ಶ್ರೀ ಗಂಗಾಧರ ನಾಗೇಶ ಭಟ್ಟ ಇವರಿಗೆ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಕಾರವಾರ ಅಂಕೋಲಾ ಕ್ಷೇತ್ರದಿಂದ ಬಿಜೆಪಿ ಪಕ್ಷದ ಅಭ್ಯರ್ಥಿಯೆಂದು ಪರಿಗಣಿಸಲು ವಿನಂತಿ ಪೂರ್ವಕವಾಗಿ ಮನವಿ

ಸಮಸ್ತ ದೈವಜ್ಞ ಬ್ರಾಹ್ಮಣ ಸಮಾಜದ ಒಕ್ಕೂಟದ ಅಧ್ಯಕ್ಷ ನಾನು ಶ್ರೀ ರಾಜು ರೇವಣಕರ ಬಾಗಲಕೋಟ ಡೈರೆಕ್ಟರ ಓಯಲ್ ಇಂಡಿಯಾ ದೆಹಲಿ ವಿನಂತಿಸಿಕೊಳ್ಳುವುದೇನೆಂದರೆ, ದೈವಜ್ಞನ ಬ್ರಾಹ್ಮಣರು ತಮ್ಮ ಸಾಧನೆಯ ಮೂಲಕ ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕವಾಗಿ, ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸಜಮಾದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡು ಕರ್ನಾಟಕ ರಾಜ್ಯದ ಉತ್ತರ ಕರ್ನಾಟಕ ಬೆಂಗಳೂರು ಹಾಗೂ ದಕ್ಷಿಣ ಕರ್ನಾಟಕದಲ್ಲಿ ನೆಲೆಸಿರುತ್ತಾರೆ ದೈವಜ್ಞ ಬ್ರಾಹ್ಮಣ ಸಮಾಜದವರು ಕೇಂದ್ರದ ಒಬಿಸಿ ಮತ್ತು ರಾಜ್ಯದ 2ಎ ಪಂಗಡದಲ್ಲಿ ಸೇರಿದ್ದರು ಇಲ್ಲಿಯವರೇಗೆ ಹಿಂದಿನ ಹಾಗೂ ಇಂದಿನ ರಾಜಕೀಯ ದೈವಜ್ಜನಿಗೆ ಹೇಳಿಕೊಳ್ಳುವ ಯಾವುದ ಪ್ರಮುಖ ರಾಜಕೀಯ ಸ್ಥಾನಮಾನಗಳನ್ನು ಕೊಟ್ಟಿರುವದಿಲ್ಲ. ದೈವಜ್ಞ ಬ್ರಾಹ್ಮಣರು ಭಾಜಪಗಿಂತ ಮೂಲ ಜನ ಸಂಘ ಕಾಲದಿಂದಲೂ ಯಾರ ಒತ್ತಡಕ್ಕೆ ಸಿಲುಕದೆ ಆಮಿಷಗಳಿಗೆ ಒಳಗಾಗದೆ ನೇರವಾಗಿ ಭಾರತಿಯ ಜನತಾ ಪಕ್ಷಕ್ಕೆ (ಬಿಜೆಪಿ) ಸಮರ್ಧಿಸುವದು ಹಳೆ ಕಾಲದಿಂದಲೂ ನಡೆದು ಬಂದಿದ್ದು ಸರ್ವವಿಧಿತ ದೈವಜ್ಞ ಬ್ರಾಹ್ಮಣರು ಕಾರಣಿಭೂತರಾಗಿರುವವರು ರಾಜಕೀಯ ಪಕ್ಷಗಳಿಗೆ ಗೊತ್ತಿರುವ ವಿಷಯವ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಹಾಗೂ ಬೆಂಗಳೂರು, ಅನೇಕ ಮತ ಕ್ಷೇತ್ರಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿರುವ ದೈವಜ್ಞರ ಪ್ರಭಾವವಿದ್ದು ಅದರ ಲಾಭವನ್ನು ಪಡೆಯಲು ಕರ್ನಾಟಕ ರಾಜ್ಯ ಸಮಸ್ತ ದೈವಜ್ಞ ಬ್ರಾಹ್ಮಣ ಸಮಾಜ ಒಕ್ಕೂಟದ ಭಾಂದವರೆಲ್ಲರೂ ಉತ್ಸುಕರಾಗಿದ್ದಾರೆ. ಆದ್ದರಿಂದ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ದೈವಜ್ಞ ಬ್ರಾಹ್ಮಣ ಸಮುದಾಯದವರಾದ ಶ್ರೀ ಗಂಗಾಧರ ಭಟ್ಟ ಇವರನ್ನು ಉತ್ತರ ಕನ್ನಡ ಭಾಗದ ಕಾರವಾರ ಅಂಕೋಲಾ ಕ್ಷೇತ್ರದಿಂದ ಬಿಜೆಪಿ ಪಕ್ಷದ ಅಭ್ಯರ್ಥಿಯನ್ನಾಗಿ ನಿಲ್ಲಿಸಲು ಒಕ್ಕೂಟ ತನು, ಮನ, ಧನ, ಗಳಿಂದ ಸರ್ವ ಪ್ರಯತ್ನಗಳನ್ನು ಮಾಡುವ ನಿರ್ಧಾರ ತೆಗೆದುಕೊಂಡಿದ್ದು ಅದಕ್ಕೆ ತಮ್ಮ ಪೂರ್ಣ ಸಹಕಾರ ಬೆಂಬಲಕ್ಕಾಗಿ ಕರ್ನಾಟಕ ರಾಜ್ಯದ ಸಮಸ್ತ ದೈವಜ್ಞ ಬ್ರಾಹ್ಮಣ ಸಮಾಜ ಒಕ್ಕೂಟವು ತಮ್ಮನ್ನು ಕಳ ದೈವಜ್ಞ-ಬ್ರಾಹ್ಮಣ ವಿನಂತಿಸಿಕೊಳ್ಳುತ್ತೇವೆ. ಹಾಗೆಯೇ ಸಂಕ್ಷಿಪ್ತವಾಗಿ ಶ್ರೀ ಗಂಗಾಧರ ಭಟ್ಟ ಇವರ ಬಗ್ಗೆ ಹೇಳುವದಾದರೆ:- ಕಳಿಯಿಂದ

ಮೂಲತಃ ಶ್ರೀ ಗಂಗಾಧರ ಭಟ್ಟ ಇವರು ಕಾರವಾರ ಜಿಲ್ಲೆಯ ಸದಾಶಿವಗಡ ಗ್ರಾಮದವರು ಇವರ ತಂದೆಯವರಾದ ದಿವಂಗತ ಶ್ರೀ ನಾಗೇಶ ಭಟ್ಟ ಪ್ರಸಿದ್ಧ ಜ್ಯೋತಿಷ ಹಾಗೂ ಪುರೋಹಿತರು ದೈವಜ್ಞ ಬ್ರಾಹ್ಮಣ ಸಮಾಜದ ಶ್ರೇಷ್ಠ ಪುತ್ರ ಎಂದೆನೆಸಿಕೊಂಡ ಮುಂಬೈ ನಗರದ ಶಿಲ್ಪಿಕಾರ ದೈವಜ್ಞ ಬ್ರಾಹ್ಮಣ ಸಮಾಜದ ದಿವಂಗತ ಶ್ರೀ ಜಗನ್ನಾಥ ಶಂಕರ ಶೇಠ ಇವರು ರಾಜಕೀಯ ಶೈಕ್ಷಣಿಕ ಹಾಗೂ ಸಾಮಾಜಕಿಕ ಕಾರ್ಯಗಳಲ್ಲಿ ಜನಸೇವೆಯೇ ಜರ್ನಾಧನ ಸೇವೆ ಎಂಬ ತತ್ವವನ್ನು ಪಾಲಿಸಿ ಕರ್ನಾಟಕ ರಾಜ್ಯಗಳ ಜನರ ಮನಗಳಲ್ಲಿ ಮಾನವತವಾದಿ ನಾಯಕ ಯೆನಿಸಿಕೊಂಡಿದ್ದು ನಮಗೆಲ್ಲರಿಗೂ ಮಾದರಿ ಪುರುಷರು ಇವರೊಂದಿಗೆ ಶ್ರೀ ನಾಗೇಶ ಭಟ್ಟ ಇವರ ಸಾಮಾಜಿಕ ಕಾರ್ಯಗಳಲ್ಲಿ ತುಂಬಾ ಒಡನಾಟವಿತ್ತು.

ಇಂತಹ ಹಿನ್ನಡೆ ಹೊಂದಿರುವ ಶ್ರೀ ಗಂಗಾಧರ ಭಟ್ ಇವರು ಸಾಮಾಜಿಕ ಶೈಕ್ಷಣಿಕ ಧಾರ್ಮಿಕ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಸುಮಾರು 35 ವರ್ಷದಿಂದ ಕಾರವಾರ-ಜೊಯಡಾ-ಅಂಕೋಲಾ ಪ್ರದೇಶಗಳಲ್ಲಿ ಹಲವಾರು ಹೋರಾಟಗಳಲ್ಲಿ ಭಾಗಿಯಾಗಿ-ಜನಪರ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಿಜೆಪಿ ಪಕ್ಷದ ಕಾರ್ಯಕರ್ತರೊಂದಿಗೆ ಒಳ್ಳೆ ಬಾಂಧವ್ಯ ಹೊಂದಿರುತ್ತಾರೆ.

ತಮಗೆ ಗೊತ್ತಿರುವಂತೆ 2004-2007 ಜೆಡಿಎಸ್-ಬಿಜೆಪಿ ಆಡಳಿತಾವಧಿಯಲ್ಲಿ ಕಾರವಾರ ಜೊಯಡಾ ಕ್ಷೇತ್ರದಿಂದ ಬಿಜೆಪಿ ಪಕ್ಷದ ಎಂ ಎಲ್ ಎ ಆಗಿ ಅನೇಕ ಸಮಾಜ ಮುಖಿ ಕಾರ್ಯಗಳನ್ನು ಕೊಂಕಣ ಮರಾಠ, ಗೌಡಾ, ಗೌಡ ಸಾರಸ್ವತ ಬ್ರಾಹ್ಮಣ, ಭಂಡಾರಿ, ವೈಶ್ಯವಾಣಿ, ಕೊಮಾರಪಂಥ, ಹಾಗೂ ಇನ್ನಿತರ ಅನೇಕ ಸಮುದಾಯದವರೊಂದಿಗೆ ಜೊತೆಗೂಡಿ ಅನೇಕ ಸಮಾಜದ ಜನಪರ ನೋವು ನಲವುಗಳಿಗೆ ಸ್ಪಂದಿಸುವ ಸಹೃದಯ ಗುಣವುಳ್ಳವರು ನಮ್ಮ ಶ್ರೀ ಗಂಗಾಧರ ಭಟ್ಟ,

ಶ್ರೀ ಗಂಗಾಧರ ಭಟ್ಟ ಇವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಅಧ್ಯಕ್ಷರಾಗಿ ದೈವಜ್ಞ ಬ್ರಾಹ್ಮಣ ಕರ್ಕಿ ಮಠದ ಟ್ರಸ್ಟಿಯಾಗಿ ಗೋವರ ಕ್ಲಬ ಅಧ್ಯಕ್ಷರಾಗಿ ಮಾತಾ ಅಮೃತಾನಂಧಮಹಿ ಹೈಸ್ಕೂಲಿನ ಸದಸ್ಯರಾಗಿ ಕಾರವಾರ ಸಾಯಿ ಸಮೀತಿಯ ಸದಸ್ಯರಾಗಿ ಸದಾಶಿವಗಡ ಏಜ್ಯೂಕೇಶನ ಟ್ರಸ್ಟಿನ ಅಧ್ಯಕ್ಷರಾಗಿ ಹೀಗೆ ಇನ್ನಿತರ ಅನೇಕ ಸಂಘ ಸಂಸ್ಥೆಗಳಿಗೆ ಸಮಾಜನ್ನೊತಿಯ ಕಾರ್ಯಗಳಲ್ಲಿ ತಮ್ಮನ್ನು ಸರ್ಮಧಿಸಿಕೊಂಡು ಎಲ್ಲ ಸಮಾಜ ಬಂಧುಗಳಿಗೆ ಮೆಚ್ಚುಗೆಗೆ ಪ್ರಶಂಸೆಗೆ ಪಾತ್ರರಾಗಿರುವ ಶ್ರೀ ಗಂಗಾಧರ ಭಟ್ಟ ಇವರಿಗೆ ವಿಧಾನ ಸಭಾ ಚುನಾವಣೆಯಲ್ಲಿ ಕಾರವಾರ-ಅಂಕೋಲಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿಯನ್ನಾಗಿ ಪರಿಗಣಿಸಲು ಒಕ್ಕೂಟದ ವತಿಯಿಂದ ತಮಗೆ ವಿನಂತಿಸಿಕೊಳ್ಳುತ್ತೇನೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

City Today News – 9341997936

2023 ವಿಧಾನಸಭಾ ಚುನಾವಣೆ: KRS ಪಕ್ಷದಿಂದ ಮಹಿಳಾ ಅಭ್ಯರ್ಥಿಗಳಿಗೆ ಆದ್ಯತೆ

ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಮಹಿಳೆಯರ ಪರಿಸ್ಥಿತಿ ಉತ್ತಮವಾಗಿಲ್ಲ, ಪ್ರತಿನಿತ್ಯ ನಾವು ಮಹಿಳೆಯರ ಮೇಲೆ ಅವರು ಕೆಲಸ ಮಾಡುವ ಸ್ಥಳದಲ್ಲಿ, ಮನೆಗಳಲ್ಲಿ ಮತ್ತು ಇತರ ಕಡೆಗಳಲ್ಲಿ ಅತ್ಯಾಚಾರ, ದೌರ್ಜನ್ಯ, ಕಿರುಕುಳ ಮತ್ತು ಶೋಷಣೆ ಹೆಚ್ಚುತ್ತಿದೆ. ಇದಕ್ಕೆ ಪ್ರಮುಖ ಕಾರಣ ಮಹಿಳೆಯರ ರಾಜಕೀಯ ಪ್ರಾತಿನಿಧ್ಯ ಬಹಳ ಕಡಿಮೆ ಪ್ರಮಾಣದಲ್ಲಿರುವುದು. ಪ್ರಸ್ತುತ ಶಾಸನಸಭೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ನಗಣ್ಯವಾಗಿದ್ದು, ಈ ಪರಿಸ್ಥಿತಿಯನ್ನು ಉತ್ತಮಪಡಿಸುವ ಅಗತ್ಯವಿದೆ. ಅದರಲ್ಲೂ ಪುರುಷ ಪ್ರಧಾನ ಸಮಾಜದ ನಮ್ಮಲ್ಲಿ ಬದಲಾವಣೆ ತರುವುದು ಬಹಳ ಕಷ್ಟದ ವಿಷಯ, ಆದರೆ ರಾಜಕೀಯ ಪಕ್ಷಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದರೆ, ತ್ವರಿತವಾಗಿ ಬದಲಾವಣೆ ತರಬಹುದು. 

ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಮಹಿಳಾ ಸಬಲೀಕರಣದ ಬಗ್ಗೆ ಕೇವಲ ಮಾತನಾಡುತ್ತ ಕಾಲಹರಣ ಮಾಡುತ್ತಿವೆಯೆ ಹೊರತು, ಅವರಿಗೆ ನೀಡಬೇಕಾದ ಅವಕಾಶಗಳನ್ನು ಕಿತ್ತುಕೊಳ್ಳಲು ಎಲ್ಲಾ ವ್ಯವಸ್ಥೆಗಳನ್ನು ನಿರ್ಮಿಸಿಕೊಂಡಿವೆ ಮತ್ತು ಕಾರಣಗಳನ್ನು ನೀಡುತ್ತವೆ. ತೃತೀಯ ಹಂತದ ಸರ್ಕಾರಗಳಾದ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿ ದಶಕಗಳೆ ಕಳೆದಿದ್ದರೂ ಕೂಡ, ಅಲ್ಲಿಯೂ ಕೂಡ ಪುರುಷರದೇ ಪಾರಮ್ಯ ನಡೆಯುತ್ತಿದೆ. ಕೇವಲ ಹೆಸರಿಗೆ ಮಾತ್ರ ಮಹಿಳಾ ಚುನಾಯಿತ ಪ್ರತಿನಿಧಿಗಳಿದ್ದು, ನಿಜವಾದ ಅಧಿಕಾರ ಅವರ ಪತಿ/ತಂದೆ/ಮಕ್ಕಳು ಚಲಾಯಿಸುತ್ತಿರುತ್ತಾರೆ. ವಿಧಾನ ಸಭೆ, ವಿಧಾನ ಪರಿಷತ್, ಲೋಕಸಭೆ ಮತ್ತು ರಾಜ್ಯಸಭೆಗಳಿಗೆ ನಡೆಯುವ ಚುನಾವಣೆಗಳಿಗೆ ಮಹಿಳೆಯರನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗುತ್ತದೆ. ಕನಿಷ್ಠ ಪಕ್ಷ ಮೇಲ್ಮನೆ ಚುನಾವಣೆಗಳಲ್ಲಿ, ನಿಸ್ಸಂದೇಹವಾಗಿ ಗೆಲ್ಲುವ ಕ್ಷೇತ್ರಗಳಲ್ಲೂ, ಅದರಲ್ಲೂ ನಾಮ ನಿರ್ದೇಶನ ಮಾಡುವಂತಹ ಸಂದರ್ಭಗಳಲ್ಲೂ ಮಹಿಳೆಯರನ್ನು ನಿರ್ಲಕ್ಷಿಸಲಾಗುತ್ತಿದೆ. ರಾಜ್ಯದಲ್ಲಿನ ಮೂರು ಭ್ರಷ್ಟ ಪಕ್ಷಗಳು ಎಂದಿಗೂ ಮಹಿಳೆಯರಿಗೆ, ಅವರಿಗೆ ಸಿಗಬೇಕಾದ ರಾಜಕೀಯ ಸ್ಥಾನಮಾನವನ್ನು ನೀಡುವುದಿಲ್ಲ. ಆ ಪಕ್ಷಗಳಿಗೆ ವಾಮ ಮಾರ್ಗದಲ್ಲಿ ಅಧಿಕಾರ ಹಿಡಿಯುವುದು ಆದ್ಯತೆಯೆ ಹೊರತು, ಮಹಿಳೆಯರ ಸಬಲೀಕರಣ ಮತ್ತು ಅವರ ಮೇಲಿನ ದೌರ್ಜನ್ಯ ನಿವಾರಣೆ ಬೇಕಿಲ್ಲ.

ಈ ನಿಟ್ಟಿನಲ್ಲಿ ನಾಯಕತ್ವ ಗುಣವುಳ್ಳ ಮಹಿಳೆಯರು ಇಂದು ಸಮಾಜಕ್ಕೆ ಮತ್ತು ರಾಜಕೀಯ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೆ.ಆರ್.ಎಸ್. ಪಕ್ಷವು ಮಹಿಳೆಯರಿಗೆ ವಿಶೇಷ ಆದ್ಯತೆಯನ್ನು ನೀಡುತ್ತಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಮೂರನೇ ಒಂದರಷ್ಟು ಕ್ಷೇತ್ರಗಳನ್ನು ಮಹಿಳೆಯರಿಗೆ ಮೀಸಲಿಡಲಿದ್ದು, ಅರ್ಹ ಮಹಿಳಾ ಅಭ್ಯರ್ಥಿಗಳಿಗೆ ಅಂದಿನ ಪರಿಸ್ಥಿತಿಗೆ ಅನುಗುಣವಾಗಿ ಪಕ್ಷವೇ ಚುನಾವಣಾ ವೆಚ್ಚವನ್ನು ಕೂಡ ಭರಿಸಲಿದೆ.

ಕೆ.ಆರ್.ಎಸ್. ಪಕ್ಷವು ಪಾರದರ್ಶಕವಾಗಿ ಮತ್ತು ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಹಾಗು ಪಕ್ಷದ ಆಂತರಿಕ ಪ್ರಜಾಪ್ರಭುತ್ವ ಗಟ್ಟಿಗೊಳ್ಳುತ್ತಿದೆ. ಈಗಾಗಲೇ ವಿಧಾನಸಭಾ ಚುನಾವಣೆಗೆ 170 ಕ್ಕೂ ಹೆಚ್ಚು ಆಕಾಂಕ್ಷಿಗಳ ಸಂದರ್ಶನ ನಡೆಸಿ, ಅವರಲ್ಲಿ 60 ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳನ್ನು ಘೋಷಿಸಿದ್ದು, ಈಗಾಗಲೇ ಅವರೆಲ್ಲ, ಆಯಾ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಕಳೆದ ಒಂದು ವರ್ಷದಿಂದ ಕೆಆರ್‍ಎಸ್ ಪಕ್ಷವು ನಿರಂತರವಾಗಿ ಪ್ರತಿ ತಿಂಗಳು ಸಂಭಾವ್ಯ ಅಭ್ಯರ್ಥಿಗಳ ಆಯ್ಕೆಗಾಗಿ ಸಂದರ್ಶನ ನಡೆಸಿಕೊಂಡು ಬರುತ್ತಿದ್ದು, ಇದೇ ಡಿಸೆಂಬರ್ 10 ಮತ್ತು 11 ರಂದು ಸಂಭಾವ್ಯ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಲಾಗುತ್ತಿದೆ, ರಾಜ್ಯದ ನೆಲ, ಜಲ, ಭಾಷೆ, ಅರಣ್ಯ ಉಳಿಸಲು, ಸ್ವಚ್ಚ, ಪ್ರಾಮಾಣಿಕ ಮತ್ತು ನೈತಿಕ ರಾಜಕಾರಣದಲ್ಲಿ ಆಸಕ್ತಿಯುಳ್ಳವರು, ರಾಜ್ಯದಲ್ಲಿನ ಭ್ರಷ್ಟ ವ್ಯವಸ್ಥೆಯನ್ನು ಬದಲಾಯಿಸಬೇಕೆಂಬ ಆಕಾಂಕ್ಷೆಯುಳ್ಳವರು, ಅದರಲ್ಲೂ ವಿಶೇಷವಾಗಿ ಮಹಿಳೆಯರು ಈ ಸಂದರ್ಶನ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಸ್ವಚ್ಚ-ಸುಂದರ-ಸದೃಢ-ಸಮೃದ್ಧ ಕರ್ನಾಟಕ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಲು ಈ ಮೂಲಕ ಕೋರಲಾಗುತ್ತಿದೆ. 

ದಿನಾಂಕ 10 ಮತ್ತು 11 ರಂದು ನಡೆಯುವ ಸಂಭಾವ್ಯ ಅಭ್ಯರ್ಥಿಗಳ ಸಂದರ್ಶನಕ್ಕೆ ಮಹಿಳೆಯರಿಗೆ 2,500/-   ಪುರುಷರಿಗೆ ರೂ. 5,000/- ಶುಲ್ಕವಿರುತ್ತದೆ, ಹೆಚ್ಚಿನ ಮಾಹಿತಿಗಾಗಿ 7975625575 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಮಹಾಲಕ್ಷ್ಮೀ ಚನ್ನಕೇಶವ, ಪ್ರಧಾನ ಕಾರ್ಯದರ್ಶಿ – ಬೆಂಗಳೂರು ಮಹಾನಗರ ಮಹಿಳಾ ಸಮಿತಿ, ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು

City Today News – 9341997936

ಬಿಬಿಎಂಪಿ ಚುನಾವಣೆ ನಡೆಸಲು ಎಸ್.ಉದಯ್ ಕುಮಾರ್ ಆಗ್ರಹ

ಕಾರ್ಪೋರೇಟರ್ ಗಳಿದ್ದರೆ ಕೊಳ್ಳೆ ಹೊಡೆಯಲು ಬಿಡುವುದಿಲ್ಲ ಎಂಬ ಕಾರಣಕ್ಕೆ ಚುನಾವಣೆ ವಿಳಂಬ ಹುನ್ನಾರ / ಪೂಜೆ ಮಾಡಿ, ಕಮಿಷನ್ ಹೊಡೆಯುವುದಷ್ಟೇ ಶಾಸಕರ ಕೆಲಸ / ಮಾಜಿ ಕಾರ್ಪೋರೇಟರ್ ಕೆಂಡಾಮಂಡಲ

ಬೆಂಗಳೂರು: ಕಾರ್ಪೋರೇಟರ್ ಗಳಿದ್ದರೆ ದುಡ್ಡು ಹೊಡೆಯಲು ತಮಗೆ ಆಗುವುದಿಲ್ಲ ಎಂದು ಬೆಂಗಳೂರು ನಗರದ ಬಿಜೆಪಿ ಶಾಸಕರು ಹಾಗೂ ಸರ್ಕಾರ ಬಿಬಿಎಂಪಿ ಚುನಾವಣೆಯನ್ನು ಬೇಕಂತಲೇ ಮುಂದೂಡುತ್ತಿದೆ. ಪ್ರಜಾಪ್ರಭುತ್ವ ಮತ್ತು ಆಡಳಿತ ವಿಕೇಂದ್ರೀಕರಣದಲ್ಲಿ ನಂಬಿಕೆ ಇದ್ದರೆ, ಜನರ ಕಷ್ಟಗಳಿಗೆ ಸ್ಪಂದಿಸ ಬೇಕೆಂಬ ಇಚ್ಛಾಶಕ್ತಿ ಇದ್ದರೆ ಕೂಡಲೇ ಬಿಬಿಎಂಪಿ ಚುನಾವಣೆ ನಡೆಸಬೇಕು ಎಂದು ಕಾಂಗ್ರೆಸ್ ಮುಖಂಡ, ಮಾಜಿ ಕಾರ್ಪೋರೇಟರ್ ಎಸ್.ಉದಯ್ ಕುಮಾರ್ ಹೇಳಿದರು.

ಮಹಾದೇವಪುರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 2 ವರ್ಷದಿಂದ ಚುನಾಯಿತ ಪ್ರತಿನಿಧಿಗಳಿಲ್ಲದೆ ಬಿಬಿಎಂಪಿ ಅನಾಥವಾಗಿದೆ. ನಾಗರಿಕರ ಸಮಸ್ಯೆಗಳನ್ನು ಆಲಿಸಲು ಸದಸ್ಯರಿಲ್ಲ. ಸುಪ್ರೀಂಕೋರ್ಟ್ 8 ವಾರಗಳ ಗಡುವು ನೀಡಿದ್ದರೂ ಸರ್ಕಾರ ಚುನಾವಣೆಗೆ ಮೀನಾಮೇಷ ಎಣಿಸುತ್ತಿದೆ ಎಂದು ಗುಡುಗಿದರು.

ಶಾಸಕರು ಇದ್ದಾರೆ ಅಲ್ಲಿ – ಇಲ್ಲಿ ಪೂಜೆ ಮಾಡುವುದಷ್ಟೇ ಕೆಲಸ. ಜನರ ಕೈಗೆ ಸಿಗುವುದಿಲ್ಲ. ಕಮಿಷನ್ ಹೊಡೆಯಲು ಕಷ್ಟವಾಗುತ್ತದೆ ಎಂದು ಬಿಜೆಪಿ ಶಾಸಕರು, ಸರ್ಕಾರ ಚುನಾವಣೆ ಬೇಡ ಎಂಬ ತೀರ್ಮಾನ ಮಾಡಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.

ಬೆಂಗಳೂರು ಜನ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರ ಕುಂದುಕೊರತೆಗಳನ್ನು ಆಲಿಸಿ ಸೂಕ್ತ ಪರಿಹಾರ ನೀಡಬೇಕಿದೆ. ಸ್ಥಳೀಯ ಕಾರ್ಪೋರೇಟರ್ ಗಳಿಲ್ಲದಿದ್ದರೆ ಖಂಡಿತಾ ಆ ಕೆಲಸ ಸಾಧ್ಯವಿಲ್ಲ. ಬೆಂಗಳೂರು ನಗರ ಬಹಳ ವಿಸ್ತಾರವಾಗಿದೆ. ಕಾರ್ಪೋರೇಟರ್ ಗಳ ಅವಶ್ಯಕತೆ ಇದ್ದೇ ಇದೆ. ಬೆಂಗಳೂರು ನಾಗರಿಕರು ಮತ್ತು ಸಂಬಂಧಿಸಿದ ಅಧಿಕಾರಿಗಳ ನಡುವೆ ಸಂಪರ್ಕ ಕಡಿತವಾಗಬಾರದೆಂದರೆ ಕಾರ್ಪೋರೇಟರ್ ಗಳ ಆಯ್ಕೆ ನಡೆಯಲೇ ಬೇಕು. ಕೂಡಲೇ ಸರ್ಕಾರ ಚುನಾವಣೆ ನಡೆಸುವ ಪ್ರಕ್ರಿಯೆ ಚುರುಕುಗೊಳಿಸಬೇಕು ಎಂದು ಆಗ್ರಹಿಸಿದರು.

‘ಜನಹಿತ’ ಆ್ಯಪ್ ಷಡ್ಯಂತ್ರ

ಜನಹಿತ ಎಂಬ ಆ್ಯಪ್ ಮಾಡಿ, ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡುವ ಭರವಸೆ ನೀಡಿ ಮತದಾರರ ಗುರುತಿನ ಚೀಟಿ ಸಂಖ್ಯೆ ಪಡೆದು ನೋಂದಾಯಿಸಿಕೊಳ್ಳುವ ಕೆಲಸ ಬಿಜೆಪಿ ಮಾಡುತ್ತಿದೆ. ಇದು ಯಾವ ಜನಹಿತ ಕಾಯುವ ಆ್ಯಪ್ ಅಲ್ಲ. ಚುನಾವಣೆ ನಿಟ್ಟಿನಲ್ಲಿ ನಡೆಸಿರುವ ಕುತಂತ್ರ. ಐಡಿ ಕಾರ್ಡ್ ಪಡೆದು ತಮ್ಮ ಮತದಾರರನ್ನು ಮಾತ್ರ ಉಳಿಸಿಕೊಂಡು ಉಳಿದವರನ್ನು ಪಟ್ಟಿಯಿಂದ ಡಿಲೀಟ್ ಮಾಡುವ ಷಡ್ಯಂತ್ಯ ಇದಾಗಿದೆ. ಹೀಗಾಗಿ ಈ ಬಗ್ಗೆ ನಾವು ಕಾರ್ಯಕರ್ತರಿಗೆ,ಮತದಾರರಿಗೆ ಜಾಗೃತಿ ಮೂಡಿಸುತ್ತಿದ್ದೇವೆ. ಬಿಜೆಪಿ ಸರ್ಕಾರಕ್ಕೆ ಬಿಸಿಮುಟ್ಟಿಸುವ ಕೆಲಸವನ್ನೂ ಮಾಡುತ್ತೇವೆ ಎಂದು ಎಚ್ಚರಿಸಿದರು.

ಬಡವರಿಗೆ ಬರೆ

ಆಹಾರ ಪದಾರ್ಥಗಳ ಮೇಲೆ ಜಿಎಸ್ ಟಿ ಹಾಕಿ ಸರ್ಕಾರ ಬಡವರ ಹೊಟ್ಟೆ ಮೇಲೆ ಬರೆ ಹಾಕುತ್ತಿದೆ. ನೋಟ್ ಅಮಾನ್ಯ (ನೋಟ್ ಬ್ಯಾನ್) ಕಾರಣದಿಂದಲೇ ಜನ ತತ್ತರಿಸಿದ್ದರು. ಕೋವಿಡ್ 19 ನಿಂದ ಬದುಕು ದುಸ್ಥರವಾಗಿತ್ತು. ಇನ್ನೂ ಜನ- ಜೀವನ ಮೊದಲಿನ ಹಳಿಗೆ ಬಂದಿಲ್ಲ. ಈಗ ಬೆಲೆ ಏರಿಕೆ, ಜಿಎಸ್ ಟಿ ಬಿಸಿಯಿಂದ ಜನ ಜೀವನ ನಡೆಸುವುದು ಕಷ್ಟವಾಗಿದೆ. ಬಡ ಜನರ ವಿರೋಧಿ ಧೋರಣೆ ವಿರುದ್ಧ ಹೋರಾಟ ನಡೆಸುತ್ತೇವೆ ಎಂದರು.

ಇಡಿ, ಐಟಿ, ಸಿಐಡಿ ಅಂತಹ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಕಾಂಗ್ರೆಸ್ ವಿರುದ್ಧ ವಾತಾವರಣ ಸೃಷ್ಟಿಸುವ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿದೆ. ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರ ವಿರುದ್ಧ ನಡೆಸುತ್ತಿರುವ ಕುತಂತ್ರ ಖಂಡಿಸಿ ದೇಶಾದ್ಯಂತ ನಡೆಸುತ್ತಿರುವ ಹೋರಾಟ ಸಹ ಇನ್ನೂ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.

ಮೋದಿ ಬಾಯಿಬಿಟ್ಟರೆ ಸುಳ್ಳು

ಕೆಪಿಸಿಸಿ ಪ.ಜಾತಿ, ಪ.ಪಂಗಡ ವಿಭಾಗದ ಉಪಾಧ್ಯಕ್ಷ ಟಿ.ನಾಗೇಶ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಬಾಯಿಬಿಟ್ಟರೆ ಸುಳ್ಳು. ಎರಡು ಬಾರಿ ಜನ ಅಧಿಕಾರ ಕೊಟ್ಟು ನೋಡಿದ್ದಾರೆ.ಯಾವುದೇ ಆಶ್ವಾಸನೆಗಳು ಈಡೇರಿಲ್ಲ ಎಂದು ಟೀಕಿಸಿದರು.

ಜಾತಿ, ಧರ್ಮಗಳನ್ನು ಒಡೆದು ಆಳುವ ಕೆಲಸ ಬಿಜೆಪಿ ಮಾಡುತ್ತಿದೆ. ಕಾಂಗ್ರೆಸ್ ಕಟ್ಟಿದ ನಾನಾ ಸಾರ್ವಜನಿಕ ಸಂಸ್ಥೆಗಳನ್ನು ಮಾರಾಟ ಮಾಡಿ ಕೆಲವರ ಕೈಯಲ್ಲಿ ಮಾತ್ರ ಸಂಪತ್ತಿರಬೇಕು ಎಂಬ ವ್ಯವಸ್ಥೆ ರೂಪಿಸುತ್ತಿದೆ ಎಂದು ಹರಿಹಾಯ್ದರು. ಸಂವಿಧಾನವನ್ನು ನಾಶ ಮಾಡಿ ಮನುಸ್ಮೃತಿ ಜಾರಿ ಮಾಡುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಅವಕಾಶ ನೀಡಬಾರದು. ಜನ ಸಹ ಎಚ್ಚೆತ್ತುಕೊಳ್ಳಬೇಕು ಎಂದು ಕರೆ ನೀಡಿದರು.

ಮನೆಯೊಂದು ಮೂರು ಬಾಗಿಲು ಧಾರವಾಹಿಯಂತೆ ಮಹಾದೇವಪುರ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ ಗ್ರಾಮವೊಂದು ಮೂರು ಭಾಗ ಮಾಡಿದ್ದಾರೆ. 3 ಭಾಗ ವಾರ್ಡ್ ಗಳಿಗೆ ಹಂಚಿಹೋಗಿದೆ. ಟ್ರಾಫಿಕ್, ನೀರಿನ ಸಮಸ್ಯೆ ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯಗಳು ಮರೀಚಿಕೆಯಾಗಿವೆ. ಹಣ ಕೊಡದೆ ಯಾವುದೇ ಕೆಲಸಗಳು ಕ್ಷೇತ್ರದಲ್ಲಿ ನಡೆಯುತ್ತಿಲ್ಲ ಎಂದು ಕಿಡಿಕಾರಿದರು.

6 ತಿಂಗಳ ಮೊದಲೇ ಅಭ್ಯರ್ಥಿಗಳ ಘೋಷಣೆ

ಕಾಂಗ್ರೆಸ್ ಚುನಾವಣೆಗೆ 6 ತಿಂಗಳ ಮೊದಲೇ ಅಭ್ಯರ್ಥಿಯನ್ನು ಘೋಷಿಸಲಿದೆ ಎಂದು ಕೆಪಿಸಿಸಿ ಮಹಾದೇವಪುರ ವಕ್ತಾರ ಲಕ್ಷ್ಮೀಪ್ರಸಾದ್ ಹೇಳಿದರು.

ಚುನಾವಣೆ ಹತ್ತಿರಬಂದಾಗ ಅಭ್ಯರ್ಥಿಗಳನ್ನು ಘೋಷಿಸುವುದು ಸೋಲಿಗೆ ಪ್ರಮುಖ ಕಾರಣ ಎಂಬುದನ್ನು ಸ್ಪಷ್ಟವಾಗಿ ಅರಿತಿದ್ದೇವೆ. ಹೀಗಾಗಿ ಈ ಬಾರಿ 6 ತಿಂಗಳ ಮೊದಲೇ ಅಭ್ಯರ್ಥಿಗಳ ಘೋಷಣೆ ಆಗಲಿದೆ ಎಂದರು.

ಮಹಾದೇವಪುರ ಸೇರಿದಂತೆ ರಾಜ್ಯದ 36 ಮೀಸಲು ವಿಧಾನಸಭಾ ಕ್ಷೇತ್ರಗಳಲ್ಲಿ ಎಲ್ಲೆಲ್ಲಿ ಕಾಂಗ್ರೆಸ್ ಸೋತಿದೆಯೋ ಆ ಎಲ್ಲಾ ಕ್ಷೇತ್ರಗಳಲ್ಲಿಯೂ ಸ್ಥಳೀಯ ಅಭ್ಯರ್ಥಿಗಳನ್ನೇ ಕಣಕ್ಕಿಳಿಸುವ ಚಿಂತನೆ ಎಐಸಿಸಿ, ಕೆಪಿಸಿಸಿ ಮಟ್ಟದಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು.

ಚುನಾವಣೆ ನಡೆಸಿದರೆ ಜನಾಭಿಪ್ರಾಯ ತಮ್ಮ ವಿರುದ್ಧ ಬರುತ್ತದೆ ಎಂಬ ಭಯದಲ್ಲಿ ಬಿಜೆಪಿ ಚುನಾವಣೆ ಮುಂದೂಡುತ್ತಿದೆ ಎಂದ ಅವರು ಭಯ ಇಲ್ಲದಿದ್ದರೆ ಕೂಡಲೇ ಚುನಾವಣೆ ನಡೆಸಿ ಎಂದು ಸವಾಲೆಸೆದರು.

“ಬಿ.ಎಸ್.ಯಡಿಯೂರಪ್ಪ ಅವರ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿ ಈಗ ಒಂಟಿಯಾಗಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಜನ ಮುಂದಿನ ದಿನಗಳಲ್ಲಿ ತಕ್ಕ ತೀರ್ಮಾನ ತೆಗೆದುಕೊಳ್ಳುತ್ತಾರೆ” ಎಸ್.ಉದಯ್ ಕುಮಾರ್, ಕಾಂಗ್ರೆಸ್ ಮಾಜಿ ಕಾರ್ಪೋರೇಟರ್.

City Today News

9341997936

Harshavardhan hails Modi for nominating Murmu

Nanjangud: BJP Nanjangud MLA B Harshavardhan has said the BJP-led NDA government has taken the right and pragmatic decision in selecting Mrs. Draupadi Murmu as the nominee for the presidential election. The decision goes well with the BJP’s philosophy – Sabka Saath, Sakba Vikas aur Sabka Vishwas.

In a media statement, the MLA, who represents a reserved constituency in the legislative assembly, said only a party that is accommodative in nature can take such a decision that is inclusive. 

She will be the first woman belonging to the tribal community to occupy the top constitutional office post if she is elected. The MPs, cutting across party lines, must endorse her candidature. She must be elected unopposed on July 18. This would be the right way to respect and admire a woman for her caliber, Mr. Harshavardhan said.

“I congratulate Prime Minister Narendra Modi ji for taking the decision to field her when the country is celebrating the 75th anniversary of Indian Independence. Since Indian independence, the tribals have been denied their rights. But I am now happy and proud that you have created an opportunity for Smt Murmu to contest for the top constitutional post,” he said. 

Her experience in public life is very impressive. Hailing from Odisha, she began as a teacher before entering politics. She was a panchayat member, twice an MLA on a BJP ticket, and then went on to become the first woman cabinet minister in the BJP-BJD coalition government, the governor of Jharkhand. Her personal tragedies never stopped her from performing in public service.

Smt. Murmu is an inspiration to many in the community to strive for the welfare of the downtrodden. She is indeed a role model not just for women but even for men in public life, the MLA said. 

City Today News

9341997936

2022 ರ ಜೂನ್ 13 ರಂದು ನಡೆದ ಬೆಂಗಳೂರು ಪ್ರೆಸ್ ಕ್ಲಬ್ ಚುನಾವಣೆ ಫಲಿತಾಂಶ

2022 ರ ಜೂನ್ 13 ರಂದು ನಡೆದ ಬೆಂಗಳೂರು ಪ್ರೆಸ್ ಕ್ಲಬ್ ಚುನಾವಣೆ ಫಲಿತಾಂಶ:

ಯಶಸ್ವಿ ವಿಜೇತ ಅಭ್ಯರ್ಥಿಗಳ ಪಟ್ಟಿ : ಅಧ್ಯಕ್ಷ : ಆರ್ .ಶ್ರೀಧರ್ , ಉಪಾಧ್ಯಕ್ಷ : ಆನಂದ್ .  ಪಿ.ಬೈದನಮನೆ , ಪ್ರಧಾನ ಕಾರ್ಯದರ್ಶಿ ಬಿ.ಪಿ.  ಮಲ್ಲಪ್ಪ , ಕಾರ್ಯದರ್ಶಿ ದೊಡ್ಡ ಬೊಮ್ಮಯ್ಯ , ಜಂಟಿ ಕಾರ್ಯದರ್ಶಿ ಮಹಾಂತೇಶ್ .  ಎಸ್ . ಹಿರೇಮಠ , ಖಜಾಂಚಿ : ಮೋಹನ್ ಕುಮಾರ್ .  ಬಿ.ಎನ್. ಕಾರ್ಯಕಾರಿ ಸಮಿತಿ ಸದಸ್ಯರು: ರೋಹಿಣಿ ವಿ. ಅಡಿಗ, ಜಿ. ಗಣೇಶ್, ಮುನಿರಾಮೇಗೌಡ (ರವಿ), ಆಲ್ಫರ್ಡ್ ಟೆನ್ನಿಸನ್, ಡಿ. ಸೋಮಶೇಖರ್, ಕೆ.ಎಸ್ (ಸೋಮಣ್ಣ) ಮತ್ತು ಯಾಸಿರ್ ಮುಷ್ತಾಕ್.  ಆರ್ ಶ್ರೀಧರ್ ಮತ್ತು ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು.

City Today News

9341997936