ಬೆಂಗಳೂರು. ಯಮನೂರಪ್ಪ ಮುಂಡಗೌಡನಾದ ನಾನು ಕೊಪ್ಪಳ ಜಿಲ್ಲೆಯ, ಗಂಗಾವತಿ ನಗರದ ಖಾಯಂ ನಿವಾಸಿಯಾಗಿದ್ದು ಹಾಗೂ ಕುರುಬ ಸಮುದಾಯದವನಾಗಿದ್ದು ನನ್ನ ಸ್ವಂತ ಉದ್ಯೋಗ ಕುರಿ ಸಾಕಾಣಿಕೆ ಆಗಿದ್ದು ನನ್ನ ಹಟ್ಟಿಗಳಲ್ಲಿ ಒಟ್ಟಾರೆ ಟಗರು ಕುರಿಗಳು 180 ಮರಿಗಳಿದ್ದು ಅದರಲ್ಲಿ 101 ಟಗರುಗಳನ್ನು ಗಾಲಿ ಜನಾರ್ಧನರೆಡ್ಡಿಯವರಿಗೆ ನನ್ನ ಸ್ವಚ್ಚೆಯಿಂದ ನೀಡಲು ಬದ್ಧವಾಗಿರುತ್ತೇನೆ. ಗಾಲಿ ಜನಾರ್ಧನರೆಡ್ಡಿಯ ಕಟ್ಟಿ ಅಭಿಮಾನಿ ಕೂಡಾ ಆಗಿರುತ್ತೇನೆ. ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ 2023ರ ವಿಧಾನಸಭಾ ಚುನಾವಣೆಗೆ ಗಂಗಾವತಿಯಿಂದ ಸ್ಪರ್ಧಿಸುತ್ತಿದ್ದಾರೆಂಬ ಸುದ್ದಿ ಕೇಳಿ ಬಹಳಷ್ಟು ಸಂತೋಷ ಮತ್ತು ವರ್ಷಗೊಂಡು ಅವರ ರಾಜಕೀಯ ಭವಿಷ್ಯ ಉಜ್ವಲಗೊಳ್ಳಲೆಂದು ಹಾಗೂ ಗಂಗಾವತಿಯನ್ನು ದೇಶವಿದೇಶ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಪಡಿಸುವ ಮೂಲಕ ಖ್ಯಾತಿಗೊಳಿಸುತ್ತಾರೆಂದು ಭಾವಿಸಿ ಅಭಿಮಾನದಿಂದ 11 ಟೆಗರುಗಳನ್ನು ಕಾಣಿಕೆಯಾಗಿ ನೀಡುವುದನ್ನು ಹೊಸ ಪಕ್ಷನೋ ಯಾವುದಾದರೂ ಪಕ್ಷದಿಂದ ಗುರುತಿಸಿಕೊಂಡು ಘೋಷಿಸಿದ ಮೊದಲ ದಿನದಂದು | ಟಗರು ನೀಡಿ ಹಾಗೂ ನಾಮಪತ್ರ ಸಲ್ಲಿಸಿದ ದಿನದಂದು 10 ಟಗರು ನೀಡಲು ನಿರ್ಧರಿಸಿದ್ದೇನೆ ಎಂದು ಯಮನೂರಪ್ಪ ಮುಂಡಗೌಡ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಹನುಮೇಶ್ ಮತ್ತು ಹನುಮೇಶ್ ಮತ್ತು ಮಲ್ಲೇಶಪ್ಪ ವಕೀಲರು ಉಪಸ್ಥಿತಿಯಿದ್ದರು .
Nanjangud: For Nanjungud taluk, November 28 is going to be a historical day. No fewer than seven development projects that would give the taluk a new dimension will get a big push when the Chief Minister, Mr. Basavaraj Bommai, formally lays the foundation for some and inaugurates others.
A team of ministers, along with Mr. Bommai, is expected to attend the programme on Monday, which is jointly organised by the Endowment Department, Water Resources Department, Karnataka Neeravari Nigama Limited, Social Welfare Department, Energy Department, and Directorate of Municipal Administration. The programme is set to begin at 10.30 a.m. on the premises of Srikanteshwara Temple in Nanjungud. The projects total aroundRs 200 crore, according to Nanjungud MLA B Harshavardhan. Plans have been made to accommodate 8,000 people to witness the event.
Some of the programmes scheduled are the groundbreaking ceremony for constructing a guesthouse with 75 rooms at a cost of Rs 16.52 crore for the benefit of visitors to the temple; Silver weighing 250 kgs will be purchased from a bank by the deputy commissioner towards constructing a silver chariot to the temple; the Rs 30 crore Yediyala project, which aims at filling 13 tanks; a 66/11 kV power sub-station worth Rs 8 crore in Goluru; and the inauguration of Nayaka Samudaya Bhavan and Maharshi Valmiki Samudaya Bhavan in the town.
However, the key project that would get a boost is the Nugu Lift Irrigation Project. The project had remained on paper for 35 years. With MLA Harshavardhan’s understanding of the project’s importance, he pursued it tenaciously at the government level. The MLA has accomplished a task that could not be done even by seasoned politicians in the area.
“It is my dream to see that the villages that are lacking drinking water get the basic facility through the Nugu project. The tail-end area of about 10,000 acres and tanks in 40 villages would get drinking water facilities once the project is completed,” he says.
Harshavardhan, soon after assuming office in 2018, began pursuing the project. He had gotten a blueprint ready for the Nugu project and had requested the then chief minister, Mr. H. D. Kumaraswamy, to approve it. The funds were allocated in the 2019–20 budget. However, the funds were withdrawn during adverse situations like the floods and the COVID-19 pandemic period. But later, Harshavardhan was able to convince the then chief minister, Mr. BS Yediyurappa, to revive the project and also get Rs 80 crore sanctioned. The tender process for allocating the work has been completed. When Mr. Bommai formally launched the project, the work on the ground would begin.
ರಾಜ್ಯದ ಪ್ರತಿ ವಿಧಾನ್ಸಭಾ ಕ್ಷೇತ್ರಗಳಲ್ಲಿ ಪ್ರತಿ ಗ್ರಾಮ ಪಂಚಾಯತಿ ಘಟ್ಟದಲ್ಲಿ ಯುವಕರನ್ನು ಪಕ್ಷಕ್ಕೆ ಕರೆ ತರುವುದು. ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ಸಂಘಟಣೆ ವಿಸ್ತಾರ ಮಾಡುವುದು ಪತ್ಷದ ಯೋಜನೆಗಳನ್ನು ಪ್ರತಿ ಮನೆ ಮನೆಗೂ ತಲುಪಿಸುವುದು, ಎಲ್ಲಾ ವರ್ಗದ ಜನರಿಗೆ ನ್ಯಾಯ ದೊರಕಿಸುವುದು.
ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಸಂದರ್ಬದಲ್ಲಿ ಸುಮಾರು 25 ಲಕ್ಷ ಕುಟುಂಭಗಳ ಸಾಲ ಮನ್ನಾ ಮಾಡಿರುತ್ತಾರೆ. ಇನ್ನೂ ಹಲವಾರು ಯೋಜನೆಗಳನ್ನು ಸಂಘಟಣೆ ಹಮ್ಮಿಕೊಂಡಿದ್ದು ಮುಂದಿನ ದಿನಗಳಲ್ಲಿ ಕುಮಾರಸ್ವಾಮಿಯವರು ಹಾಗೂ ಪಕ್ಷಕ್ಕೆ ಪ್ರಬಲವಾಗಿ ಷಕ್ತಿ ತುಂಬುವ ಕೆಲಸವನ್ನು ಮಾಡುವುದು. 170 ವಿಧಾನಸಭಾ ಕ್ಷೇತ್ರಗಳಲ್ಲಿ ಅಧ್ಯಕ್ಷರ ಆಯ್ಕೆ ನಡೆದಿದ್ದು ಮುಂದಿನ ದಿನಗಳಲ್ಲಿ ರಾಜ್ಯದ ಪ್ರತಿ ವಿಧಾನ್ಸಭಾ ಕ್ಷೇತ್ರಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ . ತದನಂತರ ಕಾರ್ಯಗಾರ ಸಭೆ ಎಲ್ಲಾ 225 ವಿಧಾನಸಭಾ ಕ್ಷೇತ್ರ ಅಧ್ಯಕ್ಷರನ್ನು ಕರೆಸಿ ನಡೆದಲಾಗುವುದು. ಎಂದು ಕೂಡ್ಲಿಗೆರೆ ಟಿ. ಚಂದ್ರಶೇಖರ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು
ಚಿತ್ರದುರ್ಗ ಮಠ ಕರ್ನಾಟಕದ ಅತ್ಯಂತ ಪ್ರಾಚೀನವಾದ ಮಠ ಬಸವಾದಿ ಶರಣರ ಆದರ್ಶಗಳನ್ನು ರಾಜ್ಯಮಟ್ಟ, ರಾಷ್ಟ್ರಮಟ್ಟ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಚಿತ್ರದುರ್ಗ ಮಠವು ಮುರಘಾ ಶ್ರೀಗಳಿಂದ ಜಾಗತೀಕ ಮಟ್ಟದಲ್ಲಿ ಬಸವಾದಿ ಶರಣರ ತತ್ವಗಳು ಜನಮಾನಸಕ್ಕೆ ಮುಟ್ಟಿಸಿದ್ದಾರೆ. ಪೂಜ್ಯ ಚಿತ್ರದುರ್ಗದ ಮುರುಘಾ ಶರಣರು ಸುಮಾರು 40 ವರ್ಷಗಳ ಕಾಲ ದೀನ – ದಲಿತರ ಏಳಿಗೆಗಾಗಿ ಹಗಲಿರುಳು ಎನ್ನದೇ ಶ್ರಮಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮುರುಘಾ ಶ್ರೀಗಳಿಗೆ ಪೋಸ್ಕೋ ಪ್ರಕರಣದಲ್ಲಿ ಸಿಲುಕಿಸಿದ ಎಸ್.ಕೆ.ಬಸವರಾಜನ್ ರವರ ಸದ್ಯಂತರದಿಂದ ಚಿತ್ರದುರ್ಗ ಶ್ರೀಗಳಿಗೆ ಅವಮಾನಿಸಿ ಜೈಲು ಪಾರಾಗುವುದಕ್ಕೆ ಕುಮ್ಮಕ್ಕು ನೀಡಿದ್ದಾರೆ. ಚಿಕ್ಕಮಕ್ಕಳನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಮಕ್ಕಳಿಗೆ ಕಲಿಸಿ ಶ್ರೀಗಳ ವಿರುದ್ಧ ಕುತಂತ್ರ ಮಾಡಿದ್ದಾರೆ. ಇದಕ್ಕೆ ಬಸವರಾಜನ್ ಮುಖ್ಯ ಕೈವಾಡ ಇದೆ ಮುರುಘಾಮಠಕ್ಕೆ ಅವಮಾನ ಮಾಡಿ ಶ್ರೀಗಳಿಗೆ ಅವಮಾನ ಮಾಡಿ ಮುರುಘಾ ಮಠದ ಅನ್ನವನ್ನು ತಿಂದು ಮುರುಘಾಮಠಕ್ಕೆ ದ್ರೋಹ ಬಗೆದಿದ್ದಾರೆ. ಕಾಂಗ್ರೆಸ್ ಪಕ್ಷದ ಆಕಾಂಕ್ಷಿಯಾಗಿ 2123ನೇ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.
ಇವರಿಗೆ ಟಿಕೆಟ್ ಕೊಟ್ಟರೆ ಕಾಂಗ್ರೆಸ್ ಪಕ್ಷಕ್ಕೆ ಅವಮಾನವಾಗುತ್ತದೆ ಅಷ್ಟೇ ಅಲ್ಲ ಕಳಂಕ ಬರುತ್ತದೆ. ಇಂತಹವರಿಗೆ ಕಾಂಗ್ರೆಸ್ ಪಕ್ಷದಿಂದ ಯಾವುದೇ ಹುದ್ದೆಯನ್ನು ಕೊಡಬಾರದೆಂದು ಈ ರಾಜ್ಯದ ಜನರು ಹಾಗೂ ಕಡುಕ ಲಿಂಗಾಯತ ಧರ್ಮ ಮಹಾಸಭಾ ಆಶಯವಾಗಿದೆ ಎಂದು ಕಿರಣ ಖಂಡ್ರೆ , ಪ್ರಧಾನ ಕಾರ್ಯದರ್ಶಿ, ಲಿಂಗಾಯತ ಮಹಾಸಭಾ ಒಕ್ಕೂಟ, ಬೆಂಗಳೂರು, ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಕೆಲವು ರಾಜಕೀಯ ಪಕ್ಷಗಳು ಹಾಗೂ ಮುಖಂಡರುಗಳು ಚುನಾವಣಾ ದೃಷ್ಟಿಯಿಂದ ಸದಾಶಿವ ಆಯೋಗ ವರದಿ ಜಾರಿಯಾಗಬೇಕೆಂದು ಹೇಳಿಕೆ ನೀಡುತ್ತಿರುವುದನ್ನು ರಾಜ್ಯದ 30 ಲಕ್ಷಕ್ಕೂ ಅಧಿಕ ಜನಸಂಖ್ಯೆಯುಳ್ಳ ಬಂಜಾರ ಸಮುದಾಯ ತೀವ್ರವಾಗಿ ವಿರೋಧಿಸುತ್ತದೆ ಹಾಗೂ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಂತಹವರಿಗೆ ಬೆಂಬಲ ನಿರಾಕರಿಸುವುದಾಗಿ ಈ ಮೂಲಕ ತಿಳಿಯಪಡಿಸುತ್ತಿದ್ದೇವೆ.
ಒಳಮೀಸಲಾತಿಗೆ ಸಂಬಂಧಿಸಿದಂತೆ ದಿನನಿತ್ಯ ಆಗುತ್ತಿರುವ ಬೆಳವಣಿಗೆಗಳು ರಾಜಕೀಯ ಪ್ರೇರಿತವಾಗಿದ್ದು ಪರಿಶಿಷ್ಟ ಜಾತಿಗಳನ್ನು ಒಡೆಯಲು ನಡೆಸಲಾಗುತ್ತಿರುವ ಅತೀ ದೊಡ್ಡ ಷಡ್ಯಂತ್ರ ಇದಾಗಿದೆ. ಸದಾಶಿವ ಆಯೋಗ ವರದಿ ಅವೈಜ್ಞಾನಿಕ ಹಾಗೂ ಸಂವಿಧಾನ ವಿರೋಧಿಯಾಗಿದೆ. ಒಳಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶವಿಲ್ಲ ಎಂಬುದನ್ನು ವಿವಿಧ ನ್ಯಾಯಾಲಯಗಳು ಸ್ಪಷ್ಟವಾಗಿ ಹೇಳಿರುವ ಕಾರಣ ರಾಜ್ಯ ಸರ್ಕಾರ ಈ ಆಯೋಗದ ವರದಿಯನ್ನು ತಿರಸ್ಕರಿಸಬೇಕೆಂದು ಆಗ್ರಹಿಸುತ್ತೇವೆ.
2005 ರಲ್ಲಿ ರಚನೆಯಾದ ಸದಾಶಿವ ಆಯೋಗ 7 ವರ್ಷಗಳ ನಂತರ 2012 ರಲ್ಲಿ ಡಿ.ವಿ.ಸದಾನಂದಗೌಡರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ವರದಿ ಸಲ್ಲಿಕೆಯಾಗಿದೆ. ವರದಿ ಸಲ್ಲಿಕೆಯಾಗಿ ಈಗಾಗಲೇ 10 ವರ್ಷಗಳು ಕಳೆದಿದ್ದು, ಈಗ ಅದನ್ನು ಜಾರಿಗೊಳಿಸಬೇಕೆನ್ನುವುದು ಅಪ್ರಸ್ತುತ ಹಾಗೂ ಅರ್ಥಹೀನವಾಗಿದೆ. ಕೇಂದ್ರ ಸರ್ಕಾರದ ಜಾತಿಗಣತಿ ಅಂಕಿಅಂಶ ಹಾಗೂ ಸದಾಶಿವ ಆಯೋಗ ವರದಿ ಅಂಕಿಅಂಶಗಳಿಗೆ ಸಾಕಷ್ಟು ವ್ಯತ್ಯಾಸವಿದೆ. ಹಾಗಾಗಿ ಸರ್ಕಾರ ಮತ್ತೊಂದು ಜಾತಿಗಣತಿ ಮಾಡಿ ಸ್ಪಷ್ಟ ವರದಿ ನೀಡಬೇಕೆಂದು ಕೋರುತ್ತೇವೆ. ರಾಜ್ಯ ಸರ್ಕಾರಕ್ಕೆ
ರಾಜ್ಯದಲ್ಲಿ ಬಂಜಾರ, ಭೋವಿ, ಕೊರಚ, ಕೊರಮ ಹಾಗೂ ಇನ್ನಿತರೆ ಪರಿಶಿಷ್ಟ ಜಾತಿಯ ಸಮುದಾಯಗಳು ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಬಡತನ, ಅನಕ್ಷರತೆ, ನಿರುದ್ಯೋಗ, ವಲಸೆ, ದಬ್ಬಾಳಿಕೆ, ಅತ್ಯಾಚಾರ, ಸರ್ಕಾರಿ ಸೌಲಭ್ಯ ಮತ್ತು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುವುದು ಸೇರಿದಂತೆ ಸಾಕಷ್ಟು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿವೆ. ಇಂತಹ ಸಂದರ್ಭದಲ್ಲಿ ಸರ್ಕಾರ ಇವರ ಅಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ.
ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಹೆಚ್.ಡಿ. ಕುಮಾರಸ್ವಾಮಿ, ಬಿ.ಜೆ.ಪಿ. ರಾಜ್ಯಾಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ ಎ.ನಾರಾಯಣಸ್ವಾಮಿ, ರಾಜ್ಯ ಸರ್ಕಾರದ ಮಧ್ಯಮ ನೀರಾವರಿ ಮತ್ತು ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ಅವರು ಚುನಾವಣೆ ಹಿತದೃಷ್ಟಿಯಿಂದ ಎಡ ಸಮುದಾಯದ ಮತವನ್ನು ಓಲೈಸುವ ಸಲುವಾಗಿ ಸದಾಶಿವ ಆಯೋಗ ವರದಿ ಜಾರಿಗೆ ಬೆಂಬಲ ಸೂಚಿಸುತ್ತಿರುವುದು ವಿಪರ್ಯಾಸವಾಗಿದೆ. ಸಾರ್ವಜನಿಕವಾಗಿ ಬಹಿರಂಗವಾಗದ ಸದಾಶಿವ ಆಯೋಗ ವರದಿಯನ್ನು ಏಕಾಏಕಿ ಜಾರಿ ಮಾಡಬೇಕು ಎನ್ನುವ ರಾಜಕೀಯ ಪಕ್ಷಗಳಿಗೆ ಹಾಗೂ ನಾಯಕರುಗಳಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಸಮಸ್ತ ಬಂಜಾರ ಸಮುದಾಯದ ವಿರೋಧವಿದೆ ಎಂದು ಈ ಪತ್ರಿಕಾ ಗೋಷ್ಠಿಯ ಮೂಲಕ ಸ್ಪಷ್ಟಪಡಿಸುತ್ತಿದ್ದೇವೆ.
ಒಳಮೀಸಲಾತಿ ಹೋರಾಟ ನೆಪದಲ್ಲಿ ಬಂಜಾರ ಸಮಾಜದ ಆರಾಧ್ಯದೈವ ಕುಲಗುರು ಸಂತ ಶ್ರೀ ಸೇವಾಲಾಲ್ ಮಹಾರಾಜರನ್ನು ಹಾಗೂ ರಾಜ್ಯ ಸರ್ಕಾರದ ಪಶುಸಂಗೋಪನಾ ಸಚಿವರಾದ ಪ್ರಭು ಚವ್ಹಾಣ್ ರವರನ್ನು ಮಾದಿಗ ದಂಡೋರ ಸಮಿತಿಯವರು ಏಕ ವಚನದಲ್ಲಿ ನಿಂಧಿಸುವುದು. ಅಪಮಾನಿಸುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ. ಇದನ್ನು ಬಂಜಾರ ಸಮುದಾಯ ತೀವ್ರವಾಗಿ ಖಂಡಿಸುತ್ತದೆ. ಮಾದಿಗ ದಂಡೋರ ಸಮಿತಿಯವರು ಪ್ರಜಾಸತ್ತಾತ್ಮಕವಾಗಿ ಹೋರಾಟ ಮಾಡುವುದು ಬಿಟ್ಟು ಬಂಜಾರ ಸಮುದಾಯದವರ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಇದನ್ನು ಅವರು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಯಪಡಿಸುತ್ತೇವೆ.
ಪರಿಶಿಷ್ಟ ಸಮುದಾಯಗಳ ಮಧ್ಯೆ ಬಿನ್ನಾಭಿಪ್ರಾಯ ಮೂಡಿಸಿ ಏಕತೆಗೆ ಧಕ್ಕೆ ತರುತ್ತಿರುವ ಸದಾಶಿವ ಆಯೋಗ ವರದಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕೆಂದು ಈ ಮೂಲಕ ಅಗ್ರಹಿಸುತ್ತೇವೆ.
ಒಂದು ವೇಳೆ ತರಾತುರಿಯಲ್ಲಿ ಆಯೋಗದ ವರದಿ ಶಿಫಾರಸಿಗೆ ಸರ್ಕಾರ ಮುಂದಾದರೆ ಮುಂಬರುವ ವಿಧಾನಸಭಾ ಚುಣಾವಣೆಯಲ್ಲಿ 30 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ಬಂಜಾರ ಸಮುದಾಯ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಗಿರೀಶ್ ಡಿ.ಆರ್. ರಾಜ್ಯಾಧ್ಯಕ್ಷರು ಈ ಮೂಲಕ ಎಚ್ಚರಿಸುತ್ತಿದ್ದೇವೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು
You must be logged in to post a comment.