ಮರಾಠ ಸಮಾಜದ ಡಾ. ಎಂ.ಜಿ ಮೂಳೆ ರವರಿಗೆ ವಿಧಾನ ಸಭೆ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯ (ಒಐಅ) 2024ರ ಚುನಾವಣೆಗೆ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಲು ಪತ್ರಿಕಾಗೋಷ್ಠಿ

ಕರ್ನಾಟಕದಲ್ಲಿ ಮರಾಠರು 10 ಸಂಸದೀಯ ಮತ್ತು 40 ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕ ಅಂಶವಾಗಿ ಪ್ರಭಾವವನ್ನು ಹೊಂದಿರುವ ಸುಮಾರು 50 ಲಕ್ಷ ಜನ ಸಂಖ್ಯೆ ಹೊಂದಿರುವ ಸಾಕಷ್ಟು ದೊಡ್ಡ ಮತದಾರರನ್ನು ಹೊಂದಿದ್ದೇವೆ ಎಂಬ ಅಂಶಕ್ಕೆ ನೀವುಗಳು ಹೊತ್ತು ನೀಡಬೇಕಾಗಿ ಬಯಸುತ್ತೇವೆ. ಕರ್ನಾಟಕದಲ್ಲಿ ಮರಾಠ ಸಮುದಾಯವು ಹಿಂದುತ್ವ ಮತ್ತು ಬಿಜೆಪಿ ಸಿದ್ಧಾಂತದ ಪ್ರಬಲ ಬೆಂಬಲಿಗರಾಗಿದ್ದಾರೆ ಮತ್ತು ಕರ್ನಾಟಕದಲ್ಲಿ ಮರಾಠರು ಪಕ್ಷ ಪ್ರಾರಂಭದಿಂದಲೂ ಬಿಜೆಪಿಯ ಪರವಾಗಿದ್ದಾರೆ.

ಡಾ. ಎಂ.ಜಿ ಮೂಳೆ ಯಾವಾಗಲೂ ತಮ್ಮನ್ನು ಸಭ್ಯ ಮತ್ತು ಗೌರವಾನ್ವಿತ ರೀತಿಯಲ್ಲಿ ಸಮಾಜದ ಏಳಿಗೆಗೆ ತೊಡಗಿಸಿಕೊಂಡಿದ್ದಾರೆ ಮತ್ತು ವೃತ್ತಿಪರ ಹೆಚ್ಚಿನ ಸಮರ್ಪಣೆಯನ್ನು ತೋರಿಸುತ್ತಾರೆ .  ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಅವರ ಸಾಧನೆಗಳು ಗಮನಾರ್ಹವಾಗಿದೆ.


ಡಾ. ಎಂ.ಜಿ ಮೂಳೆ ಹಿಂದೆ ಬಸವ ಕಲ್ಯಾಣದ ಶಾಸಕರಾಗಿ ತುಂಬಾ ಜನಪ್ರಿಯ ಕೆಲಸ ಕಾರ್ಯಗಳನ್ನು ಮಾಡಿರುತ್ತಾರೆ. ಈಗಲೂ ಸಹ ಕ್ಷೇತ್ರಕ್ಕೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಈ 73ರ ಇಳಿವಯಸ್ಸಿನಲ್ಲೂ ಅವರ ಕಾರ್ಯ ವೈಖರಿಯನ್ನು ಕಂಡು ಆಶ್ಚರ್ಯವಾಗುತ್ತದೆ. ನಮ್ಮ ಸಮಾಜದ ವ್ಯಕ್ತಿಯಾದಂತಹ ಡಾ. ಎಂ. ಜಿ ಮೂಳೆ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ (ಒಐಅ) ಅಭ್ಯರ್ಥಿಯಾಗಿ ನಾಮ ನಿರ್ದೇಶನ ಮಾಡಲು ತಮ್ಮ ದೃಶ್ಯ ಮಾಧ್ಯಮ ಮದ್ರ ಮಾಧ್ಯಮದ ಮುಖಾಂತರ ಪ್ರಕಟಿಸಬೇಕಾಗಿ ವಿನಂತಿಯನ್ನು ಮಾಡಿಕೊಳ್ಳುತ್ತಿದ್ದೇವೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಆರ್. ಕಮಲೇಶ್ ರಾವ್ ರಾಜ್ಯಾಧ್ಯಕ್ಷರು ತುಳಿಸಿದರು.

ನಾಗರಾಜ್ ನನ್ನೂರಿ -ಪ್ರಧಾನ ಕಾರ್ಯಧರ್ಶಿ, ಲೋಕೇಶ್ ರಾವ್ – ಕಾರ್ಯಧರ್ಶಿ, ಶಿವಘರ್ಜನೆ -ಅಧ್ಯಕ್ಷರಾದ ಪ್ರವೀಣ್ ಮಾನೆ ಮತ್ತು ಶಿವಘರ್ಜನೆ ಖಜಾಂಚಿ -ದೀಪಕ್ ನಾರಾಯಣ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಉಪಸ್ಥಿತರಿದ್ದರು.

City Today News 9341997936

ಕೇಂದ್ರ ಸರ್ಕಾರದ ಮಂಡು ಧೋರಣೆ ವಿರುದ್ಧ ರಾಜ್ಯಕ್ಕೆ ಬರ ಪರಿಹಾರ

ಕರ್ನಾಟಕವು 2023 ರಿಂದ ಇಲ್ಲಿಯವರೆಗೆ ತೀವ್ರವಾದ ಬರಗಾಲವನ್ನು ಎದುರಿಸುತ್ತಿದ್ದು,ಅದರಲ್ಲಿ 236 ತಾಲೂಕುಗಳ ಪೈಕಿ 223 ತಾಲೂಕುಗಳು ಬರ ಪೀಡಿತವಾಗಿವೆ. ಅದರಲ್ಲೂ 196 ತಾಲೂಕುಗಳು ತೀವ್ರ ಬರಗಾಲ ಎದುರಿಸುತ್ತಿವೆ. ರೈತರ ಬೆಳೆ ನಷ್ಟದಿಂದ ವಾರ್ಷಿಕ ಜೀವನ ಮತ್ತು ಆರ್ಥಿಕ ನಷ್ಟದಲ್ಲಿ ಒದ್ದಾಡುತ್ತಿದ್ದಾರೆ. ನೀರಿನ ಅಭಾವವನ್ನು ಎದುರಿಸುತ್ತಿರುವ ಇವರಿಗೆ ಕುಡಿಯುವ ನೀರಿಗೂ ಪರಿಸ್ಥಿತಿ ಗಂಭೀರವಾಗಿದೆ.ಜಾನುವಾರಗಳ ಮೇವು ಅಭಾವ ಹಾಗೂ ರೋಗಗಳು ಬಾಧೆಯಿಂದ ಜಾನುವಾರಗಳು ಸಂಕಷ್ಟದಲ್ಲಿವೆ. ಇದ್ದರಿಂದ ಪಾರಾಗಲು ನಮ್ಮನ್ನು ಕಾಪಾಡಿ ಎಂದು ಎಷ್ಟು ಅಂಗಲಾಚಿದರೂ ಪ್ರಯೋಜನವಾಗಿಲ್ಲ. ಅಗಸ್ಟ್-ನವೆಂಬರ್ ಕಳೆದ 2023 ರ ಮಳೆ ವೈಪ್ಯಲವಾದಾಗ ಬೆಳೆಗಳು ನಷ್ಟಕ್ಕೆ ತುತ್ತಾದವು. ಆಗ ಕರ್ನಾಟಕದ ಕಾಂಗ್ರೆಸ್ಸಿಗರು ತೆಲಂಗಾಣ ರಾಜ್ಯದ ಚುನಾವಣೆ ಜವಾಬ್ದಾರಿಯನ್ನು ವಹಿಸಿಕೊಂಡು ಮಧ್ಯಪ್ರದೇಶ, ರಾಜಸ್ಥಾನ ಚುನಾವಣೆಗಳಲ್ಲಿ ತಲ್ಲೀನರಾಗಿ ರಾಜ್ಯದ ಬರಪೀಡಿತ ರೈತರನ್ನು ಮರೆತರು. ಆದರೆ ರಾಜ್ಯ ಸರ್ಕಾರವು ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದರು. ರೈತರ ಬೆಳೆ ಬರಲಿಲ್ಲ.ಆದರೆ ನಮ್ಮ ಸುಮಾರು ಇದರ ಮೌಲ್ಯ 35,162.05 ಸಾವಿರ ಕೋಟಿ ನಷ್ಟ ಉಂಟಾಗಿದೆ ಎಂಬುದಾಗಿ ಕೇಂದ್ರಕ್ಕೆ ಮನವಿ ಸಲ್ಲಿಸಿದರು. ಕೇಂದ್ರವು ಇದರ ಮನವಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡಲಿಲ್ಲ.ಆದರೆ ರಾಜ್ಯ ಸರ್ಕಾರವು ಮಾಡಿದ ಒಳ್ಳೆ ಕೆಲಸವೇನೆಂದರೆ ತಾವು ಕೂಡ ಈ ಬರಗಾಲ ನಿಭಾಯಿಸುವಲ್ಲಿ ವಿಫಲರಾಗಿರುವ ಕಾರಣಕ್ಕೆ ಕೇಂದ್ರದ ಕಡೆ ಬಟ್ಟು ಮಾಡಿ ತೋರಿಸುತ್ತಾ, ಸರ್ವೋಚ್ಛ ನ್ಯಾಯಲಯದಲ್ಲಿ ಮಾರ್ಚ್ 23/2024 ರಂದು ಅರ್ಜಿ ಸಲ್ಲಿಸಿದರು.

ಅದು ಒಂದು ತಿಂಗಳ ನಂತರ ವಿಚಾರಣೆಗೆ ಬಂದಿತು. ಶ್ರೀ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಸಂದೀಪ ಮೆಹತಾ ಅವರಗಳಿದ್ದ ನ್ಯಾಯ ಪೀಠರ ಮುಂದೆ ಚರ್ಚೆ ನಡೆಯಿತು. ರಾಜ್ಯದ ಪರವಾಗಿ ಹಿರಿಯ ವಕೀಲ ಕಪೀಲ್ ಸಿಬಲ್ ಅವರು ವಾದ ಮಂಡಿಸಿದರು. ಇದೆಲ್ಲದರ ಪರಿಣಾಮ ಈ ಸಂದರ್ಭದಲ್ಲಿ ಚುನಾವಣೆ ಆಯೋಗವನ್ನು ಪ್ರಶ್ನಿಸಲಾಗಿ ಆಯೋಗವು ತುರ್ತು ಕಾರ್ಯಕ್ರಮಗಳಿಗೆ ತನ್ನ ಅಭ್ಯಂತರವಿಲ್ಲವೆಂದು ತನ್ನ

ಕೇಂದ್ರ ಸರ್ಕಾರಕ್ಕೆ 181,71.44 ಕೋಟಿ ಹಣವನ್ನು ಬಿಡುಗಡೆ ಮಾಡುವುದಾಗಿ ಅಡ್ಡಾಕೆಟ್ ಜನರಲ್ ಭರವಸೆಯನ್ನು ನೀಡಿದ್ದಾರೆ. ಇದು ರಾಷ್ಟ್ರೀಯ ವಿಪತ್ತು ನೀತಿಯ ಕೆಳಗಡೆ ತುರ್ತು ಪರಿಸ್ಥಿತಿ ಸಂದರ್ಭಗಳಲ್ಲಿ ಸಕಾಲದಲ್ಲಿ ನೀಡಬೇಕಿತ್ತು. ಆದರೆ 6 ತಿಂಗಳಾದರೂ 2 ಸರ್ಕಾರಗಳೂ ನೀಡದೇ ಇರುವುದರಿಂದ ರೈತರು ಕಂಗೆಟ್ಟಿದ್ದಾರೆ. ಆದರೆ ಕೇಂದ್ರ ಸರ್ಕಾರ ನೀಡಬೇಕಾ ಬಾಬತ್ತು 18.171.44 ಕೋಟಿ ಹಣ ಇದನ್ನೇ ನೀಡಿ ಕೈ ತೊಳೆದುಕೊಳ್ಳುವ ಜಾಣತನವನ್ನು ರಾಜ್ಯ ಸರ್ಕಾರ ಮಾಡಬಾರದು. ಈ ಹಣ ರಾಜ್ಯದ %50 ಸೇರಿಸಿ 18.171.44+18.171.44= 36.342.288 ಇಷ್ಟು ಹಣವನ್ನು ರಾಜ್ಯದ ರೈತರ ಹಿತಾ ಮತ್ತು ಬೆಳೆ ನಷ್ಟಕ್ಕೆ ನೆರವು ನೀಡುವ ಕಾರ್ಯಕ್ರಮದ ಕೆಳಗಡೆ ತುರ್ತಾಗಿ ವಿನಿಯೋಗ ಆಗಬೇಕಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಮುಂದಿನ ವಿಚಾರಣೆಯು ಇದೇ 29 ರಂದು ನ್ಯಾಯಲಯದ ಮುಂದೆ ಬರಲಿದೆ. ರಾಜ್ಯ ಸರ್ಕಾರವು ಉಳಿದ ಹಣ ಪೂರ್ವ ಸಿದ್ಧತೆಗೆ ತಾವು ಮುಂದಾಗಬೇಕೆಂದು ಮತ್ತು ಕೇಂದ್ರ ಸರ್ಕಾರವು ಪದೇ ಪದೇ ಇಂತಹ ಕಂಗಲಾಗಿರುವ ರೈತರ ನಡುವೆ ತಾತ್ಸಾರ ಮನೋಭಾವ ತೋರದೆ ಕೇಂದ್ರವೂ, ರಾಜ್ಯಕ್ಕೆ ಚಂಬು ತೋರಿಸೋದು ಬೇಡ, ರಾಜ್ಯ ಸರ್ಕಾರ ರೈತರಿಗೆ ಚಂಬು ಕೊಡೋದು ಬೇಡ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರಕ್ಕೆ ಸರಿಯಾದ ಎಚ್ಚರಿಕೆ ನೀಡಿ ತಪ್ಪು ಸರಿಪಡಿಸಿಕೊಂಡು ರೈತರಿಗೆ ಅನ್ಯಾಯ ಆಗದ ರೀತಿ ಸೂಚನೆಯನ್ನು ಸುಪ್ರೀಂಕೋರ್ಟ್ ನೀಡಬಹುದೆಂದು ನಾಡಿನ ರೈತರು ನೀರಿಕ್ಷಿಸುತ್ತಾರೆ ಎಂದು ಭಾವಿಸುತ್ತೇನೆ ಎಂದು ಕೋಡಿಹಳ್ಳಿ ಚಂದ್ರಶೇಖ‌ರ್,ರಾಜ್ಯಾಧ್ಯಕ್ಷರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸುದರು, ಗೋಷ್ಠಿ ಯಲ್ಲಿಸುರೇಶ್ ಹುನ್ನೂರು,ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

City Today News 9341997936

Upholding Democracy: The Failure of the Election Commission of India to Enforce Constitutional Integrity

As custodians of democracy, it is imperative for institutions like the Election Commission of India (ECI) to uphold the sanctity of the electoral process, ensuring fair and transparent elections. However, regrettably, during the ongoing Lok Sabha elections, the ECI has failed to fulfill its constitutional duty, emerging as a mute spectator to multiple violations of the Model Code of Conduct (MCC) and Representation of the People Act (RPA). This lapse undermines the very foundation of our democratic principles and warrants immediate attention.

The Model Code of Conduct (MCC), a set of guidelines issued by the ECI, serves as the cornerstone of free and fair elections, promoting a level playing field for all political parties. It prohibits activities that could unfairly influence voters or disturb the electoral environment. However, despite these clear directives, there have been numerous instances where political parties and candidates have brazenly flouted the MCC, indulging in activities such as hate speech, distribution of cash and gifts, and spreading misinformation.

Furthermore, the Representation of the People Act (RPA), which outlines the legal framework for elections in India, lays down stringent rules to ensure the integrity of the electoral process. Violations of this act, including bribery, undue influence, and corrupt practices, are grave offenses that strike at the heart of democracy. Yet, the ECI’s inaction in addressing these violations effectively undermines the rule of law and erodes public trust in the electoral process.

The Law and Policy Research Institute (LAPRI) has taken cognizance of these violations and has filed 28 complaints with the Election Commission of India and various Chief Electoral Officers (CEOs) of different states. LAPRI remains committed to ensuring the integrity of the electoral process and will continue to monitor and report violations of the MCC and RPA. We will keep a vigilant watch on all such infractions and will persist in filing complaints until the ECI wakes up and performs its duty.

Should the Election Commission of India fail to take appropriate action to address these violations, LAPRI is prepared to pursue legal recourse. We will not hesitate to seek redressal in the courts of law to uphold the constitutional principles of free and fair elections and to safeguard the democratic rights of all citizens.

In light of these concerns, we call upon the Election Commission of India to urgently review its enforcement mechanisms and take concrete steps to ensure the integrity of the ongoing Lok Sabha elections. This includes swift and decisive action against those found guilty of violating the MCC and RPA, as well as strengthening preventive measures to deter future transgressions.

As citizens committed to the ideals of democracy, we demand nothing less than the strict adherence to constitutional principles and the preservation of the integrity of our electoral process. Anything short of this would be a betrayal of the trust reposed in the Election Commission of India and a grave disservice to the democratic aspirations of the Indian people, above mentioned statements were released at the press meet held at press club of Bengaluru.

B.T Venkatesh Murutza Ali Baig Zia Nomani Khizere alam were present in the press meet.

City Today News 9341997936

ಬಿಜೆಪಿಯ ದುರಾಡಳಿತದಿಂದ ದೇಶ ಆರ್ಥಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ಹಿಂದುಳಿದಿದೆ. ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತರಿಗೆ ಸೂಕ್ತ ಕಾನೂನು ವ್ಯವಸ್ಥೆ ಜಾರಿಗೆ ತರಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ

ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಕೆಳಗಿನ ವಿಷಯಗಳನ್ನು ಡಾ. ಯೂನಾಸ್ (ಜೊನ್ಸ್) ಕೆಪಿಸಿಸಿ ಉಪಾಧ್ಯಕ್ಷರು ಮಾನವ ಹಕ್ಕುಗಳ ವಿಭಾಗ, ರವರಿಂದ  ಪ್ರಸ್ತಾಪಿಸಿಲಾಯಿತು.

ಇಂದು ದೇಶದ ಚುಕ್ಕಾಣಿಯನ್ನು ಹಿಡಿಯುವ ಒಕ್ಕೂಟ ವ್ಯವಸ್ಥೆಯ ಚುನಾವಣೆಗೆ ಒಂದು ದಿನ ಬಾಕಿ ಇದೆ.

ರಾಜ್ಯ ಸರ್ಕಾರದ ಗ್ಯಾರಂಟಿಗಳು ಮತ್ತು ಭಾರತ ಮಟ್ಟದ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ನೇತೃತ್ವದಲ್ಲಿ

1. ಪ್ರತಿಯೊಬ್ಬ ವಿದ್ಯಾವಂತ ಯುವಕನಿಗೆ ಮೊದಲ ಉದ್ಯೋಗದ ಗ್ಯಾರಂಟಿ.

2. ಸ್ವಾತಂತ್ರ್ಯ ಬಂದಾಗಿನಿಂದ ರೈತರ ಸಾಲಮನ್ನಾ ಮತ್ತು ಸ್ವಾಮಿನಾಥನ್ ಆಯೋಗದ ಸೂತ್ರದ ಪ್ರಕಾರ ಎಮ್‌ಎಸ್‌ಪಿಗೆ ಕಾನೂನು ಸ್ಥಾನಮಾನ.

3. ಜಾತಿಗಣತಿ, ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಖಚಿತಪಡಿಸಿಕೊಳ್ಳಲು ರಾಷ್ಟ್ರವ್ಯಾಪಿ ಜನಗಣತಿಯಲ್ಲಿ ಪ್ರತಿಯೊಬ್ಬ ವ್ಯಕ್ತಿ ಮತ್ತು ಪ್ರತಿ ಸಮುದಾಯ ಪರಿಗಣನೆ.

4. ಪ್ರತಿ ಬಡ ಕುಟುಂಬದ ಒಬ್ಬ ಮಹಿಳೆಗೆ ಪ್ರತಿವರ್ಷ 1 ಲಕ್ಷ ರೂಪಾಯಿಗಳು.

5. ನರೇಗಾ ಸೇರಿದಂತೆ ರಾಷ್ಟ್ರೀಯ ಕನಿಷ್ಟ ವೇತನ ದಿನಕ್ಕೆ 400 ರೂಪಾಯಿಗಳು.

6. ಬಿಜೆಪಿಯ ದುರಾಡಳಿತದಿಂದ ದೇಶ ಆರ್ಥಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ಹಿಂದುಳಿದಿದೆ. ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತರಿಗೆ ಸೂಕ್ತ ಕಾನೂನು ವ್ಯವಸ್ಥೆ ಜಾರಿಗೆ ತರಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ.

7. ಒಟ್ಟಾರೆ ಇಂದು ದೇಶದಲ್ಲಿ ಬೆಲೆ ಏರಿಕೆ, ಕೋಮುದಳ್ಳುರಿ, ಸ್ತ್ರೀಯರಿಗೆ ಭದ್ರತೆ ಹಾಗೂ ಮಣಿಪುರದಲ್ಲಿ ನಡೆಯುತ್ತಿರುವ ದುರಂತದ ವಿಷಯಗಳನ್ನು ಪ್ರಸ್ತಾಪಿಸಿದ ಡಾ. ಯೂನಾಸ್ (ಜೊನ್ಸ್) ಕೆಪಿಸಿಸಿ ಉಪಾಧ್ಯಕ್ಷರು ಮಾನವ ಹಕ್ಕುಗಳ ವಿಭಾಗ, ರವರು ದೇಶದಲ್ಲಿ ನೆಮ್ಮದಿ ಹಾಗೂ ಕೋಮುಸೌಹಾರ್ದತೆ ನೆಲೆಸಲು ಕಾಂಗ್ರೆಸ್ ಪಕ್ಷಕ್ಕೆ ಅಮೂಲ್ಯವಾದ ಮತವನ್ನು ಕರುಣಿಸಬೇಕಾಗಿ ಸಾರ್ವಜನಿಕರಲ್ಲಿ ಬೇಡಿಕೆಯಿಟ್ಟರು.ಪತ್ರಿಕಾ ಗೋಷ್ಠಿಯಲ್ಲಿ ಸಿ.ಕೆ. ರವಿಚಂದ್ರ,ಚುನಾವಣಾ ಕೋಆರ್ಡಿನೇಟರ್ ಮತ್ತು ಪಕ್ಷದ ಮುಖಂಡರುಗಳು ಉಪಸ್ಥಿತರಿದ್ದರು.

City Today News 9341997936

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಅವರು ರಾಜ್ಯದ ಜನತೆಯ ಆರೋಗ್ಯ ಕಾಪಾಡುವಲ್ಲಿ ವಿಶೇಷ ಪಾತ್ರವಹಿಸಿದ್ದು, ಅವರನ್ನು ಸಂಸದರನ್ನಾಗಿ ಆಯ್ಕೆ ಮಾಡಬೇಕು ಎಂದು ವಿಶ್ವ ಕನ್ನಡ ಕಲಾ ಕೂಟ (ರಿ) ಹಾಗೂ ಸಮಾನ ಮನಸ್ಕರರ ವೇದಿಕೆಯಿಂದ ಮನವಿ

ಡಾ.ಸಿ.ಎನ್.ಮಂಜುನಾಥ್ ದೇಶ ಸೇವೆಗೆ ಬಹುಮತಗಳಿಂದ ಗೆಲ್ಲಿಸಲು ಮನವಿ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಅವರು ರಾಜ್ಯದ ಜನತೆಯ ಆರೋಗ್ಯ ಕಾಪಾಡುವಲ್ಲಿ ವಿಶೇಷ ಪಾತ್ರವಹಿಸಿದ್ದು, ಅವರನ್ನು ಸಂಸದರನ್ನಾಗಿ ಆಯ್ಕೆ ಮಾಡಬೇಕು ಎಂದು ವಿಶ್ವ ಕನ್ನಡ ಕಲಾ ಕೂಟ (ರಿ) ಹಾಗೂ ಸಮಾನ ಮನಸ್ಕರರ ವೇದಿಕೆ ಮನವಿ ಮಾಡಿದೆ.

ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕೂಟದ ಮುಖ್ಯಸ್ಥ ಹಲ್ಲೇಗೆರೆ ಕೃಷ್ಣ ಮಾತನಾಡಿ, ಬಡ ರೋಗಿಗಳ ಪಾಲಿಗೆ ಧರ್ಮಸ್ಥಳದ ಮಂಜುನಾಥ ಸ್ವಾಮಿಯೆಂದೇ ಚಿರಪರಿಚಿತರಾದ ಡಾ.ಸಿ.ಎನ್.ಮಂಜುನಾಥ್ ಅವರ ಸಾಧನೆ ಎಂದರೂ ಸ್ಫೂರ್ತಿ ದಾಯಕ. ಆರೋಗ್ಯ ಕ್ಷೇತ್ರದಲ್ಲಿ ಇವರ ಸೇವೆ ಪರಿಗಣಿಸಿ ಕೇಂದ್ರ ಸರಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಲಕ್ಷಾಂತರ ಹೃದ್ರೋಗಿಗಳಿಗೆ ಜೀವದಾನ ನೀಡಿ, ನೊಂದವರ ಕಣ್ಣಿರು ಒರೆಸುವ ಕಾಯಕದಲ್ಲಿ ಮಾತಾಗಿರುವ ಹೃದಯವಂತ ಹೃದ್ರೋಗ ತಜ್ಞರು. ಜಯದೇವ ಆಸ್ಪತ್ರೆ ವಿಶ್ವಮಟ್ಟದಲ್ಲಿ ಪ್ರಖ್ಯಾತಿ ಪಡೆಯಲು ಇವರು ಪಟ್ಟಂತಹ ಶ್ರಮ ಅಗಾಧವಾದುದು. ಇವರು ಸೇವೆ ನಡೀ ದೇಶಕ್ಕೆ ಅಗತ್ಯವಾಗಿದ್ದು, ಇವರನ್ನು ಸಂಸದರನ್ನಾಗಿ ಆಯ್ಕೆ ಮಾಡಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮತದಾರರು ಸಂಕಲ್ಪ ಮಾಡಬೇಕು ಕೋರಿದ್ದಾರೆ. ಎಂದು

ಡಾ. ಸಿ.ಎನ್. ಮಂಜುನಾಥ್ ಬಗ್ಗೆ ಬಹುತೇಕ ಎಲ್ಲರಿಗೂ ಗೊತ್ತು. ನಾಡಿನ ಖ್ಯಾತ ಹೃದಯ ತಜ್ಞರಲ್ಲಿ ಒಬ್ಬರಾದ ಡಾ. ಮಂಜುನಾಥ್, ತಮ್ಮ ಸರಳ ಸೌಮ್ಯ ಸ್ವಭಾವದಿಂದಲೇ ಜನಪ್ರಿಯ.

ಹಿರಿಯ ರಾಜಕಾರಣಿ, ಮಾಜಿ ಪ್ರಧಾನಿ ದೇವೇಗೌಡರ ಅಳಿಯನಾಗಿದ್ದರೂ, ಅವರ ಪ್ರಭಾವ ಬಳಸದೇ ವೈದ್ಯಕೀಯ ರಂಗದಲ್ಲಿ ಅಪ್ರತಿಮ ಸಾಧನೆ ಮಾಡಿದ ಡಾ. ಸಿ.ಎನ್. ಮಂಜುನಾಥ್ ಕಿರೀಟಕ್ಕೆ ಈಗಾಗಲೇ ಪದ್ಮಶ್ರೀ ಗೌರವ ಸೇರಿದೆ. ಸರ್ಕಾರಿ ಸ್ವಾಮ್ಯದ ಜಯದೇವ ಹೃದ್ರೋಗ ಸಂಸ್ಥೆಯನ್ನು ವಿಶ್ವಮಟ್ಟಕ್ಕೆ ಪರಿಚಯಿಸಿದ ಕೀರ್ತಿ ಡಾ. ಸಿ.ಎನ್. ಮಂಜುನಾಥ್ ಅವರಿಗೆ ಸಲ್ಲುತ್ತದೆ. ರೋಗಿಗಳ ಬಾಳಿಗೆ ಭರವಸೆಯ ಬೆಳಕಾಗಿ, ಲಕ್ಷಾಂತರ ರೋಗಿಗಳ ಪ್ರಾಣ ಉಳಿಸಿ, ಅನೇಕ ಕುಟುಂಬಗಳಿಗೆ ಮರು ಜೀವ ನೀಡಿದ್ದಾರೆ. ಸಹಸ್ರಾರು ರೋಗಿಗಳಿಗೆ ಜೀವದಾತ ಹಾಗೂ ಹೃದಯವಂತ ಡಾ.ಸಿ.ಎನ್.ಮಂಜುನಾಥ್ ಅವರಂತ ಮಹನೀಯರನ್ನು ಪಡೆದ ಜನ ಪುಣ್ಯವಂತರು. ನಮ್ಮ ಭಾರತ ದೇಶದ ಅಮೂಲ್ಯ ರತ್ನ ಅವರು. ಈ ದೇಶದ ಆರೋಗ್ಯ ವಲಯ ಸುಧಾರಣೆಗೆ ಡಾ.ಸಿ.ಎನ್.ಮಂಜುನಾಥ್ ಅವರದ್ದು ಪ್ರಮುಖಪಾತ್ರವಿದೆ. ಆದ್ದರಿಂದ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಲೀಡ್‌ನಲ್ಲಿ ಗೆಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ.

ಕೂಟದ ಉಪಾಧ್ಯಕ್ಷ ಬಿ.ಎನ್.ಸುರೇಶ್ ಬಾಬು ಅವರು ಮಾತನಾಡಿ, ಬಡವರು, ಮಧ್ಯಮ ವರ್ಗದ ಜನರೇ ಹೆಚ್ಚಿನ ಸಂಖ್ಯೆಯಲ್ಲಿರುವ ಭಾರತದಲ್ಲಿ ಆರೋಗ್ಯ ಸೌಲಭ್ಯಗಳು ಎಲ್ಲರಿಗೂ ಕೈಗೆಟಕುವಂತಿರಬೇಕು ಎನ್ನುವುದು ನಮ್ಮ ಆಶಯ. ಈ ಗುರಿಯೊಂದಿಗೆ ಸಾಗುತ್ತಿರುವ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ದಕ್ಷಿಣ ಏಷ್ಯಾದಲ್ಲಿ ಅತಿ ದೊಡ್ಡ ಹೃದ್ರೋಗ ಸಂಸ್ಥೆಯಾಗಿ ಬೆಳೆದು ನಿಂತಿದೆ. ಕಳೆದ 10 ವರ್ಷದ ಅವಧಿಯಲ್ಲಿ ದೇಶದ ಆರೋಗ್ಯ ವ್ಯವಸ್ಥೆಯಲ್ಲಿ ಆಗಿರುವ ಬದಲಾವಣೆಯ ಬಗ್ಗೆ ನಿಜಕ್ಕೂ ಹೆಮ್ಮೆ ಎನಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಅನೇಕ ಆರೋಗ್ಯ ಸೌಲಭ್ಯಗಳು, ಜನೌಷಧದಂತಹ ಉಪಕ್ರಮಗಳು ಬಡ, ಮಧ್ಯಮ ವರ್ಗದ ಜನರಿಗೆ ಅತ್ಯಂತ ಉಪಕಾರಿಯಾಗಿದೆ ಅಂತ ಡಾ. ಮಂಜುನಾಥ್ ಶ್ಲಾಘಿಸಿರುವುದು ಹೆಮ್ಮೆಯ ವಿಚಾರ ಎಂದು ತಿಳಿಸಿದ್ದಾರೆ.

2024ನೇ ಲೋಕಸಭಾ ಚುನಾವಣೆಯಲ್ಲಿ ಡಾ.ಸಿ.ಎನ್.ಮಂಜುನಾಥ್ ಅವರನ್ನು ಆಯ್ಕೆ ಮಾಡುವ ಮೂಲಕ ದೇಶದ ಸೇವೆಗೆ ಅನುಕೂಲ ಮಾಡಿಕೊಡಬೇಕು. ಆರೋಗ್ಯ ಕ್ಷೇತ್ರದಲ್ಲಿ ವಿನೂತನ ಪ್ರಯೋಗ ಹಾಗೂ ಸುಧಾರಣೆಗೆ ಡಾ.ಸಿ.ಎನ್.ಮಂಜುನಾಥ್ ಅವರನ್ನು ಸಂಸದರನ್ನಾಗಿ ಆಯ್ಕೆ ಮಾಡಬೇಕಾದ ಹೊಣೆಗಾರಿಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮತದಾರರ ಮೇಲಿದೆ. ಈ ಬಾರಿ ಅವರನ್ನು ಬಹುಮತಗಳಿಂದ ಗೆಲ್ಲಿಸಬೇಕು. ಈಗಾಗಲೇ ಕ್ಷೇತ್ರದಲ್ಲಿ ಡಾ.ಸಿ.ಎನ್.ಮಂಜುನಾಥ್ ಅವರಿಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದು ಎಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಮಾನ ಮನಸ್ಕರರ ವೇದಿಕೆಯ ಹಾಲೂರು ನಾಗಪ್ಪ, ನಿವೃತ್ತ ಕುಲಪತಿ ನಾರಾಯಣಗೌಡ, ರಾಜಣ್ಣಸೇರಿ ಕೆಲ ಸಮಾನ ಮನಸ್ಕರರು ಭಾಗವಹಿಸಿದ್ದರು.

City Today News 9341997936