೆಪಿ ಪಕ್ಷಕ್ಕೆ ಪುನಃ ಅಧಿಕಾರಕ್ಕೆ ಬರುವ ಅವಕಾಶ ಇದೆ. ಜಿಲ್ಲೆಯ ದೊಡ್ಡ ಮತದಾರರ ಸಮುದಾಯವಾದ ಮರಾಠರು ಈಗ ಬಿಜೆಪಿ ಕಡೆ ಇದ್ದಾರೆ. ಇವರನ್ನು ಕಾಂಗ್ರೆಸ್ ಕಡೆ ವಾಲದಂತೆ ತಡೆಯಲು ನಮ್ಮವರಿಗೆ ಹೆಚ್ಚಿನ ಅವಕಾಶ ನೀಡಬೇಕು. ಸಮುದಾಯದವರು ಅಭ್ಯರ್ಥಿಯನ್ನು ಗೆಲ್ಲಿಸಿಕೊಡುತ್ತಾರೆ. ಅದರಲ್ಲಿ ಯಾವುದೇ ಸಂಶಯ ಇಲ್ಲ. ಮತದಾರರಿಗೆ ಈ ಸಾರಿ ಬಿಜೆಪಿ ಬಗ್ಗೆ ಒಲವು ಇದೆ ಎನ್ನುವುದನ್ನು ಪಕ್ಷದ ಹೈಕಮಾಂಡ್ ವಿವರಿಸಲು ಮರಾಠ ಸಮುದಾಯದ ನಾಯಕರು ನಿರ್ಧರಿಸಿದ್ದಾರೆ.

ಮರಾಠ ಸಮುದಾಯದ ಹಲವರು ಬಿಜೆಪಿ ಪಕ್ಷದ ಆಕಾಂಕ್ಷಿಗಳಿದ್ದು, ಅದರಲ್ಲಿ ಬಾಲ್ಕಿ ಟಿಕೆಟ್ ಕ್ಷೇತ್ರದಲ್ಲಿ ಡಾ. ದಿನಕರ ಮೋರೆ ಅವರು ಪ್ರಬಲ ಅಭ್ಯರ್ಥಿಯಾಗಿದ್ದಾರೆ. ಬಾಲ್ಕಿಯಲ್ಲಿ ಗೆಲ್ಲುವ ಸಾಧ್ಯತೆ ಜಾಸ್ತಿ ಇರುವುದರಿಂದ ಡಾ. ದಿನಕರ ಮೋರೆ ರವರಿಗೆ ಬಿಜೆಪಿ ಪಕ್ಷದ ಟಿಕೆಟ್ ನೀಡುವಂತೆ ಒತ್ತು ನೀಡಲು ಚರ್ಚೆಯಾಗಿದೆ. ಎಲ್ಲಾ ಒಳಪಂಗಡಗಳನ್ನು ಸೇರಿಸಿ ಬಿಜೆಪಿಗೆ ಉತ್ತಮವಾದ ಗೆಲ್ಲುವ ವಾತಾವರಣವನ್ನು ಕಲ್ಪಿಸಿಕೊಡಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ರಾಜ್ಯ ಬಿಜೆಪಿ ನಾಯಕರ ಎದುರು ಮಹತ್ವದ ಪ್ರಮುಖ ಬೇಡಿಕೆಗಳನ್ನ ಮರಾಠ ಸಮುದಾಯದ ಮುಖಂಡರು ಇಟ್ಟಿದ್ದಾರೆ. ಬಿಜೆಪಿಯಲ್ಲಿ 2018 ರ ಚುನಾವಣೆಯಲ್ಲಿ ಬೀದರ್ ಜಿಲ್ಲೆಯಲ್ಲಿ ಒಂದು ಕ್ಷೇತ್ರದಲ್ಲಿಯೂ ಕೂಡ ಬಿಜೆಪಿ ಟಿಕೆಟ್‌ ಸಿಕ್ಕಿಲ್ಲ.

ಇನ್ನು ಎಷ್ಟು ವರ್ಷಗಳ ಕಾಲ ಮರಾಠ ಸಮುದಾಯದ ನಾಯಕರು ಬಿಜೆಪಿ ಟಿಕೆಟ್‌ಗಾಗಿ ಕಾಯಬೇಕು, ಈ ಬಾರಿಯಾದರೂ ಮರಾಠ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಇಡುವಂತೆ ಸಭೆಯಲ್ಲಿ ಭಾಗವಹಿಸಿದ್ದ ಆಕಾಂಕ್ಷಿಗಳು, ಸಮುದಾಯದ ನಾಯಕರು ಆಗ್ರಹಿಸಿದರು.

ನಾವು ಮಾಧ್ಯಮದ ಮೂಲಕ ತಿಳಿಯಪಡಿಸುವುದೇನೆಂದರೆ ನಮ್ಮ ತಾಲ್ಲೂಕಿನಲ್ಲಿ ಬರೀ ಒಂದೇ ಕುಟುಂಬ (ಖಂಡ್ರೆ) ಕುಟುಂಬದವರೇ ಅಧಿಕಾರ ನಡೆಸಿಕೊಂಡು ಬಂದಿದ್ದಾರೆ. ಇದಕ್ಕೆ ಕಾರಣ ಆಮ್ ಜನತಾಕೂ ದಿಶಾ ಭೂಲ್ ಕರನಾ ಅಂದರೆ ಸಾಮಾನ್ಯರಿಗೆ ದಾರಿ ತಪ್ಪಿಸುವುದು ಮತ್ತೆ ಒತ್ತಡ ಹೇರುವುದು ಮತ್ತು ಗುಂಡ್‌ಗರ್ದಿ ಮಾಡಿ ಅಧಿಕಾರಕ್ಕೆ ಬಂದಿರುತ್ತಾರೆ.

ಅಲ್ಲದೇ ತಮಗೆ ಬೇಕಾದ ಚೇಲಾಗಳಿಗೆ ಮಾತ್ರ ಕೆಲಸ ಮಾಡಿರುತ್ತಾರೆ. ಸಾಮಾನ್ಯರು ಇವರ ಈ ನಡೆ ನೋಡಿ ಬೇಸತ್ತಿದ್ದಾರೆ. ಆದ್ದರಿಂದ ತಾಲ್ಲೂಕಿನ ಜನರಲ್ಲಿ ನಾವು ಮನವಿ ಮಾಡಿಕೊಳ್ಳುವುದೇನೆಂದರೆ ಈ ಹುಕುಂಶಾಹಿಗಳನ್ನು ಕಿತ್ತೊಗೆದು ಒಳ್ಳೆ ವ್ಯಕ್ತಿ ಡಾ| ದಿನಕರ ಮಾರೆ ಸಾಹೇಬರಿಗೆ ಒಂದು ಒಳ್ಳೆ ಅವಕಾಶ ಕೊಟ್ಟು ಅವರನ್ನು ಆರಿಸಿ ತರೋಣ ಅಲ್ಲದೇ ನಮ್ಮ ಪಕ್ಷದ ಹೈಕಮಂಡ್ ಅಂದರೆ ಹಿರಿಯರನ್ನು ಸಹ ಈ ಮಾಧ್ಯಮದ ಮೂಲಕ ನಾನು ಮನವಿ ಮಾಡಿಕೊಳ್ಳುತ್ತೇನೆ.

ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಸುಮಾರು 1990 ರಿಂದಲೂ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಪಕ್ಷದ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ಅನುಭವ ಹೊಂದಿದವನಾಗಿದ್ದೇನೆ. ಅಲ್ಲದೇ ತಾಲ್ಲೂಕಿನ ಎಲ್ಲಾ ಭಾಗಗಳಲ್ಲಿ ಓಡಾಡಿ ಜನರ ನಾಡಿಮಿಡಿತವನ್ನು ಕಂಡುಕೊಂಡಿರುತ್ತೇನೆ.

ಆದ್ದರಿಂದ ಬಂಧುಗಳೇ, ಈ ಭಾಲ್ಕಿ ತಾಲ್ಲೂಕಿನಲ್ಲಿ ಬದಲಾವಣೆ ತಂದು ಈ ಕುಟುಂಬ ರಾಜಕಾರಣಕ್ಕೆ ನಾಂದಿ ಹಾಡೋಣ ಅಂತ ಜನರಲ್ಲಿ ಹಾಗೂ ನಮ್ಮ ಹಿರಿಯರಲ್ಲಿ ಮನವಿ ಮಾಡುತ್ತೇನೆ. ಹಿರಿಯ ಮುತ್ಸದ್ದಿ ಹಾಗೂ ವಿದ್ಯಾವಂತರು, ಸರಳ ಸ್ವಭಾವದವರು, ಸಾಮಾನ್ಯರೊಂದಿಗೆ ಸರಳವಾಗಿ ಬೆರೆತು ಅವರನ್ನು ಸ್ಪಂಧಿಸುವಂತವನಾಗಿದ್ದು, ಇಂತಹ ಸಜ್ಜನರನ್ನು ನಮ್ಮ ಮುಂದಿನ ವಿಧಾನಸಭೆಗೆ ಆರಿಸಿ ಕಳಿಸೋಣ ಅಂತ ನಮ್ಮ ತಾಲ್ಲೂಕಿನ ಜನರಲ್ಲಿ ನನ್ನ ಕಳಕಳಿಯ ಮನವಿ ಎಂದು ದಿಗಂಬರ ರಾವ್ ಮಾನ್ಕರಿ, ಬೀದರ್‌ ಕರ್ನಾಟಕ ಕತೀಯ ಮರಾಠ ಪರಿಷತ್‌ ಅಧ್ಯಕ್ಷರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಡಾ. ಬಾಲಾಜಿ ಸಾವಳೀಕರ್, ಬಿಜೆಪಿ ಮುಖಂಡರು,ಯುವರಾಜ ಪಾಟೀಲ, ವಕೀಲರು,ಸುನಿಲ್ ಸಿಂದ,ಶರಣು ಕಡಗಂಚಿ,ಶಾಂತವೀರ್ ಕೇಸ್ಕ‌ರ್ & ಮಲ್ಲಿಕಾರ್ಜುನ ಸೂರಿ ಪಾಳ್ಗೊಂಡರು

City Today News – 9341997936

ಹೆಚ್‌.ಎಂ. ಗೋಪಿಕೃಷ್ಣರವರಿಗೆ ತರೀಕೆರೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡುವಂತೆ ಒತ್ತಾಯ

ಹೆಚ್‌.ಎಂ. ಗೋಪಿಕೃಷ್ಣರವರಿಗೆ ತರೀಕೆರೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡುವಂತೆ ಒತ್ತಾಯಿಸಿ ಪತ್ರಿಕಾ ಗೋಷ್ಠಿ

ಹೆಚ್‌.ಎಂ. ಗೋಪಿಕೃಷ್ಣ ರವರು ಕಾಂಗ್ರೆಸ್ ಪಕ್ಷದಲ್ಲಿ ಮಡಿವಾಳ ಸಮಾಜದ ಏಕೈಕ ಸಕ್ರಿಯ ರಾಜಕಾರಣಿ, ಕಾಂಗ್ರೆಸ್‌ ಸದಸ್ಯತ್ವ ಅಭಿಯಾನದಲ್ಲಿ ಸುಮಾರು 20ಸಾವಿರ ಸದಸ್ಯರನ್ನು ಮಾಡಿದ್ದಾರೆ. ಎಲ್ಲಾ ಪಕ್ಷಗಳು ಮಡಿವಾಳರ ಯುವ ನಾಯಕರನ್ನು ಪಕ್ಷದ ಸಂಘಟನೆಗೆ ದುಡಿಸಿಕೊಂಡು ರಾಜಕೀಯ ಸ್ಥಾನ ಮಾನ ನೀಡದೆ ನಿರ್ಲಕ್ಷಿಸುತ್ತಿವೆ, ಹೆಚ್‌.ಎಂ. ಗೋಪಿಕೃಷ್ಣ ರವರು 2013 ಮತ್ತು 2018ರ ಚುನಾವಣೆಯಲ್ಲಿ ಪಕ್ಷೇತ್ರ ಅಭ್ಯರ್ಥಿಯಾಗಿ ಕಡಿಮೆ ಮತಗಳ ಅಂತರದಿಂದ ಸೋತ್ತಿದ್ದಾರೆ. 2023ರ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿ ಪ್ರಬಲ ಅಕಾಂಕ್ಷಿಯಾಗಿದ್ದಾರೆ. ಈ ಸಾರಿ ಕಾಂಗ್ರೆಸ್ ಟಿಕೆಟ್ ನೀಡಿದರೆ ಗೆಲ್ಲುವ ಎಲ್ಲಾ ಲಕ್ಷಣಗಳು ಇವೆ. ಕಾಂಗ್ರೆಸ್ ಇವರಿಗೆ ಟಿಕೆಟ್ ನೀಡಿ ಈ ಮೂಲಕ ಒಬ್ಬ ಮಡಿವಾಳರನ್ನು ವಿಧಾನಸೌದಕ್ಕೆ ಕಳುಹಿಸಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ, ಸಾಮಾಜಿಕ ನ್ಯಾಯ ಮತ್ತು ಹಿಂದುಳಿದ ಕಾಯಕ ಸಮಾಜಗಳಿಗೆ ಕಾಂಗ್ರೆಸ್‌ ಪಕ್ಷ ರಾಜಕೀಯ ಶಕ್ತಿ ನೀಡಿದಂತಾಗುತ್ತದೆ. ಆದ್ದರಿಂದ ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯರವರು ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾದ ಶ್ರೀ ಡಿ.ಕೆ.ಶಿವಕುಮಾರ್ ರವರು, ಆಯ್ಕೆ ಕಮಿಟಿಯ ಎಲ್ಲಾ ಸದಸ್ಯರು ಮತ್ತು ಹೈಕಮಾಂಡ್ ಹೆಚ್.ಎಂ.ಗೋಪಿಕೃಷ್ಣ ರವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಬೇಕು, ಹಾಗಾದರೆ ಮಾತ್ರ ರಾಜ್ಯದ ಎಲ್ಲಾ ಮಡಿವಾಳರು ಕಾಂಗ್ರೆಸ್ಸನ್ನು ಬೆಂಬಲಿಸುತ್ತೇವೆ. ಕುತಂತ್ರ ರಾಜಕಾರಣದಿಂದ ಹೆಚ್‌.ಎಂ. ಗೋಪಿಕೃಷ್ಣ ರವರಿಗೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದರೆ ರಾಜ್ಯದ ಎಲ್ಲಾ ಮಡಿವಾಳರು ಹಿಂದುಳಿದ ಕಾಯಕ ಸಮುದಾಯಗಳಲ್ಲಿ ಜಾಗೃತಿಯನ್ನು ಮೂಡಿಸಿ, ನಾವು ಕಾಂಗ್ರೆಸನ್ನು ವಿರೋಧಿಸುತ್ತೇವೆ. ಟಿಕೆಟ್ ಕೈ ತಪ್ಪಲು ಕಾರಣರಾದವರ ವಿರುದ್ಧ ಕಠಿಣ ನಿರ್ಧಾರ ಕೈಗೊಳ್ಳುತ್ತೇವೆ. ಅದಕ್ಕೆ ಅವಕಾಶ ನೀಡದೆ ಹೆಚ್.ಎಂ.ಗೋಪಿಕೃಷ್ಣ ರವರಿಗೆ ಟಿಕೆಟ್ ನೀಡಲೇಬೇಕೆಂದು ಈ ಮೂಲಕ ಒತ್ತಾಯಿಸುತ್ತೇವೆ ಎಂದು ಹೆಚ್.ಎಂ. ಕೆಂಪಶೆಟ್ಟಿ ರಾಜ್ಯಾಧ್ಯಕ್ಷರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

City Today News – 9341997936

ರಾಜಾಜಿನಗರ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಡಾ.ಅಂಜನಪ್ಪನವರು ಸ್ಪರ್ಧಿಸಲ್ಲಿದ್ದಾರೆ

ಇತ್ತೀಚಿನ ದಿನಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುವ ಮತ್ತು ನಡೆಸುವ ರೀತಿ ಅದರಲ್ಲಿ ಪ್ರಮುಖ ಪಾತ್ರವಹಿಸುವ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಅನುಸರಿಸುವ ಮಾನದಂಡ ನಂತರ ಅವರ ಜೊತೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ರೀತಿ, ಹೇಗಾದರೂ ಸರಿ ಗೆಲ್ಲಲೇಬೇಕೆಂದು ಅಭ್ಯರ್ಥಿಗಳು ಬಳಸುವ ಜಾತಿ ಜಾತಿಗಳ ನಡುವೆ ಹುಟ್ಟುಹಾಕುವ ಬಾಂಧವ್ಯ ಹಾಗೂ ಒಡಕುಗಳು, ಅದರಿಂದ ಸಾಮಾನ್ಯ ಜನರಿಗಾಗುವ ಅಡ್ಡಿ, ಆತಂಕ,ನೋವು, ಪರಿಹಾರವಿಲ್ಲದ೦ತಹ ಮಾನಸಿಕ ಯಾತನೆ, ಹಲವು ವೃತ್ತಿಪರ ಕೆಲಸ ಕಾರ್ಯ ಮಾಡುವ ಉದಾ: ಗುತ್ತಿಗೆದಾರರ ಪಾತ್ರ ಹಾಗೂ ಅವರ ಭಾಗಶಃ ಭಾಗವಹಿಸುವಿಕೆ ಮತ್ತು ಪರೋಕ್ಷವಾಗಿ ಸಹಾಯ ನೀಡಿ ಅದನ್ನು ಮತ್ತೇ ಸರ್ಕಾರದಿಂದ ಸವಲತ್ತುಗಳನ್ನು ಪಡೆಯುವ ರೀತಿ ಮತ್ತು ಮಾರ್ಗ ಹಲವು ಸಂಘಟನೆಗಳನ್ನು ಆಸೆ ಆಕಾಂಕ್ಷೆಗಳನ್ನು ಒಡ್ಡಿ ಚುನಾವಣಾ ಪ್ರಚಾರಕ್ಕೆ ಬಳಕೆ ಮಾಡುವ ವಿಧಾನ, ಬಗೆಹರಿಸಲಾಗದಿದ್ದರೂ ನಿರುದ್ಯೋಗಿಗಳಿಗೆ ಒಡ್ಡುವ ಆಸೆ, ಆಕಾಂಕ್ಷೆಗಳು, ರೈತರ ಬಗ್ಗೆ, ವಿದ್ಯಾಭ್ಯಾಸದ ಬಗ್ಗೆ, ಜನರ ಆರೋಗ್ಯ ಬಗ್ಗೆ, ತೋರುವ ಅಸಡ್ಡೆ ಅನಾವಶ್ಯಕ ಕಾಮಗಾರಿಗಳಿಂದ ಹಣಕಾಸು ಮುಗ್ಗಟ್ಟು, ಮತ್ತು ಸಾಮಾನ್ಯ ಜನರ ಮೇಲೆ ತೆರಿಗೆ ಹೊರೆ, ಹಾಸ್ಯಾಸ್ಪದ ಬಜೆಟ್‌ಗಳು, ಒಬ್ಬ ರಾಜಕಾರಣಿ’ ಮತ್ತೊಬ್ಬ ರಾಜಕಾರಣಿಯ ಬಗ್ಗೆ ವೈಯಕ್ತಿಕ ಟೀಕೆಗಳ ವೈಯಕ್ತಿಕ … ಟೀಕೆಗಳ ಮುಖಾಂತರ ಸದಾ ಸುದ್ದಿಯಲ್ಲಿದ್ದು ಜನರ ನಗೆಪಾಟಲಿಗೆ ಗುರಿಯಾಗುವುದು, ಮತ್ತು ಇದೇ ಸಮಾಜದ ಉದ್ಧ ಾರವೆಂದು ಬಿಂಬಿಸುವುದು, ಮತ್ತು ಅದನ್ನೇ ಜನರು ಅಂದರೆ, ನಾವುಗಳು ದಿನಗಟ್ಟಲೇ ಚರ್ಚೆ ಮಾಡುವುದು ಹಾಗೇ ಮರೆತು ಬಿಡುವುದು ಸಾಮಾನ್ಯನ ದಿನಚರಿಯಾಗಿದೆ.

ಇದರಿಂದ ನಿಜವಾದ ಜನಸೇವೆ, ಅದು ಆರೋಗ್ಯದ, ವಿದ್ಯಾರ್ಜನೆ, ರೈತಪರ ಚಿಂತನೆ, ನಿರುದ್ಯೋಗ ಸಮಸ್ಯೆಯ ನಿವಾರಣೆ ಬಗ್ಗೆ ಚಿಂತನೆ ಮಾಡುವುದು, ಅದಕ್ಕೆ ಪರಿಹಾರ ಹುಡುಕುವುದು ಮರತೇ ಹೋಗಿದೆ.

ಚುನಾವಣೆ ಸಂದರ್ಭದಲ್ಲಿ ಅಭಿವೃದ್ಧಿ ಬಗ್ಗೆ ಪ್ರಣಾಳಿಕೆ ಹೊರಡಿಸುವುದು, ಬಜೆಟ್ ಬಂದಾಗ ಆಕರ್ಷಕವಾಗಿ ಮಂಡಿಸುವುದು, ಇವುಗಳನ್ನು ಬಿಟ್ಟರೆ ಸಮಾಜದ ಸಾಮಾನ್ಯನ ಮೇಲೆ ನಿರಂತರ ಅಧಿಕಾರ ದುರ್ಬಳಕೆಯ ಸಾಮೂಹಿಕ (ಮತ ಪಡೆದವರು ಮತ ಹಾಕಿದವರ ಮೇಲೆ) ಅತ್ಯಾಚಾರ ನಡೆಸುತ್ತಲೇ ಬಂದಿದ್ದಾರೆ.

ಸಾಮಾನ್ಯ ರೈತ ಕುಟುಂಬದಿಂದ ದೊಡ್ಡಬಳ್ಳಾಪುರ ತುಮಕೂರಿನಿಂದ ಹುಟ್ಟಿ ರಾಜಾಜಿನಗರದ ಆರ್.ಕೆ.ಎಂ.ಟಿ. ಉಚಿತ ಹಾಸ್ಟೆಲ್‌ನಲ್ಲಿ ವಿದ್ಯಾಬ್ಯಾಸ ಮಾಡಿದ ನನ್ನನ್ನು ಇತ್ತೀಚಿನ ಕೋವಿಡ್ ಸಮಯದಲ್ಲಿ ಎಲ್ಲಾ ಜಾತಿಯ, ಎಲ್ಲಾ ವರ್ಗದ, ಅತೀ ಬಡವರು, ಅತೀ ಶ್ರೀಮಂತರ ವರೆಗೆ ಧೈರ್ಯ ತುಂಬಿ ನನ್ನನ್ನು ಜನಸಾಮಾನ್ಯ ಹಾಗೂ ಮಾಧ್ಯಮ ಮಿತ್ರನನ್ನಾಗಿ ಮಾಡಿದ್ದರಿಂದಲೇ ನನ್ನನ್ನು ಹೋದಲೆಲ್ಲಾ ಎಲ್ಲಾ ಜನಾಂಗದ ಮತ್ತು ಎಲ್ಲಾ ವಯೋವೃದ್ಧರಿಂದ ಹಿಡಿದು ಚಿಕ್ಕಮಕ್ಕಳವರೆಗೆ ಕೈಮುಗಿಯುವವರೆಷ್ಟೋ ಜನ, ನಮಸ್ಕಾರ ಡಾಕ್ಟರೇ ಎಂದು ಕೂಗಿ ಹೇಳುವವರ ಜನ ಇದ್ದಾರ

ಇದೇ ಕರ್ನಾಟಕದಲ್ಲಿ ಹೋರಾಟ, ಕಾರ್ಮಿಕರ ಹೋರಾಟ, ದೇವಸ್ಥಾನಕ್ಕೆ ಹೋಗಲಿ, ಶಾಲಾ ಕಾಲೇಜುಗಳಲ್ಲಿ ರೈತ ಸಿನಿಮಾರಂಗದವರಾಗಲಿ, ಚಿಕ್ಕ ಹೋಟಲ್ ಅಥವಾ ಸಾವ್ ಹೋಟೆಲ್‌ ಗಳಿಗೆ ಭೇಟಿ, ಯಾವುದೇ ಮದುವ ನಮ್ಮ ಡಾ| ಆಂಜನಪ್ಪ, ಕೋವಿಡ್ ಡಾಕ್ಟರ್ ಬಂದ್ರು ಅಂತಾರೆ. ಕಾರ್ಯ ಕ್ರಮಗಳಲಾಗಲಿ, ನನ್ನನ್ನು ಹೇ

ಚೇಪೇಕಾಯಿ ತಿಂದರೆ ಹೇಗೆ ಮನುಷ್ಯನ ಆರೋಗ ಆರೋಗ್ಯದ ಬಗ್ಗೆ ಜನ = ಜನಾರ್ದನ ಎಂಬ ಕಾರ್ಯಕ್ರಮದಲ್ಲಿ, ಜನಗಳಿಗೆ ಮತ್ತು ದನಗಳಿಗೆ ಚಿಕಿತ್ಸೆ ನೀಡುವುದು, ನಮ್ಮೂರಿನ (ದೊಡ್ಡಬಳ್ಳಾಪುರ ತಾಲ್ಲೂಕು, ದೊಡ್ಡತುಮಕೂರು ಕರೆಕಲ್ ಬಮಕೂರು) ಕಲುಷಿತ ಕೆರೆ, ಹೋರಾಟದ ಬಗ್ಗೆ, ಈ ಎಲ್ಲಾ ಜನಪರ ಕಾರ್ಯಕ್ರಮಗಳನ್ನು ಜನಸಾಮಾನ್ಯರಿಗೆ ತಲುಪಿಸಿ ನನ್ನನ್ನು ಜನರ ಮುಂದೆ ಒಬ್ಬ ಸಾಧಕನನ್ನಾಗಿ ಬಿಂಬಿಸಿದ್ದು ತಾವುಗಳು, ಅ೦ದರೆ ಮಾಧ್ಯಮ ಕರೆಯುತ್ತಾರೆ. ಮಿತ್ರರು, ಆದ್ದರಿಂದ ನನ್ನನ್ನು ಮಾಧ್ಯಮ ಮಿತ್ರ, ಮಾಧ್ಯಮ ಡಾಕ್ಟರ

ಆದ್ದರಿಂದ ನಿಮ್ಮಲ್ಲಿ ಕಳಕಳಿಯ ಮನರ ಏನೆಂದರೆ, ತಾವುಗಳು ಜನಸಾಮಾನ್ಯರಿಗೆ ಹಿರಿಯರು ಮತದಾನ ಮತ್ತು ಚುನಾವಣೆ ಎಂಬ ಅಸವನ್ನು ಕೊಟ್ಟಿದ್ದನು. ಇತ್ತೀಚೆಗೆ ಇದೇ ಜನಸಾಮಾನ್ಯರಿಗೆ ಮಾರಕವಾಗಿ ಮಾಡಿದ್ದಾರೆ.

ಇದನ್ನು ಸಮಾಜ ಸುಧಾರಕರು ಮತ್ತು ಸಾಮಾನ್ಯ ಮನುಷ್ಯನಿಗೆ ಎಟಕುವ ಹಾಗೇ ಆದಷ್ಟು ಭ್ರಷ್ಟಚಾರದಿಂದ ದೂರವಿರುವವರು ಚುನಾವಣೆಯಲ್ಲಿ ಸರ್ಧಿಸುವಂತಾಗಬೇಕು, ಇದಕ್ಕಾಗಿ ನಾನು ಕೂಡ ಜನರಿಗೆ ಕೋವಿಡ್ ಸಮಯದಲ್ಲಿ ಕೊಟ್ಟ ಧೈರ್ಯದಂತೆ ಜನರು ಕೂಡ ನನಗೆ, ನನ್ನ ಸ್ನೇಹಿತರಿಗೆ ಮತ್ತು ಮಾಧ್ಯಮ ಮಿತ್ರರಿಗೆ ಧೈರ್ಯ ತುಂಬುತ್ತಾರೆಂದು ನಂಬಿ ರಾಜಾಜಿನಗರ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸರ್ಧಿಸುತ್ತಿದ್ದೇನೆ.

ಧೈರ್ಯ ತುಂಬಿ ಮಾಧ್ಯಮ ಸ್ನೇಹಿ ಹಾಗೂ ಜನಸಾಮಾನ್ಯನ ಸ್ನೇಹಿ ಸದಸ್ಯರನ್ನಾಗಿ ಮಾಡಬೇಕಾಗಿ ತಮ್ಮಲ್ಲಿ ವಿನಮ್ಮ ಮನವಿ,

ಬನ್ನಿ ಸಾಮಾನ್ಯರ ಪರ ಜೊತೆ ಜೊತೆಯಲ್ಲಿ ಸಾಗೋಣ ಸುಧಾರಣೆ ತರೋಣ ಎಂದು ಡಾ| ಆಂಜನಪ್ಪ, ರವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು

City Today News – 9341997936

Nominated committee members for the Indian Federation of Mixed Martial Arts [IFMMA (regd.)].

Indian Federation of Mixed Martial Arts

Grand Master M.H Abid, Chairman of the IFMMA, has called for a press meet on Saturday January 28th 2023 to announce the nominated committee members for the Indian Federation of Mixed Martial Arts [IFMMA (regd.)].

The following delegates will continue the journey started by this federation:

General Secretary: M Sarwar Mir for Maharashtra

Chairperson of the woman committee :Priyanka BS for Karnataka

Board member: Balaraju for Telengana

Board member: Revanth Pawan kumar for Andra pradesh

Mixed Martial arts is one of the most popular and fastest growing sports in the world on both the fitness and entertainment level. It combines multiple styles and techniques under its umbrella, which makes it very challenging and attractive.

The mission of this federation is to place India on the world map of mixed martial arts. And bring global exposure from the international community to our athletes and enthusiasts. Grand Master Abid is a pioneer board member and Asia Secretaty General of the international mixed martial arts confederation (IMMAC) and the Asian Mixed Martial Arts Confederation (AMMAC). His experience spans more than 4 decades in Martial arts and he is also a founding member of Humanitarian games Said Grand Master Abid

For Further details Contact: Grand Master Abid:+919449013790

City Today News – 9341997936