ಎನ್.ಡಿ.ಎ ಮೈತ್ರಿ ಕೂಟಕ್ಕೆ (ಬಿ.ಜೆ.ಪಿ. ಪಕ್ಷಕ್ಕೆ) ಅಖಿಲ ಭಾರತ ವಿಶ್ವಕರ್ಮ ಮಹಾ ಸಂಘದ ಸಂಘಟನೆಯ ಬೆಂಬಲ

ಎನ್.ಡಿ.ಎ ಮೈತ್ರಿ ಕೂಟಕ್ಕೆ (ಬಿ.ಜೆ.ಪಿ. ಪಕ್ಷಕ್ಕೆ) ನಮ್ಮ ಸಂಘಟನೆಯ ಬೆಂಬಲ ನೀಡುತ್ತಿರುವ ಬಗ್ಗೆ ಮಾಧ್ಯಮ ಪ್ರಕಟಣೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಡಾ॥ ಜಯಂತ್ ಕೆ.ಎಂ. ದಂತವೈದ್ಯರು ಆದ ನಾನು ಅಖಿಲ ಭಾರತ ವಿಶ್ವಕರ್ಮ ಮಹಾ ಸಂಘದ ರಾಷ್ಟ್ರೀಯ ಅಧ್ಯಕ್ಷನಾಗಿ ಈ ದಿನ ನಮ್ಮ ಸಮಾಜದ ಹಿತದೃಷ್ಟಿ ಎಂದರೆ ನಮ್ಮ ವಿಶ್ವಕರ್ಮ ಸಮಾಜವು ರಾಜಕೀಯ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಕಾರಣ ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿಯವರು ನಮ್ಮ ಸಮಾಜವನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ನಮ್ಮ ಸಮಾಜಕ್ಕೆ ಬೆಂಬಲ ನೀಡುತ್ತಾರೆಂಬ ನಂಬಿಕೆ ಇಂದ ನಮ್ಮ ಸಂಘಟನೆ ಬೆಂಬಲವನ್ನು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ನೀಡುವ ತೀರ್ಮಾನ ತೆಗೆದುಕೊಂಡಿದ್ದೇವೆ.

ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿಯವರು ವಿಶ್ವಕರ್ಮ ಸಮ್ಮಾನ್ ಯೋಜನೆಯನ್ನು ಕೊಡುವ ಮುಖಾಂತರ ನಮ್ಮ ಸಮಾಜಕ್ಕೆ ಮನ್ನಣೆ ನೀಡಿದ್ದು, ಇದರಿಂದ ನಮ್ಮ ಸಮಾಜದ ಕಾಯಕವನ್ನು ಎತ್ತಿ ಹಿಡಿಯುವ ಕೆಲಸ ಮಾಡಿರುತ್ತಾರೆ.

ಅಯೋಧ್ಯ ಶ್ರೀರಾಮನ ವಿಗ್ರಹವನ್ನು ಕೆತ್ತನೆ ಮಾಡಲು ನಮ್ಮ ಸಮಾಜದ ಶಿಲ್ಪಿ ಅರುಣ್ ಯೋಗಿರಾಜ್ ರವರಿಗೆ ಅವಕಾಶ ನೀಡುವ ಮುಖಾಂತರ ನಮ್ಮ ಸಮಾಜದ ಕೀರ್ತಿಯನ್ನು ರಾಷ್ಟ್ರ ಹಾಗೂ ವಿಶ್ವಕ್ಕೆ ತೋರಿಸುವಲ್ಲಿ ಮೋದಿಜಿರವರ ಸಹಕಾರ ಹೆಚ್ಚಿರುವ ಕಾರಣ ನಮ್ಮ ಸಮಾಜವು ಬಿ.ಜೆ.ಪಿ. ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ ಬೆಂಬಲ ನೀಡುವ ತೀರ್ಮಾನ ಮಾಡಿರುತ್ತಾರೆ.

ನಮ್ಮ ಸಮಾಜದ ಬಂಧುಗಳಿಗೆ ಮಾಧ್ಯಮದ ಮುಖಾಂತರ ತಿಳಿಸುವುದೇನೆಂದರೆ, ಪ್ರಧಾನ ಮಂತ್ರಿಗಳಾದ ಮಾನ್ಯ ಶ್ರೀ ನರೇಂದ್ರ ಮೋದಿಜಿಯವರು ನಮ್ಮ ಸಮಾಜಕ್ಕೆ ನೀಡಿರುವ ಎಲ್ಲಾ ಸಹಕಾರಗಳಿಗು, ಮನ್ನಿಸಿ ಅತಿ ಹೆಚ್ಚು ಮತಗಳನ್ನು ನೀಡುವ ಮುಖಾಂತರ (ಎನ್.ಡಿ.ಎ) ಬಿ.ಜೆ.ಪಿ ಪಕ್ಷದ ಎಲ್ಲಾ ಅಭ್ಯರ್ಥಿಗಳ ಗೆಲುವಿಗೆ ಸಹಕರಿಸಬೇಕೆಂದು ಕೋರಿಕೊಳ್ಳುತ್ತೇನೆ ಎಂದು ಡಾ॥ ಜಯಂತ್ ಕೆ.ಎಂ. ಬಿ.ಡಿ.ಎಸ್. ಎಂ.ಬಿ.ಎ ರಾಷ್ಟ್ರಾಧ್ಯಕ್ಷರು, ಅಖಿಲ ಭಾರತ ವಿಶ್ವಕರ್ಮ ಮಹಾಸಂಘ, ಮೈಸೂರು, ರವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

City Today News 9341997936

ಶ್ರೀ ನರೇಂದ್ರ ಮೋದಿಜಿರವರಿಗೆ ಶಕ್ತಿ ತುಂಬಲು ಹಾಗೂ ಅವರನ್ನು ಬಲಪಡಿಸಿ ಮತ್ತೆ ಪ್ರಧಾನಿಯನ್ನಾಗಿ ಮಾಡಲು ಬಿಜೆಪಿ ಗೆ ಮತ ನೀಡಿ

ಸ್ವತಂತ್ರ ಭಾರತ ದೇಶದ ಸತ್ಪಜೆಗಳಾದ ನಾವು, ನಾಡು-ನುಡಿ, ನೆಲ-ಜಲ, ದೇಶ, ಭಾಷೆ, ಸಂಸ್ಕೃತಿ, ಸಂಪತ್ತುಗಳ ವಿಚಾರದಲ್ಲಿ ಆರಂಭ ಕಾಲದಿಂದಲೂ ಅಮಾಯಕರಾಗಿ ಯಾಮಾರುತ್ತಾ, ಮರುಳಾಗುತ್ತಾ, ಎಡವುತ್ತಾ ಬಂದಿರುವುದು ದೇಶದ ದುರ್ದೈವದ ಸಂಗತಿ. ಅದರ ಫಲವಾಗಿ ಸವಾಲಕ್ಷ ದುಷ್ಟ ಶಕ್ತಿಗಳ ಕುಟಿಲ, ಕುತಂತ್ರ ದುರ್ಮಾರ್ಗಗಳಿಗೆ ಮುಪ್ಪಾಲು ದೇಶವನ್ನು ಹಾಗೂ ದೇಶದ ಸಂಪತ್ತುಗಳನ್ನು ಕಳೆದುಕೊಂಡದ್ದಾಗೋಗಿದೆ.

ಉಳಿದದ್ದನ್ನಾದರೂ ಭದ್ರಪಡಿಸಿ ಕಳೆದುಕೊಂಡದ್ದನ್ನೆಲ್ಲಾ ಮತ್ತೆ ಗಳಿಸಿ ದೇಶದ ಉತ್ತಮ ಅಳ್ವಿಕೆ, ಆಡಳಿತದ ಜೊತೆಗೆ ಸನಾತನ ಧರ್ಮಗಳನ್ನು ಮೆರೆಯುತ್ತ ದೇಶವನ್ನು ವಿಶ್ವಗುರುವನ್ನಾಗಿ ಮಾಡಲು ಹೊರಟಿರುವ ಶ್ರೀ ನರೇಂದ್ರ ಮೋದಿಜಿರವರಿಗೆ ಶಕ್ತಿ ತುಂಬಲು ಹಾಗೂ ಅವರನ್ನು ಬಲಪಡಿಸಿ ಮತ್ತೆ ಪ್ರಧಾನಿಯನ್ನಾಗಿ ಮಾಡಲು ನಮ್ಮ ಅಮಾಯಕತ್ವ ಉತ್ತಮ ತತ್ವಗಳನ್ನು ಬದಿಗಿಟ್ಟು, ನಾಡಿನ ಹಾಗೂ ದೇಶದ ಪ್ರಜೆಗಳು ಮತ್ತು ಮತದಾರರಿಗೆ ಎಡವದೇ, ಮೈ ಮರೆಯದೇ ಬಿಜೆಪಿ ಮತ್ತು ಜೆಡಿಎಸ್ ಮಿತ್ರ ಪಕ್ಷಗಳಿಗೆ ಮತ ಹಾಕುವಂತೆ ಎಚ್ಚರಿಕೆಯ ಸಂದೇಶ ರವಾನಿಸಲು ತಮ್ಮಲ್ಲಿ ಸವಿನಯ ಮನವಿ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಬಿಜೆಪಿ, ಜೆಡಿಎಸ್ ಮಿತ್ರಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರ ಪರವಾಗಿ ಕೃಷ್ಣರಾಜಪ್ಪ ತಿಳಿಸಿದರು. ಗೋಷ್ಠಿ ಯಲ್ಲಿ ರವೀಂದ್ರ ನಾಯ್ಡು, ರೂಪ ಕುಮಾರ್, ದನಶೇಖರ್ ಮತ್ತು ಮುನಿರಾಜು ಉಪಸ್ಥಿತರಿದ್ದರು.

City Today News 9341997936

ಮಹಾಮಾನವತಾವಾದಿ ಕರಡಿ ಬುಳ್ಳಪ್ಪ ವಿಚಾರವೇದಿಕೆಯಿಂದ ಕಾಂಗ್ರೆಸ್ಸ್ ಗೆ   ಬೆಂಬಲ

ಕಾಡುಗೊಲ್ಲ ಸಂಸ್ಕೃತಿಯ ಪುನುರುತ್ಥಾನದ ಮಹೋದ್ದೇಶವನ್ನು ಇಟ್ಟುಕೊಂಡು ಸ್ಥಾಪಿತವಾದ ಮಹಾಮಾನವತಾವಾದಿ ಕರಡಿಬುಳ್ಳಪ್ಪ ವಿಚಾರವೇದಿಕೆಯವತಿಯಿಂದ ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ಮಧ್ಯ ಕರ್ನಾಟಕದ ಕಾಡುಗೊಲ್ಲರ ಹಿರಿಯವನಾದ ಕರಡಿಬುಳ್ಳಪ್ಪ ಒಂದು ಮಹಾನ್ ಸಂಸ್ಕೃತಿಗೆ ಕಾರಣನಾದನೆಂಬುದು ಒಂದು ಅನನ್ಯ ಸಂಗತಿ. ಈತ ಪ್ರತಿನಿಧಿಸಿದ ಕಾಡುಗೊಲ್ಲರು ಮಧ್ಯ ಕರ್ನಾಟಕದ ಮೂಲನಿವಾಸಿ ಬುಡಕಟ್ಟು ಸಮುದಾಯದವರು. ಸಾಂಸ್ಕೃತಿಕವಾಗಿ ನೆಲಮೂಲ ಸಂಸ್ಕೃತಿಯ ಇವರು ದ್ರಾವಿಡ ಪರಂಪರೆಯಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡವರು. ಹಾಗೂ ಸಂಸ್ಕೃತಿಯಲ್ಲಿ ಪ್ರಕೃತಿ ಅರಾಧಕರು. ನಾವು ಮಧ್ಯ ಕರ್ನಾಟಕದ ಒಟ್ಟು ಹನ್ನೊಂದು ಜಿಲ್ಲೆ ಹಾಗೂ 38 ತಾಲ್ಲೂಕುಗಳಲ್ಲಿ ಒಟ್ಟು 1264ಹಟ್ಟಿಗಳಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಮತ್ತು ರಾಜ್ಯದ ಕೆಲವು ನಗರ ಪಟ್ಟಣಗಳಲ್ಲಿ ನೌಕರಿ ಹಾಗೂ ವ್ಯಾಪಾರದ ಕಾರಣ ಬಂದು ವಿರಳವಾಗಿ ವಾಸಿಸುತ್ತಿದ್ದಾರೆ. ಕಾಡುಗೊಲ್ಲರು ಪ್ರಧಾನವಾಗಿ ಸಣ್ಣರೈತರು ಮತ್ತು ಪಶುಪಾಲಕರು, ಪಶುಪಾಲನೆಯಲ್ಲಿ ಕುರಿಗಾರಿಕೆ ಪ್ರಧಾನ ವೃತ್ತಿ. ಇಂದಿಗೂ ಅಚ್ಚ ಬುಡಕಟ್ಟು ಜೀವನ ಪದ್ದತಿಯಲ್ಲಿ ಬದುಕುತ್ತಿರುವ ಇವರು ಗ್ರಾಮ ಬಹಿಧ್ವಾಸಿಗಳು ಮತ್ತು ಕಾಡಂಚಿನಲ್ಲೇ ಇವರ ಬದುಕು. ಸುಮಾರು ಆರರಿಂದ ಏಳು ಲಕ್ಷ ಜನಸಂಖ್ಯೆ ಹೊಂದಿರುವ ಇವರು ಅಂದಾಜು ಶೇ40ರಷ್ಟು ಸಾಕ್ಷರತೆ ಮತ್ತು ಶೇ 5ರಷ್ಟು ಸರ್ಕಾರಿ ನೌಕರಿ ಮತ್ತು ಇತರೆ ವರ್ಗದ ನೌಕರರು ಇದ್ದಾರೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಇನ್ನೂ ತೀರಾ ನಿಕೃಷ್ಟತೆಯಲ್ಲಿದ್ದಾರೆಂದರೆ ಆಶ್ವರ್ಯವೇನೂ ಇಲ್ಲ. ಸಾಮಾಜಿಕವಾಗಿಯೂ ಒಂದು ನಿಖರವಾದ ಮತ್ತು ಪ್ರಭುದ್ಧವಾದ ನಾಯಕತ್ವವೇ ಇಲ್ಲದ ಕಾರಣ ಇವರು ತೀರಾ ಅಸಂಘಟಿತರೆನ್ನುವುದು ವಾಸ್ತವ ವಿಚಾರ.

ಕಾಡುಗೊಲ್ಲರನ್ನು ಕಳೆದ 200 ವರ್ಷಗಳಿಂದಲೂ ದೇಶ ವಿದೇಶದ ಅನೇಕ ಮಹಾನ್ ವಿದ್ವಾಂಸರು ಅಧ್ಯಯನ ಮಾಡಿ ಇವರು ಬುಡಕಟ್ಟು ಜನ ಎಂದು ಹೇಳಿದರೂ ನಾವು ಇನ್ನೂ ಪರಿಶಿಷ್ಟ ಪಂಗಡಕ್ಕೆ ಸೇರಿಲ್ಲ. ಈ ಬಗ್ಗೆ ಕಳೆದ 2010-12ಳಲ್ಲಿ ಕುಲಶಾಸ್ತ್ರ ಅಧ್ಯಯನಕ್ಕೆ ಶಿಫಾರಸ್ ಆಗಿ 2013ರಲ್ಲಿ ವರದಿ ಬಂದು 2014 ಡಿಸೆಂಬರ್ ತಿಂಗಳಲ್ಲಿ ಅಂದಿನ ಮಾನ್ಯ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಕೇಂದ್ರಕ್ಕೆ ಶಿಫಾರಸ್ ಆಯಿತು. ಇಲ್ಲಿಯವರೆಗೂ ಅಂದರೆ ಒಂಬತ್ತು ವರ್ಷ ಕೇಂದ್ರ ಸರ್ಕಾರದ ಇಲಾಖೆಯಲ್ಲಿ ಹಾಗೆ ಇದೆ. ಇಲ್ಲಿಯವರೆಗೂ ರಾಜ್ಯದ ಬಹಳಷ್ಟು ನಾಯಕರು ಭರವಸೆ ಕೊಟ್ಟಿದ್ದಾಗ್ಯೂ ಇನ್ನೂ ನಮ್ಮ ಬೇಡಿಕೆ ಈಡೇರಿಲ್ಲದಿರುವುದು ವಿಷಾಧಕರ ಸಂಗತಿಯಾಗಿದೆ.

ಈ ಮಧ್ಯೆ 2020ರಲ್ಲಿ ಶಿರಾ ವಿಧಾನಸಭಾ ಉಪಚುನಾವಣೆಯಲ್ಲಿ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುತ್ತೇವೆ ಎಂದು ಬಿಜೆಪಿ ನಾಯಕರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು, ಅಂದಿನ ಬಿಜೆಪಿ ಪಕ್ಷದ ಮುಖಂಡರಾದ ಬಿ.ವೈ.ವಿಜಯೇಂದ್ರರವರು, ಮೈಸೂರಿನ ಸಂಸದರಾದ ಪ್ರತಾಪ್‌ ಸಿಂಹ ಅವರು ಮತ್ತು ಚಿತ್ರದುರ್ಗದ ಸಂಸದರಾದ ಶ್ರೀಮಾನ್ ನಾರಾಯಣಸ್ವಾಮಿಯವರು ‘ಖಂಡಿತವಾಗಿ ನಾವು ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುತ್ತೇವೆ’ ಎಂದು ದೊಡ್ಡ ಧ್ವನಿಯಲ್ಲಿ ಇಡೀ ರಾಜ್ಯದಲ್ಲಿಯೇ ಸಾರಿದರು. ಅದನ್ನು ನಂಬಿದ ನಾವು ಅವರಿಗೆ ಬೆಂಬಲ ನೀಡಿ ಅವರ ಅಭ್ಯರ್ಥಿ ಡಾ.ರಾಜೇಶ್‌ ಗೌಡರನ್ನು ಹೆಚ್ಚಿನ ಅಂತರದಿಂದ ಗೆಲ್ಲಿಸಿದೆವು. ಅಲ್ಲಿಂದ ಇಲ್ಲಿಗೆ ನಾಲ್ಕು ವರ್ಷಗಳಾದರೂ ನಮ್ಮ ಎಸ್.ಟಿ.ಕಡತ ಒಂದಿಂಚೂ ಚಲಿಸಿಲ್ಲ. ಹಾಗೆ ಮೊನ್ನೆ ಮೊನ್ನೆ ಮಾಜಿ ಪ್ರಧಾನಿಗಳಾದ ಸನ್ಮಾನ್ಯ ಹೆಚ್.ಡಿ.ದೇವೇಗೌಡರು ಆಶ್ವಾಸನೆ ನೀಡಿ ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರಮೋದೀಜಿಯವರಲ್ಲಿ ಚರ್ಚಿಸಿ ಆಶ್ವಾಸನೆ ಪಡೆದಂತೆ ‘ಇದೇ ಅವಧಿಯಲ್ಲಿ ನಿಮ್ಮನ್ನು ಎಸ್.ಟಿ.ಪಟ್ಟಿಗೆ ಸೇರಿಸುತ್ತೇವೆ’ ಎಂದು ಅಭಯ ನೀಡಿದರು. ಆದರೆ ಪ್ರಸ್ತುತ ಸಂಸತ್ತಿನ ಅವಧಿಯೂ ಮುಗಿಯಿತು. ಮತ್ತು ಎಸ್.ಟಿ.ಸೇರ್ಪಡೆ ಆಶೆಯೂ ಬತ್ತಿ ಹೋಯಿತು. ಇಂತಹ ಪ್ರಮುಖ ನಾಯಕರೆ ನಮ್ಮನ್ನು ಕೈಬಿಟ್ಟಮೇಲೆ ನಾವು ಯಾವ ರೀತಿ ಮುಂದುವರಿಯುವುದು? ಆದಕಾರಣ ಈ ಚುನಾವಣೆಯಲ್ಲಿ ನಮ್ಮ ಸಂಘದ ಬಹುಜನಗಳ ಆಶೋತ್ತರದಂತೆ ನಾವು ಈ ಸಾರಿ ಕಾಂಗ್ರೆಸ್‌ನ್ನು ಬೆಂಬಲಿಸಲು ತೀರ್ಮಾನಿಸಿದ್ದೇವೆ. ವಿಶೇಷವಾಗಿ ನಮ್ಮ ಸಂಘದ ಬಂಧುಗಳು ಹೆಚ್ಚಿರುವ ತುಮಕೂರಿನಲ್ಲಿ ನಿವೃತ್ತ ನ್ಯಾಯಮೂರ್ತಿಗಳಾದ ಮುದ್ದಹನುಮೇಗೌಡರು ಮತ್ತು ಚಿತ್ರದುರ್ಗದಲ್ಲಿ ಅನುಭವಿಗಳು ಮತ್ತು ಸಹೃದಯರಾದ ಬಿ.ಎನ್.ಚಂದ್ರಪ್ಪನವರು ಕಾಂಗ್ರೆಸ್ ಅಭ್ಯರ್ಥಿಗಳಾಗಿದ್ದಾರೆ. ಇನ್ನು ನಮ್ಮಂತಹ ತೀರಾ ಹಿಂದುಳಿದವರ ಬಗ್ಗೆ ಸಕಾರಾತ್ಮಕ ಧೋರಣೆಯ ಸಹೃದಯೀ ಶ್ರೀಮಾನ್ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾರೆ. ಇಡೀ ಸ್ವಾತಂತ್ರೋತ್ತರ ಕರ್ನಾಟಕದಲ್ಲಿ ಕಾಡುಗೊಲ್ಲರನ್ನು ಗುರ್ತಿಸಿ ದೊಡ್ಡದಾಗಿ ಬೆಂಬಲ ಕೊಟ್ಟವರು ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು. ಅವರ ಕಳೆದ ಅವಧಿಯಲ್ಲಿ ಅವರು ನೀಡಿದ ಸವಲತ್ತುಗಳು. ಶ್ರೀಮತಿ ಜಯಮ್ಮಬಾಲರಾಜರನ್ನು ವಿಧಾನಪರಿಷತ್ತಿಗೆ ನಾಮಕರಣ ಮಾಡಿದರು. ಕಾಡುಗೊಲ್ಲರನ್ನು ಪರಿಶಿಷ್ಟಪಟ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ ಮಾಡಿದರು. ಅಲ್ಲಿಯವರೆಗೂ ಕನಸಾಗಿದ್ದ ರಾಜ್ಯ ಯೋಜನಾಮಂಡಳಿಗೆ ಡಾ.ಶಿವಚಿತ್ತಪ್ಪರನ್ನು ಸದಸ್ಯರನ್ನಾಗಿಸಿದರು. ಹಾಗೆ ಪ್ರೊ: ಎಂ.ಗುರುಲಿಂಗಯ್ಯರನ್ನು ಹಿಂದುಳಿದ ಶಾಶ್ವತ ಆಯೋಗಕ್ಕೆ ಸದಸ್ಯರನ್ನಾಗಿಸಿದರು. ಡಾ.ಕರಿಸಿದ್ದಪ್ಪನವರನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಉಪಕುಲಪತಿಗಳನ್ನಾಗಿ ನೇಮಿಸಿದರು. ಅರಣ್ಯ ಮತ್ತು ಪರಿಸರ ಇಲಾಖೆಯ ರಾಜ್ಯ ನಿಷ್ಕರ್ಷ ಮಂಡಳಿಗೆ ನಿವೃತ್ತ ಐಎಫ್‌ಎಸ್. ಅಧಿಕಾರಿ ಬಿ.ಚಿಕ್ಕಪ್ಪಯ್ಯನವರನ್ನು ಸದಸ್ಯರನ್ನಾಗಿಸಿದರು. ಅನೇಕ ಕಾಡುಗೊಲ್ಲ ಅರ್ಹರನ್ನು ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಗೆ ಸಿಂಡಿಕೇಟ್, ಸೆನೇಟ್ ಮತ್ತು ಅಕಾಡೆಮಿಕ್ ಕೌನ್ಸಿಲ್‌ಗೆ ನಾಮಕರಣ ಮಾಡಿಸಿದರು. ಕಾಡುಗೊಲ್ಲರು ಅಪ್ಪಟ ಕುರಿ ಮತ್ತು ಪಶುಪಾಲಕರು. ಹಾಗಾಗಿ ಕುರಿಗಳ ಸಾವಿನಿಂದ ನಷ್ಟ ಅನುಭವಿಸಬಾರದೆಂದು ಕುರಿ ಅಥವಾ ರಾಸುಗಳು ಸತ್ತಾಗ ಆಗುವ ನಷ್ಟವನ್ನು ತುಂಬಲು ಅನುಗ್ರಹ ಕಾರ್ಯಕ್ರಮವನ್ನು ನೀಡಿದರು. ಹಾಗೆಯೇ ಕುರಿಗಾರರಿಗೆ ಭೇಡಪಾಲಕ್ ಯೋಜನೆ, ರಾಸುಗಳಿಗೆ ವಿಮಾ ಯೋಜನೆ ಜಾರಿ ಮಾಡಿದರು. ಪ್ರಸ್ತುತ ಸರ್ಕಾರದಲ್ಲಿ ಕರ್ನಾಟಕ ರಾಜ್ಯ ಕಾಡುಗೊಲ್ಲ. ಅಭಿವೃದ್ಧಿ ನಿಗಮವನ್ನು ನೊಂದಣಿ ಮಾಡಿಸಿ ಅದಕ್ಕೆ ಅನುದಾನವನ್ನು ಬಿಡುಗಡೆ ಮಾಡಿದರು. ಹಾಗೆ ಕರ್ನಾಟಕ ಜಾನಪದ ಅಕಾಡೆಮಿಗೆ, ಬಯಲಾಟ ಅಕಾಡೆಮಿಗೆ, ಕುವೆಂಪುಭಾಷಾ ಭಾರತಿಗೆ ಕಾಡುಗೊಲ್ಲ ಸಮುದಾಯದವರನ್ನು ಸದಸ್ಯರನ್ನಾಗಿಸಿದ್ದಾರೆ. ಮತ್ತು ಚಿತ್ರದುರ್ಗ ಜಿಲ್ಲೆಯ ಗ್ಯಾರೆಂಟಿಗಳ ಅನುಷ್ಟಾನ ಸಮಿತಿಗೆ ಜಿಲ್ಲಾಧ್ಯಕ್ಷರನ್ನು ನೇಮಿಸಿದ್ದಾರೆ. ಇಲ್ಲಿ ಹೇಳಿದಂತಹ ವಿಷಯಗಳು ಕಾಡುಗೊಲ್ಲರಿಗೆ ಪ್ರತ್ಯೇಕವಾದ ಅನುಕೂಲಗಳು. ಇನ್ನು ಸಾಮಾನ್ಯ ಕಾರ್ಯಕ್ರಮಗಳಲ್ಲಿಯೂ ಕೂಡ ಇಡೀ ರಾಜ್ಯದ ಜನರಿಗೆ ಮರೆಯಲಾರದ ಮಹಾನುಭಾವನಂತೆ ಆಡಳಿತ ನೀಡಿದರು.

ಈ ಎಲ್ಲಾ ಹಿನ್ನೆಲೆಯಂತೆ ನಮ್ಮ ಸಂಘದ ಬಹುತೇಕ ಕಾಡುಗೊಲ್ಲರು ಈ ಸಾರಿ ಕಾಂಗ್ರೆಸ್ಸನ್ನು ಬೆಂಬಲಿಸಬೇಕೆಂದು ತೀರ್ಮಾನಿಸಿದ್ದೇವೆ ಎಂದು ಮಹಾಮಾನವತಾವಾದಿ ಕರಡಿ ಬುಳ್ಳಪ್ಪ ವಿಚಾರವೇದಿಕೆ ವತಿಯಿಂದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತುಳಿಸಿದರು.

City Today News 9341997936

ಸನ್ಮಾನ್ಯ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಜೀ ರವರ 10ವರ್ಷಗಳ ಸಾಧನೆಗಳು

ಈ ಕೆಳಕಂಡಂತೆ ಅವರ 10ವರ್ಷಗಳ ಅಧಿಕಾರದ ಅವಧಿಯಲ್ಲಿ ಒಂದು ಕಪ್ಪು ಚುಕ್ಕೆಯಿಲ್ಲದೇ ಅಧಿಕಾರ ಮಾಡಿರುವುದು, ಮಹತ್ವದ ಕೆಲಸಗಳಾದ ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣ ಮಾಡಿರುವುದು, ಒಂದೇ ಕಾನೂನು ಅಡಿಯಲ್ಲಿ ಆರ್ಟಿಕಲ್ 370 ರದ್ದು ಮಾಡಿರುವುದು, ಹಾಗೂ ದೇಶದ ಆರ್ಥಿಕ ಸ್ಥಿತಿ 5ರಿಂದ 3ನೇ ಸ್ಥಾನಕ್ಕೆ ತರುವುದು ನಮಗೆಲ್ಲಾ ಸಂತೋಷದ ವಿಷಯ.

ದೇಶದಲ್ಲಿ 2014ರಿಂದ 2024ರ ಅವಧಿಯಲ್ಲಿ ಹಿಂದೆ ಇದ್ದ 74 ಏರ್ಪೋರ್ಟಗಳ ಸಂಖ್ಯೆಯನ್ನು 149 ಏರ್‌ಫೋರ್ಟಗಳನ್ನು ಅಭಿವೃದ್ಧಿ ಪಡಿಸಿರುವುದು

ನೇಕಾರ ವೃತ್ತಿಯನ್ನು ಗುರುತಿಸಿ 2015ರ ಆಗಸ್ಟ್-7 ರಂದು ಕೈಮಗ್ಗ ದಿನಾಚರಣೆಯನ್ನು ಘೋಷಣೆ ಮಾಡಿ ಉದ್ಘಾಟನೆಯನ್ನು ಮಾಡಿರುತ್ತಾರೆ. ಇನ್ನೂ ಅನೇಕ ನೇಕಾರ ವೃತ್ತಿಯು ಅಭಿವೃದ್ಧಿ ಪತದತ್ತ ಸಾಗಲು ಮಹತ್ತರ ಪಾತ್ರವನ್ನು ವಹಿಸಿರುತ್ತಾರೆ.

ಹಿಂದೆ ಇದ್ದ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಯಡಿಯೂರಪ್ಪ ನವರು ನೇಕಾರ ಸಾಲ ಮನ್ನಾ ಮತ್ತು ಸಮ್ಮಾನ್ ಯೋಜನೆ ಅಡಿಯಲ್ಲಿ ಹಾಗೂ ದೇವರ ದಾಸಿಮಯ್ಯ ಜಯಂತಿಯನ್ನು ಘೋಷಣೆ ಮಾಡಿರುತ್ತಾರೆ. ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ರವರು ನೇಕಾರ ಅಭಿವೃದ್ಧಿ ನಿಗಮ ಘೋಷಣೆ ಮಾಡಿರುತ್ತಾರೆ. ಹಾಗೂ ಪ್ರತಿ ಜಿಲ್ಲೆಯಲ್ಲು ಟೆಕ್ಸ್‌ ಟೈಲ್ ಪಾರ್ಕಗಳನ್ನು ತೆರೆಯಲು ಆದೇಶ ಮಾಡಿರುತ್ತಾರೆ.

ಮತ್ತೊಮ್ಮೆ ಪ್ರಧಾನಿ ಆಗಲು ಸನ್ಮಾನ್ಯ ಶ್ರೀ ನರೇಂದ್ರ ಮೋದಿಜೀಯವರಿಗೆ ಬೆಂಬಲವಾಗಿ BJP ಮತ್ತು NDAಯಿಂದ 28 ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳಿಗೆ ನೇಕಾರರು ಬೆಂಬಲ ಸೂಚಿಸಬೇಕೆಂದು ವಿನಂತಿ ಮಾಡಿಕೊಳ್ಳುತ್ತಿದ್ದೇವೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಬಿ.ಎಸ್.ಸೋಮಶೇಖರ್ – ರಾಜ್ಯ ಸಂಚಾಲಕರು. ನೇಕಾರ ಪ್ರಕೋಷ್ಠ ಬಿಜೆಪಿ ಯವರು ತಿಳಿಸಿದರು..

City Today News 9341997936

ತಮ್ಮ ಅಮೂಲ್ಯವಾದ ಮತ ಯಾಚಿಸಿ ಸ್ವತಂತ್ರ ಅಭ್ಯರ್ಥಿ ಅಭ್ಯರ್ಥಿ ಭಾಸ್ಕರ್ ಅಂಕಾಲಮಡಗು ಶಿವರೆಡ್ಡಿ ರವರಿಂದ ಮನವಿ

ಕಾಂಗ್ರೆಸ್ ಮತ್ತು ಬಿ.ಜೆ.ಪಿ ಒಂದು ನಾಣ್ಯದ ಎರಡು ಮುಖಗಳು ಹಿಂಗಾಗಿ ದೇಶ ಅಭಿವೃದ್ಧಿ ಆಗುತ್ತಿಲ್ಲ ಮತ್ತು ಸಾಮಾನ್ಯರು ಸಾಮಾನ್ಯರಾಗೇ ಉಳಿಯುತ್ತಿದ್ದಾರೆ ಮತ್ತು ಬಡವರು ಬಡವರಾಗೇ ಉಳಿದ್ದಿದ್ದಾರೆ.

ಸ್ವತಂತ್ರ ಬಂದು 75 ವರ್ಷ ಕಳೆದರೂ ರಾಜಕೀಯ ಲೋಪಗಳಿಂದ ಮತ್ತು ಅಡ್ಜೆಸ್ಟ್ ಮೆಂಟ್ ರಾಜಕೀಯದಿಂದ ದೇಶದ ಪ್ರಗತಿ ಆಗುತ್ತಿಲ್ಲ.

ಈ ಕಾರಣದಿಂದ ಭಾಸ್ಕರ್ ಅಂಕಾಲಮಡಗು ಶಿವರೆಡ್ಡಿ ಆದೆ ನಾನು ಸ್ವತಂತ್ರ ಅಭ್ಯರ್ಥಿ ಯಾಗಿ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಉತ್ತರ ಲೋಕ ಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದೇನೆ. ನಾನು ಸಾಮಾನ್ಯ ರೈತ ಕುಟುಂಬಕ್ಕೆ ಸೇರಿದವನು, ನನಗೆ ಕ್ಷೇತ್ರಗಳ, ಅವರ ಸಮಸ್ಯೆಗಳು ಅರಿತಿವೆ ಮತ್ತು ಅವುಗಳನ್ನು ಪರಿಷ್ಕರಿಸುವ ಸಾಮರ್ಥ್ಯ ನನಗೆ ಇದೆ.

ಜವ ಸೇವೆಯೇ ಜನಾರ್ಧನ ಸೇವೆ ಎಂಬುವುದನ್ನು ನಾನು ನನ್ನ ಜೀವನದಲ್ಲಿ ನಿರಂತವಾಗಿ ನಂಬಿದ್ದೇನೆ.

ನಮ್ಮ ಪ್ರಣಾಳಿಕೆ:

* ಕ್ಷೇತ್ರವಾರು 10000 ಉದ್ಯೋಗಗಳ ಸೃಷ್ಟಿ.

* ಪಾರರ್ದಕ ಆಡಳಿತ ಮತ್ತು ಸಮಗ್ರ ಅಭಿವೃದ್ಧಿ.

* ಉತ್ತಮ ಗುಣಮಟ್ಟದ ಶಿಕ್ಷಣ ಸರ್ಕಾರದ ಶಾಲೆ- ಕಾಲೇಜುಗಳಲ್ಲೇ ಒದಗಿಸುವುದು.

* ನೀರಿನ ಸಮಸ್ಯೆಯನ್ನು ಬಗೆಹರಿಸುವುದು.

* ರೈತರ ಫಸರಿಗೆ ಸೂಕ್ತ ಬೆಲೆ ದೊರಕಿಸುವುದು.

* ಕೇವಲ 3 ತಿಂಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವವು.

* ಪ್ರತಿ ಕುಟುಂಬಕ್ಕೆ ಒಂದು ಹೊಲಿಗೆ ಯಂತ್ರವನ್ನು ಉಚಿತವಾಗಿ ನೀಡಲಾಗುವುದು.

* ಸಾಮಾನ್ಯ ಮತ್ತು ಬಡವರ ಎಲ್ಲಾ ತರಹದ ಸಾಲ ಮನ್ನಾ ಮಾಡಲಾಗುವುದು.

* ಯುವಕರಿಗೆ ಎಲ್ಲಾ ರಂಗಗಳಲ್ಲೂ ಅವಕಾಶ (ಕ್ರೀಡೆ, ಒಲಂಪಿಕ್ಸ್ ಮತ್ತು ಸಿನಿಮಾ ಇತ್ಯಾದಿ)

ಸರ್ಕಾರಕ್ಕೆ ನಮ್ಮ ಪ್ರಶ್ನೆಗಳು:

1) ನೀವು ಘೋಷಿಸಿಕೊಂಡಿರುವ ಗ್ಯಾರೆಂಟಿಗಳನ್ನು ಸಮರ್ಪಕವಾಗಿ ಸಾಮಾನ್ಯರಿಗೆ ಯಾಕೆ ಕೊಡುತ್ತಿಲ್ಲ?

2) ಸಿ.ಎಂ.ಸಿದ್ದರಾಮಯ್ಯನವರೇ ನೀವು 2017-18 ಬಜೆಟ್ ಮಂಡಿಸಿದ ಮೊಬೈಲ್ ಅಂಬುಲೆನ್ಸ್ ಎಲ್ಲಿವೆ? ಮತ್ತು ಅದಕ್ಕೆ ಘೋಷಣೆ ಮಾಡಿರುವ 150 ಕೋಟಿ ದುಡ್ಡು ಎಲ್ಲಿದೆ?

3) ಡಿ.ಸಿ.ಎಂ ಡಿ.ಕೆ ಶಿವಕುಮಾರ್ ರವರೇ ಬ್ರಾಂಡ್ ಬೆಂಗಳೂರು ಅಂದರೆ ಇದೇನಾ? ಸರಿಯಾದ ಟ್ರಾಫಿಕ್ ನಿರ್ವಹಣೆ ಇಲ್ಲ, ಕುಡಿಯುವ ನೀರಿಲ್ಲ. ಕರೆಂಟ್ ಇಲ್ಲ. ಶುದ್ಧವಾದಂತಹ ವಾತಾವರಣ ಇಲ್ಲ, ಎಲ್ಲಿ ನೋಡಿದರೂ ರಾಶಿಗಟ್ಟಲೇ ಗಲೀಜು ಮತ್ತು ದುರ್ವಾಸನೆ ಇವುಗಳಿಗೆ ಮುಕ್ತಿ ಯಾವಾಗ?

ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಸ್ವತಂತ್ರ ಅಭ್ಯರ್ಥಿ ಭಾಸ್ಕರ್ ಅಂಕಾಲಮಡಗು ಶಿವರೆಡ್ಡಿ ತಿಳಿಸಿದರು.

City Today News 9341997936